For Quick Alerts
ALLOW NOTIFICATIONS  
For Daily Alerts

ಮನುಷ್ಯರನ್ನು ಕಾಡಲಿದೆ ಮತ್ತೊಂದು ಮಾರಕ ವೈರಸ್!

By Hemanth
|

ಭೂಮಿ ಮೇಲೆ ಮನುಷ್ಯನಷ್ಟು ಬುದ್ಧಿವಂತ ಜೀವಿ ಮತ್ತೊಂದಿಲ್ಲ. ಬೇರೆ ಯಾವುದೇ ಪ್ರಾಣಿಗಳು ಮಾಡದಂತಹ ಕೆಲವೊಂದು ಕಾರ್ಯಗಳನ್ನು ಮನುಷ್ಯ ಮಾಡಿದ್ದಾನೆ. ಆದರೆ ಪ್ರಕೃತಿಯಲ್ಲಿ ಮನುಷ್ಯನಿಗಿಂತಲೂ ಬಲಿಷ್ಠವಾದ ಕೆಲವೊಂದು ಜೀವಿಗಳು ಇವೆ ಎನ್ನುವುದನ್ನು ಮನುಷ್ಯರಾಗಿರುವ ನಾವು ಒಪ್ಪಿಕೊಳ್ಳಬೇಕು. ಇವುಗಳು ಮನುಷ್ಯನಷ್ಟು ಬುದ್ಧಿವಂತಿಕೆ ಹೊಂದಿಲ್ಲದೆ ಇದ್ದರೂ ತುಂಬಾ ಬಲಶಾಲಿಗಳು. ಉದಾಹರಣೆಗೆ ಒಂದು ವಿಷಯುಕ್ತ ಹಾವನ್ನೇ ಪರಿಗಣಿಸಿ. ಇದು ಕಡಿದರೆ ಕೆಲವೇ ನಿಮಿಷಗಳಲ್ಲಿ ಮನುಷ್ಯನ ಪ್ರಾಣ ಪಕ್ಷಿಯು ಹಾರಿ ಹೋಗಬಹುದು. ಅದೇ ರೀತಿ ಸೂಕ್ಷ್ಮಾಣು ಜೀವಿಗಳಾದ ಬ್ಯಾಕ್ಟೀರಿಯಾ ಮತ್ತು ವೈರಸ್ ಗಳು ಕೂಡ. ಇವುಗಳು ಮನುಷ್ಯನ ಕಣ್ಣಿಗೆ ಕಾಣಿಸದಷ್ಟು ಚಿಕ್ಕದಾಗಿದ್ದು, ಇವುಗಳು ಮನುಷ್ಯನನ್ನೇ ನಾಶ ಮಾಡಿಬಿಡಬಹುದು.

ವಿಶ್ವದಲ್ಲಿ ತುಂಬಾ ಮಾರಣಾಂತಿಕವಾಗಿರುವ ಕಾಯಿಲೆಯಾಗಿರುವ, ಇದುವರೆಗೆ ಔಷಧಿಯೇ ಇಲ್ಲದ ಏಡ್ಸ್ ಕಾಯಿಲೆಯು ಕೂಡ ಮಿನ್ಯುಟೆ ವೈರಸ್ ನಿಂದ ಬಂದಿರುವುದು. ಮನುಷ್ಯನಿಗೆ ಹೋಲಿಸಿದರೆ ಈ ಮಾರಣಾಂತಿಕವಾಗಿರುವ ಸೂಕ್ಷ್ಮಜೀವಿಗಳು ಎಷ್ಟು ಪ್ರಬಲವಾಗಿದೆ ಎಂದು ನಮಗೆ ಅನಿಸುವುದು ಇದೆ. ಡೆಂಗ್ಯೂ, ಮಲೇರಿಯಾ, ಜಿಕಾ ಇತ್ಯಾದಿ ಮಾರಣಾಂತಿಕ ಕಾಯಿಲೆಗಳು ವೈರಸ್ ನಿಂದ ಬರುವುದು. ಈ ಮಾರಣಾಂತಿಕ ಕಾಯಿಲೆಗಳು ಸೊಳ್ಳೆಗಳು, ಸೋಂಕು ಇರುವ ವ್ಯಕ್ತಿ, ಕಲುಷಿತ ಗಾಳಿ, ನೀರು ಮತ್ತು ಆಹಾರ ಇತ್ಯಾದಿಗಳಿಂದ ಹರಡುವುದು.

keystone virus symptoms

ವಿಶ್ವದ ವಿವಿಧ ಭಾಗಗಳಲ್ಲಿ ಇಂತಹ ಹಲವಾರು ಮಾರಣಾಂತಿಕ ವೈರಸ್ ಗಳು ಜನ್ಮ ತಳೆಯುವುದು ಮತ್ತು ಇದನ್ನು ಪತ್ತೆ ಹಚ್ಚುವುದು ತುಂಬಾ ಕಠಿಣ. ವೈರಸ್ ನಿಂದ ಬರುವಂತಹ ಕೆಲವು ರೋಗಗಳಿಗೆ ಯಾವುದೇ ಔಷಧಿ ಅಥವಾ ಚಿಕಿತ್ಸೆಯಿಲ್ಲ. ಇದರಿಂದಾಗಿ ಸಾವಿನ ಸಂಖ್ಯೆಯು ಹೆಚ್ಚಾಗುತ್ತದೆ. ಅಭಿವೃದ್ಧಿ ಹೊಂದುತ್ತಿರುವ ದೇಶಗಳಾದ ಭಾರತ, ಆಫ್ರಿಕಾ ಇತ್ಯಾದಿ ದೇಶಗಳಲ್ಲಿ ಇಂತಹ ವೈರಸ್ ನಿಂದ ಬರುವ ರೋಗಗಳು ಸಾಮಾನ್ಯ. ಅತಿಯಾದ ಜನಸಂಖ್ಯೆ ಮತ್ತು ಸ್ವಚ್ಛತೆ ಇಲ್ಲದೆ ಇರುವುದೇ ಇದಕ್ಕೆ ಕಾರಣ. ಸೊಳ್ಳೆಗಳಿಂದ ಹರಡುವಂತಹ ಮತ್ತೊಂದು ರೀತಿಯ ವೈರಸ್ ನ್ನು ವಿಜ್ಞಾನಿಗಳು ಇತ್ತೀಚೆಗೆ ಪತ್ತೆ ಮಾಡಿದ್ದಾರೆ. ಇದನ್ನು ಕೀಸ್ಟೋನ್ ವೈರಸ್ ಎಂದು ಹೆಸರಿಸಲಾಗಿದೆ. ಇದರ ಬಗ್ಗೆ ತಿಳಿಯಿರಿ.

ಕೀಸ್ಟೋನ್ ವೈರಸ್ ನ ಮೂಲ

ಕೀಸ್ಟೋನ್ ವೈರಸ್ ನ ಮೂಲ

ಅಮೆರಿಕಾದ ಟೆಕ್ಸಾಸ್ ಪ್ರಾಂತ್ಯದಲ್ಲಿ 1964ನಲ್ಲಿ ಮೊದಲ ಬಾರಿಗೆ ಕೀಸ್ಟೋನ್ ವೈರಸ್ ನ್ನು ಪತ್ತೆ ಮಾಡಲಾಗಿತ್ತು. ಇದನ್ನು ಆಗ ಪರೀಕ್ಷೆ ಮಾಡಿದಂತಹ ತಜ್ಞರು ಇದು ಕೇವಲ ಪ್ರಾಣಿಗಳಿಗೆ ಮಾತ್ರ ಬರುವುದು ಮತ್ತು ಮನುಷ್ಯರಿಗಲ್ಲ ಎಂದಿದ್ದರು. ಅದಾಗ್ಯೂ, 2016ರಲ್ಲಿ ಅಮೆರಿಕಾದ ಫ್ಲೋರಿಡಾದ ಯುವಕನೊಬ್ಬನನ್ನು ಜ್ವರ ಮತ್ತು ದೇಹದಲ್ಲಿ ದದ್ದುಗಳು ಮೂಡಿರುವುದಕ್ಕೆ ಆಸ್ಪತ್ರೆಗೆ ದಾಖಲಿಸಲಾಯಿತು. ಇದೇ ಸಮಯದಲ್ಲಿ ಆತ ವಾಸಿಸುತ್ತಿದ್ದ ಪ್ರದೇಶದಲ್ಲಿ ಜಿಕಾ ವೈರಸ್ ಸಾಮಾನ್ಯವಾಗಿದ್ದ ಕಾರಣ ಆತನಿಗೆ ಜಿಕಾ ಇದೆ ಎಂದು ಹೇಳಲಾಯಿತು. ಪರೀಕ್ಷೆಯಲ್ಲೂ ಆತನಿಗೆ ಜಿಕಾ ಇರುವುದು ಕಂಡುಬಂತು. ಆದರೆ ವೈದ್ಯರು ಆತನಿಗೆ ಕೀಸ್ಟೋನ್ ವೈರಸ್ ದಾಳಿ ಮಾಡಿದೆ ಎಂದರು. ಈ ವೇಳೆ ಕೀಸ್ಟೋನ್ ವೈರಸ್ ಮನುಷ್ಯರ ಮೇಲೆ ದಾಳಿ ಮಾಡುವುದು ಖಚಿತವಾಯಿತು.

ಕೀಸ್ಟೋನ್ ವೈರಸ್ ಪಸರಿಸುವುದು ಹೇಗೆ?

ಕೀಸ್ಟೋನ್ ವೈರಸ್ ಪಸರಿಸುವುದು ಹೇಗೆ?

ಡೆಂಗ್ಯೂ, ಮಲೇರಿಯಾ, ಜಿಕಾ ಇತ್ಯಾದಿಗಳಂತೆ ಕೀಸ್ಟೋನ್ ವೈರಸ್ ಕೂಡ ಸೊಳ್ಳೆಗಳ ಕಡಿತದಿಂದ ಹರಡುವುದು. ಇದು ಸೊಳ್ಳೆಯಿಂದ ಬರುವಂತಹ ವೈರಸ್ ಆಗಿದೆ. ಹೆಣ್ಣು ಸೊಳ್ಳೆಯು ಕೀಸ್ಟೋನ್ ವೈರಸ್ ನ್ನು ತನ್ನೊಳಗೆ ಹಿಡಿದುಕೊಂಡು ಮನುಷ್ಯನ ರಕ್ತನಾಳಕ್ಕೆ ಚುಚ್ಚುವುದು.

ಮನುಷ್ಯನ ರಕ್ತನಾಳದಲ್ಲಿ ಈ ವೈರಸ್ ದ್ವಿಗುಣವಾಗುವುದು ಮತ್ತು ವ್ಯಕ್ತಿಯ ಮೇಲೆ ಪ್ರಭಾವ ಬೀರಲು ಆರಂಭಿಸುವುದು. ಅಮೆರಿಕಾ, ಆಫ್ರಿಕಾ ಮತ್ತು ಭಾರತದ ಕೆಲವು ಭಾಗಗಳಲ್ಲಿ ಕೀಸ್ಟೋನ್ ವೈರಸ್ ಹೆಚ್ಚು ಪ್ರಚಲಿತದಲ್ಲಿದೆ. ಆದರೆ ಹೆಚ್ಚಿನ ಪ್ರಕರಣಗಳು ಅಮೆರಿಕಾದಲ್ಲಿ ಕಂಡುಬಂದಿದೆ.

ಕೀಸ್ಟೋನ್ ವೈರಸ್ ನ ಲಕ್ಷಣಗಳು

ಕೀಸ್ಟೋನ್ ವೈರಸ್ ನ ಲಕ್ಷಣಗಳು

ಕೀಸ್ಟೋನ್ ವೈರಸ್ ನ ಲಕ್ಷಣಗಳು ಸಾಮಾನ್ಯ ವೈರಸ್ ನ ಜ್ವರದಂತೆ ಇರುವುದು. ಇದರಲ್ಲಿ ಜ್ವರ, ತಲೆನೋವು, ಶೀತ ಇತ್ಯಾದಿ ಕಂಡುಬರುವುದು. ರಕ್ತ ಪರೀಕ್ಷೆ ಮಾಡದ ಹೊರತಾಗಿ ಈ ವೈರಸ್ ನ್ನು ಪತ್ತೆ ಮಾಡುವುದು ಕಷ್ಟ. ಆದರೆ ದೇಹದ ಮೇಲೆ ಮೂಡುವ ದದ್ದುಗಳು, ನಿರಂತರ ಜ್ವರ ಮತ್ತು ವೈರಸ್ ಕೊನೇ ಹಂತದಲ್ಲಿ ಮೆದುಳಿನ ಮೇಲೆ ಪರಿಣಾಮ ಬೀರಬಹುದು. ಇದರಿಂದ ಮೆದುಳಿಗೆ ಸೋಂಕು ಹರಡಿ, ಎನ್ಸೆಫಾಲಿಟಿಸ್ ಉಂಟಾಗಬಹುದು. ಇದು ಸಾವನ್ನುಂಟು ಮಾಡಬಹುದು.

ಕೀಸ್ಟೋನ್ ವೈರಸ್ ಗೆ ಚಿಕಿತ್ಸೆಗಳು

ಕೀಸ್ಟೋನ್ ವೈರಸ್ ಗೆ ಚಿಕಿತ್ಸೆಗಳು

ಡೆಂಗ್ಯೂ, ಜಿಕಾದಂತೆ ಕೀಸ್ಟೋನ್ ವೈರಸ್ ಗೆ ಕೂಡ ಯಾವುದೇ ರೀತಿಯ ಸ್ಪಷ್ಟ ಚಿಕಿತ್ಸೆ ಅಥವಾ ಔಷಧಿಯಿಲ್ಲ. ಜ್ವರ ಕಡಿಮೆ ಮಾಡಲು ಔಷಧಿ ನೀಡಬಹುದು. ವಿಶ್ರಾಂತಿ ಪಡೆಯುವುದು, ದ್ರವಾಹಾರ ಸೇವನೆ ಮತ್ತು ಪ್ರತಿರೋಧಕ ಶಕ್ತಿ ಹೆಚ್ಚಿಸುವಂತಹ ಆಹಾರ ಸೇವನೆಯು ಈಗ ಇದಕ್ಕೆ ಇರುವಂತಹ ಚಿಕಿತ್ಸೆಯಾಗಿದೆ.

ಕೀಸ್ಟೋನ್ ವೈರಸ್ ತಡೆಯುವುದು ಹೇಗೆ?

ಕೀಸ್ಟೋನ್ ವೈರಸ್ ತಡೆಯುವುದು ಹೇಗೆ?

ಡೆಂಗ್ಯೂ, ಮಲೇರಿಯಾ ಇತ್ಯಾದಿ ಜ್ವರಗಳು ಬರದಿರಲು ಮಾಡುವಂತಹ ಮುಂಜಾಗೃತಾ ಕ್ರಮಗಳನ್ನು ಇಲ್ಲಿಯೂ ತೆಗೆದುಕೊಳ್ಳಬೇಕು. ಮನೆಯ ಹಾಗೂ ನೀವು ಕೆಲಸ ಮಾಡುವ ಪ್ರದೇಶಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಿ. ಸೊಳ್ಳೆಗಳು ಬರದಂತೆ ಕಾಯಿಲ್ ಅಥವಾ ಸ್ಪ್ರೇಗಳನ್ನು ಬಳಸಿ. ಕಲುಷಿತ ನೀರು ಮತ್ತು ಕೊಳಚೆಯು ಸೊಳ್ಳೆಗಳಿಗೆ ಮೊಟ್ಟೆಯನ್ನಿಡಲು ಪ್ರಸಕ್ತ ಸ್ಥಳ. ಇದರಿಂದ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಡಿ. ಆರೋಗ್ಯಕರ ಆಹಾರ ಸೇವಿಸಿ ಮತ್ತು ಹೊರಗಿನ ಆಹಾರ ಸೇವನೆ ಮಾಡಬೇಡಿ. ಪ್ರತಿರೋಧಕ ಶಕ್ತಿಯು ಬಲವಾಗಿದ್ದರೆ ಯಾವುದೇ ವೈರಸ್ ನಮ್ಮ ದೇಹದೊಳಗೆ ಪ್ರವೇಶ ಮಾಡಲು ಸಾಧ್ಯವಿಲ್ಲ.

English summary

keystone-virus-know-about-the-deadly-new-virus-affecting-humans

As humans most of us would definitely feel that we are a superior species, as we are the most developed and intelligent beings among all animals, right? While it is true that humans are the most superior of all animals, there are some organisms which could be stronger than us, even though they may not be as intelligent. For example, even though a snake's brain is not as well developed as ours, one bite from a venomous snake can take a person's life away within minutes!
Story first published: Tuesday, July 24, 2018, 16:50 [IST]
X
Desktop Bottom Promotion