For Quick Alerts
ALLOW NOTIFICATIONS  
For Daily Alerts

ಆರೋಗ್ಯ ಟಿಪ್ಸ್: ಬಿಳಿ ಅಕ್ಕಿಯ 10 ಆರೋಗ್ಯಕಾರಿ ಲಾಭಗಳು

By Susuhma
|

ನಾವು ಯಾವಾಗಲೂ ಮಾತನಾಡುವಾಗ ಬಿಳಿ ಅಕ್ಕಿಯನ್ನು ಊಟಕ್ಕೆ ಅಷ್ಟು ಉತ್ತಮ ಆಯ್ಕೆ ಎಂದು ಪರಿಗಣಿಸುವುದಿಲ್ಲ. ಆದರೆ ಇದು ಸತ್ಯ ವಿಚಾರ ಅಲ್ಲ. ಬಿಳಿ ಅನ್ನಕ್ಕೆ ಅದರದೇ ಆದ ಕೆಲವು ಶಕ್ತಿಗಳಿವೆ. ಆದರೆ ಇತ್ತೀಚಿನ ಕೆಲವು ನ್ಯೂಟ್ರೀಷಿಯನಿಷ್ಟ್ ಗಳು ಇದರ ಬಗ್ಗೆ ಕೆಲವು ನಕಾರಾತ್ಮಕ ಹೇಳಿಕೆಗಳನ್ನು ನೀಡಿರುವುದರಿಂದ ಕೆಲವರಲ್ಲಿ ಗೊಂದಲಕ್ಕೆ ಕಾರಣವಾಗಿ ಬಿಟ್ಟಿದೆ. ಹಾಗಾಗಿ ಇದರ ಆರೋಗ್ಯ ಲಾಭಗಳ ಬಗ್ಗೆ ಕೆಲವರು ಭಿನ್ನವಿಭಿನ್ನ ತರ್ಕಗಳನ್ನು ಹೇಳುತ್ತಾರೆ. ಆದ್ರೆ ಬಿಳಿ ರೈಸ್ ಗೂ ಬ್ರೌನ್ ರೈಸ್ ಗೂ ತುಲನೆ ಮಾಡಿ ನೋಡಿದಾಗ ಕೆಲವು ಆರೋಗ್ಯ ಲಾಭಗಳು ಬಿಳಿ ಅಕ್ಕಿಯಿಂದ ಲಭ್ಯವಾಗುತ್ತೆ. ಅವುಗಳ ಬಗ್ಗೆ ನಾವಿವತ್ತು ಚರ್ಚಿಸೋಣ. ಸಂಪೂರ್ಣ ಮಾಹಿತಿಗಾಗಿ ಮುಂದೆ ಓದಿ..

ಬ್ರೌನ್ ರೈಸ್ ಗಿಂತ ಬಿಳಿ ರೈಸ್ ಹೆಚ್ಚು ಆರೋಗ್ಯಕಾರಿಯಾಗಬಹುದು. ಯಾಕೆಂದರೆ ಇದರಲ್ಲಿ ಫೈಟಟೇಟ್ಸ್ ಅನ್ನುವ ಆಂಟಿ ನ್ಯೂಟ್ರಿಯಂಟ್ಸ್ ಗಳನ್ನು ಒಳಗೊಂಡಿರುತ್ತೆ. ಇದು ನಿಮ್ಮ ದೇಹಕ್ಕೆ ಸೇರುವ ಮಿನರಲ್ಸ್ ಗಳನ್ನು ಕರಗಿಸುವ ಪ್ರಕ್ರಿಯೆಗೆ ಸಹಾಯ ಮಾಡಲಿದೆ.

ಬ್ರೌನ್ ರೈಸ್ ನಲ್ಲಿ ಫೈಟಿಕ್ ಆಸಿಡ್ ಅಂಶವಿರುತ್ತೆ ಆದರೆ ಇದು ಬಿಳಿ ರೈಸ್ ನಲ್ಲಿ ಇರುವುದಿಲ್ಲ. ಫೈಟಿಕ್ ಆಸಿಡ್ ನಿಮ್ಮ ದೇಹಕ್ಕೆ ಆನಾರೋಗ್ಯಕಾರಿಯಾಗಿರುತ್ತೆ. ಬಿಳಿ ಅಕ್ಕಿಯನ್ನು ತಯಾರಿಸುವ ಪ್ರಕ್ರಿಯೆಯಲ್ಲಿ ಅದರ ಮೇಲಿನ ಕಂದು ಬಣ್ಣದ ಸಿಪ್ಪೆ ಹೊರಟು ಹೋಗುತ್ತೆ. ಮಿಲ್ ಮಾಡುವಾಗ ಹೊರಟು ಹೋಗುವ ಈ ಕಂದು ಬಣ್ಣದ ಸಿಪ್ಪೆ ನಿಮ್ಮ ಜೀರ್ಣಕ್ರಿಯೆಗೆ ಅಷ್ಟೇನು ಒಳ್ಳೆಯದಲ್ಲ. ಫೈಬರ್ ಅಂಶವನ್ನು ಕಳೆದುಕೊಂಡಿರುವ ಬಿಳಿ ಅಕ್ಕಿಯು ಜೀರ್ಣಕ್ರಿಯೆಯನ್ನು ಸರಾಗಗೊಳಿಸುತ್ತೆ.

ಇಂದು ಬೋಲ್ಡ್ ಸ್ಕೈ ನಿಮಗೆ ಬಿಳಿ ಮತ್ತು ಕಂದು ಬಣ್ಣದ ಅಕ್ಕಿಯ ಬಗೆಗಿನ ಸಂಪೂರ್ಣ ಮಾಹಿತಿಯನ್ನು ನೀಡುತ್ತೆ.

ಪೋಷಕಾಂಶಗಳಿಂದ ಸಂಪದ್ಭರಿತವಾಗಿರುತ್ತೆ

ಪೋಷಕಾಂಶಗಳಿಂದ ಸಂಪದ್ಭರಿತವಾಗಿರುತ್ತೆ

ಕಂದು ಅಕ್ಕಿಯನ್ನು ಹೆಚ್ಚು ಪೋಷಕಾಂಶಗಳಿರುತ್ತೆ. ಇದು ಬ್ರಾನ್ ಮತ್ತು ಫೈಟಿಕ್ ಆಸಿಡ್ ಗಳನ್ನು ಒಳಗೊಂಡಿರುವುದಿಲ್ಲ. ಇದರಲ್ಲಿ ಮೆಗ್ನೇಷಿಯಂ, ಮಿನಮಿನ್ ಬಿ6, ಕಬ್ಬಿಣಾಂಶ,ಕ್ಯಾಲ್ಸಿಯಂ,ಪ್ರೋಟೀನ್ ಮತ್ತು ಪೋಟಾಷಿಯಂ ಇರುತ್ತೆ. ಅಷ್ಟೇ ಅಲ್ಲ ಇದರಲ್ಲಿ ಕಾರ್ಬೋಹೈಟ್ರೇಟ್ ಅಂಶವಿರುತ್ತೆ.

ಆರ್ಸೆನಿಕ್ ಅಂಶದಿಂದ ಫ್ರೀ ಆಗಿರುತ್ತೆ

ಆರ್ಸೆನಿಕ್ ಅಂಶದಿಂದ ಫ್ರೀ ಆಗಿರುತ್ತೆ

ಯಾವುದೇ ರೀತಿಯ ಟಾಕ್ಸಿಕ್ ಮೆಟಲ್ ಗಳಾದ ಆರ್ಸೆನಿಕ್ ಗಳು ವೈಟ್ ರೈಸ್ ನಲ್ಲಿ ಇರುವುದಿಲ್ಲ. ಆದ್ರೆ ಕಂದು ಅಕ್ಕಿಯಲ್ಲಿ ಆರ್ಸೆನಿಕ್ ಅಂಶವಿರುತ್ತೆ.

ಗ್ಲುಟೀನ್ ಅಂಶವಿರುವುದಿಲ್ಲ

ಗ್ಲುಟೀನ್ ಅಂಶವಿರುವುದಿಲ್ಲ

ಬಿಳಿ ಅಕ್ಕಿಯಲ್ಲಿ ಕೆಲವರಿಗೆ ಅಲರ್ಜಿ ಉಂಟು ಮಾಡುವ ಗ್ಲುಟೀನ್ ಅಂಶವಿರುವುದಿಲ್ಲ. ಅಷ್ಟೇ ಅಲ್ಲ ಕಾರ್ಬೋಹೈಡ್ರೇಟ್ ಅಂಶ ಇದರಲ್ಲಿ ಹೆಚ್ಚಾಗಿರುತ್ತೆ. ಹಾರ್ಮೋನಲ್ ಬದಲಾವಣೆಗಳಿಂದ ಬಳಲುವವರಿಗೆ ಇದು ಹೇಳಿ ಮಾಡಿಸಿದ್ದು.

ಶಕ್ತಿ ನೀಡುತ್ತೆ

ಶಕ್ತಿ ನೀಡುತ್ತೆ

ಕಾರ್ಬೋಹೈಡ್ರೇಟ್ ಅಂಶ ಅಧಿಕವಾಗಿರುವುದರಿಂದಾಗಿ ಬಿಳಿ ಅಕ್ಕಿ ಸೇವಿಸುವವರಿಗೆ ಶಕ್ತಿ ಬೇಗನೆ ದೊರಕುತ್ತೆ. ಬೇರೆ ಕಾರ್ಬೋಹೈಡ್ರೇಟ್ ಗಳಿಗೆ ಹೋಲಿಸಿದರೆ ಬಿಳಿ ಅಕ್ಕಿಯಲ್ಲಿರುವ ಕಾರ್ಬೋಹೈಡ್ರೇಟ್ ಬೇಗನೆ ಶಕ್ತಿ ನೀಡಿ ಅಶಕ್ತಿಯಿಂದ ಬಳಲುವವರು ಕೂಡಲೇ ಶಕ್ತರಾಗುವಂತೆ ಮಾಡುತ್ತೆ.

ಮಾಂಸಖಂಡಗಳ ಬಲವರ್ಧನೆಗೆ ಸಹಕಾರಿ

ಮಾಂಸಖಂಡಗಳ ಬಲವರ್ಧನೆಗೆ ಸಹಕಾರಿ

ಬೆಳ್ತಿಗೆ ಅಕ್ಕಿಯಲ್ಲಿ ಪ್ರೋಟೀನುಗಳಿವೆ (ಅವಶ್ಯಕ ಅಮೈನೋ ಆಮ್ಲಗಳು). ಬೆಳ್ತಿಗೆ ಅಕ್ಕಿಯನ್ನು ಮಾ೦ಸದೊ೦ದಿಗೆ ಸೇವಿಸಿದಲ್ಲಿ ಅದೊ೦ದು ಪರಿಪೂರ್ಣವಾದ ಆಹಾರಕ್ರಮವೆನಿಸಿಕೊಳ್ಳುತ್ತದೆ. ಏಕೆ೦ದರೆ, ಇವೆರಡೂ ಜೊತೆಯಾಗಿ ಶಾರೀರಿಕ ಪ್ರೋಟೀನ್ ಗಳನ್ನು ಬೆಳೆಸುವುದರ ಮೂಲಕ ಮಾ೦ಸಖ೦ಡಗಳ ಸ೦ವರ್ಧನೆಗೆ ಅವಶ್ಯವಿರುವ ಎಲ್ಲಾ ಬಗೆಯ ಅಮೈನೋ ಆಮ್ಲಗಳನ್ನು ಒಳಗೊ೦ಡಿರುತ್ತವೆ. ಸಸ್ಯಾಹಾರಿಗಳೂ ಕೂಡ, ಬೆಳ್ತಿಗೆ ಅಕ್ಕಿಯೊ೦ದಿಗೆ ಧಾನ್ಯಗಳನ್ನೂ ಅಥವಾ ಕಾಳುಗಳನ್ನೂ ಸೇವಿಸುವುದರ ಮೂಲಕ ತಮ್ಮ ದೇಹದ ಮಾ೦ಸಖ೦ಡಗಳನ್ನು ಚೆನ್ನಾಗಿ ಬೆಳೆಸಿಕೊಳ್ಳಲು ಸಾಧ್ಯವಿದೆ.

ಜಠರಗರುಳಿನ ಆರೋಗ್ಯಕ್ಕೆ ಸಹಕಾರಿ

ಜಠರಗರುಳಿನ ಆರೋಗ್ಯಕ್ಕೆ ಸಹಕಾರಿ

ಫೈಬರ್ ರಹಿತ ಮತ್ತು ಗ್ಲುಟೀನ್ ರಹಿತವಾಗಿರುವ ವೈಟ್ ರೈಸ್ ಜಠರಗರುಳಿನ ಆರೋಗ್ಯವನ್ನು ಹೆಚ್ಚಿಸುತ್ತೆ. ಬೆಳಗಿನ ಹೊತ್ತು ಕಾಣಿಸಿಕೊಳ್ಳುವ ಮುಂಜಾನೆ ಸಿಕ್ ನೆಸ್ ಗಳನ್ನು ನಿವಾರಿಸಲು ಕೂಡ ಇದು ಸಹಕಾರಿಯಾಗಿದೆ.

ಮೆದುಳು ಮತ್ತು ರೋಗನಿರೋಧಕ ಶಕ್ತಿಗೆ ಸಹಕಾರಿ

ಮೆದುಳು ಮತ್ತು ರೋಗನಿರೋಧಕ ಶಕ್ತಿಗೆ ಸಹಕಾರಿ

ಮೆಗ್ನೀಷಿಯಂ ಅಂಶ ಇದರಲ್ಲಿ ಅಧಿಕವಾಗಿದ್ದು ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತೆ ಮತ್ತು ಮೆದುಳಿನ ಕಾರ್ಯ ಚಟುವಟಿಕೆಗೆ ಇದು ಸಹಕರಿಸುತ್ತೆ.

ಹಸಿವನ್ನು ಹೆಚ್ಚಿಸುತ್ತೆ

ಹಸಿವನ್ನು ಹೆಚ್ಚಿಸುತ್ತೆ

ಪಚನಕ್ರಿಯೆಗೆ ಪೂರಕವಾಗುವುದರ ಮೂಲಕ ಬೆಳ್ತಿಗೆ ಅನ್ನವು ಹಸಿವನ್ನು ಹೆಚ್ಚಿಸುತ್ತದೆ ಹಾಗೂ ತನ್ಮೂಲಕ ಅನೇಕ ಹೊಟ್ಟೆಯ ಕಿರಿಕಿರಿಗಳನ್ನು ನಿವಾರಿಸುತ್ತದೆ. ಬೆಳ್ತಿಗೆ ಅಕ್ಕಿಯು ತಕ್ಕಮಟ್ಟಿಗೆ ಮೂತ್ರವರ್ಧಕ ಗುಣಲಕ್ಷಣಗಳನ್ನೂ ಒಳಗೊ೦ಡಿದೆ. ಬೆಳ್ತಿಗೆ ಅಕ್ಕಿಯ ಅತ್ಯುತ್ತಮವಾದ ಪ್ರಯೋಜನಗಳ ಪೈಕಿ ಇದೂ ಸಹ ಒ೦ದು.

ಮೂತ್ರವರ್ಧಕಗಳು

ಮೂತ್ರವರ್ಧಕಗಳು

ಮೂತ್ರದ ಪ್ರಮಾಣ ಹಾಗೂ ಆವೃತ್ತಿಯನ್ನು ಹೆಚ್ಚಿಸುವುದರ ಮೂಲಕ, ದೇಹವು ಹಿಡಿದಿಟ್ಟುಕೊ೦ಡಿರಬಹುದಾದ ಹೆಚ್ಚುವರಿ ನೀರಿನ೦ಶವನ್ನು ನಿವಾರಿಸಲು ಬೆಳ್ತಿಗೆ ಅಕ್ಕಿಯು ನೆರವಾಗುತ್ತದೆ. ಏಕೆ೦ದರೆ, ಬೆಳ್ತೆಗೆ ಅಕ್ಕಿಯು ಸ್ವಲ್ಪ ಪ್ರಮಾಣದಲ್ಲಿ ಮೂತ್ರವರ್ಧಕ ಗುಣಲಕ್ಷಣಗಳನ್ನೂ ಒಳಗೊ೦ಡಿದೆ. ಮೂತ್ರವನ್ನು ಹೊರಹಾಕಲು ನೆರವಾಗುವುದರ ಮೂಲಕ ಬೆಳ್ತಿಗೆ ಅಕ್ಕಿಯು ತೂಕನಷ್ಟವನ್ನು ಹೊ೦ದುವ ನಿಟ್ಟಿನಲ್ಲಿಯೂ ಸಹಕಾರಿಯಾಗಿದೆ.

ಹಲ್ಲು ಹುಳುಕು

ಹಲ್ಲು ಹುಳುಕು

ಹಲ್ಲು ಹುಳುಕಾದಂತೆ ತಡೆಯುವ ಶಕ್ತಿ ಫೈಟಿಕ್ ಆಸಿಡ್ ಗೆ ಇರುವುದರಿಂದಾಗಿ ಹಲ್ಲು ಹುಳುಕಾಗದಂತೆ ತಡೆಯುವ ಸಾಮರ್ಥ್ಯ ವೈಟ್ ರೈಸ್ ಗಿದೆ.

English summary

Is White Rice Healthy? Here are the 10 reasons

Boldsky will share with you some health benefits of white rice vs brown rice. Have a look at some uses of white rice.
Story first published: Friday, April 6, 2018, 16:20 [IST]
X
Desktop Bottom Promotion