ಖಾಲಿ ಹೊಟ್ಟೆಯಲ್ಲಿ ಬಾಳೆ ಹಣ್ಣು ಸೇವಿಸುವುದು ಆರೋಗ್ಯಕರವೇ?

Posted By: Arshad Hussain
Subscribe to Boldsky
ಬಾಳೆಹಣ್ಣನ್ನು ಖಾಲಿ ಹೊಟ್ಟೆಯಲ್ಲಿ ತಿಂದ್ರೆ ಆರೋಗ್ಯಕ್ಕೆ ಒಳ್ಳೇದಾ? | Oneindia Kannada

ದಿನದ ಸಮಯದಲ್ಲಿ ಸೇವಿಸುವ ಯಾವುದೇ ಹೊತ್ತಿನ ಆಹಾರಗಳಲ್ಲಿ ಮುಂಜಾನೆಯ ಉಪಾಹಾರ ಅತ್ಯಂತ ಪ್ರಮುಖವಾಗಿದ್ದು ಉಪಾಹಾರವನ್ನು ಯಾವುದೇ ಕಾರಣಕ್ಕೂ ಬಿಡಕೂಡದು. ಉಪಾಹಾರ ಉತ್ತಮ ಪ್ರಮಾಣದಲ್ಲಿರಬೇಕು ಹಾಗೂ ಇದರಲ್ಲಿ ಸಾಕಷ್ಟು ಪೌಷ್ಟಿಕ ಹಾಗೂ ಆರೋಗ್ಯಕರ ಅಂಶಗಳಿರಬೇಕು. ಆದರೆ ಇಂದಿನ ಬಿಡುವಿಲ್ಲದ ಜೀವನಕ್ರಮದಲ್ಲಿ ಹೆಚ್ಚಿನವರು ಬೇನಗೇ ಉದ್ಯೋಗಸ್ಥಳಕ್ಕೆ ತಲುಪುವ ಧಾವಂತದ ಕಾರಣ ಉಪಾಹಾರವನ್ನೇ ತ್ಯಜಿಸುತ್ತಾರೆ.

ಇಲ್ಲದಿದ್ದರೆ ಒಂದು ಬಾಳೆಹಣ್ಣನ್ನೋ, ಸೇಬನ್ನೋ ತಿಂದು ಹೊರಟುಬಿಡುತ್ತಾರೆ. ಆದರೆ ಇದು ಅತ್ಯಂತ ಅನಾರೋಗ್ಯಕರ ಅಭ್ಯಾಸವಾಗಿದೆ. ಬಾಳೆಹಣ್ಣು ಅತ್ಯಂತ ಪೌಷ್ಟಿಕ ಆಹಾರವೇನೋ ಸರಿ, ಆದರೆ ಇದರಲ್ಲಿ ಪೊಟ್ಯಾಶಿಯಂ ಮತ್ತು ಮೆಗ್ನೀಶಿಯಂ ಪ್ರಮಾಣ ಹೆಚ್ಚಾಗಿರುವ ಕಾರಣ ಬೆಳಗ್ಗಿನ ಹೊತ್ತಿನಲ್ಲಿ ಖಾಲಿಹೊಟ್ಟೆಯಲ್ಲಿ ಸೇವಿಸುವುದರಿಂದ ದೇಹದಲ್ಲಿ ಖನಿಜಗಳ ಸಮತೋಲನವನ್ನು ಏರುಪೇರು ಗೊಳಿಸಬಹುದು.

ಆದ್ದರಿಂದ ಖಾಲಿಹೊಟ್ಟೆಯಲ್ಲಿ ಬಾಳೆಹಣ್ಣಿನ ಸೇವನೆಯನ್ನು ಆದಷ್ಟೂ ತ್ಯಜಿಸಬೇಕು. ಇತರ ವೇಳೆಯಲ್ಲಿ ಬಾಳೆಹಣ್ಣಿನ ಸೇವನೆ ಆರೋಗ್ಯವನ್ನು ವೃದ್ದಿಸುತ್ತದೆ. ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುವುದು, ಸುಸ್ತು ನಿವಾರಿಸುವುದು. ಮಲಬದ್ದತೆ ಹಾಗೂ ಕರುಳಿನಲ್ಲಿ ಹುಣ್ಣುಗಳಾಗದಂತೆ ತಡೆಯುವುದು ಮೊದಲಾದ ಪ್ರಯೋಜನಗಳಿವೆ. ಅಲ್ಲದೇ ರಕ್ತದಲ್ಲಿನ ಹೀಮೋಗ್ಲೋಬಿನ್ ಪ್ರಮಾಣಗಳನ್ನು ಹೆಚ್ಚಿಸಲು ನೆರವಾಗುತ್ತದೆ ಹಾಗೂ ರಕ್ತಹೀನತೆಯಿಂದ ತಡೆಯುತ್ತದೆ.

ಆದರೆ ಈ ಎಲ್ಲಾ ಪ್ರಯೋಜನಗಳನ್ನು ಪಡೆಯಲು ಬಾಳೆಹಣ್ಣಿನ ಸೇವನೆಯ ಸಮಯ ಸೂಕ್ತವಾಗಿರಬೇಕು. ಖಾಲಿಹೊಟ್ಟೆಯಲ್ಲಿ ಪೊಟ್ಯಾಶಿಯಂ ಮತ್ತು ಮೆಗ್ನೀಶಿಯಂಗಳು ಮಾಡುವ ಅವಾಂತರದ ಜೊತೆಗೇ ಹೊಟ್ಟೆಯಲ್ಲಿ ಕೆಲವರು ತೊಂದರೆಗಳನ್ನೂ ಉಂಟುಮಾಡಬಹುದು. ಉಪಾಹಾರಕ್ಕೂ ಬಾಳೆಹಣ್ಣನ್ನು ಸರಿಯಾದ ಸಮಯದಲ್ಲಿ ಸೇವಿಸಿದಾಗ ಮಾತ್ರ ಸೂಕ್ತವಾಗುತ್ತದೆ...

ಬಾಳೆಹಣ್ಣಿನ ಆರೋಗ್ಯಕರ ಪ್ರಯೋಜನಗಳು

ಬಾಳೆಹಣ್ಣಿನ ಆರೋಗ್ಯಕರ ಪ್ರಯೋಜನಗಳು

ಬಾಳೆಹಣ್ಣಿನ ಪೌಷ್ಟಿಕಾಂಶಗಳ ಬಗ್ಗೆ ನಾವೆಲ್ಲರೂ ಅರಿತೇ ಇದ್ದೇವೆ. ದೇಹದಲ್ಲಿ ಎದುರಾಗುವ ಪೊಟ್ಯಾಶಿಯಂ, ಮೆಗ್ನೇಶಿಯಂ ಹಾಗೂ ಕರಗುವ ನಾರಿನ ಪೂರೈಕೆಯ ಕಾರಣ ವೈದ್ಯರೂ ಬಾಳೆಹಣ್ಣನ್ನೂ ಸೇವಿಸಲು ಸಲಹೆ ಮಾಡುತ್ತಾರೆ. ಇದು ಹಸಿವನ್ನು ತಣಿಸುವ ಜೊತೆಗೇ ಶಕ್ತಿಯನ್ನೂ ವೃದ್ಧಿಸುತ್ತದೆ. ಬಾಳೆಹಣ್ಣಿನ ಕಾಲುಭಾಗ ಸಕ್ಕರೆಯೇ ಆಗಿದೆ ಹಾಗೂ ಇದು ದೇಹದಲ್ಲಿ ಶಕ್ತಿ ಹೆಚ್ಚಿಸಲು ನೆರವಾಗುತ್ತದೆ. ಅಲ್ಲದೇ ಬಾಳೆಹಣ್ಣಿನಲ್ಲಿರುವ ಟ್ರಿಪ್ಟೋಫ್ಯಾನ್, ವಿಟಮಿನ್ ಬಿ, ಕಬ್ಬಿಣ ಹಾಗೂ ವಿಟಮಿನ್ ಬಿ6 ಮೊದಲಾದ ಪೋಷಕಾಂಶಗಳು ಹಲವು ರೀತಿಯಲ್ಲಿ ಆರೋಗ್ಯಕ್ಕೆ ಪೂರಕವಾಗಿವೆ.

ಆದರೆ ಖಾಲಿಹೊಟ್ಟೆಯಲ್ಲಿ ಬಾಳೆಹಣ್ಣಿನ ಸೇವನೆ ಸಲ್ಲದು

ಆದರೆ ಖಾಲಿಹೊಟ್ಟೆಯಲ್ಲಿ ಬಾಳೆಹಣ್ಣಿನ ಸೇವನೆ ಸಲ್ಲದು

ಬಾಳೆಹಣ್ಣನ್ನು ಇತರ ಸಮಯದ ಆಹಾರಗಳ ಜೊತೆಗೆ ಸೇವಿಸಿದಾಗ ಇದರ ಪೌಷ್ಟಿಕಾಂಶಗಳು ಹೆಚ್ಚಿನ ನೆರವು ಒದಗಿಸುತ್ತವೆ. ಕೆಲವು ಸಂಶೋಧನೆಗಳ ಮೂಲಕ ಕಂಡುಕೊಂಡಂತೆ ಬಾಳೆಹಣ್ಣಿನಲ್ಲಿರುವ ಅಧಿಕ ಪ್ರಮಾಣದ ಸಕ್ಕರೆ ದೇಹಕ್ಕೆ ಶಕ್ತಿ ಒದಗಿಸುತ್ತದಾದರೂ ಖಾಲಿಹೊಟ್ಟೆಯಲ್ಲಿ ಸೇವಿಸಿದರೆ ಇದರಿಂದ ಪಡೆಯುವ ಶಕ್ತಿ ಕೆಲವೇ ಘಂಟೆಗಳಲ್ಲಿ ಖಾಲಿಯಾಗಿಬಿಡುತ್ತದೆ. ಪರಿಣಾಮವಾಗಿ ಸುಸ್ತು, ನಿದ್ದೆಯ ಜೊಂಪು ಹಾಗೂ ಜಡತನ ಆವರಿಸುತ್ತದೆ.

ಆದರೆ ಖಾಲಿಹೊಟ್ಟೆಯಲ್ಲಿ ಬಾಳೆಹಣ್ಣಿನ ಸೇವನೆ ಸಲ್ಲದು

ಆದರೆ ಖಾಲಿಹೊಟ್ಟೆಯಲ್ಲಿ ಬಾಳೆಹಣ್ಣಿನ ಸೇವನೆ ಸಲ್ಲದು

ಹಲವಾರು ಆಹಾರತಜ್ಞರ ಅಭಿಪ್ರಾಯದ ಪ್ರಕಾರ ಖಾಲಿಹೊಟ್ಟೆಯಲ್ಲಿ ಬಾಳೆಹಣ್ಣನ್ನು ಇತರ ಆಹಾರಗಳೊಂದಿಗೆ ಬೆರೆಸಿಕೊಂಡು ತಿನ್ನಬಹುದು. ಅಲ್ಲದೇ ಬಾಳೆಹಣ್ಣು ಆಮ್ಲೀಯವಾಗಿದ್ದು ಖಾಲಿಹೊಟ್ಟೆಯಲ್ಲಿ ಸೇವಿಸಿದರೆ ಇದು ಜಠರದ ಆಮ್ಲೀಯತೆಯನ್ನು ಇನ್ನಷ್ಟು ಹೆಚ್ಚಿಸಬಹುದು. ಆದ್ದರಿಂದ ಬಾಳೆಹಣ್ಣಿನೊಂದಿಗೆ ಕೆಲವು ಒಣಫಲಗಳನ್ನು ಸೇವಿಸಿದರೆ ಇದರ ಕ್ಷಾರೀಯ ಗುಣ ಆಮ್ಲೀಯತೆಯನ್ನು ತಗ್ಗಿಸಲು ನೆರವಾಗುತ್ತದೆ. ಅಲ್ಲದೇ ಖಾಲಿಹೊಟ್ಟೆಯಲ್ಲಿ ಬಾಳೆಹಣ್ಣಿನ ಸೇವನೆಯಿಂದ ಹೃದಯಸಂಬಂಧಿ ತೊಂದರೆಗಳು ಉಲ್ಬಣಿಸುತ್ತವೆ. ಏಕೆಂದರೆ ಬಾಳೆಹಣ್ಣಿನಲ್ಲಿರುವ ಮೆಗ್ನೇಶಿಯಂ ಅಧಿಕ ಪ್ರಮಾಣದಲ್ಲಿರುವ ಕಾರಣ ಇದು ದೇಹದಲ್ಲಿ ಅಸಮತೋಲನವನ್ನುಂಟುಮಾಡಬಹುದು.

ಈ ಬಗ್ಗೆ ಆಯುರ್ವೇದ ಏನು ಹೇಳುತ್ತದೆ?

ಈ ಬಗ್ಗೆ ಆಯುರ್ವೇದ ಏನು ಹೇಳುತ್ತದೆ?

ಆರೋಗ್ಯದ ಬಗ್ಗೆ ಸಾವಿರಾರು ವರ್ಷಗಳ ಹಿಂದೆಯೇ ಬರೆಯಲ್ಪಟ್ಟ ಗ್ರಂಥವಾದ ಆಯುರ್ವೇದದಲ್ಲಿ ಆರೋಗ್ಯ, ಪೌಷ್ಟಿಕಾಂಶ ಹಾಗೂ ನೆಮ್ಮದಿಯ ಜೀವನ ಪಡೆಯಲು ಹಲವಾರು ಮಾಹಿತಿಗಳನ್ನು ಒದಗಿಸಿದೆ. ಆಯುರ್ವೇದದ ಪ್ರಕಾರ ಮುಂಜಾನೆ ಖಾಲಿಹೊಟ್ಟೆಯಲ್ಲಿ ಯಾವುದೇ ಹಣ್ಣನ್ನು ಸೇವಿಸಬಾರದು. ಅದರಲ್ಲೂ ಬಾಳೆಹಣ್ಣನ್ನು ಸರ್ವಥಾ ಸೇವಿಸಬಾರದು ಎಂದು ತಿಳಿಸಿದೆ. ಇಂದು ಮಾರುಕಟ್ಟೆಯಲ್ಲಿ ದೊರಕುತ್ತಿರುವ ಹಣ್ಣುಗಳನ್ನು ಕೃತಕ ರಾಸಾಯನಿಕಗಳ ನೆರವಿನಿಂದ ಬೆಳೆಸಲಾಗುತ್ತದೆ ಹಾಗೂ ನೈಸರ್ಗಿಕ ಹಣ್ಣು ತರಕಾರಿಗಳು ಸಿಗುವುದೇ ದುಸ್ತರವಾಗಿದೆ. ಖಾಲಿಹೊಟ್ಟೆಯಲ್ಲಿ ಈ ಹಣ್ಣುಗಳನ್ನು ಸೇವಿಸಿದಾದ ಈ ರಾಸಾಯನಿಕಗಳೂ ದೇಹವನ್ನು ಪ್ರವೇಶಿಸಿ ಹಣ್ಣು ನಿಜವಾಗಿ ಕೊಡಬೇಕಾಗಿದ್ದ ಪ್ರಯೋಜನದ ಬದಲು ಹಲವಾರು ಅನಾರೋಗ್ಯಗಳಿಗೆ ಕಾರಣವಾಗಬಹುದು.

ಹಾಗಾದರೆ ನಾವು ಸೇವಿಸಬಹುದೇ? ಬೇಡವೇ?

ಹಾಗಾದರೆ ನಾವು ಸೇವಿಸಬಹುದೇ? ಬೇಡವೇ?

ಮುಂಜಾನೆಯ ಆಹಾರ ಪೌಷ್ಟಿಕವಾಗಿರಬೇಕು ಹಾಗೂ ಬಾಳೆಹಣ್ಣಿನಲ್ಲಿರುವ ಪೌಷ್ಟಿಕಾಂಶಗಳನ್ನೂ ತಳ್ಳಿ ಹಾಕುವಂತಿಲ್ಲ. ಹಾಗಾಗಿ ಕೇವಲ ಬಾಳೆಹಣ್ಣೊಂದನ್ನೇ ಸೇವಿಸದೇ ಇತರ ಆಹಾರಗಳ ಜೊತೆಗೆ ಅಲ್ಪಪ್ರಮಾಣದಲ್ಲಿ ಸೇವಿಸಿದಾಗ ಇದೊಂದು ಅದ್ಭುತ ಆರೋಗ್ಯಕರ ಆಹಾರವಾಗುತ್ತದೆ. ಬಾಳೆಹಣ್ಣನ್ನು ಇತರ ಹಣ್ಣುಗಳು ಹಾಗೂ ಇತರ ಆಹಾರಗಳೊಂದಿಗೆ ಬೆರೆಸಿ ಸೇವಿಸಿದರೆ ಎಲ್ಲಾ ಅಹಾರಗಳ ಒಟ್ಟಾರೆ ಪ್ರಯೋಜನ ಪಡೆದಂತಾಗುತ್ತದೆ ಹಾಗೂ ಬೆಳಗ್ಗಿನ ಸಮಯದಲ್ಲಿ ಅಗತ್ಯವಿರುವ ಶಕ್ತಿಯನ್ನು ಪಡೆದು ನಿತ್ಯದ ಚಟುವಟಿಕೆಗಳನ್ನು ಹುರುಪಿನಿಂದ ಪೂರೈಸಲು ಸಾಧ್ಯವಾಗುತ್ತದೆ.

ಬಾಳೆಹಣ್ಣನ್ನು ಬೆರೆಸಿ ಉಪಾಹಾರವನ್ನು ಇನ್ನಷ್ಟು ಆರೋಗ್ಯಕರವಾಗಿಸಿ

ಬಾಳೆಹಣ್ಣನ್ನು ಬೆರೆಸಿ ಉಪಾಹಾರವನ್ನು ಇನ್ನಷ್ಟು ಆರೋಗ್ಯಕರವಾಗಿಸಿ

ಕೆಳಗೆ ವಿವರಿಸಿರುವ ಕೆಲವು ವಿಧಾನಗಳ ಮೂಲಕ ನಿಮ್ಮ ಉಪಾಹಾರವನ್ನು ಇನ್ನಷ್ಟು ಪೌಷ್ಟಿಕ ಹಾಗೂ ಆರೋಗ್ಯಕರವಾಗಿಸಬಹುದು ಹಾಗೂ ಬೆಳಗ್ಗಿನ ಚಟುವಟಿಕೆಗಳಿಗೆ ಉತ್ತಮವಾದ ಪ್ರಾರಂಭ ಪಡೆಯಬಹುದು.

ಬಾಳೆಹಣ್ಣು-ಓಟ್ಸ್ ರವೆ ಕುಕ್ಕೀಸ್

ಬಾಳೆಹಣ್ಣು-ಓಟ್ಸ್ ರವೆ ಕುಕ್ಕೀಸ್

ದಿನದ ಪ್ರಾರಂಭ ಉತ್ತಮವಾಗಿರಲು ಈ ಕುಕ್ಕೀಸ್ ಉತ್ತಮ ಆಯ್ಕೆಯಾಗಿದೆ. ಇದನ್ನು ತಯಾರಿಸಲು ಒಂದು ಕಪ್ ಸಾಧಾರಣ ಓಟ್ಸ್, ಒಂದು ಬಾಳೆಹಣ್ಣು, ಮೇಪಲ್ ಸಿರಪ್ ಹಾಗೂ ಸಸ್ಯಜನ್ಯ ಬೆಣ್ಣೆಯ ಅಗತ್ಯವಿದೆ. ಎಲ್ಲವನ್ನೂ ಚೆನ್ನಾಗಿ ಕಲಸಿ ಚಿಕ್ಕ ಚಿಕ್ಕ ಬಿಸ್ಕತ್ತುಗಳಾಗಿಸಿ ಮಧ್ಯಮ ಉರಿಯಲ್ಲಿ ಬೇಯಿಸಿ. ಇದು ರುಚಿಕರ ಹಾಗೂ ಅದ್ಭುತ ಬೆಳಗ್ಗಿನ ಉಪಾಹಾರವಾಗಿದೆ.

ಚಾಕಲೇಟ್ ಬಾಳೆಹಣ್ಣು ಸ್ಮೂಥಿ

ಚಾಕಲೇಟ್ ಬಾಳೆಹಣ್ಣು ಸ್ಮೂಥಿ

ಸ್ಮೂಥಿಯನ್ನು ಇಷ್ಟಪಡದವರು ಯಾರಿಲ್ಲ? ವಿಶೇಷವಾಗಿ ಮಕ್ಕಳಿಗೆ ಸ್ಮೂಥಿಗಳು ತುಂಬಾ ಇಷ್ಟ. ಒಂದು ವೇಳೆ ಮಕ್ಕಳಿಗೂ ಬೆಳಗ್ಗಿನ ಸಮಯದಲ್ಲಿ ಧಾವಂತವಿದ್ದರೆ ಈ ಆಯ್ಕೆ ಉತ್ತಮವಾಗಿದೆ. ಇದನ್ನು ತಯಾರಿಸಲು ಮಿಕ್ಸಿಯ ಬ್ಲೆಂಡರಿನಲ್ಲಿ ಒಂದು ಲೋಟ ತಾಜಾ ಹಾಲು, ಕೋಕೋ ಪುಡಿ, ಒಂದು ಬಾಳೆಹಣ್ಣು ಸೇರಿಸಿ ನುಣ್ಣಗೆ ಕಡೆಯಿರಿ. ನೊರೆನೊರೆಯಾದ ಬಳಿಕ ಕಡೆಯುವುದನ್ನು ನಿಲ್ಲಿಸಿ ಹಾಗೂ ಲೋಟದಲ್ಲಿ ತುಂಬಿ ಮಕ್ಕಳಿಗೆ ಕುಡಿಯಲು ನೀಡಿ. ಇದು ಹಸಿವು ನೀರಡಿಕೆಗಳನ್ನು ತಣಿಸುವ ಜೊತೆಗೇ ದಿನದ ಚಟುವಟಿಕೆಗೆ ಅಗತ್ಯವಿರುವ ಶಕ್ತಿಯನ್ನೂ ಒದಗಿಸುತ್ತದೆ.

English summary

Is It Healthy To Eat Bananas On An Empty Stomach?

Bananas are acidic in nature and have high amounts of potassium. They are good to start off with in the morning but not on an empty stomach. You should team it with soaked dry fruits, apples and other fruits to minimalise the acidic content in the body.