For Quick Alerts
ALLOW NOTIFICATIONS  
For Daily Alerts

ನೆನಪಿನ ಶಕ್ತಿ ಕುಂದಲು ಆಲ್‌ಝೈಮರ್‌‌ ಕಾಯಿಲೆಯೊಂದೇ ಕಾರಣವೇ?

|

ಮರೆವು ಸಾಮಾನ್ಯ, ಹೆಚ್ಚಿನವು ಸಾಮಾನ್ಯವಾಗಿ ಮರೆತುಬಿಡುವ ಸಂಗತಿಗಳಾದರೆ ಉಳಿದವು ಜಾಣಮರೆವುಗಳು. ಆದರೆ ವಯಸ್ಸಾಗುತ್ತಾ ಹೋದಂತೆ ಸ್ಮರಣಶಕ್ತಿಯೂ ಬಾಧೆಗೊಳಗಾಗದೇ ಇರಲಾರದು. ಆದರೆ ಕೆಲವು ಕಾಯಿಲೆಗಳ ಲಕ್ಷಣಗಳಲ್ಲಿ ಮರೆಗುಳಿತನವೂ ಒಂದಾಗಿದ್ದು ಮೆದುಳಿನ ಕಾಯಿಲೆಯಾದ ಅಲ್ಜೀಮರ್ಸ್ ಕಾಯಿಲೆಯ ಪ್ರಮುಖ ಲಕ್ಷಣವೂ ಆಗಿದೆ. ಹಾಗಾಗಿ ಯಾವಾಗ ಮರೆಗುಳಿತನ ಆವರಿಸತೊಡಗುತ್ತದೆಯೋ ಹಲವರಲ್ಲಿ ತನಗೆಲ್ಲಾದರೂ ಅಲ್ಜೀಮರ್ಸ್ ಕಾಯಿಲೆ ಬಂದಿದೆಯೇ ಎಂಬ ಆತಂಕ ಎದುರಾಗುತ್ತದೆ. ಆದರೆ ವಾಸ್ತವದಲ್ಲಿ ಮರೆಗುಳಿತನ ಎದುರಾದ ಮಾತ್ರಕ್ಕೇ ಅಲ್ಜೀಮರ್ಸ್ ಕಾಯಿಲೆ ಬಂದುಬಿಟ್ಟಿದೆ ಎಂಬ ತೀರ್ಮಾನಕ್ಕೆ ಬರುವುದು ಸರಿಯಲ್ಲ, ಈ ಬಗ್ಗೆ ತಜ್ಞರು ಏನು ಹೇಳುತ್ತಾರೆ ಎಂಬುದನ್ನು ನೋಡೋಣ:

ಮರೆಗುಳಿತನ ಎಲ್ಲರಲ್ಲಿಯೂ ಇರುವ ಒಂದು ತೊಂದರೆಯಾಗಿದ್ದರೂ ಹೆಚ್ಚಿನವರಲ್ಲಿ ಇದು ಗಂಭೀರ ರೂಪದಲ್ಲಿರುವುದಿಲ್ಲ. ಆದರೆ ಕೆಲವರಿಗೆ ಭಾರೀ ಪ್ರಮಾಣದಲ್ಲಿ ಮರೆಗುಳಿತನ ಎದುರಾಗಿ ಇದು ಕೇವಲ ನಿತ್ಯದ ಕಾರ್ಯಗಳನ್ನು ನಿರ್ವಹಿಸಲು ಮರೆತು ಹೋಗುವುದು ಮಾತ್ರವಲ್ಲ, ವ್ಯಕ್ತಿತ್ವದ ಮೇಲೂ ಪ್ರಭಾವ ಬೀರುತ್ತಿದ್ದರೆ ಇದಕ್ಕೆ dementia ಎಂಬ ಕಾಯಿಲೆ ಕಾರಣವಾಗಿರಬಹುದು. ಒಂದು ವೇಳೆ ಸ್ಮರಣಶಕ್ತಿಯ ಕುಂದುವಿಕೆಯ ಜೊತೆಗೇ ನಿತ್ಯದ ಚಟುವಟಿಕೆಯ ಮೇಲೂ, ಚಲನವಲನಗಳ ಮೇಲೂ ಪ್ರಭಾವ ಬೀರಿದ್ದರೆ ಮಾತ್ರ ಇದು ಅಲ್ಜೀಮರ್ಸ್ ಕಾಯಿಲೆ ಎಂದು ಅಂದಾಜಿಸಬಹುದು. ವಾಸ್ತವವಾಗಿ dementia ಎಂದರೆ ಮರೆಗುಳಿತನ ಎಂಬ ಒಂದು ವಿಸ್ತಾರವಾದ ವಿಷಯವಾಗಿದ್ದು ಈ ಕಾಯಿಲೆಯ ಹಲವಾರು ವಿಧಗಳಲ್ಲಿ ಅಲ್ಜೀಮರ್ಸ್ ಕಾಯಿಲೆ ಒಂದು ವಿಧವಾಗಿದೆ.

what causes memory loss and forgetfulness

ಮರೆಗುಳಿತನಕ್ಕೆ ಇವೆರಡೂ ಕಾಯಿಲೆಗಳು ಪ್ರಮುಖವಾಗಿ ಕಂಡುಬರುವ ಕಾರಣಗಳಾಗಿದ್ದರೂ ಇವೆರೆಡೇ ಕಾರಣಗಳಲ್ಲದೇ ಇತರ ಕಾರಣಗಳೂ ಇವೆ. ಬನ್ನಿ, ಮರೆಗುಳಿತನಕ್ಕೆ ಬೇರೆ ಯಾವ ಕಾರಣಗಳು ಪ್ರಭಾವ ಬೀರುತ್ತವೆ ಎಂಬುದನ್ನು ನೋಡೋಣ:

ಭಾವನಾತ್ಮಕ ಕಾರಣಗಳು

ಭಾವನಾತ್ಮಕ ಕಾರಣಗಳು

ಮಾನಸಿಕ ಒತ್ತಡ, ಖಿನ್ನತೆ, ಭಾವನಾತ್ಮಕ ಒತ್ತಡ, ಉದ್ವೇಗ, ದುಃಖ ಮೊದಲಾದವು ಮೆದುಳಿನ ಮೇಲೆ ಅಪಾರವಾದ ಪ್ರಭಾವ ಬೀರುತ್ತವೆ. ಪರಿಣಾಮವಾಗಿ ಮಾಹಿತಿಯನ್ನು ನೆನಪಿನಲ್ಲಿಟ್ಟುಕೊಳ್ಳುವ ಸಾಮರ್ಥ್ಯ ಕುಂದುತ್ತದೆ ಹಾಗೂ ನಿತ್ಯದ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಮತ್ತು ಅಗತ್ಯ ವಿವರಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಸಾಧ್ಯವಾಗದೇ ಹೋಗುತ್ತದೆ.

ಖಿನ್ನತೆ

ಖಿನ್ನತೆ

ಖಿನ್ನತೆ ಎದುರಾದಾಗ ಮನಸ್ಸು ಯಾವ ಮಾಹಿತಿಯನ್ನೂ ಸ್ವೀಕರಿಸುವ ಹಂತದಲ್ಲಿರುವುದಿಲ್ಲ ಹಾಗೂ ಹಿಂದಿನ ಸಂಗತಿಗಳನ್ನು ನೆನಪಿಸಿಕೊಳ್ಳಲೂ ಸಾಧ್ಯವಾಗುವುದಿಲ್ಲ ಹಾಗೂ ಈಗ ಮಾಡಬೇಕಾದ ಕಾರ್ಯದ ಮೇಲೂ ಏಕಾಗ್ರತೆ ಸಾಧಿಸಲು ಸಾಧ್ಯವಾಗುವುದಿಲ್ಲ. ಖಿನ್ನತೆಗೆ ಕಾರಣವಾದ ಸಂಗತಿಗಳೇ ಮೆದುಳನ್ನು ಆವರಿಸಿ ಈಗ ನಿಮ್ಮ ಸುತ್ತಮುತ್ತ ಜರುಗುತ್ತಿರುವ ಸಂಗತಿಗಳನ್ನು ಗ್ರಹಿಸದಂತೆ, ನೀವು ಮಾಡಬೇಕಾದ ಕಾರ್ಯವನ್ನು ಮಾಡದಂತೆ ತಡೆಯುತ್ತವೆ. ಖಿನ್ನತೆಯಿಂದ ನಿದ್ದೆಯೂ ಬಾರದೇ ಹೋಗಬಹುದು ಹಾಗೂ ಇಂದ್ರಿಯಗಳ ಮೂಲಕ ತಲುಪುವ ಮಾಹಿತಿಗಳು ನೆನಪಿನಲ್ಲಿ ಉಳಿಯದೇ ಹೋಗಬಹುದು.

Most Read: ಬ್ಲ್ಯಾಕ್ ಹೆಡ್ಸ್ ಸಮಸ್ಯೆಗೆ 'ಅಕ್ಕಿಹಿಟ್ಟಿ'ನ ಚಿಕಿತ್ಸೆ- ಶೀಘ್ರ ಪರಿಹಾರ!

ಒತ್ತಡ

ಒತ್ತಡ

ಒಂದು ವೇಳೆ ನೀವು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರೆ ಇದರಿಂದ ನೀವು ನಿರ್ವಹಿಸಬೇಕಾದ ಕಾರ್ಯಗಳಿಂದ ವಿಮುಖರಾಗಬಹುದು ಹಾಗೂ ಮನಸ್ಸನ್ನು ಒತ್ತಡಕ್ಕೆ ಕಾರಣವಾದ ವಿಷಯವೇ ಅಪಾರವಾಗಿ ಆವರಿಸಿರುವ ಕಾರಣ ಮೆದುಳಿನ ಮೇಲಿನ ಭಾರ ಹೆಚ್ಚಬಹುದು. ಯಾವುದೇ ಕಾರ್ಯ ಸಾಧಿಸಬೇಕಾದರೆ ಕೊಂಚ ಮಟ್ಟಿಗಿನ ಒತ್ತಡದ ಅಗತ್ಯವಿದೆ. ಆದರೆ ಈ ಒತ್ತಡ ಅತಿಯಾದರೆ ಹಾಗೂ ದೀರ್ಘಕಾಲ ಕಾಡಿದರೆ ಇದು ಮರೆಗುಳಿತನಕ್ಕೆ ಕಾರಣವಾಗಬಹುದು. ಅಲ್ಪಕಾಲದ ಮಾನಸಿಕ ಒತ್ತಡದಿಂದಲೂ (ಉದಾಹರಣೆಗೆ ಪರೀಕ್ಷಾ ಸಮಯದಲ್ಲಿ ಎದುರಾಗುವ ಮಾನಸಿಕ ಒತ್ತಡ) ತಾತ್ಕಾಲಿಕ ಮರೆಗುಳಿತನಕ್ಕೆ ಕಾರಣವಾಗಬಹುದು. ಹಾಗಾಗಿ ಮಾನಸಿಕ ಒತ್ತಡ ಆರೋಗ್ಯಕರವಾಗಿದ್ದಷ್ಟು ಮಾತ್ರ ಮೆದುಳಿಗೂ, ದೇಹಕ್ಕೂ ಒಳ್ಳೆಯದು ಹಾಗೂ ಉತ್ತಮ ಸಾಧನೆಗೂ ತಳಹದಿಯಾಗಿದೆ.

ದುಃಖ

ದುಃಖ

ತಮ್ಮ ಆಪ್ತರನ್ನು ಕಳೆದುಕೊಂಡ ದುಃಖ ಅಥವಾ ಯಾವುದೋ ಬಗೆಯ ನಷ್ಟ ಅನುಭವಿಸಿದಾಗ ಆಗುವ ದುಃಖದ ಪರಿಣಾಮವಾಗಿ ಮಾನಸಿಕ ಮತ್ತು ದೈಹಿಕ ಶಕ್ತಿ ಉಡುಗುತ್ತದೆ ಹಾಗೂ ಪರಿಣಾಮವಾಗಿ ಮೆದುಳು ಸುತ್ತ ಮುತ್ತ ಏನಾಗುತ್ತಿದೆ ಎಂಬುದನ್ನು ಗ್ರಹಿಸಲು ಅಸಮರ್ಥವಾಗುತ್ತದೆ. ದುಃಖ ಸಹಾ ಖಿನ್ನತೆಯಂತಹ ಪ್ರಭಾವವನ್ನೇ ಬೀರುತ್ತದಾದರೂ ಇದಕ್ಕೆ ಒಂದು ನಿರ್ದಿಷ್ಟ ಕಾರಣವಿರುವುದರಿಂದ ಈ ಸಂಗತಿ ಅನಿವಾರ್ಯ, ದೇವರ ಇಚ್ಛೆ, ವಿಧಿಯಾಟ, ದೊಡ್ಡದಾಗಬಹುದಾಗಿದ್ದು ಚಿಕ್ಕದರಲ್ಲಿಯೇ ಹೋಯಿತು ಮೊದಲಾದ ಸಮಾಧಾನಕರ ಮತ್ತು ಸಾಂತ್ವಾನದ ಮಾತುಗಳಿಂದ ದುಖ ನಿಧಾನವಾಗಿ ಮರೆಯಾಗುತ್ತದೆ. ದುಃಖ ಮರೆಯಾದ ಬಳಿಕ ಮರೆಗುಳಿತನದ ತಾತ್ಕಾಲಿಕ ಪರಿಣಾಮವೂ ಕೊನೆಗೊಳ್ಳುತ್ತದೆ.

Most Read: ಮೂಗಿನಿಂದ ರಕ್ತ ಬರುತ್ತಿದ್ದರೆ- ಇದೆಲ್ಲಾ ಇಂತಹ ಕಾಯಿಲೆಗಳ ಲಕ್ಷಣವಿರಬಹುದು!

ಉದ್ವೇಗ

ಉದ್ವೇಗ

ಸ್ಮರಣಶಕ್ತಿ ಕುಂದಲು ಇದೂ ಇನ್ನೊಂದು ಬಗೆಯ ಭಾವನಾತ್ಮಕ ಕಾರಣವಾಗಿದೆ. ಸಾಮಾನ್ಯವಾಗಿ ಪರೀಕ್ಷೆಯನ್ನು ಎದುರಿಸುವ ವಿದ್ಯಾರ್ಥಿಗಳು ಈ ಪರೀಕ್ಷೆಯನ್ನು ಸಮರ್ಥವಾಗಿ ನಿರ್ವಹಿಸಬಲ್ಲ ಆತ್ಮವಿಶ್ವಾಸವನ್ನು ಕಳೆದುಕೊಂಡ ಸಮಯದಲ್ಲಿ ಎದುರಾಗುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಪರೀಕ್ಷೆಯಲ್ಲಿ ಬರಲಿರುವ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಗೊತ್ತಿದ್ದರೂ ಉದ್ವೇಗ ತನ್ನಿಂತಾನೇ ಎದುರಾಗುತ್ತದೆ. ಉಳಿದಂತೆ ಪ್ರಮುಖವಾದುದನ್ನು ನಿರೀಕ್ಷಿಸುತ್ತಿದ್ದಾಗ, ಅಗತ್ಯಕ್ಕೆ ತಕ್ಕಷ್ಟು ಪ್ರತಿಫಲ ಸಮಯಾವಕಾಶದೊಳಗೆ ಬರದೇ ಇದ್ದಲ್ಲಿ ಮೊದಲಾದ ಸಂದರ್ಭಗಳಲ್ಲಿಯೂ ಉದ್ವೇಗದಿಂದ ಮರೆಗುಳಿತನ ಎದುರಾಗುತ್ತದೆ. ಉದ್ವೇಗದ ಮರೆಗುಳಿತನದಿಂದಲೂ ನಿತ್ಯದ ಚಟುವಟಿಕೆಗಳು ಬಾಧೆಗೊಳಗಾಗುತ್ತವೆ.

ದೈಹಿಕ ಮತ್ತು ಮಾನಸಿಕ ಸ್ಥಿತಿಗಳು

ದೈಹಿಕ ಮತ್ತು ಮಾನಸಿಕ ಸ್ಥಿತಿಗಳು

ದೈಹಿಕ ಮತ್ತು ಆರೋಗ್ಯಕ್ಕೆ ಸಂಬಂಧಿತ ಸ್ಥಿತಿಗಳಾದ ಸುಸ್ತು, ನಿದ್ರೆಯ ಕೊರತೆ, ವಿಟಮಿನ್ ಬಿ ೧೨ ಪೋಷಕಾಂಶದ ಕೊರತೆ, ತಲೆಗೆ ಬಿದ್ದ ಪೆಟ್ಟು, ಮೂತ್ರಪಿಂಡದ ತೊಂದರೆಗಳು ಮೊದಲಾದವೂ ಸ್ಮರಣಶಕ್ತಿಯ ಮೇಲೆ ಪ್ರಭಾವ ಬೀರಬಲ್ಲವು.

ತಲೆಗೆ ಬಿದ್ದ ಪೆಟ್ಟು

ತಲೆಗೆ ಬಿದ್ದ ಪೆಟ್ಟು

ತಲೆಯ ಬುರುಡೆಗೆ ಬಿದ್ದ ಭಾರೀ ಪೆಟ್ಟಿನಿಂದಾಗಿ ಅಥವಾ ತಲೆಕೆಳಗಾಗಿ ಬಿದ್ದ ರಭಸದಿಂದ ತೆಲೆಬುರುಡೆಯಲ್ಲಿ ಬಿರುಕು ಕಂಡುಬಂದರೆ ತಾತ್ಕಾಲಿಕ ಮರೆಗುಳಿತನ ಎದುರಾಗಬಹುದು. ಆದರೆ ಪೆಟ್ಟಿನ ತೀವ್ರತೆ, ಪೆಟ್ಟು ಬಿದ್ದ ಭಾಗ ಹಾಗೂ ಇದರಿಂದ ಮೆದುಳಿನ ಮೇಲೆ ಆದ ಆಘಾತ ಹಾಗೂ ಮರುಚೇತರಿಕೆಯ ಸಾಧ್ಯತೆಗಳನ್ನು ಅನುಸರಿಸಿ ಮರೆಗುಳಿತನ ಹಲವಾರು ವರ್ಷಗಳವರೆಗೆ ಮುಂದುವರೆಯಬಹುದು. ಅದರಲ್ಲೂ ಅಪಘಾತದಲ್ಲಿ ವಸ್ತುಗಳ ಮೂಲೆ ಅಥವಾ ಚೂಪಾದ ವಸ್ತುಗಳ ಹೊಡೆತದಿಂದ ಅಥವಾ ಆಟದ ಸಮಯದಲ್ಲಿ ತಲೆಗೆ ಬಿದ್ದ ಪೆಟ್ಟು ಮರೆಗುಳಿತನದ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

Most Read: ಗುರುವಾರ ಮಾಡುವ ಉಪವಾಸದ ಫಲವೇನು?

ನಿದ್ರೆಯ ಕೊರತೆ

ನಿದ್ರೆಯ ಕೊರತೆ

ಆರೋಗ್ಯ ಉತ್ತಮವಾಗಿರಬೇಕಾದರೆ ನಿತ್ಯವೂ ಆರದಿಂದ ಎಂಟು ಘಂಟೆಗಳ ಕಾಲ ಗಾಢ ನಿದ್ದೆ ಅವಶ್ಯವಾಗಿ ಬೇಕಾಗಿದೆ. ಇದರಿಂದ ನಿದ್ದೆಯ ಬಳಿಕ ಎದ್ದಾಗ ದೇಹ ಹಾಗೂ ಮನಸ್ಸು ಪ್ರಫುಲ್ಲವಾಗಿದ್ದು ಪೂರ್ಣ ಚೈತನ್ಯದಿಂದಿರಲು ಸಾಧ್ಯವಾಗುತ್ತದೆ. ಒಂದು ವೇಳೆ ಯಾವುದೋ ಕಾರಣದಿಂದ ನಿದ್ದೆ ಪಡೆಯಲು ಸಾಧ್ಯವಾಗದೇ ಇದ್ದರೆ ಅಥವಾ ನಿದ್ದೆಯ ಅವಧಿ ತೀರಾ ಕಡಿಮೆಯಾಗಿದ್ದರೆ ಇದರಿಂದ ಸ್ಮರಣಶಕ್ತಿ ಕುಂದುವುದು ಮಾತ್ರವಲ್ಲ ಕಲಿಯುವಿಕೆಯ ಮೇಲೂ ಅಪಾರ ಪ್ರಭಾವ ಬೀರುತ್ತದೆ. ಹಾಗಾಗಿ ಸ್ಮರಣಶಕ್ತಿ ಕುಂದುತ್ತಿದೆ ಎಂದರೆ ನಿಮ್ಮ ನಿದ್ದೆಯ ಪ್ರಮಾಣದ ಬಗ್ಗೆ ಅವಲೋಕನ ಅಗತ್ಯ.

ಮೂತ್ರಪಿಂಡದ ತೊಂದರೆಗಳು

ಮೂತ್ರಪಿಂಡದ ತೊಂದರೆಗಳು

ಒಂದು ವೇಳೆ ನಿಮಗೆ ಮೂತ್ರಪಿಂಡದ ಗಂಭೀರ ರೂಪದ ತೊಂದರೆಗಳಿದ್ದು ಅಲ್ಪ ಮಟ್ಟದ ವೈಫಲ್ಯವೂ ಎದುರಾಗಿದ್ದರೆ ನಿಮಗೆ ಮರೆಗುಳಿತನ ಎದುರಾಗುವುದು ಸಾಮಾನ್ಯವಾಗಿದೆ. ಮೂತ್ರಪಿಂಡದ ಕೆಲಸವಾದ ಕಲ್ಮಶಗಳನ್ನು ಶೋಧಿಸಿ ಹೊರಹಾಕುವುದು, ಪ್ರೋಟೀನುಗಳ ವಿಭಜನೆ ಮೊದಲಾದ ಕಾರ್ಯಗಳು ಸರಾಗವಾಗಿ ಸಾಗದೇ ಮೆದುಳಿನ ಕಾರ್ಯವಿಧಾನದ ಮೇಲೂ ಅಪಾರ ಪ್ರಭಾವ ಬೀರಬಹುದು. ಈ ಬಗ್ಗೆ ನಡೆಸಿದ ಅಧ್ಯಯನಗಳಿಂದ ಕಂಡುಬಂದ ಮಾಹಿತಿ ಎಂದರೆ ಅಲ್ಬುಮಿನೂರಿಯಾ (ಮೂತ್ರದಲ್ಲಿ ಆಲ್ಬುಮಿನ್ ಎಂಬ್ ಪ್ರೋಟೀನ್ ಮಿಶ್ರಣಗೊಂಡಿರುವುದು) ಎಂಬ ತೊಂದರೆ ಇರುವ ವ್ಯಕ್ತಿಗಳಲ್ಲಿಯೂ ಮರೆಗಳುಳಿತನ ಮತ್ತು ಕಲಿಯುವಿಕೆಯಲ್ಲಿ ನಿಧಾನದ ತೊಂದರೆ ಕಂಡುಬರುತ್ತದೆ.

ಎನ್ಸಿಫಾಲೈಟಿಸ್ (Encephalitis)

ಎನ್ಸಿಫಾಲೈಟಿಸ್ (Encephalitis)

ಒಂದು ವೇಳೆ ಮೆದುಳಿನ ಭಾಗದಲ್ಲಿಯೇ ಅಲ್ಪ ಪ್ರಮಾಣದ ಸೋಂಕು ಕಂಡುಬಂದರೆ ಇದಕ್ಕೆ Encephalitis ಎಂದು ಕರೆಯುತ್ತಾರೆ. ಸೋಂಕಿನ ತೀವ್ರತೆಯನ್ನು ಆಧರಿಸಿ ನರವ್ಯವಸ್ಥೆ ಶಿಥಿಲಗೊಂಡು ನಿತ್ಯದ ಕಾರ್ಯಗಳನ್ನು ಮಾಡಲಾಗದೇ, ಮಾಡಬಾರದ ಚಟುವಟಿಕೆಯನ್ನು ಅನೈಚ್ಛಿಕವಾಗಿ ನಿರ್ವಹಿಸುವ ಕಾಯಿಲೆಯಾದ motor dysfunction, ಪಾರ್ಶ್ವವಾಯು ಎದುರಾಗಬಹುದು ಹಾಗೂ ತೀವ್ರತರದ ಸೋಂಕಿನಿಂದಾಗಿ ರೋಗಿ ಕೋಮಾಸ್ಥಿತಿಯನ್ನೂ ತಲುಪಬಹುದು. ಈ ಸ್ಥಿತಿಯಲ್ಲಿ ಮೆದುಳು ತಾತ್ಕಾಲಿಕವಾಗಿ ಮಾಹಿತಿಯನ್ನು ಸಂಗ್ರಹಿಸಿಡುವ ಭಾಗವಾದ temporal lobes ಎಂಬ ಭಾಗದ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ ಪರಿಣಾಮವಾಗಿ ಈ ವ್ಯಕ್ತಿಗಳಿಗೆ ಹಿಂದಿನ ಕ್ಷಣದಲ್ಲಿ ಏನಾಯಿತು, ತಾನು ಒಂದು ವಸ್ತುವನ್ನು ಎಲ್ಲಿಟ್ಟಿದ್ದೆ ಎಂಬ ಅಗತ್ಯ ಮಾಹಿತಿಗಳೂ ನೆನಪಿನಲ್ಲಿರದೇ ಹೋಗುತ್ತವೆ.

Most Read: ಇಂತಹ ವಸ್ತುಗಳನ್ನು ಭಗವಾನ್ ಹನುಮಂತನಿಗೆ ಅರ್ಪಿಸಿ- ಆತ ಸಂತುಷ್ಟನಾಗುವನು

ಹೆಪಟೈಟಿಸ್

ಹೆಪಟೈಟಿಸ್

hepatitis A, B, ಮತ್ತು C. ಎಂಬ ವೈರಸ್ಸುಗಳ ಮೂಲಕ ಸಾಮಾನ್ಯವಾಗಿ ಯಕೃತ್ ಅನ್ನು ಭಾಧಿಸುವ ಈ ರೋಗ ಅಪರೂಪಕ್ಕೆ ಮೆದುಳನ್ನೂ ಆವಸಿರಬಹುದು. ಈ ಸ್ಥಿತಿಗೆ Hepatic encephalopathy ಎಂದು ಕರೆಯುತ್ತಾರೆ. ಈ ರೋಗ ಆವರಿಸಿದ ವ್ಯಕ್ತಿಯ ಯಕೃತ್ ತೀವ್ರತರದ ತೊಂದರೆಗೆ ಒಳಗಾಗುತ್ತದೆ ಹಾಗೂ ಮೆದುಳಿನಲ್ಲಿಯೂ ಸೋಂಕು ವಿಸ್ತರಿಸಿ ಸ್ಮರಣಶಕ್ತಿಯ ಕೊರತೆ ಹಾಗೂ ಮೆದುಳಿನ ಸಾಮರ್ಥ್ಯ ಉಡುಗುತ್ತದೆ. ಈ ರೋಗ ಆವರಿಸುತ್ತಾ ಹೋದಂತೆ ರೋಗಿಯ ದೇಹದಲ್ಲಿ ಯಕೃತ್ ನ ವೈಫಲ್ಯದ ಪರಿಣಾಮವಾಗಿ ಕಲ್ಮಶಗಳು ಶೋಧಿಸಲ್ಪಡದೇ ದೇಹದಲ್ಲಿ ಅಮೋನಿಯಾ ಮೊದಲಾದ ಕಲ್ಮಶಗಳು ಸಂಗ್ರಹಗೊಂಡು ದೇಹದ ಮತ್ತು ಮೆದುಳಿನ ಕ್ಷಮತೆಯನ್ನು ಉಡುಗಿಸುತ್ತವೆ.

ವಿಟಮಿನ್ ಬಿ ೧೨ ಕೊರತೆ

ವಿಟಮಿನ್ ಬಿ ೧೨ ಕೊರತೆ

ನರಗಳ ಜೀವಕೋಶಗಳ ನಿರ್ವಹಣೆ ಮತ್ತು ಕಾರ್ಯವಿಧಾನಕ್ಕಾಗಿ ಈ ವಿಟಮಿನ್ ಅತ್ಯಂತ ಅಗತ್ಯವಾಗಿರುವ ಪೋಷಕಾಂಶವಾಗಿದ್ದು ಇದರ ಕೊರತೆಯಿಂದ ನರವ್ಯವಸ್ಥೆ ಪರಿಪೂರ್ಣವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ. ನರವ್ಯವಸ್ಥೆಯೇ ಬಾಧಿತವಾಗಿದ್ದಾಗ ಈ ಮೂಲಕ ಸಂಕೇತಗಳೂ ಪೂರ್ಣವಾಗಿ ಮೆದುಳನ್ನು ತಲುಪದೇ ಪರೋಕ್ಷ ಮರೆಗುಳಿತನಕ್ಕೆ ಕಾರಣವಾಗಬಹುದು ಎಂದು ಕೆಲವು ಅಧ್ಯಯನಗಳ ಮೂಲಕ ತಿಳಿದುಬಂದಿದೆ.

ಗರ್ಭಾವಸ್ಥೆ

ಗರ್ಭಾವಸ್ಥೆ

ಗರ್ಭಾವಸ್ಥೆಯಲ್ಲಿ ಗರ್ಭಿಣಿಯ ದೇಹ ಸಾವಿರಾರು ಬದಲಾವಣೆಗಳನ್ನು ಪಡೆಯುತ್ತದೆ ಹಾಗೂ ಕೆಲವಾರು ರಸದೂತಗಳು ಸ್ರವಿಸಿ ಈ ಬದಲಾವಣೆಗಳಿಗೆ ಪ್ರಚೋದನೆ ನೀಡುತ್ತವೆ. ಕೆಲವೊಮ್ಮೆ ಈ ರಸದೂತಗಳ ಪರಿಣಾಮದ ಬದಲಾವಣೆಗಳು ಭಾವುಕ ಮತ್ತು ದೈಹಿಕ ಬದಲಾವಣೆಗಳೊಂದಿಗೆ ಮಿಳಿತಗೊಂಡಾಗ ಮರೆಗುಳಿತನ ಕಂಡುಬರುತ್ತದೆ. ಈ ಸ್ಥಿತಿಗೆ ಗರ್ಭಾವಸ್ಥೆಯ ಮರೆವು ಅಥವಾ pregnancy brain ಎಂದು ಕರೆಯಲಾಗುತ್ತದೆ ಹಾಗೂ ಇದೊಂದು ತಾತ್ಕಾಲಿಕ ಸ್ಥಿತಿಯಾಗಿದ್ದು ಹೆರಿಗೆಯ ಬಳಿಕ ತನ್ನಿಂತಾನೇ ಸರಿಹೋಗುತ್ತದೆ.

Most Read: ಪಪ್ಪಾಯಿ ತಿಂದರೂ ಸಾಕು-ದೇಹದ ತೂಕ ಹಾಗೂ ಬೊಜ್ಜು ಇಳಿಸಿಕೊಳ್ಳಬಹುದು

ರಜೋನಿವೃತ್ತಿ

ರಜೋನಿವೃತ್ತಿ

ರಜೋನಿವೃತ್ತಿಯೂ ಮೆದುಳಿನ ಕ್ಷಮತೆಯನ್ನು ಉಡುಗಿಸಬಹುದೇ? ಹೌದು, ಇದು ಸಾಧ್ಯ. ರಜೋನಿವೃತ್ತಿಯ ಸಮಯದಲ್ಲಿ ಮಹಿಳೆ ಭಾರೀ ಮಟ್ಟದ ಮನೋಭಾವದ ಏರುಪೇರಿಗೆ ಒಳಗಾಗುತ್ತಾರೆ ಹಾಗೂ ನಿದ್ದೆ ಬಾರದೇ ಹೋಗುತ್ತದೆ. ಪರಿಣಾಮವಾಗಿ ಸ್ಮರಣಶಕ್ತಿ ಕುಂದುವುದು ಹಾಗೂ ಕಲಿಯುವಿಕೆಯ ಸಾಮರ್ಥ್ಯವೂ ಕಡಿಮೆಯಾಗುವುದು ಕಂಡುಬರುತ್ತದೆ.

(TIA):Transient ischemic attack

(TIA):Transient ischemic attack

ಇದೊಂದು ಮೆದುಳಿನ ಆಘಾತವಾಗಿದ್ದು (mini-stroke ಎಂದೂ ಕರೆಯುತ್ತಾರೆ) ಪೆಟ್ಟು ಅಥವಾ ಬೇರಾವುದೋ ಕಾರಣದಿಂದ ಮೆದುಳಿಗೆ ಅಗತ್ಯ ರಕ್ತಸರಬರಾಜು ನಿಂತು ಹೋದರೆ ಈ ಸ್ಥಿತಿ ಎದುರಾಗುತ್ತದೆ. ಆಘಾತದ ಮಟ್ಟವನ್ನನುಸರಿಸಿ ಮೆದುಳಿನ ಮೇಲೆ ಎದುರಾಗುವ ಪರಿಣಾಮವೂ ಬೇರೆಬೇರೆಯಾಗಿರುತ್ತದೆ. ಪಾರ್ಶ್ವವಾಯು, ಅರೆ ಪಾರ್ಶ್ವವಾಯು, ಕೋಮಾಸ್ಥಿತಿ ಮೊದಲಾದವು ಎದುರಾಗಬಹುದು. ಒಂದು ವೇಳೆ ಆಘಾತ ಕಡಿಮೆ ಮಟ್ಟದ್ದಾಗಿದ್ದರೆ ಈ ದೊಡ್ಡ ತೊಂದರೆಗಳು ಎದುರಾಗದೇ ಹೋದರೂ ಸ್ಮರಣಶಕ್ತಿ ಉಡುಗಬಹುದು.

ಚಿಕಿತ್ಸಾ ಕ್ರಮ ಮತ್ತು ಔಷಧಿಗಳ ಪ್ರಭಾವ

ಚಿಕಿತ್ಸಾ ಕ್ರಮ ಮತ್ತು ಔಷಧಿಗಳ ಪ್ರಭಾವ

ಬೈಪಾಸ್ ಶಸ್ತ್ರಚಿಕಿತ್ಸೆ

ಒಂದು ಸಂಶೋಧನೆಯಲ್ಲಿ ಕಂಡುಕೊಂಡಂತೆ ಬೈಪಾಸ್ ಸರ್ಜರಿ ಎಂಬ ಶಸ್ತ್ರಚಿಕಿತ್ಸೆಯ ಬಳಿಕ ವ್ಯಕ್ತಿ ಹೆಚ್ಚಿನ ಗೊಂದಲ ಮತ್ತು ಮರೆಗುಳಿತನವನ್ನು ಎದುರಿಸುತ್ತಾನೆ. ಪರಿಣಾಮವಾಗಿ ಕಲಿಕಾ ಸಾಮರ್ಥ್ಯ ಉಡುಗುತ್ತದೆ. ಆದರೆ ಈ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಾ ಹೋದಂತೆ ಈ ತೊಂದರೆಗಳೂ ನಿಧಾನವಾಗಿ ಮಾಯವಾಗುತ್ತಾ ಹೋಗುತ್ತವೆ. ಇದಕ್ಕೆ ನಿಜವಾದ ಕಾರಣವೇನು ಎಂದು ಇದುವರೆಗೆ ತಿಳಿದಿಲ್ಲವಾದರೂ ಸಾಮಾನ್ಯವಾಗಿ ಶಸ್ತ್ರಚಿಕಿತ್ಸೆಯಲ್ಲಿ ಅನಿವಾರ್ಯವಾಗಿ ಎದುರಾಗುವ ರಕ್ತಹೆಪ್ಪುಗಟ್ಟುವ ಮೂಲ ಉತ್ಪನ್ನವಾಗುವ ರಕ್ತದ ಗಡ್ಡೆಗಳು ಹಾಗೂ ಶಸ್ತ್ರಚಿಕಿತ್ಸೆಯ ಪರಿಣಾಮವಾಗಿ ಎದುರಾಗುವ ಆಘಾತವೇ ಕಾರಣ ಎಂದು ಅನುಮಾನಿಸಲಾಗಿದೆ.

ಮದ್ಯಪಾನ

ಮದ್ಯಪಾನ

ಮದ್ಯ ಅಥವಾ ವ್ಯಸನಕಾರಿಯಾಗಿರುವ ಯಾವುದೇ ಅಮಲುಪದಾರ್ಥದ ಸೇವನೆಯಿಂದ ಮೆದುಳಿನ ಕ್ಷಮತೆ ಉಡುಗುತ್ತದೆ. ಸಾಮಾನ್ಯವಾಗಿ ಇದು ಮದ್ಯಸೇವನೆಯ ಅಮಲಿನ ತಕ್ಷಣದ ತಾತ್ಕಾಲಿಕ ಪರಿಣಾಮವಾಗಿದ್ದರೂ ವ್ಯಸನ ಹೆಚ್ಚಿದಂತೆಯೇ ಈ ಪರಿಣಾಮವೂ ಮುಂದುವರೆಯುತ್ತಾ ಕಡೆಗೆ ಶಾಶ್ವತವಾಗುವತ್ತ ವಾಲುತ್ತದೆ. ಅಚ್ಚರಿ ಎಂದರೆ ವ್ಯಸನದ ಪರಿಣಾಮ ಈಕ್ಷಣವೇ ಹೆಚ್ಚಾಗಿ ಕಾಣಿಸಿಕೊಂಡರೂ ವ್ಯಸನದಿಂದ ದೂರಾದ ಬಳಿಕ ಕೆಲವು ವರ್ಷಗಳ ನಂತರವೂ ಬಾಧಿಸಬಹುದು.

Most Read: ಸಾಲ ಮಾಡಿಯಾದ್ರೂ ತುಪ್ಪ ತಿನ್ನಿ! ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು

ಕೆಲವು ಔಷಧಿಗಳ ಪರಿಣಾಮ

ಕೆಲವು ಔಷಧಿಗಳ ಪರಿಣಾಮ

ಉದ್ವೇಗ ನಿವಾರಣೆ, ಖಿನ್ನತೆ ನಿವಾರಣೆ, ಅಲರ್ಜಿಹೋಗಲಾಡಿಸಲು ಬಳಸುವ ಔಷಧಿಗಳು (antihistamines), ನಿದ್ರೆ ಗುಳಿಗೆಗಳು, ಸ್ನಾಯುಗಳ ಸೆಡೆತವನ್ನು ಸಡಿಲಗೊಳಿಸುವ ಔಷಧಿಗಳು ಮೊದಲಾದವು ತಮ್ಮ ನಿಗದಿತ ಕಾರ್ಯವನ್ನು ನಿರ್ವಹಿಸುವ ಜೊತೆಗೇ ಮರೆಗುಳಿತನವನ್ನೂ ಉಚಿತ ಕೊಡುಗೆಯ ಮೂಲಕ ನೀಡುತ್ತವೆ.

ಮರೆಗುಳಿತನಕ್ಕೆ ಅರಿವಿನ ಸಾಮರ್ಥ್ಯದ ಕಾರಣಗಳು:

ಮರೆಗುಳಿತನಕ್ಕೆ ಅರಿವಿನ ಸಾಮರ್ಥ್ಯದ ಕಾರಣಗಳು:

ಅ. ನೈಸರ್ಗಿಕವಾಗಿ ನೆನಪಿನಲ್ಲಿಟ್ಟುಕೊಳ್ಳಲು ಸಾಧ್ಯವಾಗದ ಸ್ಥಿತಿ:

ಜಗತ್ತಿನಲ್ಲಿ ಹೆಚ್ಚಿನ ಜನರಲ್ಲಿ ಆಗಾಧವೆನಿಸುವಷ್ಟೇನೂ ಸ್ಮರಣ ಶಕ್ತಿ ಇರುವುದಿಲ್ಲ. ಉದಾಹರಣೆಗೆ ಒಂದು ವಿಷಯವನ್ನು ಕಲಿತು ಪೂರ್ಣವಾಗಿ ಒಪ್ಪಿಸಲು ಓರ್ವ ವ್ಯಕ್ತಿಗೆ ಕೇವಲ ಒಂದೇ ಘಂಟೆ ಸಾಕಾದರೆ ಇದೇ ವಿಷಯವನ್ನು ಕಲಿಯಲು ಸ್ಮರಣಶಕ್ತಿ ಕಡಿಮೆ ಇರುವ ವ್ಯಕ್ತಿಗೆ ನಾಲ್ಕಾರು ಘಂಟೆಗ ಸತತ ಮನನ ಬೇಕಾಗಬಹುದು.

ಗಮನ ಬೇರೆಡೆಗೆ ಹರಡುವುದು:

ಗಮನ ಬೇರೆಡೆಗೆ ಹರಡುವುದು:

ಯಾವುದೇ ಕೆಲಸವನ್ನು ಸಮರ್ಥವಾಗಿ ನಿರ್ವಹಿಸಲು ಏಕಾಗ್ರತೆ ಅಗತ್ಯ. ಏಕಾಗ್ರತೆ ಎಂದರೆ ಒಂದು ಸಮಯದಲ್ಲಿ ಒಂದೇ ವಿಷಯದ ಮೇಲೆ ಮೆದುಳಿನ ಎಲ್ಲಾ ಸಾಮರ್ಥ್ಯವನ್ನು ಕೇಂದ್ರೀಕರಿಸುವುದು. ಒಂದು ವೇಳೆ ಒಂದೇ ಸಮಯದಲ್ಲಿ ಹಲವಾರು ಕಾರ್ಯಗಳನ್ನು ನಿರ್ವಹಿಸಬೇಕಾದಾಗ ಮೆದುಳಿನ ಸಾಮರ್ಥ್ಯವನ್ನು ಎಲ್ಲ ಕಾರ್ಯಗಳಿಗೆ ಹಂಚಿಕೊಳ್ಳಬೇಕಾಗಿ ಬರುತ್ತದೆ ಹಾಗೂ ಪ್ರತಿ ಕೆಲಸವನ್ನೂ ಪರಿಪೂರ್ಣವಾಗಿ ಪೂರೈಸಲು ಸಾಧ್ಯವಾಗದೇ ಹೋಗಬಹುದು. ಏಕೆಂದರೆ ಮೆದುಳಿಗೂ ತನ್ನದೇ ಆದ ಮಿತಿಗಳಿದ್ದು ಒಂದು ಸಮಯದಲ್ಲಿ ವಿವಿಧ ಮಾಹಿತಿಯನ್ನು ಸಂಸ್ಕರಿಸಲು ಸಾಧ್ಯವಾಗದೇ ಹೋಗಬಹುದು ಹಾಗೂ ಇದರಿಂದಾಗಿ ಅಮೂಲ್ಯ ಮಾಹಿತಿ ಗಮನಕ್ಕೇ ಬಾರದೆ ಪರೋಕ್ಷ ಮರೆಗುಳಿತನಕ್ಕೆ ಕಾರಣವಾಗಬಹುದು. ಒಂದು ವೇಳೆ ಈ ಲೇಖನ ಇಷ್ಟವಾದರೆ ನಿಮ್ಮ ಆಪ್ತರೊಂದಿಗೆ ಹಂಚಿಕೊಳ್ಳಿ.

English summary

Is Alzheimer's Disease The Only Cause Of Memory Loss?

We all become forgetful about certain memories or things. It's very normal and happens occasionally or frequently in our day-to-day lives. But, many people worry about being forgetful and they think that it is the first sign of Alzheimer's disease. Well, not all memory loss problems indicate Alzheimer's disease and here's why. A lot of people have memory lapses and some memory problems are serious and some aren't.
Story first published: Friday, September 28, 2018, 17:17 [IST]
X
Desktop Bottom Promotion