For Quick Alerts
ALLOW NOTIFICATIONS  
For Daily Alerts

ಮುಟ್ಟಿನ ದಿನಗಳಲ್ಲಿ ಸೆಕ್ಸ್, ಅಪಾಯ ಮೈಮೇಲೆ ಎಳೆದುಕೊಂಡಂತೆ!!

|

ಮಾಸಿಕ ದಿನಗಳ ಹಿಂದಿನ ಹಾಗೂ ನಂತರದ ದಿನಗಳಲ್ಲಿಯೂ ಕೂಡುವುದನ್ನು ಹಲವು ದಂಪತಿಗಳು ಸಮರ್ಥಿಸಿಕೊಳ್ಳುತ್ತಾರೆ. ಕೆಲವರು ಈ ಅವಧಿಯನ್ನು 'ಸುರಕ್ಷಿತ ಅವಧಿ' ಎಂದೂ ಕರೆಯುತ್ತಾರೆ, ಅಂದರೆ ಈ ಸಮಯದಲ್ಲಿ ಯಾವುದೇ ರಕ್ಷಣೆಯ ಅಗತ್ಯವಿಲ್ಲದಾಗಿದ್ದು ಗರ್ಭಧಾರಣೆಯ ಸಾಧ್ಯತೆ ಇರುವುದಿಲ್ಲ ಎಂದು ಇವರು ಭಾವಿಸುತ್ತಾರೆ. ಆದರೆ ತಜ್ಞರ ಪ್ರಕಾರ ಈ ಅವಧಿಯಲ್ಲಿ ಕೂಡುವುದರಿಂದ ಆರೋಗ್ಯದ ಮೇಲೆ ಕೆಲವಾರು ಪರಿಣಾಮಗಳಾಗುತ್ತವೆ ಹಾಗೂ ಪ್ರತಿ ದಂಪತಿಗಳೂ ಈ ಬಗ್ಗೆ ಎಚ್ಚರ ವಹಿಸುವುದು ಅಗತ್ಯ. ಮಾಸಿಕ ದಿನಗಳ ಹಿಂದಿನ ದಿನದ ಕೂಡುವಿಕೆಯಿಂದ ಮಹಿಳೆಯರಲ್ಲಿ ಮೂತ್ರನಾಳದ ಸೋಂಕು (urinary tract infection (UTI) ಆವರಿಸುವ ಸಾಧ್ಯತೆ ಹೆಚ್ಚುತ್ತದೆ.

ಸಾಮಾನ್ಯವಾಗಿ ಸ್ವಚ್ಛತೆಗೆ ಹೆಚ್ಚಿನ ಗಮನ ನೀಡದ ದಂಪತಿಗಳಲ್ಲಿ ಈ ಪರಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಕೆಲವು ದಂಪತಿಗಳಲ್ಲಿ ಲೈಂಗಿಕವಾಗಿ ಹರಡುವ ರೋಗಗಳಾದ ಜನನಾಂಗದ ಕೀವುಗುಳ್ಳೆ (genital herpes) ಹಾಗೂ ಗೊನೋರಿಯಾ ಮೊದಲಾದ ಘೋರ ಕಾಯಿಲೆಗಳೂ ಆವರಿಸಬಹುದು. ಆದ್ದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿಬಾರಿ ಕೂಡುವಿಕೆಯ ಮುನ್ನ ಹಾಗೂ ಬಳಿಕ ಜನನಾಂಗಗಳನ್ನು ಸ್ವಚ್ಛಗೊಳಿಸುವುದು ಅಗತ್ಯವಾಗಿದೆ. ವಿಶೇಷವಾಗಿ ಮಾಸಿಕ ದಿನಗಳ ಮುನ್ನಾ ಹಾಗೂ ನಂತರದ ದಿನಗಳಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ.

ಮುಟ್ಟಿನ ಅವಧಿಯಲ್ಲಿ ಕಾಡುವ ಸ್ತನ ನೋವಿಗೆ ಇಲ್ಲಿದೆ ಸರಳ ಮನೆಮದ್ದುಗಳು

ಮಾಸಿಕ ದಿನಗಳ ನಂತರದ ದಿನದಲ್ಲಿ ಕೂಡುವುದರಿಂದ ಮಹಿಳೆ ಹೆಚ್ಚು ನಿತ್ರಾಣಳಾಗುತ್ತಾಳೆ ಹಾಗೂ ಮಾಸಿಕ ಸ್ರಾವದ ಅವಧಿಯಲ್ಲಿದ್ದುದಕ್ಕಿಂತಲೂ ಹೆಚ್ಚಿನ ಸುಸ್ತು ಆವರಿಸುತ್ತದೆ. ಅಚ್ಚರಿಯ ವಿಷಯವೆಂದರೆ ಮಾಸಿಕ ದಿನಗಳ ಬಳಿಕ ಕೂಡಿದ ಮಹಿಳೆಯರಲ್ಲಿ ಒಂದು ಬಗೆಯ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಮಾಸಿಕ ಸ್ರಾವದ ದಿನಗಳ ಕಡೆಯ ದಿನದ ಸ್ರಾವದಲ್ಲಿದ್ದ ಬ್ಯಾಕ್ಟೀರಿಯಾ ಗುಪ್ತಾಂಗದಲ್ಲಿ ಉಳಿದುಕೊಂಡು ಈ ಸಮಯದಲ್ಲಿ ಆಗಮಿಸಿದ ವೀರ್ಯಾಣುಗಳೊಂದಿಗೆ ಮಿಲನಗೊಂಡು ವಿಶಿಷ್ಟ ಬಗೆಯ ಸೋಂಕನ್ನು ಹರಡುತ್ತದೆ. ಈ ಕಾರಣಕ್ಕೆ ತಜ್ಞರು ಮಾಸಿಕ ದಿನಗಳ ಅವಧಿ ಪೂರ್ಣಗೊಳ್ಳುವವರೆಗೂ ಮಿಲನ ಬೇಡ ಎಂದು ಸಲಹೆ ಮಾಡುತ್ತಾರೆ. ಬನ್ನಿ, ಈ ಮಾತುಗಳನ್ನು ಮೀರಿದವರಿಗೆ ಯಾವ ಪರಿಣಾಮಗಳು ಎದುರಾಗುತ್ತವೆ ಎಂದು ನೋಡೋಣ...

ಸೋಂಕು

ಸೋಂಕು

ವಿಶೇಷವಾಗಿ ಮಾಸಿಕ ದಿನಗಳ ಬಳಿಕ ನಡೆಸುವ ಸಂಭೋಗದಿಂದ ಥಟ್ಟನೇ ಒಂದು ಬಗೆಯ ಸೋಂಕು ಎದುರಾಗುತ್ತದೆ. ಮುಟ್ಟಿನ ದಿನದ ಕಡೆಯ ಅವಧಿಯಲ್ಲಿ ಕಾಣಿಸಿಕೊಳ್ಳುವ ಒಂದು ಬಗೆಯ ಬ್ಯಾಕ್ಟೀರಿಯಾ ಪುರುಷ ವೀರ್ಯಾಣು ಹಾಗೂ ಇತರ ದ್ರವಗಳೊಂದಿಗೆ ಸಂಯುಕ್ತಗೊಂಡು ಸೋಂಕು ಹರಡುತ್ತದೆ. ಇದನ್ನು ತಡೆಯಬೇಕಾದರೆ ಮುಟ್ಟಿನ ಅವಧಿ ಪೂರ್ಣಗೊಂಡ ಬಳಿಕವೇ ಮಿಲನಕ್ಕೆ ಮುಂದಾಗಬೇಕು. ಅತ್ಯುತ್ತಮ ದಿನಗಳೆಂದರೆ ಮುಟ್ಟಿನ ಅವಧಿ ಪೂರ್ಣಗೊಂಡ ಬಳಿಕ ಎರಡರಿಂದ

ಮೂರು ದಿನಗಳಾದರೂ ಕಾಯಬೇಕಾಗುತ್ತದೆ.

ಲೈಂಗಿಕ ರೋಗಗಳು

ಲೈಂಗಿಕ ರೋಗಗಳು

ಮುಟ್ಟಿನ ದಿನಗಳ ಮುಂಚಿನ ಹಾಗೂ ನಂತರದ ದಿನಗಳಲ್ಲಿ ಕೂಡುವಿಕೆಯ ಇನ್ನೊಂದು ಘೋರ ಅಪಾಯವೆಂದರೆ ಲೈಂಗಿಕ ರೋಗಗಳ ಹರಡುವಿಕೆ. ಜನನಾಂಗದ ಕೀವುಗುಳ್ಳೆ (genital herpes) ಹಾಗೂ ದದ್ದುಗಳು ಸಾಮಾನ್ಯವಾಗಿ ಎದುರಾಗುತ್ತವೆ. ಈ ರೋಗಗಳನ್ನು ಹರಡುವುದರಿಂದ ತಡೆಯಲು ಏಕಸಂಗಾತಿನಿಷ್ಠೆ ಹಾಗೂ ಸ್ವಚ್ಛತೆಗೆ ಸಾಕಷ್ಟು ಆದ್ಯತೆ ನೀಡುವುದು ಅಗತ್ಯವಾಗಿದೆ.

ಗರ್ಭಾಂಕುರದ ಸಾಧ್ಯತೆ ಇಲ್ಲ

ಗರ್ಭಾಂಕುರದ ಸಾಧ್ಯತೆ ಇಲ್ಲ

ತಜ್ಞರ ಪ್ರಕಾರ ಮುಟ್ಟಿನ ಹಿಂದಿನ ಹಾಗೂ ನಂತರದ ದಿನಗಳಲ್ಲಿ ನಡೆಸುವ ಮಿಲನದಿಂದ ಗರ್ಭಾಂಕುರವಾಗುವ ಸಾಧ್ಯತೆ ಅತಿ ಕಡಿಮೆ ಇರುತ್ತದೆ. ಒಂದು ವೇಳೆ ಗರ್ಭವತಿಯಾಗುವ ಇಚ್ಛೆಯಿದ್ದರೆ ಮುಟ್ಟು ಪ್ರಾರಂಭವಾದ ದಿನದಿಂದ ಹಿಡಿದು ಎರಡು ವಾರಗಳ ನಂತರದ ದಿನಗಳು ಹೆಚ್ಚು ಫಲವತ್ತಾಗಿರುತ್ತವೆ ಹಾಗೂ ಈ ದಿನದಲ್ಲಿ ನಡೆಸುವ ಮಿಲನ ಗರ್ಭಾಂಕುರಕ್ಕೆ ಪೂರಕವಾಗಿವೆ.

ಭಾರೀ ಸುಸ್ತು ಆವರಿಸುತ್ತದೆ

ಭಾರೀ ಸುಸ್ತು ಆವರಿಸುತ್ತದೆ

ಮುಟ್ಟಿನ ದಿನಗಳ ಬಳಿಕ ನಡೆಸುವ ಮಿಲನದಿಂದ ಮಹಿಳೆಯರು ಭಾರೀ ಪ್ರಮಾಣದ ಸುಸ್ತು ಅನುಭವಿಸುತ್ತಾರೆ. ಏಕೆಂದರೆ ಮುಟ್ಟಿನ ಅವಧಿಯಲ್ಲಿ ಮಹಿಳೆ ಈಗಾಗಲೇ ಭಾರೀ ಪ್ರಮಾಣದ ರಕ್ತವನ್ನು ಕಳೆದುಕೊಂಡಿದ್ದು ಈ ರಕ್ತದ ಕೊರತೆಯೇ ಇನ್ನೂ ಪೂರ್ಣಗೊಂಡಿರದೇ ವಿಶ್ರಾಂತಿ ಪಡೆಯಬೇಕಾಗಿರುತ್ತದೆ. ಈ ಸಮಯದಲ್ಲಿ ಮಿಲನದಲ್ಲಿ ಒಳಗೊಳ್ಳುವ ಮೂಲಕ ದೇಹ ವಿಶ್ರಾಂತಿಯಿಂದ ವಂಚಿತವಾಗುತ್ತದೆ ಹಾಗೂ ಇನ್ನಷ್ಟು ಸುಸ್ತಿಗೆ ಕಾರಣವಾಗುತ್ತದೆ.

ಮುಟ್ಟಿನ ನಂತರದ ತಳಮಳ ಹೆಚ್ಚುತ್ತದೆ

ಮುಟ್ಟಿನ ನಂತರದ ತಳಮಳ ಹೆಚ್ಚುತ್ತದೆ

ಮಾಸಿಕ ದಿನಗಳ ಅವಧಿಯಲ್ಲಿ ಮಹಿಳೆ ಭಾವನಾತ್ಮಕವಾಗಿಯೂ ಹಲವಾರು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ದೇಹದಲ್ಲಿ ಸ್ರವಿಸುವ ಕೆಲವಾರು ರಸದೂತಗಳ ಪರಿಣಾಮವಾಗಿ ಸಿಡಿಮಿಡಿ, ಕೋಪಗೊಳ್ಳುವುದು, ಅಸಹನೆ, ಹರಿಹಾಯುವುದು, ದ್ವಂದ್ವ ಭಾವನೆ, ಗೊಂದಲಮಯ ಮನ ಮೊದಲಾದವುಗಳನ್ನು ಎದುರಿಸಿದವರಿಗೇ ಗೊತ್ತು. ಈ ಬವಣೆಗಳು ಮುಟ್ಟಿನ ದಿನದ ಬಳಿಕ ಒಂದೇ ದಿನಕ್ಕೆ ಇಲ್ಲವಾಗುವುದಿಲ್ಲ, ಬದಲಿಗೆ ಎರಡರಿಂದ ಮೂರು ದಿನಗಳವರೆಗಾದರೂ ಇರುತ್ತದೆ. ಅಲ್ಲದೇ ಮುಟ್ಟಿನ ದಿನಕ್ಕೂ ಮೊದಲ ಸಮಾಗಮದಿಂದ ಮುಟ್ಟಿನ ಅವಧಿಯಲ್ಲಿ ನೋವು ಹಾಗೂ ಕೆಳಹೊಟ್ಟೆಯ ಸೆಡೆತ ತೀವ್ರವಾಗುತ್ತದೆ.

ಮಾಸಿಕ ಸ್ರಾವದಲ್ಲಿ ಏರುಪೇರು

ಮಾಸಿಕ ಸ್ರಾವದಲ್ಲಿ ಏರುಪೇರು

ಮುಟ್ಟಿನ ಮೊದಲ ಮಿಲನದಿಂದ ಮುಟ್ಟಿನ ಅವಧಿಯಲ್ಲಿ ಆಗುವ ಸ್ರಾವದಲ್ಲಿ ವೈಪರೀತ್ಯ ಕಾಣಿಸಿಕೊಳ್ಳಬಹುದು. ಕೆಲವರಲ್ಲಿ ಇದು ವಿಪರೀತ ಹೆಚ್ಚಾಗಬಹುದು ಹಾಗೂ ಕೆಲವರಲ್ಲಿ ತೀರಾ ಕಡಿಮೆಯಾಗಬಹುದು. ಇದೊಂದು ಅತ್ಯಂತ ಘೋರವಾದ ಅಡ್ದಪರಿಣಾಮವಾಗಿದೆ.

ನೋವು ಬರುವ ಸಾಧ್ಯತೆ ಹೆಚ್ಚು

ನೋವು ಬರುವ ಸಾಧ್ಯತೆ ಹೆಚ್ಚು

ಈ ಸಂದರ್ಭದಲ್ಲಿ ಸೆಕ್ಸ್ ಮಾಡೋದರಿಂದ ಕೆಲವರಿಗೆ ನೋವು ಉಂಟಾಗುತ್ತದೆ. ಯಾಕೆಂದರೆ ಇದು ಗರ್ಭಕೋಶಕ್ಕೆ ಒತ್ತಡವನ್ನು ಉಂಟುಮಾಡುತ್ತದೆ. ಜೊತೆಗೆ ಕಂಫರ್ಟೇಬಲ್ ಅನಿಸೋದಿಲ್ಲ.

ಗರ್ಭಧರಿಸುವ ಸಾಧ್ಯತೆ ಕೂಡ ಇದೆಯಂತೆ

ಗರ್ಭಧರಿಸುವ ಸಾಧ್ಯತೆ ಕೂಡ ಇದೆಯಂತೆ

ಮುಟ್ಟಿನ ಸಂದರ್ಭದಲ್ಲಿ ಸೆಕ್ಸ್ ಮಾಡಿದ್ರೆ ಗರ್ಭಿಣಿ ಆಗುತ್ತಾರಾ ಎನ್ನುವ ಪ್ರಶ್ನೆ ಹಲವರಲ್ಲಿದೆ. ಹೌದು. ಈ ಸಂದರ್ಭ ಸೆಕ್ಸ್ ಮಾಡಿದ್ರೆ ಗರ್ಭಧರಿಸೋ ಸಾಧ್ಯತೆ ಇದೆ. ಯಾಕೆಂದರೆ ಈ ಸಂದರ್ಭದಲ್ಲೂ ಅಂಡೋತ್ಪತ್ತಿಯಾಗುತ್ತದೆ. ಹಾಗೂ ವೀರ್ಯಾಣು ಸುಮಾರು 7 ದಿನಗಳವರೆಗೆ ಜೀವಂತವಾಗಿರುತ್ತದೆ.

 ರಕ್ತದ ಬಿಡುಗಡೆಯ ವೇಗವನ್ನು ಹೆಚ್ಚಿಸಬಹುದು

ರಕ್ತದ ಬಿಡುಗಡೆಯ ವೇಗವನ್ನು ಹೆಚ್ಚಿಸಬಹುದು

ಸಂಭೋಗೋದ್ರೇಕದಿಂದ ಮುಟ್ಟಿನ ರಕ್ತದ ಬಿಡುಗಡೆಯ ವೇಗವನ್ನು ಹೆಚ್ಚಿಸಬಹುದು. ಎಂಡೊಮೆಟ್ರಿಯಲ್ ಭಾಗದಲ್ಲಿನ ತ್ಯಾಜ್ಯವನ್ನು ದೇಹದಿಂದ ಹೊರಹಾಕುವ ದರವನ್ನು

ಹೆಚ್ಚಿಸಬಹುದು. ಇದರಿಂದ ನಿಮ್ಮ ಪಿರಿಯೆಡ್ಸ್ ಅವಧಿಯ ಕಡಿಮೆಯಾಗುವ ಸಾಧ್ಯತೆ ಇದೆ.

ಮಹಿಳೆಯರಿಗೆ ಖಾಸಗಿ ಸ್ಥಳಗಳಲ್ಲಿ ಭಾರೀ ತುರಿಕೆ ಎದುರಾಗುವುದು

ಮಹಿಳೆಯರಿಗೆ ಖಾಸಗಿ ಸ್ಥಳಗಳಲ್ಲಿ ಭಾರೀ ತುರಿಕೆ ಎದುರಾಗುವುದು

ಮುಟ್ಟಿನ ಅವಧಿಯಲ್ಲಿ ಸೆಕ್ಸ್ ಮಾಡುವುದರಿಂದ ಹೆಚ್ಚಿನ ಸಮಯದಲ್ಲಿ ನಿಮ್ಮ ಖಾಸಗಿ ಸ್ಥಳಗಳಲ್ಲಿ ಭಾರೀ ತುರಿಕೆ ಎದುರಾಗುವ ಸಂಭವ ಹೆಚ್ಚು, ಹಾಗೂ ಈ ತುರಿಕೆ ಸದಾ ಇದ್ದರೆ ನಾಲ್ಕು ಜನರ ನಡುವೆ ಈ ನವೆ ಪರಿಹರಿಸಲು ಭಾರೀ ಮುಜುಗರ ಎದುರಿಸಬೇಕಾಗುತ್ತದೆ.

ಸೊಂಟದ ಕೆಳಭಾಗದ ನೋವು ಕಾಣಿಸಿಕೊಳ್ಳಬಹುದು

ಸೊಂಟದ ಕೆಳಭಾಗದ ನೋವು ಕಾಣಿಸಿಕೊಳ್ಳಬಹುದು

ಒಂದು ವೇಳೆ ಋತುಸ್ರಾವದ ಸಮಯವಲ್ಲದ ದಿನದಲ್ಲಿಯೂ ಗರ್ಭಕಂಠ ಅಥವಾ ಗರ್ಭನಾಳದಲ್ಲಿ ತೀವ್ರವಾದ ಸೋಂಕು ಎದುರಾಗಿ ಥಟ್ಟನೇ ಭಾರೀ ನೋವು ಎದುರಾದರೆ ಹಾಗೂ ಈ ನೋವಿಗೆ ಏನು ಕಾರಣ ಎಂದು ಸ್ಪಷ್ಟವಾದ ಕಾರಣ ನೀಡಲು ಅಸಮರ್ಥರಾದರೆ ಈ ಸಂಜ್ಞೆ ಸಹಾ ಮುಟ್ಟಿನ ಅವಧಿಯಲ್ಲಿ ಸೆಕ್ಸ್ ನಿಂದಾಗಿರುತ್ತದೆ

English summary

Intercourse Before & After Periods: Effects

Many couples believe in the concept of having sex right before and after a period. Some call this concept to be a 'safe sex' phase, which means there are no chances of having an unwanted pregnancy. Intercourse before and after periods does have a handful of health effects, which you should look into. Lovemaking just before a period can bring on a slight infection like urinary tract infection (UTI). This generally happens when the partners do not follow a proper hygiene system. You can get infected too with sexually transmitted diseases such as genital herpes and gonorrhea. To keep these health effects away, you need to keep the genital area clean before and after intercourse, it could be a day before or after period.
X
Desktop Bottom Promotion