ಕ್ಷಣಾರ್ಧದಲ್ಲಿ ತಲೆನೋವು ನಿವಾರಿಸುವ ಮನೆಮದ್ದುಗಳು

Posted By: Hemanth
Subscribe to Boldsky

ತಲೆನೋವಿನ ಸಮಸ್ಯೆಯು ಯಾರಿಗೂ ಬೇಡ ಎನ್ನುವುದು ಅನುಭವಿಸಿದ ಪ್ರತಿಯೊಬ್ಬರ ಬಾಯಿಯಿಂದಲೂ ಬರುವಂತಹ ಮಾತು. ಮಕ್ಕಳಿಂದ ಹಿಡಿದು ವಯಸ್ಕರ ತನಕ ಪ್ರತಿಯೊಬ್ಬರು ತಲೆನೋವಿನ ಸಮಸ್ಯೆಗೆ ಒಂದಲ್ಲಾ ಒಂದು ದಿನ ಒಳಗಾಗಿರುವರು. ಇಂತಹ ಸಮಸ್ಯೆಗೆ ನಾವು ಹೋಗಿ ತೆಗೆದುಕೊಳ್ಳುವುದು ಮಾತ್ರೆಗಳನ್ನು. ಆದರೆ ಈ ಮಾತ್ರೆಗಳು ನಿರಂತರವಾಗಿ ನಮ್ಮ ದೇಹದೊಳಗೆ ಹೋದರೆ ಆಗ ಅದರಿಂದ ಬೇರೆಯೇ ರೀತಿಯ ಪರಿಣಾಮಗಳು ನಮ್ಮ ಮೇಲಾಗುವುದು.

ತಲೆನೋವಿನಲ್ಲೂ ಹಲವಾರು ವಿಧಗಳು ಇವೆ. ತಲೆನೋವು ಕೆಲವೊಂದು ಸಲ ಕುತ್ತಿಗೆ, ಭುಜಗಳು ಮತ್ತು ತಲೆಬುರುಡೆ ಮೇಲೆ ಬೀಳುವ ಒತ್ತಡದಿಂದ ಬರುವುದು. ತಲೆನೋವಿನ ಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುವುದು. ಕೆಫಿನ್, ಆಲ್ಕೋಹಾಲ್ ಮತ್ತು ಕೃತಕ ಸಿಹಿ ಇರುವಂತಹ ಆಹಾರ ಕಡೆಗಣಿಸಿದರೆ ತುಂಬಾ ಒಳ್ಳೆಯದು.

ತಲೆನೋವಿಗೊಳಗಾಗಿದ್ದರೆ ಆಗ ನೀವು ಟಿವಿ, ಮೊಬೈಲ್ ಮತ್ತು ಕಂಪ್ಯೂಟರ್ ನಿಂದ ದೂರವಿರಬೇಕು. ಈ ಸಾಧನಗಳು ನಿಮ್ಮ ತಲೆನೋವನ್ನು ಮತ್ತಷ್ಟು ಹೆಚ್ಚು ಮಾಡುವುದು. ಸರಿಯಾದ ಸಮಯದಲ್ಲಿ ಆಹಾರ ಸೇವನೆ ಮಾಡಿಕೊಂಡು, ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯಬೇಕು. ಆದರೆ ತಲೆನೋವಿಗೆ ಇರುವಂತಹ ಕೆಲವೊಂದು ಮನೆಮದ್ದುಗಳನ್ನು ನಿಮಗೆ ಈ ಲೇಖನ ಮೂಲಕ ತಿಳಿಸಿಕೊಡಲಾಗಿದೆ...

ಶುಂಠಿ

ಶುಂಠಿ

ಶುಂಠಿಯಲ್ಲಿ ಪ್ರಭಾವಿಯಾಗಿರುವ ಜಿಂಜರೋಲ್ ಎನ್ನುವುದು ಔಷಧೀಯ ಗುಣ ಹೊಂದಿದೆ. ಇಷ್ಟು ಮಾತ್ರವಲ್ಲದೆ ಇದರಲ್ಲಿ ಉರಿಯೂತ ಶಮನಕಾರಿ ಮತ್ತು ಆ್ಯಂಟಿಆಕ್ಸಿಡೆಂಟ್ ಸಮೃದ್ಧವಾಗಿದೆ. ಶುಂಠಿಯು ತಲೆನೋವಿಗೆ ತುಂಬಾ ಪರಿಣಾಮಕಾರಿ ಔಷಧಿ. ಯಾಕೆಂದರೆ ಇದರಲ್ಲಿ ಇರುವ ಉರಿಯೂತ ಶಮನಕಾರಿ ಗುಣವು ತಲೆಯಲ್ಲಿನ ರಕ್ತನಾಳಗಳ ಉರಿಯೂತ ಕಡಿಮೆ ಮಾಡುವುದು. ಬಿಸಿನೀರಿಗೆ ಶುಂಠಿ ಹಾಕಿ, ಅದನ್ನು ಸೋಸಿಕೊಂಡು ಕುಡಿಯಿರಿ. ಶುಂಠಿ ರಸ ಮತ್ತು ಲಿಂಬೆರಸವನ್ನು ಸಮಪ್ರಮಾಣದಲ್ಲಿ ಬೆರೆಸಿಕೊಂಡು ಕುಡಿಯಿರಿ. ದಿನದಲ್ಲಿ ಒಂದು ಅಥವಾ ಎರಡು ಸಲ ಇದನ್ನು ಕುಡಿಯಿರಿ.

ಪುದೀನಾ ಎಣ್ಣೆ

ಪುದೀನಾ ಎಣ್ಣೆ

ತಲೆನೋವಿಗೆ ಕಾರಣವಾಗಿರುವಂತಹ ಕಟ್ಟಿದ ರಕ್ತನಾಳಗಳನ್ನು ಪುದೀನಾ ಎಣ್ಣೆಯು ತೆರೆಯುವುದು. ಇದರಲ್ಲಿ ಇರುವಂತಹ ಮೆಂಥಾಲ್ ದೇಹದಲ್ಲಿ ಸರಿಯಾಗಿ ರಕ್ತಸಂಚಾರವಾಗಲು ನೆರವಾಗುವುದು. ಪುದೀನಾ ಎಣ್ಣೆಯಲ್ಲಿ ಇರುವಂತಹ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಜೀರ್ಣಕ್ರಿಯೆ ಸಮಸ್ಯೆಯ ನಿವಾರಣೆ ಮಾಡುವುದು. ಮೂರು ಹನಿ ಪುದೀನಾ ಎಣ್ಣೆ, ಒಂದು ಚಮಚ ಬಾದಾಮಿ ಎಣ್ಣೆ ಮಿಶ್ರಣ ಮಾಡಿಕೊಂಡು ಅದನ್ನು ಹಣೆ ಮತ್ತು ಕುತ್ತಿಗೆಗೆ ಭಾಗಕ್ಕೆ ಸರಿಯಾಗಿ ಮಸಾಜ್ ಮಾಡಿ. ಜಜ್ಜಿಕೊಂಡು ಪುದೀನಾ ಎಲೆಗಳನ್ನು ಹಣೆಗೆ ಹಚ್ಚಿಕೊಳ್ಳಬಹುದು.

ಲ್ಯಾವೆಂಡರ್ ಎಣ್ಣೆ

ಲ್ಯಾವೆಂಡರ್ ಎಣ್ಣೆ

ಲ್ಯಾವೆಂಡರ್ ಎಣ್ಣೆಯ ಸುಗಂಧವು ತಲೆನೋವು ನಿವಾರಿಸುವುದು. ಇದು ಮೆದುಳಿನ ಕ್ರಿಯೆ, ನಿದ್ರೆ ಸುಧಾರಿಸುವುದು, ಗಾಯ ಗುಣಪಡಿಸುವುದು, ಚರ್ಮದ ಬಣ್ಣ ಮರಳಿ ತರುವುದು, ಮಧುಮೇಹದ ಸಮಸ್ಯೆ ಕಡಿಮೆ ಮಾಡಿ, ನೋವು ನಿವಾರಿಸುವುದು. ಎರಡು ಹನಿ ಲ್ಯಾವೆಂಡರ್ ಎಣ್ಣೆಯನ್ನು ಎರಡು ಕಪ್ ಕುದಿಯುವ ನೀರಿಗೆ ಹಾಕಿಕೊಂಡು ಅದರ ಹಬೆ ಉಸಿರಿನ ಮೂಲಕ ಎಳೆದುಕೊಳ್ಳಿ. ಮೂರು ಚಮಚ ಪುದೀನಾ ಎಣ್ಣೆ, ಬಾದಾಮಿ ಎಣ್ಣೆ ಅಥವಾ ಆಲಿವ್ ತೈಲವನ್ನು ಮಿಶ್ರಣ ಮಾಡಿ ಕೊಂಡು ತಲೆಗೆ ಮಸಾಜ್ ಮಾಡಿಕೊಳ್ಳಿ.

ಲವಂಗ

ಲವಂಗ

ಶಮನ ನೀಡುವುದು ಮತ್ತು ನೋವು ನಿವಾರಣೆ ಮಾಡುವ ಮೂಲಕ ಲವಂಗವನ್ನು ತಲೆನೋವು ನಿವಾರಣೆಗೆ ಬಳಸಿಕೊಳ್ಳಬಹುದು. ಲವಂಗದಿಂದ ಜೀರ್ಣಕ್ರಿಯೆ ಸುಧಾರಿಸುವುದು, ಕ್ಯಾನ್ಸರ್ ವಿರುದ್ಧ ಹೋರಾಗುವುದು, ಯಕೃತ್ ನ್ನು ರಕ್ಷಿಸುವುದು, ಪ್ರತಿರೋಧಕ ಶಕ್ತಿ ಹೆಚ್ಚಿಸುವುದು ಮತ್ತು ಮಧುಮೇಹ ನಿಯಂತ್ರಣದಲ್ಲಿಡುವುದು. ಎರಡು ಹನಿ ಲವಂಗದ ಎಣ್ಣೆಗೆ ಒಂದು ಚಮಚ ತೆಂಗಿನೆಣ್ಣೆ ಮತ್ತು ಕಲ್ಲುಪ್ಪು ಹಾಕಿಕೊಳ್ಳಿ. ಇದರಿಂದ ತಲೆ ಹಾಗೂ ಹಣೆಗೆ ಮಸಾಜ್ ಮಾಡಿಕೊಳ್ಳಿ.

ತುಳಸಿ ಎಲೆಗಳು

ತುಳಸಿ ಎಲೆಗಳು

ತಲೆನೋವು ನಿವಾರಣೆ ಮಾಡುವಲ್ಲಿ ತುಳಸಿ ಎಲೆಗಳು ಮತ್ತೊಂದು ಪರಿಣಾಮಕಾರಿ ನೈಸರ್ಗಿಕ ಸಾಮಗ್ರಿ. ಸುವಾಸನೆಯುಳ್ಳ ಈ ಎಲೆಯನ್ನು ತಲೆನೋವಿಗೆ ಬಳಸಬಹುದು ಮತ್ತು ಇದರಲ್ಲಿ ಸಂಕೋಚನ ಗುಣವಿದೆ.

ತುಳಸಿ ಎಲೆಗಳ ಎಣ್ಣೆಯು ಸ್ನಾಯುಗಳಿಗೆ ಆರಾಮ ನೀಡುವುದು ಮತ್ತು ಒತ್ತಡದಿಂದ ಆಗಿರುವಂತಹ ತಲೆನೋವು ನಿವಾರಿಸಲು ಪ್ರಮುಖ ಪಾತ್ರ ವಹಿಸುವುದು. ಸ್ವಲ್ಪ ತುಳಸಿ ಎಲೆಗಳನ್ನು ಕುದಿಯುವ ನೀರಿಗೆ ಹಾಕಿಕೊಳ್ಳಿ. ಇದರ ಬಳಿಕ ನೀರನ್ನು ಸೋಸಿಕೊಳ್ಳಿ. ಸ್ವಲ್ಪ ಜೇನುತುಪ್ಪ ಬೆರೆಸಿಕೊಂಡು ಕುಡಿಯಿರಿ. ಇದರಿಂದ ಒತ್ತಡದಿಂದ ಉಂಟಾಗಿರುವ ತಲೆನೋವು ಮಾಯವಾಗುವುದು.

ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡಿ

ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡಿ

15 ರಿಂದ 20 ನಿಮಿಷ ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡಿದರೆ ತಲೆನೋವು ಕಡಿಮೆಯಾಗುತ್ತದೆ. ಬೇಸಿಗೆಯ ಬಿಸಿಲಿಗೆ ತಲೆನೋವು ಬಂದಾಗ ಈ ರೀತಿ ಮಾಡಿದರೆ ಕೊಬ್ಬರಿ ಎಣ್ಣೆ ತಂಪು ಮಾದುವುದರ ಮೂಲಕ ತಲೆನೋವನ್ನು ಕಡಿಮೆ ಮಾಡುತ್ತದೆ.

ಬೆಳ್ಳುಳ್ಳಿ ರಸ ಕುಡಿಯಿರಿ

ಬೆಳ್ಳುಳ್ಳಿ ರಸ ಕುಡಿಯಿರಿ

ಕೆಲವು ಬೆಳ್ಳುಳ್ಳಿ ತೆಗೆದುಕೊಂಡು ಅದರಿಂದ ರಸ ತೆಗೆಯಿರಿ.1 ಚಮಚದಷ್ಟು ರಸ ಕುಡಿಯಿರಿ.ಇದು ನೋವು ನಿವಾರಕದಂತೆ ಕೆಲಸಮಾಡುತ್ತದೆ ಮತ್ತು ತಲೆನೋವು ಸಂಪೂರ್ಣ ಕಡಿಮೆ ಆಗುತ್ತದೆ.

ವೀಳ್ಯದೆಲೆ ತಿನ್ನಿ

ವೀಳ್ಯದೆಲೆ ತಿನ್ನಿ

ವೀಳ್ಯದೆಲೆ ನೋವು ನಿವಾರಕ ಗುಣಗಳನ್ನು ಹೊಂದಿದೆ ಎಂದು ಪರಿಗಣಿಸಲಾಗಿದೆ.ಇದು ನಿಮಗೆ ತಲೆನೋವಿನಿಂದ ಹೊರಬರಲು ಸಹಕರಿಸುತ್ತದೆ.ಅಡಿಕೆ ಎಲೆಗಳನ್ನು ತೆಗೆದುಕೊಂಡು ಪೇಸ್ಟ್ ಮಾಡಿ ಅದನ್ನು ಹಣೆಗೆ ಹಚ್ಚಿ.ಇದರಿಂದ ನಿಮಗಿದ್ದ ತಲೆನೋವು ಖಂಡಿತ ಗುಣವಾಗುತ್ತದೆ.

English summary

Indian Home Remedies For Headaches

If you are starting to get a headache, stay away from your laptop, television and phone, as these devices could further worsen your headaches. It's advisable to eat at regular intervals and drink lots of water to hydrate your body, as these can also set the stage for headaches. So, have a look at the Indian home remedies for headaches.