For Quick Alerts
ALLOW NOTIFICATIONS  
For Daily Alerts

ಸುವರ್ಣ ಗಡ್ಡೆಯ ಆರೋಗ್ಯ ಲಾಭ ತಿಳಿದರೆ ಈಗಲೇ ತಿನ್ನುವಿರಿ!

|

ಸುವರ್ಣ ಗಡ್ಡೆಯನ್ನು ಒಂದು ಮ್ಯಾಜಿಕ್ ತರಕಾರಿ ಎಂದು ಹೇಳಬಹುದು. ಆಫ್ರಿಕಾದಂತಹ ದೇಶಗಳಲ್ಲಿ ಇದಕ್ಕೆಧಾರ್ಮಿಕವಾಗಿಯೂ ಸ್ಥಾನ ನೀಡಲಾಗಿದೆ. ಅಲ್ಲಿ ಸುವರ್ಣ ಗಡ್ಡೆಯ ವಾರ್ಷಿಕ ಹಬ್ಬವನ್ನು ಆಚರಿಸಲಾಗುತ್ತದೆ. ಐವಾಜಿ ಎನ್ನುವ ಹಬ್ಬವನ್ನು ಐಗ್ಬೊ ಎನ್ನುವ ಜನಾಂಗದವರು ಆಚರಿಸುವರು. ಇದನ್ನು ಹೊಸ ಸುವರ್ಣ ಗಡ್ಡೆ ತಿನ್ನುವ ಹಬ್ಬವೆಂದು ಹೇಳಲಾಗುತ್ತದೆ. ಭಾರತದಲ್ಲಿ ಇದನ್ನು ಸಂಪತ್ತಿನ ದೇವರೆಂದು ಪೂಜಿಸಲಾಗುತ್ತದೆ. ಇದು ಯಾವುದೇ ಜಾಗದಲ್ಲಿ ಬೆಳೆಯುವುದು ಮತ್ತು ಸಾಯುವುದು ಕಡಿಮೆ. ಇದನ್ನು ಹೆಚ್ಚಾಗಿ ದೀಪಾವಳಿ ಸಂದರ್ಭದಲ್ಲಿ ತಿನ್ನಲಾಗುತ್ತದೆ.

ಮ್ಯಾಜಿಕ್ ಗುಣಗಳನ್ನು ಹೊಂದಿರುವ ಸುವರ್ಣ ಗಡ್ಡೆಯಲ್ಲಿ ಹಲವಾರು ಪೋಷಕಾಂಶಗಳು ಇವೆ. ವಿಶ್ವದ ವಿವಿಧ ಭಾಗಗಳಲ್ಲಿ ಇದನ್ನು ತುಂಬಾ ಭಿನ್ನವಾಗಿ ಸೇವಿಸಲಾಗುತ್ತದೆ ಮತ್ತು ಹಲವಾರು ವಿಧಗಳಿಂದ ಖಾದ್ಯಗಳಲ್ಲಿ ಬಳಸುವರು. ಇದನ್ನು ನೀವು ಭಿನ್ನವಾಗಿ ತಿಂದು ನಿಮ್ಮ ದೈನಂದಿನ ಆಹಾರ ಕ್ರಮದ ಭಾಗವಾಗಿಸಬಹುದು.

ಗರ್ಭಿಣಿ ಮಹಿಳೆಯರಿಗೆ ಒಳ್ಳೆಯದು

ಗರ್ಭಿಣಿ ಮಹಿಳೆಯರಿಗೆ ಒಳ್ಳೆಯದು

ಸುವರ್ಣ ಗಡ್ಡೆಯಲ್ಲಿ ಇರುವಂತಹ ಪೋಷಕಾಂಶಗಳು ಗರ್ಭಿಣಿ ಮಹಿಳೆ ಹಾಗೂ ಗರ್ಭದಲ್ಲಿರುವ ಮಗುವಿಗೆ ತುಂಬಾ ಒಳ್ಳೆಯದು. ಆರಂಭಿಕ ಹಂತದಲ್ಲಿ ಇದು ಭೂಣದಲ್ಲಿರುವ ಮಗುವಿಗೆ ತುಂಬಾ ಒಳ್ಳೆಯದು. ಸುವರ್ಣ ಗಡ್ಡೆಯಲ್ಲಿ ಇರುವಂತಹ ಫಾಲಟೆ ಎನ್ನುವ ಅಂಶವು ಮೆದುಳು ಮತ್ತು ಸಿಎನ್ ಎಸ್ ಗೆ ಅತ್ಯಗತ್ಯ. ಸುವರ್ಣ ಗಡ್ಡೆಯಲ್ಲಿ ಇರುವಂತಹ ಖನಿಜಾಂಶಗಳು ಬೆಳಗ್ಗಿನ ಸಮಸ್ಯೆ ನಿವಾರಣೆ ಮಾಡುವುದು ಮತ್ತು ಗರ್ಭಿಣಿಯರಲ್ಲಿ ಮೂಳೆಗಳನ್ನು ಬಲಗೊಳಿಸುವುದು. ಇದರಿಂದ ಗರ್ಭದಲ್ಲಿರುವ ಮಗು ಒಳ್ಳೆಯ ರೀತಿ ಬೆಳವಣಿಗೆಯಾಗುವುದು. ಕೆಂಪು ರಕ್ತದ ಕಣಗಳು ಕಡಿಮೆಯಾದ ಪರಿಣಾಮದಿಂದಾಗಿ ಮಗುವಿನಲ್ಲಿ ವಿಕಲಾಂಗತೆ ಕಾಣಿಸುವುದು. ಸುವರ್ಣ ಗಡ್ಡೆಯಲ್ಲಿ ಇರುವಂತಹ ಕಬ್ಬಿನಾಂಶವು ಈ ಸಮಸ್ಯೆ ನಿವಾರಣೆ ಮಾಡುವುದು.

ಪಿಎಂಎಸ್ ಮತ್ತು ಋತುಬಂಧಕ್ಕೆ

ಪಿಎಂಎಸ್ ಮತ್ತು ಋತುಬಂಧಕ್ಕೆ

ಋತುಚಕ್ರಕ್ಕೆ ಮೊದಲು ಕಾಣಿಸಿಕೊಳ್ಳುವಂತಹ ಸಮಸ್ಯೆಯನ್ನು ಸುವರ್ಣ ಗಡ್ಡೆಯು ನಿವಾರಣೆ ಮಾಡುವುದು. ಋತುಬಂಧ ಎದುರಿಸುವಂತಹ ಮಹಿಳೆಯರಿಗೂ ಇದು ಒಳ್ಳೆಯದು. ಇದು ಹಾರ್ಮೋನು ಸಮತೋಲನ ಕಾಪಾಡುವುದು ಮತ್ತು ದೇಹದಲ್ಲಿ ವಿಟಮಿನ್ ಬಿ6 ಮಟ್ಟವನ್ನು ಕಾಪಾಡುವುದು.

ಜೀರ್ಣಕ್ರಿಯೆ ವ್ಯವಸ್ಥೆಗೆ ನೆರವಾಗುವುದು

ಜೀರ್ಣಕ್ರಿಯೆ ವ್ಯವಸ್ಥೆಗೆ ನೆರವಾಗುವುದು

ಸುವರ್ಣಗಡ್ಡೆಯಲ್ಲಿ ನಾರಿನಾಂಶವಿದೆ. ಇದು ಜೀರ್ಣಕ್ರಿಯೆ ವ್ಯವಸ್ಥೆಗೆ ತುಂಬಾ ಸಹಕಾರಿ. ನಾರಿನಾಂಶವು ತಿನ್ನುವ ಬಯಕೆ ಕಡಿಮೆ ಮಾಡಿ, ಹಾನಿಕಾರಕ ಆಹಾರ ಸೇವಿಸದಂತೆ ತಡೆಯುವುದು. ಪೊಟಾಶಿಯಂ ಇರುವ ಕಾರಣದಿಂದಾಗಿ ಕರುಳಿನ ಕ್ರಿಯೆಯು ಸರಾಗವಾಗಿ ಆಗಲು ಇದು ನೆರವಾಗುವುದು. ನಾರಿನಾಂಶವು ಕರುಳನ್ನು ಸ್ವಚ್ಛಗೊಳಿಸುವುದು ಮಾತ್ರವಲ್ಲದೆ ಮಲಬದ್ಧತೆ ನಿವಾರಿಸುವುದು.

Most Read:ರಾತ್ರಿ ಮಲಗುವ ಮೊದಲು ಹಾಲು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದೇ?

ಚರ್ಮಕ್ಕೆ ಒಳ್ಳೆಯದು

ಚರ್ಮಕ್ಕೆ ಒಳ್ಳೆಯದು

ಚರ್ಮವನ್ನು ಬಿಗಿ, ಸ್ಥಿತಿಸ್ಥಾಪಕ ಮತ್ತು ಆರೋಗ್ಯವಾಗಿಡಲು ಮುಖ್ಯವಾಗಿ ಬೇಕಾಗಿರುವುದು ಕಾಲಜನ್. ಸುವರ್ಣ ಗಡ್ಡೆಯು ದೇಹದಲ್ಲಿ ಕಾಲಜನ್ ಉತ್ಪತ್ತಿಗೆ ನೆರವಾಗುವುದು. ಸುವರ್ಣ ಗಡ್ಡೆಯಲ್ಲಿ ಆ್ಯಂಟಿಆಕ್ಸಿಡೆಂಟ್ ಸಮೃದ್ಧವಾಗಿದೆ. ಇದು ಕೋಶಗಳು ಪುನರುಜ್ಜೀವನಗೊಳ್ಳಲು ನೆರವಾಗುವುದು. ಇದು ಫ್ರೀ ರ್ಯಾಡಿಕಲ್ ವಿರುದ್ಧ ಹೋರಾಡಿ ಅಕಾಲಿಕವಾಗಿ ವಯಸ್ಸಾಗುವ ಲಕ್ಷಣಗಳನ್ನು ತಡೆಯುವುದು. ಕಾಲಜನ್ ಜತೆಗೆ ವಿಟಮಿನ್ ಸಿ ಮಿಶ್ರಣವು ಇರುವ ಪರಿಣಾಮ ಗಾಯಗಳು ಬೇಗನೆ ವಾಸಿ ಮಾಡುವುದು.

ಕೂದಲಿಗೆ ಒಳ್ಳೆಯದು

ಕೂದಲಿಗೆ ಒಳ್ಳೆಯದು

ಕೂದಲು ಸುಂದರವಾಗಿದ್ದರೆ ಆಗ ಅದು ದೇಹದ ಸಂಪೂರ್ಣ ಸೌಂದರ್ಯವನ್ನು ಎದ್ದು ಕಾಣುವಂತೆ ಮಾಡುವುದು. ಇದು ನಿಮ್ಮ ವ್ಯಕ್ತಿತ್ವಕ್ಕೂ ನೆರವಾಗುವುದು. ಬೆಟಾ ಕ್ಯಾರೋಟಿನ್ ಅಧಿಕವಾಗಿರುವಂತಹ ಸುವರ್ಣ ಗಡ್ಡೆಯು ಕೂದಲಿನ ಬೆಳವಣಿಗೆಗೆ ನೆರವಾಗುವುದು. ಬೆಟಾ ಕ್ಯಾರೋಟಿನ್ ಹೊರತಾಗಿ ಕೂದಲು ಒಣ ಹಾಗೂ ನಿಸ್ತೇಜವಾಗಿ ಕಾಣಿಸುವುದು.

ಮೆದುಳಿನ ಆರೋಗ್ಯಕ್ಕೆ

ಮೆದುಳಿನ ಆರೋಗ್ಯಕ್ಕೆ

ಸುವರ್ಣ ಗಡ್ಡೆಯಲ್ಲಿ ಪೊಟಾಶಿಯಂ ಸಮೃದ್ಧವಾಗಿದೆ. ಇದು ಮೆದುಳಿನ ನರಗಳ ಚಟುವಟಿಕೆ ಉತ್ತಮಪಡಿಸುವುದು. ಇದು ನರ ವ್ಯವಸ್ಥೆಯ ಚಟುವಟಿಕೆಯನ್ನು ಸುಧಾರಿಸುವುದು.

ಹೃದಯದ ಆರೋಗ್ಯ ಕಾಪಾಡಲು

ಹೃದಯದ ಆರೋಗ್ಯ ಕಾಪಾಡಲು

ರಕ್ತನಾಳದಲ್ಲಿ ಇರುವಂತಹ ಹೆಚ್ಚಿನ ಸೋಡಿಯಂನ್ನು ಇದು ತೆಗೆದುಹಾಕಿ ಹೃದಯದ ಆರೋಗ್ಯ ಕಾಪಾಡುವುದು. ಸೋಡಿಯಂ ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುವುದು ಮತ್ತು ಇದು ಹೃದಯಾಘಾತ ಹಾಗೂ ಪಾರ್ಶ್ವವಾಯು ಉಂಟು ಮಾಡುವುದು. ಪೊಟಾಶಿಯಂ, ಮೆಗ್ನಿಶಿಯಂ ಹಾಗೂ ಇನ್ನಿತರ ಖನಿಜಾಂಶಗಳು ಈ ಗಡ್ಡೆಯಲ್ಲಿರುವ ಕಾರಣದಿಂದ ಇದು ರಕ್ತನಾಳಗಳನ್ನು ಆರೋಗ್ಯವಾಗಿಡುವುದು. ಸುವರ್ಣ ಗಡ್ಡೆಯು ರಕ್ತದೊತ್ತಡ ನಿಯಂತ್ರಣ ಮಾಡಿಕೊಂಡು ಅದು ಏರದಂತೆ ತಡೆಯುವುದು.

Most Read:ಖರ್ಜೂರ ತಿಂದರೂ ಸಾಕು, ದೇಹದ ತೂಕ ಇಳಿಸಿಕೊಳ್ಳಬಹುದು!

ರಕ್ತಹೀನತೆ ನಿವಾರಣೆ

ರಕ್ತಹೀನತೆ ನಿವಾರಣೆ

ಸುವರ್ಣ ಗಡ್ಡೆಯಲ್ಲಿ ಕಬ್ಬಿಣ ಹಾಗೂ ಇತರ ಕೆಲವೊಂದು ಖನಿಜಾಂಶಗಳು ಇರುವ ಕಾರಣದಿಂದಾಗಿ ಇದು ಕೆಂಪುರಕ್ತದ ಕಣಗಳನ್ನು ಹೆಚ್ಚಿಸುವುದು ಮತ್ತು ರಕ್ತಹೀನತೆ ನಿವಾರಣೆ ಮಾಡುವುದು. ರಕ್ತನಾಳಗಳನ್ನು ಆರೋಗ್ಯವಾಗಿಡುವ ಕಾರಣದಿಂದ ರಕ್ತಸಂಚಾರವು ಸುಗಮವಾಗಿ ಆಗುವುದು.

ಪ್ರತಿರೋಧಕ ಶಕ್ತಿಗೆ ಒಳ್ಳೆಯದು

ಪ್ರತಿರೋಧಕ ಶಕ್ತಿಗೆ ಒಳ್ಳೆಯದು

ಸುವರ್ಣ ಗಡ್ಡೆಯಲ್ಲಿ ವಿಟಮಿನ್ ಎ, ಸಿ ಮತ್ತು ಇತರ ಕೆಲವೊಂದು ಖನಿಜಾಂಶಗಳು ಇವೆ. ಇದು ದೇಹದಲ್ಲಿ ಆ್ಯಂಟಿಆಕ್ಸಿಡೆಂಟ್ ನಂತೆ ಕೆಲಸ ಮಾಡಿ ಕೆಂಪು ರಕ್ತದ ಕಣಗಳು ಉತ್ಪತ್ತಿಯಾಗಲು ನೆರವಾಗುವುದು. ಇದು ಪ್ರತಿರೋಧಕ ಶಕ್ತಿ ಸುಧಾರಿಸುವುದು ಮತ್ತು ಆರೋಗ್ಯವಾಗಿಡುವುದು.

ತೂಕ ಇಳಿಸಲು

ತೂಕ ಇಳಿಸಲು

ಒಂದು ಕಪ್ ಸುವರ್ಣ ಗಡ್ಡೆಯಲ್ಲಿ ಕೇವಲ 57 ಕ್ಯಾಲರಿ ಮಾತ್ರ ಇದೆ. ಇದರಲ್ಲಿ ವಿಟಮಿನ್ ಬಿ6 ಮತ್ತು ಪೊಟಾಶಿಯಂ, ವಿಟಮಿನ್ ಸಿ ಮತ್ತು ನಾರಿನಾಂಶವಿದೆ. ಇದು ನಮ್ಮನ್ನು ಆರೋಗ್ಯವಾಗಿಡುವುದು ಮತ್ತು ತೂಕ ಇಳಿಸಲು ಬಯಸುವವರಿಗೆ ಇದು ಅತ್ಯುತ್ತಮ ಆಹಾರ. ಇದು ದೇಹಕ್ಕೆ ಶಕ್ತಿ ನೀಡುವುದು ಮತ್ತು ಅದರಲ್ಲಿ ಇರುವಂತಹ ಪೋಷಕಾಂಶಗಳು ಆರೋಗ್ಯವಾಗಿಡಲು ನೆರವಾಗುವುದು.

ಕೊನೆಯ ಮಾತು

ಕೊನೆಯ ಮಾತು

ಸುವರ್ಣ ಗಡ್ಡೆಯಲ್ಲಿ ಇರುವಂತಹ ಪೋಷಕಾಂಶಗಳು ನಿಮ್ಮ ಹೃದಯ, ನರವ್ಯವಸ್ಥೆ ಮತ್ತು ಜೀರ್ಣಕ್ರಿಯೆ ವ್ಯವಸ್ಥೆಯನ್ನು ಆರೋಗ್ಯವಾಗಿಡುವುದು. ಇದು ತೂಕ ಕಳೆದುಕೊಳ್ಳಲು ನೆರವಾಗುವುದು ಹಾಗೂ ಕಣ್ಣುಗಳನ್ನು ಆರೋಗ್ಯವಾಗಿಡುವುದು. ಇದು ಕೂದಲು ಹಾಗೂ ಚರ್ಮಕ್ಕೂ ಒಳ್ಳೆಯದು. ನೀವು ತೂಕ ಇಳಿಸಿಕೊಳ್ಳುವ ಬಗ್ಗೆ ಆಲೋಚನೆ ಮಾಡುತ್ತಲಿದ್ದರೆ, ಆಗ ನೀವು ಸುವರ್ಣ ಗಡ್ಡೆಯನ್ನು ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಿ. ಸುವರ್ಣ ಗಡ್ಡೆಯ ಬಾಲಾದಿ ವೃದ್ಧರ ತನಕ ಪ್ರತಿಯೊಬ್ಬರಿಗೂ ತುಂಬಾ ಒಳ್ಳೆಯದು. ಇದರಲ್ಲಿ ಇರುವಂತಹ ಕ್ಯಾಲ್ಸಿಯಂ ಗರ್ಭಿಣಿಯರು ಹಾಗೂ ವಯಸ್ಸಾದವರಿಗೆ ಒಳ್ಳೆಯದು. ಇದು ಅಸ್ಥಿರಂಧ್ರತೆಯನ್ನು ದೂರವಿಡುವುದು. ಇದೆಲ್ಲವನ್ನು ಹೊರತುಪಡಿಸಿ, ಇದು ರುಚಿಯಲ್ಲೂ ಅದ್ಭುತವಾಗಿದೆ. ಹೀಗಿರುವಾಗ ಇದನ್ನು ತಿನ್ನದೆ ಇರಲು ಯಾವುದೇ ಕಾರಣಗಳಿಲ್ಲ. ನೀವು ನಿಮ್ಮ ವೈದ್ಯರನ್ನು ಭೇಟಿಯಾಗಿ ಆಗಾಗ ಆರೋಗ್ಯಕ್ಕೆ ಸಂಬಂಧಿಸಿದ ಸಲಹೆಗಳನ್ನು ಪಡೆಯಿರಿ.

English summary

Incredible Health Benefits of Suran food

Yam (Suran) incredible health benefits includes supporting healthy pregnancy, helping with PMS and menopause, supporting a healthy digestion, enhancing the skin, good for the hair, supporting a healthy brain, keeps your heart healthy, helps get rid of anemia, promote a good immune system, a good source of carbohydrates, promote weight loss, and fight of cancer.
Story first published: Tuesday, October 23, 2018, 18:09 [IST]
X
Desktop Bottom Promotion