ನೋವು ನಿವಾರಕ ಮಾತ್ರೆಯ ಅಡ್ಡ ಪರಿಣಾಮಗಳು

Posted By: Hemanth Amin
Subscribe to Boldsky

ಜೀವನದಲ್ಲಿ ಪ್ರತಿಯೊಬ್ಬರು ದೇಹದ ನೋವಿಗೆ ಒಳಗಾಗಿರುವವರೇ. ನೋವೇ ತಿನ್ನದ ಮನುಷ್ಯ ಈ ಭೂಮಿ ಮೇಲೆ ಇರಲು ಸಾಧ್ಯವಿಲ್ಲವೆನ್ನಬಹುದು. ಇಂತಹ ವ್ಯಕ್ತಿ ಇದ್ದರೂ ಆತನಿಗೆ ಯಾವುದೋ ರೀತಿಯ ನರ ಸಮಸ್ಯೆಯಿದೆ ಎಂದು ಹೇಳಬಹುದು. ನೋವು ತಾತ್ಕಾಲಿಕ ಅಥವಾ ಕೆಲವು ನೋವುಗಳು ಖಾಯಂ ಆಗಿರುವುದು. 

ಆದರೆ ನೋವಲ್ಲಿ ಮತ್ತೆ ಮತ್ತೆ ಹಾಗೂ ತೀವ್ರ ನೋವು ಉಂಟುಮಾಡುವುದೆಂದರೆ ಮುರಿದ ಮೂಳೆಗಳು ಅಥವಾ ಗಂಟು, ಆಗಾಗ ಬರುವ ತಲೆನೋವು ಮತ್ತು ಋತುಚಕ್ರದ ವೇಳೆ ಕಾಣಿಸಿಕೊಳ್ಳುವ ನೋವು. ನಮಗೆ ನೋವಾದಾಗ ತಕ್ಷಣ ನೆನಪಾಗುವುದು ನೋವು ನಿವಾರಕ ಮಾತ್ರೆಗಳು ಅಥವಾ ಉರಿಯೂತ ಕಡಿಮೆ ಮಾಡುವಂತಹ ಮಾತ್ರೆಗಳು. ಇದು ಕೆಲವು ಸಲ ತಾತ್ಕಾಲಿಕವಾಗಿ ಶಮನ ನೀಡುವುದು.

ಆದರೆ ದೀರ್ಘಕಾಲದ ತನಕ ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದರೆ ಅದರಿಂದ ಅಡ್ಡಪರಿಣಾಮಗಳು ಉಂಟಾಗುವುದು. ನೀವು ನೋವಿಗೆ ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾ ಇದ್ದರೆ ಎಚ್ಚರ ವಹಿಸಿ. ಈ ಲೇಖನದಲ್ಲಿ ನೀಡಿರುವ ನೋವು ನಿವಾರಕ ಮಾತ್ರೆಗಳಿಂದ ಆಗುವಂತಹ ಅಡ್ಡಪರಿಣಾಮಗಳ ಬಗ್ಗೆ ತಿಳಿಯಿರಿ.....

ನಿಮಗೆ ನಿಜವಾಗಿಯೂ ಅದರ ಅಗತ್ಯವಿದೆಯಾ?

ನಿಮಗೆ ನಿಜವಾಗಿಯೂ ಅದರ ಅಗತ್ಯವಿದೆಯಾ?

ನೋವು ನಿವಾರಕ ಮಾತ್ರೆ ತೆಗೆದುಕೊಳ್ಳುವ ಮೊದಲು ನಿಮ್ಮ ನೋವು ಎಷ್ಟು ತೀವ್ರ ಮಟ್ಟದ್ದು ಮತ್ತು ನೋವು ನಿವಾರಕ ತೆಗೆದುಕೊಳ್ಳಲೇ ಬೇಕಾದಂತಹ ಅಗತ್ಯವಿದೆಯಾ ಎಂದು ಮೊದಲು ಅರ್ಥಮಾಡಿಕೊಳ್ಳಿ. ಕೆಲವು ನೋವುಗಳು ತನ್ನಿಂದ ತಾನೇ ಬಂದು ಹೋಗುವುದು. ಕೆಲವು ದಿನಗಳ ಕಾಲ ನೋವನ್ನು ಸಹಿಸಲು ಸಾಧ್ಯವಿದೆಯೆಂದಾದರೆ ನೋವು ನಿವಾರಕ ತೆಗೆದುಕೊಳ್ಳಬೇಡಿ. ಯಾಕೆಂದರೆ ಈ ಮಾತ್ರೆಗಳು ತಾತ್ಕಾಲಿಕ ಶಮನ ನೀಡುತ್ತದೆಯೇ ಹೊರತು ಪೂರ್ಣ ಪರಿಹಾರವಲ್ಲ.

ಮೂಲಕ್ಕೆ ಚಿಕಿತ್ಸೆ ನೀಡಿ

ಮೂಲಕ್ಕೆ ಚಿಕಿತ್ಸೆ ನೀಡಿ

ಕೆಲವು ನೋವುಗಳು ದೇಹದಲ್ಲಿ ಕಾಣಿಸಿಕೊಳ್ಳುವುದು ಅನಾರೋಗ್ಯ ಹಾಗೂ ಇನ್ನು ಕೆಲವು ಗಾಯಾಳುವಾದಾಗ. ಇದರಿಂದ ನೀವು ತಾತ್ಕಾಲಿಕವಾಗಿ ನೋವು ನಿವಾರಕ ತೆಗೆದುಕೊಂಡು ಪರಿಹಾರ ಕಂಡುಕೊಳ್ಳುವ ಬದಲು ನೇರವಾಗಿ ವೈದ್ಯರಲ್ಲಿಗೆ ತೆರಳಿ ಅವರಿಗೆ ನೋವಿನ ಬಗ್ಗೆ ತಿಳಿಸಿ ನೋವಿನ ಮೂಲ ಹುಡುಕಿ ಚಿಕಿತ್ಸೆ ನೀಡಿ.

ತಜ್ಞರನ್ನು ಭೇಟಿಯಾಗಿ

ತಜ್ಞರನ್ನು ಭೇಟಿಯಾಗಿ

ದೀರ್ಘಕಾಲದಿಂದ ನಿಮಗೆ ಯಾವುದೇ ಅನಾರೋಗ್ಯ ಅಥವಾ ಗಾಯಾಗಳು ಸಮಸ್ಯೆಯಿಂದ ನೋವು ಕಾಣಿಸಿಕೊಳ್ಳುತ್ತಾ ಇದ್ದರೆ ಆಗ ನೀವು ಇದಕ್ಕೆ ಪರಿಹಾರ ಕಂಡುಕೊಳ್ಳಲು ತಜ್ಞ ವೈದ್ಯರನ್ನು ಭೇಟಿಯಾಗಿ. ದೀರ್ಘಕಾಲ ನೋವು ನಿವಾರಕ ತೆಗೆದುಕೊಳ್ಳುವ ಬದಲು ಚಿಕಿತ್ಸೆ ಅಥವಾ ಶಸ್ತ್ರಚಿಕಿತ್ಸೆ ಮಾಡಿಕೊಳ್ಳಿ. ತಜ್ಞರಿಗೆ ನೋವು ಎಷ್ಟು ಸಮಯ ಇರುವುದು ಎಂದು ತಿಳಿಯುವುದು.

ಸ್ವತಃ ವೈದ್ಯರಾಗಬೇಡಿ

ಸ್ವತಃ ವೈದ್ಯರಾಗಬೇಡಿ

ಸ್ವತಃ ಔಷಧಿ ತೆಗೆದುಕೊಳ್ಳುವುದು ಅಥವಾ ಚಿಕಿತ್ಸೆ ಮಾಡಿಕೊಳ್ಳುವುದು ತುಂಬಾ ಅಪಾಯಕಾರಿ ಅಭ್ಯಾಸ. ಅದರಲ್ಲೂ ನೋವು ನಿವಾರಕವು ಅತಿಯಾದರೆ ಅದರಿಂದ ಸಾವು ಕೂಡ ಸಂಭವಿಸಬಹುದು. ನಿಮಗೆ ಅತಿಯಾದ ನೋವಿದ್ದರೆ ವೈದ್ಯರಲ್ಲಿ ತೆರಳಿ ಪರೀಕ್ಷೆ ಮಾಡಿಕೊಂಡು ಔಷಧಿ ತೆಗೆದುಕೊಳ್ಳಿ. ನೀವೇ ಸ್ವತಃ ಚಿಕಿತ್ಸೆ ಮಾಡಿಕೊಳ್ಳಬೇಡಿ.

ಅಡ್ಡಪರಿಣಾಮಗಳ ಬಗ್ಗೆ ತಿಳಿಯಿರಿ

ಅಡ್ಡಪರಿಣಾಮಗಳ ಬಗ್ಗೆ ತಿಳಿಯಿರಿ

ಇತರ ಕೆಲವು ಔಷಧಿಗಳಂತೆ ನೋವು ನಿವಾರಕ ಮಾತ್ರೆಗಳಿಂದ ಕೂಡ ಹಲವಾರು ರೀತಿಯ ಅಡ್ಡಪರಿಣಾಮಗಳು ಇವೆ. ಇದರಲ್ಲಿ ಸಾವು ಕೂಡ ಒಂದು. ನೋವು ನಿವಾರಕ ಮಾತ್ರೆ ತೆಗೆದುಕೊಳ್ಳುವ ಮೊದಲು ಅದರ ಎಲ್ಲಾ ಅಡ್ಡಪರಿಣಾಮಗಳ ಬಗ್ಗೆ ಸರಿಯಾಗಿ ತಿಳಿಯಿರಿ. ಹೆಚ್ಚಿನ ನೋವು ನಿವಾರಕಗಳಿಂದ ಜೀರ್ಣಕ್ರಿಯೆ ಸಮಸ್ಯೆ, ಮಲಬದ್ಧತೆ, ಆಲಸ್ಯ, ನಿಶ್ಯಕ್ತಿ, ರಕ್ತದೊತ್ತಡ ಕಡಿಮೆಯಾಗುವುದು, ಹೃದಯಾಘಾತ ಇತ್ಯಾದಿಗಳು ಸಾಮಾನ್ಯವಾದ ಅಡ್ಡಪರಿಣಾಮಗಳು. ಅದಾಗ್ಯೂ ಸರಿಯಾದ ಪ್ರಮಾಣದಲ್ಲಿ ಸೇವಿಸಿದರೆ ಅಡ್ಡಪರಿಣಾಮ ಅಷ್ಟೊಂದು ಕಂಡುಬರುವುದಿಲ್ಲ.

ಚಟವಾಗಿ ಬಿಡಬಹುದು!

ಚಟವಾಗಿ ಬಿಡಬಹುದು!

ನೋವು ನಿವಾರಕದ ತುಂಬಾ ಅಪಾಯಕಾರಿ ಅಡ್ಡಪರಿಣಾಮವೆಂದರೆ ಇದು ಮಾನಸಿಕವಾಗಿ ಚಟವಾಗಿ ಬಿಡಬಹುದು. ವಿಶ್ವದಲ್ಲಿ ಸಾವಿರಾರು ಮಂದಿ ವೈದ್ಯರು ಸೂಚಿಸಿರುವ ನೋವು ನಿವಾರಕ ಮಾತ್ರೆಗಳಿಗೆ ವ್ಯಸನಿಗಳಾಗಿ ಹೋಗಿದ್ದಾರೆ. ನೋವು ನಿವಾರಕ ಮಾತ್ರೆ ನೀಡುವಂತಹ ತಕ್ಷಣದ ಪರಿಣಾಮವು ಅದು ನಮ್ಮನ್ನು ವ್ಯಸನಿಯಾಗಿಸುವುದು. ನೋವು ಕಡಿಮೆಯಾದ ಬಳಿಕವೂ ನಾವು ಅದರ ದಾಸರಾಗಿರುತ್ತೇವೆ.

ಮಾದಕ ದ್ರವ್ಯಗಳಿಗೆ ದಾಸರಾಗಬಹುದು

ಮಾದಕ ದ್ರವ್ಯಗಳಿಗೆ ದಾಸರಾಗಬಹುದು

ಹಲವಾರು ಅಧ್ಯಯನಗಳು ಹಾಗೂ ಸಮೀಕ್ಷೆಗಳು ಕಂಡುಕೋಂಡ ವಿಚಾರವೆಂದರೆ ನೋವು ನಿವಾರಕ ತೆಗೆದುಕೊಳ್ಳುವ ಜನರು ಅದಕ್ಕೆ ದಾಸರಾಗುವುದು ಮಾತ್ರವಲ್ಲದೆ ಕೋಕೇನ್, ಆಲ್ಕೋಹಾಲ್ ಮತ್ತು ಹೆರಾಯಿನ್ ನಂತಹ ಮಾದಕ ದ್ರವ್ಯಗಳ ಚಟ ಅಂಟಿಕೊಳ್ಳಬಹುದು. ಯಾಕೆಂದರೆ ನೋವು ನಿವಾರಕ ಮಾತ್ರೆಗಳಿಗೆ ದೇಹವು ಹೊಂದಿಕೊಂಡಿರುವ ಕಾರಣದಿಂದ ಇದು ಹೆಚ್ಚಿನ ಪರಿಣಾಮ ಬೀರದೆ ಇರಬಹುದು.

ಅಂಗಾಂಗಗಳಿಗೆ ಹಾನಿಯಾಗಬಹುದು

ಅಂಗಾಂಗಗಳಿಗೆ ಹಾನಿಯಾಗಬಹುದು

ದೀರ್ಘಕಾಲದ ತನಕ ಪ್ರಬಲ ನೋವು ನಿವಾರಕ ತೆಗೆದುಕೊಂಡರೆ ಅದರಿಂದ ಅಂಗಾಂಗಗಳಿಗೆ ಹಾನಿಯಾಗುವಂತಹ ಸಂಭವವಿದೆ. ನೋವು ನಿವಾರಕದಲ್ಲಿ ಇರುವಂತಹ ಕೆಲವೊಂದು ರಾಸಾಯನಿಕಗಳನ್ನು ವಿಘಟಿಸಿ ದೇಹದಿಂದ ಹೊರಹಾಕಲು ಸಾಧ್ಯವಾಗದೆ ಇರಬಹುದು. ಇದರಿಂದ ಕಿಡ್ನಿ, ಹೃದಯವು ಹೆಚ್ಚು ಪರಿಶ್ರಮ ಪಟ್ಟು ಇದನ್ನು ವಿಘಟಿಸಬೇಕಾಗುತ್ತದೆ. ಅತಿಯಾಗಿ ನೋವು ನಿವಾರಕ ತೆಗೆದುಕೊಳ್ಳುತ್ತಾ ಇದ್ದರೆ ಅದರಿಂದ ಯಕೃತ್ ಮತ್ತು ಹೃದಯಕ್ಕೆ ತುಂಬಾ ಹಾನಿಯಾಗುವುದು ಖಚಿತ.

ವೈದ್ಯಕೀಯ ಇತಿಹಾಸ ತಿಳಿಯಿರಿ

ವೈದ್ಯಕೀಯ ಇತಿಹಾಸ ತಿಳಿಯಿರಿ

ನೀವು ನೋವಿಗೆ ಚಿಕಿತ್ಸೆ ಪಡೆಯಲು ಯಾವುದೇ ವೈದ್ಯರ ಬಳಿ ಅಥವಾ ತಜ್ಞರ ಬಳಿ ತೆರಳಿದಾಗ ಅವರು ನೋವು ನಿವಾರಕ ನೀಡಬಹುದು. ಆದರೆ ಇದಕ್ಕೆ ಮೊದಲು ಅವರು ನಿಮ್ಮ ವೈದ್ಯಕೀಯ ಇತಿಹಾಸ ತಿಳಿಯಬೇಕು. ಹಿಂದೆ ನಿಮಗೆ ಬಂದ ರೋಗ, ಸೋಂಕು, ಮಾನಸಿಕ ಸಮಸ್ಯೆ ಇತಿಹಾಸ ಇತ್ಯಾದಿಗಳು. ಇದೆಲ್ಲವನ್ನು ನೋಡಿಕೊಂಡು ವೈದ್ಯರು ನಿಮಗೆ ನೋವು ನಿವಾರಕ ಸೂಚಿಸುವರು.

English summary

Important Facts About Painkillers

As humans, all of us would have experienced some kind of physical pain, at least a few times in our lives, right?In fact, if a person hasn't experienced pain, it could indicate the presence of certain nerve-related disorders! So, pain is a very common symptom of diseases and injury, which is experienced by people, quite often, regardless of the age and gender.
Story first published: Thursday, February 8, 2018, 23:35 [IST]