Related Articles
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಸೆಕ್ಸ್‌ನಿಂದ ಇಂತಹ ಐದು ಕಾಯಿಲೆಗಳನ್ನು ನಿಯಂತ್ರಿಸಬಹುದು!
ಸೆಕ್ಸ್ ನಿಂದಾಗಿ ಗುಣವಾಗುವ ಅಥವಾ ತಡೆಯಬಹುದಾದ ಕೆಲವು ಅನಾರೋಗ್ಯಗಳು ಮನಸ್ಸು ಮತ್ತು ದೇಹದ ಆಯಾಸ ಕಡಿಮೆ ಮಾಡುವಂತಹ ಶಕ್ತಿಯು ಲೈಂಗಿಕ ಕ್ರಿಯೆಗೆ ಇದೆ. ಲೈಂಗಿಕ ಕ್ರಿಯೆ ಅಥವಾ ಸೆಕ್ಸ್ ಮನಸ್ಸಿಗೆ ಮುದ ನೀಡುವುದು ಮತ್ತು ದೇಹವನ್ನು ಉಲ್ಲಾಸಿತವಾಗಿಸುವುದು.
ಒತ್ತಡ ಕಡಿಮೆ ಮಾಡುವ ಜತೆಗೆ ನಿಮ್ಮ ಮನಸ್ಥಿತಿ ಸುಧಾರಣೆ ಮಾಡಿ, ಆತಂಕ ಕಡಿಮೆ ಮಾಡುವುದು. ಸೆಕ್ಸ್ ನಿಮ್ಮ ಸಂಬಂಧಕ್ಕೆ ಮಾತ್ರವಲ್ಲದೆ, ಸಂಪೂರ್ಣ ಆರೋಗ್ಯದ ಮೇಲೆ ಪರಿಣಾಮ ಬೀರುವುದು. ಸೆಕ್ಸ್ ನಿಂದ ನಿವಾರಣೆಯಾಗುವ ಮತ್ತು ತಡೆಹಿಡಿಯಬಹುದಾದ ಕೆಲವೊಂದು ಕಾಯಿಲೆಗಳು ಇಲ್ಲಿವೆ.
ಸೆಕ್ಸ್ ನಿಂದ ನಿವಾರಣೆಯಾಗುವ ಐದು ಕಾಯಿಲೆಗಳು
1. ತಲೆನೋವು
ಮುಂದಿನ ಸಲ ನಿಮಗೆ ತಲೆನೋವು ಅಥವಾ ಮೈಗ್ರೇನ್ ಕಾಣಿಸಿಕೊಂಡರೆ ಆಗ ನೀವು ಯಾವುದೇ ಔಷಧಿ ಸೇವನೆ ಮಾಡುವ ಬದಲು ಸಂಗಾತಿ ಬಳಿ ತೆರಳಿ. ಜರ್ನಲ್ ಸೆಫಾಲ್ಜಿಯದಲ್ಲಿ ಪ್ರಕಟಗೊಂಡಿರುವ ವರದಿಯ ಪ್ರಕಾರ ಲೈಂಗಿಕ ಚಟುವಟಿಕೆಯಿಂದ ತಲೆನೋವು ನಿವಾರಣೆ ಮಾಡಬಹುದು. ಇದನ್ನು ಸಾಬೀತು ಮಾಡಲು ಡಿಪಾರ್ಟ್ ಮೆಂಟ್ ಆಫ್ ನ್ಯುರಾಲಜಿ ಎಟ್ ದ ಯೂನಿವರ್ಸಿಟಿ ಆಫ್ ಮುನಸ್ಟರ್, ತಲೆನೋವು ಮತ್ತು ಮೈಗ್ರೇನ್ ನಿಂದ ಬಳಲುತ್ತಿರುವಂತಹ ಸುಮಾರು 1000 ರೋಗಿಗಳಿಗೆ ಕೆಲವೊಂದು ಪ್ರಶ್ನೆಗಳನ್ನು ಕಳುಹಿಸಿಕೊಟ್ಟಿತು. ಮೈಗ್ರೇನ್ ರೋಗಿಗಳು ಲೈಂಗಿಕ ಕ್ರಿಯೆಯಲ್ಲಿ ತೊಡಗಿದ ವೇಳೆ ಅವರಿಗೆ ಆರಾಮ ಕಂಡುಬಂದಿದೆ ಎಂದು ಶೇ.60ರಷ್ಟು ಜನರು ಹೇಳಿದ್ದಾರೆ. ತಲೆನೋವು ಇರುವಂತಹ ವ್ಯಕ್ತಿಗಳಲ್ಲಿ ಶೇ. 91ರಷ್ಟು ಮಧ್ಯಮದಿಂದ ಸಂಪೂರ್ಣ ಪರಿಹಾರ ಕಂಡುಬಂದಿದೆ ಎಂದು ವರದಿಗಳು ತಿಳಿಸಿವೆ. ತಲೆನೋವಿಗೆ ಸರಳ ಮನೆಮದ್ದುಗಳು:
*ಲವಂಗ ಮತ್ತು ಹರಳುಪ್ಪು ಕುಟ್ಟಿ ಪುಡಿ ಮಾಡಿ,ಹಾಲಿನೊಂದಿಗೆ ಬೆರೆಸಿ ಪೇಸ್ಟ್ ತಯಾರಿಸಿ ಇಟ್ಟುಕೊಳ್ಳಿ.ಪೇಸ್ಟ್ ನಲ್ಲಿ ಇರುವ ಹರಳುಪ್ಪು ಹೈಗ್ರೋಸ್ಕೊಪಿಕ್ ಆಗಿರುವುದರಿಂದ ತಲೆಯಲ್ಲಿರುವ ದ್ರವವನ್ನು ತೆಗೆದು ತಲೆ ನೋವನ್ನು ಕಡಿಮೆ ಮಾಡುತ್ತದೆ.
*15 ರಿಂದ 20 ನಿಮಿಷ ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡಿದರೆ ತಲೆನೋವು ಕಡಿಮೆಯಾಗುತ್ತದೆ.ಬೇಸಿಗೆಯ ಬಿಸಿಲಿಗೆ ತಲೆನೋವು ಬಂದಾಗ ಈ ರೀತಿ ಮಾಡಿದರೆ ಕೊಬ್ಬರಿ ಎಣ್ಣೆ ತಂಪು ಮಾಡುವುದರ ಮೂಲಕ ತಲೆನೋವನ್ನು ಕಡಿಮೆ ಮಾಡುತ್ತದೆ.
2. ಶೀತ ಮತ್ತು ಜ್ವರ
ಈ ಔಷಧಿಯನ್ನು ನಿಮ್ಮ ಯಾವ ವೈದ್ಯರು ಕೂಡ ಸೂಚಿಸಲ್ಲ. ಆದರೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದರೆ ಅದರಿಂದ ಕಾಯಿಲೆ ಬೀಳುವ ದಿನಗಳು ಕಡಿಮೆಯಾಗುವುದು ಎಂದು ಲೈಂಗಿಕ ಆರೋಗ್ಯ ತಜ್ಞರಾಗಿರುವ ಯವೊನ್ನೆ ಕೆ. ಫುಲ್ಬ್ರೈಟ್ ತಿಳಿಸಿದ್ದಾರೆ. 2009ರಲ್ಲಿ ಪೆನ್ನಸ್ಯಲ್ವಾನಿಯಾದ ಯೂನಿವರ್ಸಿಟಿಯ ಕಾರ್ಲ್ ಚಾರ್ನೆಟಸ್ಕಿ ಮತ್ತು ಫ್ರಾಂಕ್ ಬ್ರೆನ್ನನ್ ನಡೆಸಿರುವಂತಹ ಅಧ್ಯಯನದ ಪ್ರಕಾರ ಇದು ನಿಜವೆಂದು ಸಾಬೀತಾಗಿದೆ. ವಾರದಲ್ಲಿ ಒಂದು ಅಥವಾ ಎರಡು ಸಲ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವಂತಹ ವ್ಯಕ್ತಿಗಳಲ್ಲಿ ಉನ್ನತ ಮಟ್ಟದ ಇಮ್ಯೂನೊಗ್ಲೊಬುಲಿನ್ ಎ(ಐಜಿಎ) ಹೆಚ್ಚಾಗುವುದು ಎಂದು ಕಂಡುಕೊಳ್ಳಲಾಗಿದೆ. ಇದು ದೇಹವನ್ನು ಶೀತ ಮತ್ತು ಜ್ವರದಿಂದ ಕಾಪಾಡುವುದು. ವಾರದಲ್ಲಿ ಒಂದು ಅಥವಾ ಎರಡು ಸಲ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವಂತಹ ವ್ಯಕ್ತಿಯಲ್ಲಿ ಐಜಿಎ ಮಟ್ಟವು ಶೇ.30ರಷ್ಟು ಹೆಚ್ಚಾಗುವುದು.
ಶೀತ ಮತ್ತು ಜ್ವರಕ್ಕೆ ಸರಳ ಮನೆಮದ್ದು ಇಲ್ಲಿದೆ ನೋಡಿ:
*ಒಂದು ಬೆಳ್ಳುಳ್ಳಿ ಎಸಲನ್ನು ಜಜ್ಜಿಕೊಂಡು ಅದನ್ನು ಅರ್ಧ ಕಪ್ ಬಿಸಿ ನೀರಿಗೆ ಹಾಕಿ ಕುದಿಸಿ. ಸೋಸಿಕೊಂಡ ಬಳಿಕ ದಿನದಲ್ಲಿ ಎರಡು ಸಲ ಕುಡಿಯಿರಿ.
*ಒಂದು ಇಂಚಿನಷ್ಟು ದೊಡ್ಡ ಶುಂಠಿ ತುರಿಯಿರಿ ಮತ್ತು ಇದನ್ನು ಕುದಿಯುತ್ತಿರುವ ಅರ್ಧಕಪ್ ನೀರಿಗೆ ಹಾಕಿ.
*ಇದಕ್ಕೆ ಎರಡು ಚಮಚ ಲಿಂಬೆ ರಸ ಮತ್ತು ಒಂದು ಚಮಚ ಜೇನುತುಪ್ಪ ಹಾಕಿಕೊಂಡು ಕುಡಿಯಿರಿ.
ಹಸಿ ಈರುಳ್ಳಿಯನ್ನು ಅಡ್ಡಲಾಗಿ ಕತ್ತರಿಸಿ ಬಿಲ್ಲೆಗಳನ್ನಾಗಿಸಿ. ಎರಡೂ ಪಾದಗಳ ಕೆಳಗೆ ಒಂದೊಂದು ಬಿಲ್ಲೆಗಳನ್ನಿಟ್ಟು ಬೆಚ್ಚಗಿನ ಮಫ್ಲರ್ ಅಥವಾ ಬಟ್ಟೆಯನ್ನು ಸುತ್ತಿ ರಾತ್ರಿ ಮಲಗಿಸಿ. ಬೆಳಿಗ್ಗೆ ಜ್ವರ ಕಡಿಮೆಯಾಗುತ್ತದೆ.
Most Read: ಒಂದೇ ಒಂದು 'ಟೊಮೆಟೊ' ಕೂದಲಿನ ಅಂದ-ಚೆಂದ ಹೆಚ್ಚಿಸುತ್ತದೆ!
3. ಪ್ರೊಸ್ಟೇಟ್ ಕ್ಯಾನ್ಸರ್ ಅಪಾಯ ತಗ್ಗಿಸುವುದು
ಇದು ಪ್ರೊಸ್ಟೇಟ್ ಕ್ಯಾನ್ಸರ್ ನ ಅಪಾಯವನ್ನು ತಗ್ಗಿಸುವಂತಹ ಕೆಲಸ ಮಾಡುವುದು. ತಿಂಗಳಲ್ಲಿ ಸುಮಾರು 21 ಸಲ ವೀರ್ಯ ಸ್ಖಲನ ಮಾಡಿದಂತಹ ವ್ಯಕ್ತಿಯು ಪ್ರೊಸ್ಟೇಟ್ ಕ್ಯಾನ್ಸರ್ ಗೆ ಸಿಲುಕುವಂತಹ ಸಾಧ್ಯತೆಯು ತುಂಬಾ ಕಡಿಮೆ ಎಂದು ಜರ್ನಲ್ ಆಫ್ ದ ಅಮೆರಿಕನ್ ಮೆಡಿಕಲ್ ಅಸೋಸಿಯೇಶನ್ ನಲ್ಲಿ ಪ್ರಕಟವಾಗಿರುವ ವರದಿಯು ಹೇಳಿದೆ. ಇದಕ್ಕೆ ನಿಮಗೆ ಸಂಗಾತಿಯ ಅಗತ್ಯವಿದೆ ಎಂದಲ್ಲ. ನೈಸರ್ಗಿಕ ಸ್ಖಲನ, ಹಸ್ತಮೈಥುನದಿಂದಲೂ ಇದು ಸಾಧ್ಯ. ಯಾವುದೇ ರೀತಿಯಿಂದಲೂ ಸ್ಖಲನ ಮಾಡುವಂತಹ ವ್ಯಕ್ತಿಗಳಲ್ಲಿ ಪ್ರೊಸ್ಟೇಟ್ ಕ್ಯಾನ್ಸರ್ ನ ಅಪಾಯವು ತುಂಬಾ ಕಡಿಮೆ ಎಂದು ವರದಿಗಳು ಹೇಳಿವೆ.
4. ಹೃದಯದ ಅಪಾಯ ಕಡಿಮೆ ಮಾಡುವುದು
ಸೆಕ್ಸ್ ನಿಂದಾಗಿ ಪ್ರೊಸ್ಟೇಟ್ ಕ್ಯಾನ್ಸರ್ ನ ಅಪಾಯ ಕಡಿಮೆ ಮಾಡಿಕೊಳ್ಳಬಹುದು ಮಾತ್ರವಲ್ಲದೆ, ಇದು ಪಾರ್ಶ್ವವಾಯು ಮತ್ತು ಅಪಧಮನಿಯ ಹೃದಯ ರೋಗಗಳನ್ನು ಕಡಿಮೆ ಮಾಡುವುದು. ಅಧ್ಯಯನ ವರದಿಯೊಂದರ ಪ್ರಕಾರ ತಿಂಗಳಲ್ಲಿ ಒಂದು ಸಲ ಅಥವಾ ಇದರಲ್ಲಿ ಒಳಗೊಳ್ಳದೆ ಇದ್ದರೆ ಆಗ ಇಂತಹವರು ಅಪಧಮನಿ ಕಾಯಿಲೆಗೆ ಗುರಿಯಾಗುವ ಸಾಧ್ಯತೆಯು ಶೇ.45ರಷ್ಟು ಇರುವುದು. ಸಂಪೂರ್ಣ ಆರೋಗ್ಯ ಹೊಂದಿರುವಂತಹ ವ್ಯಕ್ತಿಯಲ್ಲಿ ಕಾಮಾಸಕ್ತಿಯು ಹೆಚ್ಚಾಗಿರುವುದು. ಇದರಿಂದಾಗಿ ಆತ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದರಿಂದ ಹೃದಯದ ಕಾಯಿಲೆ ಸಮಸ್ಯೆ ಕಡಿಮೆಯಾಗುವುದು.
Most Read: ನಿಮ್ಮ ಮೈ ಮೇಲೆ ಹಲ್ಲಿ ಬಿದ್ದರೆ ಅಪಶಕುನವೇ? ಅದೃಷ್ಟವೇ?
5. ಕಿಡ್ನಿ ಕಲ್ಲು ಹೊರಹೋಗಲು ನೆರವಾಗುವುದು
ಕೆಲವೊಂದು ಖನಿಜಾಂಶಗಳಿಂದ ನಿರ್ಮಾಣವಾಗಿರುವಂತಹ ಕಲ್ಲು ಕಿಡ್ನಿ ಅಥವಾ ಮೂತ್ರನಾಳದಲ್ಲಿ ಬಂದು ನಿಂತಿರುವುದು. ಇದನ್ನು ಹೊರಹಾಕುವುದು ತುಂಬಾ ಕಠಿಣ. ಆದರೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡರೆ ಆಗ ಕಿಡ್ನಿಯಲ್ಲಿರುವ ಕಲ್ಲನ್ನು ಹೊರಹಾಕಬಹುದು. ಟರ್ಕಿಯ ಅಂಕಾರದಲ್ಲಿರುವ ಕ್ಲಿನಿಕ್ ಆಫ್ ಅಂಕಾರ ಟ್ರೈನಿಂಗ್ ಆ್ಯಂಡ್ ರಿಸರ್ಚ್ ಹಾಸ್ಪಿಟಲ್ ನಡೆಸಿರುವಂತಹ ಸಂಶೋಧನೆಯ ವರದಿಯು ಜರ್ನಲ್ ಆಫ್ ಯುರೊಲಾಜಿಯಲ್ಲಿ ಪ್ರಕಟಗೊಂಡಿದೆ. ಈ ವರದಿಯ ಪ್ರಕಾರ ವಾರದಲ್ಲಿ ಮೂರರಿಂದ ನಾಲ್ಕು ಸಲ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡರೆ, ಆಗ ಮೂತ್ರದಲ್ಲಿನ ಕಲ್ಲನ್ನು ಹೊರಗೆ ಹಾಕಬಹುದು. ಪ್ರತಿನಿತ್ಯ ಅಥವಾ ವಾರದಲ್ಲಿ ಮೂರ್ನಾಲ್ಕು ಸಲ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡರೆ ಆಗ ನೀವು ವೈದ್ಯರಿಂದ ದೂರವಿರಬಹುದು. ಕಿಡ್ನಿ ಕಲ್ಲಿನ ಸಮಸ್ಯೆಗೆ ಸರಳ ಮನೆಮದ್ದುಗಳು
* ನಾಲ್ಕಾರು ತುಳಸಿ ಎಲೆಗಳನ್ನು ಚೆನ್ನಾಗಿ ತೊಳೆದು ಕೊಂಚ ಜೇನಿನೊಂದಿಗೆ ಬೆರೆಸಿ ಪ್ರತಿದಿನ ಜಗಿದು ತಿನ್ನುವ ಮೂಲಕ ಕಲ್ಲುಗಳು ನಿಧಾನವಾಗಿ ಕರಗುತ್ತಾ ಹೋಗುತ್ತವೆ.
* ಖಾಲಿಹೊಟ್ಟೆಯಲ್ಲಿ ಒಂದು ಎಳನೀರು ಕುಡಿದ ಬಳಿಕ ದಿನದಲ್ಲಿ ಸುಮಾರು ನಾಲ್ಕರಿಂದ ಐದು ಎಳನೀರನ್ನಾದರೂ ಊಟಕ್ಕೆ ಅರ್ಧ ಗಂಟೆಗೆ ಮುನ್ನ ಕುಡಿಯಬೇಕು. ರಾತ್ರಿ ಮಲಗುವ ಮುನ್ನವೂ ಒಂದು ಎಳನೀರು ಕುಡಿದು ಕೊಂಚಕಾಲ ಅಡ್ಡಾಡಿ ಬಳಿಕ ಮೂತ್ರ ವಿಸರ್ಜಿಸಿ ಮಲಗಿಕೊಳ್ಳಬೇಕು.
* ಇನ್ನು ಹಸಿಶುಂಠಿ ಕೂಡ ಬಹಳ ಉಪಕಾರಿ, ಹೌದು ಹಸಿಶುಂಠಿ ಮೂತ್ರಪಿಂಡಗಳನ್ನು ಶುದ್ಧೀಕರಿಸಲು ಶುಂಠಿ ಸಹಾ ಉತ್ತಮವಾದ ಮೂಲಿಕೆಯಾಗಿದೆ. ಬರೆಯ ಮೂತ್ರಪಿಂಡಗಳು ಮಾತ್ರವಲ್ಲ, ಜೀರ್ಣಾಂಗ ಮತ್ತು ಕರುಳುಗಳಿಂದಲೂ ವಿಷಕಾರಿ ವಸ್ತುಗಳನ್ನು ಹೊರಹಾಕಲು ನೆರವಾಗುತ್ತದೆ. ಯಕೃತ್ ಸಹಾ ಇದರಿಂದ ಶುದ್ಧಗೊಳ್ಳುತ್ತದೆ. ಇದಕ್ಕಾಗಿ ಹೆಚ್ಚೇನೂ ಮಾಡಬೇಕಾಗಿಲ್ಲ, ದಿನದಲ್ಲಿ ಕುಡಿಯುವ ಟೀ ಯಲ್ಲಿ ಕೊಂಚ ಶುಂಠಿಯನ್ನು ಸೇರಿಸಿದರೆ ಸಾಕು. ಉತ್ತಮ ಪರಿಣಾಮಕ್ಕಾಗಿ ಶುಂಠಿ ಕುದಿಸಿ ಸೋಸಿ ತಣಿಸಿದ ನೀರನ್ನು ರಾತ್ರಿ ಮಲಗುವ ಮುನ್ನ ಕುಡಿಯಿರಿ.