For Quick Alerts
ALLOW NOTIFICATIONS  
For Daily Alerts

ಕೈಗಳಲ್ಲಿ ಇಂತಹ ಲಕ್ಷಣಗಳು ಕಂಡುಬಂದರೆ-ಥೈರಾಯ್ಡ್ ಸಮಸ್ಯೆಯಿದೆ ಎಂದರ್ಥ!

|

ಥೈರಾಯ್ಡ್ ಸಮಸ್ಯೆಯು ಇಂದಿನ ದಿನಗಳಲ್ಲಿ ಸಾಮಾನ್ಯವಾಗುತ್ತಲಿದೆ. ಇದು ಹಲವಾರು ರೀತಿಯ ಸಮಸ್ಯೆಗಳನ್ನು ಉಂಟು ಮಾಡಬಹುದು. ಕುತ್ತಿಗೆಯ ಕೆಳಭಾಗದಲ್ಲಿರುವಂತಹ ಥೈರಾಯ್ಡ್ ಗ್ರಂಥಿಯು, ದೇಹದಲ್ಲಿ ಚಯಾಪಚಯ ನಿಯಂತ್ರಿಸುವ ಹಾರ್ಮೋನುಗಳನ್ನು ಉತ್ಪತ್ತಿ ಮಾಡುವ ಕೆಲಸ ಮಾಡುವುದು. ಇದು ಸಣ್ಣಚಿಟ್ಟೆ ಗಾತ್ರದ ಗ್ರಂಥಿಯಾಗಿದೆ.

ಇದು ಗ್ರಂಥಿಗಳ ಸಂಪರ್ಕದ ಒಂದು ಭಾಗವಾಗಿದ್ದು. ಇದನ್ನು ಎಂಡೊಕ್ರೈನ್ ವ್ಯವಸ್ಥೆಯೆಂದು ಕರೆಯಲಾಗುವುದು. ಗ್ರಂಥಿಯಲ್ಲಿ ಯಾವುದೇ ರೀತಿಯ ಸಮಸ್ಯೆಯಿದೆಯಾ ಎಂದು ತಿಳಿಯಲು ರಕ್ತಪರೀಕ್ಷೆ ಮೂಲಕ ಥೈರಾಯ್ಡ್ ಹಾರ್ಮೋನು(ಟಿ4 ಅಥವಾ ಥೈರೊಕ್ಸಿನ್ ) ಮತ್ತು ಥೈರಾಯ್ಡ್ ಉತ್ತೇಜನ ಹಾರ್ಮೋನು(ಟಿಎಸ್ ಎಚ್) ಪರೀಕ್ಷೆ ಮಾಡಲಾಗುತ್ತದೆ.

"ಹೈಪರ್ ಥೈರಾಯಿಡಸಂ" ಎಂದರೇನು?

ಥೈರಾಯ್ಡ್ ಗ್ರಂಥಿಗಳು ಅತಿಯಾಗಿ ಕಾರ್ಯನಿರ್ವಹಿಸಲು ಆರಂಭಿಸಿದಾಗ ಇದನ್ನು "ಹೈಪರ್ ಥೈರಾಯಿಡಸಂ" ಎಂದು ಕರೆಯಲಾಗುತ್ತದೆ. ಥೈರಾಯ್ಡ್ ಗ್ರಂಥಿಗಳು ಸರಿಯಾಗಿ ಕಾರ್ಯನಿರ್ವಹಿಸದೆ ಇರುವಾಗ "ಹೈಪೋಥೈರಾಯ್ಡಿಸಮ್" ಎಂದು ಕರೆಯಲಾಗುವುದು.

ಇನ್ನು ಹೈಪೋಥೈರಾಯ್ಡಿಸಮ್ ಎಂದರೇನು?

ಇನ್ನು ಹೈಪೋಥೈರಾಯ್ಡಿಸಮ್ ಎಂದರೇನು?

ಥೈರಾಯ್ಡ್ ಗ್ರಂಥಿಗಳು ಸರಿಯಾಗಿ ಕಾರ್ಯನಿರ್ವಹಿಸದೆ ಇರುವಾಗ ಸರಿಯಾಗಿ ಹಾರ್ಮೋನು ಉತ್ಪತ್ತಿಯಾಗಲ್ಲ. ಥೈರಾಕ್ಸಿನ್ ಮಟ್ಟವು ಕಡಿಮೆಯಿದ್ದರೆ ಮತ್ತು ಟಿಎಸ್ ಎಚ್ ಮಟ್ಟವು ಅಧಿಕವಾಗಿದ್ದರೆ ಈ ಪರಿಸ್ಥಿತಿಯನ್ನು ಹೈಪೋಥೈರಾಯ್ಡಿಸಮ್(ಹೈಪರ್ ಥೈರಾಯ್ಡಿಸಮ್ ನ ವಿರುದ್ಧ) ಎಂದು ಪರಿಗಣಿಸಲಾಗುವುದು. ಪಿಟ್ಯುಟರಿ ಗ್ರಂಥಿಯು ಟಿಎಸ್ ಎಚ್ ನ್ನು ಬಿಡುಗಡೆ ಮಾಡುವುದು. ಇದು ಹಾರ್ಮೋನು ಬಿಡುಗಡೆ ಮಾಡುವಂತೆ ಥೈರಾಯ್ಡ್ ಗ್ರಂಥಿಯನ್ನು ಉತ್ತೇಜಿಸುವುದು. ಪುರುಷರಿಗೆ ಹೋಲಿಸಿದರೆ, ಮಹಿಳೆಯರಲ್ಲಿ ಥೈರಾಯ್ಡ್ ಸಮಸ್ಯೆಯು ಹೆಚ್ಚಾಗಿರುವುದು ಎನ್ನಲಾಗುತ್ತದೆ.

ಇದಕ್ಕೆ ಕಾರಣವೇನು?

ಇದಕ್ಕೆ ಕಾರಣವೇನು?

ಹ್ಯಾಶಿಮೊಟೊ ಕಾಯಿಲೆಯಿಂದಾಗಿ ಕೆಲವೊಂದು ಸಲ ಹೈಪೋಥೈರಾಯ್ಡಿಸಮ್ ಉಂಟಾಗುವುದು ಅಥವಾ ಥೈರಾಯ್ಡ್ ಗ್ರಂಥಿ ತೆಗೆಯಲು ಶಸ್ತ್ರಚಿಕಿತ್ಸೆ ಮಾಡಿದಾಗ ಹೀಗೆ ಆಗುವುದು. ರಕ್ತ ಪರೀಕ್ಷೆ ಹೊರತುಪಡಿಸಿ, ವೈದ್ಯರು ಥೈರಾಯ್ಡ್ ಸ್ಕ್ಯಾನಿಂಗ್ ಮಾಡುವಂತೆ ನಿಮಗೆ ಸೂಚಿಸಬಹುದು. ಥೈರಾಯ್ಡ್ ಹೇಗೆ ಕೆಲಸ ಮಾಡುತ್ತಿದೆ ಎಂದು ತಿಳಿಯಲು ರೇಡಿಯೋ ಆ್ಯಕ್ಟಿವ್ ಟ್ರ್ಯಾಕರ್ ಬಳಸಲಾಗುವುದು.

Most Read: ಥೈರಾಯ್ಡ್ ಗ್ರಂಥಿಯ ಅಪಾಯದ ಲಕ್ಷಣಗಳು, ಎಚ್ಚರವಾಗಿರಿ!

ರೇಡಿಯ್ಯಾಕ್ಟಿವ್ ಐಯೋಡಿನ್ ಸೇವನೆ ಪರೀಕ್ಷೆ

ರೇಡಿಯ್ಯಾಕ್ಟಿವ್ ಐಯೋಡಿನ್ ಸೇವನೆ ಪರೀಕ್ಷೆ

ಮತ್ತೊಂದು ಇದೇ ರೀತಿಯ ಪರೀಕ್ಷೆಯೆಂದರೆ ರೇಡಿಯ್ಯಾಕ್ಟಿವ್ ಐಯೋಡಿನ್ ಸೇವನೆ ಪರೀಕ್ಷೆ. ನಿಮಗೆ ರೇಡಿಯ್ಯಾಕ್ಟಿವ್ ಐಯೋಡಿನ್ ನೀಡಲಾಗುತ್ತದೆ ಮತ್ತು ಸೆನ್ಸರ್ ಮೂಲಕ ನಿಮ್ಮ ಥೈರಾಯ್ಡ್ ಎಷ್ಟು ಮಟ್ಟದಲ್ಲಿ ಐಯೋಡಿನ್ ಸ್ವೀಕರಿಸುತ್ತದೆ ಎಂದು ಪರೀಕ್ಷಿಸಲಾಗುತ್ತದೆ. ನೀವು ಮೂತ್ರವಿಸರ್ಜನೆ ಮಾಡುವಾಗ ಟ್ರ್ಯಾಕರ್ ಹೊರಬರುವುದು. ಬನ್ನಿ ಹೈಪೋಥೈರಾಯ್ಡಿಸಮ್ ಲಕ್ಷಣಗಳು ಕೈಯಲ್ಲಿ ಹೇಗೆ ಕಂಡುಬರುವುದು?

ಕೈಗಳು ತಣ್ಣಗಾಗುವುದು

ಕೈಗಳು ತಣ್ಣಗಾಗುವುದು

ಕೈಗಳು ತಣ್ಣಗಾದರೆ ಆಗ ಸರಿಯಾಗಿ ರಕ್ತ ಪರಿಚಲನೆಯಾಗುತ್ತಿಲವೆನ್ನುವುದರ ಸೂಚನೆಯಾಗಿದೆ. ಹೈಪೋಥೈರಾಯ್ಡಿಸಮ್ ವೇಳೆ ಥೈರಾಯ್ಡ್ ಗ್ರಂಥಿಗಳ ಚಟುವಟಿಕೆಯು ತುಂಬಾ ಕುಗ್ಗಿರುವುದು. ಇದು ಹೊಮೊಸಿಸ್ಟೈನ್ ಗೆ ಸಂಬಂಧಪಟ್ಟಿರುವುದಾಗಿದೆ. ಹೊಮೊಸಿಸ್ಟೈನ್ ಎನ್ನುವ ಅಮಿನೊ ಆಮ್ಲವು ರಕ್ತ ಪರಿಚಲನೆಯು ಕುಗ್ಗಲು, ತೀವ್ರ ನಾಳ ಮತ್ತು ಹೃದಯದ ಸಮಸ್ಯೆಗಳಿಗೆ ಕಾರಣವಾಗುವುದು. ಇದಕ್ಕೆ ಪ್ರಮುಖ ಕಾರಣವೆಂದರೆ ರಕ್ತದಲ್ಲಿ ಪೂರೈಕೆಯಾಗುವಂತಹ ಕೆಲವೊಂದು ಪ್ರಮುಖ ಪೋಷಕಾಂಶಗಳು ಕೈಗಳು ಮತ್ತು ಕಾಲುಗಳಿಗೆ ತಲುಪದೇ ಇರುವುದು.

ಕೈಗಳಲ್ಲಿ ನೆರಿಗೆ

ಕೈಗಳಲ್ಲಿ ನೆರಿಗೆ

ಹೈಪೋಥೈರಾಯ್ಡಿಸಮ್ ನಿಂದಾಗಿ ಚರ್ಮದ ಮೇಲೆ ನೆರಿಗೆ ಹಾಗೂ ಗೆರೆಗಳು ಕಾಣಿಸಿಕೊಳ್ಳಬಹುದು. ಅದರಲ್ಲೂ ಇದು ಕೈಗಳಲ್ಲಿ ಚೆನ್ನಾಗಿ ಕಾಣಿಸುವುದು. ಥೈರಾಯ್ಡ್ ಗ್ರಂಥಿಗಳು ಕಾರ್ಯ ನಿರ್ವಹಿಸದೆ ಇರುವ ಕಾರಣದಿಂದಾಗಿ ನಿಮ್ಮ ವಯಸ್ಸು ಹೆಚ್ಚಾದಂತೆ ಕಾಣುವುದು ಮತ್ತು ನೆರಿಗೆ ಕಂಡುಬರುವುದು. ಥೈರಾಯ್ಡ್ ಗ್ರಂಥಿಗಳು ಸರಿಯಾಗಿ ಕಾರ್ಯನಿರ್ವಹಿಸದೆ ಇರುವಾಗ ನೆರಿಗೆಗಳು ಕಾಣಿಸಿಕೊಳ್ಳಲು ಒಣಚರ್ಮವು ಪ್ರಮುಖ ಕಾರಣವಾಗಿದೆ.

Most Read: ಸಕ್ಕರೆ ಬಾಯಿಗೆ ಸಿಹಿ ಮಾತ್ರವಲ್ಲ, ಡ್ಯಾಂಡ್ರಫ್ ಕೂಡ ನಿವಾರಿಸುವುದು!

ಹಳದಿ ಚರ್ಮ

ಹಳದಿ ಚರ್ಮ

ಹೈಪೋಥೈರಾಯ್ಡಿಸಮ್ ನಿಂದಾಗಿ ಚರ್ಮವು ತೆಳು ಹಾಗೂ ಹಳದಿಯಾಗಬಹುದು. ಕೆಲವೊಂದು ಸಲ ಚರ್ಮದ ಬಣ್ಣವು ಕಿತ್ತಳೆ ಬಣ್ಣಕ್ಕೆ ತಿರುಗಬಹುದು. ಥೈರಾಯ್ಡ್ ಹಾರ್ಮೋನುಗಳು ಕುಂದಿರುವ ಕಾರಣದಿಂದಾಗಿ ಬಣ್ಣ ಮಾಸುವುದು. ಚರ್ಮವು ಕೆಂಪು ಹಾಗು ಪದರ ಎದ್ದುಬಂದಂತೆ ಕಾಣಬಹುದು. ಕೆಲವೊಂದು ಸಲ ಇದು ತುಂಬಾ ಕಿರಿಕಿರಿ ಮತ್ತು ತುರಿಕೆ ಉಂಟು ಮಾಡಬಹುದು. ಅಂಗೈಯ ಭಾಗದಲ್ಲಿ ಬಣ್ಣ ಮಾಸಿರುವುದು ಕಂಡುಬರುವುದು.

ಉಗುರು ಮತ್ತು ಉಗುರಿನ ಹಾಸಿಗೆ ಹಳದಿಯಾಗುವುದು

ಉಗುರು ಮತ್ತು ಉಗುರಿನ ಹಾಸಿಗೆ ಹಳದಿಯಾಗುವುದು

ಚರ್ಮವು ಬಣ್ಣ ಮಾಸುವುದು ಮಾತ್ರವಲ್ಲದೆ, ಹೈಪೋಥೈರಾಯ್ಡಿಸಮ್ ನಿಂದ ಉಗುರು ಮತ್ತು ಉಗುರಿನ ಹಾಸಿಗೆಯು ಹಳದಿಯಾಗುವುದು. ತುದಿಗಳಿಗೆ ಸರಿಯಾಗಿ ರಕ್ತಸಂಚಾರವಾಗದೆ ಇರುವುದು ಕೂಡ ಉಗುರು ಮತ್ತು ಉಗುರಿನ ಹಾಸಿಗೆ ಹಳದಿಯಾಗಲು ಕಾರಣವಾಗಿದೆ.

ಉಗುರು ತುಂಡಾಗುವುದು

ಉಗುರು ತುಂಡಾಗುವುದು

ಅತಿಯಾಗಿ ಒಣಗಿರುವಂತಹ ಉಗುರುಗಳು ಬೇಗನೆ ತುಂಡಾಗುವುದು. ಒಬ್ಬ ವ್ಯಕ್ತಿ ಹೈಪೋಥೈರಾಯ್ಡಿಸಮ್ ಇದ್ದರೆ, ಉಗುರುಗಳು ಬಣ್ಣ ಕಳೆದುಕೊಳ್ಳುವುದು ಮಾತ್ರವಲ್ಲದೆ ಇದು ಮೃಧುವಾಗುವುದು. ಇದು ಬೇಗನೆ ಕಿತ್ತು ಬರುವುದು. ಸಿಪ್ಪೆ ಸುಳಿದಂತೆ ಉಗುರುಗಳು ಕಂಡುಬರುವುದು. ಉಗುರಿನ ತುದಿಗಳಿಗೆ ಸರಿಯಾಗಿ ರಕ್ತ ಪೂರೈಕೆಯಾಗದೆ ಇರುವುದು ಕೂಡ ಇದಕ್ಕೆ ಕಾರಣವಾಗಿದೆ. ಇದರಿಂದ ಕೆಲವೊಮ್ಮೆ ಇಡೀ ಉಗುರು ಕಿತ್ತು ಬರಬಹುದು.

ಒನಿಕೊಮೈಕೋಸಿಸ್

ಒನಿಕೊಮೈಕೋಸಿಸ್

ಕೈಗಳು ಮತ್ತು ಕಾಲುಗಳಿಗೆ ಸರಿಯಾಗಿ ರಕ್ತಸಂಚಾರವಾಗದೆ ಇರುವುದು ಉಗುರುಗಳು ಕೆಡಲು ಪ್ರಮುಖ ಕಾರಣವಾಗಿದೆ. ಇದರಿಂದಾಗಿ ಉಗುರುಗಳು ಶಿಲೀಂಧ್ರ ಸೋಂಕಿಗೆ ಬೇಗನೆ ಗುರಿಯಾಗುವುದು. ಈ ಕಾಯಿಲೆಯನ್ನು ಒನಿಕೊಮೈಕೋಸಿಸ್ ಎಂದು ಕರೆಯಲಾಗುತ್ತದೆ. ಕಾಲಿನ ಉಗುರುಗಳು ಈ ಸೋಂಕಿಗೆ ಹೆಚ್ಚು ಬಲಿಯಾಗುವುದು. ಈ ಪರಿಸ್ಥಿತಿಯನ್ನು ಉಗುರಿನ ಹಾಸಿಗೆಯ ಹೈಪರ್ಕೆರಾಟೊಸಿಸ್ ಎಂದು ಕರೆಯಲಾಗುತ್ತದೆ. ಉಗುರಿನ ಹಾಸಿಗೆಯಿಂದ ಉಗುರಿನ ಪ್ಲೇಟ್ ಎದ್ದು ಬರುವುದನ್ನು ಹೀಗೆನ್ನಲಾಗುವುದು. ಇದು ಉಗುರಿನ ಪ್ಲೇಟ್ ನ್ನು ಹಳದಿಯಾಗಿಸುವುದು. ಹೈಪೋಥೈರಾಯ್ಡಿಸಮ್ ಲಕ್ಷಣಗಳು ಕಂಡುಬಂದರೆ ಆಗ ನೀವು ಹೋಗಿ ವೈದ್ಯರಿಂದ ತಪಾಸಣೆ ಮಾಡಿಸಿಕೊಳ್ಳಿ. ಆರಂಭದಲ್ಲೇ ಸರಿಯಾದ ಚಿಕಿತ್ಸೆ ಸಿಕ್ಕಿದರೆ ತುಂಬಾ ಪರಿಣಾಮಕಾರಿಯಾಗಿರುವುದು. ಥೈರಾಯ್ಡ್ ಗ್ರಂಥಿಗಳು ಸರಿಯಾಗಿ ಕಾರ್ಯನಿರ್ವಹಿಸದೆ ಕಾಣಿಸಿಕೊಳ್ಳಲು ಲಕ್ಷಣಗಳು ಕೆಟ್ಟದಾಗುವ ಮೊದಲು ಅದನ್ನು ನಿಯಂತ್ರಿಸಬೇಕು. ಚಿಕಿತ್ಸೆ ವೇಳೆ ವೈದ್ಯರು ಥೈರಾಯ್ಡ್ ಹಾರ್ಮೋನು ಮಾತ್ರೆಗಳನ್ನು ನೀಡುವರು. ಈ ಮಾತ್ರೆಗಳು ಸರಿಯಾದ ಪ್ರಮಾಣದಲ್ಲಿ ಸೇವಿಸಬೇಕು. ಅತಿಯಾದರೆ ಅದು ಹೈಪರ್ ಥೈರಾಯ್ಡಿಸಮ್ ಕಾಣಿಸಿಕೊಳ್ಳಬಹುದು.

English summary

How Your Hands Can Indicate Thyroid Problem?

Hypothyroidism is sometimes caused by Hashimoto's disease or a surgery is performed to remove the thyroid gland. The general symptoms of hypothyroidism are getting tired often, constipation, feeling depressed, hair loss etc. Dry skin is also one of the reasons why wrinkles tend to become excessively visible when one has an underactive thyroid gland.
X
Desktop Bottom Promotion