Just In
Don't Miss
- News
ಮಹಿಳೆಯರ ಸುರಕ್ಷತೆಗೆ ಆಂಧ್ರ ಸರ್ಕಾರದ ದಿಟ್ಟ ಕ್ರಮ
- Movies
ಬಿಗ್ ಬಾಸ್ ಶೋನಿಂದ ಹೊರಬಂದ ಸಲ್ಮಾನ್ ಖಾನ್, ಹೊಸ ನಿರೂಪಕಿ ಎಂಟ್ರಿ
- Sports
ಪಬ್ಜಿ ಅಪ್ಡೇಟ್: ಪ್ರಮುಖ ಬದಲಾವಣೆಯೊಂದಿಗೆ ''ಬ್ಯಾಟಲ್ ಗ್ರೌಂಡ್''
- Finance
ಚಿನ್ನ ಖರೀದಿಸುವ ಮುನ್ನ ಚಿನ್ನದ ಶುದ್ಧತೆಯನ್ನು ಪರಿಶೀಲಿಸುವುದು ಹೇಗೆ?
- Technology
ಗೂಗಲ್ ಮ್ಯಾಪ್ಸ್ನ ಹಿಸ್ಟರಿ ಸ್ವಯಂಚಾಲಿತ ಡಿಲೀಟ್ ಹೇಗೆ..?
- Automobiles
ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಹುನೀರಿಕ್ಷಿತ ಟಾಟಾ ಆಲ್ಟ್ರೊಜ್ ಕಾರು
- Education
ಸ್ಪೋರ್ಟ್ಸ್ ಅಥಾರಿಟಿಯಲ್ಲಿ 130 ಯಂಗ್ ಪ್ರೊಫೆಷನಲ್ ಹುದ್ದೆಗಳ ನೇಮಕಾತಿ.. ತಿಂಗಳಿಗೆ 40,000/-ರೂ ವೇತನ
- Travel
ದಕ್ಷಿಣ ಭಾರತಕ್ಕೆ ಪ್ರವಾಸ ಹೋದ್ರೆ ಈ ಅತ್ಯುತ್ತಮ ಪಾನೀಯಗಳು, ತಿಂಡಿಗಳು ಮತ್ತು ಭಕ್ಷ್ಯಗಳನ್ನೂ ಟ್ರೈ ಮಾಡಿ!
ಖತರ್ನಾಕ್ 'ಕ್ಲಸ್ಟರ್ ತಲೆನೋವನ್ನು' ಮಾತ್ರೆಗಳಿಲ್ಲದೆ ನಿಯಂತ್ರಿಸಬಹುದು!
ಕ್ಲಸ್ಟರ್ ತಲೆನೋವು ತುಂಬಾ ನೋವಿನ ಅನುಭವ ನೀಡುವುದು ಮತ್ತು ಇದು ಪದೇ ಪದೇ ಕಾಡುತ್ತಲಿರುವುದು. ಇದರಿಂದ ತೀವ್ರ ನೋವು, ತಲೆಯ ಒಂದು ಭಾಗದಲ್ಲಿ ನೋವು ಅಥವಾ ಕಣ್ಣಿನ ಹಿಂಬದಿಯಲ್ಲಿ ನೋವು ಕಾಣಿಸಿಕೊಳ್ಳಬಹುದು. ಈ ಲೇಖನದಲ್ಲಿ ಯಾವುದೇ ಔಷಧಿಯಿಲ್ಲದೆ ಮನೆಮದ್ದಿನಿಂದ ಪರಿಣಾಮಕಾರಿಯಾಗಿ ಈ ತಲೆನೋವನ್ನು ನಿವಾರಣೆ ಮಾಡುವುದು ಹೇಗೆ ಎಂದು ತಿಳಿಯುವ.20-50ರ ಹರೆಯದ ಪುರುಷರಲ್ಲಿ ಈ ಸಮಸ್ಯೆಯು ಸಾಮಾನ್ಯವಾಗಿ ಕಾಣಿಸುವುದು. ಆದರೆ ಇದು ಯಾರಿಗೂ ಬರಬಹುದು. ಇದಕ್ಕೆ ಸಾಮಾನ್ಯ ಕಾರಣವೆಂದರೆ ಅದು ಧೂಮಪಾನ, ಮದ್ಯಪಾನ ಮತ್ತು ಒತ್ತಡ.

ಕ್ಲಸ್ಟರ್ ತಲೆನೋವಿಗೆ ಪ್ರಮುಖ ಕಾರಣವೇನು?
ಕ್ಲಸ್ಟರ್ ತಲೆನೋವಿಗೆ ಸ್ಪಷ್ಟ ಕಾರಣಗಳು ತಿಳಿದುಬಂದಿಲ್ಲ. ಆದರೆ ಕ್ಲಸ್ಟರ್ ತಲೆನೋವಿನ ವೇಳೆ ಹೈಪೋಥಾಲಮಸ್ ಚಟುವಟಿಕೆ ಅಥವಾ ಉತ್ತೇಜನಗೊಂಡು ಹೀಗೆ ಆಗುವುದು ಎಂದು ಅಧ್ಯಯನಗಳು ಹೇಳಿವೆ. ಕ್ಲಸ್ಟರ್ ತಲೆನೋವಿನಿಂದಗಿ ಉರಿ, ನೋವು ಅಥವಾ ಕಣ್ಣರೆಪ್ಪೆಗಳು ಬೀಳುವುದು, ಅತಿಯಾಗಿ ಕಣ್ಣೀರು, ಕಣ್ಣು ಕೆಂಪಾಗುವುದು, ಮುಖ ಊದಿಕೊಳ್ಳುವುದು ಮತ್ತು ಮೂಗುಕಟ್ಟುವಿಕೆ ಇದರ ಪ್ರಮುಖ ಲಕ್ಷಗಳಾಗಿವೆ.
ಕ್ಲಸ್ಟರ್ ತಲೆನೋವು ಅಪಾಯಕಾರಿಯೇನಲ್ಲ. ಆದರೆ ಇದನ್ನು ಮನೆಮದ್ದಿನಲ್ಲೇ ನಿವಾರಣೆ ಮಾಡಬಹುದು. ಇದು ಹೇಗೆ ಎಂದು ತಿಳಿಯಿರಿ.

ಕ್ಯಾಪ್ಸಿಸಿನ್ ಮೂಗಿನ ಸ್ಪ್ರೇ
ತುಂಬಾ ಖಾರವಾಗಿರುವಂತಹ ಮೆಣಸಿನಲ್ಲಿ ಕ್ಯಾಪ್ಸಿಸಿನ್ ಅಂಶವಿದ್ದು, ಇದು ಕ್ಲಸ್ಟರ್ ತಲೆನೋವನ್ನು ತಗ್ಗಿಸುವುದು ಎಂದು ಅಧ್ಯಯನಗಳು ಹೇಳಿವೆ. ಇದರಿಂದ ಕ್ಯಾಪ್ಸಿಸಿನ್ ಮೂಗಿನ ಸ್ಪ್ರೇ ಕಪಾಲ ಸಂಬಂಧ ನರವನ್ನು ದುರ್ಬಲಗೊಳಿಸಿ ಮತ್ತು ಕ್ಲಸ್ಟರ್ ನೋವಿನಲ್ಲಿ ಇರುವಂತಹ ರಾಸಾಯನಿಕದ ಮಟ್ಟವನ್ನು ಕಡಿಮೆ ಮಾಡಿಕೊಡುವುದು.
Most Read: ಸೆಪ್ಟೆಂಬರ್ 24 ರಿಂದ 30 ವರೆಗಿನ ವಾರ ಭವಿಷ್ಯ

ಮೆಗ್ನಿಶಿಯಂ ಅಧಿಕವಾಗಿರುವ ಆಹಾರಗಳು
ನಿಮಗೆ ಪದೇ ಪದೇ ಕ್ಲಸ್ಟರ್ ತಲೆನೋವು ಕಾಡುತ್ತಲಿದ್ದರೆ, ಆಗ ನಿಮ್ಮ ದೇಹದಲ್ಲಿ ಮೆಗ್ನಿಶಿಯಂ ಮಟ್ಟವು ಕಡಿಮೆ ಇದೆ ಎಂದು ತಿಳಿದುಕೊಳ್ಳಿ. ಮೆಗ್ನಿಶಿಯಂ ಅಧಿಕವಾಗಿರುವಂತಹ ಆಹಾರ ಸೇವನೆ ಮಾಡಿದರೆ ಒಳ್ಳೆಯದು. ಬಾದಾಮಿ, ಅಂಜೂರ ಮತ್ತು ಅವಕಾಡೊಗಳನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿ. ಮೆಗ್ನಿಶಿಯಂ ಸಪ್ಲಿಮೆಂಟ್ ಸೇವನೆ ಮಾಡಬಹುದು.

ಮೆಲಟೊನಿನ್
ಮೆಲಟೊನಿನ್ ಹಾರ್ಮೊನು ನಿಮ್ಮ ನಿದ್ರೆಯ ಮಾದರಿಯನ್ನು ನಿರ್ಧರಿಸುವುದು. ನಿಮ್ಮ ದೇಹದಲ್ಲಿ ಮೆಲಟೊನಿನ್ ಮಟ್ಟವು ಕಡಿಮೆ ಇದ್ದರೆ ಆಗ ನಿಮಗೆ ಕ್ಲಸ್ಟರ್ ತಲೆನೋವು ಕಾಣಿಸಿಕೊಳ್ಳಬಹುದು. ಕ್ಲಸ್ಟರ್ ತಲೆನೋವು ಕಡಿಮೆ ಮಾಡಿಕೊಳ್ಳಲು ಮೆಲಟೊನಿನ್ ಸಪ್ಲಿಮೆಂಟ್ ಸೇವನೆ ಮಾಡಿದರೆ ಪರಿಣಾಮಕಾರಿ ಎಂದು ವರದಿಗಳು ಹೇಳಿವೆ. ನಿದ್ರಿಸುವ ಎರಡು ಗಂಟೆಗೆ ಮೊದಲು ಇದನ್ನು ಸೇವಿಸಿ. ಮೆಲಟೊನಿನ್ ಸೇವನೆಗೆ ಮೊದಲು ನಿಮ್ಮ ವೈದ್ಯರ ಸಲಹೆ ಪಡೆಯಿರಿ.

ಶುಂಠಿ ಚಹಾ
ಶುಂಠಿಯಲ್ಲಿ ಜೈವಿಕ ಕ್ರಿಯೆಯ ಅಂಶವಾಗಿರುವಂತಹ ಜಿಂಜರೊಲ್ ಇದ್ದು, ಇದು ಚಿಕಿತ್ಸಕ ಗುಣವನ್ನು ಹೊಂದಿದೆ. ಇದರಿಂದಾಗಿ ಶುಂಠಿಯು ಅಧಿಕ ಆ್ಯಂಟಿಆಕ್ಸಿಡೆಂಟ್ ಮತ್ತು ಉರಿಯೂತ ಶಮನಕಾರಿ ಗುಣ ಹೊಂದಿದೆ. ಇದು ಕ್ಲಸ್ಟರ್ ತಲೆನೋವು ನಿವಾರಣೆ ಮಾಡುವುದು. ಶುಂಠಿ ಚಹಾ ಕುಡಿಯುವುದರಿಂದ ಕ್ಲಸ್ಟರ್ ತಲೆನೋವಿನ ಲಕ್ಷಣ ನಿವಾರಣೆ ಮಾಡಬಹುದು. ಇದರಿಂದ ದಿನದಲ್ಲಿ ಎರಡು ಸಲ ಶುಂಠಿ ಚಹಾ ಕುಡಿಯಿರಿ.

ವಿಟಮಿನ್ ಬಿ2
ವಿಟಮಿನ್ ಬಿ2 ಕ್ಲಸ್ಟರ್ ತಲೆನೋವಿನ ತೀವ್ರತೆ ಮತ್ತು ಆವರ್ತನವನ್ನು ಕಡಿಮೆ ಮಾಡಬಹುದು. 2004ರಲ್ಲಿ ಯುರೋಪಿಯನ್ ಜರ್ನಲ್ ಆಫ್ ನ್ಯೂರಾಲಜಿಯಲ್ಲಿ ಪ್ರಕಟಗೊಂಡಿರುವಂತಹ ವರದಿಯ ಪ್ರಕಾರ, ದಿನಕ್ಕೆ 400 ಮಿ.ಗ್ರಾಂ. ವಿಟಮಿನ್ ಬಿ2 ಸೇವನೆ ಮಾಡಿರುವಂತಹವರಲ್ಲಿ ಕ್ಲಸ್ಟರ್ ತಲೆನೋವು ಕಡಿಮೆ ಕಾಣಿಸಿಕೊಂಡಿದೆ. ವಿಟಮಿನ್ ಬಿ2 ಹೆಚ್ಚಾಗಿರುವಂತಹ ಆಹಾರ ಸೇವನೆ ಮಾಡಿ. ವಿಟಮಿನ್ ಕೊರತೆಯಿಂದಾಗಿ ನರದೌರ್ಬಲ ಮತ್ತು ಉರಿಯೂತ ಉಂಟಾಗಿ ಕ್ಲಸ್ಟರ್ ತಲೆನೋವು ಕಾಣಿಸಬಹುದು.
Most Read: ಈ 6 ರಾಶಿಯವರು, ಚಿಂತನೆ ನಡೆಸದೆಯೇ ಮಾತನಾಡಿ-ಇತರರಿಗೆ ನೋವು ಮಾಡಿಬಿಡುತ್ತಾರೆ!

ದೀರ್ಘ ಉಸಿರಾಟ ವ್ಯಾಯಾಮ
ಕ್ಲಸ್ಟರ್ ತಲೆನೋವಿನ ವೇಳೆ ನೀವು ದೀರ್ಘವಾಗಿ ಉಸಿರಾಡುವುದರಿಂದ ಮೆದುಳಿಗೆ ಹೆಚ್ಚಿನ ಗಾಳಿಯು ಹೋಗಿ ನೋವು ಕಡಿಮೆ ಮಾಡುವುದು. ಕ್ಲಸ್ಟರ್ ತಲೆನೋವು ಕಾಣಿಸಿಕೊಂಡಾಗ ನೀವು ದೀರ್ಘವಾಗಿ ಉಸಿರಾಡುವಂತಹ ವ್ಯಾಯಾಮ ಮಾಡಿ.

ಸಾರಭೂತ ತೈಲಗಳು
ಕೆಲವೊಂದು ಸಸ್ಯಗಳಿಂದ ಮಾಡಿರುವಂತಹ ಸಾರಭೂತ ತೈಲದಲ್ಲಿ ಒಳ್ಳೆಯ ಸೂವಾಸನೆಯಿರುವುದು. ಇದು ಕ್ಲಸ್ಟರ್ ತಲೆನೋವು ಕಡಿಮೆ ಮಾಡುವುದು. ಸಾರಭೂತ ತೈಲದಲ್ಲಿ ಚಿಕಿತ್ಸಕ ಗುಣವಿದೆ. ಇದು ನರಗಳಿಗೆ ಶಮನ ನೀಡಿ ದೇಹವನ್ನು ಶಾಂತವಾಗಿಡುವುದು. ಪುದೀನಾ ಮತ್ತು ಲ್ಯಾವೆಂಡರ್ ಸಾರಭೂತ ತೈಲವು ಕ್ಲಸ್ಟರ್ ತಲೆನೋವನ್ನು ನೈಸರ್ಗಿಕವಾಗಿ ನಿವಾರಣೆ ಮಾಡುವುದು.

ಕುಡ್ಜು ಸಾರ
ಕುಡ್ಜು ಸಾರವು ಸಸ್ಯಜನ್ಯವಾಗಿರುವಂತಹ ಕುಡ್ಜುವಿನಿಂದ ಬಂದಿರುವುದು. ಇದು ಕ್ಲಸ್ಟರ್ ತಲೆನೋವಿಗೆ ತುಂಬಾ ಪರಿಣಾಮಕಾರಿ. 2009ರಲ್ಲಿ ನಡೆದಿರುವ ಅಧ್ಯಯನ ವರದಿ ಪ್ರಕಾರ, ಕುಡ್ಜು ಸಾರವನ್ನು ಬಳಸಿಕೊಂಡಿರುವವರಿಗೆ ಕ್ಲಸ್ಟರ್ ತಲೆನೋವು ಕಡಿಮೆ ಮಾಡಲು ನೆರವಾಗಿದೆ. ಇದು ತಲೆನೋವಿನ ಅವಧಿ ಮತ್ತು ತೀವ್ರತೆ ನಿವಾರಣೆ ಮಾಡಿದೆ.