For Quick Alerts
ALLOW NOTIFICATIONS  
For Daily Alerts

ಅಯ್ಯೋ ಆ ಭಾಗದಲ್ಲಿಯೂ ಮೊಡವೆಗಳ ಸಮಸ್ಯೆ!! ನಿವಾರಣೆ ಹೇಗೆ?

By Hemanth
|

ಪಾದದಡಿ ಹಾಗೂ ಅಂಗೈ ಬಿಟ್ಟು ದೇಹದ ಪ್ರತಿಯೊಂದು ಭಾಗದಲೂ ಮೊಡವೆಗಳು ಮೂಡುತ್ತವೆ. ಅದರಲ್ಲೂ ಪ್ರಮುಖವಾಗಿ ಕಾಣುವುದು ಮುಖದ ಮೇಲಿನ ಮೊಡವೆಗಳು ಮಾತ್ರ. ಬೆನ್ನು ಹಾಗೂ ದೇಹದ ಇನ್ನಿತರ ಭಾಗದಲ್ಲೂ ಇದು ಮೂಡುವುದು. ಇದರಲ್ಲಿ ಪ್ರಮುಖವಾಗಿ ಜನನೇಂದ್ರಿಯದ ಭಾಗದಲ್ಲಿ ಮೊಡವೆ ಮೂಡುತ್ತದೆ. ಇಂತಹ ಮೊಡವೆ ತುಂಬಾ ಕಿರಿಕಿರಿ ಉಂಟುಮಾಡುವುದು. ಅದರಲ್ಲೂ ಯೋನಿಯ ಭಾಗದಲ್ಲಿ ಮೂಡುವಂತಹ ಮೊಡವೆಗಳ ಬಗ್ಗೆ ಕೆಲವೊಮ್ಮೆ ಗಾಬರಿ ಕೂಡ ಉಂಟಾಗುವುದು.

ಇದರ ಕಾರಣ ತಿಳಿಯಲು ಗೂಗಲ್ ನಲ್ಲಿ ಎಲ್ಲವರನ್ನು ಸರ್ಚ್ ಮಾಡಿರಬಹುದು. ಆದರೆ ಯೋನಿಯ ಹೊರಪದರವು ಕಲ್ಮಷ ಹಾಗೂ ಬ್ಯಾಕ್ಟೀರಿಯಾದಿಂದ ತುಂಬಿದಾಗ ಮೊಡವೆಗಳು ಕಂಡುಬರುವುದು. ಇಂತಹ ಭಾಗದಲ್ಲಿ ಮೊಡವೆ ಮೂಡಿದರೆ ಅದನ್ನು ವೈದ್ಯರಿಗೆ ತೋರಿಸುವುದು ಕೂಡ ತುಂಬಾ ಮುಜುಗರದ ಸಂಗತಿ. ಮೆಡಿಕಲ್ ಗೆ ಹೋಗಿ ಇಂತಹ ಸ್ಥಳದಲ್ಲಿ ಆಗಿರುವ ಮೊಡವೆಗ ಕ್ರೀಮ್ ಕೊಡಿ ಎನ್ನಲು ಆಗಲ್ಲ. ಆದರೆ ಈ ಲೇಖನದಲ್ಲಿ ಮಹಿಳೆಯರ ಗುಪ್ತಾಂಗದಲ್ಲಿ ಆಗುವಂತಹ ಮೊಡವೆಗಳ ಬಗ್ಗೆ ತಜ್ಞ ವೈದ್ಯರಾಗಿರುವ ಕೈರ್ನ್ ಡನ್ಸ್ಟನ್ ಅವರು ವಿವರವಾಗಿ ಎಲ್ಲವನ್ನು ಹೇಳಿದ್ದಾರೆ. ಅದನ್ನು ನೀವು ತಿಳಿಯಿರಿ....

ಹಾರ್ಮೋನು ಅಸಮತೋಲನ

ಹಾರ್ಮೋನು ಅಸಮತೋಲನ

ಮುಖ ಹಾಗೂ ಗುಪ್ತಾಂಗದ ಭಾಗದಲ್ಲಿನ ಚರ್ಮವು ಹಾರ್ಮೋನು ಅಸಮತೋಲನಕ್ಕೆ ಒಳಗಾಗಿ, ಅತಿಯಾದ ಬ್ಯಾಕ್ಟೀರಿಯಾದಿಂದ ಮೊಡವೆಗಳು ಮೂಡಬಹುದು. ಇದನ್ನು ಯೋನಿ ಮೊಡವೆಯೆಂದು ಕರೆಯಲಾಗುತ್ತದೆ. ಇದರಲ್ಲಿ ಹೆಚ್ಚು ನೀರಿನಾಂಶ ಅಥವಾ ಕೀವು ಇರುವುದು. ಕೈರ್ನ್ ಹೇಳುವ ಪ್ರಕಾರ, ನಿಮ್ಮ ಪುರುಷ ಹಾಗೂ ಮಹಿಳಾ ಹಾರ್ಮೋನು ಸಮತೋಲನದಲ್ಲಿದೆಯಾ ಎಂದು ತಿಳಿಯಿರಿ. ಟೆಸ್ಟೋಸ್ಟೆರಾನ್ ಅಥವಾ ಈಸ್ಟ್ರೋಜನ್ ಮಟ್ಟವು ಅತಿಯಾಗಿರುವುದು ಯೋನಿಯಲ್ಲಿ ಮೊಡವೆ ಮೂಡಲು ಕಾರಣವಾಗಿದೆ. ನಿಮಗೆ ಬೇರೆ ಯಾವುದೇ ರೀತಿಯ ಸಮಸ್ಯೆಯಿದ್ದರೆ ಆಗ ನೀವು ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆಯಿರಿ. ಮನೆಯಲ್ಲಿ ಹಾರ್ಮೋನು ಸಮತೋಲನಕ್ಕೆ ತರಬೇಕಾದರೆ ನೀವು ಸಮತೋಲಿತ ಆಹಾರ ಸೇವನೆ ಮಾಡಬೇಕು. ಇದರಲ್ಲಿ ಪ್ರಮುಖವಾಗಿ ಅಗಸೆ ಬೀಜ, ತರಕಾರಿಗಳು, ಒಳ್ಳೆಯ ಕೊಬ್ಬು ಮತ್ತು ಸಾವಯವ ಜಿಎಂಒ ಸೋಯಾ ಸೇವಿಸಬೇಕು. ಹಾರ್ಮೋನುಗಳು ಸಮತೋಲನದಲ್ಲಿದ್ದರು ನೀವು ವೈದ್ಯರ ಭೇಟಿಯಾಗಿ.

ಕೂದಲು ಹೊರಗಡೆ ಬೆಳೆಯಲು ಬಿಡಿ

ಕೂದಲು ಹೊರಗಡೆ ಬೆಳೆಯಲು ಬಿಡಿ

ಗುಪ್ತಾಂಗದ ಭಾಗವನ್ನು ನೀವು ತುಂಬಾ ಸ್ವಚ್ಛವಾಗಿಟ್ಟುಕೊಳ್ಳಲು ಬಯಸುವಿರಿ. ಇದಕ್ಕಾಗಿ ನೀವು ಕೂದಲು ತೆಗೆಯುತ್ತೀರಿ. ಆದರೆ ಈ ವೇಳೆ ಕೆಲವು ಕೂದಲು ಒಳಗಡೆಯೇ ಬೆಳೆಯಲು ಆರಂಭಿಸುತ್ತದೆ. ವ್ಯಾಕ್ಸಿಂಗ್ ಅಥವಾ ಶೇವಿಂಗ್ ನಿಂದ ಕೂದಲಿನ ಕೋಶಗಳು ಉರಿಯೂತಕ್ಕೆ ಒಳಗಾಗುವುದು. ಕೂದಲು ಒಳಗಡೆ ಉಳಿಯುವ ಕಾರಣದಿಂದಾಗಿ ಅದು ಮೊಡವೆ ಉಂಟು ಮಾಡುವುದು. ಇದರಿಂದ ಒಳಗಡೆ ಇರುವಂತಹ ಕೂದಲು ಬೆಳೆಯಲು ಬಿಡಿ ಅಥವಾ ಅದನ್ನು ಜಾಗೃತೆಯಿಂದ ತೆಗೆದು ಸೋಂಕು ಉಂಟಾಗದಂತೆ ನೋಡಿ.

ಬಿಗಿಯಾದ ಒಳ ಉಡುಪು ಧರಿಸಬೇಡಿ

ಬಿಗಿಯಾದ ಒಳ ಉಡುಪು ಧರಿಸಬೇಡಿ

ಬಿಗಿಯಾದ ಒಳ ಉಡುಪುಗಳು ಗುಪ್ತಾಂಗದ ಒಳ್ಳೆಯ ಸಂಗಾತಿ ಎಂದು ನಾವು ತಿಳಿದುಕೊಂಡಿದೆ. ಆದರೆ ಇದು ಸರಿಯಲ್ಲ. ಚರ್ಮ ತಜ್ಞರ ಪ್ರಕಾರ ಪ್ರಕಾರ ಸಡಿಲವಾಗಿರುವಂತಹ ಒಳ ಉಡುಪು ಮತ್ತು ರಾತ್ರಿ ವೇಳೆ ಇದನ್ನು ಧರಿಸದೆ ಇರುವುದರಿಂದ ಆ ಭಾಗದ ಚರ್ಮವು ಸರಿಯಾಗಿ ಉಸಿರಾಡಲು ಸಾಧ್ಯವಾಗುವುದು. ಇದರಿಂದ ಬ್ಯಾಕ್ಟೀರಿಯಾವು ಸಾಯುವುದು. ಬ್ಯಾಕ್ಟೀರಿಯಾಗಳಿಗೆ ತೇವಾಂಶ ಮತ್ತು ಕತ್ತಲು ಬೇಕಾಗಿದೆ. ನಿಮ್ಮ ಯೋಗದ ಪ್ಯಾಂಟ್ ಗಳಿಗೆ ಕೂಡ ಅಂತಿಮ ವಿದಾಯ ಹೇಳಬೇಕಾಗಬಹುದು.

ಸ್ವಚ್ಛವಾಗಿಡಲು ಯಾವಾಗಲೂ ಪ್ರಯತ್ನಿಸಿ

ಸ್ವಚ್ಛವಾಗಿಡಲು ಯಾವಾಗಲೂ ಪ್ರಯತ್ನಿಸಿ

ನೀವು ಪ್ರತಿನಿತ್ಯ ಸ್ನಾನ ಮಾಡುವಿರಿ. ಆದರೆ ಕೆಲವೊಂದು ಭಾಗಗಳಿಗೆ ಯಾವ ರೀತಿಯ ಸೋಪ್ ಬಳಸುತ್ತೀರಿ ಎನ್ನುವುದು ತುಂಬಾ ಮುಖ್ಯವಾಗಿರುವುದು. ಸರಿಯಾಗಿ ಉಜ್ಜಿಕೊಳ್ಳುತ್ತೀರಾ ಅಥವಾ ಇಲ್ಲವಾ? ನಿಮ್ಮ ಗುಪ್ತಾಂಗಗಳಿಗೆ ಬಾಡಿ ವಾಶ್ ಬಳಸುವಾಗ ಅದರ ಪಿಎಚ್ ಮಟ್ಟವು 8ರಲ್ಲಿದೆಯಾ? ಇದರಿಂದಾಗಿ ನಿಮ್ಮ ಗುಪ್ತಾಂಗದ ಸಮತೋಲನ ಕಳೆದುಕೊಳ್ಳಬಹುದು. ಇದರಿಂದಾಗಿ ಕಿರಿಕಿರಿ, ವಾಸನೆ ಮತ್ತು ತುರಿಕೆ ಉಂಟಾಗಬಹುದು. ಆರೋಗ್ಯಕರ ಗುಪ್ತಾಂಗಕ್ಕೆ ಪಿಎಚ್ ಮಟ್ಟವು 3.5ರಿಂದ 4.5ರಲ್ಲಿರಬೇಕು. ಈ ಹಂತದಲ್ಲಿರುವಂತಹ ಕ್ರೀಮ್ ಗಳನ್ನು ಬಳಸಿಕೊಳ್ಳಿ. ಬ್ಯಾಕ್ಟೀರಿಯಾ ವಿರೋಧಿಯಾಗಿರುವಂತಹ ಸೋಪ್ ಗಳನ್ನು ಬಳಸಿಕೊಳ್ಳಿ. ನೈಸರ್ಗಿಕವಾದ ಅಂಶಗಳನ್ನು ಹೊಂದಿರುವಂತಹ ಒರೆಗಾನೊ ಅಥವಾ ಚಹಾ ಮರದ ಎಣ್ಣೆಯಿರುವ ಸೋಪ್ ಬಳಸಿ ಎಂದು ಚರ್ಮ ತಜ್ಞರು ತಿಳಿಸುತ್ತಾರೆ

ರಾತ್ರಿ ವೇಳೆ ಒಳ ಉಡುಪು ಧರಿಸಬೇಡಿ

ರಾತ್ರಿ ವೇಳೆ ಒಳ ಉಡುಪು ಧರಿಸಬೇಡಿ

ವೈಜ್ಞಾನಿಕವಾಗಿಯೂ ಇದಕ್ಕೆ ನಿಮಗೆ ಪ್ರಶಂಸೆ ಸಿಗುವುದು. ಆದರೆ ಇದನ್ನು ನೀವು ಗಂಭೀರವಾಗಿ ಪರಿಗಣಿಸಬೇಕು. ದೇಹದಿಂದ ಬರುವಂತಹ ಬೆವರಿನಿಂದಾಗಿ ಮೊಡವೆಗಳು ಮೂಡಬಹುದು. ಅದರಲ್ಲೂ ರಾತ್ರಿ ವೇಳೆ ಬೆವರುವುದು ಹೆಚ್ಚು. ಇದರಿಂದ ಸಡಿಲವಾಗಿರುವಂತಹ ಒಳ ಉಡುಪು ಅಥವಾ ಒಳ ಉಡುಪು ಧರಿಸದೆ ನಿದ್ರಿಸಿದರೆ ಅದರಿಂದ ಚರ್ಮವು ಸರಿಯಾಗಿ ಉಸಿರಾಡಲು ಸಾಧ್ಯವಾಗುವುದು ಎಂದು ಚರ್ಮ ತಜ್ಞರು ಹೇಳುತ್ತಾರೆ.

ಔಷಧಿ ಬಳಸಿ ನೋಡಿ

ಔಷಧಿ ಬಳಸಿ ನೋಡಿ

ಕೆಲವೊಂದು ಸಲ ಮನೆಮದ್ದಿನಿಂದ ಹೊರತಾಗಿಯೂ ನಾವು ಕೆಲವೊಂದು ಕ್ರೀಮ್ ಗಳನ್ನು ಬಳಸಿಕೊಳ್ಲಬೇಕಾಗುತ್ತದೆ. ಯಾಕೆಂದರೆ ಚರ್ಮದಲ್ಲಿರುವ ಮೊಡವೆಗಳನ್ನು ನಿವಾರಿಸಬೇಕಾಗುತ್ತದೆ. ಇಂತಹ ಸಮಯದಲ್ಲಿ ಮಾರುಕಟ್ಟೆಯಲ್ಲಿ ಸಿಗುವಂತಹ ಕ್ರೀಮ್ ಗಳು ತುಂಬಾ ಪರಿಣಾಮಕಾರಿಯಾಗುವುದು. ಆದರೆ ಇದನ್ನು ಗುಪ್ತಾಂಗದ ಕೂದಲು ಬರುವ ಜಾಗಕ್ಕೆ ಮಾತ್ರ ಬಳಸಿ, ಕೆಂಪು ಭಾಗಕ್ಕೆ ಬಳಸಬೇಡಿ. ಇದರಿಂದ ನಿಮಗೆ ಕಿರಿಕಿರಿಯಾಗಬಹುದು.

ಕೆಫೀನ್

ಕೆಫೀನ್

ಕೆಫೀನ್ ದೇಹದಲ್ಲಿ ಒತ್ತಡದ ಹಾರ್ಮೋನ್ ಅನ್ನು ಬಿಡುಗಡೆ ಮಾಡುತ್ತದೆ ಇದರಿಂದ ಚರ್ಮಕ್ಕೆ ಹಾನಿಯಾಗಿ ಮೊಡವೆ ಬರುವ ಸಾಧ್ಯತೆ ಇದೆ ಎನ್ನಲಾಗುತ್ತದೆ.ಕೆಫೀನ್ ನಿದ್ರೆಯನ್ನು ಕೂಡ ದೂರ ಮಾಡುತ್ತದೆ.ನಿಮಗೆ ಮೊಡವೆ ನಿವಾರಣೆ ಆಗಬೇಕೆಂದರೆ ಸರಿಯಾದ ನಿದ್ರೆಯ ಅವಶ್ಯಕತೆ ಇದೆ.ಆದ್ದರಿಂದ ಕೆಫೀನ್ ಅಂಶವಿರುವ ಪದಾರ್ಥಗಳನ್ನು ಬಳಸುವುದು ಸೂಕ್ತವಲ್ಲ.

ಜಿಡ್ಡಿನ ಆಹಾರಗಳಿಂದ ದೂರವಿರಿ

ಜಿಡ್ಡಿನ ಆಹಾರಗಳಿಂದ ದೂರವಿರಿ

ಜಿಡ್ಡಿನ ಆಹಾರಗಳು ಕೊಬ್ಬಿನ ಅಂಶವನ್ನು ಹೊಂದಿರುವ ಜಿಡ್ಡಿನ ಪದಾರ್ಥಗಳನ್ನು ತಿನ್ನುವುದರಿಂದ ಮೊಡವೆ ಹೆಚ್ಚುತ್ತದೆ.ಕೊಬ್ಬಿನ ಅಂಶ ಹೆಚ್ಚಿರುವ ಈ ರೀತಿಯ ಪದಾರ್ಥಗಳನ್ನು ತಿನ್ನುವುದರಿಂದ ದೇಹದಲ್ಲಿ ಸಕ್ಕರೆ ಅಂಶ ಹೆಚ್ಚುತ್ತದೆ ಇದರಿಂದ ಹಾರ್ಮೋನ್ ಏರುಪೇರು ಉಂಟಾಗಿ ಮೊಡವೆಗಳು ಏಳುವ ಸಾಧ್ಯತೆಯಿದೆ.ಹೆಚ್ಚು ಕೊಬ್ಬಿನಂಶ ಇರುವ ಆಹಾರ ಪದಾರ್ಥಗಳು ದೇಹದಲ್ಲಿ ರಕ್ತ ಪ್ರವಾಹ ಕಡಿಮೆ ಮಾಡಿ ಆಮ್ಲಜನಕ ಮತ್ತು ಇತರ ಪೋಷಕಾಂಶಗಳ ಸಂಚಲನವನ್ನು ನಿಧಾನಗೊಳಿಸುತ್ತದೆ.ಚರ್ಮಕ್ಕೆ ಆ ಪೋಷಕಾಂಶಗಳ ಅಗತ್ಯವಿದೆ ಆದ್ದರಿಂದ ಕೊಬ್ಬಿನಂಶ ಇರುವ ಜಿಡ್ಡಿನ ಪದಾರ್ಥಳಿಂದ ದೂರವಿರಿ

ಮಸಾಲೆಯುಕ್ತ ಪದಾರ್ಥಗಳಿಂದ ದೂರವಿರಿ

ಮಸಾಲೆಯುಕ್ತ ಪದಾರ್ಥಗಳಿಂದ ದೂರವಿರಿ

ನೀವು ಈಗಾಗಲೇ ಮೊಡವೆ ಹೊಂದಿದ್ದರೆ ಅದನ್ನು ಹೆಚ್ಚಿಸಲು ಮಸಾಲೆ ಪದಾರ್ಥಗಳು ಕಾರಣವಾಗದಿರಬಹುದು,ಆದರೆ ಮೊಡವೆ ಬರಲು ಇದು ಕೂಡ ಒಂದು ಕಾರಣ.ಏಕೆಂದರೆ ಮಸಾಲೆ ಪದಾರ್ಥಗಳು ದೇಹದ ಉಷ್ಣತೆ ಹೆಚ್ಚಿಸುತ್ತದೆ ಮತ್ತು ಚರ್ಮದ ಉರಿಯೂತಕ್ಕೆ ಕಾರಣವಾಗುತ್ತದೆ ಇದರಿಂದ ಮೊಡವೆ ಹೆಚ್ಚಬಹುದು.

English summary

How to Treat Acne in Your Private Parts

Although we can employ an entire word bank of adjectives to describe acne, prejudiced is not one of them. Unfortunately, acne doesn't discriminate on race, gender, age, or location. (Fun fact: the only places acne is not allowed to reap itself are the palms of your hands and the back of your feet). Otherwise, acne is a ruthlessly generous entity; regardless of the time on month, it will crop up like an unwanted surprise visit from your mother-in-law and ruin your day. And ifyou thought face acne and bacne were bad, think again.
X
Desktop Bottom Promotion