For Quick Alerts
ALLOW NOTIFICATIONS  
For Daily Alerts

ರಕ್ತದೊತ್ತಡ ನಿಯಂತ್ರಣದಲ್ಲಿಡುವ ಮನೆಮದ್ದುಗಳು

By Hemanth
|

ಒತ್ತಡವೆನ್ನುವುದು ಪ್ರತಿಯೊಬ್ಬರ ಜೀವನದಲ್ಲೂ ಇರುವುದು. ಒತ್ತಡವಿಲ್ಲದ ಜೀವನವಿದ್ದರೆ ಅದು ಈ ಲೋಕದಲ್ಲಿರುವ ಸುಖಿ ಜೀವನವೆನ್ನಬಹುದು. ಸಣ್ಣ ಮಕ್ಕಳಿಂದ ಹಿಡಿದು ವಯೋವೃದ್ಧರ ತನಕ ಪ್ರತಿಯೊಬ್ಬರಿಗೂ ಒತ್ತಡವಿರುವುದು. ಮಕ್ಕಳಿಗೆ ಓದುವ ಒತ್ತಡವಾದರೆ, ಹದಿಹರೆಯದವರಿಗೆ ಉದ್ಯೋಗದ ಒತ್ತಡ ಮತ್ತು ವಯೋವೃದ್ಧರಿಗೆ ಅನಾರೋಗ್ಯದ ಒತ್ತಡವಿರುವುದು. ಹಿಂದಿನ ಕಾಲದಲ್ಲಿ ಸುಮಾರು 60 ವರ್ಷ ದಾಟಿದವರಲ್ಲಿ ಕಂಡುಬರುತ್ತಿದ್ದ ರಕ್ತದೊತ್ತಡವು ಇಂದು 35-40ರ ಹರೆಯದಲ್ಲೇ ಕಂಡುಬರುತ್ತಿದೆ. ಇದಕ್ಕೆ ಕಾರಣವೇ ಒತ್ತಡ.

ಅಧಿಕ ರಕ್ತದೊತ್ತಡದಿಂದ ಪ್ರಮುಖವಾಗಿ ನಮ್ಮ ಹೃದಯದ ಮೇಲೆ ಪರಿಣಾಮ ಬೀರುವುದು. ಅಧಿಕ ರಕ್ತದೊತ್ತಡವು ಇಂದು ವಿಶ್ವದೆಲ್ಲೆಡೆ ಸುಮಾರು ಒಂದು ಬಿಲಿಯನ್ ಜರನ್ನು ಭಾದಿಸುತ್ತಿದೆ. ಈ ಲೇಖನದಲ್ಲಿ ರಕ್ತದೊತ್ತಡ ಕಡಿಮೆ ಮಾಡು ಬಗ್ಗೆ ತಿಳಿಸಿಕೊಡಲಿದ್ದೇವೆ. ರಕ್ತದೊತ್ತಡವು 140/90 ಎಂಎಂ ಎಚ್ ಜಿ ಅಥವಾ ಅದಕ್ಕಿಂತ ಹೆಚ್ಚಿದ್ದರೆ ಅದನ್ನು ಅಧಿಕ ರಕ್ತದೊತ್ತಡವೆನ್ನಲಾಗುತ್ತದೆ. ಕೆಲವು ದಿನಗಳ ಕಾಲ ರಕ್ತದೊತ್ತಡ ಅಧಿಕವಾಗಿದ್ದರೆ ಆಗ ಅಧಿಕ ರಕ್ತದೊತ್ತಡ ಪತ್ತೆ ಹಚ್ಚಬಹುದು.

blood pressure naturally and quickly in kannada

ಬೊಜ್ಜು, ಅಧಿಕ ಮಧ್ಯಪಾನ, ಅಧಿಕವಾಗಿ ಉಪ್ಪು ಸೇವನೆ, ಅನುವಂಶೀಯತೆ, ಸರಿಯಾದ ವ್ಯಾಯಾಮವಿಲ್ಲದೆ ಇರುವುದು, ಗರ್ಭನಿರೋಧಕ ಮಾತ್ರೆಗಳು, ಒತ್ತಡ, ಕಿಡ್ನಿ ಕಾಯಿಲೆ, ನೋವು ನಿವಾರಕ ಮಾತ್ರೆಗಳು ಇತ್ಯಾದಿಯಿಂದ ಅಧಿಕ ರಕ್ತದೊತ್ತಡ ಕಾಣಿಸಿಕೊಳ್ಳುವುದು. ರಕ್ತದೊತ್ತಡ ಕಡಿಮೆ ಮಾಡಲು ಕೆಲವೊಂದು ಔಷಧಿಗಳನ್ನು ವೈದ್ಯರು ಸೂಚಿಸುವರು. ಆದರೆ ಮನೆಮದ್ದುಗಳನ್ನು ಬಳಸಿಕೊಂಡು ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಡಬಹುದು. ಅಧಿಕ ರಕ್ತದೊತ್ತಡ ನಿಯಂತ್ರಣದಲ್ಲಿ ಇಡಲು ಕೆಲವು ಮನೆಮದ್ದುಗಳು ಇಲ್ಲಿ.

1. ಲಿಂಬೆ

ಲಿಂಬೆಯು ನಿಮ್ಮ ರಕ್ತನಾಳಗಳನ್ನು ಮೃಧು ಹಾಗೂ ಸ್ಥಿತಿಸ್ಥಾಪಕತ್ವದಿಂದ ಇಡುವುದು. ರಕ್ತನಾಳದಲ್ಲಿನ ತಡೆ ನಿವಾರಣೆ ಮಾಡಿ ರಕ್ತದೊತ್ತಡ ಕಡಿಮೆ ಮಾಡುವುದು. ನಿಯಮಿತವಾಗಿ ಲಿಂಬೆರಸ ಸೇವನೆ ಮಾಡಿದರೆ ನಿಮಗೆ ಹೃದಯಾಘಾತವಾಗುವ ಸಂಭವ ತುಂಬಾ ಕಡಿಮೆ. ಲಿಂಬೆಯಲ್ಲಿರುವಂತಹ ವಿಟಮಿನ್ ಸಿಯು ಹಾನಿಕಾರ ಫ್ರಿ ರ್ಯಾಡಿಕಲ್ ಪ್ರಭಾವ ಕಡಿಮೆ ಮಾಡುವುದು. ಅರ್ಧ ಲಿಂಬೆ ರಸವನ್ನು ಒಂದು ಲೋಟ ಬಿಸಿ ನೀರಿಗೆ ಹಾಕಿ ಕುಡಿಯಿರಿ. ಇದಕ್ಕೆ ಸಕ್ಕರೆ ಅಥವಾ ಉಪ್ಪು ಹಾಕಬೇಡಿ.

2. ಎಳನೀರು

ಅಧಿಕ ರಕ್ತದೊತ್ತಡ ಇರುವಂತಹವರು ತಮ್ಮ ದೇಹದಲ್ಲಿ ಹೆಚ್ಚಿನ ನೀರಿನಾಂಶ ಇರುವಂತೆ ನೋಡಿಕೊಳ್ಳಬೇಕು. ದಿನಕ್ಕೆ ಸುಮಾರು 8-10 ಲೋಟ ನೀರು ಕುಡಿಯಬೇಕು. ಅದರಲ್ಲೂ ಎಳನೀರು ಕುಡಿದರೆ ತುಂಬಾ ಒಳ್ಳೆಯದು. ಇದು ರಕ್ತದೊತ್ತಡ ಕಡಿಮೆ ಮಾಡಲು ನೆರವಾಗುವುದು. ಎಳನೀರಿನಲ್ಲಿ ಪೊಟಾಶಿಯಂ, ಮೆಗ್ನಿಶಿಯಂ ಮತ್ತು ವಿಟಮಿನ್ ಸಿ ಇದೆ. ಇದು ರಕ್ತದೊತ್ತಡ ಕಡಿಮೆ ಮಾಡುವುದು ಎಂದು ವೆಸ್ಟ್ ಇಂಡಿಯನ್ ಮೆಡಿಕಲ್ ಜರ್ನಲ್ ನಲ್ಲಿ ಪ್ರಕಟವಾಗಿರುವ ಅಧ್ಯಯನ ವರದಿ ಹೇಳಿದೆ.

3. ಬಾಳೆಹಣ್ಣು

ಬಾಳೆಹಣ್ಣಿನಲ್ಲಿ ಪೊಟಾಶಿಯಂ ಅಧಿಕವಾಗಿರುವ ಕಾರಣದಿಂದಾಗಿ ಇದನ್ನು ಅಧಿಕ ರಕ್ತದೊತ್ತಡ ಇರುವವರು ಪ್ರತಿನಿತ್ಯ ಸೇವನೆ ಮಾಡಬೇಕು. ಇದು ಸೋಡಿಯಂನ ಪರಿಣಾಮ ಕಡಿಮೆ ಮಾಡುವುದು. ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರೆ ಆಗ ನೀವು ಒಂದು ಅಥವಾ ಎರಡು ಬಾಳೆಹಣ್ಣುಗಳನ್ನು ತಿನ್ನಿ. ಬಾಳೆಹಣ್ಣಿನೊಂದಿಗೆ ಕಿತ್ತಳೆ ಜ್ಯೂಸ್, ಒಣದ್ರಾಕ್ಷಿ, ಕರಂಟ್ಸ್, ಪಾಲಕ ಮತ್ತು ಎಪ್ರಿಕಾಟ್ ಗಳು ಇತ್ಯಾದಿಗಳನ್ನು ಸೇವಿಸಿ.

4. ಬೆಳ್ಳುಳ್ಳಿ

ಬೆಳ್ಳುಳ್ಳಿಯಲ್ಲಿ ರಕ್ತದೊತ್ತಡ ಕಡಿಮೆ ಮಾಡುವ ಶಕ್ತಿಯಿದೆ ಎಂದು ಅಧ್ಯಯನಗಳು ಹೇಳಿವೆ. ಬೆಳ್ಳುಳ್ಳಿಯು ನೈಟ್ರಿಕ್ ಆಕ್ಸೈಡ್ ಮತ್ತು ಹೈಡ್ರೋಜನ್ ಸಲ್ಫೈಡ್ ನ ಉತ್ಪತ್ತಿ ಹೆಚ್ಚಿಸಿ ರಕ್ತನಾಳಗಳಿಗೆ ಆರಾಮ ನೀಡುವುದು. 1 ಅಥವಾ 3 ಬೆಳ್ಳುಳ್ಳಿ ಎಸಲುಗಳನ್ನು ಜಜ್ಜಿ ಪ್ರತಿನಿತ್ಯ ತಿನ್ನಿ ಅಥವಾ 5-6 ಹನಿ ಬೆಳ್ಳುಳ್ಳಿ ರಸವನ್ನು ನಾಲ್ಕು ಚಮಚ ನೀರಿಗೆ ಹಾಕಿಕೊಂಡು ಪ್ರತಿನಿತ್ಯ ಸೇವಿಸಿ.

5. ಸೆಲರಿ(ಗುಡ್ಡಸೊಂಪು)

ಸೆಲರಿಯಲ್ಲಿ 3-ಎನ್- ಬಟಿಲ್ಫ್ತಾಲೈಡ್ವಿಚ್ ಎನ್ನುವ ಫೈಥೋಕೆಮಿಕಲ್ ಇದ್ದು, ರಕ್ತದೊತ್ತಡ ನಿಯಂತ್ರಣದಲ್ಲಿಡಲು ಇದು ನೆರವಾಗುವುದು. ಈ ಫೈಥೋಕೆಮಿಕಲ್ ಅಪಧಮನಿ ಸುತ್ತಲಿನ ಹಾಗೂ ಒಳಗಿನ ಸ್ನಾಯುಗಳು ಆರಾಮವಾಗಿರಲು ನೆರವಾಗುವುದು. ಇದರಿಂದ ಹೆಚ್ಚಿನ ಜಾಗ ಉಂಟಾಗಿ ರಕ್ತಸಂಚಾರವು ಸುಗಮವಾಗಿ ಆಗುವುದು.

6. ಈರುಳ್ಳಿ

ರಕ್ತದೊತ್ತಡ ಕಡಿಮೆ ಮಾಡಲು ಈರುಳ್ಳಿ ರಸವು ಪ್ರಮುಖವಾಗಿರುವ ಮನೆಮದ್ದಾಗಿದೆ. ಇದರಲ್ಲಿ ಕ್ವೆರ್ಸೆಟಿನ್ ಎನ್ನುವ ಆ್ಯಂಟಿಆಕ್ಸಿಡೆಂಟ್ ಫ್ಲಾವೊನಾಲ್ಇದೆ. ಪ್ರತಿನಿತ್ಯ ಒಂದು ಹಸಿ ಈರುಳ್ಳಿ ತಿನ್ನಿ ಅಥವಾ ½ ಚಮಚ ಈರುಳ್ಳಿ ರಸ ಮತ್ತು ಅಷ್ಟೇ ಪ್ರಮಾಣದ ಜೇನುತುಪ್ಪ ಹಾಕಿಕೊಂಡು ಪ್ರತಿನಿತ್ಯ ಎರಡು ಸಲ ಒಂದರಿಂದ ಎರಡು ವಾರ ಕಾಲ ಸೇವಿಸಿ.

7. ಕರಿಮೆಣಸು

ಮಧ್ಯಮದ ರಕ್ತದೊತ್ತಡದ ಸಮಸ್ಯೆಯಿಂದ ಬಳಲುತ್ತಿದ್ದರೆ ಆಗ ಕರಿಮೆಣಸು ನಿಮಗೆ ನೆರವಾಗುವುದು. ಇದು ಪ್ಯಾಲೆಟ್ ಗಳು ಪರಸ್ಪರ ಅಂಟಿಕೊಳ್ಳದಂತೆ ಮತ್ತು ರಕ್ತವು ಜಮೆಯಾಗದಂತೆ ತಡೆದು ರಕ್ತದ ಹರಿವು ಸರಾಗವಾಗಿ ಆಡಲು ನೆರವಾಗುವುದು. ಕರಿಮೆಣಸವನ್ನು ನಿಮ್ಮ ಸಲಾಡ್ ಅಥವಾ ಅಡುಗೆಯಲ್ಲಿ ಸೇರಿಸಿಕೊಂಡರೆ ಅಧಿಕ ಲಾಭ ಸಿಗುವುದು.

8. ಮೆಂತೆ ಕಾಳುಗಳು

ಮೆಂತೆ ಕಾಳುಗಳಿಂದ ರಕ್ತದೊತ್ತಡ ನಿವಾರಣೆ ಮಾಡಬಹುದು ಎಂದು ನಿಮಗೆ ತಿಳಿದಿದೆಯಾ? ಇದರಲ್ಲಿ ಅಧಿಕ ಪೊಟಾಶಿಯಂ ಮತ್ತು ಆಹಾರದ ನಾರಿನಾಂಶವಿದೆ. ಒಂದು ಅಥವಾ ಎರಡು ಚಮಚ ಮೆಂತ್ಯೆಕಾಳುಗಳನ್ನು ನೀರಿಗೆ ಹಾಕಿ ಬೇಯಿಸಿ. ಈ ನೀರನ್ನು ಸೋಸಿಕೊಂಡು, ಮೆಂತ್ಯೆಯನ್ನು ರುಬ್ಬಿಕೊಳ್ಳಿ. ಖಾಲಿಹೊಟ್ಟೆಯಲ್ಲಿ ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ವೇಳೆ ಮೆಂತ್ಯೆ ಪೇಸ್ಟ್ ಸೇವಿಸಿ.

9. ಎಳ್ಳೆಣ್ಣೆ

ಎಳ್ಳೆಣ್ಣೆಯಲ್ಲಿ ಒಳ್ಳೆಯ ಕೊಬ್ಬು ಇದ್ದು, ಇದು ಕೊಲೆಸ್ಟ್ರಾಲ್ ಅನ್ನು ತೆಗೆಯುವುದು. ಇದರಲ್ಲಿ ಪೂರ್ತಿ ಆರ್ದ್ರವಾದ ಕೊಬ್ಬು ಕಡಿಮೆ ಇದೆ ಮತ್ತು ಸೆಸಮೊಲ್ ಮತ್ತು ಸೆಸಮಿನ್ ಎನ್ನುವ ರಾಸಾಯನಿಕವು ಇದರಲ್ಲಿದೆ. ಇವುಗಳು ಆ್ಯಂಟಿಆಕ್ಸಿಡೆಂಟ್ ಆಗಿದ್ದು, ರಕ್ತದೊತ್ತಡ ನಿವಾರಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ರಕ್ತದೊತ್ತಡದವಿರುವಂತಹ ರೋಗಿಗಳು ಬೇರೆ ಎಣ್ಣೆ ಬಳಸುವುದುನ್ನು ಬಿಟ್ಟು ಈ ಎಣ್ಣೆಯನ್ನು ಬಳಸಿದರೆ ರಕ್ತದೊತ್ತಡ ಪರಿಣಾಮಕಾರಿಯಾಗಿ ನಿಯಂತ್ರಣಕ್ಕೆ ಬರುವುದು.

10. ಜೇನುತುಪ್ಪ

ಜೇನುತುಪ್ಪು ಹಲವಾರು ಶಮನಕಾರಿ ಗುಣಗಳು ಇವೆ ಮತ್ತು ಇದು ರಕ್ತದೊತ್ತಡ ಕಡಿಮೆ ಮಾಡುವಲ್ಲೂ ಸಹಕಾರಿ ಎಂದು ಅಧ್ಯಯನಗಳು ಕಂಡುಕೊಂಡಿವೆ. ರಕ್ತದೊತ್ತಡ ನಿಯಂತ್ರಣದಲ್ಲಿ ಇಡಲು ತುಂಬಾ ರುಚಿಕರ, ಸರಳ ಹಾಗೂ ಸಿಹಿ ವಿಧಾನ ಇದಾಗಿದೆ. ಜೇನುತುಪ್ಪವು ರಕ್ತನಾಳಗಳಿಗೆ ಆರಾಮವನ್ನು ನೀಡುವುದು. ಹಸಿ ಜೇನುತುಪ್ಪ ಸೇವಿಸಿದರೆ ರಕ್ತದೊತ್ತಡ ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು.

11. ಗಿಡಮೂಲಿಕೆಗಳು, ಸಾಂಬಾರ ಮತ್ತು ಬೀಜಗಳು

ಕೆಲವೊಂದು ಗಿಡಮೂಲಿಕೆಗಳು, ಸಾಂಬಾರ ಮತ್ತು ಬೀಜಗಳು ರಕ್ತದೊತ್ತಡ ನಿವಾರಣೆ ಮಾಡುವಲ್ಲಿ ಪರಿಣಾಮಕಾರಿಯಾಗಿದೆ. ಬೆಳ್ಳುಳ್ಳಿಯು ರಕ್ತವನ್ನು ತೆಳುವಾಗಿಸುವುದು ಮತ್ತು ರಕ್ತನಾಳಗಳಲ್ಲಿನ ತಡೆ ನಿವಾರಿಸುವುದು. ಸೂರ್ಯಕಾಂತಿ ಬೀಜಗಳು ಕೊಲೆಸ್ಟ್ರಾಲ್ ಕಡಿಮೆ ಮಾಡುವುದು. ಸೆಲರಿ ಬೀಜ ಸಾರ, ಅರ್ಜುನ, ಅಗಸೆ ಬೀಜಗಳು, ಬೆಕ್ಕಿನ ಪಂಜ, ಅರಶಿನ, ಕಲ್ಲಂಗಡಿ ಬೀಜಗಳು ಮತ್ತು ಮೆಂತ್ಯೆ ಬೀಜಗಳು ಪರಿಣಾಮಕಾರಿಯಾಗಿ ರಕ್ತದೊತ್ತಡ ನಿವಾರಣೆ ಮಾಡುವುದು.

12. ಕಡು ಚಾಕಲೇಟ್

ರೋಗಿ ಬಯಸಿದ್ದು ಹಾಲು ವೈದ್ಯ ಸೂಚಿಸಿದ್ದು ಹಾಲು ಎನ್ನುವ ಮಾತಿದೆ. ನಿಮ್ಮ ರೋಗಕ್ಕೆ ಚಾಕಲೇಟ್ ಮದ್ದಾದರೆ ಹೇಗಿರಬಹುದು ಯೋಚಿಸಿ. ಹೌದು, ಕಡುಬಣ್ಣದ ಚಾಕಲೇಟ್ ಅಧಿಕ ರಕ್ತದೊತ್ತಡವನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಸಣ್ಣ ತುಂಡು ಕಡು ಚಾಕಲೇಟ್ ಅದ್ಭುತವನ್ನೇ ಉಂಟು ಮಾಡಲಿದೆ ಮತ್ತು ರಕ್ತದೊತ್ತಡ ನಿಯಂತ್ರಣದಲ್ಲಿಡಲಿದೆ.

English summary

How To Lower Blood Pressure Instantly: 12 Home Remedies

Hypertension, commonly known as high blood pressure, is a dangerous condition that can damage your heart. High blood pressure is known to affect 1 billion people worldwide. In this article, we will be writing about how to lower blood pressure instantly. Blood pressure is considered high when it is 140/90 mm Hg or above. It is diagnosed when a person's blood pressure is high over a certain period of time.
Story first published: Friday, June 29, 2018, 8:30 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more