For Quick Alerts
ALLOW NOTIFICATIONS  
For Daily Alerts

ಸ್ತನಗಳು ಜೋತು ಬೀಳದಂತೆ ತಡೆಯಲು ಕೆಲವು ನೈಸರ್ಗಿಕ ಮನೆಮದ್ದುಗಳು

By Hemanth
|

ಮಹಿಳೆಯ ದೇಹ ಸೌಂದರ್ಯದ ಪ್ರಮುಖ ಅಂಗವಾಗಿರುವುದು ಸ್ತನ. ಇದು ಕೇವಲ ಮಹಿಳೆಯ ದೇಹದ ಸೌಂದರ್ಯ ಹೆಚ್ಚಿಸುವುದು ಮಾತ್ರವಲ್ಲದೆ ಗರ್ಭಧಾರಣೆ ಬಳಿಕ ಮಗುವಿನ ಜೀವಹನಿ ನೀಡುವುದು. ಅಸ್ಥಿರಜ್ಜು ಹಾಗೂ ಅಂಗಾಂಶಗಳಿಂದ ಕೂಡಿರುವ ಸ್ತನದಲ್ಲಿ ಯಾವುದೇ ಎಲುಬುಗಳಿಲ್ಲ. ಇದೇ ಕಾರಣದಿಂದಾಗಿ ವಯಸ್ಸಾಗುತ್ತಾ ಹೋದಂತೆ ಸ್ತನಗಳು ತಮ್ಮ ಸ್ಥಿತಿಸ್ಥಾಪಕತ್ವ ಕಳೆದುಕೊಳ್ಳುವುದು. ಇದರಿಂದಾಗಿ ಅವುಗಳು ಜೋತು ಬೀಳಲು ಆರಂಭಿಸುವುದು. ಜೋತು ಬೀಳುವ ಸ್ತನಗಳ ಬಗ್ಗೆ ಈ ಲೇಖನದಲ್ಲಿ ತಿಳಿದುಕೊಂಡು ಅದಕ್ಕಾಗಿ ಇರುವಂತಹ ಕೆಲವೊಂದು ಮನೆಮದ್ದುಗಳನ್ನು ಬಳಸಿಕೊಂಡು ಪರಿಹಾರ ಕಂಡುಕೊಳ್ಳಿ...

How To Get Naturally Firmer Bust At Home | Boldsky Kannada
ಸ್ತನ ಜೋತು ಬೀಳಲು ಕಾರಣಗಳು

ಸ್ತನ ಜೋತು ಬೀಳಲು ಕಾರಣಗಳು

ಜೋತು ಬಿದ್ದ ಸ್ತನಗಳಿಗೆ ಪರಿಹಾರಕ್ಕೆ ಮನೆಮದ್ದನ್ನು ಬಳಸುವ ಮೊದಲು ನೀವು ಅದು ಜೋತು ಬೀಳಲು ಕಾರಣವೇನೆಂದು ತಿಳಿದುಕೊಂಡರೆ ಅದರಿಂದ ಪರಿಹಾರ ನೀಡಲು ತುಂಬಾ ಸುಲಭ. ಸ್ತನ ಜೋತು ಬೀಳಲು ಪ್ರಮುಖ ಕಾರಣವೆಂದರೆ ವಯಸ್ಸು. ವಯಸ್ಸಾಗುತ್ತಿರುವ ಮಹಿಳೆಯರಲ್ಲಿ ಇದು ಸಾಮಾನ್ಯ. ಆದರೆ ಹದಿಹರೆಯದ ಮಹಿಳೆಯರಲ್ಲಿ ಬಿಗಿ ಹಾಗೂ ಒಳ್ಳೆಯ ಆಕಾರದ ಸ್ತನಗಳಿರುವುದು. ಅಧ್ಯಯನಗಳ ಪ್ರಕಾರ ಮಹಿಳೆಯು ತನ್ನ 30ರ ಹರೆಯದಲ್ಲಿ ಚರ್ಮದ ಸ್ಥಿತಿಸ್ಥಾಪಕತ್ವ ಕಳೆದುಕೊಳ್ಳಲು

ಆರಂಭಿಸುವಳು. ಅದರಲ್ಲೂ ಗರ್ಭಧರಿಸಿದ ಮಹಿಳೆಯರ ದೇಹದಲ್ಲಿ ಕೆಲವೊಂದು ಪ್ರಮುಖ ಬದಲಾವಣೆಗಳು ಆಗುವುದು. ಸ್ತನಗಳು ಇಲ್ಲಿ ಪ್ರಮುಖ ಪಾತ್ರ ವಹಿಸುವ ಕಾರಣ

ಅವುಗಳ ಆಕಾರದಲ್ಲಿ ಬದಲಾವಣೆಗಳಾಗುವುದು. ಮಗುವಿಗೆ ಹಾಲುಣಿಸುವುದು ಕೂಡ ಇದರಲ್ಲಿ ಒಂದು ಕಾರಣವಾಗಿದೆ. ಎದೆಯಲ್ಲಿನ ಕೋಶಗಳು ತಮ್ಮ ಬಿಗಿತ್ವ ಕಳೆದುಕೊಳ್ಳುವ ಕಾರಣದಿಂದಾಗಿ ಸ್ತನಗಳ ಗಾತ್ರದ ಮೇಲೆ ಪರಿಣಾಮವಾಗುವುದು.

ಮಹಿಳೆಯರ ಸ್ತನಗಳು ಬಿಗಿತ್ವ ಕಳೆದುಕೊಳ್ಳಲು ಇನ್ನು ಕೆಲವೊಂದು ಕಾರಣಗಳು ಕೂಡ ಇದೆ. ಅತಿಯಾಗಿ ಆಲ್ಕೋಹಾಲ್, ಸಿಗರೇಟ್, ಕಾರ್ಬ್ರೋನೇಟೆಡ್ ಪಾನೀಯಗಳು ಪ್ರಮುಖ ಕಾರಣ. ಜಾಗಿಂಗ್, ವೇಗವಾಗಿ ನಡೆಯುವುದು, ಓಡುವುದು ಇತ್ಯಾದಿ ಕೂಡ ಸ್ತನಗಳು ಬಿಗಿತ್ವ ಕಳೆದುಕೊಳ್ಳಲು ಕಾರಣವಾಗಿದೆ. ಸರಿಯಾದ ಕ್ರೀಡಾ ಬ್ರಾ ಹಾಕಿಕೊಳ್ಳದೆ ಆಟವಾಡಿದರೆ ಅದರಿಂದ ಸ್ತನಗಳು ಜೋತು ಬೀಳುವುದು. ವೇಗಿ ಹಾಗೂ ತೀವ್ರವಾದ ಚಟುವಟಿಕೆಗಳು ಚರ್ಮ ಎಳೆದು ಅದರ ಸ್ಥಿತಿಸ್ಥಾಪಕತ್ವ ಕಳೆದುಕೊಳ್ಳುವಂತೆ ಮಾಡುವುದು. ಸ್ತನ ಕ್ಯಾನ್ಸರ್, ಕ್ಷಯರೋಗವು ದೇಹದ ಒಳಗಿನ ಕೋಶಗಳನ್ನು ದುರ್ಬಲಗೊಳಿಸುವುದು. ಇದರಿಂದ ಸ್ತನಗಳು ಜೋತು ಬೀಳುವುದು.

ಸ್ತನ ಜೋತು ಬೀಳಲು ಕಾರಣಗಳು

ಸ್ತನ ಜೋತು ಬೀಳಲು ಕಾರಣಗಳು

ಬಿಗಿ ಸ್ತನಗಳನ್ನು ಪಡೆಯಲು ಮಾರುಕಟ್ಟೆಯಲ್ಲಿ ಇಂದಿನ ದಿನಗಳಲ್ಲಿ ಹಲವಾರು ರಿತಿಯ ಲೋಷನ್ ಮತ್ತು ಚಿಕಿತ್ಸೆಗಳು ಲಭ್ಯವಿದೆ. ಆದರೆ ನೈಸರ್ಗಿಕ ಹಾಗೂ ಸಾವಯವವಾದ ಮನೆಮದ್ದನ್ನು ಬಳಸಿಕೊಂಡು ಸ್ತನಗಳ ಬಿಗಿತ್ವ ಕಾಪಾಡಿಕೊಳ್ಳಬೇಕು. ಕೆಳಗೆ ಕೊಟ್ಟಿರುವಂತಹ ಕೆಲವೊಂದು ವಿಧಾನಗಳನ್ನು ಬಳಸಿಕೊಂಡು ನೀವು ಬಿಗಿ ಸ್ತನಗಳನ್ನು ನೈಸರ್ಗಿಕವಾಗಿ ಪಡೆಯಬಹುದು.

ಮೆಂತೆ ಪ್ಯಾಕ್

ಮೆಂತೆ ಪ್ಯಾಕ್

1/4 ಕಪ್ ಮೆಂತೆಗೆ ಸ್ವಲ್ಪ ನೀರು ಹಾಕಿ ಪೇಸ್ಟ್ ಮಾಡಿ. ಇದನ್ನು ಸ್ತನಗಳ ಮೇಲೆ ಹಚ್ಚಿಕೊಂಡು ಹಾಗೆ ಹತ್ತು ನಿಮಿಷ ಕಾಲ ಬಿಡಿ ಮತ್ತು ಬಳಿಕ ತೊಳೆಯಿರಿ. 15 ದಿನಕ್ಕೊಮ್ಮೆ ಹೀಗೆ ಮಾಡಿದರೆ ಸುಂದರ ಹಾಗೂ ಬಿಗಿಯಾಗಿರುವ ಸ್ತನಗಳನ್ನು ಪಡೆಬಹುದು.

ಮೊಟ್ಟೆಯ ಲೋಳೆಯ ಮಾಸ್ಕ್

ಮೊಟ್ಟೆಯ ಲೋಳೆಯ ಮಾಸ್ಕ್

ಒಂದು ಮೊಟ್ಟೆಯನ್ನು ಒಡೆದು ಅದನ್ನು ಸರಿಯಾಗಿ ಕಲಸಿಕೊಳ್ಳಿ. ಇದನ್ನು ಸ್ತನಗಳ ಮೇಲೆ ಹಚ್ಚಿಕೊಳ್ಳಿ. ಅದರಲ್ಲೂ ಬುಡಕ್ಕೆ ಸರಿಯಾಗಿ ಹಚ್ಚಿ. ಅರ್ಧ ಗಂಟೆ ಹಾಗೆ ಬಿಟ್ಟು ಬಳಿಕ ಸೌತೆಕಾಯಿ ಅಥವಾ ಈರುಳ್ಳಿ ಜ್ಯೂಸ್ ನಿಂದ ತೊಳೆಯಿರಿ. ಇದನ್ನು ಪ್ರತೀ ವಾರ ಬಳಸಿ.

ಪುಶ್ ಅಪ್

ಪುಶ್ ಅಪ್

ಸ್ತನಗಳು ಬಿಗಿಗೊಳ್ಳಲು ಇದು ತುಂಬಾ ಸರಳವಾಗಿರುವ ವಿಧಾನವಾಗಿದೆ. ನೀವು ನಿಯಮಿತವಾಗಿ ಪುಶ್ ಅಪ್ ಮಾಡಿದರೆ ಆಗ ಸ್ತನಗಳು ಬಿಗಿಗೊಳ್ಳುವುದು. ಎದೆ ಭಾಗದಲ್ಲಿರುವಂತಹ ಕೊಬ್ಬನ್ನು ಕರಗಿಸಿ ಸುಂದರ ಸ್ತನಗಳನ್ನು ನಿಮಗೆ ನೀಡುವುದು.

ಮಸಾಜ್

ಮಸಾಜ್

ಬಿಗಿಯಾಗಿರುವ ಸ್ತನಗಳನ್ನು ಪಡೆಯಲು ಇದು ತುಂಬಾ ಪರಿಣಾಮಕಾರಿ ವಿಧಾನವಾಗಿದೆ. ಎರಡು ದಿನಕ್ಕೊಮ್ಮೆ ಆಲಿವ್ ತೈಲದಿಂದ ಸ್ತನಗಳಿಗೆ ಮಸಾಜ್ ಮಾಡಿ, ಬಳಿಕ ಸ್ಥಾನ ಮಾಡಿ. ಆಲಿವ್ ತೈಲವು ಚರ್ಮದ ಸ್ಥಿತಿಸ್ಥಾಪಕತ್ವ ಕಾಪಾಡುವುದು ಮತ್ತು ಅದನ್ನು ಸುಂದರಗೊಳಿಸುವುದು. ಮೇಲ್ಮುಖವಾಗಿ ಮಸಾಜ್ ಮಾಡಿದರೆ ಅದರಿಂದ ರಕ್ತ ಪರಿಚಲನೆ ಸರಾಗವಾಗುವುದು, ಕೋಶಗಳ ಸರಿಪಡಿಸುವಿಕೆ ಉತ್ತೇಜಿಸುವುದು, ಇದರಿಂದ ಸುಂದರ ಸ್ತನಗಳನ್ನು ಪಡೆಯಬಹುದು. ಐಸ್ ಮಸಾಜ್ ಇದರಲ್ಲಿ ತುಂಬಾ ಒಳ್ಳೆಯದೆಂದು ಪರಿಗಣಿಸಲಾಗಿದೆ. ತಂಪಿನಿಂದಾಗಿ ಚರ್ಮವು ನೈಸರ್ಗಿಕವಾಗಿ ಬಿಗಿತ ಪಡೆಯುವುದು.

ಕುಳಿತುಕೊಳ್ಳುವ ಭಂಗಿ

ಕುಳಿತುಕೊಳ್ಳುವ ಭಂಗಿ

ನೀವು ಕುಳಿತುಕೊಳ್ಳುವ ಭಂಗಿ ಸರಿಪಡಿಸಿಕೊಳ್ಳಿ ಮತ್ತು ಸರಿಯಾದ ರೀತಿಯಲ್ಲಿ ಕುಳಿತುಕೊಳ್ಳಿ. ಭುಜಗಳು ಕೆಳಗೆ ಆಗುವಂತೆ ಮುಂದಕ್ಕೆ ಬಾಗಿಕೊಂಡು ಕುಳಿತುಕೊಳ್ಳುವುದು ಸಾಮಾನ್ಯ. ಇದರಿಂದ ಸ್ತನಗಳು ಜೋತು ಬೀಳುವುದು ಸಹಜ. ಇದರಿಂದ ನೇರವಾಗಿ ಕುಳಿತುಕೊಳ್ಳಿ. ಹೆಚ್ಚು ದೇಹವನ್ನು ಮುಂದಕ್ಕೆ ಬಾಗಿಸಬೇಡಿ.

ದಾಳಿಂಬೆ ಮತ್ತು ಸಾಸಿವೆ ಎಣ್ಣೆ

ದಾಳಿಂಬೆ ಮತ್ತು ಸಾಸಿವೆ ಎಣ್ಣೆ

ದಾಳಿಂಬೆಯಲ್ಲಿ ಬಿಗಿಗೊಳಿಸುವಂತಹ ಗುಣಗಳು ಇವೆ ಮತ್ತು ಇದನ್ನು ವಯಸ್ಸಾಗುವ ಲಕ್ಷಣಗಳನ್ನು ತಡೆಯುವ ಹಲವಾರು ಕ್ರೀಮ್ ಗಳಲ್ಲಿ ಬಳಕೆ ಮಾಡುವರು. ದಾಳಿಂಬೆ ಸಿಪ್ಪೆ ತೆಗೆದು ಅದರ ಪೇಸ್ಟ್ ಮಾಡಿ ಅದಕ್ಕೆ ಸಾಸಿವೆ ಎಣ್ಣೆ ಹಾಕಿಕೊಳ್ಳಿ. ಪ್ರತೀ ರಾತ್ರಿ ಈ ಎಣ್ಣೆಯನ್ನು ಸ್ತನಗಳಿಗೆ ಮಸಾಜ್ ಮಾಡಿಕೊಳ್ಳಿ. ಇದರಿಂದ ಕೆಲವೇ ದಿನಗಳಲ್ಲಿ ಬಿಗಿಯಾದ ಸ್ತನಗಳು ನಿಮ್ಮದಾಗುವುದು.

ಸರಿಯಾದ ಬ್ರಾ

ಸರಿಯಾದ ಬ್ರಾ

ಬಿಗಿಯಾದ ಸ್ತನಗಳು ಬೇಕೆಂದರೆ ಅದಕ್ಕೆ ಸರಿಯಾದ ಹಿಡಿದ ಬೇಕಾಗಿದೆ. ನಿಮ್ಮ ಸ್ತನಗಳನ್ನು ಬಿಗಿಯಾಗಿ ಹಾಗೂ ಸರಿಯಾಗಿಟ್ಟಿರಲು ಬ್ರಾಗಳು ಸರಿಯಾದ ಗಾತ್ರದ್ದಾಗಿರಲಿ. ಹಳೆಯ ಬ್ರಾಗಳನ್ನು ಬದಲಾಯಿಸಿ ಹೊಸ ಬ್ರಾ ಹಾಕಿಕೊಳ್ಳಿ. ಮಾರುಕಟ್ಟೆಯಲ್ಲಿ ಕೆಲವೊಂದು ಹೆಚ್ಚಿನ ಅನುಕೂಲಗಳು ಇರುವಂತಹ ಬ್ರಾಗಳು ಕೂಡ ಲಭ್ಯವಿದೆ.

ಸಮತೋಲಿತ ಆಹಾರ

ಸಮತೋಲಿತ ಆಹಾರ

ಸ್ತನಗಳು ಬಿಗಿಯಾಗಿ ಹಾಗೂ ಸುಂದರವಾಗಿರಲು ಸರಿಯಾದ ಆಹಾರ ಕ್ರಮ ಮತ್ತು ಜೀವನಶೈಲಿ ಕೂಡ ಪ್ರಮುಖ ಪಾತ್ರ ವಹಿಸುವುದು. ಪ್ರೋಟೀನ್ ಅಧಿಕವಾಗಿರುವಂತಹ ಆಹಾರಗಳನ್ನು ತಿನ್ನಿ. ಇದರಿಂದ ಕಾಲಜನ್ ದೇಹದಲ್ಲಿ ಮರುಸ್ಥಾಪಿಸಲು ನೆರವಾಗುವುದು. ಇದರಿಂದ ಸ್ತನಗಳು ಬಿಗಿಯಾಗುವುದು.

ತೂಕ ಸಮತೋಲನದಲ್ಲಿರಲಿ

ತೂಕ ಸಮತೋಲನದಲ್ಲಿರಲಿ

ದೇಹದ ತೂಕವು ಅತಿಯಾಗಿದ್ದರೆ ಆಗ ಸ್ತನಗಳು ಕೂಡ ತನ್ನಷ್ಟಕ್ಕೆ ಜೋತು ಬೀಳುವುದು. ನೀವು ಆರೋಗ್ಯ ಹಾಗೂ ಫಿಟ್ ಆಗಿರಿ. ಬೊಜ್ಜಿನಿಂದಾಗಿ ಚರ್ಮದ ಸ್ಥಿತಿಸ್ಥಾಪಕತ್ವವು ಕಳೆದುಹೋಗುವುದು. ಇದು ಚರ್ಮವನ್ನು ಎಳೆದು ಸ್ತನಗಳು ಜೋತು ಬೀಳುವಂತೆ ಮಾಡುವುದು.

English summary

How to Get Firmer Breasts Naturally at Home

Breasts make a vital part of woman’s body; not only it adds to the curve and beauty of the fairer sex, but also is essential in nursing babies. Made of ligaments and tissues, breasts do not have any muscles in them. So it is natural that with age, our skin tend to lose its elasticity, thus resulting in sagging breasts. Read below and learn about other factors of droopy breasts, remedies to try out, tips to know and many more.
X
Desktop Bottom Promotion