For Quick Alerts
ALLOW NOTIFICATIONS  
For Daily Alerts

ಒಂದು ವೇಳೆ ಜೇಡ ಕಚ್ಚಿದರೆ-ತಕ್ಷಣ ಹೀಗೆ ಮಾಡಿದ್ರೆ ಕೂಡಲೇ ಗುಣವಾಗುತ್ತದೆ

|

ಹಾಲಿವುಡ್ ನ ಸ್ಪೈಡರ್ ಮೆನ್ ಸಿನಿಮಾ ನೋಡಿರುವವರಿಗೆ ಜೇಡ ಕಚ್ಚಿದ ವ್ಯಕ್ತಿಯಲ್ಲಿ ಹೇಗೆ ಕೆಲವೊಂದು ಬದಲಾವಣಿಗಳು ಆಗುತ್ತದೆ ಎಂದು ನೋಡಿರಬಹುದು. ಆದರೆ ಅದು ಸಿನಿಮಾ. ಜೇಡದ ಕಡಿತ ಸಾಮಾನ್ಯವೆಂದು ಹೇಳಬಹುದು. ಆದರೆ ಕೆಲವೊಂದು ಪ್ರದೇಶಗಳಲ್ಲಿ ಇರುವಂತಹ ಜೇಡವು ತುಂಬಾ ವಿಷಕಾರಿಯಾಗಿರುವುದು ಮತ್ತು ಇದು ಪ್ರಾಣಕ್ಕೆ ಕುತ್ತು ತರಬಹುದು. ಜೇಡ ಕಚ್ಚುವುದು ತುಂಬಾ ಅಪರೂಪವೆನ್ನಬಹುದು.

How Do You Treat A Spider Bite At Home?

ಒಂದು ವೇಳೆ ಕಚ್ಚಿದರೆ ಆಗ ಏನು ಮಾಡಬೇಕು ಎಂದು ಈ ಲೇಖನದ ಮೂಲಕ ನಿಮಗೆ ತಿಳಿಸಿಕೊಡಲಿದ್ದೇವೆ. ಆದರೆ ಹೆಚ್ಚಾಗಿ ಜೇಡದ ಕಡಿತವು ಯಾವುದೇ ಹಾನಿಯುಂಟು ಮಾಡುವುದಿಲ್ಲ. ಮುಂದಕ್ಕೆ ಓದಿ ನೀವು ಜೇಡದ ಕಡಿತದ ಮಾಹಿತಿ ಪಡೆಯಿರಿ..

ಜೇಡದ ಕಡಿತವು ಹೇಗೆ ಕಾಣಿಸುವುದು?

ಸಾಮಾನ್ಯವಾಗಿ ಕೀಟಗಳು ಕಡಿದಾಗ ಹೇಗೆ ಗಾಯವಾಗುತ್ತದೆಯಾ ಅದೇ ರೀತಿಯ ಗಾಯವಾಗುವುದು. ಸ್ವಲ್ಪ ಊದಿಕೊಂಡು ಗುಳ್ಳೆ ಬಂದಿರಬಹುದು. ಇದು ತುರಿಕೆ ಉಂಟುಮಾಡಿ, ಕೆಂಪಾಗಿರಬಹುದು. ಇದು ಹೆಚ್ಚು ಸಮಸ್ಯೆಯುಂಟು ಮಾಡಲ್ಲ. ಜೇನುನೊಣದ ಕಡಿತದಷ್ಟೇ ಇರುವುದು. ಗಂಟೆಯಲ್ಲಿ ಇದು ಮಾಯವಾಗುವುದು. ಕೆಂಪು ಬಣ್ಣವು ಗಾಯದಿಂದ ಸುತ್ತಲಿನ ಭಾಗಕ್ಕೆ ಪಸರಿಸಬಹುದು. ಕಡಿತದ ಭಾಗದಲ್ಲಿ ಒಂದು ಗಾಯವಾಗಿರಬಹುದು. ಕಡಿತದ ಭಾಗದಲ್ಲಿ ಜುಮ್ಮೆನಿಸುವ ಭಾವನೆ ಮೂಡಿಸಬಹುದು.

ಜೇಡದ ಕಡಿತದಿಂದ ಆಗುವ ತೊಂದರೆಗಳು ಯಾವುದು?

ಜೇಡವು ಕಡಿದ ಕೆಲವು ಗಂಟೆಗಳಲ್ಲಿ ಕಡಿತದ ಭಾಗದಲ್ಲಿ ಜುಮ್ಮೆನಿಸುವ ಅನುಭವ ಅಥವಾ ಸ್ಪರ್ಶ ಇಲ್ಲದೆ ಇರಬಹುದು. ಸುತ್ತಲಿನ ಜಾಗದಲ್ಲಿ ನೋವು ಇರಬಹುದು. ಸ್ನಾಯು ನೋವು ಅಥವಾ ಸೆಳೆತವು ಕಾಣಿಸಬಹುದು.

ಜೇಡದ ಕಡಿತವು ಹೇಗೆ ಕಾಣಿಸುವುದು?

ಜೇಡದ ಕಡಿತವು ಹೇಗೆ ಕಾಣಿಸುವುದು?

ಸಾಮಾನ್ಯವಾಗಿ ಕೀಟಗಳು ಕಡಿದಾಗ ಹೇಗೆ ಗಾಯವಾಗುತ್ತದೆಯಾ ಅದೇ ರೀತಿಯ ಗಾಯವಾಗುವುದು. ಸ್ವಲ್ಪ ಊದಿಕೊಂಡು ಗುಳ್ಳೆ ಬಂದಿರಬಹುದು. ಇದು ತುರಿಕೆ ಉಂಟುಮಾಡಿ, ಕೆಂಪಾಗಿರಬಹುದು. ಇದು ಹೆಚ್ಚು ಸಮಸ್ಯೆಯುಂಟು ಮಾಡಲ್ಲ. ಜೇನುನೊಣದ ಕಡಿತದಷ್ಟೇ ಇರುವುದು. ಗಂಟೆಯಲ್ಲಿ ಇದು ಮಾಯವಾಗುವುದು. ಕೆಂಪು ಬಣ್ಣವು ಗಾಯದಿಂದ ಸುತ್ತಲಿನ ಭಾಗಕ್ಕೆ ಪಸರಿಸಬಹುದು. ಕಡಿತದ ಭಾಗದಲ್ಲಿ ಒಂದು ಗಾಯವಾಗಿರಬಹುದು. ಕಡಿತದ ಭಾಗದಲ್ಲಿ ಜುಮ್ಮೆನಿಸುವ ಭಾವನೆ ಮೂಡಿಸಬಹುದು.

ಜೇಡ ಕಡಿತದ ವೇಳೆ ಪಾಲಿಸಬೇಕಾದ ಕ್ರಮಗಳು

ಜೇಡ ಕಡಿತದ ವೇಳೆ ಪಾಲಿಸಬೇಕಾದ ಕ್ರಮಗಳು

*ನೀರು ಮತ್ತು ಸೋಪ್ ಹಾಕಿ ಕಡಿತದ ಜಾಗ ಶುಚಿಗೊಳಿಸಿ.

*ಈ ಭಾಗಕ್ಕೆ ಆ್ಯಂಟಿಬಯೋಟಿಕ್ ಕ್ರೀಮ್ ಹಚ್ಚಿ.

*ತಂಪಾದ, ಒದ್ದೆ ಬಟ್ಟೆಯನ್ನು ಕಡಿತದ ಜಾಗಕ್ಕೆ ಕಟ್ಟಿಕೊಳ್ಳಿ.

*ಕಾಲು ಅಥವಾ ಕೈಯ ಭಾಗಕ್ಕೆ ಕಚ್ಚಿದ್ದರೆ ಅದನ್ನು ಮೇಲೆತ್ತಿಕೊಳ್ಳಿ.

*ಆಂಟಿಹಿಸ್ಟಮೈನ್ ನೋವು ಶಮನಗೊಳಿಸುವುದು.

*ಅಸೆಟಾಮಿನೋಫೆನ್ ಅಥವಾ ಐಬುಪ್ರೊಫೇನ್ ನ್ನು ನೋವು ನಿವಾರಿಸಲು ಸೇವಿಸಬಹುದು. ಜೇಡ ಕಚ್ಚಿದರೆ ಮಾಡಬಹುದಾದ ಮನೆಮದ್ದುಗಳು

Most Read: ಈ ವ್ಯಕ್ತಿ ದಿನಕ್ಕೆ ಮೂರು ಕಿ.ಲೋ.ಮಣ್ಣು, ಕಲ್ಲು ಮತ್ತು ಒಂದು ಇಟ್ಟಿಗೆ ತಿನ್ನುತ್ತಾನಂತೆ!

ಐಸ್(ಮಂಜುಗಡ್ಡೆ)

ಐಸ್(ಮಂಜುಗಡ್ಡೆ)

ಕಡಿತದ ಭಾಗಕ್ಕೆ ಬಿಸಿ ನೀರು ಮತ್ತು ಸೋಪ್ ಹಾಕಿ ತೊಳೆಯಿರಿ. ಇದರ ಬಳಿಕ ಆ ಜಾಗಕ್ಕೆ ಐಸ್ ಇಡಿ. ಇದು ಊತ ತಡೆಯುವುದು. 10 ನಿಮಿಷ ಹಾಗೆ ಬಿಡಿ. ದಿನದಲ್ಲಿ ಹಲವಾರು ಸಲ ಐಸ್ ಇಡಿ. ಜೇಡದ ಕಡಿತಕ್ಕೆ ಇದು ತುಂಬಾ ನೈಸರ್ಗಿಕ ಮತ್ತು ಸರಳ ಚಿಕಿತ್ಸೆ.

ಇದ್ದಿಲು

ಇದ್ದಿಲು

ವಿಷಕಾರಿ ಅಂಶವನ್ನು ತೆಗೆಯುವಂತಹ ಗುಣವು ಇದರಲ್ಲಿದೆ. ಇದ್ದಿಲಿನ ಪೇಸ್ಟ್ ನ್ನ ಕಚ್ಚಿದ ಜಾಗಕ್ಕೆ ಹಚ್ಚಿಕೊಳ್ಳಿ. ಇದು ವಿಷವಿದ್ದರೆ ಅದನ್ನು ಹೊರಹಾಕುವುದು. ಕಡಿತದ ಜಾಗದಲ್ಲಿ ಒಂದು ಅಥವಾ ಎರಡು ಗಂಟೆಗಳ ಕಾಲ ಪೇಸ್ಟ್ ಇರಲಿ. ಗಾಯವು ಒಣಗುವ ತನಕ ನೀವು ದಿನದಲ್ಲಿ ಎರಡು ಸಲ ಹೀಗೆ ಮಾಡಿ.

ಆಲೂಗಡ್ಡೆ

ಆಲೂಗಡ್ಡೆ

ಆಲೂಗಡ್ಡೆಯಲ್ಲಿ ಉರಿಯೂತ ಶಮನಗೊಳಿಸುವಂತಹ ಗುಣವು ಇದೆ. ಬಟಾಟೆಯನ್ನು ತುರಿದುಕೊಳ್ಳಿ ಮತ್ತು ಇದನ್ನು ತೆಳುವಾದ ಬಟ್ಟೆಯಲ್ಲಿ ಹಾಕಿ ಕಟ್ಟಿ. ಇದನ್ನು ಕಚ್ಚಿದ ಜಾಗಕ್ಕೆ ಇಟ್ಟುಬಿಡಿ. ಬಟಾಟೆ ಒಣಗುವ ತನಕ ಹೀಗೆ ಬಿಡಿ.

ಲ್ಯಾವೆಂಡರ್ ತೈಲ

ಲ್ಯಾವೆಂಡರ್ ತೈಲ

ಜೇಡ ಕಡಿತದಿಂದ ಆಗಿರುವಂತಹ ಉರಿಯೂತವನ್ನು ಈ ಎಣ್ಣೆಯು ಶಮನಗೊಳಿಸುವುದು. ಕೆಲವು ಹನಿ ಲ್ಯಾವೆಂಡರ್ ತೈಲವನ್ನು ತೆಂಗಿನೆಣ್ಣೆ ಜತೆಗೆ ಮಿಶ್ರಣ ಮಾಡಿಕೊಂಡು ಕಚ್ಚಿದ ಜಾಗಕ್ಕೆ ಹಚ್ಚಿಕೊಳ್ಳಿ.

ಅಡುಗೆ ಸೋಡಾದ ಪೇಸ್ಟ್

ಅಡುಗೆ ಸೋಡಾದ ಪೇಸ್ಟ್

ಅಡುಗೆ ಸೋಡಾವನ್ನು ಬಳಸಿಕೊಂಡು ಜೇಡ ಕಡಿತವನ್ನು ಶಮನ ಮಾಡುವುದು ತುಂಬಾ ಸರಳ ಹಾಗೂ ಅಗ್ಗದ ಚಿಕಿತ್ಸೆ. ಅಡುಗೆ ಸೋಡಾ ಮತ್ತು ನೀರನ್ನು ಬಳಸಿಕೊಂಡು ಪೇಸ್ಟ್ ಮಾಡಿ. ಇದನ್ನು ಕಚ್ಚಿದ ಜಾಗಕ್ಕೆ ಹಲವಾರು ಸಲ ಹಚ್ಚಿಕೊಳ್ಳಿ.

Most Read: ಒಣಕೆಮ್ಮು, ಗಂಟಲ ಕೆರೆತ, ಕಫ ನಿವಾರಣೆಗೆ: ಏಲಕ್ಕಿ ಪರ್ಫೆಕ್ಟ್ ಮನೆಮದ್ದು

ಎತ್ತರದಲ್ಲಿಡಿ

ಎತ್ತರದಲ್ಲಿಡಿ

ನಿಮ್ಮ ಕೈ ಅಥವಾ ಕಾಲಿಗೆ ಜೇಡವು ಕಚ್ಚಿದರೆ ಆಗ ಅವುಗಳನ್ನು ಎತ್ತರದ ಭಾಗದಲ್ಲಿ ಇಡಿ. ಇದರಿಂದ ಊತ ಕಡಿಮೆಯಾಗುವುದು.

ಅಲೋವೆರಾ

ಅಲೋವೆರಾ

ಇದು ಕಡಿತದಿಂದ ಆಗುವ ಉರಿಯೂತ ಮತ್ತು ತುರಿಕೆ ಕಡಿಮೆ ಮಾಡುವುದು. ಅಲೋವೆರಾವನ್ನು ದಿನದಲ್ಲಿ ಕೆಲವು ಬಾರಿ ಕಡಿತದ ಭಾಗಕ್ಕೆ ಹಚ್ಚಿಕೊಳ್ಳಿ.

Most Read: ಸಾಲ ಮಾಡಿಯಾದ್ರೂ ತುಪ್ಪ ತಿನ್ನಿ! ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು

ವಿಚ್ ಹ್ಯಾಝೆಲ್

ವಿಚ್ ಹ್ಯಾಝೆಲ್

ಇದರಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ಮತ್ತು ಸಂಕೋಚನ ಗುಣದಿಂದಾಗಿ ಇದು ಚರ್ಮಕ್ಕೆ ಶಮನ ನೀಡುವುದು. ವಿಚ್ ಹ್ಯಾಝೆಲ್ ಜೇಡ ಕಡಿತಕ್ಕೆ ಒಳ್ಳೆಯ ಚಿಕಿತ್ಸೆ.

ಅಪಾಯ ಮತ್ತು ವೈದ್ಯರನ್ನು ಯಾವಾಗ ಭೇಟಿಯಾಗಬೇಕು?

ಅಪಾಯ ಮತ್ತು ವೈದ್ಯರನ್ನು ಯಾವಾಗ ಭೇಟಿಯಾಗಬೇಕು?

ಕಡಿತದ ಭಾಗದಲ್ಲಿ ತೀವ್ರ ನೋವು ಅಥವಾ ಸೆಳೆತ ಉಂಟಾಗುತ್ತಲಿದ್ದರೆ ಆಗ ನೀವು ವೈದ್ಯರನ್ನು ಭೇಟಿಯಾಗಲೇಬೇಕು. ಉಸಿರಾಟದಲ್ಲಿ ತೊಂದರೆ ಅಥವಾ ಬೇರೆ ಯಾವುದೇ ಸಮಸ್ಯೆಯು ಕಡಿತದ ಬಳಿಕ ಕಾಣಿಸಿಕೊಂಡರೆ ಆಗ ನೀವು ತಕ್ಷಣ ವೈದ್ಯರನ್ನು ಭೇಟಿಯಾಗಿ. ಕಚ್ಚಿದ ಗಾಯವು ಒಣಗದೆ ಇದ್ದರೆ ಅಥವಾ ಸುತ್ತಲಿನ ಭಾಗವು ಕೆಂಪಾಗಿದ್ದು, ಗಾಯದಲ್ಲಿ ಕುಳಿ ಕಾಣಿಸಿದ್ದರೆ ಆಗ ನೀವು ವೈದ್ಯರ ಸಲಹೆ ಪಡೆಯಬೇಕು. ಲಕ್ಷಣಗಳು ಹೆಚ್ಚಾದಾಗ ವಿಷಕಾರಿ ಜೇಡವು ಕಚ್ಚಿದೆ ಎಂದು ಹೇಳಬಹುದು.

English summary

How Do You Treat A Spider Bite At Home?

Spider bites are not uncommon. It is easy to know that a spider has bitten you if you are lucky enough to have noticed the spider just when it has bitten you. However, the occurrence of this is quite uncertain and extremely rare. In most of the cases, a person doesn't realize that he or she has been bitten by a spider until several hours later. It, therefore, becomes necessary to understand how a spider bite looks and what steps you need to take to soothe the bitten area. In most cases, spider bites are harmless.
X
Desktop Bottom Promotion