Related Articles
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಮದ್ಯಪಾನ ಸೇವನೆ ಜಾಸ್ತಿಯಾದರೆ, ಇಂತಹ ಸೆಕ್ಸ್ ಸಮಸ್ಯೆಗಳು ಕಾಡಬಹುದು!
ಮದ್ಯಪಾನವು ಹಾನಿಕಾರವೆಂದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರವಾಗಿದೆ. ಆದರೂ ಮದ್ಯಪಾನ ಮಾಡುವವರು ಮಾತ್ರ ಇದನ್ನು ಕಡೆಗಣಿಸುವರು. ಯಾಕೆಂದರೆ ಮದ್ಯಪಾನದ ಅಭ್ಯಾಸವಾದರೆ ಅದನ್ನು ಹೆಚ್ಚಿನವರಿಗೆ ಬಿಡಲು ಕಷ್ಟವಾಗುವುದು. ಆಲ್ಕೋಹಾಲ್ ನಮ್ಮ ದೇಹಕ್ಕೆ ವಿವಿಧ ರೀತಿಯಿಂದ ಪರಿಣಾಮ ಬೀರುವುದು. ಕೆಲವೊಂದು ಸಲ ಮದ್ಯಪಾನ ಸೇವನೆ ಮಾಡಿದ ಬಳಿಕ ನಿಮ್ಮ ದೇಹದಲ್ಲಿ ಕೆಲವೊಂದು ಆಕಾಂಕ್ಷೆಗಳು ಮೂಡುವುದು. ಇದರಲ್ಲಿ ಲೈಂಗಿಕಾಸಕ್ತಿಯು ಒಂದಾಗಿದೆ.
ಇದು ಉದ್ರೇಕಿಸುವುದು ಮತ್ತು ಉದ್ರೇಕಿಸದೆ ಇರುವುದು. ಇದು ನಿಮ್ಮ ಆಕಾಂಕ್ಷೆಯನ್ನು ಉದ್ರೇಕಿಸುವುದು. ಆದರೆ ನಿಮ್ಮ ಲೈಂಗಿಕ ಪ್ರದರ್ಶನವನ್ನು ಕಡಿಮೆ ಮಾಡುವುದು ಎಂದು ಮೆಕಬೆಥ್ ನಲ್ಲಿ ಶೇಕ್ಸ್ ಪಿಯರ್ ಹೇಳಿರುವರು. ಆದರೆ ಮದ್ಯಪಾನ ಮತ್ತು ಸೆಕ್ಸ್ ಜತೆಯಾಗಿ ಸೇರಿದಾಗ ಏನಾಗುತ್ತದೆ ಎಂದು ಈ ಲೇಖನದಲ್ಲಿ ನಾವು ತಿಳಿಸಿಕೊಡಲಿದ್ದೇವೆ. ನಶೆಯ ಸೆಕ್ಸ್ ನಿಂದ ಏನಾಗುವುದು ಎಂದು ನೀವು ತಿಳಿಯಿರಿ.
ಪ್ರತಿಬಂಧಿಸಲ್ಪಡುವುದು ಕಡಿಮೆಯಾಗುವುದು
ಮೆದುಳು ದೇಹದ ದೊಡ್ಡ ಸೆಕ್ಸ್ ಅಂಗವೆಂದು ಹೇಳಲಾಗಿದೆ. ಮೆದುಳಿನ ಮೇಲೆ ಪರಿಣಾಮ ಬೀರುವಂತಹ ಯಾವುದೇ ವಿಚಾರವು ನೈಸರ್ಗಿಕವಾಗಿ ದೇಹದ ಇತರ ಅಂಗಾಂಗಗಳ ಮೇಲೆ ಪರಿಣಾಮ ಬೀರುವುದು. ನೀವು ಮದ್ಯಪಾನ ಮಾಡಿದಾಗ ಮೆದುಳಿನ ಕೆಲವು ಪ್ರತಿಕ್ರಿಯೆಗಳು ಮುಚ್ಚಲ್ಪಡುವುದು ಇದರಿಂದ ಲೈಂಗಿಕತೆಯು ಉತ್ತೇಜಿಸಲ್ಪಡುವುದು ಮತ್ತು ಹೆಚ್ಚು ಪ್ರೇರೇಪಣೆಗೊಳ್ಳುವರು. ಕೆಲವೊಂದು ವರದಿಗಳು ಹೇಳಿರುವ ಪ್ರಕಾರ ಆಲ್ಕೋಹಾಲ್ ಸೇವನೆ ಬಳಿಕ ನಮ್ಮ ಸೆಕ್ಸ್ ತುಂಬಾ ಸುಧಾರಣೆಯಾಗಿದೆಯಂತೆ. ಮೊದಲನೇಯದಾಗಿ ಸ್ಖಲನದಲ್ಲಿ ವಿಳಂಬ, ಎರಡನೇಯದಾಗಿ ಕಾಮಾಸಕ್ತಿಯು ಹೆಚ್ಚಾಗುವುದು, ಮೂರನೇಯದಾಗಿ ಲೈಂಗಿಕ ಶಕ್ತಿ ಮತ್ತು ನಾಲ್ಕನೇಯದಾಗಿ ಲೈಂಗಿಕ ಸೋಮಾರಿತನ ಕಡಿಮೆಯಾಗುವುದು.
Most Read: ಈ ರಾಶಿಚಕ್ರದವರು ಹುಟ್ಟಿನಿಂದಲೇ ನಾಯಕತ್ವ ಗುಣ ಹೊಂದಿರುತ್ತಾರಂತೆ!
ಹಾಗಾದರೆ ಆಲ್ಕೋಹಾಲ್ ಕಾಮೋತ್ತೇಜಕವೇ?
ಹೆಚ್ಚೇನು ಅಲ್ಲ. ಪ್ರತಿಬಂಧಕಗಳ ಕುಸಿತವಾಗುವುದನ್ನು ಜನರು ಹೆಚ್ಚಾಗಿ ಲೈಂಗಿಕ ಆಸಕ್ತಿಯಲ್ಲಿ ಹೆಚ್ಚಳವೆಂದು ಜನರು ಭಾವಿಸುವರು. ಆದರೆ ಇದು ನಿಮ್ಮ ಮೆದುಳಿನಲ್ಲಿ ಸಂಭವಿಸಿರುವುದಲ್ಲ. ಮೆದುಳಿನ ಮೇಲೆ ಯಾವುದೇ ರೀತಿಯಲ್ಲಿ ಲೈಂಗಿಕ ಉತ್ತೇಜನವು ನಡೆಯುವುದಿಲ್ಲ. ಆದರೆ ಕೇವಲ ಪ್ರತಿಬಂಧಕ ಕುಸಿತ ಮಾತ್ರ ಉಂಟಾಗುವುದು. ಆಲ್ಕೋಹಾಲ್ ನಿಮ್ಮ ರಕ್ತನಾಳವನ್ನು ಹಿಗ್ಗಿಸುವುದು ಎಂದು ಹೇಳಲಾಗುತ್ತದೆ. ಇದರಿಂದಾಗಿ ಮಹಿಳೆಯರು ಮದ್ಯಪಾನ ಮಾಡಿದಾಗ ಹೆಚ್ಚು ಉದ್ರೇಕಗೊಳ್ಳುವರು. ಆ್ಯಂಟಿಆಕ್ಸಿಡೆಂಟ್ ಗಳಿಂದ ಸಮೃದ್ಧವಾಗಿರುವಂತಹ ವೈನ್ ಜನನೇಂದ್ರೀಯಗಳಿಗೆ ರಕ್ತ ಸಂಚಾರವನ್ನು ಉತ್ತೇಜಿಸುವುದು. ಇದರಿಂದ ದೇಹವು ಬಿಸಿಯಾಗಿ, ಉದ್ರೇಕವಾಗುವುದು.
ಆಲ್ಕೋಹಾಲ್ ನ ಇಬ್ಬಗೆಯ ಗುಣಗಳು
ಅಧ್ಯಯನಗಳು ಹೇಳುವ ಪ್ರಕಾರ ಸಾಮಾನ್ಯ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಆಲ್ಕೋಹಾಲ್ ಸೇವನೆ ಮಾಡಿದರೆ ಆಗ ಅದು ಲೈಂಗಿಕ ಆಸಕ್ತಿ ಮೇಲೆ ನಕಾರಾತ್ಮಕ ಪ್ರಭಾವ ಬೀರುವುದು. ಇದನ್ನು ಆಲ್ಕೋಹಾಲ್ ನ ಇಬ್ಬಗೆಯ ಗುಣವೆಂದು ಹೇಳಲಾಗುತ್ತದೆ. ರಕ್ತದಲ್ಲಿನ ಆಲ್ಕೋಹಾಲ್ ಸಾಂದ್ರತೆಯು ಹೆಚ್ಚಾದಾಗ ಉತ್ತೇಜನದ ಮೇಲೆ ಪರಿಣಾಮ ಬೀರುವುದು ಮತ್ತು ಸಾಂದ್ರತೆಯು ಕಡಿಮೆಯಾದಾಗ ಖಿನ್ನತೆಯು ಆರಂಭವಾಗುವುದು.
ಆಲ್ಕೋಹಾಲ್ vs ಉದ್ರೇಕ
ನೀವು ಕುಡಿಯದೆ ಇರುವಾಗ ಲೈಂಗಿಕವಾಗಿ ಸ್ಪರ್ಶಿಸಿದರೆ ಆಗ ಅದನ್ನು ಮೆದುಳು ಉದ್ರೇಕವೆಂದು ತಿಳಿಯುತ್ತದೆ. ಆದರೆ ನೀವು ಕುಡಿದಾಗ ಸ್ಪರ್ಶವು ತುಂಬಾ ಕುಂದಿರುವುದು ಮತ್ತು ಮೆದುಳು ಇದನ್ನು ಸರಿಯಾಗಿ ಅರಿಯಲು ವಿಫಲವಾಗುವುದು. ಇದರಿಂದಾಗಿ ನಿಮ್ಮ ದೇಹವು ಹೆಚ್ಚು ಸೂಕ್ಷ್ಮತೆಯನ್ನು ಹೊಂದಿರದು. ಇದು ಆಲ್ಕೋಹಾಲ್ ನ ದ್ವಿಗುಣದ ಲಕ್ಷಣವಾಗಿದೆ. ನೀವು ಸ್ಪರ್ಶಿಸಬೇಕೆಂದು ಅದು ವಿರೋಧಿಸದೆ ಇದ್ದರೆ ಆಗ ಉದ್ರೇಕಗೊಳ್ಳುವುದಿಲ್ಲ. ಯಾಕೆಂದರೆ ಇದರಿಂದ ನರವ್ಯವಸ್ಥೆಯ ಕೇಂದ್ರಕ್ಕೆ ಖಿನ್ನತೆ ಬರುವುದು. ಇದರಿಂದ ನೀವು ಇದರಿಂದ ಹೆಚ್ಚು ಆನಂದ ಪಡೆಯಲು ಸಾಧ್ಯವಾಗದು.
ವಿಸ್ಕಿ ಶಿಶ್ನದ ಬಗ್ಗೆ ಕೇಳಿದ್ದೀರಾ?
ವಿಸ್ಕಿ ಕುಡಿದಾಗ ಮಾತ್ರವಲ್ಲದೆ, ಯಾವುದೇ ರೀತಿಯ ಆಲ್ಕೋಹಾಲ್ ಸೇವನೆ ಮಾಡಿದ ಬಳಿಕ ಪುರುಷರಿಗೆ ಉದ್ರೇಕವಾಗದೆ ಇರುವಂತಹ ಪರಿಸ್ಥಿತಿಯನ್ನು ವಿಸ್ಕಿ ಶಿಶ್ನವೆಂದು ಕರೆಯಲಾಗುವುದು. ಆಲ್ಕೋಹಾಲ್ ನಿಂದಾಗಿ ಪುರುಷರಲ್ಲಿ ಉದ್ರೇಕದ ಮೇಲೆ ಪರಿಣಾಮ ಬೀರುವ ಕಾರಣದಿಂದಾಗಿ ಪುರುಷರಲ್ಲಿ ವಿಸ್ಕಿ ಶಿಶ್ನವು ಸಾಮಾನ್ಯವಾಗಿದೆ. ಯಾಕೆಂದರೆ ಆಲ್ಕೋಹಾಲ್ ಶಿಶ್ನದ ಹೊರಗೆ ಹಾಗೂ ಒಳಗೆ ರಕ್ತಸಂಚಾರಕ್ಕೆ ಪರಿಣಾಮ ಬೀರುವುದು. ಅತಿಯಾಗಿ ಮದ್ಯಪಾನ ಮಾಡಿದರೆ ಅದರಿಂದ ದೀರ್ಘಕಾಲದ ತನಕ ನಿಮಿರು ದೌರ್ಬಲ್ಯವು ಕಾಣಿಸಿಕೊಳ್ಳಬಹುದು.
Most Read: ತಕ್ಷಣವೇ ಲೈಂಗಿಕ ಸಾಮರ್ಥ್ಯ ವೃದ್ಧಿಸುವ ನೈಸರ್ಗಿಕ ಪಾನೀಯಗಳು
ಯೋನಿ ಒಣಗುವಂತಹ ಸಮಸ್ಯೆಯು ಕಾಣಿಸುವುದು
ಆಲ್ಕೋಹಾಲ್ ನಿಂದಾಗಿ ದೇಹವು ನಿರ್ಜಲೀಕರಣಗೊಳ್ಳುವ ಕಾರಣದಿಂದಾಗಿ ಯೋನಿ ಕೂಡ ಒಣಗಬಹುದು ಮತ್ತು ಉತ್ತೇಜಿಸಿದರೂ ಅದರಿಂದ ಯೋನಿಯು ಲ್ಯೂಬ್ರಿಕೇಟ್ ಆಗಲು ತುಂಬಾ ಕಷ್ಟಪಡುವುದು. ಹಾರ್ಮೋನು ಅಸಮತೋಲನದ ಸಮಸ್ಯೆ ಇರುವಂತಹ ಮಹಿಳೆಯರಲ್ಲಿ ಈ ಸಮಸ್ಯೆಯು ಹೆಚ್ಚಾಗಿರುವುದು ಮತ್ತು ಇವರಲ್ಲಿ ಯೋನಿ ಒಣಗುವುದು ಹೆಚ್ಚಾಗುವುದು.
ಪರಾಕಾಷ್ಠೆ ತಲುಪದೆ ಇರಬಹುದು
ಆಲ್ಕೋಹಾಲ್ ನಿಂದಾಗಿ ಸ್ಖಲನವು ವಿಳಂಬವಾಗುವುದು ಎಂದು ನಮಗೆ ತಿಳಿದಿದೆ. ಅದಾಗ್ಯೂ, ಅತಿಯಾಗಿ ಕುಡಿದರೆ ಅದರಿಂದ ಪರಾಕಾಷ್ಠೆ ತಲುಪಲು ಮತ್ತಷ್ಟು ವಿಳಂಬವಾಗಬಹುದು. ಇದು ಯಾಕೆಂದರೆ ಸ್ಪರ್ಶವು ತುಂಬಾ ಕುಂದಿರುವುದು ಮತ್ತು ನಿಮ್ಮ ಶಿಶ್ನ ಅಥವಾ ಯೋನಿಗೆ ಹೆಚ್ಚು ಉದ್ರೇಕವಾಗದೆ ಇರಬಹುದು.
ಸಹಮತದ ಸೆಕ್ಸ್ ಬಗ್ಗೆ ನಿಮ್ಮ ನಿರ್ಧಾರವನ್ನು ತಪ್ಪಾಗಿಸಬಹುದು
ಮಿತಿ ಮೀರಿ ಕುಡಿದಾಗ ನಿಮ್ಮ ಆಲೋಚನೆಗಳ ಮೇಲೆ ನಿಯಂತ್ರಣ ಕಳೆದುಕೊಳ್ಳಹುದು. ಇದರಿಂದಾಗಿ ನೀವು ಯಾವುದೇ ರೀತಿಯ ಕಾಂಡೋಮ್ ಅಥವಾ ಬೇರೆ ರೀತಿಯ ಗರ್ಭನಿರೋಧಕವನ್ನು ಬಳಸದೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಬಹುದು. ಶಿಶ್ನವು ಹೆಚ್ಚು ಉದ್ರೇಕಗೊಳ್ಳದೆ ಇದ್ದರೆ ಆಗ ಕಾಂಡೋಮ್ ಹರಿದು ಹೋಗಬಹುದು ಅಥವಾ ಜಾರಬಹುದು. ಇದರಿಂದ ಅತಿಯಾಗಿ ಮದ್ಯ ಸೇವನೆ ಮಾಡಿದಾಗ ಸೆಕ್ಸ್ ಕಡೆಗಣಿಸಬೇಕು. ಮಿತಿಮೀರಿ ಕುಡಿದರೆ ಅದರಿಂದ ಇಬ್ಬರಿಗೂ ನಶೆ ಏರಿರುವುದು. ಇದರಿಂದ ಇದು ಸಮ್ಮತದ ಲೈಂಗಿಕ ಕ್ರಿಯೆಯಾ ಎಂದು ತಿಳಿದಿರುವುದಿಲ್ಲ.
Most Read: ಮಹಿಳೆಯರ ಪರಾಕಾಷ್ಠೆಯ ಬಗ್ಗೆ ದೊಡ್ಡ ರಹಸ್ಯ ಬಹಿರಂಗ!
ಮಿತಿಮೀರಿದ ಕುಡಿತದಿಂದ ಲೈಂಗಿಕ ಆರೋಗ್ಯದ ಮೇಲೆ ದೀರ್ಘ ಕಾಲದ ಪರಿಣಾಮ
ದೀರ್ಘಕಾಲದಿಂದ ಮದ್ಯಪಾನ ಮಾಡುತ್ತಲಿದ್ದರೆ ಅದರಿಂದ ಪುರುಷರಲ್ಲಿ ನಿಮಿರು ದೌರ್ಬಲ್ಯದಂತಹ ಸಮಸ್ಯೆ ಕಾಣಿಸಬಹುದು. ಇದು ದೇಹದಲ್ಲಿ ಒತ್ತಡದ ಹಾರ್ಮೋನ್ ಮಟ್ಟವನ್ನು ಹೆಚ್ಚಿಸುವುದು ಮತ್ತು ಟೆಸ್ಟೋಸ್ಟೆರಾನ್ ಮಟ್ಟ ಕಡಿಮೆ ಮಾಡುವುದು. ಇದರಿಂದಾಗಿ ದೀರ್ಘಕಾಲದ ತನಕ ಕಾಮಾಸಕ್ತಿಯು ಕಡಿಮೆಯಾಗುವುದು. ಇದು ಹೃದಯದ ಆರೋಗ್ಯದ ಮೇಲೆ ಕೂಡ ಪರಿಣಾಮ ಬೀರುವುದು. ಇದು ಅಪಧಮನಿಯಲ್ಲಿ ತಡೆ ಉಂಟು ಮಾಡುವುದು ಮತ್ತು ಹೃದಯಕ್ಕೆ ಸರಿಯಾಗಿ ರಕ್ತಸಂಚಾರವಾಗದಂತೆ ಮಾಡುವುದು. ಇದು ನಿಮ್ಮ ಲೈಂಗಿಕ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು.