For Quick Alerts
ALLOW NOTIFICATIONS  
For Daily Alerts

ಗುಪ್ತಾಂಗಗಳ ಭಾಗದಲ್ಲಿ ಕೀವು ಗುಳ್ಳೆ, ಕುರ, ಅಥವಾ ಹುಣ್ಣಾಗಿದ್ದರೆ, ಇಲ್ಲಿದೆ ನೋಡಿ ಮನೆಮದ್ದುಗಳು

|

ಮನುಷ್ಯರ ಗುಪ್ತಾಂಗಗಳ ಮೇಲೆ ಹುಣ್ಣು, ಕೀವುಗುಳ್ಳೆ ಅಥವಾ ಬೊಕ್ಕೆಗಳು, ಕುರು ರೀತಿ ಉಂಟಾಗುವುದು ಅಸಹಜವೇನಲ್ಲ. ಆದರೆ ಆ ಜಾಗದಲ್ಲಿ ಹುಣ್ಣುಗಳಾದಾಗ ಉಂಟಾಗುವ ವಿಪರೀತ ನೋವನ್ನು ತಡೆದುಕೊಳ್ಳುವುದು ತೀರಾ ಯಾತನಾದಾಯಕವಾಗಿರುತ್ತದೆ. ಜೊತೆಗೆ ಇದರ ಬಗ್ಗೆ ಚಿಕಿತ್ಸೆ ಪಡೆಯಬೇಕೆಂದರೆ ನಾಚಿಕೆಯು ಅಡ್ಡ ಬರುತ್ತದೆ. ಹೀಗಾಗಿ ಗುಪ್ತಾಂಗಗಳ ಮೇಲೆ ಹುಣ್ಣಾಗುವುದು ಎಂದರೆ ಅದೊಂದು ಎರಡಲಗಿನ ಕತ್ತಿ ಇದ್ದಂತೆ.

ಇತ್ತ ತಡೆಯಲು ಆಗದು, ಅತ್ತ ಚಿಕಿತ್ಸೆ ಪಡೆಯಲೂ ಆಗದು ಎಂಬ ಸ್ಥಿತಿ ಉಂಟಾಗುತ್ತದೆ. ಆದಾಗ್ಯೂ ಕೆಲ ಪರಿಣಾಮಕರ ಮನೆ ಮದ್ದುಗಳ ಮೂಲಕವೇ ಇಂಥ ಹುಣ್ಣುಗಳ ನಿವಾರಣೆ ಸಾಧ್ಯ ಎಂಬುದು ಗೊತ್ತಿರಲಿ. ಗುಪ್ತಾಂಗಗಳ ಮೇಲೆ ಹುಣ್ಣುಗಳಾಗಲು ಕಾರಣಗಳೇನು ಹಾಗೂ ಅವುಗಳನ್ನು ಯಾವ ಮನೆ ಮದ್ದುಗಳ ಮೂಲಕ ಉಪಶಮನಗೊಳಿಸಬಹುದು ಎಂಬುದನ್ನು ಈ ಅಂಕಣದಲ್ಲಿ ತಿಳಿಯೋಣ.

ಗುಪ್ತಾಂಗಗಳ ಕೀವು ಗುಳ್ಳೆ, ಕುರ ಆಗಲು ಕಾರಣಗಳು

ಗುಪ್ತಾಂಗಗಳ ಕೀವು ಗುಳ್ಳೆ, ಕುರ ಆಗಲು ಕಾರಣಗಳು

ಜನನಾಂಗದ ಮೇಲೆ ಕಾಣಿಸಿಕೊಳ್ಳುವ ಹುಣ್ಣುಗಳು ಸಾಮಾನ್ಯವಾಗಿ ಕೂದಲಿನ ಬುಡ ಅಥವಾ ತೈಲ ಗ್ರಂಥಿಗಳ ಮೂಲಕ ಹರಡುವ ಸೋಂಕಿನಿಂದ ಉಂಟಾಗುತ್ತವೆ. ಚರ್ಮದ ಮೇಲಿನ ಸೂಕ್ಷ್ಮ ರಂಧ್ರ ಅಥವಾ ಸೀಳಿನ ಮೂಲಕ ಚರ್ಮದೊಳಗೆ ಪ್ರವೇಶಿಸುವ ಸ್ಟೆಫಿಲೊಕಾಕಸ್ (ಸ್ಟಾಫ್) ಎಂಬ ಬ್ಯಾಕ್ಟೀರಿಯಾದ ಸೋಂಕಿನಿಂದ ಹುಣ್ಣು ಆರಂಭವಾಗುತ್ತದೆ. ಸ್ಟೆಫಿಲೊಕಾಕಸ್ ಇದು ಮನುಷ್ಯ ದೇಹದ ಮೇಲೆ ಸಾಮಾನ್ಯವಾಗಿ ಕಂಡು ಬರುವ ಬ್ಯಾಕ್ಟಿರಿಯಾವೇ ಆಗಿದೆ. ಆದರೆ ಯಾವಾಗ ಇದು ಚರ್ಮದ ಒಳಗೆ ಪ್ರವೇಶ ಪಡೆಯುತ್ತದೆಯೋ ಆಗ ಸೋಂಕಿನ ಅಪಾಯ ನಿರ್ಮಾಣವಾಗುತ್ತದೆ. ದೇಹದ ಸ್ವಚ್ಛತೆಗೆ ಗಮನ ನೀಡದಿರುವುದರಿಂದ (ದಿನನಿತ್ಯ ಸ್ನಾನ ಮಾಡದಿರುವುದು ಅಥವಾ ಜನನಾಂಗಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸದಿರುವುದು), ಮತ್ತು ಗುಪ್ತಾಂಗದ ಸುತ್ತಲೂ ಶೇವಿಂಗ್ ಮಾಡಿದ ಸಂದರ್ಭಗಳಲ್ಲಿ ಹುಣ್ಣಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ.

ಮಹಿಳೆಯರ ಗುಪ್ತಾಂಗಗಳ ಮೇಲಿನ ಕೀವು ಗುಳ್ಳೆ ಅಥವಾ ಕುರ ಆಗಲು

ಮಹಿಳೆಯರ ಗುಪ್ತಾಂಗಗಳ ಮೇಲಿನ ಕೀವು ಗುಳ್ಳೆ ಅಥವಾ ಕುರ ಆಗಲು

ಮಹಿಳೆಯರಲ್ಲಿ ಯೋನಿಯ ಸುತ್ತಲೂ, ಕೂದಲು ಬೆಳೆದ ಭಾಗ ಅಥವಾ ಯೋನಿಯ ಮುಂಭಾಗದಲ್ಲಿ ಕೀವು ತುಂಬಿದ ಉಬ್ಬುಗಳ ರೀತಿಯಲ್ಲಿ ಹುಣ್ಣುಗಳಾಗುವ ಸಾಧ್ಯತೆ ಇರುತ್ತದೆ. ಮೊದಲಿಗೆ ಕೆಂಪು ಗುಳ್ಳೆಗಳಾಗಿ ಕಾಣಿಸಿಕೊಳ್ಳುವ ಇವುಗಳಲ್ಲಿ ನಂತರ ಕೀವು ತುಂಬಿಕೊಂಡು ನೋವು ಹಾಗೂ ಉರಿ ಉಂಟಾಗುತ್ತದೆ.

Most Read: ಹಸ್ತಮೈಥುನ ಬಗ್ಗೆ ಇರುವ ಕೆಲವು ತಪ್ಪು ನಂಬಿಕೆಗಳು, ಇದನ್ನೆಲ್ಲಾ ನಂಬಲೇಬೇಡಿ!

ಪುರುಷರ ಗುಪ್ತಾಂಗಗಳ ಮೇಲಿನ ಕುರ

ಪುರುಷರ ಗುಪ್ತಾಂಗಗಳ ಮೇಲಿನ ಕುರ

ಪುರುಷರ ಶಿಶ್ನದ ಮೇಲೆ ಹುಣ್ಣುಗಳು ಉಂಟಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಪುರುಷರಲ್ಲಿ ಸಹ ಮೊದಲಿಗೆ ಚಿಕ್ಕ ಕೆಂಪು ಗುಳ್ಳೆಗಳಾಗಿ ನಂತರ ದೊಡ್ಡದಾಗಿ ಬೆಳೆದು ಕೀವು ತುಂಬಿ ನೋವು ಉಂಟಾಗುತ್ತದೆ. ಹೀಗೆ ಗುಪ್ತಾಂಗಗಳ ಮೇಲೆ ಹುಣ್ಣುಗಳಾದಾಗ ಅವುಗಳ ಉಪಶಮನಕ್ಕೆ ಏನು ಮಾಡಬಹುದು ಎಂಬುದನ್ನು ತಿಳಿದುಕೊಳ್ಳುವುದು ಅಗತ್ಯ. ನಿಮಗೂ ಈ ಸಮಸ್ಯೆ ಉಂಟಾದಲ್ಲಿ ಇಲ್ಲಿ ತಿಳಿಸಲಾದ ಮನೆ ಮದ್ದುಗಳ ಮೂಲಕ ಪರಿಹಾರ ಕಂಡುಕೊಳ್ಳಬಹುದು.

ಗುಪ್ತಾಂಗಗಳ ಮೇಲಿನ ಹುಣ್ಣು ನಿವಾರಣೆಗೆ ಪರಿಣಾಮಕಾರಿ ಮನೆ ಮದ್ದು ವಿಧಾನಗಳು:

ಉಗುರು ಬೆಚ್ಚಗಿನ ಟವೆಲ್ ಉಪಯೋಗಿಸಿ

ಉಗುರು ಬೆಚ್ಚಗಿನ ಟವೆಲ್ ಉಪಯೋಗಿಸಿ

ತೇವಾಂಶ ಹೊಂದಿದ. ಉಗುರು ಬೆಚ್ಚಗಿನ ಟವೆಲ್ ಅನ್ನು ಹುಣ್ಣಿನ ಮೇಲೆ ಸುಮಾರು 20 ನಿಮಿಷಗಳವರೆಗೆ ಇಡಿ. ಈ ರೀತಿ ದಿನಕ್ಕೆ 3 ರಿಂದ 4 ಬಾರಿ ಮಾಡಬೇಕು. ಹೀಗೆ ಮಾಡುವುದರಿಂದ ಉಂಟಾಗುವ ಉಷ್ಣತೆಯಿಂದ ರಕ್ತದಲ್ಲಿನ ವೈರಸ್ ಜೀವಾಣುನಿರೋಧಕ ಅಂಶಗಳ ಪರಿಚಲನೆ ಹೆಚ್ಚಾಗಿ ಸೋಂಕು ಹಾಗೂ ಕೀವು ಕಡಿಮೆ ಯಾಗಲಾರಂಭಿಸುತ್ತದೆ. ಕೆಲ ದಿನಗಳಲ್ಲಿ ಕೀವು ಸೋರಿ ಹೋಗಿ ಹುಣ್ಣು ತಾನಾಗಿಯೇ ಮಾಯಲಾರಂಭಿಸುತ್ತದೆ. ಆದರೆ ಯಾವುದೇ ಕಾರಣಕ್ಕೂ ಹುಣ್ಣನ್ನು ಹಿಸುಕಕೂಡದು. ಇದರಿಂದ ಸೋಂಕು ಹೆಚ್ಚಾಗಿ ಮತ್ತಷ್ಟು ನೋವುಂಟಾಗಬಹುದು. ಹುಣ್ಣು ಒಡೆದ ನಂತರವೂ ಕೆಲ ದಿನಗಳವರೆಗೆ ಈ ಟವೆಲ್ ಚಿಕಿತ್ಸೆ ವಿಧಾನವನ್ನು ಮುಂದುವರೆಸಿ. ಇದರಿಂದ ಹುಣ್ಣಿನ ಮೂಲದಲ್ಲಿನ ಸೋಂಕು ಸಂಪೂರ್ಣವಾಗಿ ಹೋಗಿ ಹುಣ್ಣು ವಾಸಿಯಾಗುತ್ತದೆ.

ದಿನಕ್ಕೆ ಕನಿಷ್ಠ ಎರಡು ಬಾರಿಯಾದರೂ ಸಾಧಾರಣ ಅಥವಾ ಆಂಟಿ ಬ್ಯಾಕ್ಟೀರಿಯಾ ಸೋಪಿನಿಂದ ಗಾಯದ ಸ್ಥಳವನ್ನು ಸ್ವಚ್ಛಗೊಳಿಸಿ. ಹುಣ್ಣಾದ ಜಾಗದಲ್ಲಿ ಬ್ಯಾಕ್ಟೀರಿಯಾಗಳು ಹೆಚ್ಚಾಗದಂತೆ ನೋಡಿಕೊಳ್ಳಿ. ಪ್ರತಿ ಬಾರಿಯೂ ಸ್ವಚ್ಛಗೊಳಿಸಿದ ನಂತರ ಹುಣ್ಣಿಗೆ ಹೊಸ ಬ್ಯಾಂಡೇಜ್ ಹಾಕಿ.

Most Read: ನೀವು ಸೆಕ್ಸ್ ಬಗ್ಗೆ ತಿಳಿಯಬೇಕಾದ ಕೆಲವು ಸಂಗತಿಗಳು ಇಲ್ಲಿವೆ..

ಬ್ಯಾಕ್ಟೀರಿಯಾ ನಿರೋಧಕ ಮುಲಾಮು

ಬ್ಯಾಕ್ಟೀರಿಯಾ ನಿರೋಧಕ ಮುಲಾಮು

ನೈಸರ್ಗಿಕವಾದ ಬ್ಯಾಕ್ಟೀರಿಯಾ ನಿರೋಧಕ ಮುಲಾಮು ಬಳಸುವುದರಿಂದ ಸಹ ಹುಣ್ಣುಗಳನ್ನು ಗುಣಪಡಿಸಬಹುದು. ಹುಣ್ಣು ಒಡೆದು ಸೋರಲಾರಂಭಿಸಿದ ನಂತರ ಬಳಸಬಹುದಾದ ನೈಸರ್ಗಿಕ ಮುಲಾಮುಗಳು ಹೀಗಿವೆ..

ಎಪ್ಸಮ್ ಸಾಲ್ಟ್

ಎಪ್ಸಮ್ ಸಾಲ್ಟ್

ಹುಣ್ಣುಗಳ ನಿವಾರಣೆಗೆ ಎಪ್ಸಮ್ ಲವಣ ಬೆರೆಸಿದ ನೀರಿನಿಂದ ಸ್ನಾನ ಮಾಡುವುದು ಬಹು ಪ್ರಯೋಜನಕಾರಿಯಾಗಿದೆ. ಹುಣ್ಣುಗಳು ಬೇಗ ವಾಸಿಯಾಗಲು ಈ ವಿಧಾನವನ್ನು ಬಹು ಹಿಂದಿನಿಂದಲೂ ಬಳಸಲಾಗುತ್ತಿದೆ. ಎಪ್ಸಮ್ ಬೆರೆಸಿದ ನೀರಿನಿಂದ ನಿತ್ಯ ಸ್ನಾನ ಮಾಡುವುದರಿಂದ ಹುಣ್ಣುಗಳಲ್ಲಿನ ಕೀವು ಬೇಗನೆ ಸೋರಿ ಹೋಗಿ ಹುಣ್ಣುಗಳು ಶೀಘ್ರ ಒಣಗಲಾರಂಭಿಸುತ್ತವೆ.

ಅರಿಶಿನ ಪುಡಿ

ಅರಿಶಿನ ಪುಡಿ

ಸಾವಿರಾರು ವರ್ಷಗಳ ಹಿಂದಿನಿಂದಲೇ ಹಲವಾರು ರೋಗಗಳ ಉಪಚಾರಕ್ಕೆ ಅರಿಶಿನವನ್ನು ಬಳಸಲಾಗುತ್ತಿದೆ. ಇದನ್ನು ನೇರವಾಗಿ ಹೊಟ್ಟೆಗೆ ಸೇವಿಸಬಹುದು ಅಥವಾ ದೇಹದ ಮೇಲೆ ಲೇಪಿಸಬಹುದು. ಒಟ್ಟಾರೆಯಾಗಿ ಇದರಲ್ಲಿನ ನೋವು ನಿವಾರಕ ಹಾಗೂ ಬ್ಯಾಕ್ಟೀರಿಯಾ ನಾಶಪಡಿಸುವ ಗುಣಗಳು ಬಹುತೇಕ ರೋಗಗಳ ನಿವಾರಣೆಗೆ ಸಹಕಾರಿಯಾಗಿವೆ. ಹುಣ್ಣುಗಳ ನಿವಾರಣೆಗೂ ಅರಿಶಿನ ಪ್ರಯೋಜನಕಾರಿಯಾಗಿದೆ. ಇದನ್ನು ಹಾಲು ಅಥವಾ ನೀರಿನಲ್ಲಿ ಬೆರೆಸಿ ಕುಡಿಯಬಹುದು. ಅಲ್ಲದೆ ಇದರ ಪೇಸ್ಟ್ ತಯಾರಿಸಿ ಅದರೊಂದಿಗೆ ಸ್ವಲ್ಪ ಶುಂಠಿಯನ್ನು ಮಿಕ್ಸ್ ಮಾಡಿ ಹುಣ್ಣುಗಳ ಮೇಲೆ ಲೇಪಿಸಿದರೆ ಬೇಗನೆ ಹುಣ್ಣು ವಾಸಿಯಾಗುತ್ತವೆ.

ಟೀ ಟ್ರೀ ಆಯಿಲ್

ಟೀ ಟ್ರೀ ಆಯಿಲ್

ಟೀ ಟ್ರೀ ಆಯಿಲ್ ಎಂಬುದು ಒಂದು ರೀತಿಯ ಗಿಡದ ಎಣ್ಣೆಯಾಗಿದೆ. ನಾವು ನಿತ್ಯ ಬಳಸುವ ಚಹಾ ಪುಡಿ ಗಿಡಕ್ಕೂ ಇದಕ್ಕೂ ಸಂಬಂಧವಿಲ್ಲ. ಟೀ ಟ್ರೀ ಆಯಿಲ್‌ನಲ್ಲಿ ಸೋಂಕು ವಿರೋಧಿ ಹಾಗೂ ಬ್ಯಾಕ್ಟೀರಿಯಾ ವಿರೋಧಿ ಅಂಶಗಳು ಹೇರಳವಾಗಿವೆ. ಇದು ತುಂಬಾ ಸ್ಟ್ರಾಂಗ್ ಆಗಿರುವುದರಿಂದ ಇದನ್ನು ಕೊಬ್ಬರಿ ಎಣ್ಣೆ ಅಥವಾ ಆಲಿವ್ ಎಣ್ಣೆಯೊಂದಿಗೆ ಮಿಕ್ಸ್ ಮಾಡಿ ಹುಣ್ಣುಗಳ ಮೇಲೆ ಲೇಪಿಸಿದರೆ ಗಾಯ ವಾಸಿಯಾಗುತ್ತದೆ.

ಔಡಲ ಎಣ್ಣೆ

ಔಡಲ ಎಣ್ಣೆ

ಔಡಲ ಎಣ್ಣೆಯಲ್ಲಿರುವ ರಿಸಿನೊಲೆಕ್ ಆಸಿಡ್ ಅಂಶವು ನೈಸರ್ಗಿಕವಾದ ನೋವು ನಿವಾರಕವಾಗಿದೆ. ಅದರಲ್ಲೂ ಚರ್ಮದ ಸೋಂಕುಗಳನ್ನು ಶಮನಗೊಳಿಸಲು ಔಡಲ ಎಣ್ಣೆ ಬಹು ಪ್ರಯೋಜನಕಾರಿಯಾಗಿದೆ.

Most Read: ಪುರುಷರ ಗುಪ್ತಾಂಗ ಜಾಗವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಸರಳ ಟಿಪ್ಸ್

ಬೇವಿನ ಎಣ್ಣೆ

ಬೇವಿನ ಎಣ್ಣೆ

ಮೊಡವೆಗಳ ನಿವಾರಣೆಗೆ ಸಾಮಾನ್ಯವಾಗಿ ಬೇವಿನ ಎಣ್ಣೆಯನ್ನು ಬಳಸಲಾಗುತ್ತದೆ. ಆದರೆ ಗುಪ್ತಾಂಗಗಳ ಮೇಲಿನ ಹುಣ್ಣಿಗೂ ಇದನ್ನು ಬಳಸಬಹುದು. ಇದರಲ್ಲಿನ ಸೋಂಕು ವಿರೋಧಿ ಹಾಗೂ ಬ್ಯಾಕ್ಟೀರಿಯಾ ವಿರೋಧಿ ಅಂಶಗಳು ಹುಣ್ಣು ನಿವಾರಿಸಲು ಸಹಕಾರಿಯಾಗಿವೆ. ಪ್ರತಿದಿನ ೩ ಬಾರಿ ಹುಣ್ಣಾದ ಜಾಗದಲ್ಲಿ ಬೇವಿನ ಎಣ್ಣೆ ಲೇಪಿಸುವುದರಿಂದ ಗಾಯ ವಾಸಿ ಮಾಡಬಹುದು.

English summary

Home Remedies for Boils on the Private Area

Having a boil on the private area is not only painful, but it can be quite embarrassing when seeking help for such an ailment. Fortunately, there are some powerful home remedies for boils on the Private Area. First, let’s explore what causes boils on the private area so we can understand how to better treat them…
X
Desktop Bottom Promotion