For Quick Alerts
ALLOW NOTIFICATIONS  
For Daily Alerts

ಪುರುಷರಲ್ಲಿ ಶಕ್ತಿ ಹೆಚ್ಚಿಸುವ ಹದಿನೈದು ಆಹಾರಗಳು

By Arshad
|

ಪುರುಷರ ಆರೋಗ್ಯದ ಬಗ್ಗೆ ನಡೆಸುವ ಚರ್ಚೆಯಲ್ಲಿ ಪ್ರಮುಖವಾಗಿ ಕಂಡುಬರುವ ಅಂಶವೆಂದರೆ ಪುರುಷರಿಗೆ ಮಹಿಳೆಯರಿಗಿಂತಲೂ ಹೆಚ್ಚಿನ ಪೋಷಕಾಂಶಗಳ ಅಗತ್ಯವಿದೆ ಎಂಬ ಅಂಶ. ಪುರುಷರು ದೈಹಿಕವಗಿ ಮಹಿಳೆಯರಿಗಿಂತ ಹೆಚ್ಚು ದೃಢಕಾಯರು ಹಾಗೂ ಹೆಚ್ಚಿನ ತೂಕವುಳ್ಳವರೂ ಆಗಿರುವ ಕಾರಣ ಈ ದೇಹದ ಪೋಷಣೆಗೆ ಹೆಚ್ಚೇ ಪೌಷ್ಟಿಕ ಆಹಾರ ಮತ್ತು ಪೂರಕ ಆಹಾರಗಳ ಅಗತ್ಯವಿದೆ. ಜೀವನದಲ್ಲಿ ಹೆಚ್ಚುತ್ತಿರುವ ಒತ್ತಡ, ದೈನಂದಿನ ಸವಾಲುಗಳು ಹಾಗೂ ತಮ್ಮ ಕುಟುಂಬದ ನಿರ್ವಹಣೆಯ ಅಗತ್ಯತೆಗಳನ್ನು ಪೂರೈಸುವ ನಡುವೆ ಆರೋಗಕ್ಕೆ ಹೆಚ್ಚಿನ ಪುರುಷರು ಕಡಿಮೆ ಕಾಳಜಿ ನೀಡುತ್ತಾರೆ. ಮಹಿಳೆಯರಲ್ಲಿ ಬೇರೆಯೇ ತೆರನಾದ ಆರೋಗ್ಯದ ಕಾಳಜಿಯ ಅಗತ್ಯತೆ ಇದೆ. ವಾಸ್ತವವಾಗಿ ಆರೋಗ್ಯದ ವಿಷಯ ಬಂದಾಗ, ಪುರುಷರ ಆರೋಗ್ಯ ಎಲ್ಲಿಯವರೆಗೆ ಉಲ್ಬಣಗೊಳ್ಳುವುದಿಲ್ಲವೋ, ಅಲ್ಲಿಯವರೆಗೂ ಅತಿ ಕಡಿಮೆ ಚರ್ಚಿಸಲ್ಪಡುತ್ತದೆ. ಮಹಿಳೆಯರಿಗೆ ಹೋಲಿಸಿದರೆ ಪುರುಷರು ಹೆಚ್ಚು ಒತ್ತಡವನ್ನು ಸಹಿಸಿಕೊಳ್ಳಬಲ್ಲರು, ಇದೇ ಕಾರಣಕ್ಕೆ ಪುರುಷರ ದೇಹ ರೋಗಗಳಿಗೆ ಸುಲಭವಾಗಿ ತುತ್ತಾಗುತ್ತದೆ. ಮಾನಸಿಕ ಒತ್ತಡದಿಂದಾಗಿ ದೇಹದ ರೋಗ ನಿರೋಧಕ ವ್ಯವಸ್ಥೆಯೂ ಕೊಂಚಮಟ್ಟಿಗೆ ಕುಂಠಿತಗೊಳ್ಳುತ್ತದೆ.

ಪುರುಷರು ತಮ್ಮ ಸಾಮರ್ಥ್ಯಕ್ಕೂ ಹೆಚ್ಚೇ ದೈಹಿಕ ಕಾರ್ಯಗಳನ್ನು ನಡೆಸುತ್ತಾರೆ ಹಾಗೂ ನೋವಿಗೆ ಹೆಚ್ಚೇ ಸಹನೆಯನ್ನು ಪ್ರಕಟಿಸುತ್ತಾರೆ. ಹಾಗಾಗಿ ಪುರುಷರ ದೇಹ ಚಿಕ್ಕ ಪುಟ್ಟ ದಣಿವುಗಳಿಗೆ ನೋವನ್ನು ಪ್ರಕಟಿಸಿದರೂ ಇದನ್ನು ಗ್ರಹಿಸದ ಕಾರಣ ದಣಿವು ವಿಪರೀತ ಎನ್ನುವವರೆಗೂ ನೋವು ಗಮನಕ್ಕೇ ಬಂದಿರುವುದಿಲ್ಲ. ಆದರೆ ಈ ಅಲಕ್ಷ್ಯದ ಕಾರಣ ಬೇಗನೇ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಆದ್ದರಿಂದ ತಡವಾಗುವ ಮುನ್ನವೇ ಪುರುಷರು ತಮ್ಮ ಆರೋಗ್ಯದ ಕಾಳಜಿಯನ್ನು ವಹಿಸಬೇಕಾಗಿದೆ!

ಅನಾರೋಗ್ಯ ಎದುರಾಗುವ ಮುನ್ನವೇ ತಮ್ಮ ದೇಹವನ್ನು ಇದಕ್ಕಾಗಿ ಸಿದ್ಧಪಡಿಸಿಕೊಳ್ಳುವುದು ಜಾಣತನದ ಕ್ರಮ. ಆರೋಗ್ಯವನ್ನು ಉತ್ತಮಗೊಳಿಸಿ ರೋಗ ನಿರೋಧಕ ಶಕ್ತಿಯನ್ನೂ ಬಲಪಡಿಸಿದರೆ ಕೆಲವಾರು ರೋಗಗಳಿಂದ ರಕ್ಷಣ ಪಡೆಯುವ ಜೊತೆಗೇ ಆರೋಗ್ಯವೂ ವೃದ್ದಿಸುತ್ತದೆ. ಈ ನಿಟ್ಟಿನಲ್ಲಿ ಕೆಲವು ಆಹಾರಗಳು ವಿಶೇಷವಾಗಿ ಪುರುಷರ ಆರೋಗ್ಯವನ್ನು ವೃದ್ದಿಸುವಲ್ಲಿ ಹೆಚ್ಚಿನ ನೆರವು ನೀಡುತ್ತವೆ. ಬನ್ನಿ, ಈ ಆಹಾರಗಳು ಯಾವುವು ಎಂಬುದನ್ನು ನೋಡೋಣ...

1. ರಾಗಿ

1. ರಾಗಿ

ರಾಗಿಯಲ್ಲಿ ಅತ್ಯುತ್ತಮ ಪ್ರಮಾಣದ ಕ್ಯಾಲ್ಸಿಯಂ ಇದೆ ಹಾಗೂ ಇದು ಮೂಳೆಗಳು ಟೊಳ್ಳಾಗುವ osteoporosis ಎಂಬ ಸ್ಥಿತಿಯಿಂದ ರಕ್ಷಿಸುತ್ತದೆ. ಅಲ್ಲದೇ ಇದರಲ್ಲಿ ಸತು ಸಹಾ ಹೆಚ್ಚಾಗಿದ್ದು ನಪುಂಸಕತ್ವದಿಂದ ತಡೆಯುತ್ತದೆ. ಸ್ಥೂಲದೇಹ ಆವರಿಸುವುದರಿಂದ ತಡೆದು ಮಧುಮೇಹದಿಂದಲೂ ರಕ್ಷಣೆ ಒದಗಿಸುತ್ತದೆ. ಪುರುಷರ ಆರೋಗ್ಯಕ್ಕೆ ರಾಗಿ ಒಂದು ಅತ್ಯುತ್ತಮವಾದ ಆಹಾರವಾಗಿದೆ.

2. ಚಿಯಾ ಬೀಜಗಳು

2. ಚಿಯಾ ಬೀಜಗಳು

ಈ ಬೀಜಗಳು ಪುರುಷರ ಆರೋಗ್ಯಕ್ಕೆ ಹೇಳಿ ಮಾಡಿಸಿದಂತಿವೆ. ಇದರ ಸೇವನೆಯಿಂದ ದೇಹದ ತಾಪಮಾನ ಆರೋಗ್ಯಕರ ಮಿತಿಗಳಲ್ಲಿರುತ್ತವೆ ಹಾಗೂ ವಿಶೇಷವಾಗಿ ಬೇಸಿಗೆಯ ಸಮಯದಲ್ಲಿ ಹೆಚ್ಚಿನ ನೆರವು ನೀಡುತ್ತವೆ. ಇದರಲ್ಲಿ ಹೆಚ್ಚಿನ ಪ್ರಮಾನದ ಒಮೆಗಾ 3 ಕೊಬ್ಬಿನ ಆಮ್ಲಗಳು, ಕರಗದ ನಾರು ಹಾಗೂ ಆಂಟಿ ಆಕ್ಸಿಡೆಂಟುಗಳಿವೆ. ಹೃದಯದ ತೊಂದರೆಗಳಿಂದ ರಕ್ಷಣೆ ಒದಗಿಸುವ ಸಹಿತ ಮೆದುಳಿನ ಆರೋಗ್ಯಕ್ಕೂ ಒಳ್ಳೆಯದಾಗಿದೆ. ಅಷ್ಟೇ ಅಲ್ಲ, ಮರೆಗುಳಿತನ, ಆಲ್ಜೀಮರ್ಸ್ ಕಾಯಿಲೆ ಮೊದಲಾದವುಗಳ ವಿರುದ್ದವೂ ರಕ್ಷಣೆ ಒದಗಿಸುತ್ತದೆ.

3. ಸೋಯಾ

3. ಸೋಯಾ

ಸೋಯಾ ಅವರೆಯಲ್ಲಿರುವ ಐಸೋಫ್ಲೇವಿನ್ ಗಳ ಸೇವನೆಯಿಂದ ಪುರುಷರಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ಆವರಿಸುವ ಸಾಧ್ಯತೆ ಕಡಿಮೆಯಾಗುತ್ತದೆ. ಇವುಗಳಲ್ಲಿರುವ ಪ್ರೋಟೀನುಗಳು ಸ್ನಾಯುಗಳನ್ನು ಬೆಳೆಸುವಲ್ಲಿ ನೆರವಾಗುತ್ತವೆ. ಸೋಯಾ ಅವರೆಯ ಹಾಲು, ಕಾಳುಗಳು ಹಾಗೂ ಚೀಸ್ ಪುರುಷರು ಸೇವಿಸಲು ಉತ್ತಮ ಆಯ್ಕೆಯಾಗಿವೆ.

4. ಮಾವಿನ ಹಣ್ಣು ಮತ್ತು ಪಪ್ಪಾಯಿ

4. ಮಾವಿನ ಹಣ್ಣು ಮತ್ತು ಪಪ್ಪಾಯಿ

ಇವೆರಡೂ ಹಣ್ಣುಗಳಲ್ಲಿ ರೈಬೋಪ್ಲೇವಿನ್ ಗಳು ಸಮೃದ್ದವಾಗಿವೆ ಹಾಗೂ ಇತರ ಪೋಷಕಾಂಶಗಳೂ ಹೆಚ್ಚಿನ ಪ್ರಮಾಣದಲ್ಲಿವೆ. ಈ ಹಣ್ಣುಗಳ ಸೇವನೆಯಿಂದ ಪುರುಷರ ದೇಹದಲ್ಲಿ ಎದುರಾಗುವ ಹಲವಾರು ಕೊರತೆಗಳನ್ನು ನೀಗಿಸಬಹುದು. ಇವುಗಳ ಸೇವನೆಯಿಂದ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ ಹಾಗೂ ದೈಹಿಕ ಸಾಮರ್ಥ್ಯವೂ ಹೆಚ್ಚುತ್ತದೆ.

5. ದೊಣ್ಣೆಮೆಣಸು

5. ದೊಣ್ಣೆಮೆಣಸು

ಇವುಗಳಲ್ಲಿ ವಿಟಮಿನ್ ಸಿ ಹೆಚ್ಚಿನ ಪ್ರಮಾಣದಲ್ಲಿದೆ. ಎಷ್ಟು ಹೆಚ್ಚು ಅಂದರೆ ಕಿತ್ತಳೆಗಿಂತಲೂ ಹೆಚ್ಚು! ಇದೊಂದು ಗುಣಪಡಿಸುವ ವಿಟಮಿನ್ ಮಾತ್ರವಲ್ಲ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಂಟಿ ಆಕ್ಸಿಡೆಂಟ್ ಸಹಾ ಆಗಿದೆ. ತನ್ಮೂಲಕ ದೇಹದ ಶಕ್ತಿ ಹೆಚ್ಚಿಸುವ ಜೊತೆಗೇ ಗಾಯಗಳನ್ನು ಶೀಘ್ರವಾಗಿ ಮಾಗಿಸಲೂ ನೆರವಾಗುತ್ತದೆ.

6. ಬೆಳ್ಳುಳ್ಳಿ

6. ಬೆಳ್ಳುಳ್ಳಿ

ಪುರುಷರಿಗೆ ತಮ್ಮ ಆರೋಗ್ಯವನ್ನು ಅತ್ಯುತ್ತಮವಾಗಿರಿಸಿಕೊಳ್ಳಬೇಕಾದರೆ ಕೆಲವು ಬೆಳ್ಳುಳ್ಳಿಯ ಎಸಳುಗಳನ್ನು ಹಸಿಯಾಗಿ ಅಥವಾ ಮಾತ್ರೆಯ ರೂಪದಲ್ಲಿ ಸೇವಿಸಬೇಕಾಗುತ್ತದೆ. ಇದು ಪುರುಷರಿಗೂ ಮಹಿಳೆಯರಿಗೂ ಉಪಯುಕ್ತವಾಗಿದ್ದರೂ ಪುರುಷರಿಗೆ ಕೊಂಚ ಹೆಚ್ಚೇ ಉಪಯುಕ್ತವಾಗಿದೆ. ಇದರಲ್ಲಿ ಸಮೃದ್ದವಾಗಿರುವ ಆಂಟಿ ಆಕ್ಸಿಡೆಂಟುಗಳು ದೇಹದ ಕಲ್ಮಶಗಳನ್ನು ನಿವಾರಿಸಲು ನೆರವಾಗುತ್ತದೆ. ಇದರಲ್ಲಿರುವ ಬಯೋಫ್ಲೇವನಾಯ್ಡುಗಳು ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆಯನ್ನು ವೃದ್ದಿಸಲೂ ನೆರವಾಗುತ್ತವೆ.

7. ಬ್ರೋಕೋಲಿ

7. ಬ್ರೋಕೋಲಿ

ಹಸಿರು ಹೂಕೋಸಿನಂತಿರುವ ಬ್ರೋಕೋಲಿಯ ಸೇವನೆಯಿಂದ ಯಕೃತ್ ನಲ್ಲಿ ಕೆಲವು ಕಿಣ್ವಗಳ ಉತ್ಪತ್ತಿಗೆ ನೆರವಾಗುತ್ತದೆ ಹಾಗೂ ಕ್ಯಾನ್ಸರ್ ಉಂಟಾಗಿರುವ ಜೀವಕೋಶಗಳ ಪ್ರಭಾವ ಕಡಿಮೆಗೊಳಿಸಲು ನೆರವಾಗುತ್ತದೆ. ಅಲ್ಲದೇ ಇದರಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ಇದ್ದು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಪುರುಷರ ಸೇವನೆಗೆ ಇದೊಂದು ಉತ್ತಮ ಆಹಾರವಾಗಿದೆ.

8. ಹಾಲು ಮತ್ತು ಡೈರಿ ಉತ್ಪನ್ನಗಳು

8. ಹಾಲು ಮತ್ತು ಡೈರಿ ಉತ್ಪನ್ನಗಳು

ಇವುಗಳಲ್ಲಿ ಕಾರ್ನಿಟೈನ್ ಎಂಬಅಮೈನೋ ಆಮ್ಲಗಳು ಸಮೃದ್ದವಾಗಿವೆ. ಈ ಅಮೈನೋ ಆಮ್ಲಗಳು ಹಾಲಿನಲ್ಲಿರುವ ಕೊಬ್ಬನ್ನು ಶಕ್ತಿಯಾಗಿ ಪರಿವರ್ತಿಸಲು ನೆರವಾಗುತ್ತವೆ. ಅಲ್ಲದೇ ರಕ್ತಪರಿಚಲನೆಯನ್ನೂ ಹೆಚ್ಚಿಸಿ ದಿನವಿಡೀ ಚಟುವಟಿಕೆಯಿಂದಿರಲು ನೆರವಾಗುತ್ತವೆ. ಡೈರಿ ಉತ್ಪನ್ನಗಳ ಸೇವನೆಯಿಂದ ಸ್ನಾಯುಗಳ ಬಳಲುವಿಕೆ ಹಾಗೂ ಶಕ್ತಿಹೀನತೆಯಿಂದ ರಕ್ಷಣೆ ಒದಗಿಸುತ್ತವೆ. ಅಲ್ಲದೇ ಹಾಲಿನಲ್ಲಿ ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ ಇರುವ ಕಾರಣ ಮೂಳೆಗಳ ಆರೋಗ್ಯವೂ ವೃದ್ಧಿಸುತ್ತದೆ.

9. ಮೊಸರು

9. ಮೊಸರು

ಮೊಸರಿನಲ್ಲಿ ಆರೋಗ್ಯಸ್ನೇಹಿ ಬ್ಯಾಕ್ಟೀರಿಯಾಗಳಿದ್ದು ಕರುಳಿನಿಂದ ಆಹಾರದಲ್ಲಿರುವ ವಿಟಮಿನ್ನುಗಳನ್ನು ಹೆಚ್ಚಾಗಿ ಹೀರಿಕೊಂಡು ರಕ್ತಕ್ಕೆ ಒದಗಿಸಲು ನೆರವಾಗುತ್ತವೆ. ಈ ಒಳ್ಳೆಯ ಬ್ಯಾಕ್ಟೀರಿಯಾಗಳು ರೋಗ ನಿರೋಧಕ ಶಕ್ತಿಯನ್ನೂ ವೃದ್ದಿಸಿ ಕೆಲವಾರು ರೋಗಗಳಿಂದ ರಕ್ಷಣೆ ಒದಗಿಸುತ್ತವೆ.

10. ಬೆಣ್ಣೆಹಣ್ಣು

10. ಬೆಣ್ಣೆಹಣ್ಣು

ಈ ಹಣ್ಣು ಹೃದಯದ ಆರೋಗ್ಯ ಕಾಪಾಡಲು ಅತ್ಯುತ್ತಮ ಆಹಾರವಾಗಿದೆ. ಇದರಲ್ಲಿಯೂ ಕಾರ್ನಿಟೈನ್ ಅತಿ ಹೆಚ್ಚಿನ ಪ್ರಮಾಣದಲ್ಲಿದ್ದು ದೇಹಕ್ಕೆ ಅಗತ್ಯ ಶಕ್ತಿ ನೀಡುವ ಜೊತೆಗೇ ಕೊಬ್ಬುಗಳನ್ನು ಒಡೆಯಲೂ ನೆರವಾಗುತ್ತದೆ. ಇದರಲ್ಲಿ ಆರೋಗ್ಯಕರ ಕೊಬ್ಬುಗಳು ಹೆಚ್ಚಿನ ಪ್ರಮಾಣದಲ್ಲಿವೆ ಹಾಗೂ ಇವು ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಇಳಿಸಲು ನೆರವಾಗುವ ಜೊತೆಗೇ ಜೀರ್ಣಕ್ರಿಯೆಯನ್ನೂ ಸುಲಭಗೊಳಿಸುತ್ತವೆ.

11. ಜೇನು

11. ಜೇನು

ಇದೊಂದು ಅದ್ಭುತ ನೈಸರ್ಗಿಕ ಆಹಾರವಾಗಿದ್ದು ಪುರುಷರ ಆರೋಗ್ಯವನ್ನು ಹಲವು ವಿಧಗಳಲ್ಲಿ ವೃದ್ದಿಸುತ್ತದೆ. ರಾತ್ರಿ ಮಲಗುವ ಮುನ್ನ ಪ್ರತಿ ಪುರುಷರೂ ಒಂದು ಚಿಕ್ಕ ಚಮಚದಷ್ಟು ಅಪ್ಪಟ ಜೇನನ್ನು ಸೇವಿಸಿ ಮಲಗಿದರೆ ಗರಿಷ್ಟ ಪ್ರಯೋಜನವನ್ನು ಪಡೆಯಬಹುದು. ಇದು ಹೆಚ್ಚೂ ಕಡಿಮೆ ಎಲ್ಲಾ ರೋಗಗಳನ್ನು ಗುಣಪಡಿಸುತ್ತದೆ ಹಾಗೂ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ಬ್ಯಾಕ್ಟೀರಿಯಾಗಳ ಸೋಂಕನ್ನು ನಿವಾರಿಸುತ್ತದೆ ಹಾಗೂ ದೈಹಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಲ್ಲದೇ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಹೆಚ್ಚಿಸಲೂ ನೆರವಾಗುತ್ತದೆ.

12. ಟೊಮಾಟೋ

12. ಟೊಮಾಟೋ

ಈ ಹಣ್ಣುಗಳಲ್ಲಿ ಸಮೃದ್ದವಾಗಿರುವ ಲೈಕೋಪೀನ್ ಒಂದು ಪ್ರಬಲ ಆಂಟಿ ಆಕ್ಸಿಡೆಂಟ್ ಆಗಿದ್ದು ಪ್ರಾಸ್ಟೇಟ್ ಮತ್ತು ಜಠರದ ಕ್ಯಾನ್ಸರ್ ಬರದಂತೆ ರಕ್ಷಣೆ ಒದಗಿಸುತ್ತದೆ. ನಿತ್ಯವೂ ನಿಮ್ಮ ಆಹಾರದಲ್ಲಿ ಹಸಿ ಟೊಮಾಟೋವನ್ನು ಸಾಲಾಡ್ ರೂಪದಲ್ಲಿ ಸೇವಿಸುವ ಮೂಲಕ ಗರಿಷ್ಟ ಪ್ರಯೋಜನ ಪಡೆಯಬಹುದು.

13. ಕೆಂಪು ಮಾಂಸ

13. ಕೆಂಪು ಮಾಂಸ

ಕೆಂಪು ಮಾಂಸದಲ್ಲಿ ಹೆಚ್ಚಿನ ಪ್ರೋಟೀನು, ಖನಿಜಗಳು ಮತ್ತು ಕಬ್ಬಿಣದ ಅಂಶವಿದ್ದು ಪುರುಷರಿಗೆ ಹೆಚ್ಚಿನ ಪೋಷಣೆ ಒದಗಿಸುತ್ತವೆ. ಅಲ್ಲದೇ ಇವುಗಳಲಿ ಉತ್ತಮ ಪ್ರಮಾಣದ ಕಾರ್ನಿಟೈನೆ ಎಂಬ ಅಮೈನೋ ಆಮ್ಲವಿದೆ ಹಾಗೂ ಇವು ರಕ್ತಪರಿಚಲನೆಯನ್ನು ಉತ್ತಮಗೊಳಿಸಿ ಹೆಚ್ಚಿನ ಶಕ್ತಿಯನ್ನೂ ಒದಗಿಸುತ್ತವೆ. ಆದರೆ ಇವುಗಳ ಪ್ರಮಾಣವನ್ನು ಮಿತಗೊಳಿಸಬೇಕು, ಏಕೆಂದರೆ ಹೆಚ್ಚಿನ ಪ್ರಮಾಣದ ಸೇವನೆಯಿಂದ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟಗಳೂ ಏರುತ್ತವೆ.

14. ಶೇಂಗಾಬೀಜ

14. ಶೇಂಗಾಬೀಜ

ಈ ಬಡವರ ಬಾದಾಮಿಗಳು ಹೃದಯದ ಆರೋಗ್ಯ ವೃದ್ದಿಸುತ್ತವೆ ಹಾಗೂ ಕೊಲೆಸ್ಟ್ರಾಲ್ ಮಟ್ಟಗಳನ್ನು ಕಡಿಮೆ ಮಾಡುತ್ತವೆ. ಇವುಗಳಲ್ಲಿ ಸತು, ಅವಶ್ಯಕ ಕೊಬ್ಬುಗಳು ಹೆಚ್ಚಿನ ಪ್ರಮಾಣದಲ್ಲಿದ್ದು ಪುರುಷರಲ್ಲಿ ಎದುರಾಗುವ ನಪುಂಸಕತ್ವದಿಂದ ರಕ್ಷಣೆ ಒದಗಿಸುತ್ತದೆ ಹಾಗೂ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ಅಲ್ಲದೇ ಮೆದುಳಿನ ಸವೆತದಿಂದಲೂ ರಕ್ಷಣೆ ಒದಗಿಸುತ್ತದೆ.

15. ಮೀನು

15. ಮೀನು

ಮೀನುಗಳಲ್ಲಿ ಸಮೃದ್ದವಾಗಿರುವ ಒಮೆಗಾ ೩ ಕೊಬ್ಬಿನ ಆಮ್ಲಗಳು ಹೃದಯದ ಆರೋಗ್ಯ ವೃದ್ದಿಸುವ ಜೊತೆಗೇ ಮಾನಸಿಕ ಏಕಾಗ್ರತೆ ಹೆಚ್ಚಿಸಲೂ ನೆರವಾಗುತ್ತವೆ. ಮೀನಿನಲ್ಲಿ ಪ್ರೋಟೀನುಗಳೂ ಹೆಚ್ಚಿನ ಪ್ರಮಾಣದಲ್ಲಿದ್ದು ಸ್ನಾಯುಗಳ ಬೆಳವಣಿಗೆಗೆ ನೆರವಾಗುತ್ತವೆ. ಉತ್ತಮ ಆರೋಗ್ಯಕ್ಕಾಗಿ ವಾರದಲ್ಲಿ ಮೂರರಿಂದ ನಾಲ್ಕು ಹೊತ್ತಾದರೂ ಮೀನನ್ನು ಸೇವಿಸಬೇಕು.

English summary

High energy foods for men's health

When we talk about men's health their nutritional requirements are more as compare to women. They are physically strong but their body demands more nutrition and supplements. Here is a list of foods that men must take to boost health. Have a look at some of the energy food for men.
X
Desktop Bottom Promotion