Just In
Don't Miss
- News
ತಮಟೆ ಸದ್ದಿಗೆ ಮಾಜಿ ಶಾಸಕ ವೈಎಸ್ ವಿ ದತ್ತ ಸಖತ್ ಸ್ಟೆಪ್ಸ್
- Movies
ಭಾರತೀಯ ಪಾಸ್ಪೋರ್ಟ್ ಗೆ ಅರ್ಜಿ ಸಲ್ಲಿಸಿ ಬೇಸರ ಹೊರಹಾಕಿದ ಅಕ್ಷಯ್ ಕುಮಾರ್
- Finance
ತಿಂಗಳಲ್ಲಿ ಮೊದಲ ಬಾರಿಗೆ ಪೆಟ್ರೋಲ್ ಬೆಲೆಯಲ್ಲಿ ಇಳಿಕೆ
- Automobiles
ಗ್ರಾಹಕರ ಬೇಡಿಕೆಯೆಂತೆ 6, 7, 8 ಸೀಟರ್ ಸೌಲಭ್ಯದೊಂದಿಗೆ ಬರಲಿದೆ ಕಿಯಾ ಕಾರ್ನಿವಾಲ್
- Sports
ಭಾರತ vs ವಿಂಡೀಸ್: ಟೀಮ್ ಇಂಡಿಯಾದ ಮೇಲೆ ಗುಡುಗಿದ ಯುವರಾಜ!
- Technology
ಫೋಕಸ್ ಮೂಡ್ ಆಯ್ಕೆ ಪರಿಚಯಿಸಿದ ಗೂಗಲ್!
- Education
ರೆಪ್ಕೊ ಬ್ಯಾಂಕ್ ನಲ್ಲಿ 15 ಹುದ್ದೆಗಳ ನೇಮಕಾತಿ
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ಪಪ್ಪಾಯಿ ತಿಂದರೂ ಸಾಕು-ದೇಹದ ತೂಕ ಹಾಗೂ ಬೊಜ್ಜು ಇಳಿಸಿಕೊಳ್ಳಬಹುದು
ವರ್ಷಪೂರ್ತಿ ಸಿಗುವಂತಹ ಪಪ್ಪಾಯಿಯಲ್ಲಿರುವಂತಹ ಆರೋಗ್ಯ ಲಾಭಗಳು ಹಲವಾರು. ಬೇರೆ ಹಣ್ಣುಗಳಂತೆ ಇದು ಕೇವಲ ಒಂದು ಋತುವಿನಲ್ಲಿ ಮಾತ್ರ ಸಿಗುವಂತಹದ್ದಲ್ಲ. ಹಸಿ ಹಾಗೂ ಹಣ್ಣಾದ ಪಪ್ಪಾಯಿ ಬಳಸಿಕೊಂಡು ಹಲವಾರು ರೀತಿಯ ಖಾದ್ಯಗಳನ್ನು ಕೂಡ ತಯಾರಿಸಬಹುದು. ಸಿಹಿಯಾಗಿರುವಂತಹ ಪಪ್ಪಾಯಿಯಲ್ಲಿ ಪೋಷಕಾಂಶಗಳಾಗಿರುವಂತಹ ಆ್ಯಂಟಿಆಕ್ಸಿಡೆಂಟ್ ಗಳು ಹಾಗೂ ಪ್ರಮುಖ ವಿಟಮಿನ್ ಗಳು ಮತ್ತು ಖನಿಜಾಂಶಗಳೂ ಲಭ್ಯವಿದೆ.
ಇದು ಜೀರ್ಣಕ್ರಿಯೆಗೆ ಸಹಕಾರಿ ಮತ್ತು ಯಕೃತ್ ನ್ನು ನಿರ್ವಿಷಗೊಳಿಸುವುದು. ಆದರೆ ಪಪ್ಪಾಯಿ ಸೇವನೆಯಿಂದ ತೂಕ ಕಳೆದುಕೊಳ್ಳಬಹುದೆಂದು ನಿಮಗೆ ತಿಳಿದಿದೆಯಾ? ಕಡಿಮೆ ಕ್ಯಾಲರಿ ಹೊಂದಿರುವಂತಹ ಪಪ್ಪಾಯಿಯನ್ನು ದೇಹದ ತೂಕ ಇಳಿಸಿಕೊಳ್ಳಲು ಬಳಸಬಹುದು. 100 ಗ್ರಾಂ ಪಪ್ಪಾಯಿಯಲ್ಲಿ ಕೇವಲ 43 ಕ್ಯಾಲರಿ ಮಾತ್ರ ಇದೆ. ದೇಹದ ಆರೋಗ್ಯ ಮತ್ತು ಹೃದಯವನ್ನು ಕಾಪಾಡುವುದು. ಪಪ್ಪಾಯಿಯನ್ನು ಸ್ಮೂಥಿ, ಮಿಲ್ಕ್ ಶೇಕ್, ಸಲಾಡ್ ಇತ್ಯಾದಿಗಳಲ್ಲಿ ಬಳಸಬಹುದು. ಈ ಲೇಖನದಲ್ಲಿ ಪಪ್ಪಾಯಿ ಬಳಸಿಕೊಂಡು ತೂಕ ಕಳೆದುಕೊಳ್ಳುವುದು ಹೇಗೆ ಎಂದು ತಿಳಿಯಿರಿ.

ನಾರಿನಾಂಶ ಅಧಿಕ
ನಾರಿನಾಂಶವು ಅಧಿಕವಾಗಿರುವಂತಹ ಆಹಾರಗಳು ಜೀರ್ಣಕ್ರಿಯೆಗೆ ಸಹಕಾರಿ ಮತ್ತು ಹೊಟ್ಟೆ ತುಂಬಿದಂತೆ ಮಾಡಿ, ಅತಿಯಾಗಿ ತಿನ್ನುವುದನ್ನು ಕಡಿಮೆ ಮಾಡುವುದು. ಇದರಿಂದ ತೂಕ ಕಳೆದುಕೊಳ್ಳಲು ಬಯಸುವವರಿಗೆ ನಾರಿನಾಂಶ ಅಧಿಕವಾಗಿರುವ ಆಹಾರ ಸೇವನೆಗೆ ಸೂಚಿಸಲಾಗುವುದು.
Most Read: ಒಣಕೆಮ್ಮು, ಗಂಟಲ ಕೆರೆತ, ಕಫ ನಿವಾರಣೆಗೆ: ಏಲಕ್ಕಿ ಪರ್ಫೆಕ್ಟ್ ಮನೆಮದ್ದು

ಉರಿಯೂತ ವಿರುದ್ಧ ಹೋರಾಡುವುದು
ಪಪ್ಪಾಯಿಯಲ್ಲಿ ಪಪೈನ್ ಎನ್ನುವ ಆ್ಯಂಟಿಆಕ್ಸಿಡೆಂಟ್ ಇದ್ದು, ಇದು ದೇಹದಲ್ಲಿ ಉರಿಯೂತ ವಿರುದ್ಧ ಹೋರಾಡುವುದು. ಉರಿಯೂತವು ತೂಕ ಕಳೆದುಕೊಳ್ಳಲು ಅಡ್ಡಿಯಾಗುವುದು ಎಂದು ಅಧ್ಯಯನಗಳು ಕಂಡುಕೊಂಡಿವೆ.

ಜೀರ್ಣಕ್ರಿಯೆಗೆ ಸಹಕಾರಿ
ಡಿ.ಕೆ. ಪಬ್ಲಿಷಿಂಗ್ ಹೌಸ್ ಪ್ರಕಟಿಸಿರುವಂತಹ `ಹೀಲಿಂಗ್ ಫುಡ್ಸ್' ಪುಸ್ತಕದ ಪ್ರಕಾರ ಪಪ್ಪಾಯಿಯಲ್ಲಿರುವ ಪಪೈನ್ ಮತ್ತು ಚಿಮೊಪಪೈನ್ ಜೀರ್ಣಕ್ರಿಯೆಗೆ ಸಹಕಾರಿ ಮತ್ತು ಮಲಬದ್ಧತೆ ನಿವಾರಣೆ ಮಾಡುವುದು. ಇದು ಹೊಟ್ಟೆಯ ಅಲ್ಸರ್ ತಡೆಯುವುದು. ಜೀರ್ಣಕ್ರಿಯೆ ಸರಾಗವಾಗಿದ್ದರೆ ತೂಕ ಕಳೆದುಕೊಳ್ಳಲು ಸಹಕಾರಿ.

ನಿರ್ವಿಷಗೊಳಿಸುವುದು
ಪಪ್ಪಾಯಿಯಲ್ಲಿರುವ ನೈಸರ್ಗಿಕ ನಾರಿನಾಂಶವು ದೇಹ ಮತ್ತು ಕರುಳನ್ನು ನಿರ್ವಿಷಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು.
Most Read: ಈ 4 ರಾಶಿಚಕ್ರದವರಿಗೆ ಮೂಗಿನ ಮೇಲೆ ಸಿಟ್ಟು-ಇವರ ಕೋಪವನ್ನು ನಿಯಂತ್ರಿಸುವುದೇ ಕಷ್ಟ!

ಪ್ರೋಟೀನ್ ಹೀರಿಕೊಳ್ಳಲು ಸಹಕಾರಿ
ಹೊಟ್ಟೆಯಲ್ಲಿ ಕಡಿಮೆ ಆಮ್ಲದ ಸಮಸ್ಯೆಯಿರುವಂತಹ ಜನರು ಪಪ್ಪಾಯಿ ಸೇವನೆ ಮಾಡಿದರೆ ಅದರಲ್ಲಿರುವ ಪಪೈನ್, ಮಾಂಸವನ್ನು ಜೀರ್ಣಗೊಳಿಸಿ ಪ್ರೋಟೀನ್ ಹೀರಿಕೊಳ್ಳಲು ನೆರವಾಗುವುದು. ಕೊಬ್ಬು ಮತ್ತು ತೂಕ ಕಳೆದುಕೊಳ್ಳುವ ವಿಚಾರದಲ್ಲಿ ಪ್ರೋಟೀನ್ ಪ್ರಮುಖ ಪೋಷಕಾಂಶವಾಗಿದೆ.

ಸೋಂಕಿನ ವಿರುದ್ಧ ಹೋರಾಡುವುದು
ಕೆಲವೊಂದು ಸ್ವಯಂರಕ್ಷಿತ ರೋಗಗಳು ದೇಹದ ಚಟುವಟಿಕೆ ಮೇಲೆ ಪರಿಣಾಮ ಬೀರಬಹುದು ಮತ್ತು ತೂಕ ಹೆಚ್ಚಿಸಬಹುದು. ವೈರಲ್ ವಿರೋಧಿ ಮತ್ತು ಪರಾವಲಂಬಿ ವಿರೋಧಿ ಗುಣ ಹೊಂದಿರುವ ಪಪ್ಪಾಯಿಯು ಕಾಯಿಲೆ ಮತ್ತು ಸೋಂಕು ನಿವಾರಣೆ ಮಾಡುವುದು.

ನೆಗಡಿಯನ್ನು ಶಮನಗೊಳಿಸಲು
ಇದರಲ್ಲಿ ಅತ್ಯಧಿಕ ವಿಟಮಿನ್ ಎ, ವಿಟಮಿನ್ ಸಿ ಮತ್ತು ಆಂಟಿ-ಆಕ್ಸಿಡೆಂಟ್ಸ್ ಇರುವುದರಿಂದ ನಿಮಗೆ ಬಂದಿರುವ ನೆಗಡಿಯ ಅವಧಿಯನ್ನು ಕಡಿಮೆ ಮಾಡುತ್ತದೆ. ಪಪ್ಪಾಯಿ ಹಣ್ಣು ನೆಗಡಿಯ ಲಕ್ಷಣಗಳನ್ನು ಶಮನ ಮಾಡುವುದಲ್ಲದೆ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.

ಕ್ಯಾನ್ಸರ್ ರೋಗಕ್ಕೆ ರಾಮಬಾಣ
ಪಪ್ಪಾಯಿ ಹಣ್ಣಿನಲ್ಲಿರುವ ಆಂಟಿ-ಆಕ್ಸಿಡೆಂಟ್‍ಗಳು ದೇಹವನ್ನು ಕ್ಯಾನ್ಸರ್ ಕಾರಕ ಕೋಶಗಳ ವಿರುದ್ಧ ಹೋರಾಡಲು ಸಹಕರಿಸುತ್ತದೆ. ಪಪ್ಪಾಯಿಯಲ್ಲಿರುವ ಡಯಟೆರಿ ಫೈಬರ್‌ಗಳು ಕೋಲನ್‍ನಲ್ಲಿ ಕ್ಯಾನ್ಸರ್ ಉಂಟು ಮಾಡುವ ಕೋಶಗಳನ್ನು ಹೊರ ದಬ್ಬುತ್ತದೆ. ಇದರಲ್ಲಿರುವ ವಿಟಮಿನ್ ಸಿ,ಇ, ಲೈಕೊಪೀನ್, ಬೀಟಾ-ಕ್ಯಾರೋಟಿನ್ ಕ್ಯಾನ್ಸರನ್ನು, ಅದರಲ್ಲೂ ಕೋಲನ್ ಕ್ಯಾನ್ಸರನ್ನು ತಡೆಯುವಲ್ಲಿ ಯಶಸ್ವಿಯಾಗಿ ಸಹಕರಿಸುತ್ತದೆ.

ಮಲಬದ್ಧತೆಯನ್ನು ನಿವಾರಿಸುತ್ತದೆ
ನಮ್ಮ ಬದಲಾದ ಜೀವನಶೈಲಿ ಹಾಗೂ ಸುಲಭ ಆಹಾರಗಳು ಮಲಬದ್ಧತೆಗೆ ಮೂಲವಾಗಿವೆ. ಪ್ರಮುಖವಾಗಿ ಮೈದಾ ಆಧಾರಿತ ಆಹಾರಗಳು ದೊಡ್ಡಕರುಳಿನಲ್ಲಿ ಪೂರ್ಣವಾಗಿ ಜೀರ್ಣವಾಗದೇ, ಗಟ್ಟಿಯಾಗಿದ್ದು ಮುಂದೆ ಹೋಗಲಾಗದೇ ಮಲಬದ್ಧತೆಗೆ ಕಾರಣವಾಗುತ್ತವೆ. ಈ ಸಂದರ್ಭದಲ್ಲಿ ಪಪ್ಪಾಯಿ ಹಣ್ಣನ್ನು ತಿನ್ನುವುದರಿಂದ ಅಥವಾ ರಸವನ್ನು ಸೇವಿಸುವುದರಿಂದ ಗಟ್ಟಿಯಾಗಿದ್ದ ಆಹಾರಗಳು ಮೆದುವಾಗಿ ಸುಲಭವಾಗಿ ವಿಸರ್ಜಿಸಲು ಸಾಧ್ಯವಾಗುತ್ತದೆ.
Most Read : ಶನಿ ದೇವನ ನಿಧಾನ ಗತಿಯ ಚಲನೆಯ ಹಿಂದಿರುವ ಅಸಲಿ ಕಹಾನಿ...

ಗರ್ಭಿಣಿಯರು ವೈದ್ಯರ ಸಲಹೆ ಪಡೆದು ಪಪ್ಪಾಯಿ ಹಣ್ಣು ಸೇವಿಸಿ
ಗರ್ಭಿಣಿಯಾದಾಗ ಕಾಡುವ ಮುಂಜಾನೆಯ ಮಂಕುತನದ ನಿವಾರಣೆಗಾಗಿ ಪರಂಗಿ ಹಣ್ಣನ್ನು ಸೇವಿಸಬಹುದು. ಆದರೆ ಇದನ್ನು ಸೇವಿಸುವ ಮೊದಲು ವೈದ್ಯರನ್ನು ಕಂಡು ಸಲಹೆಗಳನ್ನು ಪಡೆಯುವುದು ಉತ್ತಮ.

ತೂಕ ಇಳಿಸಿಕೊಳ್ಳಲು ಸಹಕಾರಿ
ತೂಕ ಇಳಿಸಿಕೊಳ್ಳಲು ಡಯಟ್ ಮಾಡುತ್ತಿದ್ದರೆ ಪರಂಗಿ ಹಣ್ಣನ್ನು ತಿನ್ನಿ ಇದರಲ್ಲಿ ಕ್ಯಾಲೋರಿಗಳು ಕಡಿಮೆ ಮತ್ತು ಪೋಷಕಾಂಶಗಳು ಹೆಚ್ಚಿರುತ್ತದೆ. ಇದರೊಂದಿಗೆ ಇದು ಜೀರ್ಣಕ್ರಿಯೆಗೆ ಸಹಕಾರಿಯಾದ್ದರಿಂದ ತೂಕ ಇಳಿಸಿಕೊಳ್ಳಲು ಇದು ಒಳ್ಳೆಯ ಆಹಾರ.

ತ್ವಚೆಯ ಕಾಂತಿಗೆ
ಪಪ್ಪಾಯಿ ಹಣ್ಣಿನಲ್ಲಿ ಅಧಿಕ ಪ್ರಮಾಣದಲ್ಲಿ ನೀರು ಸೇರಿರುವುದರಿಂದ ಅದರ ಸಹಾಯದಿಂದ ನಿಮ್ಮ ಚರ್ಮವನ್ನು ಮೆದು, ಮೃದು ಮತ್ತು ತೇವಾಂಶಭರಿತವಾಗಿಡಲು ಸಹಾಯಕಾರಿಯಾಗಿದೆ. ಅರ್ಧ ಕಪ್ ಮಾಗಿದ ಪಪ್ಪಾಯಿ ಹಣ್ಣನ್ನು ಪೇಸ್ಟ್ ಆಗುವ ಹಾಗೆ ಹದಗೂಡಿಸಿ. ಜೊತೆಗೆ ಸ್ವಲ್ಪ ಕಚ್ಚಾ ಜೇನುತುಪ್ಪವನ್ನು ಸೇರಿಸಬಹುದು. ಇದನ್ನು ಚೆನ್ನಾಗಿ ಹದಮಾಡಿ ನಿಮ್ಮ ಮುಖದ ಎಲ್ಲಾ ಭಾಗ ಮತ್ತು ಕತ್ತಿನ ಮೇಲೆ ಲೇಪಿಸಿ. 15 ನಿಮಿಷಗಳ ಸಮಯ ಬಿಟ್ಟ ನಂತರ ಎಚ್ಚರಿಕೆಯಿಂದ ತಣ್ಣೀರು ಬಳಸಿ ತೊಳೆದುಕೊಂಡು ಚರ್ಮದ ಮೇಲ್ಭಾಗವನ್ನು ಮೆಲ್ಲ ಮೆಲ್ಲಗೆ ತಟ್ಟಿಕೊಳ್ಳಿ.

ಜೀರ್ಣಕ್ರಿಯೆ ಆರೋಗ್ಯ ಸುಧಾರಣೆ
ಪಪ್ಪಾಯಿಯಲ್ಲಿ ಇರುವಂತ ನಾರಿನಾಂಶವು ಊಟದ ಬಳಿಕ ಜೀರ್ಣಕ್ರಿಯೆಯು ಸುಧಾರಣೆಯಾಗಲು ಪ್ರಮುಖ ಪಾತ್ರ ವಹಿಸುವುದು. ಇದರಲ್ಲಿ ಇರುವಂತಹ ನಾರಿನಾಂಶವು ಮಲಬದ್ಧತೆ ನಿವಾರಣೆ ಮಾಡುವುದು. ಪಪ್ಪಾಯಿಯ ಕೆಲವು ತುಂಡುಗಳನ್ನು ತಿಂದರೆ ಅದರಿಂದ ದಿನನಿತ್ಯಕ್ಕೆ ಬೇಕಾಗುವ ಆಹಾರದ ನಾರಿನಾಂಶವು ಲಭ್ಯವಾಗುವುದು. ಇದರಿಂದ ಜೀರ್ಣ ಕ್ರಿಯೆಯು ಸರಾಗವಾಗಿ ಆಗುವುದು. ಒಂದು ತುಂಡು ಪಪ್ಪಾಯಿ ತಿಂದರೆ ಜೀರ್ಣಕ್ರಿಯೆ ವ್ಯವಸ್ಥೆಯಲ್ಲಿನ ವಿಷಕಾರಿ ಅಂಶಗಳು ಹೊರಹೋಗುವುದು ಮತ್ತು ಕರುಳಿನ ಕ್ರಿಯೆಯು ಸರಾಗವಾಗಿ ಆಗುವುದು.

ಪ್ರೋಟೀನ್ ಜೀರ್ಣಿಸಿಕೊಳ್ಳಲು ನೆರವು
ಪ್ರತಿನಿತ್ಯ ಪಪ್ಪಾಯಿ ಸೇವನೆ ಮಾಡಿದರೆ ಅದರಿಂದ ನಿಮ್ಮ ದೇಹವು ಪ್ರೋಟೀನ್ ಜೀರ್ಣಿಸಿಕೊಳ್ಳಲು ನೆರವಾಗುವುದು. ಪಪ್ಪಾಯಿಯಲ್ಲಿ ಇರುವಂತಹ ಪಾಪೈನ್ ಎನ್ನುವ ಕಿಣ್ವವು ಬ್ಯಾಕ್ಟೀರಿಯಾ ಸಸ್ಯಕ್ಕೆ ತಿಳಿಯದಂತೆ ಪ್ರೋಟೀನ್ ವಿಘಟನೆಗೆ ನೆರವಾಗುವುದು. ಇದರಿಂದ ಕರುಳಿನ ರಕ್ಷಣೆಯಾಗುವುದು.
Most Read: ಈ 5 ರಾಶಿಯವರು ಆಹಾರವನ್ನು ತುಂಬಾನೇ ಪ್ರೀತಿಸುತ್ತಾರೆ-ಹೊಟ್ಟೆ ತುಂಬಾ ತಿನ್ನುತ್ತಾರೆ!

ವಯಸ್ಸು ಕಾಣುವ ಚಿಹ್ನೆಗಳನ್ನು ಮರೆ ಮಾಚುತ್ತದೆ
ಪಪ್ಪಾಯಿ ಹಣ್ಣಿನಲ್ಲಿರುವ ವಿಟಮಿನ್ ಎ ಚರ್ಮದೊಳಗಿರುವ ಸತ್ತ ಜೀವಕೋಶಗಳನ್ನು ನಿವಾರಣೆ ಮಾಡಲು ಸಹಾಯಕಾರಿ ಮತ್ತು ಚರ್ಮವನ್ನು ಮೃದು ಮತ್ತು ಮೆದುವಾಗಿ ಇಡುತ್ತದೆ.
*ಹಣ್ಣಿನಲ್ಲಿರುವ ಆಲ್ಫಾ ಹೈಡ್ರಾಕ್ಸಿಲ್ ಆಮ್ಲಗಳು ವಯಸ್ಸಾಗುವ ಚಿಹ್ನೆಗಳನ್ನು, ಉದಾಹರಣೆಗೆ ಚರ್ಮದ ಸುಕ್ಕುಗಳು ಮತ್ತು ಗೆರೆಗಳು ಇವುಗಳನ್ನು ತಡೆಯಲು ಸತ್ತ ಚರ್ಮದ ಜೀವಕೋಶಗಳನ್ನು ಕರಗಿಸಲು ಸಹಾಯಮಾಡುತ್ತದೆ.
*ಹಣ್ಣಿನಲ್ಲಿರುವ ವಿಟಮಿನ್ ಸಿ ಮತ್ತು ಇ ನಿಮ್ಮ ಚರ್ಮದ ಕಾಂತಿಯನ್ನು ಹೆಚ್ಚಿಸಿ ನವತಾರುಣ್ಯದ ಚರ್ಮವನ್ನು ಅನುಭವಿಸಲು ಸಹಾಯಕಾರಿಯಾಗಿದೆ.
*ಅರ್ಧ ಕಪ್ ಸಂಪೂರ್ಣವಾಗಿ ಹಣ್ಣಾಗಿರುವ ಪಪ್ಪಾಯಿ ಹಣ್ಣನ್ನು ಚೆನ್ನಾಗಿ ಹಿಸುಕಿಕೊಳ್ಳಿ.
*ಇದನ್ನು ಕಚ್ಚಾ ಜೇನಿನ ಕೆಲವು ಹನಿ ಮತ್ತು 1 ಟೇಬಲ್ ಚಮಚ ಹಾಲು ಹಣ್ಣಿನ ಜೊತೆ ಮಿಶ್ರಣ ಮಾಡಿ.
*ನಿಮ್ಮ ಮುಖ ಮತ್ತು ಕತ್ತುಗಳ ಮೇಲೆ ಲೇಪಿಸಿ. 15 ನಿಮಿಷಗಳ ಸಮಯ ಹಾಗೆಯೇ ಬಿಟ್ಟ ನಂತರ ತಣ್ಣಗಿರುವ ನೀರಿನಿಂದ ನೆನೆಸಿ ತೊಳೆದುಕೊಳ್ಳಿ.
*ಈ ಮಿಶ್ರಣವನ್ನು ವಾರದಲ್ಲಿ ಒಂದು ಅಥವಾ ಎರಡು ಬಾರಿ ಫೇಸ್ ಮಾಸ್ಕ್ ಮಾಡಿಕೊಳ್ಳಿ. ಹಾಗೂ, ಪ್ರತಿ ದಿನವೂ ವಯಸ್ಸಾದ ಚಿಹ್ನೆಗಳನ್ನು ವಿಳಂಬಿಸಲು ಪಪ್ಪಾಯಿಹಣ್ಣನ್ನು ತಿನ್ನಿ.