For Quick Alerts
ALLOW NOTIFICATIONS  
For Daily Alerts

ನೆನಪಿಡಿ, ಕೆಲವು ಹಣ್ಣುಗಳನ್ನು ಅಪ್ಪಿತಪ್ಪಿಯೂ ಜತೆಯಾಗಿ ಸೇವಿಸಲೇಬೇಡಿ!

|

ಮನುಷ್ಯನು ಬದಕಲು ಆಹಾರವು ಅತೀ ಅಗತ್ಯವಾಗಿರುವುದು. ಆಹಾರವು ಆರೋಗ್ಯಕರವಾಗಿರಬೇಕು ಎನ್ನುವುದು ಇಂದಿನ ದಿನಗಳಲ್ಲಿ ಕೇಳಿ ಬರುತ್ತಿರುವಂತಹ ಮಾತು. ಯಾಕೆಂದರೆ ಹಲವಾರು ರಾಸಾಯನಿಕಗಳನ್ನು ಬಳಸಿಕೊಂಡು ಇಂದು ಪ್ರತಿಯೊಂದು ತರಕಾರಿ, ಹಣ್ಣುಹಂಪಲು ಇತ್ಯಾದಿಗಳನ್ನು ಬೆಳೆಸಲಾಗುತ್ತದೆ. ಇದಕ್ಕಾಗಿಯೇ ತಿನ್ನುವ ಆಹಾರವು ಸಾವಯವ ಆಗಿದ್ದರೆ ಅದರಿಂದ ನಮ್ಮ ದೇಹದ ಆರೋಗ್ಯವು ಚೆನ್ನಾಗಿರುವುದು ಎಂದು ಹೇಳಲಾಗುತ್ತದೆ. ಕೆಲವೊಂದು ಆಹಾರಗಳನ್ನು ನಾವು ಮಿಶ್ರಣ ಮಾಡಿಕೊಂಡು ತಿನ್ನಬಾರದು ಎಂದು ಹಿಂದಿನಿಂದಲೂ ನಾವು ಹೇಳಿಬರುತ್ತಿರುವ ಮಾತು.

ಇದರಲ್ಲಿ ಪ್ರಮುಖವಾಗಿ ಮಾಂಸಾಹಾರ ಸೇವನೆ ಮಾಡಿದ ಬಳಿಕ ಹಾಲು ಕುಡಿಯಬಾರದು ಎಂದು ನಾವು ಕೇಳಿದ್ದೇವೆ. ಹಣ್ಣುಗಳು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಸಂಶಯವೇ ಬೇಡ. ಹಣ್ಣುಗಳನ್ನು ನಾವು ದಿನದ ಯಾವುದೇ ಸಮಯದಲ್ಲೂ ಸೇವನೆ ಮಾಡುತ್ತೇವೆ. ವಿವಿಧ ರೀತಿಯ ಹಣ್ಣುಗಳನ್ನು ಹೊಂದಿರುವಂತಹ ಸಲಾಡ್ ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಹೇಳುವುದರಲ್ಲಿ ಯಾವುದೇ ಸಂಶಯವಿಲ್ಲ. ಇದರಿಂದ ನೀವು ಮಾರುಕಟ್ಟೆಯಲ್ಲಿ ಸಿಗುವಂತಹ ತಾಜಾ ಹಣ್ಣುಗಳು ಅಥವಾ ರೆಫ್ರಿಜರೇಟರ್ ನಲ್ಲಿಟ್ಟಿರುವಂತಹ ಹಣ್ಣುಗಳನ್ನು ತೆಗೆದು ಸಲಾಡ್ ಮಾಡಬಹುದು. ಇದಕ್ಕೆ ಕೆಲವು ತರಕಾರಿಗಳನ್ನು ಬೆರೆಸಿಕೊಂಡು, ರುಚಿಗೆ ಸ್ವಲ್ಪ ಉಪ್ಪು ಸಿಂಪಡಿಸಿ, ಕೊತ್ತಂಬರಿ ಮತ್ತು ಲಿಂಬೆರಸ ಹಾಕಿ ಸಿದ್ಧ ಮಾಡಬಹುದು. ಇದು ಆರೋಗ್ಯಕಾರಿ ಎಂದು ನೀವು ಭಾವಿಸಿರಬಹುದು. ಆದರೆ ಹಣ್ಣುಗಳ ಸಲಾಡ್ ಮಾಡಲು ಇದು ಸರಿಯಾದ ವಿಧಾನವೇ ಎಂದು ತಿಳಿಯಬೇಕಾಗಿದೆ.

Fruits You Should Never Mix

ನೀವು ಅನುಸರಿಸುವಂತಹ ವಿಧಾನವು ಖಂಡಿತವಾಗಿಯೂ ಸರಿಯಾಗಿಲ್ಲ. ಯಾಕೆಂದರೆ ಹಣ್ಣುಗಳು ವಿಟಮಿನ್ ಗಳು ಹಾಗೂ ಪೋಷಕಾಂಶಗಳಿಂದ ಸಮೃದ್ಧವಾಗಿದ್ದರೂ ಕೆಲವೊಂದು ಕ್ರಮಗಳನ್ನು ನಾವು ಪಾಲಿಸಿಕೊಂಡು ಹೋಗುವುದು ಅತೀ ಅಗತ್ಯವಾಗಿದೆ. ಇದರಿಂದ ನೀವು ಹಣ್ಣುಗಳಲ್ಲಿ ಇರುವಂತಹ ಸರಿಯಾದ ಅಂಶಗಳನ್ನು ದೇಹಕ್ಕೆ ಸೇರಿಸಿಕೊಳ್ಳಬಹುದು. ಎಲ್ಲಾ ರೀತಿಯ ಹಣ್ಣುಗಳನ್ನು ಜತೆ ಸೇರಿಸಿದರೆ ಆಗ ಕೆಲವು ಸುರಕ್ಷಿತವಾಗಿರಬಹುದು. ಇನ್ನು ಕೆಲವು ಅಡ್ಡಪರಿಣಾಮ ಉಂಟು ಮಾಡಬಹುದು. ವಿವಿಧ ರೀತಿಯ ಹಣ್ಣುಗಳು ಹಾಗೂ ತರಕಾರಿಗಳ ಜೀರ್ಣಕ್ರಿಯೆಗೆ ಬೇಕಾಗುವ ವೇಗವನ್ನು ಅನುಸರಿಸಿಕೊಂಡು ಇದನ್ನು ನೀವು ಜತೆಯಾಗಿ ತಿನ್ನಬೇಕು. ಕೆಲವೊಂದು ಕ್ರಮಪಲ್ಲಟನೆಗಳು ಹಾಗೂ ಸಂಯೋಜನೆಗಳು ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರಬಹುದು. ಇದರಿಂದ ನಿಮ್ಮ ಆರೋಗ್ಯದ ಮೇಲೆ ಅಡ್ಡಪರಿಣಾಮ ಆಗಬಹುದು.

ನೀವು ಯಾವುದೇ ರೀತಿಯ ಹಣ್ಣುಗಳನ್ನು ಜತೆಯಾಗಿ ಸೇವನೆ ಮಾಡುವ ಮೊದಲು ಅದನ್ನು ನೀವು ವಿಂಗಡಣೆ ಮಾಡಿಕೊಳ್ಳುವುದು ಅತೀ ಅಗತ್ಯವಾಗಿರುವುದು. ಇದನ್ನು ನೀವು ಆಮ್ಲೀಯ, ಸಿಹಿತ ಮತ್ತು ತಟಸ್ಥ ಹಣ್ಣುಗಳು ಎಂದು ವಿಂಗಡಿಸಬೇಕು. ಹಣ್ಣುಗಳು ಮತ್ತು ತರಕಾರಿಗಳನ್ನು ಯಾವತ್ತೂ ಜತೆಯಾಗಿ ಸೇರಿಸಿಕೊಳ್ಳಬಾರದು. ಕೆಲವೊಂದು ಹಣ್ಣುಗಳನ್ನು ನೀವು ಜತೆಯಾಗಿ ಸೇವನೆ ಮಾಡುವುದಿದ್ದರೂ ಅದಕ್ಕೆ ಮೊದಲು ನೀವು ಇದರ ಮೂಲ ಲಕ್ಷಣಗಳನ್ನು ತಿಳಿಯುವುದು ಅನಿವಾರ್ಯ. ಯಾವುದೇ ರೀತಿಯ ಆಮ್ಲೀಯ ಗುಣಗಳು ಇಲ್ಲದೆ ಇರುವಂತಹ ಎರಡು ಸಿಹಿ ಹಣ್ಣುಗಳನ್ನು ನೀವು ಜತೆಯಾಗಿ ಸೇವನೆ ಮಾಡಬಹುದು. ಉದಾಹರಣೆಗೆ ಹೇಳುವುದಾದರೆ ಕಲ್ಲಂಗಡಿ, ಸೇಬು ಮತ್ತು ಪ್ಲಮ್ಸ್ ನ್ನು ಜತೆಯಾಗಿ ತಿನ್ನಬಹುದು. ದ್ರಾಕ್ಷಿ, ಲಿಂಬೆ, ಕಿತ್ತಳೆ, ನೇರಳೆ, ಕಿವಿ ಹಣ್ಣುಗಳಲ್ಲಿ ಆಮ್ಲೀಯ ಗುಣಗಳು ಇರುವುದು ಮತ್ತು ಇದನ್ನು ಯಾವತ್ತಿಗೂ ಜತೆಯಾಗಿ ಸೇವನೆ ಮಾಡಬಾರದು. ರಸ್ಬೇರಿ, ಮಾವು, ಸೇಬು ಮತ್ತು ಸ್ಟ್ರಾಬೆರಿ ಅರ್ಧ ಆಮ್ಲೀಯ ಗುಣ ಹೊಂದಿದೆ. ಅವಕಾಡೋ, ಬಾದಾಮಿ, ನೆಲಗಡಲೆ, ವಾಲ್ ನಟ್ಸ್ ಮತ್ತು ತೆಂಗಿನಕಾಯಿ ತಟಸ್ಥವಾಗಿರುವಂತದ್ದಾಗಿದೆ. ಹೀಗಾಗಿ ಇವುಗಳನ್ನು ಜತೆಯಾಗಿ ಸೇವನೆ ಮಾಡಬಹುದು. ನಿಮ್ಮ ಆರೋಗ್ಯದ ದೃಷ್ಟಿಯಿಂದ ಈ ಲೇಖನದಲ್ಲಿ ನೀವು ಜತೆಯಾಗಿ ತಿನ್ನಬಾರದ ಕೆಲವೊಂದು ಹಣ್ಣುಗಳನ್ನು ಪಟ್ಟಿ ಮಾಡಲಾಗಿದೆ. ಇದು ಯಾವುದು ಎಂದು ಓದಿಕೊಳ್ಳಿ.

ಬಾಳೆಹಣ್ಣು+ಪುಡ್ಡಿಂಗ್(ಕಡುಬು)

ಬಾಳೆಹಣ್ಣು+ಪುಡ್ಡಿಂಗ್(ಕಡುಬು)

ನಿಮ್ಮ ದೇಹವು ಈ ಮಿಶ್ರಣವನ್ನು ಜೀರ್ಣಿಸಿಕೊಳ್ಳಲು ತುಂಬಾ ಕಷ್ಟಪಡಬೇಕಾಗಬಹುದು. ಇದು ವಯಸ್ಕರಲ್ಲಿ ಹೊಟ್ಟೆ ಭಾರ ಉಂಟು ಮಾಡುವುದು, ಮೆದುಳನ್ನು ನಿಧಾನವಾಗಿಸುವುದು ಮತ್ತು ದೇಹದಲ್ಲಿ ವಿಷಕಾರಿ ಅಂಶವನ್ನು ಉತ್ಪತ್ತಿ ಮಾಡುವುದು. ಇದರಿಂದಾಗಿ ನಿಮಗೆ ತುಂಬಾ ನಿದ್ರೆ ಮತ್ತು ಮಬ್ಬು ಕವಿದಂತೆ ಆಗಬಹುದು. ಶಿಶುಗಳಿಗೆ ಇದು ಪ್ರಾಣಹಾನಿಯನ್ನು ಉಂಟು ಮಾಡುವಂತಹ ಸಾಧ್ಯತೆಗಳು ಇವೆ.

Most Read: ಕೆಲವೊಮ್ಮೆ ದೇಹದ ಕಿಡ್ನಿಗಳೂ ಊದಿಕೊಳ್ಳಬಹುದು! ಇದಕ್ಕೆಲ್ಲಾ ಕಾರಣವೇನು?

ಕಿತ್ತಳೆ+ಕ್ಯಾರೆಟ್

ಕಿತ್ತಳೆ+ಕ್ಯಾರೆಟ್

ನೀವು ಜ್ಯೂಸ್ ಸೆಂಟರ್ ಗೆ ಹೋದರೆ ಅಲ್ಲಿ ಸಾಮಾನ್ಯವಾಗಿ ಕಿತ್ತಳೆ ಹಾಗೂ ಕ್ಯಾರೆಟ್ ಹಾಕಿದ ಜ್ಯೂಸ್ ನ ಮಿಶ್ರಣವನ್ನು ಹೇಳಬಹುದು. ಆದರೆ ತಪ್ಪಿಯೂ ನೀವು ಇದನ್ನು ಸೇವನೆ ಮಾಡಬೇಡಿ. ಯಾಕೆಂದರೆ ಈ ಮಿಶ್ರಣವನ್ನು ಜತೆಯಾಗಿ ಸೇವನೆ ಮಾಡುವುದರಿಂದ ಎದೆಯುರಿ, ಪಿತ್ತರಸದ ಹಿಮ್ಮುಖ ಹರಿವು ಮತ್ತು ಕೆಲವೊಂದು ಸಂದರ್ಭದಲ್ಲಿ ಮೂತ್ರಪಿಂಡದ ಸಮಸ್ಯೆಗೆ ಕಾರಣವಾಗಬಹುದು. ಈ ಜ್ಯೂಸ್ ನಿಮ್ಮ ದೇಹದಲ್ಲಿ ಮತ್ತಷ್ಟು ಸಮಸ್ಯೆಯನ್ನು ಉಂಟು ಮಾಡಬಹುದು. ನೀವು ಅದಾಗಲೇ ಜೀರ್ಣಕ್ರಿಯೆ ಸಮಸ್ಯೆಯವರಾಗಿದ್ದರೆ ಈ ಜ್ಯೂಸ್ ಇದನ್ನು ಮತ್ತಷ್ಟು ಕೆಡಿಸುವುದು. ಈ ಮಿಶ್ರಣದಿಂದಾಗಿ ಕಿಡ್ನಿಯ ಸಮಸ್ಯೆಯು ಕಾಡಬಹುದು. ಇದು ದೇಹದ ಮೇಲೆ ತುಂಬಾ ಗಂಭೀರ ಪರಿಣಾಮ ಉಂಟು ಮಾಡಬಹುದು.

ಅನಾನಸು+ಹಾಲು

ಅನಾನಸು+ಹಾಲು

ಅನಾಸನು ಹಾಗೂ ಹಾಲನ್ನು ಜತೆಯಾಗಿ ಸೇವನೆ ಮಾಡಿದರೆ ಆಗ ನಿಮಗೆ ಹಲವಾರು ರೀತಿಯ ಸಮಸ್ಯೆಗಳು ಎದುರಾಗಬಹುದು. ಯಾಕೆಂದರೆ ಇದರಿಂದ ಉಂಟಾಗುವಂತಹ ಅಡ್ಡಪರಿಣಾಮಗಳೆಂದರೆ ವಾಕರಿಕೆ, ಸೋಂಕು, ಭೇದಿ, ತಲೆನೋವು ಮತ್ತು ಹೊಟ್ಟೆ ನೋವು. ಬ್ರೊಮೆಲೈನ್ ಮತ್ತು ಲ್ಯಾಟಿಕ್ ಆಮ್ಲದ ಮಿಶ್ರಣವು ಯಾವತ್ತೂ ಸರಿಯಾಗಿ ಹೊಂದಿಕೆಯಾಗದು.

ಬಾಳೆಹಣ್ಣು+ಪೇರಳೆ

ಬಾಳೆಹಣ್ಣು+ಪೇರಳೆ

ಈ ಹಣ್ಣುಗಳೆರಡರ ಮಿಶ್ರಣವು ಗ್ಯಾಸ್ ಮತ್ತು ಆಮ್ಲವ್ಯಾಧಿಯನ್ನು ಉಂಟು ಮಾಡುವುದು. ಇದರಿಂದ ನಿಮಗೆ ತುಂಬಾ ವಾಕರಿಕೆ ಮತ್ತು ಮೈಭಾರವಾದಂತೆ ಆಗಬಹುದು. ತಲೆನೋವು ಮತ್ತು ಹೊಟ್ಟೆನೋವು ಕೂಡ ಕಾಣಿಸಬಹುದು.

ಲಿಂಬೆ +ಪಪ್ಪಾಯಿ

ಲಿಂಬೆ +ಪಪ್ಪಾಯಿ

ಈ ಎರಡನ್ನು ನೀವು ಜತೆಯಾಗಿ ಸೇವನೆ ಮಾಡಿದರೆ ಅದರಿಂದ ದೇಹದಲ್ಲಿ ರಕ್ತಹೀನತೆ ಉಂಟಾಗಬಹುದು. ಇದು ಹಿಮೋಗ್ಲೋಬಿನ್(ರಕ್ತದಲ್ಲಿನ ಪ್ರೋಟೀನ್) ಮೇಲೆ ಕೆಲವೊಂದು ಸಮಸ್ಯೆಗಳನ್ನು ಉಂಟು ಮಾಡಬಹುದು. ಇದರಿಂದಾಗಿ ನೀವು ಈ ಮಿಶ್ರಣವನ್ನು ಯಾವತ್ತೂ ಮಕ್ಕಳಿಗೆ ನೀಡಬಾರದು.

Most Read: ಕಣ್ಣೀರು ತರಿಸುವ ಸ್ಟೋರಿ: ಈಕೆ ಮಗುವಿಗೆ ಜನ್ಮ ನೀಡಿ ಸಾವನ್ನಪ್ಪಿದರೂ 50 ಜನರ ಪ್ರಾಣ ಉಳಿಸಿದಳು!

ಹಾಲು+ಕಿತ್ತಳೆ

ಹಾಲು+ಕಿತ್ತಳೆ

ಹಾಲು, ಕಿತ್ತಳೆ ಜ್ಯೂಸ್ ಮತ್ತು ಸೀರಲ್ ನ್ನು ಜತೆಯಾಗಿ ಸೇವನೆ ಮಾಡುವ ಪರಿಣಾಮವಾಗಿ ನಿಮ್ಮ ದೇಹವು ಅದನ್ನು ಸರಿಯಾಗಿ ಜೀರ್ಣಿಸಿಕೊಳ್ಳಲು ಆಗದು. ಇದು ಮಕ್ಕಳಿಗೆ ಅತಿಯಾಗಿ ಹಾನಿ ಉಂಟು ಮಾಡಬಹುದು. ಸೀರಲ್ ನಲ್ಲಿ ಇರುವಂತಹ ಪಿಷ್ಠವನ್ನು ಹೀರಿಕೊಳ್ಳಲು ಹೊಟ್ಟೆಗೆ ಕಿತ್ತಳೆಯು ಅಡ್ಡಿ ಉಂಟು ಮಾಡುವುದು.

ತರಕಾರಿ+ ಹಣ್ಣುಗಳು

ತರಕಾರಿ+ ಹಣ್ಣುಗಳು

ತರಕಾರಿ ಮತ್ತು ಹಣ್ಣುಗಳು ತುಂಬಾ ಆರೋಗ್ಯಕಾರಿ ಎಂದು ನಮಗೆಲ್ಲರಿಗೂ ತಿಳಿದಿದೆ. ಆದರೆ ಇದರರ್ಥ ನೀವು ಇದೆಲ್ಲವನ್ನೂ ಜತೆಯಾಗಿ ಸೇವನೆ ಮಾಡಬೇಕೆಂದಲ್ಲ. ಹಣ್ಣುಗಳಲ್ಲಿ ಹೆಚ್ಚಿನ ಮಟ್ಟದ ನೈಸರ್ಗಿಕ ಸಕ್ಕರೆ ಅಂಶವು ಇರುವ ಕಾರಣದಿಂದಾಗಿ ಇದು ತರಕಾರಿಗಳು ಜೀರ್ಣಗೊಳ್ಳಲು ಕಠಿಣವಾಗುವಂತೆ ಮಾಡುವುದು. ಇದು ಹೊಟ್ಟೆಯಲ್ಲಿ ಉಳಿದುಕೊಳ್ಳುವುದು. ಇದರಿಂದ ಹಣ್ಣುಗಳು ಉದುಗುವಿಕೆ ಉಂಟು ಮಾಡುವುದು ಮತ್ತು ಹೆಚ್ಚಿನ ವಿಷ ಉತ್ಪತ್ತಿ ಮಾಡುವುದು. ಇದರಿಂದ ನಿಮಗೆ ಹೊಟ್ಟೆ ನೀವು, ಗ್ಯಾಸ್, ಸೋಂಕು, ಬೇದಿ ಮತ್ತು ತಲೆ ನೋವು ಕಾಣಿಸಿಕೊಳ್ಳಬಹುದು. ಹಣ್ಣುಗಳು ಹೆಚ್ಚು ಆಮ್ಲೀಯ ಗುಣ ಹೊಂದಿರುವ ಕಾರಣದಿಂದಾಗಿ ಇದು ವಿಘಟನೆಗೊಂದು ತರಕಾರಿಯಲ್ಲಿ ಇರುವಂತಹ ಪೋಷಕಾಂಶಗಳ ಮೌಲ್ಯವನ್ನು ಕನಿಷ್ಠಗೊಳಿಸುವುದು.

ಅಂತಿಮ ಸಲಹೆ

ಅಂತಿಮ ಸಲಹೆ

ನೀವು ಸಿಹಿ ಹಾಗೂ ಆಮ್ಲೀಯವಾಗಿರುವಂತಹ ಹಣ್ಣುಗಳನ್ನು ಬೇರ್ಪಡಿಸಬೇಕು. ನೀವು ಸಾಮಾನ್ಯವಾಗಿ ಸೇವಿಸುವಂತಹ ಹಣ್ಣುಗಳ ಸಲಾಡ್ ನ್ನು ಬೇರ್ಪಡಿಸಿಕೊಳ್ಳಿ. ಇದರಲ್ಲಿ ಜೀರ್ಣಕ್ರಿಯೆ ನಿಧಾನಗೊಳಿಸುವಂತಹ ಕಲ್ಲಂಗಡಿ, ಸೇಬು, ಅನಾನಸು, ಬಾಳೆಹಣ್ಣು ಮತ್ತು ಸ್ಟ್ರಾಬೆರಿ ಇದೆ. ಇದರ ಬದಲಿಗೆ ನೀವು ನೇರಳೆ ಮತ್ತು ರಸ್ಬೇರಿಗಳನ್ನು ಜತೆಯಾಗಿ ಸೇವನೆ ಮಾಡಬಹುದು. ಊಟದ ವೇಳೆ ಕೂಡ ನೀವು ಇದೇ ಕ್ರಮವನ್ನು ಅನುಸರಿಸಬೇಕು. ದೇಹವು ಸರಿಯಾಗಿ ಜೀರ್ಣಿಸಿಕೊಳ್ಳುವಂತಹ ಆಹಾರವನ್ನು ನೀವು ಸೇವನೆ ಮಾಡಿದರೆ ಒಳ್ಳೆಯದು. ಇದರಿಂದ ದೇಹಕ್ಕೆ ಎಲ್ಲಾ ರೀತಿಯ ಪೋಷಕಾಂಶಗಳು ಸಿಗುವುದು. ನಿಮಗೆ ಇದರ ಬಗ್ಗೆ ಯಾವುದೇ ರೀತಿಯ ಸಂಶಯವಿದ್ದರೆ ಆಗ ನೀವು ಪೋಷಕಾಂಶ ತಜ್ಞರನ್ನು ಭೇಟಿ ಮಾಡಿ ಅವರಿಂದ ಹೆಚ್ಚಿನ ಸಲಹೆಗಳನ್ನು ಪಡೆಯಿರಿ. ನೀವು ಅನಿಸಿಕೆಗಳನ್ನು ಖಂಡಿತವಾಗಿಯೂ ಕಮೆಂಟ್ ಬಾಕ್ಸ್ ಗೆ ಹಾಕಲು ಮೆರೆಯಬೇಡಿ.

English summary

Here's A List Of Fruits You Should Never Mix

A bowl of fruits and vegetables salads is undoubtedly one of the best meals you crave to pamper yourself with. So you walk down to your refrigerator, bring out all the fruits and salad vegetables that there is, chop them, squeeze a lime, add a dash of salt and sprinkle some coriander. Done and you believe it to be the healthiest ever. But hold on! Is this truly the right way to go about a fruit salad?
X
Desktop Bottom Promotion