For Quick Alerts
ALLOW NOTIFICATIONS  
For Daily Alerts

ಅನಾನಸ್ ಹಣ್ಣನ್ನು ಸೇವಿಸುವುದರ 8 ಲಾಭಗಳು

By Sushma Charhra
|

ನೀವು ಹಣ್ಣುಗಳನ್ನು ಸೇವಿಸಲು ತುಂಬಾ ಬಯಸುತ್ತೀರಾದರೆ, ಖಂಡಿತ ಮಾರ್ಕೆಟ್ ನಲ್ಲಿರುವ ಅತ್ಯಂತ ರುಚಿಕರವಾದ ಹಣ್ಣು - ಅನಾನಸ್ ಹಣ್ಣನ್ನು ಸೇವಿಸುವುದನ್ನು ಖಂಡಿತ ತಪ್ಪಿಸಿರುವುದಿಲ್ಲ. ಅನಾನಸ್ ಹಣ್ಣನ್ನು ಆರೋಗ್ಯಕಾರಿಯಾದ ಮತ್ತು ರುಚಿಕಾರಿಯಾದ ಒಂದು ಉಷ್ಣವಲಯದ ಹಣ್ಣು ಎಂದು ಹೇಳಲಾಗುತ್ತದೆ. ಇದು ಸೌತ್ ಅಮೇರಿಕಾದಲ್ಲಿ ಮೊದಲು ಹುಟ್ಟಿದ ಹಣ್ಣು ಎಂದು ಹೇಳಲಾಗುತ್ತದೆ. ಯುರೋಪಿನ ಪರಿಶೋಧಕರು ಇದಕ್ಕೆ ಮೊದಲು ಪೈನ್ ಆಪಲ್ ಎಂದು ಕರೆದಿದ್ದಾರೆ. ಇದನ್ನು ಅನಾನಸ್ ಎಂತಲೂ ಕರೆಯುವುದುಂಟು.

ಅನಾನಸ್ ಹಣ್ಣಿನ ಆರೋಗ್ಯ ಲಾಭಗಳು

ಸಮೃದ್ಧ ನ್ಯೂಟ್ರೀಯಂಟ್ಸ್ ಗಳು ಮತ್ತು ಅಗತ್ಯ ಪೋಷಕಾಂಶಗಳಿಂದ ತುಂಬಿರುವ ಅನಾನಸ್ ಹಣ್ಣು ಹಲವು ರೀತಿಯ ಆರೋಗ್ಯ ಲಾಭಗಳನ್ನು ಮಾಡುತ್ತದೆ. ಉರಿಯೂತದ ಸಮಸ್ಯೆಯ ವಿರುದ್ಧ ಹೋರಾಡುವ ತಾಕತ್ತು ಇದಕ್ಕಿದೆ ಎಂದು ಹೇಳಲಾಗುತ್ತೆ. ಹಾಗಾದ್ರೆ ಈ ಹಣ್ಣಿನ ಇನ್ನಷ್ಟು ಬೆನಿಫಿಟ್ಸ್ ಗಳ ಬಗ್ಗೆ ಈ ಕೆಳಗೆ ಓದಿ ತಿಳಿದುಕೊಳ್ಳಿ.

Pineapple in kannada

1. ಹೆಚ್ಚು ಪೌಷ್ಟಿಕವಾಗಿರುವ ಆಹಾರ

ಅತೀ ಕಡಿಮೆ ಕ್ಯಾಲೋರಿ ಅಂಶಗಳನ್ನು ಹೊಂದಿರು ಹಣ್ಣಾಗಿರುವ ಇದು, ಅತ್ಯಂತ ಹೆಚ್ಚು ಪೋಷಕಾಂಶಗಳನ್ನು ಒಳಗೊಂಡಿರುತ್ತದೆ..ಒಂದು ಕಪ್ ಹೆಚ್ಚಿದ ಅನಾನಸ್ ಸೇವನೆಯಿಂದಾಗಿ ಹಲವಾರು ನ್ಯೂಟ್ರಿಯಂಟ್ ಗಳು ಲಭ್ಯವಾಗುತ್ತದೆ ಅವುಗಳೆಂದರೆ ಪ್ರೋಟೀನ್, ಕಾರ್ಬೋಹೈಡ್ರೇಟ್ಸ್, ಫೈಬರ್, ಮ್ಯಾಂದನೀಸ್, ನಿಯಾಸಿನ್, ಪೊಟಾಷಿಯಂ, ಕೊಬ್ಬಿನಾಂಶ, ವಿಟಮಿನ್ ಸಿ, ತಾಮ್ರ, ಥೈಯಾಮಿನ್, ರಿಬೋಪ್ಲೇವಿನ್, ಕಬ್ಬಿಣಾಂಶ ಮತ್ತು ಇತರೆ ಹಲವಾರು ಅಂಶಗಳು. ಅನಾನಸ್ ನಲ್ಲಿ ವಿಟಮಿನ್ ಕೆ, ಎ ಅದರ ಜೊತೆಗೆ ಸತುವು, ಕ್ಯಾಲ್ಸಿಯಂ ಮತ್ತು ಪಾಸ್ಪರಸ್ ಗಳು ಕೂಡ ಇರುತ್ತದೆ..ವಿಟಮಿನ್ ಸಿ ಗಳ ಖಣಜವಾಗಿರುವ ಅನಾನಸ್ ನಿಮ್ಮ ಒಟ್ಟಾರೆ ಬೆಳವಣಿಗೆಗೆ ನೆರವಾಗುತ್ತದೆ. ಇದು ಆಹಾರದಿಂದ ಕಬ್ಬಿಣದ ಅಂಶವನ್ನು ಹೀರಿಕೊಳ್ಳುವಲ್ಲಿ ಸಹಾಯ ಮಾಡುತ್ತದೆ ಮತ್ತು ಇವುಗಳು ಆರೋಗ್ಯಕರ ಪ್ರತಿರಕ್ಷಣಾ ವ್ಯವಸ್ಥೆಯನ್ನು ಉತ್ತೇಜಿಸುತ್ತವೆ.

2. ರೋಗ-ಹೋರಾಟ ಉತ್ಕರ್ಷಣ ನಿರೋಧಕ ಗುಣ

ಇದು ಆಂಟಿ ಆಕ್ಸಿಡೆಂಟ್ ಗಳಿಂದ ಸಮೃದ್ಧವಾಗಿದೆ, ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಈ ಅನಾನಸ್ ಗಳು ಹೊಂದಿವೆ. ಅನಾನಸ್ ನಲ್ಲಿ ಆಂಟಿ ಆಕ್ಸಿಡೆಂಟ್ ಗಳಾದ ಫ್ಲೇವನಾಯ್ಡ್ಸ್ ಮತ್ತು ಫೇನೋಲಿಕ್ ಆಸಿಡ್ ಗಳು ಇರುತ್ತದೆ. ದೀರ್ಘಾವಧಿಯ ಪರಿಣಾಮಗಳನ್ನು ಅನಾನಸ್ ನಲ್ಲಿರುವ ರೋಗ- ಹೋರಾಟ ಉತ್ಕರ್ಷಣ ನಿರೋಧಕ ಗುಣಗಳು ರೋಗಗಳಾದ ಡಯಾಬಿಟೀಸ್ ಮತ್ತು ಹೃದಯ ಸಂಬಂಧಿ ರೋಗಗಳು ಬರುವ ಸಾಧ್ಯತೆಯನ್ನು ಹೇರಳವಾಗಿ ಕಡಿಮೆ ಮಾಡುತ್ತದೆ.

ಜೀರ್ಣಕ್ರಿಯೆಗೆ ಸಹಕಾರಿ

ಬ್ರೋಮೆಲಿನ್ ಎಂದು ಕರೆಯಲ್ಪಡುವ ಜೀರ್ಣಕಾರಿ ಕಿಣ್ವಗಳ ಗುಂಪೊಂದು ಅನಾನಸ್ನಲ್ಲಿ ಕಂಡುಬರುತ್ತದೆ. ಇವುಗಳು ಪ್ರೋಟೀನ್ ಅಣುಗಳನ್ನು ಸಣ್ಣಸಣ್ಣ ತುಂಡುಗಳನ್ನಾಗಿ ಬಿಲ್ಡಿಂಗ್ ಬ್ಲಾಕ್ ಗಳಂತೆ ಉದಾಹರಣೆ ಅಮೈನೋ ಆಸಿಡ್ ಮತ್ತು ಪೆಪ್ಟೈಡ್ ಗಳನ್ನಾಗಿ ಪರಿವರ್ತಿಸುವ ಜವಾಬ್ದಾರಿಯನ್ನು ಹೊತ್ತುಕೊಂಡಿರುತ್ತದೆ. ಈ ರೀತಿ ತುಂಡುಗಳಾದ ಪ್ರೊಟೀನ್ ಅಣುಗಳು ಕುರುಳಿನಲ್ಲಿ ಸುಲಭದಲ್ಲಿ ಹೀರಿಕೊಳ್ಳಲ್ಪಡುತ್ತದೆ. ಇದು ಯಾರು ಪ್ಯಾಂಕ್ರಿಯಾಟಿಕ್ ಕೊರತೆಯಿಂದ ಬಳಲುತ್ತಿರುತ್ತಾರೋ ಅವರಿಗೆ ಬಹಳವಾಗಿ ಪ್ರಯೋಜನಕ್ಕೆ ಬರುತ್ತದೆ. ಒಟ್ಟಾರೆಯಾಗಿ ಜೀರ್ಣಕ್ರಿಯೆ ವ್ಯವಸ್ಥೆಯನ್ನುಸರಿಯಾದ ಹಾದಿಯಲ್ಲಿ ಇಡಲು ಇದು ಸಹಾಯಕವಾಗಿದೆ.

3. ಕ್ಯಾನ್ಸರ್ ಬರುವ ಸಾಧ್ಯತೆಯನ್ನು ತಡೆಯುತ್ತೆ

ಆಕ್ಸಿಡೇಟಿವ್ ಸ್ಟ್ರೆಸ್ ಮತ್ತು ಉರಿಯೂತವನ್ನು ಕಡಿಮೆಗೊಳಿಸುವ ತಾಕತ್ತು ಅನಾನಸ್ ಗಿದೆ. ಈ ವೈಶಿಷ್ಟ್ಯವು ಕ್ಯಾನ್ಸರ್ ರೋಗ ಬರುವ ಸಾಧ್ಯತೆಯನ್ನು ಬಹಳವಾಗಿ ತಡೆಯುತ್ತದೆ. ಅನಾನಸ್ ನಲ್ಲಿರುವ ಬ್ರೊಮೆಲಿನ್ ಅಂಶವು ಕ್ಯಾನ್ಸರ್ ಸೆಲ್ ಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಬ್ರೆಸ್ಟ್ ಕ್ಯಾನ್ಸರ್ ಮತ್ತು ಚರ್ಮದ ಕ್ಯಾನ್ಸರ್, ಗ್ಯಾಸ್ಟ್ರಿಕ್ ಸಮಸ್ಯೆ, ಕೊಲೊನ್, ಮತ್ತು ಪಿತ್ತರಸ ನಾಳದ ಸಮಸ್ಯೆಗೆ ಪರಿಹಾರ ನೀಡುತ್ತದೆ.

4.ರೋಗನಿರೋಧಕ ಶಕ್ತಿ ಹೆಚ್ಚಿಸುತ್ತೆ ಮತ್ತು ಉರಿಯೂತ ತಡೆ ಸಾಮರ್ಥ್ಯ

ಹಲವಾರು ರೀತಿಯ ಸಾಂಪ್ರದಾಯಿಕ ಔಷಧೋಪಚಾರಗಳಲ್ಲಿ ಬಹಳ ಹಿಂದಿನ ಕಾಲದಿಂದಲೂ ಕೂಡ ಅನಾನಸ್ ನ್ನು ಬಳಕೆ ಮಾಡಲಾಗುತ್ತಿದೆ. ಅನಾನಸ್ ನಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಮಿನರಲ್ ಗಳು, ವಿಟಮಿನ್ ಗಳು , ಎನ್ಝೈಮ್ ಗಳು ಇರುತ್ತದೆ ಮತ್ತು ಇವು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ ಜೊತೆಗೆ ಉರಿಯೂತ ತಡೆಯುವ ಸಾಮರ್ಥ್ಯವನ್ನು ಹೊಂದಿದೆ. ಯಾವ ಮಕ್ಕಳಿಗೆ ಅನಾನಸ್ ಹಣ್ಣುಗಳನ್ನು ನೀಡುತ್ತಾರೋ ಆ ಮಕ್ಕಳು ವೈರಲ್ ಮತ್ತು ಬ್ಯಾಕ್ಟೀರಿಯಾ ಸೋಂಕುಗಳಿಂದ ಮುಕ್ತರಾಗಿರುತ್ತಾರೆ. ಅಧ್ಯಯನವೊಂದು ತಿಳಿಸುವಂತೆ ಯಾವ ಮಕ್ಕಳು ಹೆಚ್ಚು ಅನಾನಸ್ ಸೇವಿಸುತ್ತಾರೋ ಅಂತಹ ಮಕ್ಕಳನ್ನು ಅನಾನಸ್ ಸೇವಿಸದ ಮಕ್ಕಳಿಗೆ ಹೋಲಿಸಿದರೆ ನಾಲ್ಕು ಪಟ್ಟು ಹೆಚ್ಚು ರೋಗ ನಿರೋಧಕ ಶಕ್ತಿಯ ವಿರುದ್ಧ ಹೋರಾಡುವ ರಕ್ತದ ಕಣಗಳನ್ನು ಗುರುತಿಸಬಹುದಂತೆ.

5. ಆರ್ಥೈಟೀಸ್ ಚಿಹ್ನೆಗಳಿಂದ ಮುಕ್ತಿ

ಆರ್ಥೈಟೀಸ್ ಒಂದು ಸಾಮಾನ್ಯ ಸಮಸ್ಯೆಯಾಗಿದ್ದು, ವಯಸ್ಸಾದವರು ಹೆಚ್ಚಿನ ರೀತಿಯಲ್ಲಿ ಈ ಸಮಸ್ಯೆಯಿಂದ ಬಳಲುತ್ತಾರೆ. ಈ ಕಾಯಿಲೆಯ ತುಂಬಾ ಸಾಮಾನ್ಯ ಲಕ್ಷಣವೆಂದರೆ ಸಂಧಿಗಳಲ್ಲಿ ನೋವು ಕಾಣಿಸಿಕೊಳ್ಳುವುದು. ಬ್ರೆಮೋಲಿನ್ ಅಂಶವು ಇದರಲ್ಲಿ ಅಡಕವಾಗಿರುವುದರಿಂದಾಗಿ, ಇದರಲ್ಲಿ ಆಂಟಿ ಇನ್ಫಮೇಟರಿ ಗುಣಗಳಿದೆ ಮತ್ತು ಇದು ನೋವುಗಳಿಂದ ಮುಕ್ತಿ ನೀಡಲು ಸಹಾಯಕವಾಗಿರುತ್ತದೆ, ಅಷ್ಟೇ ಅಲ್ಲ, ಸಂಧುಗಳಲ್ಲಿ ಕಾಣಿಸಿಕೊಳ್ಳುವ ಉರಿಯೂತವನ್ನು ಕೂಡ ಇದು ನಿವಾರಿಸುತ್ತದೆ.
ಅಧ್ಯಯನಗಳು ತಿಳಿಸುವಂತೆ ಬ್ರೊಮೆಲಿನ್ ತುಂಬಾ ಅಧ್ಬುತವಾದ ಚಿಕಿತ್ಸಕ ಗುಣಗಳನ್ನು ಹೊಂದಿದ್ದು, ಆಸ್ಟಿಯೋ ಆರ್ಥೈಟೀಸ್ ಸಮಸ್ಯೆಯನ್ನು ನಿವಾರಿಸಲು ನೆರವಾಗುತ್ತದೆ. ಆದಾಗ್ಯೂ, ಬ್ರೋಮೆಲಿನ್ ಬಳಕೆಯಿಂದ ಸಂಧಿವಾತದ ದೀರ್ಘಾವಧಿಯ ಚಿಕಿತ್ಸೆಯು ಅಧ್ಯಯನದ ಮೂಲಕ ಸಾಕಷ್ಟು ಸ್ಪಷ್ಟವಾಗಿಲ್ಲ.

6. ಸರ್ಜರಿಗಳಿಂದ ಆಗುವ ಯಾವುದೇ ನೋವುಗಳಿಗೆ ಪರಿಹಾರ

ಅನಾನಸ್ ಗಳನ್ನು ಸೇವಿಸುವುದರಿಂದಾಗಿ ಸರ್ಜರಿಯ ನಂತರ ಗುಣಮುಖವಾಗಲು ಬೇಗನೆ ನೆರವಾಗುತ್ತದೆ. ಅಷ್ಟೇ ಅಲ್ಲ, ಸರ್ಜರಿಯ ನಂತರ ನೀವು ಕಳೆದುಕೊಂಡಿರುವ ಶಕ್ತಿಯ ಪ್ರಮಾಣವನ್ನು ಪುನಃ ಪಡೆಯಲು ಇದು ಸಹಕಾರಿಯಾಗಿರುತ್ತದೆ.. ಬ್ರೋಮೆಲಿನ್ ಉರಿಯೂತದ ಗುಣಲಕ್ಷಣಗಳನ್ನು ವಿರೋಧಿಸಲು ಇದು ಕಾರಣವಾಗುತ್ತದೆ
ಶಸ್ತ್ರಚಿಕಿತ್ಸೆ ನಂತರ ಉಂಟಾಗುವ ಊತ, ಏಟುಗಳು, ನೋವು ಮತ್ತು ಉರಿಯೂತವನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಬ್ರೊಮೆಲಿನ್ ಹೊಂದಿರುತ್ತದೆ. ಈ ಬ್ರೊಮೆಲಿನ್ ಆಂಟಿ ಇನ್ಲಮೇಟರಿ ಗುಣವು ಟಿಶ್ಯೂಗಳಲ್ಲಿ ಕಾಣಿಸಿಕೊಳ್ಳುವ ಉರಿಯೂತವನ್ನು ಬಹಳ ದೊಡ್ಡ ಮಟ್ಟದಲ್ಲಿ ಕಡಿಮೆ ಮಾಡಲು ಸಹಾಯಕವಾಗಿದೆ.

7. ಕಣ್ಣಿನ ಆರೋಗ್ಯ ಹೆಚ್ಚಿಸುತ್ತೆ

ವಿಟಮಿನ್ ಸಿ, ಆಂಟಿ ಆಕ್ಸಿಡೆಂಡ್ ಗಳು, ಮಿನರಲ್ ಗಳಾದ ಪೋಟಾಷಿಯಂ ಮತ್ತು ಮ್ಯಾಂಗನೀಸ್ ಗಳಿಂದ ಅನಾನಸ್ ಶ್ರೀಮಂತವಾಗಿರುತ್ತದೆ. ಜೀವಕೋಶಗಳು ಡ್ಯಾಮೇಜ್ ಆಗುವುದನ್ನು ತಡೆಯುವ ಉತ್ತಮ ಸಾಮರ್ಥ್ಯವು ಇದರಲ್ಲಿದೆ. ಅನಾನಸ್ ಹಣ್ಣುಗಳು ಕಣ್ಣುಗಳ ಸ್ನಾಯು ಕ್ಷೀಣತೆಯ ಅಪಾಯವನ್ನು ಕಡಿಮೆ ಮಾಡಲು ಸಮರ್ಥವಾಗಿವೆ ಮತ್ತು ಈ ಹಣ್ಣು ಬೀಟಾ-ಕ್ಯಾರೊಟಿನ್ ಅಂಶಗಳನ್ನು ಒಳಗೊಂಡಿದೆ, ಇದು ಉತ್ತಮ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.ಇಷ್ಟೆಲ್ಲ ಆರೋಗ್ಯ ಲಾಭಗಳನ್ನು ಹೊಂದಿರುವ ಅನಾನಸ್ ಹಣ್ಣು, ಆರೋಗ್ಯದ ಬಗ್ಗೆ ಕಾಳಜಿ ಇರುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ತನ್ನ ಆರೋಗ್ಯದ ಹಿತದೃಷ್ಟಿಯಿಂದ ಪ್ರತಿದಿನ ಸೇವನೆ ಮಾಡುವುದು ಬಹಳ ಒಳ್ಳೆಯದು. ತಮ್ಮ ಡಯಟ್ ನ ಒಂದು ಭಾಗವಾಗಿ ಅನಾನಸ್ ಬಳಕೆ ಮಾಡುವುದು ಖಂಡಿತ ಯಾರಿಗೂ ಕೂಡ ಕಷ್ಟವಾಗಿರುವ ವಿಚಾರವಲ್ಲ. ಪ್ರತಿ ದಿನ ಸಾಧ್ಯವಾಗದೇ ಇದ್ದರೆ, ಕೊನೆಪಕ್ಷ ವಾರಕ್ಕೆ ಮೂರು ದಿನ ಆದರೂ ಇದನ್ನು ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಬಹಳ ಒಳ್ಳೆಯದು. ಇದು ಎಲ್ಲಾ ಕಾಲಗಳನ್ನು ಲಭ್ಯವಿರುವ ಹಣ್ಣಾಗಿದ್ದು, ತಾಜಾವಾಗಿ, ಹೆಪ್ಪುಗಟ್ಟಿದ ರೂಪದಲ್ಲಿ, ಉಪ್ಪಿನಲ್ಲಿ ನೆನೆಸಿಟ್ಟ ರೂಪದಲ್ಲೂ ಇದು ಲಭ್ಯವಿರುತ್ತೆ,. ನೀವು ಹೇಗೆ ತಿನ್ನಲುಇಚ್ಛಿಸುತ್ತೀರೋ ಹಾಗೆ ಅದನ್ನು ಕೊಂಡುಕೊಳ್ಳಬಹುದು. ನೀವು ಸಲಾಡ್ ಮತ್ತು ಸ್ಮೂತಿಗಳನ್ನು ತಯಾರಿಸಿಕೊಂಡು ಸೇವಿಸಬಹುದು. ಮನೆಯಲ್ಲೇ ತಯಾರಿಸುವ ಪಿಝಾಗಳನ್ನು ಕೆಲವರು ಅದನ್ನು ಬಳಕೆ ಮಾಡುತ್ತಾರೆ. ಬಹಳ ಪ್ರಮುಖವಾಗಿ ಅನಾನಸ್ ನಿಂದ ತಯಾರಿಸುವ ಅಡುಗೆಗಳೆಂದರೆ, ಅನಾನಸ್ ಕೇಸರಿಬಾತ್, ಅನಾನಸ್ ಕೋಸುಂಬರಿ, ಇತ್ಯಾದಿ

8. ತಿಂಡಿ : ಅನಾನಸ್, ಬ್ಲೂಬೆರ್ರಿ ಮತ್ತು ಗ್ರೀಕ್ ಯೋಕರ್ಟ್ ಬಳಸಿ ಸ್ಮೂತಿಯನ್ನು ತಯಾರಿಸಬಹುದು
ತಿನಿಸು : ಅನಾನಸ್ ಫ್ರೂಟ್ ಸಲಾಡ್, ಅದರಲ್ಲೂ ತಣ್ಣಗಿದ್ದರೆ ಉತ್ತಮ ತಿನಿಸಾಗುತ್ತದೆ. ಬೇರೆಬೇರೆ ಪ್ರದೇಶದಲ್ಲಿ ಅನಾನಸ್ ನ್ನು ಪ್ರಾದೇಶಿಕವಾಗಿ ತಯಾರಿಸುವ ಬೇರೆ ಬೇರೆ ಆಹಾರ ಕ್ರಮಗಳಿದ್ದು, ಯಾವುದೇ ಮಾರ್ಗವನ್ನೂ ಕೂಡ ಬಳಕೆ ಮಾಡಬಹುದು.ಒಟ್ಟಾರೆ ಇದರ ಸೇವನೆಯಿಂದ ಹಲವಾರು ರೀತಿಯ ಆರೋಗ್ಯ ಲಾಭಗಳನ್ನಂತೂ ಪಡೆಯಬಹುದು ಮತ್ತು ನಿಮ್ಮ ಡಯಟ್ ನಲ್ಲಿ ಪ್ರತಿದಿನ ಅನಾನಸ್ ಹಣ್ಣಿನ ಬಳಕೆ ನಿಮಗೆ ಉತ್ತಮ ಆರೋಗ್ಯ ಭಾಗ್ಯವನ್ನು ಕರುಣಿಸುತ್ತದೆ.

English summary

Here Are 8 Benefits Of Eating Pineapples

If you are a fruit addict, then you surely wouldn't have missed out on eating one of the tastiest fruits available in the market - "Pineapples". Pineapples are considered to be one of the healthiest and delicious tropical fruit. Named pineapple by European explorers due to its close resemblance to that of a pinecone, this fruit is said to have originated in South America.
X
Desktop Bottom Promotion