For Quick Alerts
ALLOW NOTIFICATIONS  
For Daily Alerts

ಬಟಾಣಿ ಹಾಲಿನ ಬಗ್ಗೆ ಕೇಳಿದ್ದೀರಾ? ನೀವು ಇದನ್ನು ಉಪಯೋಗಿಸಿದ್ದೀರಾ?

|

ಹಾಲಿನ ಬೇಡಿಕೆ ಹೆಚ್ಚುತ್ತಿದ್ದಂತೆಯೇ ಇದಕ್ಕೆ ಪರ್ಯಾಯ ಉತ್ಪನ್ನಗಳಿಗೂ ಬೇಡಿಕೆಯುಂಟಾಗಿದೆ. ಈ ನಿಟ್ಟಿನಲ್ಲಿ ನಡೆಸಿದ ಸಂಶೋಧನೆಯ ಪರಿಣಾಮವಾಗಿ ಇಂದು ಮಾರುಕಟ್ಟೆಯಲ್ಲಿ ಸೋಯಾ ಅವರೆಯಿಂದ ತಯಾರಿಸಲ್ಪಟ್ಟ ಹಾಲು 'ನಾನ್ ಡೈರಿ ಪ್ರಾಡಕ್ಟ್' ಎಂಬ ಹೆಸರಿನಲ್ಲಿ, ಅಂದರೆ ಪ್ರಾಣಿಜನ್ಯ ಮೂಲವಲ್ಲದ ಉತ್ಪನ್ನಗಳಿಂದ ತಯಾರಾದ ಉತ್ಪನ್ನಗಳ ರೂಪದಲ್ಲಿ ಲಭಿಸುತ್ತಿವೆ. ಈ ನಿಟ್ಟಿನಲ್ಲಿ ಮುಂದುವರೆದ ಸಂಶೋಧನೆ ಇಂದು ಬಟಾಣಿ ಕಾಳುಗಳಿಂದ ಹಾಲನ್ನು ಪಡೆಯುವತ್ತ ಮುಂದುವರೆದು ಹೆಚ್ಚಿನ ಪ್ರೋಟೀನ್ ಮತ್ತು ಕ್ಯಾಲ್ಸಿಯಂಭರಿತ ಹಾಲನ್ನು ತಯಾರಿಸಲು ಸಾಧ್ಯವಾಗಿದ್ದು ಹಸುವಿನ ಹಾಲಿಗೆ ಸಮರ್ಥ ಪರ್ಯಾಯವೆಂಬ ಭರವಸೆ ನೀಡಿದೆ.

ಬಟಾಣಿ ಹಾಲು ಎಂದರೇನು?

ಹೆಸರೇ ಸೂಚಿಸುವಂತೆ, ಈ ಹಾಲನ್ನು ಬಟಾಣಿ ಕಾಳುಗಳಿಂದ ತಯಾರಿಸಲಾಗುತ್ತದೆ. ಕೆಲವರಿಗೆ ಹಸುವಿನ ಹಾಲನ್ನು ಜೀರ್ಣೀಸಿಕೊಳ್ಳಲು ಸಾಧ್ಯವಾಗದೇ ಇರುತ್ತದೆ ಅಥವಾ ಕೆಲವರಿಗೆ ಹಾಲಿನ ರುಚಿ ಅಥವಾ ಪರಿಮಳ ಹಿಡಿಸದೇ ಹೋಗಬಹುದು. ಬಾದಾಮಿ ಹಾಲು ಆರೋಗ್ಯಕರವೇನೋ ಸರಿ, ಆದರೆ ಇದು ತೀರಾ ದುಬಾರಿ. ಕೆಲವರಿಗೆ ಹಾಲಿನ ಲ್ಯಾಕ್ಟೋಸ್ ಅಲರ್ಜಿಕಾರಕವಾಗಬಹುದು. ಇನ್ನೂ ಮುಖ್ಯವಾಗಿ ಸಾಕಷ್ಟು ಪ್ರಮಾಣದಲ್ಲಿ ಅಥವಾ ಅಗತ್ಯವಿರುವ ಸಮಯದಲ್ಲಿ ಹಸುವಿನ ಹಾಲು ಲಭ್ಯವಾಗದೇ ಹೋಗಬಹುದು. ಈ ಕೊರತೆಗಳನ್ನು ದುಬಾರಿ ಸೋಯಾ ಅವರೆಯ ಹಾಲಿಗಿಂತಲೂ ಅಗ್ಗದ ಬಟಾಣಿ ಹಾಲು ಸಮರ್ಥವಾಗಿ ತುಂಬಿಸಬಲ್ಲುದು. ಹಸುವಿನ ಹಾಲಿನಷ್ಟೇ ಬೆಲೆ ಮತ್ತು ಪೌಷ್ಟಿಕಾಂಶವುಳ್ಳ ಈ ಹಾಲಿನಲ್ಲಿ ಬಟಾಣಿಯ ಪ್ರೋಟೀನ್ (ಹಳದಿ ಬಟಾಣಿಗಳಿಂದ ಪಡೆದುಕೊಳ್ಳಲಾಗುತ್ತದೆ) ಆರೋಗ್ಯಕರವಾಗಿದ್ದು ಸಾಮಾನ್ಯ ಹಾಲಿಗಿಂತಲೂ ಭಿನ್ನವಾದ ಬಟಾಣಿಯದ್ದೇ ರುಚಿ ಮತ್ತು ವಾಸನೆ ಹೊಂದಿರುತ್ತದೆ.

Most Read: ಮೊಳಕೆ ಕಟ್ಟಿದ ಹೆಸರು ಕಾಳಿನ ಆರೋಗ್ಯಕಾರಿ ಪ್ರಯೋಜನಗಳು

ಬಟಾಣಿ ಹಾಲಿನ ಪೌಷ್ಟಿಕಾಂಶಗಳ ವಿವರ

ಬಟಾಣಿ ಹಾಲಿನ ಪೌಷ್ಟಿಕಾಂಶಗಳ ವಿವರ

ಬಟಾಣಿ ಹಾಲಿನ ಯಶಸ್ಸಿಗೆ ಇದರಲ್ಲಿರುವ ಪೋಷಕಾಂಶಗಳ ಭಂಡಾರವೇ ಕಾರಣ. ಒಂದು ಪ್ರಮಾಣದಲ್ಲಿ ಸೇವಿಸುವ ಹಾಲಿನಿಂದ ಎಂಟು ಗ್ರಾಂ ಪ್ರೋಟೀನ್ ದೊರಕುತ್ತದೆ. ಈ ಹಾಲಿನಲ್ಲಿ ಸಕ್ಕರೆ ಇಲ್ಲವೇ ಇಲ್ಲ ಹಾಗೂ ಸಾಮಾನ್ಯ ಹಾಲಿಗಿಂತಲೂ ಐವತ್ತು ಶೇಖಡಾದಷ್ಟು ಹೆಚ್ಚಿನ ಕ್ಯಾಲ್ಸಿಯಂ ಅನ್ನು ಒದಗಿಸುತ್ತದೆ. ಪ್ರೋಟೀನ್ ಯುಕ್ತ ಆಹಾರಗಳಿಗಾಗಿ ಬಟಾಣಿಯಂತಹ ದ್ವಿದಳ ಧಾನ್ಯಗಳನ್ನು ಸೇವಿಸಲು ಸೂಚಿಸಲಾಗುತ್ತದೆ. ಇದೇ ಬಟಾಣಿಯಿಂದ ತಯಾರಿಸಲ್ಪಟ್ಟ ಹಾಲಿನಲ್ಲಿ ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಇರುವ ಕಾರಣ ದೇಹ ಈ ಕಾಲ್ಸಿಯಂ ಅನ್ನು ನೇರವಾಗಿ ಹೀರಿಕೊಳ್ಳಲು ಸಾಧ್ಯವಾಗುತ್ತದೆ. ಹಸುವಿನ ಹಾಲಿನಲ್ಲಿ ಕ್ಯಾಲ್ಸಿಯಂ ಇದ್ದರೂ ಸಾಕಷ್ಟು ವಿಟಮಿನ್ ಡಿ ಇಲ್ಲದೇ ಇರುವ ಕಾರಣ ದೇಹ ಈ ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳಲು ಸಾಧ್ಯವಾಗದೇ ಹೋಗುವ ಕಾರಣ ಬಟಾಣಿ ಹಾಲು ಹಸುವಿನ ಹಾಲಿಗಿಂತಲೂ ಉತ್ತಮ ಎಂದು ಹೇಳಬಹುದು. (ಇದೇ ಕಾರಣಕ್ಕೆ ಹಸುವಿನ ಹಾಲಿಗೆ ಕೊಂಚ ಜೇನನ್ನು ಬೆರೆಸಿ ಕುಡಿಯಲು ನೀಡಲಾಗುತ್ತದೆ). ಅಲ್ಲದೇ ಈ ಹಾಲಿನಲ್ಲಿ ಕೊಬ್ಬು ಇಲ್ಲವೇ ಇಲ್ಲ. ಹಾಗಾಗಿ ಈ ಹಾಲು ಉಳಿದ ಹಾಲಿನಷ್ಟು ಸುಲಭವಾಗಿ ಬೆರೆಯದ ಕಾರಣ ಕೊಂಚ ಪ್ರಮಾಣದ ಸಸ್ಯಜನ್ಯ ಎಣ್ಣೆಯನ್ನು ಬೆರೆಸಿ ಕೆನೆಯಾಗುವಂತೆ ಮಾಡಲಾಗುತ್ತದೆ. ಅಲ್ಲದೇ ಈ ಹಾಲಿನಲ್ಲಿ ಸಂತೃಪ್ತ ಕೊಬ್ಬು ಅತ್ಯಲ್ಪ ಪ್ರಮಾಣದಲ್ಲಿರುವ ಕಾರಣ ಹೆಚ್ಚಿನ ಜನರಿಗೆ ಸೇವಿಸಲು ಯೋಗ್ಯವಾಗಿದೆ. ಅಲ್ಲದೇ ಇತರ ಸಿಹಿಕಾರಕಗಳನ್ನು ಸುಲಭವಾಗಿ ಬೆರೆಸಲು ಸಾಧ್ಯವಾಗುವ ಕಾರಣ ಹಲವಾರು ಸ್ವಾದಗಳಲ್ಲಿ ಈ ಹಾಲು ಲಭ್ಯವಾಗಲಿದೆ. (ಹೆಚ್ಚಿನ ಸಿಹಿಯ, ಸಿಹಿಯೇ ಇಲ್ಲದ, ವನಿಲ್ಲಾ, ಚಾಕಲೇಟು ಮೊದಲಾದ ಸ್ವಾದಗಳಲ್ಲಿ ಲಭಿಸಲಿದೆ) ಅಲ್ಲದೇ ಈ ಹಾಲಿನಲ್ಲಿ ಮೊಟ್ಟೆ, ಗ್ಲುಟೆನ್, ಪ್ರಾಣಿಜನ್ಯ ವಸ್ತುಗಳು ಅಥವಾ ಸೋಯಾ ಮೊದಲಾದ ಯಾವುದೇ ಅಂಶಗಳಿಲ್ಲದಿರುವ ಕಾರಣ ಅಪ್ಪಟ ಸಸ್ಯಾಹಾರಿ ಎಂದೂ ಹೇಳಬಹುದು.

Most Read: ಏಳರಿಂದ ಎಂಟು ಗಂಟೆಗಳ ಕಾಲ ನಿದ್ರೆ, ಆರೋಗ್ಯಕ್ಕೆ ಬಹಳ ಒಳ್ಳೆಯದು

ಬಟಾಣಿ ಹಾಲನ್ನು ಹೇಗೆ ತಯಾರಿಸಲಾಗುತ್ತದೆ?

ಬಟಾಣಿ ಹಾಲನ್ನು ಹೇಗೆ ತಯಾರಿಸಲಾಗುತ್ತದೆ?

ಈ ಹಾಲನ್ನು ತಯಾರಿಸಲು ಬಾದಾಮಿ ಹಾಲನ್ನು ತಯಾರಿಸುವುದಕ್ಕಿಂತ ಭಿನ್ನವಾದ ವಿಧಾನವನ್ನು ಬಳಸಲಾಗುತ್ತದೆ. ಬಟಾಣಿಗಳನ್ನು ನೀರಿನಲ್ಲಿ ಹೆಚ್ಚು ಕಾಲ ನೆನೆಸಿಟ್ಟು ನೀರನ್ನು ಹೀರಿಕೊಳ್ಳುವಂತೆ ಮಾಡಲಾಗುತ್ತದೆ. ಬಳಿಕ ಇದನ್ನು ನುಣ್ಣಗೆ ಪುಡಿಮಾಡಿ ಹಿಟ್ಟಿನಂತಾಗಿಸಿ ಈ ಹಿಟ್ಟನ್ನು ಸಂಸ್ಕರಿಸಿ, ಹಿಂಡಿ ಹಾಲನ್ನು ಪ್ರತ್ಯೇಕಿಸಲಾಗುತ್ತದೆ. ಉಳಿದ ಹಿಂಡಿಯಿಂದ ಬಟಾಣಿಯ ಪ್ರೋಟೀನ್ ಅನ್ನು ಪ್ರತ್ಯೇಕಿಸಿ ಉಳಿದ ನಾರು ಮತ್ತು ಪಿಷ್ಟವನ್ನು ಉಪ ಉತ್ಪನ್ನಗಳ ರೂಪದಲ್ಲಿ ಬಳಸಲಾಗುತ್ತದೆ. ಈ ಪ್ರೋಟೀನುಗಳನ್ನು ಇನ್ನಷ್ಟು ಶುದ್ದೀಕರಿಸಿ ಇನ್ನಷ್ಟು ನೀರು ಮತ್ತು ಇತರ ಅಗತ್ಯ ಸಾಮಾಗ್ರಿಗಳನ್ನು ಬೆರೆಸಲಾಗುತ್ತದೆ. ಇವುಗಳಲ್ಲಿ ಪ್ರಮುಖವಾಗಿ ಸೂರ್ಯಕಾಂತಿ ಎಣ್ಣೆ, ಸಮುದ್ರದ ಉಪ್ಪು ಮತ್ತು ವಿಟಮಿನ್ ಬಿ12 ಸಹಿತ ಇತರ ಪೋಷಕಾಂಶಗಳನ್ನು ಸೇರಿಸಲಾಗುತ್ತದೆ.

ಭಾರತದಲ್ಲಿ ಈ ಹಾಲು ಇನ್ನೂ ಲಭ್ಯವಿಲ್ಲದೇ ಹೋದರೂ ಕೆಲವು ದೇಶಗಳಲ್ಲಿ plant protein milk ಎಂಬ ಹೆಸರಿನಲ್ಲಿ ಈಗಾಗಲೇ ಬಳಕೆಯಲ್ಲಿದೆ. ಸಸ್ಯಜನ್ಯ ಎಂಬ ಹಣೆಪಟ್ಟಿ ಹೊತ್ತ ಕಾರಣ ಹಾಗೂ ತೂಕ ಏರಿಸದೇ ಹಾಲಿನ ಪ್ರಯೋಜನಗಳನ್ನು ಒದಗಿಸುವ ಈ ಹಾಲು ಶೀಘ್ರಸಮಯದಲ್ಲಿ ಹೆಚ್ಚಿನ ಜನಪ್ರಿಯತೆ ಪಡೆದಿದೆ.

ಬಟಾಣಿ ಹಾಲಿನ ಸೇವನೆಯ ಪ್ರಯೋಜನಗಳೇನು?

ಬಟಾಣಿ ಹಾಲಿನ ಸೇವನೆಯ ಪ್ರಯೋಜನಗಳೇನು?

ಸಾಮಾನ್ಯ ಹಾಲಿನ ಬದಲು ಬಟಾಣಿ ಹಾಲನ್ನು ಸೇವಿಸಲು ಈ ಕಾರಣಗಳನ್ನು ಒದಗಿಸಬಹುದು:

ಸಸ್ಯಜನ್ಯ ಪ್ರೋಟೀನ್ ನ ಅತ್ಯುತ್ತಮ ಆಗರ

ಸಾಮಾನ್ಯವಾಗಿ ಪ್ರೋಟೀನ್ ಹೆಚ್ಚಿನ ಸಾಂದ್ರತೆಯಲ್ಲಿ ಕೇವಲ ಮಾಂಸಾಹಾರದಲ್ಲಿ ಮಾತ್ರ ಲಭ್ಯವಿದ್ದು ಸಸ್ಯಜನ್ಯ ಪ್ರೋಟೀನ್ ಗಳು ಕಡಿಮೆ ಪ್ರಮಾಣದಲ್ಲಿ ಲಭಿಸುತ್ತವೆ. ಈ ನಿಟ್ಟಿನಲ್ಲಿ ಸಸ್ಯಜನ್ಯ ಪ್ರೋಟೀನ್ ಹೆಚ್ಚಿನ ಪ್ರಮಾಣದಲ್ಲಿರುವ ಬಟಾಣಿ ಹಾಲು ಅತ್ಯುತ್ತಮ ಆಗರವಾಗಿದೆ. ಈ ಹಾಲಿನಲ್ಲಿ ಹೆಚ್ಚೂ ಕಡಿಮೆ ಹಸುವಿನ ಹಾಲಿನಲ್ಲಿರುವಷ್ಟೇ ಪ್ರಮಾಣದ ಪ್ರೋಟೀನ್ ಇವೆ. ನಿಯಮಿತವಾಗಿ ಈ ಹಾಲನ್ನು ಕುಡಿಯುತ್ತ ಹೋಗುವ ಮೂಲಕ ದೇಹದ ಪ್ರೋಟೀನ್ ಅಗತ್ಯತೆಯನ್ನು ಹಸುವಿನ ಹಾಲಿನ ಸೇವನೆಯ ಹೊರತಾಗಿಯೂ ಪೂರೈಸಿಕೊಳ್ಳಬಹುದು. ಅಲ್ಲದೇ ಈ ಪ್ರೋಟೀನ್ ಜೀರ್ಣಗೊಳ್ಳಲು ಹೆಚ್ಚಿನ ಸಮಯ ತೆಗೆದುಕೊಳ್ಳುವ ಕಾರಣ ಎರಡು ಹೊತ್ತುಗಳ ಊಟದ ನಡುವಣ ಸಮಯದಲ್ಲಿ ಅನಗತ್ಯ ಆಹಾರ ಸೇವಿಸದಿರಲು ಸಾಧ್ಯವಾಗುತ್ತದೆ ಹಾಗೂ ತೂಕ ಏರಿಕೆಯನ್ನು ತಡೆಯಲು ಸಾಧ್ಯವಾಗುತ್ತದೆ. ತೂಕ ಇಳಿಸುವ ಪ್ರಯತ್ನದಲ್ಲಿರುವ ವ್ಯಕ್ತಿಗಳಿಗೂ ಈ ಪ್ರೋಟೀನ್ ಅತ್ಯುತ್ತಮವಾಗಿದೆ.

Most Read: ಲೋಹದ ತಟ್ಟೆಗಳಿಂದ ಆಹಾರ ಸೇವಿಸಿದರೆ ಸಿಗುವ ಆರೋಗ್ಯಕಾರಿ ಲಾಭಗಳು

 ಉತ್ತಮ ಪೋಷಕಾಂಶಗಳ ಆಗರವೂ ಆಗಿದೆ

ಉತ್ತಮ ಪೋಷಕಾಂಶಗಳ ಆಗರವೂ ಆಗಿದೆ

ಇದರಲ್ಲಿ ಅತಿ ಕಡಿಮೆ ಕ್ಯಾಲೋರಿಗಳಿವೆ ಹಾಗೂ ಕಬ್ಬಿಣ, ಕ್ಯಾಲ್ಸಿಯಂ, ಒಮೆಗಾ ೩ ಕೊಬ್ಬಿನ ಆಮ್ಲ, ಪೊಟ್ಯಾಶಿಯಂ ಮೊದಲಾದ ಪೋಷಕಾಂಶಗಳು ಉತ್ತಮ ಪ್ರಮಾಣದಲ್ಲಿವೆ.

ಅಲರ್ಜಿನಿವಾರಕ (Hypoallergenic)

ಅಲರ್ಜಿನಿವಾರಕ (Hypoallergenic)

ಅತ್ಯುತ್ತಮವಾದ ಡೈರಿ ಹಾಲಿನ ಪರ್ಯಾಯ:

ಈ ಹಾಲಿನಲ್ಲಿ ಸೋಯಾ, ಗ್ಲುಟೆನ್ ಅಥವಾ ಇತರ ಕಾಳುಗಳಿಲ್ಲದೇ ಇರುವ ಕಾರಣ ಹಾಲಿಗೆ ಅಲರ್ಜಿ ಹೊಂದಿರುವ ವ್ಯಕ್ತಿಗಳಿಗೆ ಅತ್ಯುತ್ತಮವಾದ ಪರ್ಯಾಯ ಆಹಾರವಾಗಿದೆ.

ಕ್ಯಾಲೋರಿಗಳು ಕಡಿಮೆ ಇವೆ

ಕ್ಯಾಲೋರಿಗಳು ಕಡಿಮೆ ಇವೆ

ಬಟಾಣಿ ಹಾಲಿನಲ್ಲಿ ಹಸುವಿನ ಹಾಲಿಗಿಂತಲೂ ಕಡಿಮೆ ಪ್ರಮಾಣದ ಕ್ಯಾಲೋರಿಗಳಿವೆ. ಸಿಹಿರಹಿತ ಒಂದು ಕಪ್ ಬಟಾಣಿ ಹಾಲಿನಲ್ಲಿ ಕೇವಲ ಎಪ್ಪತ್ತು ಕ್ಯಾಲೋರಿಗಳಿವೆ. ಇದೇ ಪ್ರಮಾಣದ ಹಾಲಿನ ಪುಡಿಯಿಂದ ತಯಾರಿಸಿದ ಹಾಲಿನಲ್ಲಿ ಎಂಭತ್ತೇಳು ಕ್ಯಾಲೋರಿಗಳಿರುತ್ತವೆ.

 ಸಿಹಿರಹಿತ ಹಾಲಿನಲ್ಲಿ ಸಕ್ಕರೆ ಮತ್ತು ಕಾರ್ಬೋಹೈಡ್ರೇಟುಗಳು ಕಡಿಮೆ ಇರುತ್ತವೆ

ಸಿಹಿರಹಿತ ಹಾಲಿನಲ್ಲಿ ಸಕ್ಕರೆ ಮತ್ತು ಕಾರ್ಬೋಹೈಡ್ರೇಟುಗಳು ಕಡಿಮೆ ಇರುತ್ತವೆ

ತೂಕ ಇಳಿಸುವ ನಿಟ್ಟಿನಲ್ಲಿರುವ ವ್ಯಕ್ತಿಗಳಿಗೆ ಸೂಕ್ತವಾದ ಆಹಾರದಲ್ಲಿ ಅತಿ ಕಡಿಮೆ ಕಾರ್ಬೋಹೈಡ್ರೇಟುಗಳಿರಬೇಕು. ಒಂದು ಕಪ್ ಸಿಹಿರಹಿತ ಬಟಾಣಿ ಹಾಲಿನಲ್ಲಿ ಶೂನ್ಯ ಪ್ರಮಾಣದ ಸಕ್ಕರೆ ಮತ್ತು ಕಾರ್ಬೋಹೈಡ್ರೇಟುಗಳಿವೆ. ಅಂದರೆ ತೂಕ ಇಳಿಸುವ ವ್ಯಕ್ತಿಗಳಿಗೆ ಮತ್ತು ಮಧುಮೇಹಿಗಳಿಗೆ ಈ ಹಾಲು ಹೇಳಿ ಮಾಡಿಸಿದಂತಹ ಆಹಾರವಾಗಿದೆ.

ಪರ್ಯಾವರಣಸ್ನೇಹಿಯೂ ಹೌದು

ಪರ್ಯಾವರಣಸ್ನೇಹಿಯೂ ಹೌದು

ಬಾದಾಮಿ ಹಾಲೇ ಆಗಲಿ, ಹಸುವಿನ ಹಾಲೇ ಆಗಲಿ, ಪಡೆಯುವಾಗ ವಾತಾವರಣಕ್ಕೆ ಹೆಚ್ಚಿನ ಹಾನಿಯುಂಟಾಗುತ್ತದೆ. ಹಸುವಿನ ಸಗಣಿಯಿಂದ ಹೊಮ್ಮುವ ಮೀಥೇನ್ ವಾತಾವರಣಕ್ಕೆ ಮಾರಕವಾಗಿದೆ. ಬಾದಾಮಿ ಹಾಲನ್ನು ಪಡೆಯುವಾಗ ಹೆಚ್ಚಿನ ಶಕ್ತಿ ಮತ್ತು ನೀರನ್ನು ಬಳಸಬೇಕಾಗುತ್ತದೆ. ಬಟಾಣಿ ಹಾಲನ್ನು ಉತ್ಪಾದಿಸುವಾಗ ಬಾದಾಮಿ ಹಾಲನ್ನು ತಯಾರಿಸುವ ವೇಳೆ ಎದುರಾಗುವುದಕ್ಕಿಂತಲೂ ಎಂಭತ್ತಾರು ಶೇಖಡಾ ಕಡಿಮೆ ಪ್ರಮಾಣದ ಪರಿಣಾಮವುಂಟಾಗುತ್ತದೆ. ಇವೆಲ್ಲವನ್ನೂ ಪರಿಗಣಿಸಿದಾಗ ಬಟಾಣಿ ಹಾಲು ಅತ್ಯಂತ ಪರಿಸರಸ್ನೇಹಿಯಾಗಿದೆ.

ಬಟಾಣಿ ಹಾಲು ಡೈರಿ ಉತ್ಪನ್ನಕ್ಕೆ ಸೂಕ್ತ ಪರ್ಯಾಯವಾಗಬಲ್ಲುದೇ?

ಬಟಾಣಿ ಹಾಲು ಡೈರಿ ಉತ್ಪನ್ನಕ್ಕೆ ಸೂಕ್ತ ಪರ್ಯಾಯವಾಗಬಲ್ಲುದೇ?

ಬಾದಾಮಿ ಹಾಲಿಗಿಂತಲೂ ಬಟಾಣಿ ಹಾಲು ಎಲ್ಲಾ ವಿಧದಲ್ಲಿಯೂ ಉತ್ತಮ ಎಂದು ಖಚಿತವಾಗಿ ಹೇಳಬಹುದು. ವಿಶೇಷವಾಗಿ ಹಸುವಿನ ಹಾಲು ಅಲರ್ಜಿಕಾರಕವಾಗಿರುವ ವ್ಯಕ್ತಿಗಳಿಗೆ ಈ ಹಾಲು ಸೂಕ್ತವಾಗಿದೆ. ಅಲ್ಲದೇ ಸಸ್ಯಾಹಾರವನ್ನೇ ಬಯಸುವ ವ್ಯಕ್ತಿಗಳಿಗೂ ಈ ಹಾಲು ಅತ್ಯುತ್ತಮ ಪರ್ಯಾಯವಾಗಿದೆ. ಸಾಮಾನ್ಯವಾಗಿ ಹಾಲಿನ ರುಚಿಯನ್ನು ಇಷ್ಟಪಡದ ಮಕ್ಕಳಿಗೆ ಈ ಹಾಲಿನ ರುಚಿ ಇಷ್ಟವಾಗುವುದರಿಂದ ಹಾಲು ಕುಡಿಸಲು ಕಷ್ಟಪಡುವ ತಾಯಂದಿರಿಗೂ ವರದಾನವಾಗಲಿದೆ. ಅಲ್ಲದೇ ಪರಿಸರಸ್ನೇಹಿಯೂ ಆಗಿರುವ ಕಾರಣ ವಾತಾವರಣವನ್ನು ಉಳಿಸಿದ ನೆಮ್ಮದಿಯೂ ದೊರಕುತ್ತದೆ. ಬಾದಾಮಿ ಹಾಲಿಗಿಂತಲೂ ಎಂಟು ಪಟ್ಟು ಹೆಚ್ಚು ಪ್ರೋಟೀನ್ ಇರುವ ಈ ಹಾಲು ಮಕ್ಕಳ ಬೆಳವಣಿಗೆಗೆ ನೆರವಾಗುತ್ತದೆ. ಈ ಹಾಲಿನಲ್ಲಿಯೇ ವಿಟಮಿನ್ ಡಿ ಇರುವುದರಿಂದ ಈ ಕೊರತೆ ಇರುವ ಹಸುವಿನ ಹಾಲನ್ನು ಸೇವಿಸುವುದಕ್ಕಿಂತಲೂ ಈ ಹಾಲಿನ ಸೇವನೆ ವಿಶೇಷವಾಗಿ ಮಹಿಳೆಯರಿಗೆ ಉತ್ತಮವಾಗಿದೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿದಾಗ ಬಟಾಣಿ ಹಾಲು ಹಸುವಿನ ಹಾಲಿಗೆ ಅತ್ಯುತ್ತಮ ಪರ್ಯಾಯ ಎಂದು ಖಚಿತವಾಗಿ ಹೇಳಬಹುದು.

English summary

Heard about Pea Milk? Should You Try It?

The all new non-dairy milk, pea milk has received a lot of applause from many considering its protein and calcium content and how well it has been compared to being effectively serving the functions that cow milk would provide. Read on to know the nutritional value that pea milk has to offer and if it can serve to be a perfect dairy alternative.
X
Desktop Bottom Promotion