ಬಿಸಿಲಿನ ಝಳಕ್ಕೆ, ತಂಪುಣಿಸುವ ಕಲ್ಲಂಗಡಿ ಹಣ್ಣನ್ನು ಎಷ್ಟು ಹೊಗಳಿದರೂ ಸಾಲದು!

Posted By: Deepu
Subscribe to Boldsky

ಬೇಸಿಗೆಯಲ್ಲಿ ತಿನ್ನಲು ಅತ್ಯುತ್ತಮವಾದ ಹಣ್ಣು ಎಂದರೆ ಕಲ್ಲಂಗಡಿ. ಇದಕ್ಕೆ ಪ್ರಮುಖ ಕಾರಣ ಇದರಲ್ಲಿರುವ ನೀರಿನ ಪ್ರಮಾಣ. ಹೌದು, ಕಲ್ಲಂಗಡಿಯಲ್ಲಿರುವಷ್ಟು ನೀರಿನ ಪ್ರಮಾಣ ಬೇರಾವ ಹಣ್ಣಿನಲ್ಲೂ ಇಲ್ಲ. ಇದೇ ಕಾರಣಕ್ಕೆ ಇದಕ್ಕೆ water ಎಂಬ ವಿಶೇಷಣ ಸೇರಿಸಿಯೇ watermelon ಎಂದಾಗಿದೆ. ಬರೆಯ ನೀರು ಮಾತ್ರವಲ್ಲ, ಬೇಸಿಗೆಯಲ್ಲಿ ಬಳಲಿದ ದೇಹಕ್ಕೆ ಇದರಲ್ಲಿ ಇನ್ನೂ ಹಲವಾರು ಪೋಷಕಾಂಶಗಳಿದ್ದು ಇಲ್ಲದ ಕೊಬ್ಬು ಮತ್ತು ಕಡಿಮೆ ಇರುವ ಸಕ್ಕರೆ ತೂಕ ಕಡಿಮೆಯಾಗಲೂ ನೆರವಾಗುತ್ತದೆ. ಇದರ ಸೇವನೆ ಮೆದುಳಿಗೂ ಆಹ್ಲಾದತೆ ನೀಡುವ ಮೂಲಕ ಇತರ ಯಾವುದೇ ಹಣ್ಣುಗಳನ್ನು ಸೇವಿಸುವುದಕ್ಕಿಂತ ಹತ್ತು ಪಟ್ಟು ಹೆಚ್ಚಿನ ಸಂತೋಷ ದೊರಕುತ್ತದೆ. 

ಅದರಲ್ಲೂ ಕಲ್ಲಂಗಡಿ ಜ್ಯೂಸ್ ಬೇಸಿಗೆಗೆ ದೇವರು ಕೊಟ್ಟಿರುವ ವರ ಎಂದರೆ ತಪ್ಪಾಗಲಾರದು. ಯಾಕೆಂದರೆ ಕಲ್ಲಂಗಡಿಯಲ್ಲಿ ಇತರ ಹಣ್ಣುಗಳಿಗಿಂತ ಹೆಚ್ಚಿನ ನೀರಿನಾಂಶವಿದೆ. ಇಷ್ಟು ಮಾತ್ರವಲ್ಲದೆ ಬೆಟಾ ಕ್ಯಾರೋಟಿನ್, ವಿಟಮಿನ್ ಎ, ಬಿ1, ಬಿ6, ಸಿ, ಪೊಟಾಶಿಯಂ, ಮೆಗ್ನಿಶಿಯಂ, ಬಿಯೊಟಿನ್ ಇತ್ಯಾದಿಗಳಿವೆ. ಕಲ್ಲಂಗಡಿಯಲ್ಲಿ ಸುಮಾರು 92 ಶೇ. ನೀರಿನಾಂಶವಿರುವ ಕಾರಣದಿಂದಾಗಿ ಇದು ಬೇಸಿಗೆ ಹೇಳಿ ಮಾಡಿಸಿದ ಹಣ್ಣಾಗಿದೆ. ಉರಿ ಬಿಸಿಲಿನಿಂದ ದೂರ ಉಳಿಯಲು ಕಲ್ಲಂಗಡಿ ಹಣ್ಣನ್ನು ಹಾಗೆ ತಿನ್ನಬಹುದು ಅಥವಾ ಜ್ಯೂಸ್, ಸಲಾಡ್ ಮಾಡಿಕೊಂಡು ತಿನ್ನಬಹುದು. ಇದರಿಂದ ದೇಹವು ನಿರ್ಜಲೀಕರಣದಿಂದ ಬಳಲುವುದು ತಪ್ಪುತ್ತದೆ....   

ಕಾಳುಮೆಣಸಿನ ಪುಡಿಯನ್ನು ಉದುರಿಸಿ ಸೇವಿಸಿ

ಕಾಳುಮೆಣಸಿನ ಪುಡಿಯನ್ನು ಉದುರಿಸಿ ಸೇವಿಸಿ

ಕಲ್ಲಂಗಡಿ ಹಣ್ಣಿಗೆ ಕೊಂಚವೇ ಕಾಳುಮೆಣಸಿನ ಪುಡಿಯನ್ನು ಉದುರಿಸಿ ತಿಂದರೆ ಇದರ ರುಚಿ ಇನ್ನಷ್ಟು ಹೆಚ್ಚಾಗುತ್ತದೆ ಹಾಗೂ ತೂಕ ಇಳಿಸುವ ವೇಗದಲ್ಲಿ ತೀವ್ರತೆಯನ್ನೂ ಪಡೆಯಬಹುದು. ಇದು ಹೇಗೆಂದರೆ ಕಾಳುಮೆಣಸಿನ ಪುಡಿ ಜೀರ್ಣರಸಗಳನ್ನು ಇನ್ನಷ್ಟು ಪ್ರಚೋದಿಸಿ ಹೆಚ್ಚಿನ ಕೊಬ್ಬನ್ನು ಬಳಸಿಕೊಳ್ಳುವಂತೆ ಮಾಡುತ್ತದೆ. ವಿಶೇಷವಾಗಿ ಸಂಜೆ ಮತ್ತು ರಾತ್ರಿ ಊಟದ ಬಳಿಕ ಸೇವಿಸುವ ಕಲ್ಲಂಗಡಿ-ಕಾಳುಮೆಣಸಿನ ಪುಡಿಯ ಜೋಡಿ ಹೆಚ್ಚಿನ ತೂಕವನ್ನು ಇಳಿಸಲು ತಕ್ಕುದಾಗಿದೆ.

ನೀರಿನ ಕೊರತೆಯನ್ನು ನೀಗಿಸುತ್ತದೆ

ನೀರಿನ ಕೊರತೆಯನ್ನು ನೀಗಿಸುತ್ತದೆ

ಮೊದಲೇ ವಿವರಿಸಿದಂತೆ ಈ ಹಣ್ಣಿನಲ್ಲಿ ಅಪಾರವಾದ ನೀರಿದೆ. ಎಷ್ಟು ಎಂದರೆ ಶೇಖಡಾ ತೊಂಭತ್ತರಷ್ಟು. ನೀರನ್ನೇ ಕುಡಿದರಾಯ್ತಲ್ಲಾ, ಕಲ್ಲಂಗಡಿ ಏಕೆ ತಿನ್ನಬೇಕು ಎಂಬ ಕುಹಕಪ್ರಶ್ನೆಗೆ ಹೀಗೆ ಉತ್ತರ ನೀಡಬಹುದು. ನೀರನ್ನು ಹಾಗೇ ಕುಡಿದರೆ ಇದು ಆರೋಗ್ಯಕ್ಕೆ ಉತ್ತಮ ಸರ್ವಥಾ ಹೌದು. ಆದರೆ ಈ ಪ್ರಮಾಣ ಕೆಲವೇ ನಿಮಿಷಗಳಲ್ಲಿ ಹೀರಲ್ಪಟ್ಟು ಮತ್ತೆ ಬೇಗನೇ ಬಾಯಾರಿಕೆಯಾಗುತ್ತದೆ. ಇದೇ ಕಾರಣಕ್ಕೆ ಹಿಂದಿನವರು ಬರೆಯ ನೀರನ್ನು ಕುಡಿಯದೇ ಒಂದು ತುಂಡು ಬೆಲ್ಲದ ಜೊತೆಗೇ ಸೇವಿಸುತ್ತಿದ್ದರು. ಕಲ್ಲಂಗಡಿ ತಿನ್ನುವುದರಿಂದಲೂ ಇದೇ ರೀತಿಯ ಪ್ರಯೋಜನವಿದೆ.

ಊಟದ ಸಾಲಾಡ್‌ಗಾಗಿ

ಊಟದ ಸಾಲಾಡ್‌ಗಾಗಿ

ಉತ್ತಮ ಆಯ್ಕೆಯಾಗಿದೆ ಊಟದ ಜೊತೆ ಹಸಿಯಾಗಿ ಸೇವಿಸಬಹುದಾದ ಸೌತೆ, ಈರುಳ್ಳಿ, ಮೂಲಂಗಿ, ಕ್ಯಾರೆಟ್, ಕೋಸು ಮೊದಲಾದ ತರಕಾರಿಗಳ ಜೊತೆಗೇ ಕಲ್ಲಂಗಡಿಯನ್ನೂ ಸೇರಿಸಿಕೊಳ್ಳಬಹುದು. ಇದರ ಸಿಹಿ ಊಟದ ಸವಿಯನ್ನು ಹೆಚ್ಚಿಸುವ ಜೊತೆಗೇ ಜೀವರಾಸಾಯನಿಕ ಕ್ರಿಯೆಯನ್ನು ಹೆಚ್ಚಿಸಲೂ ನೆರವಾಗುತ್ತದೆ. ಪರಿಣಾಮವಾಗಿ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ.

ಅನಗತ್ಯ ಕ್ಯಾಲೋರಿಗಳಿಂದ ರಕ್ಷಿಸುತ್ತದೆ

ಅನಗತ್ಯ ಕ್ಯಾಲೋರಿಗಳಿಂದ ರಕ್ಷಿಸುತ್ತದೆ

ಅತಿಹೆಚ್ಚಿನ ನೀರಿನ ಪರಿಣಾಮವಾಗಿ ಒಟ್ಟು ಪ್ರಮಾಣದ ಕಲ್ಲಂಗಡಿಯಲ್ಲಿ ಕಡಿಮೆ ಕ್ಯಾಲೋರಿಗಳೀವೆ. ಅಂದರೆ ಪ್ರತಿ ಬಾರಿ ಸಾಮಾನ್ಯವಾಗಿ ತಿನ್ನುವ ಪ್ರಮಾಣದಲ್ಲಿ ಕೇವಲ 28 ಕ್ಯಾಲೋರಿಗಳಿವೆ. ಇದೇ ಪ್ರಮಾಣದ ಮಾಂಸದ ಅಥವಾ ಮಸಾಲೆಯಾಧಾರಿತ ಆಹಾರವನ್ನು ಸೇವಿಸಿದರೆ ನಮಗೆ ಸಿಗುವ ಕ್ಯಾಲೋರಿಗಳ ಪ್ರಮಾಣ ಸುಮಾರು 250-400ರ ನಡುವೆ ಇರುತ್ತದೆ.

ಆರೋಗ್ಯದ ಗಣಿ

ಆರೋಗ್ಯದ ಗಣಿ

ತೂಕ ಇಳಿಸಲು ನೆರವಾಗುವ ಜೊತೆಗೇ ಕಲ್ಲಂಗಡಿಯನ್ನು ನಿಯಮಿತವಾಗಿ ಸೇವಿಸುವ ಮೂಲಕ ಅಧಿಕ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸಲೂ ಸಾಧ್ಯವಿದೆ. ಅಲ್ಲದೇ ಮೂತ್ರಪಿಂಡಗಳಲ್ಲಿ ಕಲ್ಲುಗಳಾಗದಂತೆ ತಡೆಯುತ್ತದೆ ಹಾಗೂ ಜೀರ್ಣಕ್ರಿಯೆಯಲ್ಲಿ ಸಹಕರಿಸಿ ಉತ್ತಮ ಸ್ಥಿತಿಯಲ್ಲಿರಲು ನೆರವಾಗುತ್ತದೆ. ಅಷ್ಟೇ ಅಲ್ಲ. ಇದರ ಕೆಂಪು ಬಣ್ಣಕ್ಕೆ ಕಾರಣವಾದ ಲೈಕೋಪೀನ್ ಎಂಬ ಪೋಷಕಾಂಶ ಹೃದಯಕ್ಕೂ ಉತ್ತಮವಾಗಿದ್ದು ಹೃದಯ ಸಂಬಂಧಿ ತೊಂದರೆ ಮತ್ತು ಆಘಾತಗಳಿಂದ ರಕ್ಷಿಸುತ್ತದೆ.

ದೇಹದ ಕಲ್ಮಶ ಹೊರಹಾಕುವುದು

ದೇಹದ ಕಲ್ಮಶ ಹೊರಹಾಕುವುದು

ಬೇಸಿಗೆ ಕಾಲದಲ್ಲಿ ಹೆಚ್ಚಿನ ಬೆವರು ಹೊರಹೋಗಿ ನೀರಿನಾಂಶವು ಕಡಿಮೆಯಾಗುವುದು. ಆದರೆ ಈ ವೇಳೆ ವಿಷವು ಸರಿಯಾಗಿ ಹೊರಹೋಗುವುದಿಲ್ಲ. ಹಲವಾರು ಪೋಷಕಾಂಶಗಳಿಂದ ಕೂಡಿರುವಂತಹ ಕಲ್ಲಂಗಡಿ ಹಣ್ಣು ನೈಸರ್ಗಿಕವಾಗಿ ದೇಹದ ಕಲ್ಮಶ ಹೊರಹಾಕಿ ಎಲ್ಲಾ ಅಂಗಾಂಗಗಳು ಸರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡುವುದು.

ಕಾಂತಿಯುತ ಚರ್ಮಕ್ಕಾಗಿ

ಕಾಂತಿಯುತ ಚರ್ಮಕ್ಕಾಗಿ

ವಿಟಮಿನ್ ಎ ಹಾಗೂ ಸಿಯ ಕೊರತೆಯಿಂದ ನಿಮ್ಮ ಚರ್ಮವು ತುಂಬಾ ಒಣ ಹಾಗೂ ಚರ್ಮ ಎದ್ದುಬಂದಂತೆ ಕಾಣಬಹುದು. ಇದನ್ನು ನೈಸರ್ಗಿಕವಾಗಿ ನಿವಾರಣೆ ಮಾಡಬೇಕಾದರೆ ನಿಮ್ಮ ಆಹಾರ ಕ್ರಮದಲ್ಲಿ ಕಲ್ಲಂಗಡಿ ಹಣ್ಣನ್ನು ಸೇರಿಸಿಕೊಳ್ಳಿ. ಕಲ್ಲಂಗಡಿ ಹಣ್ಣಿನಲ್ಲಿ ವಿಟಮಿನ್ ಎ ಮತ್ತು ಸಿ ಸಮೃದ್ಧವಾಗಿದೆ. ಬೆಟಾ ಕ್ಯಾರೋಟಿನ್ ಮತ್ತು ಲೈಕೊಪೆನ್ ಸೂರ್ಯನಿಂದ ಅಗುವಂತಹ ಸುಟ್ಟ ಕಲೆಗಳನ್ನು ನಿವಾರಣೆ ಮಾಡುವುದು.

 ಜೀರ್ಣಕ್ರಿಯೆ ಸುಧಾರಣೆ

ಜೀರ್ಣಕ್ರಿಯೆ ಸುಧಾರಣೆ

ಬೇಸಿಗೆಯಲ್ಲಿ ಅತಿಯಾದ ಸೆಕೆಯಿಂದ ಹಸಿವು ಕೂಡ ಸರಿಯಾಗಿ ಆಗುವುದಿಲ್ಲ. ಕಲ್ಲಂಗಡಿ ಹಣ್ಣಿನಲ್ಲಿ ಹೆಚ್ಚಿನ ನೀರು ಮತ್ತು ನಾರಿನಾಂಶವು ಇರುವ ಕಾರಣದಿಂದ ಜೀರ್ಣಕ್ರಿಯೆಯು ಸರಾಗವಾಗಿ ಆಗುವುದು. ಇದು ಕಲ್ಲಂಗಡಿಯ ಮತ್ತೊಂದು ಆರೋಗ್ಯ ಲಾಭವಾಗಿದೆ.

ರಕ್ತದೊತ್ತಡ ನಿಯಂತ್ರಿಸುವುದು

ರಕ್ತದೊತ್ತಡ ನಿಯಂತ್ರಿಸುವುದು

ಕಲ್ಲಂಗಡಿಯು ರಕ್ತದೊತ್ತಡವನ್ನು ನಿವಾರಿಸುವಲ್ಲಿ ತುಂಬಾ ಪ್ರಮುಖ ಪಾತ್ರ ವಹಿಸುತ್ತದೆ. ರಕ್ತನಾಳಗಳನ್ನು ಸರಿಯಾಗಿಟ್ಟುಕೊಂಡು ರಕ್ತಚಲನೆಯು ಸರಿಯಾಗಿ ಆಗುವಂತೆ ಮಾಡುವುದು. ಇದರಿಂದ ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣನ್ನು ಸೇವಿಸಿ.

ಕಲ್ಲಂಗಡಿಯನ್ನು ಆರಿಸುವ ಮುನ್ನ ಕೈಗೊಳ್ಳಬೇಕಾದ ಎಚ್ಚರಿಕೆಗಳು

ಕಲ್ಲಂಗಡಿಯನ್ನು ಆರಿಸುವ ಮುನ್ನ ಕೈಗೊಳ್ಳಬೇಕಾದ ಎಚ್ಚರಿಕೆಗಳು

* ಕಲ್ಲಂಗಡಿ ಭಾರವಾಗಿದ್ದಷ್ಟೂ ಉತ್ತಮ

* ಅಂಗಡಿಯವರು ನಿಮ್ಮೆದುರು ಕಲ್ಲಂಗಡಿಯನ್ನು ಕತ್ತರಿಸಿ ಒಂದು ಚೌಕಾಕಾರದ ತುಂಡನ್ನು

ತಿಂದು ನೋಡಿಯೇ ಖರೀದಿಸಲು ದುಂಬಾಲು ಬಿದ್ದರೆ ಒಮ್ಮೆಲೇ ಖರೀದಿಸಬೇಡಿ. ಏಕೆಂದರೆ ಈ ತುಂಡು ಅತಿ ಸಿಹಿಯಾಗಿರುತ್ತದೇನೋ ನಿಜ, ಆದರೆ ಮನೆಗೆ ಬಂದ ಮೇಲೆ ನೀವು ರುಚಿ ನೋಡಿದ ಕಲ್ಲಂಗಡಿಯೇ ಸಪ್ಪೆಯಾಗಿರುವುದನ್ನು ನೋಡಿ ಪೆಚ್ಚಾಗುತ್ತೀರಿ.

*ಏಕೆಂದರೆ ಇದನ್ನು ಕತ್ತರಿಸಲು ಉಪಯೋಗಿಸಿದ ಕತ್ತಿಗೆ ಅವರು ಜೇನು ಸವರಿ ಒಣಗಿಸಿ ಅದರಿಂದ ಕತ್ತರಿಸಿರುತ್ತಾರೆ.

*ಕತ್ತರಿಸಿದ ಭಾಗದಲ್ಲಿ ಕೊಂಚ ಜೇನು ಅಂಟಿಕೊಂಡು ಬಂದು ಸಿಹಿಯಾಗಿರಿಸುತ್ತದೆ.ಇದನ್ನು ಪರೀಕ್ಷಿಸಬೇಕೆಂದರೆ ನಿಮ್ಮ ಬಳಿ ಇರುವ ಕತ್ತಿಯನ್ನೇ ಕೊಟ್ಟು ಕತ್ತರಿಸಲು ಹೇಳಿ ಅವರ ಭಾವನೆಯನ್ನು ಗಮನಿಸಿ.

ಕಲ್ಲಂಗಡಿಯನ್ನು ಆರಿಸುವ ಮುನ್ನ ಕೈಗೊಳ್ಳಬೇಕಾದ ಎಚ್ಚರಿಕೆಗಳು

ಕಲ್ಲಂಗಡಿಯನ್ನು ಆರಿಸುವ ಮುನ್ನ ಕೈಗೊಳ್ಳಬೇಕಾದ ಎಚ್ಚರಿಕೆಗಳು

* ಹಣ ಹೆಚ್ಚಾಗುತ್ತದೆ ಎಂಬ ಭಯದಿಂದ ಚಿಕ್ಕದನ್ನು ಆರಿಸಬೇಡಿ. ಸಾಧ್ಯವಾದಷ್ಟು ದೊಡ್ಡದನ್ನೇ ಆರಿಸಿ. ಏಕೆಂದರೆ ದೊಡ್ಡದಾದಷ್ಟೂ ಸಿಹಿ ಹೆಚ್ಚು.

* ತೊಟ್ಟಿನ ಭಾಗದಲ್ಲಿ ಸೂಕ್ಷ್ಮವಾಗಿ ಗಮನಿಸಿ. ಇಲ್ಲಿ ಮರದ ಅಂಟಿನಂತೆ ಅತಿ ತೆಳ್ಳಗೆ ಸ್ರವಿಸಿ ಒಣಗಿದ್ದರೆ ಇದು ಅತ್ಯುತ್ತಮ ಎಂದು ಭಾವಿಸಬಹುದು. ಏಕೆಂದರೆ ಇದು ಒಳಗಣ ಸಕ್ಕರೆ ನೀರಾಗಿ ಹೊರಹರಿದು ಗಟ್ಟಿಯಾದ ಪರಿಯಾಗಿದೆ.

ಕಲ್ಲಂಗಡಿಯನ್ನು ಆರಿಸುವ ಮುನ್ನ ಕೈಗೊಳ್ಳಬೇಕಾದ ಎಚ್ಚರಿಕೆಗಳು

ಕಲ್ಲಂಗಡಿಯನ್ನು ಆರಿಸುವ ಮುನ್ನ ಕೈಗೊಳ್ಳಬೇಕಾದ ಎಚ್ಚರಿಕೆಗಳು

* ನೈಸರ್ಗಿಕವಾಗಿ ಬಿಸಿಲಿನಲ್ಲಿ ಬೆಳೆದ ಕಲ್ಲಂಗಡಿ ಹಣ್ಣಿನ ಒಂದು ಭಾಗ ನೆಲಕ್ಕೆ ತಾಗಿರುವ ಕಾರಣ ಇಲ್ಲಿ ನಸು ಹಸಿರು ಬಣ್ಣವಾಗಿದ್ದು ಇತರ ಕಡೆ ಗಾಢ ಬಣ್ಣ ಇರುತ್ತದೆ. ಈ ನಸುಹಸಿರು ಬಣ್ಣಕ್ಕೆ field spot ಎಂದು ಕರೆಯುತ್ತಾರೆ. ಹಣ್ಣನ್ನು ತಿರುಗಿಸಿ ನೋಡಿ ಈ ಭಾಗ ಇರುವುದನ್ನು ಖಚಿತಪಡಿಸಿಕೊಳ್ಳಿ. ಎಲ್ಲಾ ಕಡೆ ಒಂದೇ ಬಣ್ಣ ಇದ್ದರೆ ಇದು ಕೃತಕವಾಗಿ ಹಣ್ಣು ಮಾಡಿದ ಕಲ್ಲಂಗಡಿಯಾಗಿರಬಹುದು.

* ಅತಿಹೆಚ್ಚು ಸಿಹಿ ಇದ್ದರೂ ಅನುಮಾನ ಪಡಬೇಕು. ಏಕೆಂದರೆ ಸಿಹಿ ಹೆಚ್ಚಿಸಲು ಖದೀಮ ವ್ಯಾಪಾರಿಗಳು ಇಂಜೆಕ್ಷನ್ ಮೂಲಕ ಅತಿ ಸಾಂದ್ರತೆಯ ಸಕ್ಕರೆಯನ್ನು ಸೇರಿಸಿರುತ್ತಾರೆ.

English summary

Healthy Reasons To Eat Watermelon during summer

Watermelon, a super summer fruit, should be on top of your list this season. Watermelon has a ton of health benefits, and one of them includes weight loss. watermelon is the perfect fruit to have that can aid in rapid and natural weight loss. Take a look at why we suggest this red juicy summer fruit to burn thy fat:
Story first published: Tuesday, February 27, 2018, 23:29 [IST]