ಚರ್ಮ ನಿವಾರಿಸಿದ ಕೋಳಿಯ ಮಾಂಸದ ಆರೋಗ್ಯಕರ ಪ್ರಯೋಜನಗಳು

Posted By: Arshad
Subscribe to Boldsky

ವಿಶ್ವದಲ್ಲಿ ಅತಿ ಹೆಚ್ಚಾಗಿ ಸೇವಿಸಲ್ಪಡುವ ಮಾಂಸಾಹಾರವೆಂದರೆ ಕೋಳಿಮಾಂಸ. ಭಾರತದಲ್ಲಿ ಕುರಿಮಾಂಸಕ್ಕೆ ಹೆಚ್ಚಿನ ಮನ್ನಣೆ ಇದ್ದರೂ ಅಗ್ಗವಾಗಿರುವ ಕಾರಣಕ್ಕೆ ಕುರಿಮಾಂಸಕ್ಕಿಂತ ಕೋಳಿಮಾಂಸವೇ ಹೆಚ್ಚಾಗಿ ಮಾರಾಟವಾಗುತ್ತದೆ. ಇಡಿಯ ಕೋಳಿಯ ವಿವಿಧ ಭಾಗಗಳಲ್ಲಿ ಎದೆಯ ಭಾಗ ಅತಿ ಹೆಚ್ಚು ಜನರು ಇಷ್ಟಪಡುವ ಭಾಗವಾಗಿದೆ. ಏಕೆಂದರೆ ಈ ಭಾಗದಲ್ಲಿ ಅತಿ ಹೆಚ್ಚು ಮಾಂಸ ಹಾಗೂ ಕಡಿಮೆ ಮೂಳೆ ಮತ್ತು ಚರ್ಮ ಇರುತ್ತದೆ. ಈ ಮಾಂಸದಲ್ಲಿ ಹೆಚ್ಚಿನ ಪ್ರೋಟೀನ್ ಇದ್ದು ತೂಕವನ್ನು ಸಮತೋಲನದಲ್ಲಿರಿಸಲು ಮುಖ್ಯವಾದ ಪಾತ್ರ ವಹಿಸುತ್ತದೆ.

ಒಂದು ಕೋಳಿಯ ಎದೆಯಭಾಗದ ಮಾಂಸದ ಅರ್ಧದಷ್ಟರಲ್ಲಿ 142 ಕ್ಯಾಲೋರಿಗಳಿದ್ದರೂ ಕೊಬ್ಬು ಮಾತ್ರ ಕೇವಲ ಮೂರು ಗ್ರಾಂ ಇದೆ. ಅಲ್ಲದೇ ಯಥೇಚ್ಛ ಪ್ರಮಾಣದಲ್ಲಿ ವಿಟಮಿನ್ ಇ, ವಿಟಮಿನ್ ಬಿ6, ಬಿ12 ಮೊದಲಾದ ಪೋಷಕಾಂಶಗಳಿವೆ. ಖನಿಜಗಳಾದ ಕಬ್ಬಿಣ, ಕ್ಯಾಲ್ಸಿಯಂ, ಸತು, ಪೊಟ್ಯಾಶಿಯಂಗಳೂ ಉತ್ತಮ ಪ್ರಮಾಣದಲ್ಲಿವೆ. ಈ ಭಾಗದ ಮಾಂಸವನ್ನು ಬೇಯಿಸಿ, ಹುರಿದು ಅಥವಾ ಬೆಂಕಿಯಲ್ಲಿ ನೇರವಾಗಿ ಬಾಡಿಸಿ ಸೇವಿಸಬಹುದು. ಬನ್ನಿ, ಈ ಭಾಗದ, ಚರ್ಮ ನಿವಾರಿಸಿದ ಮಾಂಸದ ಸೇವನೆಯಿಂದ ಯಾವ ಬಗೆಯ ಪ್ರಯೋಜನಗಳನ್ನು ಪಡೆಯಬಹುದು ಎಂಬುದನ್ನು ನೋಡೋಣ... 

ಅಧಿಕ ಪ್ರಮಾಣದ ಪ್ರೋಟೀನ್

ಅಧಿಕ ಪ್ರಮಾಣದ ಪ್ರೋಟೀನ್

ಎದೆಯ ಭಾಗದ ಮಾಂಸದಲ್ಲಿ ಹೆಚ್ಚಿನ ಪ್ರಮಾಣದ ಪ್ರೋಟೀನ್ ಇದೆ. ಪ್ರತಿ ನೂರು ಗ್ರಾಂ ಮಾಂಸದಲ್ಲಿ ಕನಿಶ್ಟ ಹದಿನೆಂಟು ಗ್ರಾಂ ಪ್ರೋಟೀನ್ ಇದೆ. ಸ್ನಾಯುಗಳ ಬೆಳವಣಿಗೆ ಹಾಗೂ ವ್ಯಾಯಾಮದ ಅಥವಾ ಪರಿಶ್ರಮದ ಸಮಯದಲ್ಲಿ ಎದುರಾಗುವ ಸ್ನಾಯುಗಳ ನಷ್ಟವನ್ನು ಸರಿಪಡಿಸಲೂ ಪ್ರೋಟೀನ್ ಅಗತ್ಯವಾಗಿದೆ. ನಮ್ಮ ದೇಹದ ತೂಕಕ್ಕನುಗುಣವಾಗಿ ಕ್ರೀಡಾಪಟುಗಳಿಗೆ ಪ್ರತಿ ಕೇಜಿಗೆ ಸುಮಾರು ಒಂದು ಗ್ರಾಂ ನಷ್ಟು ಹಾಗೂ ಸಾಮಾನ್ಯ ಚಟುವಟಿಕೆಯ ವ್ಯಕ್ತಿಗಳಿಗೆ ದಿನಕ್ಕೆ 0.8 ಗ್ರಾಂ ನಷ್ಟು ಪ್ರೋಟೀನ್ ಅಗತ್ಯವಿದೆ.

ಖನಿಜ ಮತ್ತು ವಿಟಮಿನ್ನುಗಳು

ಖನಿಜ ಮತ್ತು ವಿಟಮಿನ್ನುಗಳು

ಕೋಳಿ ಮಾಂಸದ ಈ ಭಾಗದಲ್ಲಿ ಹೆಚ್ಚಿನ ಪ್ರಮಾಣದ ಖನಿಜ ಮತ್ತು ವಿಟಮಿನ್ನುಗಳಿವೆ. ವಿಶೇಷವಾಗಿ ಇದರಲ್ಲಿರುವ ವಿಟಮಿನ್ ಬಿ ಕಣ್ಣಿನ ಕ್ಯಾಟರಾಕ್ಟ್ ಹಾಗೂ ಚರ್ಮದ ಕಾಯಿಲೆಗಳು ಆವರಿಸುವ ಸಾಧ್ಯತೆಯಿಂದ ರಕ್ಷಿಸುತ್ತದೆ. ಈ ಖನಿಜ ಮತ್ತು ವಿಟಮಿನ್ನುಗಳ ಸೇವನೆಯಿಂದ ಸುಸ್ತು ಆವರಿಸುವುದನ್ನು ತಡೆಯುವುದು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು, ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುವುದು, ಹೃದಯದ ತೊಂದರೆಗಳಿಂದ ರಕ್ಷಿಸುವುದು, ಅಧಿಕ ಕೊಲೆಸ್ಟ್ರಾಲ್ ಸಂಗ್ರಹವಾಗದಂತೆ ತಡೆಯುವುದು ಮೊದಲಾದ ಮೂಲಕ ಆರೋಗ್ಯ ವೃದ್ಧಿಸುತ್ತದೆ.

ನಾನ್‌ ವೆಜ್ ಪ್ರಿಯರಿಗೆ ಸಿಹಿ ಸುದ್ದಿ-ಚಿಕನ್ ಆರೋಗ್ಯಕ್ಕೆ ಬಹಳ ಒಳ್ಳೆಯದು

ತೂಕದಲ್ಲಿ ಇಳಿತ

ತೂಕದಲ್ಲಿ ಇಳಿತ

ತೂಕವನ್ನು ಇಳಿಸುವವರಿಗೆ ಈ ಭಾಗದ ಮಾಂಸ ಉತ್ತಮ ಆಯ್ಕೆಯಾಗಿದೆ ಹಾಗೂ ಇದೇ ಕಾರಣಕ್ಕೆ ತೂಕ ಇಳಿಸುವ ಆಹಾರಗಳಲ್ಲಿ ಈ ಮಾಂಸವನ್ನು ಹೆಚ್ಚು ಪುರಸ್ಕರಿಸಲಾಗುತ್ತದೆ. ತೂಕ ಇಳಿಸುವ ನಿಟ್ಟಿನಲ್ಲಿ ಸಿದ್ಧಪಡಿಸಲಾದ ಆಹಾರದಲ್ಲಿ ಹೆಚ್ಚಿನ ಪ್ರಮಾಣದ ಪ್ರೋಟೀನ್ ಯುಕ್ತ ಆಹಾರಗಳನ್ನು ಸೇರಿಸಿರಲಾಗುತ್ತದೆ. ಈ ಮೂಲಕ ತೂಕವಿಳಿಸುವ ಯತ್ನಗಳಿಗೆ ಹೆಚ್ಚಿನ ಬೆಂಬಲ ಹಾಗೂ ಹೊಟ್ಟೆಯನ್ನು ತುಂಬಿರುವ ಭಾವನೆ ಮೂಡಿಸಿ ಅನಗತ್ಯವಾದ ಆಹಾರ ಸೇವನೆಯಿಂದ ರಕ್ಷಿಸುತ್ತದೆ.

ಅಧಿಕ ರಕ್ತದೊತ್ತಡದಿಂದ ರಕ್ಷಿಸುತ್ತದೆ

ಅಧಿಕ ರಕ್ತದೊತ್ತಡದಿಂದ ರಕ್ಷಿಸುತ್ತದೆ

ಎದೆಯ ಭಾಗದ ಕೋಳಿಮಾಂಸದ ಸೇವನೆಯಿಂದ ರಕ್ತದೊತ್ತಡವನ್ನು ಸಾಮಾನ್ಯ ಸ್ಥಿತಿಯಲ್ಲಿರಿಸಲು ಸಾಧ್ಯವಾಗುತ್ತದೆ ಎಂದು ನಿಮಗೆ ಗೊತ್ತೇ? ಹೌದು ಇದು ನಿಜ. ರಕ್ತದ ಒತ್ತಡವನ್ನು ನಿಯಂತ್ರಿಸಲು ಈ ಭಾಗದ ಕೋಳಿಮಾಂಸದ ಸೇವನೆ ಪೂರಕ ಎಂದು ಅಧ್ಯಯನಗಳಿಂದ ತಿಳಿದುಬಂದಿದೆ. ವಿಶೇಷವಾಗಿ ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಈ ಮಾಂಸದ ಖಾದ್ಯಗಳು ಹೆಚ್ಚು ಉಪಯುಕ್ತವಾಗಿವೆ.

ಕ್ಯಾನ್ಸರ್ ಆವರಿಸುವ ಸಾಧ್ಯತೆ ಕಡಿಮೆ ಮಾಡುತ್ತದೆ

ಕ್ಯಾನ್ಸರ್ ಆವರಿಸುವ ಸಾಧ್ಯತೆ ಕಡಿಮೆ ಮಾಡುತ್ತದೆ

ಕೆಲವು ಸಂಶೋಧನೆಗಳಿಂದ ಕಂಡುಕೊಂಡಂತೆ ಕೋಳಿಯ ಎದೆಯಭಾಗದ ಮಾಂಸದ ಸೇವನೆಯಿಂದ ಕೆಲವು ಬಗೆಯ ಕ್ಯಾನ್ಸರ್ ಗಳಿಂದ ರಕ್ಷಣೆ ದೊರಕುತ್ತದೆ. ವಿಶೇಷವಾಗಿ ಕರುಳಿನ ಕ್ಯಾನ್ಸರ್ ಬರದಂತೆ ತಡೆಗಟ್ಟಬಹುದು. ಕೆಂಪು ಮಾಂಸದ ಬದಲು ಈ ಭಾಗದ ಮಾಂಸವನ್ನು ಸೇವಿಸುವುದರಿಂದ ಕ್ಯಾನ್ಸರ್ ಆವರಿಸುವ ಸಾಧ್ಯತೆಯನ್ನು ಸಾಕಷ್ಟು ಕಡಿಮೆ ಮಾಡಬಹುದು.

ಅಧಿಕ ಕೊಲೆಸ್ಟ್ರಾಲ್

ಅಧಿಕ ಕೊಲೆಸ್ಟ್ರಾಲ್

ಕೋಳಿಯ ಎದೆಯಭಾಗದ ಮಾಂಸಕ್ಕೆ ಹೋಲಿಸಿದರೆ ಕೆಂಪು ಮಾಂಸದಲ್ಲಿ ಅಧಿಕ ಪ್ರಮಾಣದ ಕೊಲೆಸ್ಟ್ರಾಲ್ ಇರುತ್ತದೆ. ಆದ್ದರಿಂದ ಮಾಂಸಾಹಾರದ ವಿಷಯ ಬಂದಾಗ ಕೆಂಪು ಮಾಂಸದ ಬದಲು ಕೋಳಿಮಾಂಸದ ಎದೆಯಭಾಗವನ್ನೇ ಸೇವಿಸುವ ಮೂಲಕ ಅಧಿಕ ಕೊಲೆಸ್ಟ್ರಾಲ್ ಹಾಗೂ ಇದಕ್ಕೆ ಸಂಬಂಧಿಸಿದ ಹೃದಯದ ಕಾಯಿಲೆಗಳ ಹಾಗೂ ಹೃದಯದ ಸ್ತಂಭನದ ಸಾಧ್ಯತೆಯೂ ಕಡಿಮೆಯಾಗುತ್ತದೆ. ಆದ್ದರಿಂದ ಮಾಂಸಾಹಾರಿಗಳು ಈ ರುಚಿಯಾದ ಖಾದ್ಯವನ್ನು ಸೇವಿಸುವ ಮೂಲಕ ತಮ್ಮ ಜಿಹ್ವಾಚಾಪಲ್ಯವನ್ನೂ ತಣಿಸಿ ಆರೋಗ್ಯವನ್ನೂ ಉಳಿಸಿಕೊಳ್ಳಬಹುದು.

ನೈಸರ್ಗಿಕ ಖಿನ್ನತೆ-ನಿರೋಧಕ

ನೈಸರ್ಗಿಕ ಖಿನ್ನತೆ-ನಿರೋಧಕ

ಈ ಮಾಂಸದಲ್ಲಿ ಟ್ರಿಪ್ಟೋಫ್ಯಾನ್ ಎಂಬ ಅಮೈನೋ ಆಮ್ಲವಿದೆ. ಈ ಪೋಷಕಾಂಶಕ್ಕೆ ಶೀಘ್ರವೇ ದೇಹವನ್ನು ನಿರಾಳಗೊಳಿಸುವ ಶಕ್ತಿ ಇದೆ. ಒಂದು ವೇಳೆ ನೀವು ಖಿನ್ನತೆಗೆ ಒಳಗಾಗಿದ್ದು ಒಂಟಿತನ, ಮಾನಸಿಕ ಒತ್ತಡ ಮೊದಲಾದವುಗಳಿಂದ ಬಳಲುತ್ತಿದ್ದರೆ ಈ ಸಮಯದಲ್ಲಿ ಕೋಳಿ ಮಾಂಸದ ಎದೆಯಭಾಗದಿಂದ ತಯಾರಿಸಿದ ಖಾದ್ಯವನ್ನು ಸೇವಿಸುವ ಮೂಲಕ ಮೆದುಳಿನಲ್ಲಿ ಸೆರೋಟೋನಿನ್ ರಸದೂತದ ಮಟ್ಟ ಹೆಚ್ಚುತ್ತದೆ ಹಾಗೂ ಈ ಮೂಲಕ ಮನೋಭಾವವೂ ಉತ್ತಮಗೊಳ್ಳುತ್ತದೆ ಹಾಗೂ ಒತ್ತಡವೂ ನಿವಾರಣೆಯಾಗುತ್ತದೆ.

ಜೀವರಾಸಾಯನಿಕ ಕ್ರಿಯೆ ಚುರುಕುಗೊಳ್ಳುತ್ತದೆ

ಜೀವರಾಸಾಯನಿಕ ಕ್ರಿಯೆ ಚುರುಕುಗೊಳ್ಳುತ್ತದೆ

ಈ ಭಾಗದ ಮಾಂಸದಲ್ಲಿ ವಿಟಮಿನ್ ಬಿ6 ಹೆಚ್ಚಿನ ಪ್ರಮಾಣದಲ್ಲಿದ್ದು ಜೀವಕೋಶಗಳಲ್ಲಿ ಜರುಗುವ ಪ್ರತಿಕ್ರಿಯೆಗಳು ಹಾಗೂ ಕಿಣ್ವಗಳನ್ನು ಹೆಚ್ಚಿಸುವ ಮೂಲಕ ಜೀವರಾಸಾಯನಿಕ ಕ್ರಿಯೆಯನ್ನು ಚುರುಕುಗೊಳಿಸುವ ಕ್ಷಮತೆ ಹೊಂದಿದೆ. ಅಂದರೆ ಈ ಕಿಣ್ವಗಳು ರಕ್ತನಾಳಗಳು ಆರೋಗ್ಯಕರವಾಗಿರಲು ನೆರವಾಗುತ್ತವೆ. ಹೆಚ್ಚಿದ ಜೀವರಾಸಾಯನಿಕ ಕ್ರಿಯೆಯ ಮೂಲಕ ಹೆಚ್ಚು ಶಕ್ತಿ ದೊರೆತು ಹೆಚ್ಚು ಕ್ಯಾಲೋರಿಗಳನ್ನು ಖರ್ಚು ಮಾಡಲು ದೇಹಕ್ಕೆ ಸಾಧ್ಯವಾಗುತ್ತದೆ.

ದೃಢಗೊಳ್ಳುವ ಮೂಳೆಗಳು

ದೃಢಗೊಳ್ಳುವ ಮೂಳೆಗಳು

ಈ ಮಾಂಸದಲ್ಲಿ ಪ್ರೋಟೀನ್ ಅಧಿಕ ಪ್ರಮಾಣದಲ್ಲಿರುವ ಕಾರಣ ಮೂಳೆಗಳ ಸಾಂದ್ರತೆ ಕಡಿಮೆಯಾಗುವುದನ್ನು ತಡೆಯಬಹುದು. ಒಂದು ದಿನದಲ್ಲಿ ಸುಮಾರು ನೂರು ಗ್ರಾಂ ನಷ್ಟು ಕೋಳಿಮಾಂಸದ ಎದೆಯ ಭಾಗವನ್ನು ಸೇವಿಸಿದರೂ ಸಾಕು, ದಿನದ ಅಗತ್ಯದ ಪ್ರೋಟೀನುಗಳು ಲಭ್ಯವಾಗುತ್ತವೆ. ಇದರಲ್ಲಿರುವ ಗಂಧಕ ಹಲ್ಲು, ಮೂಳೆಗಳು ದೃಢಗೊಳ್ಳಲು ಹಾಗೂ ಕೇಂದ್ರ ನರವ್ಯವಸ್ಥೆ ಉತ್ತಮವಾಗಿ ಕಾರ್ಯನಿರ್ವಹಿಸಲು ನೆರವಾಗುತ್ತದೆ.

ಸುಂದರವಾದ ಅಂಗಸೌಷ್ಟವ

ಸುಂದರವಾದ ಅಂಗಸೌಷ್ಟವ

ಒಂದು ವೇಳೆ ಸ್ಥೂಲಕಾಯ ಈಗಾಗಲೇ ನಿಮ್ಮನ್ನು ಆವರಿಸಿದ್ದು ನಿಮಗೂ ಹುರಿಗಟ್ಟಿದ ಸ್ನಾಯುಗಳ ಕಾಯ ಬೇಕೆಂದಿದ್ದರೆ ನಿಮ್ಮ ಆಹಾರದಲ್ಲಿ ಕೋಳಿಮಾಂಸದ ಎದೆಯಭಾಗವನ್ನು ಸೇರಿಸಿಕೊಳ್ಳುವುದು ಉಪಯುಕ್ತವಾಗಿದೆ. ಇದರಲ್ಲಿರುವ ಹೆಚ್ಚಿನ ಪ್ರೋಟೀನ್ ಸ್ನಾಯುಗಳ ಬೆಳವಣಿಗೆಗೆ ನೆರವಾಗುವುದು ಮಾತ್ರವಲ್ಲ, ನಿಮ್ಮ ತೂಕ ಇಳಿಕೆಯ ಪ್ರಯತ್ನಗಳಿಗೆ ಹೆಚ್ಚಿನ ಶಕ್ತಿ ನೀಡುವ ಮೂಲಕ ಕೊಬ್ಬು ಕರಗಲು ಮತ್ತು ಸ್ನಾಯುಗಳು ಬೆಳೆಯಲು ನೆರವಾಗುತ್ತದೆ ಪರಿಣಾಮವಾಗಿ ಸುಂದರವಾದ ಅಂಗಸೌಷ್ಟವವನ್ನು ಪಡೆಯಲು ನೆರವಾಗುತ್ತದೆ. ಆದರೆ ನಿಮ್ಮ ಆಹಾರದಲ್ಲಿ ಸೂಕ್ಷ್ಮ ಹಾಗೂ ದೊಡ್ಡ ಗಾತ್ರದ ಪೋಷಕಾಂಶಗಳು ಸಾಕಷ್ಟಿರುವಂತೆ ನೋಡಿಕೊಳ್ಳುವುದೂ ಅಗತ್ಯ.

ಘಮಘಮಿಸುವ ಚಿಕನ್ ಕರಿ: ಬರೀ 20 ನಿಮಿಷ ಸಾಕು!

English summary

Health Benefits Of Skinless Chicken Breast

Chicken is the most popular meat which is eaten all over the world. In fact, most people prefer eating chicken to mutton and that is one of the reasons it has made its place in all the Indian meals. A part of the chicken which is the chicken breast is also enjoyed by many. Chicken breast is skinless and boneless that is high in protein, which makes it perfect for weight maintenance.