For Quick Alerts
ALLOW NOTIFICATIONS  
For Daily Alerts

ಬೆಳಿಗ್ಗೆ ಎದ್ದ ತಕ್ಷಣ ಶುಂಠಿ ಬೆರೆಸಿದ ಸೋರೆಕಾಯಿ ಜ್ಯೂಸ್‌ ತಪ್ಪದೇ ಸೇವಿಸಿ!

|

ನಮ್ಮೆಲ್ಲದ ಜೀವನದಲ್ಲಿ ಒಂದು ಸಮಯ ಬರುತ್ತದೆ, ಆಗಲೇ ನಾವು ನಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಲು ಯೋಚಿಸುತ್ತೇವೆ. ಇದಕ್ಕಾಗಿ ಹೊಸದಾಗಿ ಏನಾದರೊಂದನ್ನು ಪ್ರಾರಂಭಿಸಲು, ತನ್ಮೂಲಕ ಆರೋಗ್ಯಕರ ಹಾಗೂ ದೀರ್ಘಾಯುಷ್ಯವನ್ನು ಪಡೆಯಲು ಬಯಸುತ್ತೇವೆ. ಸಾಮಾನ್ಯವಾಗಿ ಇದೊಂದು ತರಹದ ಸ್ಮಶಾನ ವೈರಾಗ್ಯವಿದ್ದಂತೆ. ಈ ಯೋಚನೆ ನಮಗೆ ಬರಬೇಕಾದರೆ ನಮಗೇ ಯಾವುದಾದರೂ ಕಾಯಿಲೆ ಬರಬೇಕು ಅಥವಾ ನಮ್ಮ ಅಕ್ಕಪಕ್ಕದವರ ಆರೋಗ್ಯದಿಂದ ಪ್ರಭಾವಿತರಾಗಿರಬಹುದು. ಕಾರಣವೇನೇ ಇರಲಿ, ಆರೋಗ್ಯಕರ ಜೀವನಕ್ರಮಕ್ಕಾಗಿ ಕೈಗೊಳ್ಳುವ ಯಾವುದೇ ನಿರ್ಧಾರವನ್ನು ಖಂಡಿತಾ ಕೈಗೊಳ್ಳಬೇಕು ಹಾಗೂ ತನ್ಮೂಲಕ ಮುಂದಿನ ಜೀವನದಲ್ಲಿ ಉತ್ತಮ ಆರೋಗ್ಯ ಮತ್ತು ನೆಮ್ಮದಿಯನ್ನು ಪಡೆಯಬಹುದು.

ಆರೋಗ್ಯವಿಲ್ಲದಿರುವ ವ್ಯಕ್ತಿಗಳ ಜೀವನ ಕಷ್ಟಕರ. ಕಳೆದುಕೊಂಡ ಆರೋಗ್ಯವನ್ನು ಹಣವೂ ಮರಳಿತರಲಾರದು ಅಥವಾ ಎಷ್ಟೇ ಪ್ರಭಾವವಿದ್ದರೂ, ಜನಪ್ರಿಯತೆ ಇದ್ದರೂ ಹಿಂಪಡೆಯಲಾಗದು. ಆದ್ದರಿಂದ ಈಗಿರುವ ಆರೋಗ್ಯವನ್ನು ಉಳಿಸಿಕೊಳ್ಳುವುದೇ ಜಾಣತನದ ಕ್ರಮವಾಗಿದೆ. ಇದಕ್ಕಾಗಿ ಈಗ ನಮಗೆ ಸುಖಕರ ಎನಿಸಿರುವ ಜೀವನಕ್ರಮವನ್ನು ಕೊಂಚವಾದರೂ ಬದಲಿಸಬೇಕಾಗುತ್ತದೆ. ಇದಕ್ಕೆ ಆಹಾರಕ್ರಮ ಬದಲಿಸುವುದು ಮತ್ತು ಕೊಂಚ ವ್ಯಾಯಾಮವನ್ನು ಅಳವಡಿಸಿಕೊಳ್ಳುವುದು ಅಗತ್ಯ.

ಯಾವುದೇ ಕಾರಣಕ್ಕೂ 'ಸೋರೆಕಾಯಿ-ಜ್ಯೂಸ್‌' ಮಿಸ್ ಮಾಡಬೇಡಿ!

ಆಹಾರಕ್ರಮ ಬದಲಿಸಿಕೊಳ್ಳುವಲ್ಲಿ ನಮ್ಮ ಅಡುಗೆಮನೆಯಲ್ಲಿ ಸಾಮಾನ್ಯವಾಗಿ ಸದಾ ಇರುವ ಸುಲಭ ಸಾಮಾಗ್ರಿಗಳೇ ಬಹಳಷ್ಟು ನೆರವು ನೀಡಬಲ್ಲವು. ಈ ಸಾಮಾಗ್ರಿಗಳ ಸಮರ್ಪಕ ಮಿಶ್ರಣದ ಕ್ರಮಬದ್ಧ ಸೇವನೆಯಿಂದ ಆರೋಗ್ಯ ಉತ್ತಮಗೊಳ್ಳುವುದು ಮಾತ್ರವಲ್ಲ, ಕೆಲವಾರು ಕಾಯಿಲೆಗಳು ಆವರಿಸುವ ಸಾಧ್ಯತೆಯನ್ನೂ ಕನಿಷ್ಠವಾಗಿಸಬಹುದು. ಬನ್ನಿ, ಈ ನಿಟ್ಟಿನಲ್ಲಿ ಸೋರೆಕಾಯಿ ಮತ್ತು ಶುಂಠಿಯ ರಸವನ್ನು ಪ್ರತಿದಿನ ಬೆಳಿಗ್ಗೆದ್ದ ತಕ್ಷಣ ಪಥಮ ಆಹಾರವಾಗಿ ಸೇವಿಸುವುದರಿಂದ ಯಾವ ಪ್ರಯೋಜನಗಳಿವೆ ಎಂಬುದನ್ನು ನೋಡೋಣ....

ತಯಾರಿಕಾ ವಿಧಾನ

ತಯಾರಿಕಾ ವಿಧಾನ

ಒಂದು ಕಪ್ ತಾಜಾ ಸೋರೆಕಾಯಿಯ ತಿರುಳಿನ ಚಿಕ್ಕ ತುಂಡುಗಳನ್ನು ಸಿದ್ಧಪಡಿಸಿ.

ಕೊಂಚ ನೀರಿನೊಂದಿಗೆ ಈ ತುಂಡುಗಳನ್ನು ಮಿಕ್ಸಿಯಲ್ಲಿ ಹಾಕಿ ನಯವಾಗಿ ಅರೆಯಿರಿ.

ಬಳಿಕ ಒಂದು ಚಿಕ್ಕ ಚಮಚದಷ್ಟು ಅರೆದ ಶುಂಠಿಯನ್ನು ಬೆರೆಸಿ ಇನ್ನಷ್ಟು ಗೊಟಾಯಿಸಿ.

ಈ ರಸವನ್ನು ಪ್ರತಿದಿನ ಬೆಳಿಗ್ಗೆ ಪ್ರಥಮ ಆಹಾರವಾಗಿ ಸೇವಿಸಿ, ಮುಕ್ಕಾಲು ಗಂಟೆಯ ಬಳಿಕ ಉಪಾಹಾರ ಸೇವಿಸಿ.

ದೇಹವನ್ನು ತಂಪಾಗಿರಿಸುತ್ತದೆ

ದೇಹವನ್ನು ತಂಪಾಗಿರಿಸುತ್ತದೆ

ಹಲವೊಮ್ಮೆ, ವಾತಾವರಣದ ಬಿಸಿ, ರಸದೂತಗಳ ಬದಲಾವಣೆ, ಅಸಾಮಾನ್ಯ ಜೀವರಾಸಾಯನಿಕ ಕ್ರಿಯೆಗಳು ಮೊದಲಾದ ಕಾರಣದಿಂದ ನಮ್ಮ ದೇಹ ಸಾಮಾನ್ಯಕ್ಕಿಂತ ಹೆಚ್ಚು ಬಿಸಿಯಾಗುತ್ತದೆ ಹಾಗೂ ಅಹಿತಕರ ಭಾವನೆ ಮೂಡುತ್ತದೆ. ಈ ಪರಿಸ್ಥಿತಿಯಲ್ಲಿ ಅಜೀರ್ಣತೆ, ತಲೆನೋವು ಮತ್ತು ಮೂಗಿನಿಂದ ರಕ್ತ ಸೋರುವುದು ಮೊದಲಾದವು ಎದುರಾಗಬಹುದು. ಸೋರೆಕಾಯಿ ಮತ್ತು ಶುಂಠಿಯ ರಸದ ಸೇವನೆಯಿಂದ ದೇಹ ತಂಪಾಗುವ ಕಾರಣ ಈ ತೊಂದರೆಗಳೂ ಇಲ್ಲವಾಗುತ್ತವೆ.

ಅಜೀರ್ಣತೆಯನ್ನು ಗುಣಪಡಿಸುತ್ತದೆ

ಅಜೀರ್ಣತೆಯನ್ನು ಗುಣಪಡಿಸುತ್ತದೆ

ಇಂದು, ಅನಾರೋಗ್ಯಕರ ಆಹಾರಸೇವನೆ, ಮೇಜು ಕುರ್ಚಿಗಳಿಗೆ ಅಂಟಿಕೊಂಡಂತಿರುವ ಜೀವನ, ಮಾನಸಿಕ ಒತ್ತಡ ಮೊದಲಾದವು ಅಜೀರ್ಣತೆಗೆ ಕಾರಣವಾಗುತ್ತವೆ ಹಾಗೂ ಈ ತೊಂದರೆ ಇಂದಿನ ದಿನಗಳಲ್ಲಿ ಹೆಚ್ಚೇ ಕಾಣಬರುತ್ತಿದೆ. ಅಜೀರ್ಣತೆಯಿಂದ ಗ್ರಾಸ್ಟ್ರೈಟಿಸ್ ಅಥವಾ ವಾಯುಪ್ರಕೋಪ, ಎದೆಯುರಿ, ಹುಳಿತೇಗು ಮೊದಲಾದ ತೊಂದರೆಗಳು ಎದುರಾಗುವುದು ಮಾತ್ರವಲ್ಲ, ಕರುಳಿನ ಕ್ಯಾನ್ಸರ್ ಗೂ ಕಾರಣವಾಗಬಹುದು. ಈ ರಸದಲ್ಲಿರುವ ಕರಗದ ನಾರು ಮತ್ತು ನೀರು ಹಾಗೂ ಶುಂಠಿಯಲ್ಲಿರುವ ಕಿಣ್ವಗಳು ಜಠರದಲ್ಲಿರುವ ಆಮ್ಲಗಳನ್ನು ತಟಸ್ಥಗೊಳಿಸಿ ಅಜೀರ್ಣತೆಯ ತೊಂದರೆಯಿಂದ ಕಾಪಾಡುತ್ತವೆ.

ತೂಕ ಇಳಿಸಲು ನೆರವಾಗುತ್ತದೆ

ತೂಕ ಇಳಿಸಲು ನೆರವಾಗುತ್ತದೆ

ಸೋರೆಕಾಯಿ ಮತ್ತು ಶುಂಠಿಯ ರಸವನ್ನು ಪ್ರತಿದಿನ ಬೆಳಿಗ್ಗೆದ್ದ ತಕ್ಷಣ ಪಥಮ ಆಹಾರವಾಗಿ ಸೇವಿಸುವುದರಿಂದ ಸ್ಥೂಲಕಾಯ ಕಡಿಮೆಯಾಗಿ ಆರೋಗ್ಯಕರ ಹಾಗೂ ತೆಳ್ಳಗಿನ ಮೈಕಟ್ಟು ಶೀಘ್ರಸಮಯದಲ್ಲಿ ಲಭಿಸುತ್ತದೆ. ಈ ರಸದಲ್ಲಿರುವ ವಿಟಮಿನ್ ಕೆ ಮತ್ತು ಆಂಟಿ ಆಕ್ಸಿಡೆಂಟುಗಳು ಜೀವರಾಸಾಯನಿಕ ಕ್ರಿಯೆಯನ್ನು ಉತ್ತಮಗೊಳಿಸಿ ಹೆಚ್ಚಿನ ಕೊಬ್ಬು ಬಳಸಿಕೊಳ್ಳುವಂತೆ ಮಾಡುತ್ತದೆ. ಅಲ್ಲದೇ ಈ ರಸದಲ್ಲಿ ಅತಿ ಕಡಿಮೆ ಕ್ಯಾಲೋರಿಗಳಿರುವ ಕಾರಣ ಇದರಿಂದ ತೂಕ ಏರುವ ಸಾಧ್ಯತೆ ಇಲ್ಲ. ಇದರೊಂದಿಗೆ ಸಮತೋಲನ ಪ್ರಮಾಣದ ಆರೋಗ್ಯಕರ ಆಹಾರ ಮತ್ತು ಕ್ರಮಬದ್ಧವಾದ ವ್ಯಾಯಾಮದ ಮೂಲಕ ಪರಿಣಾಮಕಾರಿಯಾಗಿ ತೂಕ ಇಳಿಸಲು ಸಾಧ್ಯವಾಗುತ್ತದೆ.

ಅಧಿಕ ರಕ್ತದೊತ್ತಡ ಕಡಿಮೆಗೊಳಿಸುತ್ತದೆ

ಅಧಿಕ ರಕ್ತದೊತ್ತಡ ಕಡಿಮೆಗೊಳಿಸುತ್ತದೆ

ಅಧಿಕರಕ್ತದೊತ್ತಡ ಸಹಾ ಆರಾಮದಾಯಕ ಜೀವನಕ್ರಮದ ಇನ್ನೊಂದು ಕೊಡುಗೆಯಾಗಿದೆ. ರಕ್ತನಾಳಗಳ ಒಳಗಿನ ರಕ್ತವನ್ನು ದೂಡಲು ಹೆಚ್ಚಿನ ಒತ್ತಡದ ಅಗತ್ಯವಿದ್ದಾಗ ಹೃದಯಕ್ಕೆ ಹೆಚ್ಚು ಒತ್ತಡದಿಂದ ರಕ್ತವನ್ನು ನೂಕಿ ಕೊಡಬೇಕಾಗುತ್ತದೆ. ಇದು ಕೆಲವು ಅನಪೇಕ್ಷಿತ ರೋಗಲಕ್ಷಣಗಳಿಗೆ ಕಾರಣವಾಗಬಹುದು ಹಾಗೂ ಇದು ಅಧಿಕ ರಕ್ತದೊತ್ತಡಕ್ಕೆ ಮೂಲವಾಗುತ್ತದೆ. ಈ ರಸದಲ್ಲಿರುವ ಪೊಟ್ಯಾಶಿಯಂನಿಂದಾಗಿ ಅಧಿಕ ರಕ್ತದೊತ್ತಡ ಸಾಮಾನ್ಯ ಮಟ್ಟಕ್ಕೆ ನೈಸರ್ಗಿಕವಾಗಿ ಇಳಿಯಲು ಸಾಧ್ಯವಾಗುತ್ತದೆ.

ಮೂತ್ರನಾಳದ ಸೋಂಕನ್ನು ಗುಣಪಡಿಸುತ್ತದೆ

ಮೂತ್ರನಾಳದ ಸೋಂಕನ್ನು ಗುಣಪಡಿಸುತ್ತದೆ

ಮೂತ್ರನಾಳದ ಸೋಂಕು ಅಥವಾ Urinary Tract Infections (UTI) ಕೆಲವು ಬ್ಯಾಕ್ಟೀರಿಯಾಗಳು ಮೂತ್ರನಾಳದಲ್ಲಿ ಅಥವಾ ವಿಶೇಷವಾಗಿ ಮೂತ್ರಕೋಶದಲ್ಲಿ ಸಂಗ್ರಹಗೊಂಡು ಸೋಂಕು ಉಂಟುಮಾಡುತ್ತವೆ. ಈ ಬ್ಯಾಕ್ಟೀರಿಯಾಗಳು ಸಾಮಾನ್ಯವಾಗಿ ದಂಪತಿಗಳ ಮಿಲನದ ಸಮಯದಲ್ಲಿ ಹೆಚ್ಚಾಗಿ ದೇಹವನ್ನು ಪ್ರವೀಶಿಸುತ್ತವೆ. ಸೋರೆಕಾಯಿ ಒಂದು ನೈಸರ್ಗಿಕ ಮೂತ್ರವರ್ಧಕವಾಗಿದೆ ಹಾಗೂ ಇದು ಮೂತ್ರನಾಳದಲ್ಲಿ ಸಂಗ್ರಹವಾಗಿದ್ದ ಬ್ಯಾಕ್ಟೀರಿಯಾಗಳನ್ನು ಒಳಗಿನಿಂದ ರಭಸವಾಗಿ ಮೂತ್ರವನ್ನು ಚಿಮ್ಮಿಸುವುದರ ಮೂಲಕ ವಿಸರ್ಜಿಸುತ್ತದೆ. ಶುಂಠಿ ಸಹಾ ಉತ್ತಮ ಬ್ಯಾಕ್ಟೀರಿಯಾನಿವಾರಕವಾಗಿದ್ದು ಈ ಜೋಡಿ ಬ್ಯಾಕ್ಟೀರಿಯಾಗಳನ್ನು ನಿವಾರಿಸಿ ಈ ಸೋಂಕಿನಿಂದ ರಕ್ಷಿಸುತ್ತವೆ.

ಯಕೃತ್ ನ ಉರಿಯೂತವನ್ನು ಗುಣಪಡಿಸುತ್ತದೆ

ಯಕೃತ್ ನ ಉರಿಯೂತವನ್ನು ಗುಣಪಡಿಸುತ್ತದೆ

ನಮ್ಮ ದೇಹದ ಪ್ರಮುಖ ಅಂಗಗಳಲ್ಲೊಂದಾದ ಯಕೃತ್‌ಗೆ ಯಾವುದಾದರೂ ತೊಂದರೆಯುಂಟಾದರೆ ಇದು ಪ್ರಾಣಾಂತಿಕವಾಗಿ ಪರಿಣಮಿಸಬಹುದು. ಅನಾರೋಗ್ಯಕರ ಆಹಾರ ಸೇವನೆ, ಮದ್ಯ, ಅತಿಯಾದ ಧೂಮಪಾನ, ಕೆಲವು ಸೋಂಕುಗಳು, ಕೆಲವು ಔಷಧಿಗಳ ಅಡ್ಡಪರಿಣಾಮ ಮೊದಲಾದವುಗಳ ಮೂಲಕ ಯಕೃತ್ ನಲ್ಲಿಯೂ ಉರಿಯೂತವುಂಟಾಗಬಹುದು. ಸೋರೆಕಾಯಿ ಮತ್ತು ಶುಂಠಿಯ ರಸವನ್ನು ಪ್ರತಿದಿನ ಬೆಳಿಗ್ಗೆದ್ದ ತಕ್ಷಣ ಪಥಮ ಆಹಾರವಾಗಿ ಸೇವಿಸುವುದರಿಂದ ಯಕೃತ್ ನ ಉರಿಯೂತವನ್ನು ಗುಣಪಡಿಸಬಹುದು ಎಂದು ತಿಳಿದುಕೊಳ್ಳಲಾಗಿದೆ.

ಸ್ನಾಯುಗಳ ಚೇತರಿಕೆಗೆ ನೆರವಾಗುತ್ತದೆ

ಸ್ನಾಯುಗಳ ಚೇತರಿಕೆಗೆ ನೆರವಾಗುತ್ತದೆ

ವ್ಯಾಯಾಮದ ಬಳಿಕ ಮೈ ಕೈ ನೋವು ಆವರಿಸಲಿಕ್ಕೆ ಪ್ರಮುಖ ಕಾರಣವೆಂದರೆ ಸ್ನಾಯುಗಳು ಬಳಲುವುದು. ಬಳಲಿದ ಸ್ನಾಯುಗಳು ಮತ್ತೊಮ್ಮೆ ಕೆಲಸ ಮಾಡಲು ಅನುವಾಗಲು ಕೊಂಚ ವಿಶ್ರಾಂತಿ ಹಾಗೂ ಪೋಷಕಾಂಶಗಳು ಅಗತ್ಯವಾಗಿ ಬೇಕು. ಸೋರೆಕಾಯಿ ಮತ್ತು ಶುಂಠಿಯ ರಸದ ಸಂಯೋಜನೆ ಈ ಕೆಲಸವನ್ನು ಸಮರ್ಥವಾಗಿ ನಿಭಾಯಿಸುತ್ತವೆ. ಇದರಲ್ಲಿರುವ ಪೊಟ್ಯಾಶಿಯಂ ಬಳಲಿದ ಸ್ನಾಯುಗಳು ಶೀಘ್ರವಾಗಿ ಚೇತರಿಸಿಕೊಳ್ಳಲು ನೆರವಾಗುತ್ತದೆ.

ಹೃದಯದ ಆರೋಗ್ಯ ವೃದ್ಧಿಸುತ್ತದೆ

ಹೃದಯದ ಆರೋಗ್ಯ ವೃದ್ಧಿಸುತ್ತದೆ

ಇಂದು ವಿಶ್ವದ 60% ರಷ್ಟು ಜನತೆ ಹೃದಯಸಂಬಂಧಿ ಕಾಯಿಲೆಗಳಿಂದ ಪ್ರಭಾವಿತರಾಗಿದ್ದಾರೆ. ಭಾರತವೊಂದರಲ್ಲಿಯೇ ಪ್ರತಿವರ್ಷ ಹೆಚ್ಚು ಹೆಚ್ಚು ಜನರು ಹೃದಯದ ತೊಂದರೆ ಹೇಳಿಕೊಂಡು ಆಸ್ಪತ್ರೆಗಳಿಗೆ ಆಗಮಿಸುತ್ತಿದ್ದಾರೆ. ಸೋರೆಕಾಯಿ ಮತ್ತು ಶುಂಠಿಯ ರಸವನ್ನು ಪ್ರತಿದಿನ ಬೆಳಿಗ್ಗೆದ್ದ ತಕ್ಷಣ ಪಥಮ ಆಹಾರವಾಗಿ ಸೇವಿಸುವುದರಿಂದ ಹೃದಯದ ಕ್ಷಮತೆ ಹೆಚ್ಚುತ್ತದೆ ಹಾಗೂ ಇದರಲ್ಲಿರುವ ವಿಟಮಿನ್ ಕೆ ಮತ್ತು ಆಂಟಿ ಆಕ್ಸಿಡೆಂಟುಗಳು ರಕ್ತ ಪರಿಚಲನೆಯನ್ನು ಉತ್ತಮಗೊಳಿಸಿ ಹೃದಯವನ್ನು ಆರೋಗ್ಯಕರವಾಗಿರಿಸಲು ನೆರವಾಗುತ್ತವೆ.

ಮುಂಜಾನೆಯ ವಾಕರಿಕೆ ನಿವಾರಿಸುತ್ತದೆ

ಮುಂಜಾನೆಯ ವಾಕರಿಕೆ ನಿವಾರಿಸುತ್ತದೆ

ಗರ್ಭವತಿಯರಿಗೆ ಸಾಮಾನ್ಯವಾಗಿ ಎದುರಾಗುವ ಮುಂಜಾನೆಯ ವಾಕರಿಕೆಯನ್ನು ಈ ರಸದ ಸೇವನೆಯಿಂದ ಕನಿಷ್ಟವಾಗಿಸಬಹುದು. ಸೋರೆಕಾಯಿ ಮತ್ತು ಶುಂಠಿಯ ರಸವನ್ನು ಪ್ರತಿದಿನ ಬೆಳಿಗ್ಗೆದ್ದ ತಕ್ಷಣ ಪಥಮ ಆಹಾರವಾಗಿ ಸೇವಿಸುವುದರಿಂದ ಜಠರದಲ್ಲಿರುವ ಆಮ್ಲೀಯತೆ ಕಡಿಮೆಯಾಗುತ್ತದೆ ಹಾಗೂ ರಸದೂತಗಳ ಅಸಮತೋಲನದ ಕಾರಣ ಎದುರಾಗಿದ್ದ ವಾಕರಿಕೆಯೂ ಇಲ್ಲವಾಗುತ್ತದೆ. ಆದರೆ ಈ ರಸವನ್ನು ನಿತ್ಯವೂ ಸೇವಿಸುವ ಮೊದಲು ನಿಮ್ಮ ವೈದ್ಯರ ಸಲಹೆ ಪಡೆದೇ ಮುಂದುವರೆಯಿರಿ.

English summary

health-benefits-of-bottle-gourd-ginger

It is very important to ensure that you make healthy lifestyle choices, every step of the way, starting from a healthy diet and exercise routine. Now, there are certain natural ingredients in our own kitchens and gardens, which come with numerous health benefits. The mixture of these ingredients can not only boost our health generally, but can also treat and prevent specific ailments. Learn how consuming the mixture of bottle gourd juice (lauki) and ginger every morning can improve your health.
X
Desktop Bottom Promotion