For Quick Alerts
ALLOW NOTIFICATIONS  
For Daily Alerts

ಕಡ್ಲೆಹಿಟ್ಟು ಬೋಂಡಾ ಮಾಡುವುದಕ್ಕೆ ಮಾತ್ರವಲ್ಲ-ಆರೋಗ್ಯಕ್ಕೂ ಬಲು ಉಪಕಾರಿ!

|

ಕಡ್ಲೆಹಿಟ್ಟು ಅಥವಾ ಕಡಲೆಬೇಳೆಯಹಿಟ್ಟು, ಸಾಮಾನ್ಯವಾಗಿ ಬೋಂಡಾ ಮೊದಲಾದ ಎಣ್ಣೆಯಲ್ಲಿ ಕರಿದು ಮಾಡುವ ಖಾದ್ಯಗಳನ್ನು ತಯಾರಿಸಲು ಬಳಸಲಾಗುತ್ತದೆ. ಆದರೆ ಭಾರತದಲ್ಲಿ ಈ ಹಿಟ್ಟನ್ನು ಸೌಂದರ್ಯವರ್ಧಕ ಗುಣಗಳಿಂದಾಗಿ ಸೌಂದರ್ಯ ಪ್ರಸಾಧನದ ರೂಪದಲ್ಲಿಯೂ ಬಳಸಲಾಗುತ್ತಿದೆ.

ಇದಕ್ಕೂ ಹೊರತಾಗಿ ಕಡ್ಲೆಹಿಟ್ಟಿನಲ್ಲಿ ಇನ್ನೂ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ ಎಂದು ನಮಲ್ಲಿ ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ಸಾಮಾನ್ಯವಾಗಿ ಕಡ್ಲೆಕಾಳುಗಳನ್ನು ಒಣಗಿದ್ದಂತೆಯೇ ಅಥವಾ ಹುರಿದು ಪುಡಿಮಾಡಿ ಈ ಹಿಟ್ಟನ್ನು ತಯಾರಿಸಲಾಗುತ್ತದೆ. ಕಡ್ಲೆಕಾಳು ಮತ್ತು ಕಡ್ಲೆಬೇಳೆ ಭಾರತೀಯ ಅಡುಗೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಹಾಗೂ ಹಲವಾರು ಖಾದ್ಯಗಳನ್ನು ತಯಾರಿಸಲಾಗುತ್ತದೆ...

ಕಡ್ಲೆಹಿಟ್ಟು ನಿಮ್ಮ ಆರೋಗ್ಯಕ್ಕೆ ಒಳ್ಳೆಯದೇ?

ಕಡ್ಲೆಹಿಟ್ಟು ನಿಮ್ಮ ಆರೋಗ್ಯಕ್ಕೆ ಒಳ್ಳೆಯದೇ?

ಬೇಸನ್ ಎಂದೇ ಹಿಂದಿಭಾಷೆಯಲ್ಲಿ ಕರೆಯಲ್ಪಡುವ ಈ ಹಿಟ್ಟಿನಲ್ಲಿ ಗೋಧಿಯಂತಹ ಯಾವುದೇ ಏಕದಳಧಾನ್ಯದ ಅಂಶರಹಿತವಾಗಿದ್ದು ಉತ್ತಮ ಪ್ರಮಾಣದ ಕರಗದ ನಾರು ಮತ್ತು ಇತರ ಪೋಷಕಾಂಶಗಳನ್ನು ಹೊಂದಿದೆ. ಸುಮಾರು ನೂರು ಗ್ರಾಂ ಕಡ್ಲೆಹಿಟ್ಟಿನಲ್ಲಿ ಹನ್ನೊಂದು ಗ್ರಾಂ ಕರಗದ ನಾರು, ಇಪ್ಪತ್ತೆರಡು ಗ್ರಾಂ ಪ್ರೋಟೀನ್, ಹನ್ನೊಂದು ಗ್ರಾಂ ಸಕ್ಕರೆ, ಏಳು ಗ್ರಾಂ ಇತರ ಕೊಬ್ಬುಗಳು, ಐವತ್ತೆಂಟು ಗ್ರಾಂ ಒಟ್ಟು ಕಾರ್ಬೋಹೈಡ್ರೇಟುಗಳು, ನಲವತ್ತೈದು ಮಿಲಿಗ್ರಾಂ ಕ್ಯಾಲ್ಸಿಯಂ, ನೂರಾಅವರತ್ತಾರು ಮಿಲಿಗ್ರಾಂ ಮೆಗ್ನೀಶಿಯಂ, 846 ಮಿಲಿಗ್ರಾಂ ಪೊಟ್ಯಾಶಿಯಂ, 4.9 ಮಿಲಿಗ್ರಾಂ ಕಬ್ಬಿಣ, 41 IU ಪ್ರಮಾಣದಷ್ಟು ವಿಟಮಿನ್ ಎ ಇವೆ. ಅಲ್ಲದೇ ಪ್ರಮುಖ ಖನಿಜಗಳಾದ ಸೆಲೆನಿಯಂ, ತಾಮ್ರ, ಮ್ಯಾಂಗನೀಸ್, ಗಂಧಕ ಹಾಗೂ ಸತು ಸಹಾ ಉತ್ತಮ ಪ್ರಮಾಣದಲ್ಲಿವೆ. ಕಡ್ಲೆಹಿಟ್ಟಿನ ಆರೋಗ್ಯಕರ ಪ್ರಯೋಜನಗಳು

ಮಧುಮೇಹವನ್ನು ನಿಯಂತ್ರಿಸುತ್ತದೆ

ಮಧುಮೇಹವನ್ನು ನಿಯಂತ್ರಿಸುತ್ತದೆ

ಕಡ್ಲೆಹಿಟ್ಟು ಕಡಿಮೆ ಗ್ಲೈಸೆಮಿಕ್ ಗುಣಾಂಕವನ್ನು ಹೊಂದಿರುವ ಆಹಾರವಾಗಿದ್ದು ಇದರ ಸೇವನೆಯಿಂದ ರಕ್ತದಲ್ಲಿ ಸಕ್ಕರೆ ತೀರಾ ನಿಧಾನವಾಗಿ ಏರುತ್ತದೆ. ಜೀರ್ಣಗೊಳ್ಳಲು ಹೆಚ್ಚಿನ ಸಮಯ ತೆಗೆದುಕೊಳ್ಳುವ ಕಾರಣ ರಕ್ತದಲ್ಲಿ ಥಟ್ಟನೇ ಸಕ್ಕರೆಯ ಮಟ್ಟ ಏರುವ (sudden sugar spike) ಸಾಧ್ಯತೆಗಳನ್ನು ಇಲ್ಲವಾಗಿಸುತ್ತದೆ. ಈ ಗುಣದಿಂದಾಗಿ ದೇಹದಲ್ಲಿ ಉತ್ಪತ್ತಿಯಾದ ಇನ್ಸುಲಿನ್ ಅನ್ನು ಪೂರ್ಣಪ್ರಮಾಣದಲ್ಲಿ ಬಳಸಲು ಸಾಧ್ಯವಾಗುತ್ತದೆ. ಮಧುಮೇಹಿಗಳಿಗೆ ಈ ಗುಣ ವರದಾನವಾಗಿದ್ದು ಮಧುಮೇಹವನ್ನು ನಿಯಂತ್ರಿಸಲು ಈ ಆಹಾರ ಅತ್ಯುತ್ತಮವಾಗಿದೆ. ಹಾಗಾಗಿ ಮಧುಮೇಹಿಗಳಿಗೆ ಚಪಾತಿ ಅಥವಾ ಪರೋಟವನ್ನು ತಯಾರಿಸುವಾಗ ಕೊಂಚ ಕಡ್ಲೆಹಿಟ್ಟನ್ನು ಬೆರೆಸುವುದು ಉತ್ತಮ.

Most Read: ನೇರಳೆ ಹಣ್ಣು: ರುಚಿಗಷ್ಟೇ ಅಲ್ಲ, ಅನೇಕ ಕಾಯಿಲೆ ನಿವಾರಿಸುವ ಔಷಧಿಯೂ ಹೌದು!

ಹೃದಯದ ಆರೋಗ್ಯವನ್ನು ಉತ್ತಮಗೊಳಿಸುತ್ತದೆ

ಹೃದಯದ ಆರೋಗ್ಯವನ್ನು ಉತ್ತಮಗೊಳಿಸುತ್ತದೆ

ಕಡ್ಲೆಹಿಟ್ಟಿನಲ್ಲಿ ಹಲವಾರು ಅವಶ್ಯಕ ವಿಟಮಿನ್ನುಗಳು, ಖನಿಜಗಳು ಹಾಗೂ ಕರಗದ ನಾರು ಉತ್ತಮ ಪ್ರಮಾಣದಲ್ಲಿದ್ದು ಎಲ್ಲವೂ ಹೃದಯದ ಆರೋಗ್ಯಕ್ಕೆ ಪೂರಕವಾಗಿವೆ. ನೂರು ಗ್ರಾಂ ಕಡ್ಲೆಹಿಟ್ಟಿನಲ್ಲಿ 846 ಮಿಲಿಗ್ರಾಂ ಪೊಟ್ಯಾಶಿಯಂ ಇದ್ದು ಈ ಪ್ರಮಾಣ ಅಧಿಕ ರಕ್ತದೊತ್ತಡವನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಅಧಿಕ ರಕ್ತದೊತ್ತಡದಿಂದಾಗಿ ಹೃದಯ ಸ್ತಂಭನ, ಹಾಗೂ ಥಟ್ಟನೇ ಎದುರಾಗುವ ಹೃದಯ ವೈಫಲ್ಯ ಮೊದಲಾದ ಸಾಧ್ಯತೆಗಳು ಹೆಚ್ಚುತ್ತವೆ.

Most Read: ಈ ಮೂರು ರಾಶಿಯವರು ಜೀವನದಲ್ಲಿ ಹೆಚ್ಚಿನ ನಿರೀಕ್ಷೆ ಹೊಂದಿರುವವರು!

ತೂಕ ಇಳಿಕೆಗೆ ನೆರವಾಗುತ್ತದೆ

ತೂಕ ಇಳಿಕೆಗೆ ನೆರವಾಗುತ್ತದೆ

ಇತ್ತೀಚಿನ ಒಂದು ಅಧ್ಯಯನದಲ್ಲಿ ಕಂಡುಕೊಂಡ ಪ್ರಕಾರ ತೂಕ ಇಳಿಕೆಗೂ ಕಡ್ಲೆಹಿಟ್ಟು ನೆರವಾಗುತ್ತದೆ. ಇದರಲ್ಲಿರುವ ಕರಗದ ನಾರು ಮತ್ತು ಪ್ರೋಟೀನ್ ಹೊಟ್ಟೆಯನ್ನು ಹೆಚ್ಚು ಹೊತ್ತು ತುಂಬಿರುವ ಭಾವನೆ ಮೂಡಿಸಿ ಅನಗತ್ಯ ಆಹಾರಸೇವನೆಯಿಂದ ತಡೆಯುತ್ತವೆ. ಅಲ್ಲದೇ ಕಡ್ಲೆಹಿಟ್ಟು ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಮತ್ತು ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುವ ಗುಣ ಹೊಂದಿದ್ದು ತನ್ಮೂಲಕ ತೂಕ ಇಳಿಕೆಗೆ ನೆರವಾಗುತ್ತದೆ. ನಿತ್ಯದ ಆಹಾರದಲ್ಲಿ ಕಡ್ಲೆಹಿಟ್ಟಿನಿಂದ ತಯಾರಿಸಲಾದ ಢೋಕ್ಲಾ, ಬೋಂಡಾ, ಚಿಲಾ ಮೊದಲಾದವುಗಳನ್ನು ಕೊಂಚ ಪ್ರಮಾಣದಲ್ಲಿ ಸೇವಿಸುವುದು ಉತ್ತಮವಾಗಿದೆ. ಕಡ್ಲೆಕಾಳುಗಳನ್ನು ನೆನೆಸಿಟ್ಟು ತಯಾರಿಸಿದ ಸಲಾಡ್, ಸೂಪ್ ಅಥವಾ ಚಾಟ್ ಗಳನ್ನೂ ಸೇವಿಸಬಹುದು.

ಮನೋಭಾವ ಮತ್ತು ಹಸಿವಿನ ಬಯಕೆಗಳನ್ನು ನಿಯಂತ್ರಿಸುತ್ತದೆ

ಮನೋಭಾವ ಮತ್ತು ಹಸಿವಿನ ಬಯಕೆಗಳನ್ನು ನಿಯಂತ್ರಿಸುತ್ತದೆ

ಕಡ್ಲೆಹಿಟ್ಟಿನಲ್ಲಿ ಉತ್ತಮ ಪ್ರಮಾಣದ ವಿಟಮಿನ್ B6ಇದೆ. ಹಾಗೂ ಇವು ನಮ್ಮ ಮೆದುಳಿನಲ್ಲಿ ಮುದನೀಡಲು ಕಾರಣವಾಗುವ ಸೆರೋಟೋನಿನ್ ಎಂಬ ನ್ಯೂರೋಟ್ರಾನ್ಸ್ ಮಿಟರ್ ರಸದೂತವನ್ನು ಸ್ರವಿಸಲು ನೆರವಾಗುತ್ತದೆ. ಈ ರಸದೂತ ಮನೋಭಾವವನ್ನು ಉತ್ತಮವಾಗಿರಿಸಲು ಮತ್ತು ಅನಗತ್ಯ ಹಸಿವಿನ ಸಂಕೇತಗಳನ್ನು ನೀಡುವುದರಿಂದ ತಡೆಯಲು ಅಗತ್ಯವಾಗಿದೆ.

Most Read: ಮನೆ ಔಷಧ: ಗಂಟಲ ಕಿರಿಕಿರಿ ಸಮಸ್ಯೆಗೆ ಒಂದೇ ಗಂಟೆಯಲ್ಲಿ ಪರಿಹಾರ

ಸುಸ್ತಾಗುವುದರಿಂದ ತಡೆಯುತ್ತದೆ

ಸುಸ್ತಾಗುವುದರಿಂದ ತಡೆಯುತ್ತದೆ

ನಿತ್ಯದ ಚಟುವಟಿಕೆಗಳಿಗೆ ಅಗತ್ಯವಾದ ಶಕ್ತಿಯನ್ನು ಒದಗಿಸಲು ನಿಮ್ಮ ಅಹಾರದಲ್ಲಿ ಸಾಕಷ್ಟು ಕಡ್ಲೆಹಿಟ್ಟು ಇರುವಂತೆ ನೋಡಿಕೊಳ್ಳಿ. ಇದರಲ್ಲಿ ಉತ್ತಮ ಪ್ರಮಾಣದ ಥಿಯಾಮಿನ್ ಎಂಬ ವಿಟಮಿನ್ ಸಹಾ ಇದ್ದು ಆಹಾರವನ್ನು ಶಕ್ತಿಯನ್ನಾಗಿ ಮಾರ್ಪಾಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ತನ್ಮೂಲಕ ಸುಸ್ತಾಗುವುದರಿಂದ ತಡೆಯುತ್ತದೆ.

ಕರುಳಿನ ಕ್ಯಾನ್ಸರ್ ನಿಂದ ರಕ್ಷಿಸುತ್ತದೆ

ಕರುಳಿನ ಕ್ಯಾನ್ಸರ್ ನಿಂದ ರಕ್ಷಿಸುತ್ತದೆ

ಮೆಕ್ಸಿಕೋದಲ್ಲಿ ನಡೆದ ಒಂದು ಅಧ್ಯಯನದ ಪ್ರಕಾರ ಕಡ್ಲೆಹಿಟ್ಟಿನ ಸೇವನೆಯಿಂದ ಕರುಳಿನ ಕ್ಯಾನ್ಸರ್ ಆವರಿಸುವ ಸಾಧ್ಯತೆ ಇಲ್ಲವಾಗುತ್ತದೆ. ನಮ್ಮ ದೇಹದ ಪ್ರೋಟೀನು ಮತ್ತು ಡಿಎನ್ ಎ ಗಳ ಆಮ್ಲೀಜನಕರಣ (oxidation of DNA and proteins)ಕ್ರಿಯೆಯನ್ನು ಕಡಿಮೆಗೊಳಿಸುವ ಮೂಲಕ ಬೀಟಾ ಕ್ಯಾರೋಟೀನ್ ಎಂಬ ಕ್ಯಾನ್ಸರ್ ಉಂಟುಮಾಡುವ ಪ್ರೋಟೀನ್ (oncogenic protein) ನ ಕಾರ್ಯಕ್ಷಮತೆಯನ್ನು ಸ್ಥಗಿತಗೊಳಿಸುತ್ತದೆ, ತನ್ಮೂಲಕ ಕರುಳಿನಲ್ಲಿ ಕ್ಯಾನ್ಸರ್ ಉಂಟಾಗುವ ಸಾಧ್ಯತೆಯೂ ಇಲ್ಲವಾಗುತ್ತದೆ. ಅಲ್ಲದೇ ಇದರಲ್ಲಿರುವ ಲಿಗ್ನನ್ ಮತ್ತು ಸಾಪೋಯಿನ್ ಎಂಬ ಪೋಷಕಾಂಶಗಳೂ ಕರುಳಿನ ಕ್ಯಾನ್ಸರ್ ಆವರಿಸುವ ಸಾಧ್ಯತೆಯನ್ನು ತಗ್ಗಿಸುತ್ತವೆ ಎಂದು ಅಮೇರಿಕಾದ ಕ್ಯಾನ್ಸರ್ ಸಂಶೋಧನಾ ವಿಶ್ವವಿದ್ಯಾಲಯವೂ ತಿಳಿಸಿದೆ.

ಮೂಳೆಗಳನ್ನು ದೃಢಗೊಳಿಸುತ್ತದೆ

ಮೂಳೆಗಳನ್ನು ದೃಢಗೊಳಿಸುತ್ತದೆ

ಕಡ್ಲೆಹಿಟ್ಟಿನಲ್ಲಿರುವ ಕ್ಯಾಲ್ಸಿಯಂ ಮತ್ತು ಗಂಧಕ ಒಟ್ಟಾರೆಯಾಗಿ ಶಿಥಿಲಗೊಂಡ ಮೂಳೆಗಳನ್ನು ಮರುನಿರ್ಮಿಸಲು ನೆರವಾಗುವ ಮೂಲಕ ಮೂಳೆಗಳು ದೃಢಗೊಳ್ಳಲು ನೆರವಾಗುತ್ತವೆ. ಹಾಗಾಗಿ ಮೂಳೆಗಳ ದೃಢತೆ ಹೆಚ್ಚಿಸಲು ಹೆಚ್ಚು ಹೆಚ್ಚು ಕಡ್ಲೆಹಿಟ್ಟನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವುದು ಅಗತ್ಯ.

ಮೂಳೆಗಳನ್ನು ದೃಢಗೊಳಿಸುತ್ತದೆ

ಮೂಳೆಗಳನ್ನು ದೃಢಗೊಳಿಸುತ್ತದೆ

ಒಂದು ವೇಳೆ ಮಲಬದ್ಧತೆಯ ತೊಂದರೆ ಇದ್ದರೆ ನಿಯಮಿತವಾಗಿ ಕಡ್ಲೆಹಿಟ್ಟನ್ನು ಸೇವಿಸುವ ಮೂಲಕ ಉತ್ತಮ ಪರಿಹಾರ ಪಡೆಯಬಹುದು. ಕಡ್ಲೆಹಿಟ್ಟಿನಲ್ಲಿರುವ ಕರಗದ ನಾರು ಕರುಳಿನಲ್ಲಿ ಮಲವನ್ನು ಸಡಿಲಗೊಳಿಸಿ ಸುಲಭವಿಸರ್ಜನೆಗೆ ನೆರವಾಗುತ್ತದೆ ಹಾಗೂ ಕರುಳಿನಲ್ಲಿ ಕಲ್ಮಶಪದಾರ್ಥಗಳು ಸುಲಭವಾಗಿ ಚಲಿಸಲು ಸಾಧ್ಯವಾಗುತ್ತದೆ.

ರಕ್ತಹೀನತೆಯನ್ನು ಕಡಿಮೆಗೊಳಿಸುತ್ತದೆ

ರಕ್ತಹೀನತೆಯನ್ನು ಕಡಿಮೆಗೊಳಿಸುತ್ತದೆ

ಕಡ್ಲೆಹಿಟ್ಟಿನಲ್ಲಿ ಕಬ್ಬಿಣದ ಅಂಶವೂ ಉತ್ತಮವಾಗಿದೆ. ನೂರು ಗ್ರಾಂ ಕಡ್ಲೆಹಿಟ್ಟಿನಲ್ಲಿ 4.9ಮಿಲಿಗ್ರಾಂ ಕಬ್ಬಿಣವಿದೆ ಹಾಗೂ ನಿಯಮಿತವಾಗಿ ಕಡ್ಲೆಹಿಟ್ಟನ್ನು ಸೇವಿಸುತ್ತಾ ಬರುವ ಮೂಲಕ ದೇಹದಲ್ಲಿ ಎದುರಾಗಿದ್ದ ಕಬ್ಬಿಣದ ಕೊರತೆ ಇಲ್ಲವಾಗುತ್ತದೆ ಹಾಗೂ ತನ್ಮೂಲಕ ರಕ್ತಹೀನತೆಯಾಗುವ ಸಾಧ್ಯತೆಯನ್ನೂ ಕಡಿಮೆಗೊಳಿಸುತ್ತದೆ. ಈ ಮಾಹಿತಿಯನ್ನು ನಿಮ್ಮ ಆಪ್ತರೊಂದಿಗೆ ಹಂಚಿಕೊಳ್ಳಿ.

English summary

Health Benefits Of Gram Flour (Besan)

Gram flour or chickpea flour, commonly known as besan in India, is popular for its beauty benefits. But this versatile ingredient also has its own share of health benefits which many aren't aware of. Gram flour is made by grinding chickpeas which are either raw or roasted. Chickpeas or Bengal grams form a staple food in the Indian cuisine.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more