For Quick Alerts
ALLOW NOTIFICATIONS  
For Daily Alerts

ನೋಡಿ, ಒಣದ್ರಾಕ್ಷಿ ತಿನ್ನುವುದರಿಂದ ನಿಮ್ಮ ಆರೋಗ್ಯಕ್ಕೆ ಇಷ್ಟೆಲ್ಲಾ ಪ್ರಯೋಜನಗಳಿವೆ!

|

ಸಾಮಾನ್ಯವಾಗಿ ನಮ್ಮ ಸಿಹಿತಿನಿಸು ಹಾಗೂ ಇತರ ಖಾದ್ಯಗಳ ನೋಟವನ್ನು ಉತ್ತಮಗೊಳಿಸಲು ಹಾಗೂ ರುಚಿಯನ್ನು ಹೆಚ್ಚಿಸಲು ಒಣದ್ರಾಕ್ಷಿಯನ್ನು ಕೊಂಚ ಸೇರಿಸಲಾಗುತ್ತದೆ. ಸಾಮಾನ್ಯ ದ್ರಾಕ್ಷಿಯನ್ನೇ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿದರೆ ಒಣದ್ರಾಕ್ಷಿ ದೊರಕುತ್ತದೆ. ಈ ಒಣದ್ರಾಕ್ಷಿಗಳ ಸೇವನೆಯಿಂದಲೂ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳಿವೆ. ಇವುಗಳಲ್ಲಿ ಪ್ರಮುಖವಾದ ಕೆಲವನ್ನು ಇಂದಿನ ಲೇಖನದ ಮೂಲಕ ಸಾದರಪಡಿಸಲಾಗುತ್ತದೆ.

ಈ ಅದ್ಭುತ ಒಣಫಲ ಹಲವು ವಿಟಮಿನ್, ಖನಿಜಗಳು ಮತ್ತು ಇತರ ಆರೋಗ್ಯವನ್ನು ಉತ್ತಮಗೊಳಿಸುವ ಸಂಯುಕ್ತಗಳನ್ನು ಹೊಂದಿದ್ದು ಒಟ್ಟಾರೆ ಆರೋಗ್ಯದ ವೃದ್ದಿಗೆ ತುಂಬಾ ಅಗತ್ಯವಾಗಿವೆ. ಅಲ್ಲದೇ ಹಲವಾರು ಕಾಯಿಲೆಗಳನ್ನು ತಡೆಗಟ್ಟಲೂ ನೆರವಾಗುತ್ತವೆ. ಒಂದು ವೇಳೆ ನೀವು ಒಣದ್ರಾಕ್ಷಿಯನ್ನು ಆಗಾಗ ಸಿಹಿ ತಿನಿಸುಗಳಲ್ಲದೇ ಪ್ರತ್ಯೇಕವಾಗಿ ತಿನ್ನದೇ ಇದ್ದಲ್ಲಿ ಇಂದಿನಿಂದಲೇ ಕೊಂಚ ಪ್ರಮಾಣವನ್ನು ನಿತ್ಯವೂ ತಿನ್ನುವ ಅಭ್ಯಾಸ ಮಾಡಿಕೊಳ್ಳಿ. ಇದರಿಂದ ಕೆಲವಾರು ಪ್ರಯೋಜನಗಳಿವೆ, ಇವುಗಳಲ್ಲಿ ಪ್ರಮುಖವಾದವು ಎಂದರೆ..

ತೂಕ ಹೆಚ್ಚಿಸಿಕೊಳ್ಳಲು ನೆರವಾಗುತ್ತದೆ

ತೂಕ ಹೆಚ್ಚಿಸಿಕೊಳ್ಳಲು ನೆರವಾಗುತ್ತದೆ

ಒಂದು ವೇಳೇ ನಿಮ್ಮ ತೂಕ ಅಗತ್ಯ ಕನಿಷ್ಟ ತೂಕಕ್ಕಿಂತಲೂ ಕಡಿಮೆ ಇದ್ದರೆ ಒಣದ್ರಾಕ್ಷಿ ಈ ಕೊರತೆಯನ್ನು ತುಂಬಬಲ್ಲುದು. ಹೌದು! ನೀವು ಸರಿಯಾಗಿಯೇ ಓದಿದಿರಿ. ಇದರಲ್ಲಿರುವ ಸಾಂದ್ರೀಕೃತ ಫ್ರುಕ್ಟೋಸ್ ಮತ್ತು ಗ್ಲೂಕೋಸ್ ಎಂಬ ಸಕ್ಕರೆಗಳು ತಕ್ಷಣವೇ ಶಕ್ತಿಯನ್ನು ಒದಗಿಸಲು ಶಕ್ತವಾಗಿವೆ. ಒಣದ್ರಾಕ್ಷಿಯಲ್ಲಿರುವ ವಿಟಮಿನ್ನುಗಳು, ಅಮೈನೋ ಆಮ್ಲಗಳು, ಖನಿಜಗಳು, ಸೆಲೆನಿಯಂ, ಗಂಧಕ ಮತ್ತು ಇತರ ಪೋಷಕಾಂಶಗಳು ನಿಮ್ಮ ಸ್ನಾಯುಗಳನ್ನು ಹುರಿಗಟ್ಟಿಸಲು ಹಾಗೂ ಬೆಳೆಯಲು ನೆರವಾಗುವ ಮೂಲಕ ಉತ್ತಮ ಆರೋಗ್ಯ ಮತ್ತು ರೋಗ ನಿರೋಧಕ ಶಕ್ತಿಯ ಜೊತೆಗೇ ಆರೋಗ್ಯಕರವಾಗಿ ತೂಕವನ್ನೂ ಹೆಚ್ಚಿಸುತ್ತದೆ.

ಮಲಬದ್ಧತೆಯನ್ನು ನಿವಾರಿಸುತ್ತದೆ

ಮಲಬದ್ಧತೆಯನ್ನು ನಿವಾರಿಸುತ್ತದೆ

ಒಂದು ವೇಳೆ ನಿಮಗೆ ಮಲಬದ್ದತೆಯುಂಟಾಗಿದ್ದರೆ ಹಾಗೂ ಇದು ಸತತವಾಗಿ ಕಾಡುತ್ತಿದ್ದು ಮನಃಶಾಂತಿಯನ್ನೇ ಕದಡಿದ್ದರೆ ಒಣದ್ರಾಕ್ಷಿಯ ಸೇವನೆಯನ್ನು ಇಂದಿನಿಂದಲೇ ಪ್ರಾರಂಭಿಸಿ. ಇವುಗಳಲ್ಲಿ ಉತ್ತಮ ಪ್ರಮಾಣ ಕರಗುವ ನಾರು ಇದೆ ಹಾಗೂ ತನ್ಮೂಲಕ ಕಲ್ಮಶಗಳನ್ನು ಮೃದುವಾಗಿಸಿ ಸುಲಭವಾಗಿ ವಿಸರ್ಜಿಸಲು ಸಾಧ್ಯವಾಗುವಂತೆ ಮಾಡುತ್ತದೆ. ತದ್ವಿರುದ್ದವಾಗಿ ಒಂದು ವೇಳೆ ಸತತವಾಗಿ ಅತಿಸಾರ ಮತ್ತು ಆಮಶಂಕೆ ಎದುರಾಗಿದ್ದರೂ ಒಣದ್ರಾಕ್ಷಿ ಇದನ್ನು ಸರಿಪಡಿಸಲು ನೆರವಾಗುತ್ತದೆ.

ಜ್ವರ ಇಳಿಯಲು ನೆರವಾಗುತ್ತದೆ

ಜ್ವರ ಇಳಿಯಲು ನೆರವಾಗುತ್ತದೆ

ಯಾವುದೋ ಕಾರಣಕ್ಕೆ ಜ್ವರ ಬಂದರೆ ಪತ್ನಿಯೊಡನೆ ಹೊರಹೋಗಿ ಊಟ ಮಾಡುವ ಕಾರ್ಯಕ್ರಮ ರದ್ದಾಯಿತೇ? ಇನ್ನು ಮುಂದೆ ಹೀಗಾಗದು! ಏಕೆಂದರೆ ಒಣದ್ರಾಕ್ಷಿಯನ್ನು ಸೇವಿಸುವ ಮೂಲಕ ಇದರಲ್ಲಿರುವ ಕ್ರಿಮಿನಾಶಕ, ಆಂಟಿಆಕ್ಸಿಡೆಂಟ್ ಗುಣಗಳು ಜ್ವರಕ್ಕೆ ಕಾರಣವಾದ ಕ್ರಿಮಿಗಳನ್ನು ಕೊಂದು ಹಲವಾರು ಬ್ಯಾಕ್ಟೀರಿಯಾಗಳ ಸೋಂಕಿನಿಂದ ರಕ್ಷಣೆ ಒದಗಿಸುತ್ತದೆ.

Most Read:ಖಾಲಿ ಹೊಟ್ಟೆಯಲ್ಲಿ ನೆನೆಸಿಟ್ಟ ಒಣದ್ರಾಕ್ಷಿ ಸೇವಿಸಿದರೆ ಹತ್ತಾರು ಲಾಭ

 ರಕ್ತಹೀನತೆಯನ್ನು ಹೋಗಲಾಡಿಸುತ್ತದೆ

ರಕ್ತಹೀನತೆಯನ್ನು ಹೋಗಲಾಡಿಸುತ್ತದೆ

ರಕ್ತದಲ್ಲಿ ಕಬ್ಬಿಣದ ಕೊರತೆಯಿಂದ ರಕ್ತಹೀನತೆ ಎದುರಾಗುತ್ತದೆ. ಒಣದ್ರಾಕ್ಷಿಗಳಲ್ಲಿ ಕಬ್ಬಿಣ ಮತ್ತು ವಿಟಮಿನ್ ಬಿ-ಕಾಂಪ್ಲೆಕ್ಸ್ ಪೋಷಕಾಂಶಗಳು ಹೇರಳವಾಗಿವೆ. ಇವು ಹೊಸ ರಕ್ತಕಣಗಳನ್ನು ನಿರ್ಮಿಸಲು ಅಗತ್ಯವಾಗಿದ್ದು ನಿಯಮಿತವಾದ ಸೇವನೆಯಿಂದ ಶೀಘ್ರವೇ ರಕ್ತಹೀನತೆಯ ತೊಂದರೆ ಇಲ್ಲವಾಗುತ್ತದೆ. ಅಲ್ಲದೇ ರಕ್ತಕ್ಕೆ ಅಗತ್ಯವಾಗಿ ಬೇಕಾದ ತಾಮ್ರದ ಅಂಶವೂ ಒಣದ್ರಾಕ್ಷಿಯಲ್ಲಿದೆ.

Most Read:ಮನೆಯಲ್ಲಿ ಯಾರಿಗಾದರೂ ಜ್ವರವಿದ್ದರೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು

ಅಧಿಕ ರಕ್ತದೊತ್ತಡವನ್ನು ಕಡಿಮೆಗೊಳಿಸುತ್ತದೆ

ಅಧಿಕ ರಕ್ತದೊತ್ತಡವನ್ನು ಕಡಿಮೆಗೊಳಿಸುತ್ತದೆ

ಒಣದ್ರಾಕ್ಷಿಯಲ್ಲಿರುವ ಉತ್ತಮ ಪ್ರಮಾಣದ ಪೊಟ್ಯಾಶಿಯಂ ರಕ್ತನಾಳಗಳ ಸೆಡೆತವನ್ನು ಸಡಿಲಿಸಿ ಸುಲಭವಾಗಿ ಹಿಗ್ಗಲು ನೆರವಾಗುವಂತೆ ಮಾಡುತ್ತದೆ. ಒಣದ್ರಾಕ್ಷಿಯಲ್ಲಿರುವ ಕರಗುವ ನಾರು ರಕ್ತನಾಳಗಳು ಪೆಡಸಾಗಿರುವುದನ್ನು ಕಡಿಮೆಗೊಲಿಸಲು ನೆರವಾಗುತ್ತವೆ. ತನ್ಮೂಲಕ ರಕ್ತನಾಳಗಳಲ್ಲಿ ರಕ್ತಪರಿಚಲನೆ ಸರಾಗವಾಗಿ ನಡೆಯುತ್ತದೆ ಹಾಗೂ ಅಧಿಕ ರಕ್ತದೊತ್ತಡ ಸಾಮಾನ್ಯ ಸ್ಥಿತಿಗೆ ಬರುತ್ತದೆ.

English summary

health benefits of dry grapes will amaze you

Dry grapes (raisins), made by drying grapes in the sun or in driers, can be incorporated in snacks and desserts. Eating dry grapes boosts your health in multiple ways. We unearth some of the health benefits of these dry fruits.
X
Desktop Bottom Promotion