For Quick Alerts
ALLOW NOTIFICATIONS  
For Daily Alerts

ಕಾಫಿಹಿಟ್ಟಿನ ಬಗ್ಗೆ ಕೇಳಿದ್ದೀರಾ? ಇಲ್ಲಿದೆ ನೋಡಿ ಇದರ ಸಂಪೂರ್ಣ ಡಿಟೇಲ್ಸ್

|

ಕಾಫಿಯನ್ನು ಸವಿಯದ ಕನ್ನಡಿಗರೇ ಇಲ್ಲ. ನಮ್ಮ ಚಿಕ್ಕಮಗಳೂರಿನ ಕಾಫಿ ಜನಪ್ರಿಯವಾಗಿದ್ದು ಅಪ್ಪಟ ಕಾಫಿಪುಡಿಯನ್ನು ನೀರಿನಲ್ಲಿ ಕುದಿಸಿ ಹಾಲು ಸಕ್ಕರೆ ಬೆರೆಸಿ ಸವಿದರೆ ಈ ರುಚಿಯನ್ನು ಮರೆಯಲು ಸಾಧ್ಯವಿಲ್ಲ. ಆದರೆ ಕಾಫಿಹಿಟ್ಟು? ಹೊಸ ಪದದಂತೆ ಕೇಳುತ್ತಿದೆಯೆಲ್ಲಾ? ಹೌದು. ಕಾಫಿ ಹಿಟ್ಟು ಸಹಾ ಇಂದು ಲಭ್ಯವಿದ್ದು ಇದು ಕಾಫಿಪುಡಿಗಿಂತ ಭಿನ್ನವಾಗಿದೆ.

ಗೋಧಿಯಲ್ಲಿರುವ ಗ್ಲುಟೆನ್ ಎಂಬ ಗೋಂದಿನಂತಹ ಪದಾರ್ಥ ಹಲವರಿಗೆ ಒಗ್ಗದಿರುವ ಕಾರಣ ಹಾಗೂ ಗ್ಲುಟೆನ್ ಇತರರಿಗೂ ಜೀರ್ಣಿಸಿಕೊಳ್ಳಲು ಕೊಂಚ ಕಷ್ಟವಿರುವ ಕಾರಣ ಇದರ ಬದಲಿಗೆ ಗ್ಲುಟೆನ್ ರಹಿತ ಹಿಟ್ಟು ಉತ್ತಮ ಆಯ್ಕೆಯಾಗಿದೆ. ಈ ನಿಟ್ಟಿನಲ್ಲಿ ಕಾಫಿ ಹಿಟ್ಟು ಸಂಪೂರ್ಣವಾಗಿ ಗ್ಲುಟೆನ್ ರಹಿತವಾಗಿದ್ದು ಆರೋಗ್ಯಕ್ಕೆ ಉತ್ತಮವಾಗಿದೆ. ಬನ್ನಿ, ಈ ಹಿಟ್ಟಿನ ಆರೋಗ್ಯಕರ ಪ್ರಯೋಜನಗಳ ಬಗ್ಗೆ ಅರಿಯೋಣ...

 ಕಾಫಿ ಹಿಟ್ಟು ಎಂದರೇನು? ಇದನ್ನು ಹೇಗೆ ತಯಾರಿಸುತ್ತಾರೆ?

ಕಾಫಿ ಹಿಟ್ಟು ಎಂದರೇನು? ಇದನ್ನು ಹೇಗೆ ತಯಾರಿಸುತ್ತಾರೆ?

ಕಾಫಿಪುಡಿಯ ಬಗ್ಗೆ ನಿಮಗೆ ತಿಳಿದಿರಬಹುದು. ಕಾಫಿಗಿಡದ ಹಣ್ಣುಗಳನ್ನು ಚೆನ್ನಾಗಿ ಒಣಗಿಸಿ ಇದರ ಹೊರಕವಚವನ್ನು ನಿವಾರಿಸಿ ಒಳಗಣ ಬೀಜಗಳನ್ನು ಹುರಿದು ಕುಟ್ಟಿಪುಡಿಮಾಡಿದರೆ ಕಾಫಿ ಪುಡಿ ತಯಾರಾಗುತ್ತದೆ. ಕಾಫಿ ಬೀಜಗಳನ್ನು ಕವಚದಿಂದ ಬೇರ್ಪಡಿಸಿದ ಬಳಿಕ ಈ ಕವಚವನ್ನು ಇದುವರೆಗೆ ಎಸೆಯಲಾಗುತ್ತಿತ್ತು. ಆದರೆ ಈ ಕವಚಗಳನ್ನು ನುಣ್ಣಗೆ ಪುಡಿಮಾಡಿದರೆ ಸಿಗುವ ಉತ್ಪನ್ನವೇ ಕಾಫಿಹಿಟ್ಟು. ಇನ್ನು ಕಾಫಿ ಹಿಟ್ಟು ಎಂದಾಕ್ಷಣ ಇದರ ರುಚಿಯೂ ಕಾಫಿಯಂತೆಯೇ ಇರುತ್ತದೆ ಎಂದುಕೊಂಡಿದ್ದರೆ ನಿಮ್ಮ ಊಹೆ ಸಂಪೂರ್ಣವಾಗಿ ತಪ್ಪು. ಏಕೆಂದರೆ ಈ ಕವಚ ವಾಸ್ತವವಾಗಿ ಕಾಫಿಹಣ್ಣಿನ ಸಿಹಿಯಾದ ಹೊರತಿರುಳಾಗಿದ್ದು ಈಗ ಒಣಗಿದ್ದರೂ ತಿರುಳಿನ ಸಿಹಿಯನ್ನೇ ಹೊಂದಿರುತ್ತದೆ. ಇದೇ ಕಾಣಕ್ಕೆ ಸಿಹಿಪದಾರ್ಥಗಳನ್ನು ತಯಾರಿಸಲು ಈ ಹಿಟ್ಟನ್ನು ಸಕ್ಕರೆ ಬೆರೆಸದೇ ಬಳಸಬಹುದು.

Most Read: ಈ ವ್ಯಕ್ತಿ ದಿನಕ್ಕೆ ಮೂರು ಕಿ.ಲೋ.ಮಣ್ಣು, ಕಲ್ಲು ಮತ್ತು ಒಂದು ಇಟ್ಟಿಗೆ ತಿನ್ನುತ್ತಾನಂತೆ!

ಕಾಫಿ ಹಿಟ್ಟಿನ ಪೌಷ್ಟಿಕಾಂಶಗಳ ವಿವರ

ಕಾಫಿ ಹಿಟ್ಟಿನ ಪೌಷ್ಟಿಕಾಂಶಗಳ ವಿವರ

ಒಂದು ದೊಡ್ಡ ಚಮಚ (7.7 ಗ್ರಾಂ) ನಷ್ಟು ಕಾಫಿ ಹಿಟ್ಟಿನಲ್ಲಿ 34 ಕ್ಯಾಲೋರಿಗಳು, 310 ಮಿಲಿಗ್ರಾಂ ಪೊಟ್ಯಾಶಿಯಂ 1.8 ಮಿಲಿಗ್ರಾಂ ಸೋಡಿಯಂ, 6.5 ಗ್ರಾಂ ಒಟ್ಟು ಕಾರ್ಬೋಹೈಡ್ರೇಟುಗಳು, 5.2 ಗ್ರಾಂ ಕರಗುವ ನಾರು, 1.5 ಗ್ರಾಂ ಪ್ರೋಟೀನ್, 0.3 ಗ್ರಾಂ ಸಕ್ಕರೆ, 2ಶೇ. ವಿಟಮಿನ್ ಎ, 4 ಶೇಖಡಾ ಕ್ಯಾಲ್ಸಿಯಂ ಮತ್ತು 13 ಶೇಖಡಾ ಕಬ್ಬಿಣದ ಅಂಶಗಳಿವೆ. ಕಾಫಿಹಿಟ್ಟಿನ ಸೇವನೆಯ ಮೂಲಕ ಲಭಿಸುವ ಆರೋಗ್ಯಕರ ಪ್ರಯೋಜನಗಳು:

ತೂಕ ಇಳಿಕೆಯನ್ನು ಬೆಂಬಲಿಸುತ್ತದೆ

ತೂಕ ಇಳಿಕೆಯನ್ನು ಬೆಂಬಲಿಸುತ್ತದೆ

ಕಾಫಿ ಹಿಟ್ಟಿನಲ್ಲಿ ಕೊಬ್ಬು ಅತಿ ಕಡಿಮೆ ಇದೆ ಹಾಗೂ ಇತರ ಸಾಂಪ್ರಾದಾಯಿಕ ಹಿಟ್ಟುಗಳಿಗೆ ಹೋಲಿಸಿದರೆ ತೂಕ ಇಳಿಸುವವರಿಗೆ ಹೆಚ್ಚು ಸೂಕ್ತವಾಗಿದೆ. ಬಾದಾಮಿ ಮತ್ತು ಕೊಬ್ಬರಿಯ ಹಿಟ್ಟುಗಳಿಗೆ ಹೋಲಿಸಿದರೆ ಇದರಲ್ಲಿ ಅತಿ ಕಡಿಮೆ ಕೊಬ್ಬು ಇದೆ ಹಾಗೂ ತೂಕ ಇಳಿಸಲು ಯತ್ನಿಸುವವರ ಪ್ರಯತ್ನಗಳಿಗೆ ಗರಿಷ್ಟ ಬೆಂಬಲ ನೀಡುತ್ತದೆ.

ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ

ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ

ಆಹಾರದಲ್ಲಿ ಕರಗುವ ನಾರು ಮತ್ತು ಕರಗದ ನಾರು ಇರುವ ಮಹತ್ವವನ್ನು ನಾವೆಲ್ಲಾ ಅರಿತೇ ಇದ್ದೇವೆ. ಈ ನಾರುಗಳು ಜೀರ್ಣಕ್ರಿಯೆಯನ್ನು ಸರಾಗಗೊಳಿಸುವ ಜೊತೆಗೇ ಕರುಳಿನಲ್ಲಿ ತ್ಯಾಜ್ಯಗಳನ್ನು ಸಡಿಲಗೊಳಿಸಿ ಸುಲಭ ವಿಸರ್ಜನೆಗೆ ನೆರವಾಗುವ ಮೂಲಕ ಮಲಬದ್ದತೆಯಾಗದಂತೆ ನೋಡಿಕೊಳ್ಳುತ್ತವೆ. ಕಾಫಿ ಹಿಟ್ಟಿನಲ್ಲಿರೂ ಸುಮಾರು 5.2 ಗ್ರಾಂ ಒಟ್ಟು ನಾರು ಇದ್ದು ಇದರಲ್ಲಿ 1.8 ಗ್ರಾಂ ಕರಗುವ ನಾರು ಮತ್ತು 3.4 ಗ್ರಾಂ ಕರಗದ ನಾರು ಇದೆ. ಈ ಮೂಲಕ ಆಹಾರ ತುಂಬಾ ನಿಧಾನವಾಗಿ ಜೀರ್ಣಗೊಳ್ಳುತ್ತದೆ ಮತ್ತು ಹೊಟ್ಟೆಯನ್ನು ಹೆಚ್ಚು ಹೊತ್ತು ತುಂಬಿರುವ ಭಾವನೆ ಮೂಡಿಸಿ ಅನಗತ್ಯ ಆಹಾರಸೇವನೆಯಿಂದ ತಡೆಯುತ್ತದೆ. ಅಲ್ಲದೇ ಮಲವಿಸರ್ಜನೆ ಸುಲಭವಾಗಿ ಜರುಗಲು ನೆರವಾಗುವ ಮೂಲಕ ಮಲಬದ್ದತೆಯಿಂದ ರಕ್ಷಿಸುತ್ತದೆ.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಕಾಫಿ ಹಿಟ್ಟಿನಲ್ಲಿ ಹೆಚ್ಚಿನ ಪ್ರಮಾಣದ ಆಂಟಿ ಆಕ್ಸಿಡೆಂಟುಗಳಿವೆ ಹಾಗೂ ಇವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತವೆ. ಬ್ರಾಂಡೇಸ್ ವಿಶ್ವವಿದ್ಯಾಲಯದಲ್ಲಿ ಇತ್ತೀಚಿನ ಒಂದು ಅಧ್ಯಯನದ ಪ್ರಕಾರ ಕಾಫಿಹಿಟ್ಟಿನಲ್ಲಿ ಸಾಮಾನ್ಯ ಕಾಫಿಪುಡಿಯಲ್ಲಿರುವುದಕ್ಕಿಂತಲೂ ಹೆಚ್ಚು ಆಂಟಿ ಆಕ್ಸಿಡೆಂಟು ಗಳಿವೆ. ಏಕೆಂದರೆ ಹುರಿಯುವ ಸಮಯದಲ್ಲಿ ಕಾಫಿಬೀಜದಲ್ಲಿರುವ ಹಲವು ಪೋಷಕಾಂಶಗಳು ನಷ್ಟಗೊಳ್ಳುತ್ತವೆ. ಆಂಟಿ ಆಕ್ಸಿಡೆಂಟುಗಳು ಪ್ರಬಲವಾಗಿದ್ದಷ್ಟೂ ದೇಹದ ಮೇಲೆ ಧಾಳಿಯಿಡುವ ಫ್ರೀ ರ್‍ಯಾಡಿಕಲ್ ಎಂಬ ಕ್ಯಾನ್ಸರ್ ಕಾರಕ ಕಣಗಳ ವಿರುದ್ದ ರೋಗನಿರೋಧಕ ವ್ಯವಸ್ಥೆ ಅತ್ಯುತ್ತಮವಾಗಿರುತ್ತದೆ ಹಾಗೂ ಕ್ಯಾನ್ಸರ್ ಸಹಿತ ಹಲವಾರು ಕಾಯಿಲೆಗಳಿಂದ ರಕ್ಷಣೆ ಒದಗಿಸುತ್ತದೆ.

Most Read: 'S'ಅಕ್ಷರದಿಂದ ಪ್ರಾರಂಭವಾಗುವ ಹೆಸರಿನವರು, ಕಠಿಣ ಪರಿಶ್ರಮಿ ಹಾಗೂ ಮಗುವಿನಂತ ಮನಸ್ಸು...

ದೇಹದಲ್ಲಿ ದ್ರವ ಮತ್ತು ಎಲೆಕ್ಟ್ರೋಲೈಟುಗಳ ಸಮತೋಲನ ಸಾಧಿಸುತ್ತದೆ

ದೇಹದಲ್ಲಿ ದ್ರವ ಮತ್ತು ಎಲೆಕ್ಟ್ರೋಲೈಟುಗಳ ಸಮತೋಲನ ಸಾಧಿಸುತ್ತದೆ

ಕಾಫಿಹಿಟ್ಟಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಪೊಟ್ಯಾಶಿಯಂ ಒಂದು ಅವಶ್ಯಕ ಸೂಕ್ಷ್ಮಪೋಷಕಾಂಶವೂ ಆಗಿದ್ದು ಜೀವಕೋಶಗಳ ನಡುವಣ ದ್ರವದಲ್ಲಿ ಪ್ರಮುಖ ಧನ-ಅಯಾನ್ (cation) (ಒಂದು ಎಲೆಕ್ಟ್ರಾನ್ ಅನ್ನು ಗಳಿಸಿಕೊಂಡ ಅಣು) ಪಾತ್ರವನ್ನು ವಹಿಸುತ್ತದೆ ಹಾಗೂ ಈ ಮೂಲಕ ದೇಹದಲ್ಲಿ ದ್ರವ ಮತ್ತು ಎಲೆಕ್ಟ್ರೋಲೈಟು ಗಳ ನಡುವಣ ಸಮತೋಲನ ಸಾಧಿಸಲು ನೆರವಾಗುತ್ತದೆ. ಈ ಮೂಲಕ ನಮ್ಮ ದೇಹದ ಪ್ರತಿ ಜೀವಕೋಶ, ಅಂಗಾಂಶ ಮತ್ತು ನರಗಳ ಕಾರ್ಯನಿರ್ವಹಣೆಗೆ ಪೊಟ್ಯಾಶಿಯಂ ಅಗತ್ಯವಾಗಿದ್ದು ಕಾಫಿಹಿಟ್ಟು ಈ ಪೋಷಕಾಂಶವನ್ನು ಯಥೇಚ್ಛವಾಗಿ ಪೂರೈಸುತ್ತದೆ.

ಸೀಲಿಯಾಕ್ ಕಾಯಿಲೆ ಇರುವವರಿಗೂ ಸೂಕ್ತ

ಸೀಲಿಯಾಕ್ ಕಾಯಿಲೆ ಇರುವವರಿಗೂ ಸೂಕ್ತ

ಗೋಧಿ, ಬಾರ್ಲಿ ಮತ್ತು ರೈ ಮೊದಲಾದ ಧಾನ್ಯಗಳಲ್ಲಿರುವ ಗ್ಲುಟೆನ್ ಅನ್ನು ಕೆಲವರಿಗೆ ತಾಳಿಕೊಳ್ಳಲು ಸಾಧ್ಯವಿಲ್ಲ. ಈ ಅಹಾರಗಳನ್ನು ಸೇವಿಸಿದಾಗ ಇವರ ದೇಹದ ಸ್ವ-ರೋಗ ನಿರೋಧಕ ವ್ಯವಸ್ಥೆಯ ಒಂದು ಚಟುವಟಿಕೆಯನ್ನು ಪ್ರಚೋದಿಸುವ ಮೂಲಕ ಸಣ್ಣ ಕರುಳಿನ ಒಳಪದರವನ್ನು ಘಾಸಿಗೊಳಿಸುತ್ತದೆ. ಇದರಿಂದ ಆಹಾರದ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಾಧ್ಯವಾಗದೇ ಹೋಗುತ್ತದೆ ಹಾಗೂ ಉರಿ ಸಹಾ ಎದುರಾಗಬಹುದು. ಕಾಫಿಹಿಟ್ಟಿನಲ್ಲಿ ಗ್ಲುಟೆನ್ ಅಂಶ ಇಲ್ಲವೇ ಇಲ್ಲ. ಹಾಗಾಗಿ ಈ ಹಿಟ್ಟಿನಿಂದ ತಯಾರಿಸಿದ ಖಾದ್ಯಗಳನ್ನು ಗ್ಲುಟೆನ್ ಸಹಿಸದ (gluten sensitive) ವ್ಯಕ್ತಿಗಳೂ ಸುರಕ್ಷಿತವಾಗಿ ಸೇವಿಸಬಹುದು.

ಕಾಫಿ ಹಿಟ್ಟನ್ನು ಬಳಸುವ ವಿಧಾನಗಳು

ಕಾಫಿ ಹಿಟ್ಟನ್ನು ಬಳಸುವ ವಿಧಾನಗಳು

ಸಾಮಾನ್ಯವಾಗಿ ಮೈದಾ ಹಿಟ್ಟನ್ನು ಬಳಸಿ ತಯಾರಿಸಬಹುದಾದ ಎಲ್ಲಾ ಉತ್ಪನ್ನಗಳನ್ನು ಕಾಫಿ ಹಿಟ್ಟಿನಿಂದಲೂ ತಯಾರಿಸಬಹುದು. ಬ್ರೆಡ್, ಕುಕ್ಕೀಸ್, ಚಾಕಲೇಟು, ಮಫಿನ್, ಸಾಸ್ ಮತ್ತು ಇತರ ದ್ರವಾಹಾರಗಳನ್ನು ತಯಾರಿಸಬಹುದು. ಅಲ್ಲದೇ ನಿಮ್ಮ ನಿತ್ಯದ ಬೆಳಗ್ಗಿನ ಪೇಯವಾದ ಸ್ಮೂಥಿಗಳಲ್ಲಿಯೂ ಕೆಲವು ದೊಡ್ಡಚಮದಷ್ಟು ಕಾಫಿಹಿಟ್ಟನ್ನು ಬೆರೆಸಿ ಕುಡಿಯುವ ಮೂಲಕ ಹೆಚ್ಚಿನ ನಾರು ಮತ್ತು ರುಚಿಯನ್ನು ಪಡೆಯಬಹುದು.ಈ ಮಾಹಿತಿ ಉಪಯುಕ್ತವೆಂದು ಕಂಡುಬಂದರೆ ನಿಮ್ಮ ಆಪ್ತರೊಂದಿಗೆ ಹಂಚಿಕೊಳ್ಳಿ.

English summary

Health Benefits Of Coffee Flour You Should Know

Everyone is familiar with the beverage coffee. But, did you know that coffee flour exists too? Yes, that's right! Coffee flour is the new buzzed-about ingredient and is the latest gluten-free variety. Coffee flour has its own share of health benefits which we are going to discuss in this article.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more