Just In
Don't Miss
- Technology
ಬಿಎಸ್ಎನ್ಎಲ್ನ ಹೊಸ ನಡೆಗೆ ಖಾಸಗಿ ಟೆಲಿಕಾಂಗಳು ಗಪ್ಚುಪ್!
- Movies
ಈ ವರ್ಷ ಟ್ವಿಟ್ಟರ್ ನಲ್ಲಿ ಅತಿ ಹೆಚ್ಚು ಬಳಿಕೆಯಾದ ಹ್ಯಾಂಡಲ್ ಈ ನಟಿಯದ್ದು
- News
ಲಾರಿಗಳ ನಡುವೆ ಸರಣಿ ಅಪಘಾತ: ಓರ್ವ ಸಾವು, 7 ಮಂದಿಗೆ ಗಾಯ
- Sports
ಆಟದ ಮಧ್ಯೆ ಮಗುವಿಗೆ ಹಾಲುಣಿಸಿದ ಆಟಗಾರ್ತಿ; ಹೃದಯಗೆದ್ದ ಫೋಟೋ ವೈರಲ್
- Automobiles
ಪಾರ್ಕಿಂಗ್ ವೇಳೆ ಸಿಬ್ಬಂದಿ ಎಡವಟ್ಟು- ಮೊದಲ ಮಹಡಿಯಿಂದ ಜಿಗಿದ ಕಿಯಾ ಸೆಲ್ಟೊಸ್
- Finance
ಶೈಕ್ಷಣಿಕ ಸಾಲ ಮನ್ನಾ ಆಗುತ್ತಾ? ಏನಂತಾರೆ FM ನಿರ್ಮಲಾ ಸೀತಾರಾಮನ್
- Education
ಎಸ್ಎಸ್ಎಲ್ಸಿ ಪಾಸ್...ಚಾಲಕ ವೃತ್ತಿ ಅಂದ್ರೆ ನಂಗಿಷ್ಟ… ಹಾಗಿದ್ರೆ ಈ ಸಾರಿಗೆ ಸಂಸ್ಥೆ ನೇಮಕಾತಿಗೆ ಅರ್ಜಿ ಹಾಕ
- Travel
ಬೀಚ್ಗೆ ಹೋಗುವ ಮುನ್ನ ಈ ಸಂಗತಿಗಳು ನೆನಪಿನಲ್ಲಿರಲಿ
ಆರೋಗ್ಯ ಟಿಪ್ಸ್: ಸರ್ವರೋಗಕ್ಕೂ ವೀಳ್ಯದೆಲೆಯೇ ಮನೆಮದ್ದು...
ಭಾರತದಲ್ಲಿ ವೀಳ್ಯದೆಲೆಗೆ ಹೆಚ್ಚಿನ ಮಹತ್ವವಿದ್ದು, ಇದನ್ನು ತುಂಬಾ ಪವಿತ್ರವೆಂದು ಪರಿಗಣಿಸಲಾಗಿದೆ. ಕೆಲವೊಂದು ಪೂಜೆಗಳಿಗೂ ಇದನ್ನು ಬಳಸಲಾಗುತ್ತದೆ. ವೀಲ್ಯದೆಲೆ, ಅಡಿಕೆ ಹಾಗೂ ಸುಣ್ಣ ಹಾಕಿಕೊಂಡು ತಿನ್ನುವುದು ಹಿಂದಿನಿಂದಲೂ ಭಾರತೀಯರು ಸಂಪ್ರದಾಯ. ವೀಳ್ಯದೆಲೆಯಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಇವೆ. ಇದರಲ್ಲಿ ವಿಟಮಿನ್ ಸಿ, ಥೈಮೆನ್, ನಿಯಾಸಿನ್, ರಿಬೊಫ್ಲಾವಿನ್ ಮತ್ತು ಕ್ಯಾರೊಟೆನ್ ಹಾಗೂ ಕ್ಯಾಲ್ಸಿಯಂ ಅಧಿಕವಾಗಿದೆ.
ಬಳ್ಳಿಯಾಗಿರುವ ವೀಳ್ಯದೆಲೆಯ ಗಿಡವನ್ನು ನೀವು ಮನೆಯಲ್ಲೇ ಬೆಳೆಸಬಹುದು ಮತ್ತು ಇದನ್ನು ಶೃಂಗಾರ ಗಿಡವಾಗಿಯೂ ಬೆಳೆಸಬಹುದು. ಈ ಲೇಖನದಲ್ಲಿ ವೀಳ್ಯದೆಲೆಯಿಂದ ಸಿಗುವಂತಹ ಹಲವಾರು ರೀತಿಯ ಆರೋಗ್ಯ ಲಾಭಗಳ ಬಗ್ಗೆ ನಾವು ತಿಳಿಯುವ...
ವೀಳ್ಯದೆಲೆ ಸೇವನೆಯ ಆರೋಗ್ಯ ಲಾಭಗಳು

ತೂಕ ಕಳೆದುಕೊಳ್ಳಲು
ತೂಕ ಇಳಿಸಿಕೊಳ್ಳಲು ಬಯಸುವವರಿಗೆ ವೀಳ್ಯದೆಲೆಯು ತುಂಬಾ ಸಹಕಾರಿಯಾಗಲಿದೆ. ಇದು ದೇಹದಲ್ಲಿನ ಕೊಬ್ಬನ್ನು ಕರಗಿಸಿ, ಚಯಾಪಚಯ ಕ್ರಿಯೆ ಹೆಚ್ಚಿಸುವುದು.

ಕ್ಯಾನ್ಸರ್ ಗೆ ಕಾರಣವಾಗುವ ಕಾರ್ಸಿನೊಜೇನ್ಸ್ ಅಂಶವನ್ನು ತಡೆಯುವುದು
ಜೊಲ್ಲಿನಲ್ಲಿ ಆಸ್ಕೋರ್ಬಿಕ್ ಆಮ್ಲವನ್ನು ನಿಯಂತ್ರಿಸುವಂತಹ ವೀಳ್ಯದೆಲೆಯು ಬಾಯಿಯ ಕ್ಯಾನ್ಸರ್ ತಡೆಯುವುದು. 10-12 ವೀಳ್ಯದೆಲೆಯನ್ನು ನೀರಿನಲ್ಲಿ ಕೆಲವು ನಿಮಿಷ ಕಾಲ ಬಿಸಿ ಮಾಡಿ ಮತ್ತು ಬಿಸಿ ಮಾಡಿದ ನೀರಿಗೆ ಜೇನುತುಪ್ಪ ಹಾಕಿ. ಇದನ್ನು ಪ್ರತಿನಿತ್ಯ ಸೇವನೆ ಮಾಡಿದರೆ ನೆರವಾಗುವುದು.
Most Read: ಮೊಡವೆಯ ಸಮಸ್ಯೆ-ನಿವಾರಣೆಗೆ ಬರೀ ಒಂದೇ-ಒಂದು ಚಮಚ ಹರಳೆಣ್ಣೆ ಸಾಕು!

ಗಾಯ ಶಮನಗೊಳಿಸುವುದು
ವೀಳ್ಯದೆಲೆಯು ಗಾಯ ಶಮನಗೊಳಿಸುವುದು. ವೀಳ್ಯದೆಲೆಯನ್ನು ಗಾಯಕ್ಕೆ ಹಚ್ಚಿಕೊಂಡಾಗ ಅಥವಾ ಅದರ ಬ್ಯಾಂಡೇಜ್ ಹಾಕಿದಾಗ ಗಾಯವು ಬೇಗನೆ ಒಣಗಲು ನೆರವಾಗುವುದು. ಇದನ್ನು ಆಯುರ್ವೇದದಲ್ಲಿ ಸುಟ್ಟ ಗಾಯಗಳ ಚಿಕಿತ್ಸೆಗೆ ಹೆಚ್ಚು ಬಳಸಲಾಗುವುದು.
Most Read: ಅಕ್ಟೋಬರ್ 2018ರ ತಿಂಗಳ ಭವಿಷ್ಯ-ನಿಮ್ಮದೂ ಪರಿಶೀಲಿಸಿಕೊಳ್ಳಿ

ತಲೆನೋವು ನಿಯಂತ್ರಿಸಲು
ತೀವ್ರವಾಗಿ ತಲೆನೋವು ಕಾಡುತ್ತಲಿದ್ದರೆ ಆಗ ವೀಳ್ಯದೆಲೆಯು ತುಂಬಾ ಪರಿಣಾಮಕಾರಿಯಾಗಿ ಇದಕ್ಕೆ ಚಿಕಿತ್ಸೆ ನೀಡಲಿದೆ. ಇದನ್ನು ಜಜ್ಜಿಕೊಂಡು ಹೊರಗಿನಿಂದ ಹಚ್ಚಿಕೊಂಡಾಗ ಶಮನ ನೀಡುವುದು.

ಗಂಟಲಿನ ಊತಕ್ಕೆ
ಐದು ಮಿ.ಲೀ. ವೀಳ್ಯದೆಲೆರಸವನ್ನು ಒಂದು ಲೋಟ ಬಿಸಿನೀರಿಗೆ ಹಾಕಿ ಮತ್ತು ಬಾಯಿ ಮುಕ್ಕಳಿಸಿಕೊಳ್ಳಿ. ಇದು ಗಂಟಲಿನ ಊತ ಕಡಿಮೆ ಮಾಡುವುದು. ಗಾಯಕರು ತಮ್ಮ ಗಂಟಲನ್ನು ಸರಿಯಾಗಿಟ್ಟುಕೊಳ್ಳಲು ಈ ಚಿಕಿತ್ಸೆ ಮಾಡಿಕೊಳ್ಳುವರು.

ನಿಮಿರು ದೌರ್ಬಲ್ಯ ತಡೆಗೆ
ಆಯುರ್ವೇದದಲ್ಲಿ ವೀಳ್ಯದೆಲೆಯನ್ನು ನಿಮಿರು ದೌರ್ಬಲ್ಯ ಚಿಕಿತ್ಸೆಗೆ ಬಳಸಿಕೊಳ್ಳಲಾಗುತ್ತದೆ. ಊಟದ ಬಳಿಕ ನೀವು 1-2 ವೀಳ್ಯದಲೆ ತಿಂದರೆ ಅದರಿಂದ ನಿಮಿರುದೌರ್ಬಲ್ಯ ಸಮಸ್ಯೆಯು ಪರಿಹಾರವಾಗುವುದು. ಕೇಸರಿ, ಏಲಕ್ಕಿ, ಒಣ ತೆಂಗಿನ ತುಂಡುಗಳು, ದ್ರಾಕ್ಷಿ ಮತ್ತು ಸಕ್ಕರೆ ಹುಡಿಯನ್ನು ಈ ಎಲೆಯೊಂದಿಗೆ ತಿಂದರೆ ಮತ್ತಷ್ಟು ಪರಿಣಾಮಕಾರಿಯಾಗಿರುವುದು. ನಿಮಿರು ದೌರ್ಬಲ್ಯಕ್ಕೆ ಇದು ನೈಸರ್ಗಿಕ ಗಿಡಮೂಲಿಕೆ ಮನೆಮದ್ದು.

ಒಸಡುಗಳಲ್ಲಿ ಒಸರುವ ರಕ್ತ
ಬಾಯಿಯ ಆರೋಗ್ಯಕ್ಕೆ ವೀಳ್ಯದೆಲೆ ತುಂಬಾ ಉತ್ತಮ. ಇದರ ಸೇವನೆಯಿಂದ ಒಸಡುಗಳಲ್ಲಿ ಒಸರುತ್ತಿರುವ ರಕ್ತ ತಕ್ಷಣವೇ ನಿಲ್ಲುತ್ತದೆ. ಒಂದು ವೇಳೆ ಹಲವು ಕಡೆಗಳಿಂದ ಒಸಡುಗಳಲ್ಲಿ ರಕ್ತ ಒಸರುತ್ತಿದ್ದರೆ ಕೆಲವು ವೀಳ್ಯದೆಲೆಗಳನ್ನು ನೀರಿನಲ್ಲಿ ಬೇಯಿಸಿ, ತಣಿಸಿ ಅರೆದು ಲೇಪನವನ್ನು ರಕ್ತ ಜಿನುಗುತ್ತಿರುವೆಡೆ ದಪ್ಪನಾಗಿ ಹಚ್ಚಿಕೊಂಡು ರಾತ್ರಿಯಿಡೀ ಬಿಟ್ಟರೆ ಮರುದಿನ ಗುಣವಾಗಿರುತ್ತದೆ.

ಕೆಳಬೆನ್ನಿನ ನೋವಿಗೆ ಪರಿಹಾರ
ಒಂದು ವೇಳೆ ಕೆಳಬೆನ್ನಿನಲ್ಲಿ ನೋವಿದ್ದರೆ ಕೆಲವು ವೀಳ್ಯದೆಲೆಗಳನ್ನು ಅರೆದು ಈ ಲೇಪನವನ್ನು ನೋವಿರುವ ಭಾಗಕ್ಕೆ ಕೊಂಚ ಕೊಬ್ಬರಿ ಎಣ್ಣೆಯನ್ನು ಉಗುರುಬೆಚ್ಚಗಾಗಿಸಿ ಮಿಶ್ರಣ ಮಾಡಿ ಹಚ್ಚಿಕೊಂಡರೆ ನೋವು ಕಡಿಮೆಯಾಗುತ್ತದೆ.
Most Read: ಈ ಗ್ರಾಮದಲ್ಲಿ ಮನುಷ್ಯರು ಮತ್ತು ಪಕ್ಷಿಗಳಿಗೆ ಕಣ್ಣುಗಳೇ ಕಾಣಿಸುವುದಿಲ್ಲವಂತೆ!

ಆರೋಗ್ಯರಕ ನರಗಳು
ಒಂದು ವೇಳೆ ನರಗಳ ಸೆಳೆತ ಹಾಗೂ ನರಗಳು ದುರ್ಬಲವಾಗಿದ್ದರೆ ಹಾಗೂ ಸಂವೇದನೆ ಕಡಿಮೆಯಾಗಿದ್ದರೆ ವೀಳ್ಯದೆಲೆಯನ್ನು ಅರೆದು ಹಿಂಡಿ ಸಂಗ್ರಹಿಸಿದ ರಸ ಮತ್ತು ಸಮಪ್ರಮಾಣದ ಜೇನನ್ನು ಬೆರೆಸಿ ಕುಡಿಯುವ ಮೂಲಕ ಈ ದೌರ್ಬಲ್ಯವನ್ನು ಇಲ್ಲವಾಗಿಸುವ ಮೂಲಕ ಇದೊಂದು ಅತ್ಯುತ್ತಮ ಟಾನಿಕ್ ಆಗಿದೆ.

ತಾಯಿಹಾಲು ಹೆಚ್ಚಿಸಲು
ಸುಮಾರು ಎಂಟರಿಂದ ಹತ್ತು ಚೆನ್ನಾಗಿ ಬಲಿತ ವೀಳೆಯದೆಲೆಗಳ ಎರಡೂ ಬದಿಗೆ ಕೊಬ್ಬರಿ ಎಣ್ಣೆ ಹಚ್ಚಿ ಒಂದರ ಮೇಲೊಂದಿರಿಸಿ. ಇವನ್ನು ಒಟ್ಟಿಗಿರಿಸಲು ದಾರವನ್ನು ಸುತ್ತಿ ಒಂದು ಚಿಕ್ಕ ಗಂಟಾಗಿಸಿ. ಇದನ್ನು ಕಾವಲಿಯ ಮೇಲಿಟ್ಟು ಎಲೆಗಳು ಒಣಗುವವರೆಗೆ ಚಿಕ್ಕ ಉರಿಯಲ್ಲಿ ಬಿಸಿಮಾಡಿ. ಬಿಸಿಯಿದ್ದಂತೆಯೇ ಸ್ತನಗಳಿಗೆ ಶಾಖ ನೀಡುವುದರಿಂದ ತಾಯಿಹಾಲು ಹೆಚ್ಚುತ್ತದೆ.

ಈ ಎಲೆಗಳನ್ನು ಬಳಸುವ ಮೊದಲು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು
*ಅಸಿಡಿಟಿ, ಹೊಟ್ಟೆಯ ಅಲ್ಸರ್, ಮೈಗ್ರೇನ್, ಮೂತ್ರಕೋಶ, ಕ್ಷಯರೋಗ, ಅಪಸ್ಮಾರ ಮತ್ತು ಇತರ ಕೆಲವು ಮಾನಸಿಕ ಸಮಸ್ಯೆ ಇರುವಂತಹವರು ಇದನ್ನು ಬಳಸಬಾರದು.
*ಬೆಳೆದ ಎಲೆಗಳನ್ನು ಸೇವಿಸಬೇಡಿ ಅರ್ಧ ಚಿಗುರಿರುವಂತಹ ಎಲೆಗಳನ್ನು ನೀವು ಸೇವಿಸಿದರೆ ಒಳ್ಳೆಯದು. ಬೆಳೆದ ಎಲೆಗಳಲ್ಲಿನ ವೈದ್ಯಕೀಯ ಗುಣಗಳು ಮಾಯವಾಗುವುದು.