ಬಟರ್ ಫ್ರೂಟ್ ಹಣ್ಣನ್ನೂ ಮೀರಿಸುವ ಆರೋಗ್ಯಕಾರಿ ಆಮ್ರ ಸೊಪ್ಪಿನ ಜ್ಯೂಸ್!

Posted By: Sushma Charhra
Subscribe to Boldsky

ಅವತ್ತು ಬಸವನಗುಡಿಯ ಮಾರ್ಕೆಟ್ ನಲ್ಲಿ ಸುತ್ತಾಡಿ ಒಂದು ಅಂಗಡಿಯಲ್ಲಿ ಬಟರ್ ಫ್ರೂಟ್ ರೇಟ್ ಕೇಳಿದೆ. ಬರೋಬ್ಬರಿ ಕೆಜಿಗೆ 350 ರುಪಾಯಿ ಅಂದ್ರು. ಸ್ವಲ್ಪ ಕಡಿಮೆ ಮಾಡ್ಕೊಳ್ರಿ ಅಂದ್ರೆ ನಮಗೆ ಬರಲ್ಲ ನಿಮಗೆಲ್ಲಿಂದ ಕೋಡೋದು ಮೇಡಂ ಎಂದು ಮುಖಕ್ಕೆ ಹೊಡೆದ ಹಾಗೆ ಹೇಳಿಬಿಟ್ಟ ಅಂಗಡಿಯವ. ಅಟ್ ಲೀಸ್ಟ್ 325 ಆದ್ರೂ ಮಾಡ್ಕೊಳ್ರಿ ಅಂತ ಹೇಳಿದ್ರೆ ಆಗಲ್ಲ ಬಿಡಿ ಮೇಡಂ ಒಂದು ರುಪಾಯಿಯನ್ನೂ ಕಡಿಮೆ ಮಾಡಲ್ಲ ಎಂದು ಹಣ್ಣನ್ನು ಮುಟ್ಟಿ ನೋಡೋಕೂ ಬಿಡಲಿಲ್ಲ. ಹೋಗಲಿ ಬೇಡ ಬಿಡಿ ಎಂದು ಸುಮ್ಮನೆ ಅಲ್ಲಿಂದ ಹಿಂತಿರುಗಿದೆ.

ನಂತರ ಜ್ಯೂಸ್ ಸೆಂಟರ್ ಗೆ ಬಂದು ಬಟರ್ ಫ್ರೂಟ್ ಜ್ಯೂಸಿಗೆ ಎಷ್ಟು ರೇಟು ಕೇಳಿದೆ. 60 ರುಪಾಯಿ ಎಂದು ಬಿಡಬೇಕಾ.. ಅಯ್ಯೋ ಆಸಾಮಿ. ಅಷ್ಟು ಸಣ್ಣ ಗ್ಲಾಸಲ್ಲಿ ಕೋಡೋ ಜ್ಯೂಸಿಗೆ 60 ರುಪಾಯಿಯ ಎಂದು ಮನಸ್ಸಲ್ಲೇ ಲೆಕ್ಕ ಹಾಕೋಕೆ ಆರಂಭಿಸಿ, ಹಣ್ಣು ತಂದಿದ್ರೆ ಚೀಪ್ ಆಗ್ತಿತ್ತು ಅನ್ನಿಸಿ ಬಿಡ್ತು. 350 ರುಪಾಯಿಗೆ ಒಂದು ಕೆಜಿ ತಂದ್ರೆ ಮಿನಿಮಮ್ 10 ಗ್ಲಾಸ್ ಜ್ಯೂಸ್ ಮಾಡ್ಕೋಬಹುದು ಎಂದು ಅಲ್ಲಿಂದಲೂ ವಾಪಾಸ್ ಬಂದೆ..ಬಹಳ ಬೇಸರವಾಯ್ತು. ಯಾಕೆ ಎಂದು ಕೇಳುತ್ತಿದ್ದೀರಾ.. ಮುಂದೆ ಓದಿ.... 

ಬಟರ್ ಫ್ರೂಟ್ ಹಣ್ಣಿನ ಜ್ಯೂಸ್ ನ್ನೂ ಮೀರಿಸುವ ಗುಣ ಇದರಲ್ಲಿದೆ

ಬಟರ್ ಫ್ರೂಟ್ ಹಣ್ಣಿನ ಜ್ಯೂಸ್ ನ್ನೂ ಮೀರಿಸುವ ಗುಣ ಇದರಲ್ಲಿದೆ

ಹೌದು! ಬಟರ್ ಫ್ರೂಟ್ ಹಣ್ಣಿನ ಜ್ಯೂಸ್ ನ್ನೂ ಮೀರಿಸುವಂತ ರುಚಿ ಇದರಲ್ಲಿದೆ. ರುಚಿಯಲ್ಲಿ ಒಂದಕ್ಕೊಂದು ಸಾಮ್ಯತೆಯೂ ಇರೋದ್ರಿಂದ ಹೊಟ್ಟೆಗೆ, ನಾಲಗೆಗೆ ಸಮಾಧಾನವೂ ಆಗ್ತಿತ್ತು ಅಂದುಕೊಂಡೆ. ಅದೇ ಒಂದು ವಾರದಲ್ಲಿ ಯಾವುದೋ ಬೇರೆ ಕಾರಣದಿಂದ ಊರಿನ ಬಸ್ ಹತ್ತಿದ್ದೆ. ಊರಿಗೆ ಬಂದಾಗೆಲ್ಲ ಆಮ್ರ ಸೊಪ್ಪಿನ ಜ್ಯೂಸ್ ಮಾಡಿ ಕುಡಿಯೋದನ್ನು ನಾನಂತೂ ಮರೆಯೋದಿಲ್ಲ.

ಬಟರ್ ಫ್ರೂಟ್ ಹಣ್ಣಿನ ಜ್ಯೂಸ್ ನ್ನೂ ಮೀರಿಸುವ ಗುಣ ಇದರಲ್ಲಿದೆ

ಬಟರ್ ಫ್ರೂಟ್ ಹಣ್ಣಿನ ಜ್ಯೂಸ್ ನ್ನೂ ಮೀರಿಸುವ ಗುಣ ಇದರಲ್ಲಿದೆ

ಬೆಂಗಳೂರಿನಲ್ಲಿ ದುಡ್ಡೊಂದು ಇದ್ರೆ ಏನು ಬೇಕಾದ್ರೂ ಸಿಗುತ್ತೆ ಅಂತ ಹೇಳಲಾಗುತ್ತೆ. ಆದ್ರೆ ಇದುವರೆಗೆ ನಾನು ಯಾವ ಮಾರ್ಕೆಟ್ ನಲ್ಲೂ ಆಮ್ರ ಸೊಪ್ಪನ್ನು ನೋಡಿಲ್ಲ. ಬೆಂಗಳೂರಿಗರಿಗೆ ಅದೆಲ್ಲಿಂದ ಸಿಗಬೇಕು ಹೇಳಿ..ಬಹುಶ್ಯಃ ಆ ಸೊಪ್ಪು ಅವರಿಗೆ ಪರಿಚಯವೇ ಇಲ್ಲ. ಮಾರ್ಕೆಟ್ ನಲ್ಲೂ ಲಭ್ಯವಿರೋದಿಲ್ಲ. ನಿಜಕ್ಕೂ ಬೆಂಗಳೂರಿನ ಬೇಸಿಗೆಯ ಬಿಸಿಗೆ ಈ ಸೊಪ್ಪು ಮಾರ್ಕೆಟ್ ನಲ್ಲಿ ಲಭ್ಯವಿದ್ದಿದ್ದರೆ ಚೆನ್ನಾಗಿರುತ್ತಿತ್ತು. ಯಾರ್ಯಾರಿಗೆ ಈ ಸೊಪ್ಪು ಪರಿಚಯವೇ ಇಲ್ಲವೋ ಅವರು ಖಂಡಿತ ಅವರು ಈ ಲೇಖನ ಓದಲೇಬೇಕು.. ಮುಂದೆ ಓದಿ.. ಮೊದಲಿಗೆ ಜ್ಯೂಸ್ ಮಾಡುವ ಬಗೆ ಹೇಗೆ ಅನ್ನೋದನ್ನು ತಿಳಿಯೋಣ. ನಂತರ ಅದರ ಆರೋಗ್ಯ ಲಾಭದ ಬಗ್ಗೆ ಮಾಹಿತಿ ಪಡೆಯೋಣ.

ಮಾಡುವ ಬಗೆ..

ಮಾಡುವ ಬಗೆ..

ಆಮ್ರ ಸೊಪ್ಪಿನ ಜ್ಯೂಸ್ ಮಾಡೋದು ಕಷ್ಟದ ವಿಷಯವೇ ಅಲ್ಲ. ಬೇರೆ ಜ್ಯೂಸ್ ಗಳಿಗಿಂತ ಇದು ಭಾರೀ ಸುಲಭ. ಒಂದಷ್ಟು ಆಮ್ರ ಸೊಪ್ಪನ್ನು ತೊಳೆದು ಕ್ಲೀನ್ ಮಾಡಿಕೊಂಡು ಶುದ್ಧ ನೀರಿನಲ್ಲಿ ಕಿವುಚಿ... ಆಗ ನೀರು ಹಸಿರು ಬಣ್ಣವಾಗುತ್ತೆ ಮತ್ತು ದಪ್ಪವಾಗುತ್ತೆ. ಅದಕ್ಕೆ ಸಕ್ಕರೆ ಅಥವಾ ಬೆಲ್ಲ ಸೇರಿಸಿ ಕುಡಿದರೆ ರುಚಿರುಚಿ ಆಮ್ರ ಸೊಪ್ಪಿನ ಜ್ಯೂಸ್ ನಿಮ್ಮ ದೇಹಕ್ಕೆ ಹಲವು ಅನುಕೂಲಗಳನ್ನು ಮಾಡುತ್ತೆ. ಹಾಗಾದರೆ ಆಮ್ರ ಸೊಪ್ಪಿನ ಜ್ಯೂಸ್ ಕುಡಿಯೋದ್ರಿಂದ ಆಗುವ ಲಾಭಗಳೇನು ಅನ್ನೋ ಪ್ರಶ್ನೆ ನಿಮ್ಮಲ್ಲಿದ್ದರೆ ಅದರ ಉತ್ತರಕ್ಕಾಗಿ ಈ ಲೇಖನ ಮುಂದೆ ಓದಿ...

ಬಿಸಿಲಿನ ಬೇಗೆಯಿಂದ ರಕ್ಷಣೆ

ಬಿಸಿಲಿನ ಬೇಗೆಯಿಂದ ರಕ್ಷಣೆ

ಬೇಸಿಗೆಯ ಬಿಸಿಲನ್ನು ಸಹಿಸಿಕೊಳ್ಳೋದು ಅಷ್ಟು ಸುಲಭವಲ್ಲ. ಉರಿಉರಿ ಸೆಖೆಯನ್ನು ಸಹಿಸಿಕೊಂಡು ದೇಹದ ಆರೋಗ್ಯ ಕಾಪಾಡಿಕೊಳ್ಳೋದು ಬಹಳ ಕಷ್ಟ. ಬೇಸಿಗೆಯಲ್ಲಿ ಹಣ್ಣು , ಜ್ಯೂಸ್ ಗಳನ್ನು ಹೆಚ್ಚು ಸೇವಿಸುತ್ತಿರಿ ಎಂದು ವೈದ್ಯರು ಸಲಹೆ ನೀಡುತ್ತಾರೆ. ಆದರೆ ಪಾಲಿಸುವವರು ಎಷ್ಟು ಮಂದಿ ತಿಳಿಯದು. ಜ್ಯೂಸ್ ಸೆಂಟರ್ ಗೆ ಕಾಲಿಟ್ಟರೆ ಕೆಲವೇ ಕೆಲವು ರೆಗ್ಯುಲರ್ ಹಣ್ಣಿನ ಜ್ಯೂಸ್ ಗಳು ಲಭ್ಯವಿರುತ್ತೆ. ಆದ್ರೆ ಹಳ್ಳಿಗರಿಗೆ ಅದು ಕಾಲಕ್ಕೆ ತಕ್ಕಂತೆ ಲಭ್ಯವಿರುತ್ತೆ. ಎಲ್ಲಾ ಕಾಲದಲ್ಲೂ ಲಭ್ಯವಿರುವ ಸೊಪ್ಪಾಗಿರುವ ಆಮ್ರ ಸೊಪ್ಪು ಬೇಸಿಗೆಯಲ್ಲಿ ಅಮೃತವಿದ್ದಂತೆ. ಅದನ್ನು ಜ್ಯೂಸ್ ಮಾಡಿ ಕುಡಿಯೋದ್ರಿಂದ ಬೇಸಿಗೆಯ ಬಿರುಬೇಸಿಗೆಯ ಉರಿಯನ್ನು ತಡೆದುಕೊಳ್ಳಬಹುದು. ಆದಷ್ಟು ಇಂತಹ ಸೊಪ್ಪಿನ ಜ್ಯೂಸ್ ನಿಮ್ಮ ಆರೋಗ್ಯಕ್ಕೆ ಹಿತವಾದದ್ದು.

ತಲೆ ಸುತ್ತುವಿಕೆಗೆ ಪರಿಹಾರ

ತಲೆ ಸುತ್ತುವಿಕೆಗೆ ಪರಿಹಾರ

ಬೇರೆಬೇರೆ ಕಾರಣದಿಂದ ಉಂಟಾಗುವ ತಲೆಸುತ್ತುವಿಕೆ ಸಮಸ್ಯೆಗೆ ಆಮ್ರ ಸೊಪ್ಪಿನ ಜ್ಯೂಸ್ ಪರಿಹಾರ ನೀಡುತ್ತೆ. ಪ್ರಗ್ನೆನ್ಸಿಯಲ್ಲಿ ಕೆಲವರಿಗೆ ತಲೆಸುತ್ತುವಿಕೆ ಕಾಣಿಸಿಕೊಳ್ಳುತ್ತೆ. ಆಗ ಆಮ್ರ ಸೊಪ್ಪಿನ ಜ್ಯೂಸ್ ಮಾಡಿ ಸೇವಿಸುವುದು ಒಳಿತು.

ಡಿಹೈಡ್ರೇಷನ್ ಸಮಸ್ಯೆಯನ್ನು ನಿವಾರಿಸುತ್ತೆ

ಡಿಹೈಡ್ರೇಷನ್ ಸಮಸ್ಯೆಯನ್ನು ನಿವಾರಿಸುತ್ತೆ

ದೇಹಕ್ಕೆ ಅಗತ್ಯ ನೀರಿನ ಪೂರೈಕೆಯಾಗದೇ ಇದ್ದಲ್ಲಿ ದೇಹಕ್ಕೆ ಹಲವು ಸಮಸ್ಯೆಗಳು ಕಾಡುತ್ತೆ. ಅಜೀರ್ಣ, ವಾಂತಿ ಬರುವಂತೆ ಆಗುವುದು, ತಲೆನೋವು ಹೀಗೆ ಒಂದಕ್ಕೊಂದು ಕೊಂಡಿಯಿದ್ದಂತೆ. ಆದ್ರೆ ಪ್ರತಿ ದಿನ ಒಂದು ಲೋಟದಷ್ಟು ಆಮ್ರ ಸೊಪ್ಪಿನ ಜ್ಯೂಸ್ ಕುಡಿಯೋದ್ರಿಂದ ನಿಮ್ಮ ದೇಹಕ್ಕೆ ಅಗತ್ಯ ನೀರಿನ ಪೂರೈಕೆಯಾಗುತ್ತೆ. ಡಿಹೈಡ್ರೇಷನ್ ಆದಾಗ ಕೂಡಲೇ ಆಮ್ರ ಸೊಪ್ಪಿನ ಜ್ಯೂಸ್ ಕುಡಿಯೋದ್ರಿಂದ ತಕ್ಷಣವೇ ಪರಿಹಾರ ದೊರಕಲಿದೆ.

ದೇಹದ ಉಷ್ಣತೆಯನ್ನು ಕಡಿಮೆಗೊಳಿಸುತ್ತೆ

ದೇಹದ ಉಷ್ಣತೆಯನ್ನು ಕಡಿಮೆಗೊಳಿಸುತ್ತೆ

ದೇಹದ ಉಷ್ಣತೆ ಅಧಿಕಗೊಂಡಾಗ ತಂಪಾಗಿಸುವುದು ಬಹಳ ಮುಖ್ಯ. ಇಲ್ಲದೇ ಹೋದಲ್ಲಿ ಉರಿಮೂತ್ರದಂತ ಸಮಸ್ಯೆ ನಿಮ್ಮನ್ನು ಬಾಧಿಸಿ ಬಿಡುತ್ತೆ. ಕಣ್ಣು ಉರಿ, ಕಣ್ಣು ನೋವು, ತಲೆನೋವು ಇತ್ಯಾದಿ ಸಮಸ್ಯೆಗಳು ದೇಹದ ಹೆಚ್ಚಾದರೆ ಶುರುವಾಗಿ ಬಿಡುತ್ತೆ. ದೇಹವನ್ನು ತಂಪುಗೊಳಿಸುವ ತಾಕತ್ತು ಆಮ್ರಸೊಪ್ಪಿಗಿದೆ. ದಿನಕ್ಕೆ ನಾಲೈದು ಬಾರಿ ಆಮ್ರ ಸೊಪ್ಪಿನ ಜ್ಯೂಸ್ ನ್ನು ಕುಡಿಯೋದ್ರಿಂದ ದೇಹದ ಉಷ್ಣತೆ ಕಡಿಮೆಯಾಗಿ ನಿಮ್ಮನ್ನು ಆರಾಮಾಗಿ ಇರುವಂತೆ ಮಾಡುತ್ತೆ.

ಪಿತ್ತದ ಸಮಸ್ಯೆ

ಪಿತ್ತದ ಸಮಸ್ಯೆ

ಪಿತ್ತದ ಸಮಸ್ಯೆಯಿಂದ ಬಳಲುವವರಿಗೆ ಆಮ್ರ ಸೊಪ್ಪು ಬಹಳ ಉಪಕಾರಿ. ಆಯುರ್ವೇದದ ಪ್ರಕಾರ ವಾತ, ಪಿತ್ತ, ಕಫ ಸಮಸ್ಯೆಯೇ ಎಲ್ಲಾ ಕಾಯಿಲೆಗಳಿಗೂ ಮೂಲ. ಪಿತ್ತದ ಸಮಸ್ಯೆಯು ಹಲವು ದೈಹಿಕ ಸಮಸ್ಯೆಗಳನ್ನು ಹುಟ್ಟು ಹಾಕುತ್ತೆ ಅನ್ನೋದು ಆಯುರ್ವೇದ ವಾದ. ಅದಕ್ಕಾಗಿ ಹಲವು ಸೊಪ್ಪುಗಳಿಂದ ಪರಿಹಾರ ಪಡೆಯಬಹುದು. ಅದರಲ್ಲೊಂದು ಆಮ್ರ ಸೊಪ್ಪು. ಆಗಾಗ ಆಮ್ರ ಸೊಪ್ಪಿನ ಜ್ಯೂಸ್ ಕುಡಿಯೋದ್ರಿಂದ ಪಿತ್ತದ ಸಮಸ್ಯೆ ನಿವಾರಣೆಯಾಗುತ್ತೆ.

English summary

HEALTH BENEFITS OF AMBRA LEAF…

Ambra leaf is rich in vitamins, minerals and phytonutrients and it is the most versatile food. Ambra leaf provides essential nutrients and energy to kids and adults alike and it is great for improving your cognitive functions. It can be added as a part of your daily diet due to its profound health benefits.