For Quick Alerts
ALLOW NOTIFICATIONS  
For Daily Alerts

ನೋಡಿ ಇಂತಹ ಕೆಟ್ಟ ಅಭ್ಯಾಸಗಳೇ, ನಿಮ್ಮ ಆರೋಗ್ಯ ಕೆಡಿಸುತ್ತದೆ!

By Hemanth
|

ಕೆಲವೊಂದು ಸಾಮಾನ್ಯ ಅಭ್ಯಾಸಗಳಿಂದ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು. ಇದರಲ್ಲಿ ಪ್ರಮುಖವಾಗಿ ನಾವು ತಿನ್ನುವಂತ ಆಹಾರ ಕುಡ ಒಳಗೊಂಡಿದೆ. ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಇಂದಿನ ದಿನಗಳಲ್ಲಿ ಒತ್ತಡವೆನ್ನುವುದು ಇದ್ದೇ ಇರುತ್ತದೆ. ಆದರೆ ಅತಿಯಾದ ಒತ್ತಡಕ್ಕೆ ಸಿಲುಕಿ ಸಮಯವಲ್ಲದ ಸಮಯದಲ್ಲಿ ಜಂಕ್ ಫುಡ್ ತಿನ್ನುವುದರಿಂದ ಅದು ದೇಹಕ್ಕೆ ತುಂಬಾ ಅಪಾಯಕಾರಿ. ನಮ್ಮ ಕೆಲವೊಂದು ಅಭ್ಯಾಸಗಳು ಮತ್ತು ಜೀವನಶೈಲಿ ಆರೋಗ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಏನು ತಿನ್ನುತ್ತೇವೆ ಹಾಗೂ ನಮ್ಮ ದೇಹದ ಬಗ್ಗೆ ಎಷ್ಟು ಕಾಳಜಿ ವಹಿಸುತ್ತೇವೆ ಎನ್ನುವುದು ನಮ್ಮ ಆರೋಗ್ಯವನ್ನು ಅವಲಂಬಿಸಿರುವುದು. ಇದು ದೇಹದ ಒಳಗೆ ಹಾಗೂ ಹೊರಗಿನ ಆರೋಗ್ಯ ಕಾಪಾಡುವುದು.

ಮಾನವ ದೇಹದಲ್ಲಿರುವಂತಹ ಹಲವಾರು ಅಂಗಾಂಗಗಳು ಅವುಗಳದ್ದೇ ಆಗಿರುವ ಕಾರ್ಯ ಹೊಂದಿರುವುದು. ದೇಹದ ಪ್ರತಿಯೊಂದು ಅಂಗವು ಅತೀ ಅಗತ್ಯ ಮತ್ತು ಯಾವುದೇ ಒಂದು ಅಂಗಕ್ಕೆ ಹಾನಿಯಾದರೆ ಅದರಿಂದ ಆರೋಗ್ಯ ವ್ಯತ್ಯಯ ಮತ್ತು ಪ್ರಾಣಹಾನಿ ಉಂಟಾಗಬಹುದು. ಈ ಕೆಳಗಿನ ಕೆಲವೊಂದು ಜೀವನಶೈಲಿಯು ನಿಮ್ಮ ಅಂಗಾಂಗಗಳ ಮೇಲೆ ಪರಿಣಾಮ ಬೀರಬಲ್ಲದು. ಇದು ಯಾವುದೆಂದು ನೀವು ತಿಳಿಯಿರಿ.

eating habbit

ಹೊಟ್ಟೆ- ತಣ್ಣಗಿನ ಆಹಾರ
ಅನಾರೋಗ್ಯಕರ ಆಹಾರವಾದ ಕರಿದ ಆಹಾರಗಳು, ಫಾಸ್ಟ್ ಫುಡ್, ಶುಚಿತ್ವವಿಲ್ಲದೆ ಇರುವ ಆಹಾರ ಸೇವನೆ ಮಾಡಿದರೆ ಅದರಿಂದ ನಮ್ಮ ಹೊಟ್ಟೆ ಮತ್ತು ಕರುಳಿಗೆ ಹಾನಿಯುಂಟು ಮಾಡಲಿದೆ. ತಂಪು ಆಹಾರ ಸೇವನೆಯಿಂದ ನಮ್ಮ ಹೊಟ್ಟೆ ಹಾಗೂ ಕರುಳಿಗೆ ತುಂಬಾ ಹಾನಿಯಾಗುತ್ತದೆ ಎಂದು ಹೆಚ್ಚಿನವರಿಗೆ ತಿಳಿದಿಲ್ಲ. ತಂಪು ಆಹಾರವು ಜೀರ್ಣಕ್ರಿಯೆ ವ್ಯವಸ್ಥೆಯಲ್ಲಿ ಜೀರ್ಣಕ್ರಿಯೆ ರಸ ಉತ್ಪತ್ತಿಯ ಮೇಲೆ ಪರಿಣಾಮ ಬೀರಿ ಗ್ಯಾಸ್, ಅಸಿಡಿಟಿ, ಹೊಟ್ಟೆ ಉಬ್ಬರ ಇತ್ಯಾದಿ ಉಂಟು ಮಾಡಬಹುದು. ಇದರಿಂದ ಬಿಸಿಯಾಗಿರುವ ಆಹಾರ ಸೇವನೆ ಮಾಡಿದರೆ ಒಲಿತು.

ಕಣ್ಣುಗಳು-ಮೊಬೈಲ್‌ಗಳ ಅತಿಯಾದ ಬಳಕೆ
ಆಧುನಿಕ ಯುಗದಲ್ಲಿ ದೇಶದ ಜನಸಂಖ್ಯೆಯಲ್ಲಿ ಅರ್ಧಕ್ಕಿಂತಲೂ ಹೆಚ್ಚಿನವರಲ್ಲಿ ಸ್ಮಾರ್ಟ್ ಫೋನ್ ಇದೆ. ಹೋಟೆಲ್ ನಿಂದ ಆಹಾರ ತರಿಸಿಕೊಳ್ಳುವುದರಿಂದ ಹಿಡಿದು, ಕೆಲಸಕ್ಕೆ ಹೋಗಲು ಟ್ಯಾಕ್ಸಿ, ಬ್ಯಾಂಕ್ ವ್ಯವಹಾರ ಮತ್ತು ಮಾತುಕತೆಗೆ ಮೊಬೈಲ್ ಬಳಸುತ್ತೇನೆ. ಮೊಬೈಲ್ ಬಳಕೆ ಸಹಿತ ಕೆಲವರಿಗೆ ದಿನವಿಡೀ ಕಂಪ್ಯೂಟರ್ ಮುಂದೆ ಕುಳಿತುಕೊಂಡಿರಬೇಕಾಗುತ್ತದೆ. ಇವೆರಡೂ ಕಣ್ಣಿಗೆ ಹಾನಿಯುಂಟು ಮಾಡಬಹುದು. ಕಣ್ಣು ಒಣಗುವಂತೆ ಮಾಡುವುದು, ಕಿರಿಕಿರಿ ಮತ್ತು ದೃಷ್ಟಿ ಮಂದವಾಗುವ ಸಮಸ್ಯೆ ಬರಬಹುದು.

ಮೇದೋಜೀರಕ ಗ್ರಂಥಿ
ಮೇದೋಜೀರಕವು ಮಾನವ ಜೀವನದ ಒಂದು ಅಂಗ. ಆದರೆ ಇದು ಗ್ರಂಥಿಯಾಗಿ ಕೆಲಸ ಮಾಡುವುದು. ಯಾಕೆಂದರೆ ಇದು ಹಾರ್ಮೋನುಗಳನ್ನು ಸ್ರವಿಸುವುದು. ಇದು ಹೊಟ್ಟೆಯ ಭಾಗದಲ್ಲಿದೆ. ಇದು ನಾವು ಸೇವಿಸುವ ಆಹಾರವನ್ನು ಶಕ್ತಿ ಪರಿವರ್ತಿಸಿ ದೇಹಕ್ಕೆ ನೀಡುವುದು. ಆದರೆ ನಾವು ಅತಿಯಾಗಿ ಅಥವಾ ಅಗತ್ಯಕ್ಕಿಂತ ಹೆಚ್ಚಿಗೆ ಸೇವನೆ ಮಾಡಿದಾಗ ಮೇದೋಜೀರಕ ಗ್ರಂಥಿಯು ಎರಡು ಪಟ್ಟು ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ಇದು ದೀರ್ಘಾವಧಿಯಲ್ಲಿ ತೊಂದರೆ ಉಂಟು ಮಾಡುವುದು.

ಕರುಳು-ನಿಯಮಿತವಾಗಿ ಮಾಂಸಾಹಾರ ಸೇವನೆ
ಇಂದಿನ ದಿನಗಳಲ್ಲಿ ಹೆಚ್ಚಿನವರು ಸಸ್ಯಾಹಾರಿಗಳಾಗುತ್ತಿದ್ದಾರೆ. ಯಾಕೆಂದರೆ ಸಸ್ಯಾಹಾರವು ತುಂಬಾ ಆರೋಗ್ಯಕರ ಹಾಗೂ ಸುರಕ್ಷಿತವೆನ್ನಲಾಗುತ್ತಿದೆ. ಅಧ್ಯಯನಗಳ ಪ್ರಕಾರ ಕೆಲವೊಂದು ರೀತಿಯ ಮಾಂಸಗಳಾದ ಹಂದಿ, ದನದ ಮಾಂಸ ಮತ್ತು ಕೊಬ್ಬು ಇರುವಂತಹ ಇತರ ಆಹಾರಗಳು ಕರುಳಿನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದು. ಇದು ಆರೋಗ್ಯಕಾರಿ ಬ್ಯಾಕ್ಟೀರಿಯಾ ಉತ್ಪತ್ತಿಗೆ ತೊಂದರೆ ನೀಡುವುದು.

ಹೃದಯ- ಉಪ್ಪಿನಾಂಶವಿರುವ ಆಹಾರ
ಆರೋಗ್ಯ ತಜ್ಞರು ಮತ್ತು ಆರೋಗ್ಯ ಸಲಹೆಗಾರರು ಅತಿಯಾಗಿ ಉಪ್ಪಿರುವಂತ ಆಹಾರ ಸೇವನೆ ಮಾಡಬಾರದೆಂದು ಹೇಳುತ್ತಾರೆ. ಯಾಕೆಂದರೆ ಅತಿಯಾಗಿ ಉಪ್ಪಿನಾಂಶವಿರುವ ಆಹಾರ ಸೇವನೆ ಮಾಡಿದರೆ ಅದರಿಂದ ಹೃದಯದ ಆರೋಗ್ಯಕ್ಕೆ ತೊಂದರೆಯಾಗುವುದು. ಉಪ್ಪಿನಿಂದಾಗಿ ರಕ್ತದೊತ್ತಡವು ಹೆಚ್ಚಾಗುವುದು. ರಕ್ತದೊತ್ತಡವು ಹೆಚ್ಚಾದಾಗ ಹೃದಯದ ಗೋಡೆಗಳು ದುರ್ಬಲಗೊಳ್ಳುವುದು ಮತ್ತು ರಕ್ತಸರಬರಾಜು ಮಾಡಲು ಹೃದಯವು ಕಠಿಣ ಶ್ರಮ ವಹಿಸಬೇಕಾಗುತ್ತದೆ. ಇದರಿಂದ ಹೃದಯಾಘಾತ ಮತ್ತು ಇತರ ಹೃದಯದ ಸಮಸ್ಯೆ ಕಾಡಬಹುದು.

ಯಕೃತ್-ಅತಿಯಾದ ಕೊಬ್ಬಿರುವ ಆಹಾರಗಳು
ಹೃದಯದಂತೆ ದೇಹದಲ್ಲಿ ಯಕೃತ್ ಕೂಡ ಪ್ರಮುಖ ಅಂಗ. ಇದು ಕೆಲವೊಂದು ಪ್ರಮುಖ ಕಾರ್ಯಗಳನ್ನು ಮಾಡುವುದು ಮತ್ತು ಸಣ್ಣ ಸಮಸ್ಯೆ ಕೂಡ ದೊಡ್ಡ ಮಟ್ಟದ ಆರೋಗ್ಯ ಏರುಪೇರಿಗೆ ಕಾರಣವಾಗಬಹುದು. ಅನಾರೋಗ್ಯಕರ ಕೊಬ್ಬು ಹೊಂದಿರುವಂತಹ ಕರಿದ ತಿಂಡಿಗಳು, ಫಿಜ್ಜಾ, ಬರ್ಗರ್, ಸಿಹಿ ಇತ್ಯಾದಿಗಳು ಕೊಬ್ಬಿದ ಯಕೃತ್ ನ ಸಮಸ್ಯೆ ಉಂಟು ಮಾಡಬಹುದು. ಇದರಿಂದ ಯಕೃತ್ ನಲ್ಲಿ ಕೊಬ್ಬು ಶೇಖರಣೆಯಾಗಿ ಗಂಭೀರ ಆರೋಗ್ಯ ಸಮಸ್ಯೆ ಉಂಟಾಗುವುದು.

ಶ್ವಾಸಕೋಶ-ಧೂಮಪಾನ
ಧೂಮಪಾನ ಮಾಡುವುದರಿಂದ ಶ್ವಾಸಕೋಶಕ್ಕೆ ತುಂಬಾ ಹಾನಿಯಾಗುವುದು ಮತ್ತು ಇದರಿಂದ ಶ್ವಾಸಕೋಶದ ಕ್ಯಾನ್ಸರ್ ಕೂಡ ಬರಬಹುದು ಎನ್ನುವುದು ಹೆಚ್ಚಿನವರಿಗೆ ತಿಳಿದಿದೆ. ಧೂಮಪಾನಿಗಳಿಗೆ ಅದರಿಂದ ಹೊರಬರುವುದು ತುಂಬಾ ಕಠಿಣ ಕೆಲಸ. ಧೂಮಪಾನ ಅಭ್ಯಾಸದಿಂದ ಹೊರಬರಲು ಶ್ರಮ ವಹಿಸಬೇಕು ಮತ್ತು ವೃತ್ತಪರರ ಸಲಹೆ ಪಡೆಯಬೇಕು. ಧೂಮಪಾನ ತ್ಯಜಿಸಿದರೆ ಅದರಿಂದ ಶ್ವಾಸಕೋಶ ಆರೋಗ್ಯ ಕಾಪಾಡುವುದು.

ಹಲ್ಲುಗಳ ಕುರಿತು ಕಾಳಜಿ ಇಲ್ಲದಿರುವುದು
ವಿಜ್ಞಾನಿಗಳ ಪ್ರಕಾರ ಹಲ್ಲುಗಳಿಗು ಮತ್ತು ಹೃದಯಕ್ಕು ತುಂಬಾ ಹತ್ತಿರದ ಸಂಬಂಧವಿದೆಯಂತೆ. ಹಲ್ಲುಗಳ ಆರೋಗ್ಯ ಸರಿ ಇಲ್ಲದಿದ್ದರೆ ಹೃದಯದ ಆರೋಗ್ಯ ಸರಿಯಿರುವುದಿಲ್ಲ. ಫ್ಲಾಸಿಂಗ್ ಮಾಡದಿರುವುದು ಇದಕ್ಕೆ ಕಾರಣ. ದವಡೆಗಳ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಂಡರೆ, ಹೃದಯವು ಆರೋಗ್ಯವಾಗಿರುತ್ತದೆ.

ಅತಿಯಾದ ಉಪ್ಪು- ತಪ್ಪು ತಪ್ಪು
ಅಧಿಕ ಪ್ರಮಾಣದ ಉಪ್ಪು ಸೇವನೆಯು ನಿಮ್ಮ ಹೃದಯಕ್ಕೆ ಸಮಸ್ಯೆಗಳನ್ನು ತಂದೊಡ್ಡಬಹುದು. ತಜ್ಞರ ಪ್ರಕಾರ ಉಪ್ಪು ಅಧಿಕವಾಗಿರುವ ಆಹಾರ ಪದಾರ್ಥಗಳು ಹೃದಯದ ಬಡಿತದಲ್ಲಿ ತಕ್ಷಣ ಏರು ಪೇರನ್ನು ಉಂಟು ಮಾಡುತ್ತದೆಯಂತೆ. ಹಾಗಾಗಿ ಉಪ್ಪು ಹೃದ್ರೋಗವನ್ನು ತಂದು ನೀಡುತ್ತದೆ ಎಂಬ ಎಚ್ಚರಿಕೆಯನ್ನು ಇರಿಸಿಕೊಳ್ಳಿ.

ಗೊರಕೆಯನ್ನು ಉದಾಸೀನ ಮಾಡಬೇಡಿ
ನಿದ್ದೆಯಲ್ಲಿದ್ದಾಗ ಸ್ಲೀಪ್ ಅಪ್ನಿಯಾ ಎಂಬ ಸ್ಥಿತಿಯಲ್ಲಿ ನೀವು ಉಸಿರಾಟವನ್ನು ಮಾಡುವುದಿಲ್ಲ. ಈ ಅವಧಿಯಲ್ಲಿ ನಿಮ್ಮ ದೇಹಕ್ಕೆ ಸರಬರಾಜಾಗುವ ಆಮ್ಲಜನಕದಲ್ಲಿ ಕುಸಿತವುಂಟಾಗುತ್ತದೆ ಮತ್ತು ರಕ್ತದೊತ್ತಡವು ಅಧಿಕಗೊಳ್ಳುತ್ತದೆ. ಇದರಿಂದ ನಿಮ್ಮ ಹೃದಯದ ಕಾರ್ಯದಲ್ಲಿ ಸಹ ಕುಸಿತವುಂಟಾಗುತ್ತದೆ.

ಊಟದ ಬಳಿಕ ತಕ್ಷಣವೇ ಮಲಗಬೇಡಿ!
ರಾತ್ರಿಯೂಟದ ಬಳಿಕ ತಕ್ಷಣವೇ ಮಲಗಿದರೆ ಇದು ಜೀರ್ಣಕ್ರಿಯೆಯನ್ನು ನಿಧಾನಗೊಳಿಸಿ ಹೊಟ್ಟೆಯುಬ್ಬರಿಕೆ ಹಾಗೂ ಹೊಟ್ಟೆಯಲ್ಲಿ ವಾಯು ತುಂಬಿಕೊಳ್ಳಲು ಕಾರಣವಾಗುತ್ತದೆ. ಉತ್ತಮ ಆರೋಗ್ಯಕ್ಕಾಗಿ ರಾತ್ರಿಯೂಟದ ಎರಡು ಗಂಟೆಗಳ ಬಳಿಕವೇ ಮಲಗಬೇಕು. ಹಿರಿಯರ ಪ್ರಕಾರ ಊಟದ ಬಳಿಕ ಕೊಂಚ ಅಡ್ಡಾಡಿ, ಕೊಂಚ ಕಾಲ ಯಾವುದೇ ಗದ್ದಲವಿಲ್ಲದೇ ಮನಸ್ಸಿಗೆ ಮುದನೀಡುವ ವಿಷಯವನ್ನು ಓದಿ, ಪಾದಗಳನ್ನು ತಣ್ಣೀರಿನಿಂದ ತೊಳೆದು ಮಲಗಿದರೆ ಸುಖವಾದ ನಿದ್ದೆ ಆವರಿಸುತ್ತದೆ.

ಧೂಮಪಾನ
ಮೊದಲನೆಯದಾಗಿ ಹೇಳಬೇಕೆ೦ದರೆ, ನೀವು ಧೂಮಪಾನವನ್ನು ಮಾಡುವುದೇ ತಪ್ಪು. ಆದರೂ ಕೂಡ, ಒ೦ದು ವೇಳೆ ನೀವು ಧೂಮಪಾನಿಯೇ ಆಗಿದ್ದಲ್ಲಿ, ರಾತ್ರಿಯ ಭೋಜನವಾದ ಕೂಡಲೇ ಧೂಮಪಾನವನ್ನು ಕೈಗೊಳ್ಳುವುದು ಖ೦ಡಿತಾ ವಿಹಿತವಲ್ಲ. ಅಧ್ಯಯನಗಳು ತೋರಿಸಿಕೊಟ್ಟಿರುವ ಪ್ರಕಾರ, ಭೋಜನಾನ೦ತರ ಒ೦ದು ಸಿಗರೇಟಿನ ಸೇವನೆಯು ಹತ್ತು ಸಿಗರೇಟುಗಳ ಸೇವನೆಗೆ ಸಮನಾಗಿರುತ್ತದೆ ಹಾಗೂ ಇದ೦ತೂ ಕ್ಯಾನ್ಸರ್‌ನ ಸಾಧ್ಯತೆಯನ್ನು ನೂರ್ಮಡಿಗೊಳಿಸುತ್ತದೆ.

English summary

habits-which-can-harm-these-particular-organs-of-the-body

Imagine this, you are going through a lot of stress because of work and you also end up stress eating or eating junk food for a week! What do you think would be the outcome of this? Well, the combination of continuous stress and overeating unhealthy food can definitely make a person sick! You could either suffer from indigestion and food poisoning, or headaches and other stress-related issues. So, it is clear that our habits and choices of our lifestyles play an important role when it comes to our health and well-being
Story first published: Thursday, May 31, 2018, 17:40 [IST]
X
Desktop Bottom Promotion