For Quick Alerts
ALLOW NOTIFICATIONS  
For Daily Alerts

ಇಂತಹ ಆಹಾರಗಳನ್ನು ಖಾಲಿ ಹೊಟ್ಟೆಯಲ್ಲಿ ತಿಂದರೆ, ದೇಹದ ತೂಕ ಇಳಿಯುವುದು!

|

ದೇಹದ ತೂಕ ಇಳಿಸಬೇಕೆಂಬ ಪಣ ತೊಟ್ಟು ನಾವುಗಳು ಇಂದಿನ ಯುಗದಲ್ಲಿ ಯದ್ವಾ ತದ್ವಾ ಡಯೆಟ್ ಅನ್ನು ಪಾಲನೆ ಮಾಡುತ್ತಿದ್ದೇವೆ. ನಿತ್ಯದ ಊಟವನ್ನು ಬಿಟ್ಟು ಬರೇ ಬ್ರೆಡ್ಡು, ಸಲಾಡ್, ಹಸಿ ತರಕಾರಿಗಳ ಸೇವನೆ ಬರಿಯ ಹಣ್ಣುಗಳ ಸೇವನೆ, ಹಾಲು ಮೊಸರುಗಳನ್ನು ಸೇವಿಸದೇ ಇರುವುದು ಮೊದಲಾದ ತಪ್ಪುಗಳನ್ನು ಮಾಡುತ್ತಿದ್ದೇವೆ. ನಿಜವಾಗಿ ಡಯೆಟ್ ಎಂದರೆ ಆರೋಗ್ಯಕಾರಿ ಆಹಾರಗಳನ್ನು ಹಿತಮಿತವಾಗಿ ಸ್ವಲ್ಪ ಸ್ವಲ್ಪ ಆರು ಭಾಗಗಳನ್ನಾಗಿ ಮಾಡಿಕೊಂಡು ದಿನಪೂರ್ತಿ ಸೇವನೆ ಮಾಡುವುದಾಗಿದೆ.

ನಿಮ್ಮ ಹೊಟ್ಟೆಯನ್ನು ಶೋಷಿಸಿ ಬರಿಯ ನೀವು ಹಣ್ಣು ತರಕಾರಿಗಳಿಂದ ಅದನ್ನು ನೋಡಿಕೊಳ್ಳುತ್ತಿದ್ದರೆ ಅದೂ ಕೂಡ ನಿಮ್ಮನ್ನು ಕಂಗಾಲುಪಡಿಸುವುದು ಗ್ಯಾರಂಟಿ. ತಲೆಸುತ್ತು, ಆಯಾಸ, ಗ್ಯಾಸ್‌ಟ್ರಿಕ್ ಮೊದಲಾದ ಸಮಸ್ಯೆಗಳು ನಿಮ್ಮನ್ನು ಕಾಡುತ್ತದೆ. ಯಾವುದೇ ಡಯೆಟೀಶಿಯನ್ ನೀಡುವ ಸಲಹೆ ಎಂದರೆ ನಿಮ್ಮ ನಿತ್ಯದ ಊಟ ಉಪಚಾರಗಳೊಂದಿಗೆ ಹಣ್ಣು ತರಕಾರಿಗಳ ಸೇವನೆ ಮಾಡಿ ಎಂದಾಗಿದೆ.

kannada, Foods To Eat On An Empty Stomach To Lose Weight

ನಿಮ್ಮ ನಿತ್ಯದ ಆಹಾರದೊಂದಿಗೆ ಹೆಚ್ಚು ಪ್ರಮಾಣದಲ್ಲಿ ತರಕಾರಿ ಹಣ್ಣುಗಳ ಸೇವನೆ ಮಾಡಿದರೆ ಮಾತ್ರ ನಿಮ್ಮ ದೇಹ ಸಮತೋಲನಕ್ಕೆ ಬರುತ್ತದೆ. ಆದ್ದರಿಂದ ಕ್ರಾಸ್ ಡಯೆಟ್, ವಾಟರ್ ಡಯೆಟ್, ಮೊದಲಾದ ಹೆಸರುಗಳಿರುವ ಡಯೆಟ್‌ಗಳಿಂದ ಆದಷ್ಟು ದೂರವಿರುವುದೇ ಒಳಿತಾಗಿದೆ. ಇನ್ನೊಂದು ಅಧ್ಯಯನಗಳ ಪ್ರಕಾರ ಹೆಚ್ಚು ನೀರಿನ ಅಂಶವನ್ನು ಹೊಂದಿರುವ ಹಣ್ಣುಗಳ ಸೇವನೆಯನ್ನು ಮಾಡುವುದರಿಂದ ನಿಮ್ಮ ಹೊಟ್ಟೆ ಕೂಡ ತುಂಬುತ್ತದೆ ಜೊತೆಗೆ ನೀವು ನಿಮ್ಮ ತೂಕವನ್ನು ಕಳೆದುಕೊಳ್ಳಬಹುದಾಗಿದೆ. ಅದಕ್ಕೆಂದೇ ಇಂದಿನ ಲೇಖನದಲ್ಲಿ ನೀರಿನ ಅಂಶ ಹಾಗೂ ಸಾಕಷ್ಟು ಪೋಷಕಾಂಶಗಳನ್ನು ಒಳಗೊಂಡಿರುವ ಅತ್ಯುತ್ತಮ ಅಂತೆಯೇ ಮಿತದರದಲ್ಲಿ ದೊರೆಯುವ ಹಣ್ಣುಗಳ ಪಟ್ಟಿಯನ್ನು ನೀಡುತ್ತಿದ್ದೇವೆ.

1. ಪಪ್ಪಾಯ

1. ಪಪ್ಪಾಯ

ಖಾಲಿ ಹೊಟ್ಟೆಯಲ್ಲಿ ಪಪ್ಪಾಯ ಹಣ್ಣನ್ನು ಸೇವಿಸುವುದು ನಿಮ್ಮ ಹೆಚ್ಚುವರಿ ತೂಕವನ್ನು ಇಳಿಸಲು ಸಹಾಯ ಮಾಡುತ್ತದೆ. ಪ್ಯಾಪಿನ್ ಎಂಬ ಶಕ್ತಿಯುತ ಅಂಶವನ್ನು ಇದು ಒಳಗೊಂಡಿದ್ದು, ಇದು ನಿಮ್ಮ ತೂಕವನ್ನು ತಗ್ಗಿಸುವುದರ ಜೊತೆಗೆ ದೇಹದಲ್ಲಿ ಸಾಕಷ್ಟು ನೀರಿನ ಅಂಶ ಇಲ್ಲದಿದ್ದರೆ ಅದನ್ನು ಭರ್ತಿ ಮಾಡಲು ಸಹಾಯ ಮಾಡುತ್ತದೆ. ಫೈಬರ್‌ಗಳನ್ನು ಈ ಹಣ್ಣು ಹೊಂದಿದ್ದು ಕಡಿಮೆ ಕ್ಯಾಲೊರಿಗಳಿಂದ ಕೂಡಿದೆ. ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸುವುದು ನಿಮ್ಮ ಹೊಟ್ಟೆಯನ್ನು ತುಂಬುವಂತೆ ಮಾಡುತ್ತದೆ ಹಾಗೂ ಜೀರ್ಣಕ್ರಿಯೆ ಸಮಸ್ಯೆಗಳನ್ನು ದೂರ ಮಾಡುತ್ತದೆ.

2. ಓಟ್‌ಮೀಲ್ ನೀರು

2. ಓಟ್‌ಮೀಲ್ ನೀರು

ಓಟ್‌ಮೀಲ್ ಪೋರಿಜ್‌ಗಿಂತ ಇದರಿಂದ ತಯಾರಿಸಬಹುದಾದ ನೀರು ಹೆಚ್ಚು ಉತ್ತಮ ಅಂಶಗಳನ್ನು ಒಳಗೊಂಡಿದೆ. ಓಟ್‌ಮೀಲ್ ಅನ್ನು 1:3 ಪ್ರಮಾಣದ ನೀರಿನಲ್ಲಿ ಕುದಿಸಿ. ಇದು ಫೈಬರ್ ಅಂಶಗಳನ್ನು ಒಳಗೊಂಡಿರುವ ಪಾನೀಯವಾಗಿದೆ. ನೀವು ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸುವುದು ನಿಮ್ಮ ಹೆಚ್ಚುವರಿ ಕೊಬ್ಬನ್ನು ಇಳಿಸುತ್ತದೆ ಮತ್ತು ತೂಕ ಕೂಡ ಕಡಿಮೆಯಾಗುತ್ತದೆ.

ಇದು ನಾಲ್ಕು ವಿಧಾನಗಳಲ್ಲಿ ನಮಗೆ ಸಹಕಾರಿಯಾಗಿದೆ

ಓಟ್‌ಮೀಲ್‌ನಲ್ಲಿರುವ ಫೈಬರ್ ಅಂಶ ಹೊಟ್ಟೆಯನ್ನು ಬೇಗನೇ ತುಂಬಿಸುತ್ತದೆ ಮತ್ತು ಹಸಿವಾಗುವಿಕೆಯಿಂದ ನಮ್ಮನ್ನು ಕಾಪಾಡುತ್ತದೆ.

ನಮ್ಮ ಜೀರ್ಣಕ್ರಿಯೆಗೆ ಇದು ನೆರವಾಗುತ್ತದೆ

ಓಟ್‌ಮೀಲ್ ನೀರು ಲೆಸಿತಿನ್‌ನಿಂದ ಕೂಡಿದೆ. ನಮ್ಮ ಕರುಳನ್ನು ಶುದ್ಧಮಾಡುವ ಶಕ್ತಿ ಇದಕ್ಕಿದೆ. ನಮ್ಮ ಜೀರ್ಣಕ್ರಿಯೆಯನ್ನು ಉತ್ತಮಪಡಿಸಿ ಅಧಿಕ ಕೊಬ್ಬನ್ನು ಇಳಿಸುತ್ತದೆ. ನಮ್ಮ ದೇಹದಿಂದ ಹೆಚ್ಚುವರಿ ನೀರನ್ನು ಇದು ಕಡಿಮೆ ಮಾಡುತ್ತದೆ.

3. ಲಿಂಬೆಯುಕ್ತ ಅಲೊವೇರಾ

3. ಲಿಂಬೆಯುಕ್ತ ಅಲೊವೇರಾ

ಹೆಚ್ಚು ಪ್ರಬಲ ತೂಕ ಇಳಿಕೆ ಪಾನೀಯ ಇದಾಗಿದೆ. ಅಲವೇರಾ ಮತ್ತು ಲಿಂಬೆ ಪ್ರಧಾನ ಅಂಶಗಳನ್ನು ಒಳಗೊಂಡಿದೆ. ಇದು ಹೆಚ್ಚು ವೇಗವಾಗಿ ಬೆಳೆಯುವ ಸಸ್ಯವಾಗಿದ್ದು ಇದು ಜೆಲ್‌ನಂತಹ ವಸ್ತುವನ್ನು ಹೊಂದಿದೆ. ಉತ್ಕರ್ಷಣ ನಿರೋಧಿ ಅಂಶಗಳನ್ನು ಇದು ಒಳಗೊಂಡಿದ್ದು ನಿಮ್ಮ ಸಾಮಾನ್ಯ ಆರೋಗ್ಯಕ್ಕೆ ಇದು ಉತ್ತಮ ಎಂದೆನಿಸಿದೆ. ನೀವು ಅಲೊವೇರಾ ಪಾನೀಯವನ್ನು ಲಿಂಬೆಯೊಂದಿಗೆ ಬೆರೆಸಿ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ನಿಮ್ಮ ಕೊಬ್ಬು ಕರಗಿ ಸುಂದರ ಕಾಯ ನಿಮ್ಮದಾಗುತ್ತದೆ

ಇದನ್ನು ಮನೆಯಲ್ಲೇ ಸರಳವಾಗಿ ಸಿದ್ಧಪಡಿಸುವುದು ಹೇಗೆ

ಅಲೊವೇರಾ ತನ್ನಲ್ಲಿ ನೀರಿನಂಶದಿಂದ ಕೂಡಿದ ಲೋಳೆರಸವನ್ನು ಹೊಂದಿದೆ

ಒಂದು ಲೋಟ ನೀರಿಗೆ ಒಂದು ಚಮಚ ಜೆಲ್ ಅನ್ನು ಬೆರೆಸಿ ಮತ್ತು ಇದಕ್ಕೆ ಲಿಂಬೆ ರಸವನ್ನು ಹಿಂಡಿ.

ಮಧ್ಯಮ ಉರಿಯಲ್ಲಿ ಇದನ್ನು ಬಿಸಿ ಮಾಡಿ ಸಂಪೂರ್ಣವಾಗಿ ಇದು ಮಿಶ್ರವಾಗಲಿ

ತಣ್ಣಗಿನ ನೀರಿನೊಂದಿಗೆ ಇದನ್ನು ಸೇವಿಸಿ.

ಸೂಚನೆ: ಅಲೊವೇರಾದಲ್ಲಿ ನೀರಿನಂಶ ಇರುವುದರಿಂದ ಸ್ವಲ್ಪ ಸಮಯದ ಬಳಿಕೆ ನಿಮಗೆ ಮೂತ್ರಶಂಕೆಯುಂಟಾಗಬಹುದು. ಆದ್ದರಿಂದ ನೀವು ಕಚೇರಿಗೆ ತೆರಳುವ ಒಂದು ಗಂಟೆ ಮುಂಚಿತವಾಗಿ ಇದನ್ನು ಸೇವಿಸಿ.

4. ಸಲಾಡ್

4. ಸಲಾಡ್

ನಿಮ್ಮ ದಿನವನ್ನು ಹಸಿರು ತರಕಾರಿಗಳಿಂದ ಆರಂಭಿಸುವುದು ನಿಮ್ಮನ್ನು ದಿನಪೂರ್ತಿ ಚಟುವಟಿಕೆಯಿಂದ ಇರಿಸುತ್ತದೆ. ತರಕಾರಿಗಳಲ್ಲಿ ಕರಗಬಲ್ಲ ಫೈಬರ್ ಇರುವುದರಿಂದ ನಿಮ್ಮ ಹೊಟ್ಟೆಯನ್ನು ಬೇಗನೇ ತುಂಬಿಸುತ್ತದೆ ಮತ್ತು ಬೇಗನೇ ಹಸಿವೆ ನಿಮಗೆ ಉಂಟಾಗುವುದಿಲ್ಲ. ತರಕಾರಿ ಮತ್ತು ಹಣ್ಣುಗಳು ಉತ್ಕರ್ಷಣ ನಿರೋಧಿ ಅಂಶಗಳನ್ನು ಒಳಗೊಂಡಿದ್ದು ಹೆಚ್ಚಿನ ವಿಟಮಿನ್ ಹಾಗೂ ಮಿನರಲ್‌ಗಳಿಂದ ಸಮೃದ್ಧವಾಗಿದೆ.

5.ತರಕಾರಿ ಜ್ಯೂಸ್

5.ತರಕಾರಿ ಜ್ಯೂಸ್

ತರಕಾರಿ ಜ್ಯೂಸ್ ಸೇವಿಸಲು ರುಚಿಕರವಾಗಿಲ್ಲದಿರಬಹುದು ಆದರೆ ನಿಮ್ಮ ಆರೋಗ್ಯಕ್ಕೆ ಇದು ಅತ್ಯುತ್ತಮವಾಗಿದೆ. ನಿಮ್ಮ ದೇಹವನ್ನು ಶುದ್ಧಿಕರಿಸುವ ಜೊತೆಗೆ ನಿಮ್ಮ ರೋಗನಿರೋಧಕ ಶಕ್ತಿಯನ್ನು ಇದು ಉತ್ತಮಗೊಳಿಸುತ್ತದೆ. ಬೆಳಗ್ಗಿನ ಭರ್ಜರಿ ಉಪಹಾರಕ್ಕೆ ಇದು ಸೂಕ್ತವಾಗಿದೆ. ಇಲ್ಲಿ ನಾವು ಕೆಲವೊಂದು ಜ್ಯೂಸ್ ರೆಸೆಪಿಗಳನ್ನು ನೀಡಿದ್ದು ಅದನ್ನು ನೀವು ಬಳಸಿ ನೋಡಬಹುದಾಗಿದೆ

ಶುಂಠಿ ಸೌತೆಕಾಯಿ ಜ್ಯೂಸ್ ರೆಸೆಪಿ

ಕ್ಯಾರೆಟ್ ಜ್ಯೂಸ್ ರೆಸೆಪಿ: ಬ್ರಕೋಲಿ, ಬೀಟ್‌ರೂಟ್, ಆಪಲ್ ಹಾಗೂ ಶುಂಠಿ, ಸಿಲರಿ, ಟೊಮೇಟೊವನ್ನು ಬಳಸಿಕೊಳ್ಳಬಹುದು.

ಹಾಗಲಕಾಯಿ ಜ್ಯೂಸ್

6 ಆಪಲ್

6 ಆಪಲ್

ದಿನಕ್ಕೊಂದು ಆಪಲ್ ತಿನ್ನಿ ವೈದ್ಯರಿಂದ ದೂರವಿರಿ ಎಂಬ ನಾಣ್ಣುಡಿಯೇ ಇದೆ. ಆಪಲ್ ಹೆಚ್ಚಿನ ಪೋಷಕಾಂಶಗಳನ್ನು ವಿಟಮಿನ್‌ಗಳನ್ನು ಹಾಗೂ ಮಿನರಲ್‌ಗಳನ್ನು ತನ್ನಲ್ಲಿ ಒಳಗೊಂಡಿದ್ದು ನೀವು ತೂಕ ಇಳಿಸುವ ಚಾಲೆಂಜ್‌ನಲ್ಲಿದ್ದೀರಿ ಎಂದಾದಲ್ಲಿ ಇದನ್ನು ಆವಶ್ಯವಾಗಿ ಸೇವಿಸಲೇಬೇಕು. ಇದು ನೀರು ಹಾಗೂ ಫೈಬರ್ ಅಂಶವನ್ನು ಒಳಗೊಂಡಿದ್ದು ನಿಮ್ಮ ದೇಹದ ಕ್ಯಾಲೊರಿ ನಷ್ಟವಾಗದೆಯೇ ನಿಮ್ಮ ಹೊಟ್ಟೆಯನ್ನು ಭರ್ತಿ ಮಾಡುತ್ತದೆ.

7.ಬಾದಾಮಿ

7.ಬಾದಾಮಿ

ಬಾದಾಮಿಯನ್ನು ನೆನೆಸಿಟ್ಟು ಅದನ್ನು ಸೇವಿಸುವುದು ನಿಮ್ಮ ತ್ವಚೆ ಮತ್ತು ಮೆದುಳಿಗೆ ಅತ್ಯುನ್ನತವಾಗಿದೆ. ಆದರೆ ಬಾದಾಮಿ ನಿಮ್ಮ ತೂಕ ಇಳಿಕೆಯಲ್ಲಿ ಸಹಕಾರಿ ಎಂಬುದು ನಿಮಗೆ ಗೊತ್ತೇ? ಒಂದು ಅಧ್ಯಯನದ ಪ್ರಕಾರ ಸಮೀಕ್ಷೆಯಲ್ಲಿ ಭಾಗವಹಿಸಿದವರು ದಿನಪೂರ್ತಿ ಹೆಚ್ಚು ಬಾದಾಮಿಯನ್ನು ಸೇವಿಸಿದರು ಹಾಗೂ ಆರು ತಿಂಗಳಲ್ಲಿ 18% ದಷ್ಟು ತೂಕ ಇಳಿಕೆಯನ್ನು ಮಾಡಿಕೊಂಡಿದ್ದಾರೆ. ಕ್ಯಾಲೊರಿ ಮತ್ತು ಆರೋಗ್ಯವಂತ ಕೊಬ್ಬನ್ನು ಬಾದಾಮಿ ಒಳಗೊಂಡಿದ್ದು ದೀರ್ಘಸಮಯದವರೆಗೆ ನಿಮ್ಮನ್ನು ಆರೋಗ್ಯವಂತರನ್ನಾಗಿಸುತ್ತದೆ.

8.ಗೋಧಿ ಹುಲ್ಲು

8.ಗೋಧಿ ಹುಲ್ಲು

ಇದು ಹೆಚ್ಚು ಪ್ರಮಾಣದಲ್ಲಿ ಐರನ್, ಮೆಗ್ನೇಶಿಯಮ್, ಒಮೇಗಾ - ಫ್ಯಾಟಿ ಆಸಿಡ್ ಹಾಗೂ ವಿಟಮಿನ್‌ಗಳು ಮತ್ತು ಮಿನರಲ್‌ಗಳನ್ನು ಯಥೇಚ್ಛವಾಗಿ ಒಳಗೊಂಡಿದೆ. ಇದನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ನಿಮಗೆ ಬೇಗನೇ ಹಸಿವೆ ಉಂಟಾಗುವುದಿಲ್ಲ ಇದರಿಂದ ಸಿಕ್ಕಸಿಕ್ಕದ್ದನ್ನೆಲ್ಲಾ ತಿನ್ನುವ ಹವ್ಯಾಸಕ್ಕೆ ಇತಿಶ್ರಿ ಹಾಡಬಹುದು.

9.ಹುರುಳಿ

9.ಹುರುಳಿ

ಇದು ಕಡಿಮೆ ಕ್ಯಾಲೊರಿ ಹೊಂದಿರುವ ಧಾನ್ಯವಾಗಿದ್ದು ಅತಿಯಾಗಿ ತಿನ್ನುವುದ ಮತ್ತು ಆಗಾಗ್ಗೆ ಹಸಿವೆಯಾಗುವುದನ್ನು ತಡೆಯುತ್ತದೆ. ನಿಮ್ಮ ಬೆಳಗ್ಗಿನ ಉಪಹಾರಕ್ಕೆ ಇಂತಹ ಆಹಾರವನ್ನು ಸೇವಿಸುವುದು ನಿಮ್ಮನ್ನು ದೀರ್ಘಸಮಯದವರೆಗೆ ಚಟುವಟಿಕೆಯಿಂದ ಇರಿಸುತ್ತದೆ.

10.ದಾಲ್ಚಿನ್ನಿ ನೀರು

10.ದಾಲ್ಚಿನ್ನಿ ನೀರು

ಇದು ರೋಗನಿರೋಧಕ ಶಕ್ತಿಯನ್ನು ಒಳಗೊಂಡಿದ್ದು ನಿಮ್ಮ ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿರಿಸುತ್ತದೆ ಮತ್ತು ಕೊಬ್ಬಿನ ಶೇಖರಣೆಯನ್ನು ಕುಂಠಿತಗೊಳಿಸುತ್ತದೆ. ನಿಮ್ಮ ಬೆಳಗ್ಗಿನ ಚಟುವಟಿಕೆಯಲ್ಲಿ ಖಾಲಿ ಹೊಟ್ಟೆಯಲ್ಲಿ ದಾಲ್ಚಿನ್ನಿ ನೀರು ಸೇವನೆ ಮಾಡುವುದನ್ನು ಮರೆಯದಿರಿ.

ಇದನ್ನು ಸಿದ್ಧಪಡಿಸುವುದು ಹೇಗೆ

1 ಕಪ್ ಬೆಚ್ಚಗಿನ ನೀರಿಗೆ 1/2 ಚಮಚ ದಾಲ್ಚಿನ್ನಿ ಹುಡಿಯನ್ನು ಸೇರಿಸಿ ಮತ್ತು 5 ನಿಮಿಷ ಹಾಗೆಯೇ ಬಿಡಿ

1 ಚಮಚ ಜೇನು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ

ಬೆಚ್ಚಗಿರುವಾಗಲೇ ಸೇವಿಸಿ

11. ಮೊಟ್ಟೆಗಳು

11. ಮೊಟ್ಟೆಗಳು

ಹೆಚ್ಚು ಪ್ರೊಟೀನ್ ಉಪಹಾರವಾಗಿರುವ ಮೊಟ್ಟೆ ನಿಮ್ಮ ದೈನಂದಿನ ಕ್ಯಾಲೊರಿ ಸೇವನೆಯನ್ನು ಕಡಿಮೆ ಮಾಡುತ್ತದೆ. 2 ಕ್ಕಿಂತ ಹೆಚ್ಚು ಮೊಟ್ಟೆ ಹಳದಿ ಭಾಗವನ್ನು ಸೇವಿಸಬೇಡಿ ಇದು ನಿಮ್ಮ ರಕ್ತದ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸಬಹುದು.

12. ಅಂಬಲಿ

12. ಅಂಬಲಿ

ಅಂಟು ಮುಕ್ತ ಧಾನ್ಯ ಇದಾಗಿದ್ದು ಫೈಬರ್ ಮತ್ತು ಖನಿಜಾಂಶಗಳನ್ನು ಇದು ಒಳಗೊಂಡಿದೆ. ಇದು ನಿಮ್ಮ ಹೊಟ್ಟೆಯನ್ನು ಬೇಗನೇ ತುಂಬಿಸುತ್ತದೆ.

13. ಬ್ಲ್ಯೂಬೆರ್ರಿಗಳು

13. ಬ್ಲ್ಯೂಬೆರ್ರಿಗಳು

ಉತ್ಕರ್ಷಣ ನಿರೋಧಿ ಅಂಶಗಳು, ಮಿನರಲ್‌ಗಳನ್ನು ಈ ಹಣ್ಣು ಯಥೇಚ್ಛವಾಗಿ ಒಳಗೊಂಡಿದೆ. ಇದನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದು ನಿಮ್ಮನ್ನು ಆರೋಗ್ಯಂತರು ಮತ್ತು ಚಟುವಟಿಕೆಯುಳ್ಳವರನ್ನಾಗಿಸುತ್ತದೆ.

14. ಕಲ್ಲಂಗಡಿ

14. ಕಲ್ಲಂಗಡಿ

ನೀರು ಮತ್ತು ಕರಗಬಲ್ಲ ಫೈಬರ್ ಅನ್ನು ಈ ಹಣ್ಣು ಒಳಗೊಂಡಿದೆ. ಖಾಲಿ ಹೊಟ್ಟೆಯಲ್ಲಿ ಈ ಹಣ್ಣು ಸೇವನೆ ಮಾಡುವುದು ನೀವು 2 ಲೋಟ ನೀರು ಸೇವನೆ ಮಾಡುವುದಕ್ಕೆ ಸಮವಾಗಿದೆ. ನಿಮ್ಮ ತೂಕ ಇಳಿಕೆಯಲ್ಲಿ ಈ ಹಣ್ಣು ಮ್ಯಾಜಿಕ್ ಮಾಡುವುದಂತೂ ಖಂಡಿತ.

15.ಪೂರ್ಣಧಾನ್ಯ ಬ್ರೆಡ್

15.ಪೂರ್ಣಧಾನ್ಯ ಬ್ರೆಡ್

ಬಿಳಿ ಅಥವಾ ಬ್ರೌನ್ ಬ್ರೆಡ್‌ಗಿಂತ ಪೂರ್ಣಧಾನ್ಯದ ಬ್ರೆಡ್ ತುಂಬಾ ಉತ್ತಮವಾದುದು. ಇದು ಕಡಿಮೆ ಪ್ರಮಾಣದ ಕೊಬ್ಬನ್ನು ಹೊಂದಿದ್ದು ಎಲ್ಲಾ ರೀತಿಯ ಧಾನ್ಯಗಳನ್ನು ಒಳಗೊಂಡಿದೆ. ನಿಮ್ಮ ದೇಹಕ್ಕೆ ಬೇಕಾದ ಫೈಬರ್ ಈ ಬ್ರೆಡ್‌ನಿಂದ ದೊರೆಯುತ್ತದೆ. ನೀವು ಖಾಲಿ ಹೊಟ್ಟೆಯಲ್ಲಿ ಈ ಬ್ರೆಡ್ ಸೇವನೆ ಮಾಡುವುದು ನಿಮ್ಮ ದೇಹದ ತೂಕವನ್ನು ಇಳಿಸಲು ಸಹಕಾರಿಯಾಗಿದೆ.

16. ಗ್ರೀನ್ ಟಿ

16. ಗ್ರೀನ್ ಟಿ

ಇದು ತೂಕ ಇಳಿಕೆಯಲ್ಲಿ ಹೆಚ್ಚು ಪರಿಣಾಮಕಾರಿಯಾಗಿರುವ ಪೇಯವಾಗಿದ್ದು ನಿಮ್ಮ ತೂಕ ಇಳಿಕೆಯಲ್ಲಿ ಇದು ಪ್ರಧಾನವಾಗಿ ಕಾರ್ಯನಿರ್ವಹಿಸುತ್ತದೆ.

17.ಗೋಧಿಗಟ್ಟು

17.ಗೋಧಿಗಟ್ಟು

ಗೋಧಿಗಟ್ಟು ಬಿಳಿ ಬೀಜದ ಉತ್ಪಾದನೆಯಲ್ಲಿ ಉತ್ಪತ್ತಿಯಾಗುವ ಕೈಗಾರಿಕಾ ತ್ಯಾಜ್ಯವಾಗಿದೆ ಮತ್ತು ಹೆಚ್ಚಿನ ಪ್ರಮಾಣದ ಪೋಷಕಾಂಶಗಳ ಕಾರಣದಿಂದ ಸಸ್ಯಗಳನ್ನು ಬೆಳೆಯಲು ಇದನ್ನು ಬಳಸಲಾಗುತ್ತದೆ. ವಾಸ್ತವವಾಗಿ, ಗೋಧಿಗಟ್ಟು ತುಂಬಾ ಆರೋಗ್ಯಕರವಾಗಿದ್ದು, ಕೇವಲ ಎರಡು ಟೇಬಲ್ ಸ್ಪೂನ್‌ಗಳು ಅಪರ್ಯಾಪ್ತ ಕೊಬ್ಬಿನ 1.5 ಗ್ರಾಂ, ಫೈಬರ್ 2 ಗ್ರಾಂ, ಪ್ರೋಟೀನ್‌ಗಳು 4 ಗ್ರಾಂ, ಮತ್ತು ವಿಟಮಿನ್‌ಗಳು ಮತ್ತು ಖನಿಜಗಳ ವ್ಯಾಪಕತೆಯನ್ನು ಹೊಂದಿರುತ್ತದೆ. ಜೊತೆಗೆ, ಇದು ಫೈಟೊಸ್ಟೆರಾಲ್ ಅನ್ನು ಒಳಗೊಂಡಿದ್ದು, ಇದು ಕೊಲೆಸ್ಟರಾಲ್‌ಗೆ ಹೋಲುವ ಸಂಯುಕ್ತವಾಗಿದೆ; ನಿಮ್ಮ ಹೃದಯದ ಆರೋಗ್ಯವನ್ನು ಉತ್ತೇಜಿಸುವ ಆಹಾರವಾಗಿದೆ. ಅದಕ್ಕಾಗಿಯೇ ಬೆಳಿಗ್ಗೆ ನಿಮ್ಮ ದೈನಂದಿನ ದಿನಚರಿಯಲ್ಲಿ ಗೋಧಿಗಟ್ಟು ಸೇರಿಸುವುದು ತೂಕವನ್ನು ಕಳೆದುಕೊಳ್ಳುವ ಒಂದು ಉತ್ತಮ ವಿಧಾನವಾಗಿದೆ. ಅದು ನಿಮ್ಮ ಒಟ್ಟಾರೆ ಆರೋಗ್ಯವನ್ನು ಹೆಚ್ಚಿಸುತ್ತದೆ.

18.ನಟ್ಸ್

18.ನಟ್ಸ್

ನಟ್ಸ್ ಪೋಷಕಾಂಶಗಳು ಮತ್ತು ಆರೋಗ್ಯಕರ ಕೊಬ್ಬುಗಳನ್ನು ತುಂಬಿದೆ. ಅವುಗಳನ್ನು ಅತಿಯಾಗಿ ಸೇವಿಸಬಾರದು ಎಂಬುದನ್ನು ನೆನಪಿನಲ್ಲಿಡಿ, ಅವುಗಳು ಸಾಕಷ್ಟು ಕ್ಯಾಲೋರಿ ಪೂರ್ಣವಾಗಿರುವುದರಿಂದ ನಿಮ್ಮ ತೂಕ ನಷ್ಟ ಗುರಿಗಳ ವಿರುದ್ಧ ಕೆಲಸ ಮಾಡಬಹುದು. ಕೆಳಗಿನವುಗಳು ತೂಕ ನಷ್ಟಕ್ಕೆ ಅತ್ಯುತ್ತಮವಾದ ಡ್ರೈ ಫ್ರುಟ್ಸ್‌ಗಳಾಗಿವೆ - ಮ್ಯಾಕೆಡೇಲಿಯಾ ಬೀಜಗಳು ಬ್ರೆಜಿಲ್ ಬೀಜಗಳು ವಾಲ್ನಟ್ಸ್ ಪಿಸ್ತಾಗಳು ಕಾಲಾನಂತರದಲ್ಲಿ ಸಕಾರಾತ್ಮಕ ಫಲಿತಾಂಶಗಳನ್ನು ನೋಡಲು ಬೆಳಿಗ್ಗೆ ಪ್ರತಿ ದಿನವೂ ಈ ಬೀಜಗಳ ಸೇವನೆ ಮಾಡಿ.

19.ಜೇನು

19.ಜೇನು

ಜೇನು 5 ವಿಧದ ಸಕ್ಕರೆಗಳಲ್ಲಿ ಒಂದಾಗಿದ್ದು, ಅರ್ಧ ಜೀರ್ಣವಾಗುವ ಜೇನ್ನೊಣದ ಉತ್ಪನ್ನವಾಗಿದೆ. ಅದಕ್ಕಾಗಿಯೇ, ನಿಮ್ಮ ಸಾಮಾನ್ಯ ಬಿಳಿ ಸಕ್ಕರೆಗಿಂತಲೂ ಒಂದು ಚಮಚ ಜೇನುತುಪ್ಪವು ಹೆಚ್ಚು ಸಿಹಿಯಾಗಿರುತ್ತದೆ. ಹಾಗಾಗಿ, ಜೇನುತುಪ್ಪದ ತೂಕ ನಷ್ಟದ ಲಾಭಗಳನ್ನು ಪಡೆಯಲು ನೀವು ಬಯಸಿದರೆ, ಖಾಲಿ ಹೊಟ್ಟೆಯಲ್ಲಿ ಬೆಳಿಗ್ಗೆ ಒಂದು ಗಾಜಿನ ಲೋಟದಲ್ಲಿ ಬೆಚ್ಚಗಿನ ನೀರಿಗೆ ಒಮದು ಚಮಚ ಜೇನು ಬೆರೆಸಿ ಸೇವಿಸಿ.

20. ಲಿಂಬೆ ಮತ್ತು ನೀರು

20. ಲಿಂಬೆ ಮತ್ತು ನೀರು

ಬೆಚ್ಚಗಿನ ನೀರಿಗೆ ಒಂದು ಲಿಂಬೆ ರಸವನ್ನು ಹಿಂಡಿ ಸೇವನೆ ಮಾಡುವುದರಿಂದ ನಿಮ್ಮ ಅತ್ಯಧಿಕ ಕೊಬ್ಬನ್ನು ಕರಗಿಸುವಲ್ಲಿ ಸಹಕಾರಿಯಾಗಿದೆ. ವಿಟಮಿನ್ ಸಿ ಅಂಶವನ್ನು ಈ ನೀರು ಹೊಂದಿದ್ದು ನಿಮ್ಮ ಚಯಾಪಚಯ ವ್ಯವಸ್ಥೆಯನ್ನು ಇದು ಸುಧಾರಿಸುತ್ತದೆ.

ಈ ಲೇಖನವನ್ನು ಹಂಚಿಕೊಳ್ಳಿ!

ಈ ವರ್ಷದ ನಿಮ್ಮ ತೀರ್ಮಾನ ತೂಕ ಇಳಿಕೆ ಎಂದಾದಲ್ಲಿ ನಮ್ಮ ಈ ಲೇಖನ ನಿಮಗೆ ಖಂಡಿತ ಸಹಕಾರಿಯಾಗಿದೆ. ನಿಮ್ಮ ಸ್ನೇಹಿತರೊಂದಿಗೆ ಈ ಲೇಖನವನ್ನು ಹಂಚಿಕೊಳ್ಳಿ ಇದರಿಂದ ನಿಮ್ಮೊಂದಿಗೆ ಅವರೂ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ.

English summary

Foods To Eat On An Empty Stomach To Lose Weight

So you want to lose weight, huh? But don't want to put in the long hours at the gym or go on a strict diet?Well, we have an alternative for you. In this article, we have outlined 20 foods and drinks that can help you lose weight if you have them on an empty stomach in the morning with the scientific reason behind why they work. So, are you ready to know what these superfoods are? Read on.
Story first published: Thursday, February 8, 2018, 19:30 [IST]
X
Desktop Bottom Promotion