For Quick Alerts
ALLOW NOTIFICATIONS  
For Daily Alerts

ಹೊಟ್ಟೆಯ ಕೊಬ್ಬು ಕರಗಿಸುವ ನೈಸರ್ಗಿಕ ಆಹಾರಗಳು

By Lekhaka
|

ಇತ್ತೀಚೆಗೆ ನಡೆಸಿದ ಸಮೀಕ್ಷೆಯೊಂದರ ಪ್ರಕಾರ ಈ ವರ್ಷ ಹೆಚ್ಚಿನವರು ಆರೋಗ್ಯಕರ ಆಹಾರ ಮತ್ತು ತೂಕ ಕಳೆದು ಕೊಳ್ಳುವುದನ್ನು ಹೊಸ ವರ್ಷದ ನಿರ್ಣಯವನ್ನಾಗಿ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ವಿಶ್ವದ ಶೇ.21ರಷ್ಟು ಜನಸಂಖ್ಯೆಯು ಈ ನಿರ್ಣಯ ತೆಗೆದುಕೊಂಡಿದೆಯಂತೆ. ಇದು ಅಚ್ಚರಿ ಮೂಡಿಸಿದರೂ ನಿಜ.

ಕಳೆದ ಹಲವಾರು ವರ್ಷಗಳಿಂದ ಜನರು ವಿವಿಧ ರೋಗಗಳಿಗೆ ತುತ್ತಾಗುವುದು, ಜೀವನಶೈಲಿಗೆ ಸಂಬಂಧಿಸಿದ ಕಾಯಿಲೆಗಳು ಮತ್ತು ಜೀವಿತಾವಧಿ ಕಡಿಮೆಯಾಗುವುದು ಇತ್ಯಾದಿಗಳಿಂದ ಜನರು ಆರೋಗ್ಯಕರ ಆಹಾರ ಮತ್ತು ಫಿಟ್ ಆಗಿರುವ ಬಗ್ಗೆ ಹೆಚ್ಚಿನ ಮಹತ್ವ ನೀಡುತ್ತಿದ್ದಾರೆ. ಮಹಿಳೆಯರು ಹಾಗೂ ಪುರುಷರಲ್ಲಿ ಈಗ ಫಿಟ್ನೆಸ್ ಉಳಿಸಿಕೊಳ್ಳುವುದು ಮಹತ್ವ ಪಡೆದುಕೊಂಡಿದೆ.

ಪುರುಷರು ಸಿಕ್ಸ್ ಪ್ಯಾಕ್ ಮಾಡಿಕೊಳ್ಳುವುದನ್ನು ಇಷ್ಟಪಟ್ಟರೆ ಮಹಿಳೆಯರು ಆರೋಗ್ಯಕರ ಹಾಗೂ ಫಿಟ್ ಆಗಿರಲು ಬಯಸುವರು. ಆದರೆ ಇದೆಲ್ಲವನ್ನು ಹೊರತುಪಡಿಸಿ ಕೆಲವೊಂದು ಸಲ ಹೊಟ್ಟೆಯ ಬೊಜ್ಜು ಕಾಣಿಸಿಕೊಳ್ಳುವುದು. ಇದಕ್ಕೆ ಪ್ರಮುಖ ಕಾರಣವೆಂದರೆ ಹಾರ್ಮೋನುಗಳಲ್ಲಿ ಬದಲಾವಣೆ, ಚಟುವಟಿಕೆಯಿಲ್ಲದ ಜೀವನಶೈಲಿ ಮತ್ತು ಅತಿಯಾಗಿ ಕೊಬ್ಬು ಇರುವಂತಹ ಆಹಾರ ಸೇವನೆ ಮಾಡುವುದು.

ಬರೀ ಒಂದೇ ವಾರದಲ್ಲಿ ಹೊಟ್ಟೆಯ ಕೊಬ್ಬು ಕರಗಿಸಿಕೊಳ್ಳಿ!

ಹೊಟ್ಟೆಯ ಕೊಬ್ಬು ಕರಗಿಸಲು ಹಲವಾರು ರೀತಿಯ ವಿಧಾನಗಳು ಇವೆ. ಇದನ್ನು ಹೆಚ್ಚಿನವರು ಬಳಸಿಕೊಂಡು ಅದರ ಫಲಿತಾಂಶ ಕೂಡ ಪಡೆದಿರಬಹುದು. ಆಹಾರ ಪಥ್ಯ ಮಾಡುವುದರಿಂದ ಹೊಟ್ಟೆಯ ಬೊಜ್ಜು ಕರಗುವಂತೆ ಮಾಡಬಹುದು. ಕಡಿಮೆ ಕ್ಯಾಲರಿ ಇರುವ ಆಹಾರ ಸೇವನೆ ಮಾಡುವುದರಿಂದ ದೇಹದಲ್ಲಿ ಹೆಚ್ಚುವರಿಯಾಗಿರುವ ಕೊಬ್ಬು ಶಕ್ತಿಯಾಗಿ ಪರಿವರ್ತನೆಯಾಗುವುದು. ಇಲ್ಲಿ ಕೊಟ್ಟಿರುವ ಆಹಾರಗಳು ಹೊಟ್ಟೆಯ ಕೊಬ್ಬು ನಿವಾರಣೆ ಮಾಡುವಲ್ಲಿ ತುಂಬಾ ಪರಿಣಾಮಕಾರಿ. ಒಂದು ಸಲ ಪ್ರಯತ್ನಿಸಿ ನೋಡಿ....

ಮೊಳಕೆ ಕಾಳುಗಳು

ಮೊಳಕೆ ಕಾಳುಗಳು

ಮೊಳಕೆ ಕಾಳುಗಳಲ್ಲಿ ತುಂಬಾ ಕಡಿಮೆ ಕ್ಯಾಲರಿಯಿದೆ ಮತ್ತು ಅಮಿನೋ ಆಮ್ಲವು ಅತ್ಯಧಿಕ ಮಟ್ಟದಲ್ಲಿದೆ. ಇದು ಶಕ್ತಿಯ ಹರಿವನ್ನು ಸಮತೋಲನದಲ್ಲಿಡುವುದು ಮತ್ತು ಕ್ಯಾಲರಿ ಸೇವನೆ ನಿರ್ಬಂಧಿಸುವುದು. ಇದರಿಂದ ಕೊಬ್ಬು ಸುಲಭವಾಗಿ ಕರಗುವುದು.

ಮೊಟ್ಟೆಗಳು

ಮೊಟ್ಟೆಗಳು

ಇದನ್ನು ಓದಿ ಅಚ್ಚರಿಯಾಗಬಹುದು. ಆದರೆ ಹೊಟ್ಟೆಯ ಕೊಬ್ಬನ್ನು ಮೊಟ್ಟೆ ಕರಗಿಸಬಲ್ಲದು. ಮೊಟ್ಟೆಯಲ್ಲಿ ಲ್ಯೂಸಿನ್ ರೀತಿಯ ಅಮಿನೋ ಆಮ್ಲವಿದೆ. ಇದು ಹೊಟ್ಟೆಯ ಕೊಬ್ಬು ಕರಗಿಸುವುದು.

 ಅವಕಾಡೋ

ಅವಕಾಡೋ

ಅವಕಾಡೋದಲ್ಲಿ ನೈಸರ್ಗಿಕ ಕೊಬ್ಬು ಇದ್ದರೂ ಇದು ಕೊಬ್ಬು ಕರಗಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಅವಕಾಡೋದಲ್ಲಿ ನಾರಿನಾಂಶ, ಏಕಪರ್ಯಾಪ್ತ ಕೊಬ್ಬಿನಾಮ್ಲಗಳು ಇವೆ. ಇದರಿಂದ ಹೊಟ್ಟೆಯು ದೀರ್ಘಕಾಲ ತುಂಬಿದಂತೆ ಇರುವುದು. ಇದರಿಂದ ಅನಾರೋಗ್ಯಕರ ಕೊಬ್ಬು ಇರುವ ಆಹಾರ ಸೇವನೆಯಿಂದ ತಡೆಯುವುದು.

ಓಟ್ಸ್

ಓಟ್ಸ್

ಓಟ್ಸ್ ನಲ್ಲಿ ಹಲವಾರು ರೀತಿಯ ಲಾಭಗಳಿವೆ. ಇದರಲ್ಲಿ ಇರುವಂತಹ ನಾರಿನಾಂಶಗಳು ದೀರ್ಘಕಾಲದ ತನಕ ಹೊಟ್ಟೆ ತುಂಬಿದಂತೆ ಮಾಡುವುದು. ಇದರಲ್ಲಿ ಕೊಬ್ಬು ತುಂಬಾ ಕಡಿಮೆ ಪ್ರಮಾಣದಲ್ಲಿದೆ. ಓಟ್ಸ್ ಗೆ ಹಣ್ಣುಗಳು ಮತ್ತು ಒಣ ಬೀಜಗಳನ್ನು ಹಾಕಿಕೊಂಡು ತಿಂದರೆ ಒಳ್ಳೆಯ ಪೋಷಕಾಂಶಗಳು ದೊರಕುವುದು.

ಹಸಿರೆಲೆ ತರಕಾರಿಗಳು

ಹಸಿರೆಲೆ ತರಕಾರಿಗಳು

ಹಸಿರೆಲೆ ತರಕಾರಿಗಳಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ಗಳು ನಿಮ್ಮ ಆರೋಗ್ಯವನ್ನು ದೀಘಕಾಲ ಕಾಪಾಡುವುದು. ಇದರಲ್ಲಿ ಇರುವಂತಹ ನಾರಿನಾಂಶವು ಕೊಬ್ಬು ಕರಿಗಿಸುವಲ್ಲಿ ಪರಿಣಾಮಕಾರಿ. ಇದು ಹೊಟ್ಟೆ ಮತ್ತು ಜೀರ್ಣಾಂಗ ವ್ಯೂಹವನ್ನು ಶುದ್ಧೀಕರಿಸುವುದು. ಇದರಿಂದ ತೂಕ ಕಾಪಾಡಿಕೊಳ್ಳಬಹುದು.

ಶತಾವರಿ

ಶತಾವರಿ

ಶತಾವರಿಯಲ್ಲಿ ಲೈಕೊಪೆನೆ ಮತ್ತು ವಿಟಮಿನ್ ಎ ಸಮೃದ್ಧವಾಗಿದೆ. ಇದರಲ್ಲಿ ನಾರಿನಾಂಶ ಮತ್ತು ಪ್ರೋಟೀನ್ ಹೆಚ್ಚಿನ ಪ್ರಮಾಣದಲ್ಲಿದೆ. ಇದು ಹೃದಯದ ಆರೋಗ್ಯವನ್ನು ಕಾಪಾಡುವುದರೊಂದಿಗೆ ಹೊಟ್ಟೆಯ ಕೊಬ್ಬು ಕಡಿಮೆ ಮಾಡುವುದು.

ಕ್ವಿನೋ

ಕ್ವಿನೋ

ಒಳ್ಳೆಯ ಆರೋಗ್ಯ ಬಯಸುವವರಲ್ಲಿ ಇದು ಹೆಚ್ಚು ಜನಪ್ರಿಯವಾಗಿದೆ. ಕ್ವಿನೊ ಅದ್ಭುತ ಆಹಾರವಾಗಿದೆ. ಇದರಲ್ಲಿ ಇರುವಂತಹ ಪೋಷಕಾಂಶಗಳು ಹೊಟ್ಟೆಯ ಕೊಬ್ಬನ್ನು ನಿಯಂತ್ರಣದಲ್ಲಿಡುವುದು.

ಗ್ರೀನ್ ಟೀ

ಗ್ರೀನ್ ಟೀ

ದೇಹದಲ್ಲಿರುವ ಕೊಬ್ಬಿನ ಕೋಶಗಳನ್ನು ವಿಘಟಿಸುವಂತೆ ಮೆದುಳಿಗೆ ಸಂದೇಶ ರವಾನಿಸುವಂತಹ ಸಾಮರ್ಥ್ಯವು ಗ್ರೀನ್ ಟೀಯಲ್ಲಿದೆ. ನಿಯಮಿತವಾಗಿ ಗ್ರೀನ್ ಟೀ ಸೇವನೆ ಮಾಡಿದರೆ ಅದರಿಂದ ಹೊಟ್ಟೆಯಲ್ಲಿನ ಕೊಬ್ಬು ಬೇಗನೆ ನಿವಾರಣೆಯಾಗುವುದು.

ಆರೋಗ್ಯಕರ ಎಣ್ಣೆಗಳು

ಆರೋಗ್ಯಕರ ಎಣ್ಣೆಗಳು

ಆರೋಗ್ಯಕರ ಎಣ್ಣೆಗಳಾದ ತೆಂಗಿನೆಣ್ಣೆ ಮತ್ತು ಎಕ್ಸ್ ಟ್ರಾ ವರ್ಜಿನ್ ಆಲಿವ್ ತೈಲವು ಕೊಬ್ಬು ಕರಗಿಸುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುವುದು. ಇದರಿಂದ ಇರುವಂತಹ ಕೆಲವು ಕೊಬ್ಬಿನಾಮ್ಲವು ಹೊಟ್ಟೆಯು ದೀರ್ಘಕಾಲದ ತನಕ ತುಂಬಿರುವಂತೆ ಮಾಡುವುದು ಮತ್ತು ಚಯಾಪಚಾಯ ಕ್ರಿಯೆ ಹೆಚ್ಚಿಸುವುದು.

ಕಡು ಚಾಕಲೇಟ್

ಕಡು ಚಾಕಲೇಟ್

ಚಾಕಲೇಟ್ ಪ್ರಿಯರಿಗೆ ಇದು ಒಳ್ಳೆಯ ಸುದ್ದಿ. ಯಾಕೆಂದರೆ ನಿಮ್ಮ ಇಷ್ಟದ ಚಾಕಲೇಟ್ ತಿನ್ನುತ್ತಲೇ ಕೊಬ್ಬು ಕೂಡ ಕರಗಿಸಬಹುದು. ಕಡು ಚಾಕಲೇಟ್‌ನಲ್ಲಿ ಶಕ್ತಿಶಾಲಿ ಆ್ಯಂಟಿಆಕ್ಸಿಡೆಂಟ್‌ಗಳು ಇವೆ. ಇದು ಹೊಟ್ಟೆಯಲ್ಲಿನ ಅತಿಯಾದ ಕೊಬ್ಬು ನಿವಾರಣೆ ಮಾಡುವುದು. ಇದರಿಂದ ಹೊಟ್ಟೆ ತುಂಬಿದಂತೆ ಆಗಿ. ತಿನ್ನುವುದನ್ನು ಕಡಿಮೆ ಮಾಡುವಿರಿ.

ಶುಂಠಿ ಸೇರಿಸಿದ ಟೀ ಕುಡಿಯಿರಿ

ಶುಂಠಿ ಸೇರಿಸಿದ ಟೀ ಕುಡಿಯಿರಿ

ಹಸಿಶುಂಠಿ ಜೀರ್ಣಶಕ್ತಿಯನ್ನು ಹೆಚ್ಚಿಸುವುದು ಸರಿ, ಆದರೆ ಇದು ದೇಹದ ಬಿಸಿಯನ್ನೂ ಹೆಚ್ಚಿಸುತ್ತದೆಂದು (thermogenic) ನಿಮಗೆ ಗೊತ್ತಿತ್ತೇ? ದೇಹದ ಬಿಸಿಯನ್ನು ಏರಿಸುವ ಮೂಲಕ ದೇಹದಲ್ಲಿ ಸಂಗ್ರಹವಾಗಿದ್ದ ಕೊಬ್ಬು ಕರಗಲು ನೆರವಾಗುತ್ತದೆ. ಸೊಂಟದ

ಸುತ್ತ ಈಗಾಗಲೇ ಸಂಗ್ರಹವಾಗಿರುವ ಕೊಬ್ಬು ಎಷ್ಟೋ ವರ್ಷಗಳ ಹಿಂದಿನಿಂದ ಸಂಗ್ರಹವಾಗುತ್ತಾ ಬಂದಿರಬಹುದಾಗಿದ್ದು ಶುಂಠಿಯ ನಿಯಮಿತ ಸೇವನೆಯಿಂದ ನಿಧಾನವಾಗಿ ಕರಗತೊಡಗುತ್ತದೆ. ಜೊತೆಗೇ ಶುಂಠಿಯ ಸೇವನೆಯಿಂದ ದೇಹದಲ್ಲಿ ಒತ್ತಡದ ಕಾರಣ ಉತ್ಪತ್ತಿಯಾಗುವ ಕಾರ್ಟಿಸೋಲ್ (cortisol) ಎಂಬ ಹಾರ್ಮೋನು ಉತ್ಪತ್ತಿಯನ್ನು ತಡೆಯಬಹುದು. ಇದರಿಂದ ರಕ್ತದಲ್ಲಿ ಹೆಚ್ಚಬಹುದಾಗಿದ್ದ ಸಕ್ಕರೆಯ ಪ್ರಮಾಣವನ್ನು ಮಿತಿಗೊಳಿಸಿ ಸಂಗ್ರಹವಾಗಿದ್ದ ಕೊಬ್ಬು ಕರಗಲು ನೆರವಾಗುತ್ತದೆ.

ಬಳಕೆಯ ವಿಧಾನ

*ಒಂದು ಲೋಟಕ್ಕಿಂತ ಕೊಂಚ ಹೆಚ್ಚು ನೀರನ್ನು ಕುದಿಸಿ.

*ಈ ನೀರಿನಲ್ಲಿ ಒಂದು ಇಂಚು ಹಸಿಶುಂಠಿಯನ್ನು ಜಜ್ಜಿ ಸುಮಾರು ಹತ್ತು

ನಿಮಿಷಗಳವೆರೆಗೆ ಚಿಕ್ಕ ಉರಿಯಲ್ಲಿ ಕುದಿಸಿ.

*ಈಗ ಪಾತ್ರೆಯನ್ನು ಒಲೆಯಿಂದ ಕೆಳಗಿಳಿಸಿ ಒಂದು ಚಮಚ ಈಗತಾನೇ ಹಿಂಡಿದ

*ಲಿಂಬೆರಸ ಮತ್ತು ಒಂದು ಚಮಚ ಜೇನು ಸೇರಿಸಿ.

*ಈ ಚಹಾ ಅನ್ನು ಸೋಸಿ ಬಿಸಿಬಿಸಿ ಇರುವಂತೆಯೇ ಸೇವಿಸಿ. ಒಂದು ದಿನಕ್ಕೆ

ಕನಿಷ್ಠ ಎರಡು ಕಪ್ ಈ ಟೀ ಸೇವಿಸಿ ಕೊಬ್ಬಿನಿಂದ ಮುಕ್ತಿಪಡೆಯಿರಿ.

ಜೀರಿಗೆ ನೀರು

ಜೀರಿಗೆ ನೀರು

ಇನ್ನೊಂದು ಪರ್ಯಾಯ ಪದ್ಧತಿಯೆಂದರೆ ಬೆಳಗ್ಗೆ ಕಾಲಿ ಹೊಟ್ಟೆಯಲ್ಲಿ ಜೀರಿಗೆ ನೀರನ್ನು ಕುಡಿಯುವುದು. ಒಂದು ಟೀ ಚಮಚ ಜೀರಿಗೆಯನ್ನು ತೆಗೆದುಕೊಂಡು ನೀರಿನಲ್ಲಿ ಕುದಿಸಿ. ನಂತರ ಜೀರಿಗೆಯನ್ನು ಸೋಸಿ ತೆಗೆಯಿರಿ. ಬಿಸಿಯಿರುವಾಗಲೇ ಇದನ್ನು ಸೇವಿಸಿದರೆ ಹೆಚ್ಚು ಆರೋಗ್ಯ ಪೂರ್ಣವಾದದ್ದು. ಇದು ಕಿಬ್ಬೊಟ್ಟೆ ಹಾಗೂ ಸೊಂಟದ ಭಾಗದಲ್ಲಿ ಶೇಖರಣೆಗೊಂಡ ಕೊಬ್ಬನ್ನು ಕರಗಿಸುತ್ತದೆ.

ಹಚ್ಚ ಹಸಿರು ಜ್ಯೂಸ್

ಹಚ್ಚ ಹಸಿರು ಜ್ಯೂಸ್

ಇದುವರೆಗೆ ಹಸಿರು ರಸವನ್ನು ಸೇವಿಸದೇ ಇದ್ದಲ್ಲಿ ಮೊದಲು ಈ ಸಂಯೋಜನೆಯನ್ನು ಆಯ್ಕೆ ಮಾಡಿಕೊಳ್ಳಿ. ಇದರಲ್ಲಿ ಸೂಕ್ತ ಪ್ರಮಾಣದ ವಿಟಮಿನ್ ಮತ್ತು ಖನಿಜಗಳಿವೆ ಹಾಗೂ ಅಲ್ಪಪ್ರಮಾಣದಲ್ಲಿ ಸೆಲ್ಯುಲೋಸ್ ಇದೆ. ಸಮಪ್ರಮಾಣದಲ್ಲಿ ಅನಾನಾಸ್, ಹಸಿರು ಸೇಬು ಮತ್ತು ಒಂದು ಲೋಟಕ್ಕೆ ಅರ್ಧ ಇಂಚು ಗಾತ್ರದ ಶುಂಠಿ ಮತ್ತು ಎರಡು ದೊಡ್ಡ ಚಮಚದಷ್ಟು ಅಚ್ಚು ಮೂಡ ಸೊಪ್ಪು (ಅಥವಾ parsley leaves) (ಇದು ನೋಡಲು ಕೊತ್ತಂಬರಿ ಸೊಪ್ಪಿನಂತೆಯೇ ಇರುತ್ತದೆ, ಆದರೆ ರುಚಿಯಲ್ಲಿ ಬದಲಾವಣೆ ಇರುತ್ತದೆ) ಮತ್ತು ಇಷ್ಟೇ ಪ್ರಮಾಣದ ಕೇಲ್ ಎಲೆಗಳನ್ನು ಹಾಕಿ ಮಿಕ್ಸಿಯಲ್ಲಿ ಗೊಟಾಯಿಸಿ. ದಿನಕ್ಕೊಂದು ಲೋಟ ಈ ಜ್ಯೂಸ್ ಕುಡಿಯುವುದರಿಂದ ಬೊಜ್ಜು ನಿಧಾನವಾಗಿ ಕರಗುತ್ತದೆ.

English summary

foods-that-instantly-burn-belly-fat

Belly fat is caused by different reasons. It may be because of hormonal changes, inactive lifestyle, eating too much fatty food or Genetics. There are many ways to lose belly fat. The best one being a diet rich in foods that naturally burn belly fat. The basic idea is to eat foods with low calorific value. This helps the body burn excess fat for energy. So, here are top foods that will surprise you by helping you quickly burn belly fat fast.
X
Desktop Bottom Promotion