For Quick Alerts
ALLOW NOTIFICATIONS  
For Daily Alerts

ಇನ್ನು ಬೆಳ್ಳುಳ್ಳಿ, ಅಕ್ಕಿ, ಮೊಟ್ಟೆ ಖರೀದಿಸುವಾಗ ಎಚ್ಚರ! ಇದೆಲ್ಲಾ ಚೀನಾದಿಂದ ಬಂದಿರುತ್ತೆ!!

By Arshad
|

ಚೀನಾ ನಿರ್ಮಿತ ವಸ್ತು ಎಂದಾಕ್ಷಣ ನಮ್ಮೆಲ್ಲರ ಮನದಲ್ಲಿ ಮೊದಲಿಗೆ ಬರುವುದು ಎಂದರೆ ಇದು ಅಗ್ಗ ಎಂಬ ಮಾಹಿತಿ. ಅಗ್ಗವೂ ಹೌದು, ರುಚಿಕರವೂ ಹೌದು ಎಂದು ಚೀನಾ ನಿರ್ಮಿತ ಆಹಾರಸಾಮಾಗ್ರಿಗಳು ಭಾರತದಲ್ಲಿ ಭಾರೀ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ. ಆಕರ್ಷಕ, ರುಚಿಕರ, ಅಗ್ಗ ಎಂಬ ಕಾರಣಗಳಿಂದ ಈ ಆಹಾರಸಾಮಾಗ್ರಿಗಳು ನಿಮ್ಮ ಅಡುಗೆ ಮನೆಗೂ, ನಿಮ್ಮ ಹೊಟ್ಟೆಗೂ ಈಗಾಗಲೇ ಪ್ರವೇಶ ಪಡೆದಿರಬಹುದು. ಆದರೆ ಚೀನಾದಿಂದ ಆಮದಾಗಿರುವ ಆಹಾರ ಸಾಮಾಗ್ರಿಗಳು ಅಷ್ಟು ಅಗ್ಗವಾಗಿರಲು ಕಾರಣವೇನೆಂದು ಯೋಚಿಸಿದ್ದೀರಾ? ಏಕೆಂದರೆ ಅಷ್ಟು ದೂರದಿಂದ ವಸ್ತುಗಳನ್ನು ಟನ್ನುಗಟ್ಟಲೇ ತಂದರೂ ಇವುಗಳ ಸಾಗಾಟವೆಚ್ಚವೇ ಉತ್ಪನ್ನದ ಬೆಲೆಯನ್ನು ಭಾರತದ ಉತ್ಪನ್ನಕ್ಕಿಂತಲೂ ಹೆಚ್ಚಾಗಿಸಬೇಕಿತ್ತು.

ಇನ್ನು ಮುಂದೆ ಟೀ ಕುಡಿಯುತ್ತಾ ಚೀನಾದ ವಸ್ತುಗಳನ್ನು ದೂರಬೇಡಿ!

ಆದರೆ ಸಾಗಾಟವೆಚ್ಚದ ಹೊರತಾಗಿಯೂ ಇವು ಅಗ್ಗವಾಗಿರಲು ಮುಖ್ಯ ಕಾರಣವೆಂದರೆ ಇವು ನಕಲಿ ಆಹಾರ ಸಾಮಾಗ್ರಿಗಳಾಗಿವೆ! ಈ ಆಹಾರಗಳು ವಿಷಪೂರಿತ, ಕೃತಕ ರಾಸಾಯನಿಕಗಳಾಗಿದ್ದು ಇವುಗಳನ್ನು ಪ್ಯಾಕ್ ಮಾಡಲು ಬಳಸುವ ಪೊಟ್ಟಣಗಳು ಅತ್ಯಂತ ಸುಂದರವಾಗಿದ್ದು ಗ್ರಾಹಕನಿಗೆ ಕೊಳ್ಳಲು ಪ್ರೇರೇಪಿಸುತ್ತವೆ. ಚೀನಾ ವಿಶ್ವದ ಅತ್ಯಂತ ದೊಡ್ಡ ಕೀಟನಾಶಕ ಉತ್ಪಾದಕ ದೇಶವಾಗಿದ್ದು ಈ ದೇಶದಲ್ಲಿ ಉತ್ಪಾದನೆಯಾಗುವ ಹೆಚ್ಚೂ ಕಡಿಮೆ ಪ್ರತಿ ಆಹಾರವಸ್ತುವೂ ರಾಸಾಯನಿಕಗಳಿಂದ ಮುಕ್ತವಾಗಿಲ್ಲ. ಚೀನಾದಿಂದ ಆಮದಾಗಿರುವ ಒಂದೇ ಒಂದು ಉತ್ಪನ್ನದಲ್ಲಿಯೂ ಇದು ನೈಸರ್ಗಿಕ ಉತ್ಪನ್ನ ಎಂದು ದೃಢೀಕರಿಸಿಲ್ಲ. ಈ ವಸ್ತುಗಳ ಸೇವನೆಯಿಂದ ಕ್ಯಾನ್ಸರ್ ಸಹಿತ ಹಲವಾರು ಕಾಯಿಲೆಗಳು ಆವರಿಸುವ ಸಾಧ್ಯತೆ ಇದೆ.

ನೋಡಲು ಅತ್ಯಂತ ನೈಜವೆಂದೇ ತೋರುವ ಈ ಉತ್ಪನ್ನಗಳು ವಾಸ್ತವದಲ್ಲಿ ಮಾರುಕಟ್ಟೆಗೆ ಬರಲೇಬಾರದಾಗಿತ್ತು. ಇವುಗಳ ಸೇವನೆಯಿಂದ ಆರೋಗ್ಯ ಕೆಡುವುದಂತೂ ಖಚಿತ ಹಾಗೂ ಇವುಗಳಲ್ಲಿ ಕೀಟನಾಶಕ ಹಾಗೂ ಕ್ಯಾನ್ಸರ್ ಕಾರಕ ಇತರ ವಸ್ತುಗಳೂ ಇವೆ. ಇದನ್ನು ಉದ್ದೇಶಪೂರ್ವಕವಾಗಿಯೇ ಸೇರಿಸಿದ್ದಾರೋ ಎಂಬಂತೆ ಇವು ಪ್ರತಿ ನಕಲಿ ಆಹಾರವಸ್ತುವಿನಲ್ಲಿಯೂ ಸಮಾನವಾಗಿವೆ. ಚೀನಾದಿಂದ ಆಮದಾಗಿರುವ ಅಕ್ಕಿ ವಾಸ್ತವವಾಗಿ ಅಕ್ಕಿಯಂತೆಯೇ ಕಾಣುವ ಪ್ಲಾಸ್ಟಿಕ್ ನಿಂದ ತಯಾರಾಗಿದ್ದು ಸುಲಭದಲ್ಲಿ ಅಕ್ಕಿ ಅಲ್ಲ ಎಂದು ಹೇಳಲು ಸಾಧ್ಯವಿಲ್ಲ.

ಅಷ್ಟೇ ಅಲ್ಲ, ಅತ್ಯಂತ ಅಗ್ಗವಾದ ಉಪ್ಪು ಸಹಾ ನಕಲಿಯಾಗಿದ್ದು ಇದು ನೈಸರ್ಗಿಕ ಉಪ್ಪೇ ಅಲ್ಲ, ಬದಲಿಗೆ ಇದು ಕೈಗಾರಿಕಾ ಉಪ್ಪಾಗಿದ್ದು ಯಾವುದೋ ರಾಸಾಯನಿಕ ಕೈಗಾರಿಕೆಯ ತ್ಯಾಜ್ಯವಾಗಿದೆ. ಪ್ಲಾಸ್ಟಿಕ್ಕಿನಿಂದ ಇನ್ನೂ ಹಲವಾರು ಆಹಾರ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ ಹಾಗೂ ಆರೋಗ್ಯವನ್ನು ಕೆಡಿಸುತ್ತವೆ. ಚೀನಾದಿಂದ ಆಮದಾಗಿರುವ ಇಂತಹ ಕೆಲವು ಅಪ್ಪಟ ವಿಷಕಾರಿ ಆಹಾರವಸ್ತುಗಳನ್ನು ನೋಡೋಣ. ಆರೋಗ್ಯ ಇಲಾಖೆಯ ಕಣ್ಣು ತಪ್ಪಿಸಿ ನಿಮ್ಮ ಊರಿಗೆ ಬಂದಿದೆ ಎಂದರೆ ಇವುಗಳ ಹಿಂದೆ ಯಾವ ಅಗೋಚರ ಶಕ್ತಿಗಳು ಕೆಲಸ ಮಾಡುತ್ತಿವೆಯೇ ಗೊತ್ತಿಲ್ಲ. ಆದ್ದರಿಂದ ಬಳಕೆದಾರರಾಗಿ, ನಾವು, ಸಾರ್ವಜನಿಕರು ಈ ಉತ್ಪನ್ನಗಳನ್ನು ಕೊಳ್ಳದೇ ಇರುವ ಮೂಲಕ ಈ ಉತ್ಪನ್ನಗಳಿಗೆ ಬೇಡಿಕೆಯಿಲ್ಲದಂತೆ ಮಾಡಿದರೆ ಮಾತ್ರ ಇವು ತಾವಾಗಿಯೇ ಮಾರುಕಟ್ಟೆಯಿಂದ ಮಾಯವಾಗುತ್ತವೆ.

ವಿಷಭರಿತ ಚೀನಾ ಆಹಾರಗಳು ಮಾರುಕಟ್ಟೆಗೆ ಬಂದುಬಿಟ್ಟಿವೆ!

ಬೆಳ್ಳುಳ್ಳಿ

ಬೆಳ್ಳುಳ್ಳಿ

ಭಾರತದ ಒಟ್ಟು ಬಳಕೆಯ ಶೇಖಡಾ ಮೂವತ್ತರಷ್ಟು ಬೆಳ್ಳುಳ್ಳಿ ಚೀನಾದಿಂದ ಬರುತ್ತದೆ. ಆದರೆ ನೀವು ಕೊಳ್ಳುವುದು ಚೀನಾದಿಂದ ಆಮದಾದ ಬೆಳ್ಳುಳ್ಳಿಯಲ್ಲವೆಂದು ಖಾತ್ರಿಪಡಿಸಿಕೊಳ್ಳಿ. ಇವುಗಳನ್ನು ಪ್ಲಾಸ್ಟಿಕ್ಕಿನಿಂದ ತಯಾರಿಸಿಲ್ಲವಾದರೂ, ಇವುಗಳ ಗಾತ್ರ ಭಾರತದ ಬೆಳ್ಳುಳ್ಳಿಗೂ ನಾಲ್ಕು ಪಟ್ಟು ದೊಡ್ಡದಿರಲು ಕಾರಣ ಇದಕ್ಕೆ ಹಾಕುವ ಗೊಬ್ಬರದಲ್ಲಿ ಪ್ರಬಲ ರಾಸಾಯನಿಕಗಳನ್ನೂ ಅಪಾಯಕಾರಿ ವಸ್ತುಗಳನ್ನೂ ಬೆರೆಸಿರಿವುದಾಗಿದೆ. ಇವುಗಳನ್ನು ಸುಂದರ ಪ್ಯಾಕೆಟ್ಟುಗಳಲ್ಲಿ ಪ್ಯಾಕ್ ಮಾಡಿ ಆರ್ಗಾನಿಕ್ ಅಥವಾ 'ನೈಸರ್ಗಿಕ' ಎಂಬ ಹಣೆಪಟ್ಟಿಯನ್ನೂ ಢಾಳಾಗಿ ಮುದ್ರಿಸಿರುತ್ತಾರೆ. ಇವುಗಳ ದೊಡ್ಡ ಗಾತ್ರ ಹಾಗೂ ಸುಲಭವಾಗಿ ಸಿಪ್ಪೆ ಸುಲಿಯಲು ಸಾಧ್ಯವಾಗುವ ಕಾರಣ ಹೆಚ್ಚಿನ ಭಾರತೀಯರು ಈ ಬೆಳ್ಳುಳ್ಳಿಗೆ ಮನಸೋತಿದ್ದಾರೆ. ಆದರೆ ಎಚ್ಚರಿಕೆ! ಎಷ್ಟೇ ಸುಂದರವಾಗಿದ್ದರೂ ಈ ಬೆಳ್ಳುಳ್ಳಿ ಕೊಳ್ಳಬೇಡಿ.

ಪ್ಲಾಸ್ಟಿಕ್ ಅಕ್ಕಿ

ಪ್ಲಾಸ್ಟಿಕ್ ಅಕ್ಕಿ

ಚೀನಾದಿಂದ ಭಾರತಕ್ಕೆ ಲಗ್ಗೆಯಿಟ್ಟಿರುವ ಇನ್ನೊಂದು ಉತ್ಪನ್ನವೆಂದರೆ ಅಕ್ಕಿ. ಇದನ್ನು ನೋಡಿದರೆ ನಿಜವಾದ ಅಕ್ಕಿ ಅಲ್ಲ ಎಂದು ಹೇಳಲು ಸಾಧ್ಯವೇ ಇಲ್ಲ, ಅಷ್ಟರ ಮಟ್ಟಿಗೆ ಇದು ನಿಜ ಅಕ್ಕಿಯನ್ನೇ ಹೋಲುತ್ತದೆ. ಇದನ್ನು ಆಲುಗಡ್ಡೆ ಹಾಗೂ ರೆಸಿನ್ ಎಂಬ ಪ್ಲಾಸ್ಟಿಕ್ ಮಿಶ್ರಣ ಮಾಡಿ ತಯಾರಿಸಲಾಗುತ್ತದೆ. ಆದರೆ ಬೇಯಿಸಿದ ಬಳಿಕ ಇದು ಅನ್ನದಷ್ಟು ಮೃದುವಾಗಿರದೇ ಕೊಂಚ ರಬ್ಬರಿನಂತಿರುತ್ತದೆ. ಈ ಅಕ್ಕಿಯ ಸೇವನೆಯಿಂದ ಜೀರ್ಣಕ್ರಿಯೆಯಲ್ಲಿ ತೊಂದರೆ, ಮಲಬದ್ದತೆ, ಮೆದುಳಿನ ಘಾಸಿ ಮಹಿಳೆಯರಲ್ಲಿ ಈಸ್ಟ್ರೋಜೆನ್ ರಸದೂತದ ಮಟ್ಟ ಏರುವುದು ಹಾಗೂ ಇನ್ನಿತರ ತೊಂದರೆಗಳು ಎದುರಾಗುತ್ತವೆ. ಈ ಅಕ್ಕಿ ಪ್ಲಾಸ್ಟಿಕ್ಕಿನದು ಎಂದು ಪರೀಕ್ಷಿಸಲು ಒಂದು ಸುಲಭ ವಿಧಾನವಿದೆ. ಈ ಅಕ್ಕಿಯಿಂದ ಅನ್ನ ತಯಾರಿಸಿ ಕೈಯಿಂದ ಉಂಡೆಗಟ್ಟಿ. ಈ ಉಂಡೆಯನ್ನು ಕೊಂಚ ಮೇಲಿನಿಂದ ನೆಲದ ಮೇಲೆ ಬೀಳಿಸಿ. ನಿಜ ಅಕ್ಕಿಯಾಗಿದ್ದರೆ ಇದು ಒಡೆದು ಪುಡಿಪುಡಿಯಾಗಬೇಕು. ಪ್ಲಾಸ್ಟಿಕ್ ಅಕ್ಕಿಯಾದರೆ ಚೆಂಡಿನಂತೆ ಪುಟಿಯುತ್ತದೆ!

ಖತರ್ನಾಕ್ ಪ್ಲಾಸ್ಟಿಕ್ ಅಕ್ಕಿ ಬಂದೇ ಬಿಟ್ಟಿದೆ!-ಆದರೆ ಗುರುತಿಸುವುದು ಹೇಗೆ?

ನಕಲಿ ಮೊಟ್ಟೆ

ನಕಲಿ ಮೊಟ್ಟೆ

ಕೆಲವೇ ರೂಪಾಯಿಗಳಿಗೆ ಸಿಗುವ ಮೊಟ್ಟೆಯನ್ನೂ ಚೀನಾದಿಂದ ಅಷ್ಟು ದೊಡ್ಡ ಮೊತ್ತದ ಸಾಗಾಟವೆಚ್ಚ ನೀಡಿ ಇಲ್ಲಿ ಮಾರುವ ಔಚಿತ್ಯವೇನು ಎಂಬ ಪ್ರಶ್ನೆಯನ್ನು ಕೇಳಿಕೊಂಡರೆ ಮಾತ್ರ ಮೊಟ್ಟೆ ನಕಲಿ ಎಂದು ಗೊತ್ತಾಗುತ್ತದೆ. ನಕಲಿ ಮೊಟ್ಟೆಯಿಂದ ಚೀನಾಕ್ಕೆ ಭಾರೀ ಲಾಭವಿದೆ. ನಕಲಿ ಮೊಟ್ಟೆಯನ್ನು ತಯಾರಿಸಲು ಆಲ್ಜಿನಿಕ್ ಆಮ್ಲ, ಜೆಲಾಟಿನ್, ಕ್ಯಾಲ್ಸಿಯಂ ಕ್ಲೋರೈಡ್, ಕೃತಕ ಬಣ್ಣ ಮೊದಲಾದವುಗಳನ್ನು ಬಳಸಲಾಗುತ್ತದೆ. ಮೊಟ್ಟೆಯ ಕವಚವನ್ನು ಕ್ಯಾಲ್ಸಿಯಂ ಕಾರ್ಬೋನೇಟ್ ನಿಂದ ತಯಾರಿಸಲಾಗುತ್ತದೆ. ಈ ಮೊಟ್ಟೆಗಳ ಸೇವನೆಯಿಂದ ಸ್ಮರಣಶಕ್ತಿ ಕುಂದುತ್ತದೆ ಹಾಗೂ ಮೆದುಳಿಗೂ ಘಾಸಿಯಾಗುತ್ತದೆ.

ಕೈಗಾರಿಕಾ ಉಪ್ಪು

ಕೈಗಾರಿಕಾ ಉಪ್ಪು

ಟೇಬಲ್ ಸಾಲ್ಟ್ ಎಂದು ಮಾರಾಟವಾಗುವ ಉಪ್ಪು ಸಮುದ್ರದ ಉಪ್ಪಾಗಿದ್ದು ಇದನ್ನು ಸಂಸ್ಕರಿಸಿ ಕೊಳೆರಹಿತವಾಗಿಸಿ ಮಾರಲಾಗುತ್ತದೆ. ಇದರ ಮುಖ್ಯ ಕಾರ್ಯ ಅಡುಗೆಗೆ ಸೀಮಿತವಾಗಿದೆ. ಆದರೆ ಕೈಗಾರಿಕಾ ಬಳಕೆಗೆ ಬಳಸಲಾಗುವ ಉಪ್ಪು ಇತರ ಕೈಗಾರಿಕೆಗಳ ಸಹಉತ್ಪನ್ನ ಅಥವಾ ತ್ಯಾಜ್ಯವಾಗಿದ್ದು ಇವುಗಳನ್ನು ವಿಸರ್ಜಿಸುವ ಬದಲು ಸುಂದರವಾಗಿ ಪ್ಯಾಕ್ ಮಾಡಿ ಉಪ್ಪಿನ ಹೆಸರಿನಲ್ಲಿ ಭಾರತದಲ್ಲಿ ಮಾರಾಟ ಮಾಡಲಾಗುತ್ತದೆ. ಈ ಉಪ್ಪಿನ ಸೇವನೆಯಿಂದ ನಪುಂಸಕತ್ವ, ಥೈರಾಯ್ಡ್ ಗ್ರಂಥಿಯ ಬಾವು ಹಾಗೂ ಇತರ ತೊಂದರೆಗಳು ಎದುರಾಗುತ್ತವೆ. ಈ ಉಪ್ಪಿನ ಮಾರಾಟಗಾರರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸಗಟಾಗಿ ಸ್ಥಳೀಯರಿಗೆ ಒದಗಿಸಿ ಸ್ಥಳೀಯ ಸಂಸ್ಥೆಗಳೇ ತಮ್ಮ ಹೆಸರಿರುವ ಪ್ಯಾಕೆಟ್ಟುಗಳಲ್ಲಿ ಈ ನಕಲಿ ಉಪ್ಪನ್ನು ಮಾರುತ್ತಿದ್ದಿರಬಹುದು. ಎಚ್ಚರಿಕೆ, ಈ ಉತ್ಪನ್ನ ಚೀನಾದ್ದೂ ಆಗಿರಬಹುದು!

ನಕಲಿ ಬಟಾಣಿ ಕಾಳು

ನಕಲಿ ಬಟಾಣಿ ಕಾಳು

ಚೀನಾದಿಂದ ಬಂದಿರುವ ಈ ನಕಲಿ ಬಟಾಣಿಕಾಳುಗಳಲ್ಲಿ ಸೋಡಿಯಂ ಮೆಟಾಬೈಸಲ್ಫೇಟ್, ಸೋಯಾ ಅವರೆ ಹಾಗೂ ಕೃತಕ ಹಸಿರು ಬಣ್ಣಗಳಿವೆ. ಇವುಗಳಲ್ಲಿ ಇನ್ನೂ ಕೆಲವಾರು ಕೃತಕ ಹಾಗೂ ಹಾನಿಕರ ಮತ್ತು ಕ್ಯಾನ್ಸರ್ ಕಾರಕ ರಾಸಾಯನಿಕವನ್ನು ಬೆರೆಸಿರಲಾಗಿರುತ್ತದೆ. ಈ ಬಟಾಣಿಗಳನ್ನು ಜಜ್ಜಿದಾಗ ಸಾಮಾನ್ಯ ಬಟಾಣಿಯಂತೆ ತುಂಡು ತುಂಡಾಗದೇ ಚಿಕ್ಕ ಚಿಕ್ಕ ಕಾಳುಗಳಂತೆ ಬಿಡಿಬಿಡಿಯಾಗುತ್ತದೆ.

ಕೃತಕ ಟೆಲಪಿಯಾ ಮೀನು

ಕೃತಕ ಟೆಲಪಿಯಾ ಮೀನು

ಈ ಮೀನು ನಿಜವಾದ ಮೀನೇ ಆಗಿದೆ. ಆದರೆ ಇದನ್ನು ಬೆಳೆಸಲು ಕೃತಕ ಬೆಳವಣಿಗೆಯ ರಸದೂತಗಳನ್ನು ಹಾಗೂ ಪ್ರಬಲ ಪ್ರತಿಜೀವಕಗಳನ್ನು ಚುಚ್ಚುಮದ್ದಿನ ಮೂಲಕ ಸೇರಿಸಿರಲಾಗಿರುತ್ತದೆ. ಎಷ್ಟೇ ಆಕರ್ಷಕವಾಗಿ ಕಂಡರೂ ಚೀನಾದಿಂದ ಬಂದ ಯಾವುದೇ ಮೀನನ್ನು ಕೊಳ್ಳಬೇಡಿ. ಈ ಮೀನಿನ ಸೇವನೆಯಿಂದ ರಸದೂತಗಳ ಏರುಪೇರು ಮತ್ತು ಇತರ ಕಾಯಿಲೆಗಳು ಎದುರಾಗುತ್ತವೆ.

ಸಂಸ್ಕರಿತ ಅಣಬೆ

ಸಂಸ್ಕರಿತ ಅಣಬೆ

ಸಿದ್ದ ಅಹಾರಗಳನ್ನು ಸಂಸ್ಕರಿಸಿ ಡಬ್ಬಿಯಲ್ಲಿ ಗಾಳಿಯಾಡದಂತೆ ಪ್ಯಾಕ್ ಮಾಡಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ. ಹೀಗೇ ಡಬ್ಬಿಗಳಲ್ಲಿ ಲಭಿಸುವ ಅಣಬೆಗಳು ಚೀನಾದಿಂದ ಆಮದಾಗಿದ್ದರೆ ಸರ್ವಥಾ ಕೊಳ್ಳಬೇಡಿ. ಏಕೆಂದರೆ ಇವುಗಳ ಪೊಟ್ಟಣಗಳ ಮೇಲೆ ನೈಸರ್ಗಿಕ ಎಂದು ಮುದ್ರಿಸಲಾಗಿದ್ದರೂ ಇವು ಕೃತಕವಾಗಿವೆ. ಈ ಅಣಬೆಗಳ ಸೇವನೆಯಿಂದ ಹಲವಾರು ಮಾರಕ ತೊಂದರೆಗಳು ಎದುರಾಗಬಹುದು.

ಚೀನಾ ನಿರ್ಮಿತ ಕರಿ ಮತ್ತು ಬಿಳಿ ಕಾಳುಮೆಣಸಿನ ಪುಡಿ

ಚೀನಾ ನಿರ್ಮಿತ ಕರಿ ಮತ್ತು ಬಿಳಿ ಕಾಳುಮೆಣಸಿನ ಪುಡಿ

ಈ ಪುಡಿಗಳಲ್ಲಿ ನಿಜವಾದ ಕಾಳುಮೆಣಸಿನ ಪುಡಿ ಕಡಿಮೆ ಇದ್ದು ಕೃತಕ ರಾಸಾಯನಿಕಗಳ ಪುಡಿಗಳೇ ಹೆಚ್ಚಿರುತ್ತವೆ. ಇವು ಸಹಾ ಮಾರುಕಟ್ಟೆಯಲ್ಲಿ ಈಗಾಗಲೇ ಹೆಚ್ಚಿನ ಸಂಖ್ಯೆಯಲ್ಲಿ ಲಭ್ಯವಿವೆ. ಇವುಗಳನ್ನು ನಿಜವಾದ ಪುಡಿಯಂತೆಯೇ ಕಾಣಿಸಲು ಮಣ್ಣಿಗೆ ಕರಿಬಣ್ಣವನ್ನೂ, ಅಕ್ಕಿಹಿಟ್ಟನ್ನು ಬಿಳಿ ಬಣ್ಣಕ್ಕಾಗಿಯೂ ಬಳಸಲಾಗಿರುತ್ತದೆ. ಹಾಗಾಗಿ ಹಣ ಕೊಟ್ಟು ಸರ್ವಥಾ ಮಣ್ಣನ್ನು ಕೊಳ್ಳಬೇಡಿ.

ಸೇಬಿನ ರಸ

ಸೇಬಿನ ರಸ

ಭಾರತದಲ್ಲಿ ಮಾರಾಟವಾಗುವ ಒಟ್ಟು ಹಣ್ಣಿನ ರಸಗಳಲ್ಲಿ 30%ರಷ್ಟು ಪ್ರಮಾಣ ಚೀನಾದಿಂದ ಬಂದಿರುತ್ತದೆ. ಇವುಗಳಲ್ಲಿ ಸಂರಕ್ಷಕಗಳ ಜೊತೆಗೇ ಅಪಾಯಕಾರಿ ಕೀಟನಾಶಕಗಳನ್ನು ಬೆರೆಸಿರಲಾಗಿರುತ್ತದೆ. ಈ ಸೇಬಿನ ರಸವನ್ನು ಕೊಳ್ಳುವುದರಿಂದ ಸಾಧ್ಯವಾದಷ್ಟು ತಪ್ಪಿಸಿಕೊಳ್ಳಿ. ಏಕೆಂದರೆ ಈ ಸೇಬಿನ ರಸದ ಸೇವನೆಯಿಂದ ಕೆಟ್ಟದ್ದೇ ಹೊರತು ಒಳ್ಳೆಯದಾಗುವುದೇನೂ ಇಲ್ಲ.

English summary

Foods Made in China You Must Aware

A common thought that all of us have when we see a Chinese product is that it is tasty and cheap. Do you know that Chinese foods have already found their way into your markets, your home and your body? We are unaware of the serious facts that we are consuming Chinese poisonous fake foods thinking them to be organic foods, due to their labeling.
X
Desktop Bottom Promotion