For Quick Alerts
ALLOW NOTIFICATIONS  
For Daily Alerts

ಸಿಎಫ್‌ಎಲ್‌ನ ಫ್ಲೋರೊಸೆಂಟ್ ಬೆಳಕು, ಆರೋಗ್ಯಕ್ಕೆ ತುಂಬಾನೇ ಅಪಾಯಕಾರಿ!

|

ಫ್ಲೋರೊಸೆಂಟ್ ದೀಪದ ಬೆಳಕಿನಿಂದ ನಿಮ್ಮ ಆರೋಗ್ಯದ ಮೇಲೆ ಪರಿಣಾಮವಾಗುತ್ತದೆಯೆ? ಹೌದು ಎನ್ನುತ್ತವೆ ಕೆಲ ಅಧ್ಯಯನ ವರದಿಗಳು. 2009 ರಲ್ಲಿ ಕೆನಡಾದ ಟ್ರೆಂಟ್ ಯುನಿವರ್ಸಿಟಿ ನಡೆಸಿದ ಅಧ್ಯಯನವೊಂದರಲ್ಲಿ ಫ್ಲೋರೊಸೆಂಟ್ ದೀಪದ ಅಲ್ಟ್ರಾ ವಯೊಲೆಟ್ ರೇಡಿಯೇಶನ್‌ನಿಂದ ಕಣ್ಣುಗಳಿಗೆ ಆಯಾಸ, ತಲೆನೋವು ಮತ್ತು ತಲೆ ಸುತ್ತುವಿಕೆಗಳು ಉಂಟಾಗಬಹುದು ಎಂಬುದು ಕಂಡು ಬಂದಿದೆ. 1 ರಿಂದ 2 ಅಡಿ ಹತ್ತಿರದವರೆಗೆ ಫ್ಲೋರೊಸೆಂಟ್ ದೀಪಗಳನ್ನು ಇಟ್ಟು ಈ ಪರೀಕ್ಷೆಗಳನ್ನು ಮಾಡಲಾಗಿದೆ.

ಸಿಎಫ್‌ಎಲ್ ಬಲ್ಬ್‌ಗಳು ಸಾಮಾನ್ಯವಾಗಿ ಮನೆ ಹಾಗೂ ಆಫೀಸುಗಳಲ್ಲಿ ಬಹುತೇಕವಾಗಿ ಬಳಸಲ್ಪಡುತ್ತಿವೆ. ವಾಶಿಂಗ್ಟನ್‌ನ ಸಾರ್ವಜನಿಕ ಆರೋಗ್ಯ ಮತ್ತು ಸಾಮಾಜಿಕ ಸೇವೆಗಳ ವಿಭಾಗದ ವರದಿಯ ಪ್ರಕಾರ ಸಿಎಫ್‌ಎಲ್‌ಗಳು ಅತ್ಯಂತ ಉತ್ತಮ ಬೆಳಕಿನ ಮೂಲಗಳಾಗಿವೆ. ಇತರ ರೀತಿಯ ಬಲ್ಬ್‌ಗಳಿಗಿಂತ ಸಿಎಫ್‌ಎಲ್‌ಗಳು ೧೦ ಪಟ್ಟು ಹೆಚ್ಚು ಅವಧಿ ಬಾಳುತ್ತವೆ ಹಾಗೂ ಇನಕ್ಯಾಂಡಿಸೆಂಟ್ ಬಲ್ಬ್‌ಗಳಿಗಿಂತ ನಾಲ್ಕನೇ ಒಂದರಷ್ಟು ವಿದ್ಯುತ್‌ನ್ನು ಮಾತ್ರ ಬಳಸಿಕೊಳ್ಳುತ್ತವೆ.

ಆದರೆ ಸಿಎಫ್‌ಎಲ್ ಲೈಟಿಂಗ್‌ನಿಂದ ಆರೋಗ್ಯದ ಮೇಲೆ ಉತ್ತಮ ಹಾಗೂ ಪ್ರತಿಕೂಲ ಎರಡೂ ರೀತಿಯ ಪರಿಣಾಮಗಳು ಆಗಬಹುದು. ಬಹಳಷ್ಟು ಜನರಿಗೆ ಈ ತೀಕ್ಷ್ಣವಾದ ಬೆಳಕು ಕಂಡರೆ ಆಗಿ ಬರುವುದಿಲ್ಲ. ಬಹಳ ಗಂಟೆಗಳ ಕಾಲ ಫ್ಲೋರೊಸೆಂಟ್ ಬೆಳಕಿನಡಿ ಕುಳಿತು ಕೆಲಸ ಮಾಡುವುದರಿಂದ ದೇಹಕ್ಕೆ ಆಯಾಸವಾಗುತ್ತದೆ ಮತ್ತು ನಿದ್ರಾ ಸಂಬಂಧಿ ಸಮಸ್ಯೆಗಳು, ಕ್ಯಾನ್ಸರ್, ತಲೆಶೂಲೆ ಮುಂತಾದ ಅನಾರೋಗ್ಯಗಳು ಉಂಟಾಗುವ ಸಾಧ್ಯತೆಗಳಿರುತ್ತವೆ. ಮಿನುಗುವ ಕೃತಕ ಬೆಳಕಿನಿಂದ ಉಂಟಾಗಬಹುದಾದ ಜೈವಿಕ ಮತ್ತು ಪಾರಿಸರಿಕ ಪರಿಣಾಮಗಳ ಕುರಿತು ನಡೆಸಲಾದ ಸಂಶೋಧನೆಯ ವರದಿಯಲ್ಲಿ ಫ್ಲೋರೊಸೆಂಟ್ ಬೆಳಕಿನ ಬಗ್ಗೆ ಹಲವಾರು ಮಾಹಿತಿಗಳನ್ನು ನೀಡಲಾಗಿದೆ.

ಫ್ಲೋರೊಸೆಂಟ್ ಲೈಟ್ ಸೆನ್ಸಿಟಿವಿಟಿ ಉಂಟಾಗಲು ಕಾರಣಗಳೇನು?

ಫ್ಲೋರೊಸೆಂಟ್ ಲೈಟ್ ಸೆನ್ಸಿಟಿವಿಟಿ ಉಂಟಾಗಲು ಕಾರಣಗಳೇನು?

ಯಾವುದೇ ಬೆಳಕಿನಿಂದ ಅಸಹನೀಯ ಭಾವನೆ ಉಂಟಾಗಿ ಒಂದು ರೀತಿಯ ಅಸ್ವಸ್ಥತೆ ಆವರಿಸಿದರೆ ಅದನ್ನು ಲೈಟ್ ಸೆನ್ಸಿಟಿವಿಟಿ ಎಂದು ಕರೆಯಲಾಗುತ್ತದೆ. ತಡೆಯಲಾಗದ ಬೆಳಕು ನೋಡಿದಾಗ ಕಣ್ಣು ಮುಚ್ಚಿಕೊಳ್ಳಬೇಕೆನಿಸುತ್ತದೆ ಅಥವಾ ಪದೇ ಪದೇ ಕಣ್ಣು ರೆಪ್ಪೆ ಬಡಿಯಬೇಕೆನಿಸುತ್ತದೆ. ಅಲ್ಲದೆ ತೀಕ್ಷ್ಣವಾದ ಬೆಳಕು ತಲೆನೋವು ಸಹ ಉಂಟು ಮಾಡಬಹುದು.

Most Read: ಲೈಂಗಿಕ ಸಮಸ್ಯೆ ಸಹಿತ ಹಲವಾರು ರೋಗಗಳನ್ನು ನಿಯಂತ್ರಿಸಲು 'ಕಿತ್ತಳೆ ಹಣ್ಣು' ಸೇವಿಸಿ

ಫ್ಲೋರೊಸೆಂಟ್ ಲೈಟ್ ಸೆನ್ಸಿಟಿವಿಟಿಯ ಲಕ್ಷಣಗಳು

ಫ್ಲೋರೊಸೆಂಟ್ ಲೈಟ್ ಸೆನ್ಸಿಟಿವಿಟಿಯ ಲಕ್ಷಣಗಳು

ಫ್ಲೋರೊಸೆಂಟ್ ಲೈಟ್ ಸೆನ್ಸಿಟಿವಿಟಿಯಿಂದ ದೈಹಿಕ ಹಾಗೂ ಮಾನಸಿಕ ಪರಿಣಾಮಗಳು ಕಂಡುಬರುತ್ತವೆ. ಫ್ಲೋರೊಸೆಂಟ್ ಲೈಟ್‌ನಡಿ ಇದ್ದಾಗ ಕೆಲ ನಿಮಿಷಗಳಲ್ಲಿ ಅಥವಾ ಗಂಟೆಗಳ ನಂತರ ಈ ಕೆಳಗೆ ತಿಳಿಸಲಾದ ಲಕ್ಷಣಗಳು ಆವರಿಸಬಹುದು:

*ಕಣ್ಣುಗಳಿಗೆ ಆಯಾಸ

*ಫ್ಲೋರೊಸೆಂಟ್ ಲೈಟ್ ನೋಡಲು ಆಗದಿರುವುದು

*ಕಣ್ಣು ಉರಿ ಅಥವಾ ನೋವು

*ಓದಲು ಹಾಗೂ ಏಕಾಗ್ರತೆ ಸಮಸ್ಯೆ

*ಅಸ್ಪಷ್ಟ ಅಥವಾ ದುರ್ಬಲ ದೃಷ್ಟಿ

*ತಲೆನೋವು ಅಥವಾ ಮೈಗ್ರೇನ್ ಅಟ್ಯಾಕ್

*ಚಿತ್ತ ಚಾಂಚಲ್ಯ

*ತಲೆ ಸುತ್ತುವಿಕೆ

*ವಾಕರಿಕೆ

*ಉಸಿರಾಟ ಸಮಸ್ಯೆ

*ನಿರುತ್ಸಾಹ

*ಆತಂಕ

*ಖಿನ್ನತೆ

*ನಿದ್ರಾ ಸಂಬಂಧಿ ಸಮಸ್ಯೆಗಳು

ಫ್ಲೋರೊಸೆಂಟ್ ಲೈಟ್‌ನಿಂದಾಗಬಹುದಾದ ಆರೋಗ್ಯ ಸಮಸ್ಯೆಗಳು

ಫ್ಲೋರೊಸೆಂಟ್ ಲೈಟ್‌ನಿಂದಾಗಬಹುದಾದ ಆರೋಗ್ಯ ಸಮಸ್ಯೆಗಳು

*ಕಣ್ಣುಗಳಲ್ಲಿ ಸಮಸ್ಯೆ

ಫ್ಲೋರೊಸೆಂಟ್ ಲೈಟ್‌ನಿಂದ ಕಣ್ಣುಗಳಲ್ಲಿ ಸಮಸ್ಯೆ ಉಂಟಾಗುತ್ತದೆ. ಕಣ್ಣುಗಳಲ್ಲಿ ಆಯಾಸ, ಉರಿ ಮತ್ತು ಪದೇ ಪದೇ ರೆಪ್ಪೆ ಬಡಿತ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಫ್ಲೋರೊಸೆಂಟ್ ಲೈಟ್‌ನ ಪ್ರಖರತೆಯಿಂದ ಅಕ್ಷಿಪಟಲಕ್ಕೆ ಹಾನಿ, ಸಮೀಪದೃಷ್ಟಿ ದೋಷಗಳು ಸಹ ಬರಬಹುದು ಎಂಬುದು ಕೆಲ ವೈದ್ಯರ ಅಭಿಪ್ರಾಯವಾಗಿದೆ. ಯಾವುದೇ ವ್ಯಕ್ತಿಗೆ ಫ್ಲೋರೊಸೆಂಟ್ ಲೈಟ್ ಸೆನ್ಸಿಟಿವಿಟಿ ಇದ್ದಲ್ಲಿ, ಅಂಥವರಿಗೆ ಕೇಂದ್ರೀಯ ನರಮಂಡಲ ಉದ್ದೀಪನಗೊಂಡು, ದೃಷ್ಟಿಯ ಸಮಸ್ಯೆಗಳು ಉದ್ಭವಿಸುತ್ತವೆ.

Most Read: ಆಲೂಗಡ್ಡೆ ಫೇಸ್ ಪ್ಯಾಕ್ ಬಳಸಿ ಹೊಳೆಯುವ ತ್ವಚೆ ಪಡೆದುಕೊಳ್ಳಿ

ತಲೆನೋವು ಹಾಗೂ ಮೈಗ್ರೇನ್ ಅಟ್ಯಾಕ್‌ಗಳು

ತಲೆನೋವು ಹಾಗೂ ಮೈಗ್ರೇನ್ ಅಟ್ಯಾಕ್‌ಗಳು

ಫ್ಲೋರೊಸೆಂಟ್ ಲೈಟ್‌ನಿಂದ ತಲೆನೋವು ಬರಬಹುದು ಎಂಬುದು ಸಾಬೀತಾಗಿದೆ. ಒಂದು ವೇಳೆ ಈಗಾಗಲೇ ತಲೆನೋವು ಇದ್ದಲ್ಲಿ ಫ್ಲೋರೊಸೆಂಟ್ ಲೈಟ್‌ನಿಂದ ಇದು ಹೆಚ್ಚಾಗುವ ಸಾಧ್ಯತೆಗಳಿರುತ್ತವೆ. ಬಹಳಷ್ಟು ಸಲ ತಲೆನೋವು ಅಥವಾ ಸರಣಿ ತಲೆನೋವು ಉಂಟಾಗಬಹುದು. ಮೈಗ್ರೇನ್ ಅಟ್ಯಾಕ್ ಸಮಸ್ಯೆ ಹೊಂದಿರುವ ಬಹುತೇಕ ಜನರಲ್ಲಿ ಇದು ಫ್ಲೋರೊಸೆಂಟ್ ಲೈಟ್‌ನಿಂದಲೇ ಆಗಿರುತ್ತದೆ. ಕಚೇರಿಗಳಲ್ಲಿ ಸಿಎಫ್‌ಎಲ್ ದೀಪದ ಕೆಳಗೆ ಕೆಲಸ ಮಾಡುವವರಿಗೆ ಇಂಥ ತಲೆನೋವು ಬರುವ ಸಾಧ್ಯತೆಗಳು ಬಹಳ ಹೆಚ್ಚಾಗಿವೆ.

ನಿದ್ರಾ ಮಾದರಿ ಹಾಳಾಗುವಿಕೆ

ನಿದ್ರಾ ಮಾದರಿ ಹಾಳಾಗುವಿಕೆ

ಸಿಎಫ್‌ಎಲ್ ಲೈಟ್‌ಗಳಿಂದ ಹೊರಹೊಮ್ಮುವ ಸ್ಪೆಕ್ಟ್ರಂ ಫ್ರಿಕ್ವೆನ್ಸಿಗಳು ಕಣ್ಣಿನ ವಿಶ್ಯುವಲ್ ಕಾರ್ಟೆಕ್ಸ್ ಬದಲಾಗಿ ಸಿರ್ಕ್ಯಾಡಿಯನ್ ಪಾಥವೇ ಮೂಲಕ ಹಾದು ಹೋಗುತ್ತವೆ. ಇದರಿಂದ ಮೆದುಳಿನ ಶಾರೀರಿಕ ನಿಯಂತ್ರಣದ ಪ್ರಕ್ರಿಯೆ ಹಾಳಾಗುತ್ತದೆ ಮತ್ತು ನಿದ್ರೆ ಹಾಗೂ ಎಚ್ಚರವಿರುವಿಕೆಗಳಿಗೆ ಬೇಕಾದ ಮೆಲಾಟೊನಿನ್ ಹಾರ್ಮೋನ್‌ನ ಉತ್ಪಾದನೆ ಕುಂಠಿತವಾಗುತ್ತದೆ. ಸಿಎಫ್‌ಎಲ್ ನಿಂದ ಹೊರಸೂಸುವ ನೀಲಿ ಲೈಟ್‌ನಿಂದ ದೇಹದ ಸಿರ್ಕ್ಯಾಡಿಯನ್ ರಿದಂ ಸಹ ಹಾಳಾಗುತ್ತದೆ.

Most Read: ಮೊಳಕೆ ಕಟ್ಟಿದ ಹೆಸರು ಕಾಳಿನ ಆರೋಗ್ಯಕಾರಿ ಪ್ರಯೋಜನಗಳು

ಫ್ಲೋರೊಸೆಂಟ್ ಲೈಟ್‌ನ ಕೆಲ ಅಂಶಗಳಿಂದ ವ್ಯಕ್ತಿಗಳಲ್ಲಿ ಈ ಕೆಳಗೆ ತಿಳಿಸಲಾದ ಸಹನಾಶಕ್ತಿ ಏರುಪೇರಾಗಬಹುದು;

ಫ್ಲೋರೊಸೆಂಟ್ ಲೈಟ್‌ನ ಕೆಲ ಅಂಶಗಳಿಂದ ವ್ಯಕ್ತಿಗಳಲ್ಲಿ ಈ ಕೆಳಗೆ ತಿಳಿಸಲಾದ ಸಹನಾಶಕ್ತಿ ಏರುಪೇರಾಗಬಹುದು;

*ಸಿಎಫ್‌ಎಲ್‌ನಿಂದ ಬರುವ ಪ್ರಖರ ನೀಲಿ ಬಣ್ಣದ ಲೈಟ್‌ನಿಂದ ಕಣ್ಣು ಬೇನೆ, ತಲೆನೋವು ಮತ್ತು ಮೈಗ್ರೇನ್ ಬರುತ್ತವೆ.

*ಕಣ್ಣಿಗೆ ಕಾಣಿಸದಿದ್ದರೂ ಕಡಿಮೆ ಫ್ರಿಕ್ವೆನ್ಸಿಯ ಫ್ಲಿಕರ್‌ಗಳನ್ನು ಮೆದುಳು ಗ್ರಹಿಸುತ್ತದೆ.

*ಒಟ್ಟಾರೆಯಾಗಿ ಬೆಳಕಿನ ಪ್ರಖರತೆಯಿಂದ ಲೈಟ್ ಸೆನ್ಸಿಟಿವ್ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ಫ್ಲೋರೊಸೆಂಟ್ ಲೈಟ್‌ನ ಪರಿಣಾಮಗಳನ್ನು ತಡೆಯುವುದು ಹೇಗೆ?

ಫ್ಲೋರೊಸೆಂಟ್ ಲೈಟ್‌ನ ಪರಿಣಾಮಗಳನ್ನು ತಡೆಯುವುದು ಹೇಗೆ?

*ಒಂದು ವೇಳೆ ಮೊದಲೇ ತಲೆನೋವಿನ ಸಮಸ್ಯೆ ಇದ್ದಲ್ಲಿ ಅದಕ್ಕೆ ಉಪಚಾರ ಪಡೆದುಕೊಳ್ಳಿ.

*ಕಚೇರಿಯಲ್ಲಿ ಸಿಎಫ್‌ಎಲ್ ಬೆಳಕಿನ ವ್ಯವಸ್ಥೆ ಇದ್ದರೆ ಕಂಪನಿ ಮಾಲೀಕರೊಂದಿಗೆ ಮಾತನಾಡಿ ಲೈಟ್ ಬದಲಾಯಿಸಲು ಹೇಳಿ. ಇದರಿಂದ ನಿಮ್ಮ ಕೆಲಸ ಕುಂಠಿತವಾಗುತ್ತಿರುವುದನ್ನು ಅವರ ಗಮನಕ್ಕೆ ತನ್ನಿ.

*ಟಿಂಟೆಡ್ ಗ್ಲಾಸ್ ಬಳಸುವ ಮೂಲಕ ಸಿಎಫ್‌ಎಲ್ ಲೈಟ್‌ನ ದುಷ್ಪರಿಣಾಮಗಳನ್ನು ಕೆಲಮಟ್ಟಿಗೆ ತಡೆಯಬಹುದು.

*ಆದಷ್ಟೂ ಹೆಚ್ಚು ಸೂರ್ಯನ ನೈಸರ್ಗಿಕ ಬೆಳಕನ್ನು ಬಳಸಲು ಪ್ರಯತ್ನಿಸಿ. ಜೊತೆಗೆ ಹಿತವಾದ ವರ್ಣದ ಇಂಟಿರೀಯರ್ ಲೈಟಿಂಗ್ ಮಾಡಿಸಬಹುದು.

English summary

Fluorescent Light Too Dangerous for Health!

Can fluorescent lights affect your health? A 2009 study done by Canada's Trent University found that UV radiation from fluorescent lights may cause eye strain, migraines and dizziness in people. The effects are lessened by placing fluorescent lights at least 1-2 ft away. Physical and emotional symptoms develop as a result of your sensitivity to fluorescent light.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more