For Quick Alerts
ALLOW NOTIFICATIONS  
For Daily Alerts

ಸ್ತನಗಳನ್ನು ಬಿಗಿಗೊಳಿಸುವ ಕೆಲವು ನೈಸರ್ಗಿಕ ಮನೆಮದ್ದುಗಳು

By Hemanth
|

ಹೆಣ್ಣಿನ ಸೌಂದರ್ಯವನ್ನು ಆಕೆಯ ಸ್ತನಗಳು ಮತ್ತಷ್ಟು ಹೆಚ್ಚಿಸುತ್ತದೆ ಎನ್ನುವ ಮಾತಿದೆ. ಸುಂದರ ಹಾಗೂ ಸರಿಯಾದ ಆಕೃತಿಯ ಸ್ತನವು ಸೌಂದರ್ಯದ ಪ್ರತೀಕ. ಆದರೆ ಇಂತಹ ಸ್ತನಗಳು ಒಮ್ಮೆಲೆ ಜೋತು ಬೀಳಲು ಆರಂಭವಾದಾಗ ಅದರಿಂದ ನಿಮ್ಮ ಆತ್ಮವಿಶ್ವಾಸದ ಮೇಲೆ ಪರಿಣಾಮ ಬೀರುವುದು. 40ರ ಹರೆಯದಲ್ಲಿ ಸ್ತನಗಳು ಜೋತು ಬೀಳಲು ಆರಂಭವಾಗುವುದು ಪ್ರಕೃತಿ ಸಹಜ ಲಕ್ಷಣ. ಆದರೆ ಇಂದಿನ ಜೀವನ ಶೈಲಿಯಿಂದಾಗಿ ಹದಿಹರೆಯದಲ್ಲೇ ಸ್ತನಗಳು ಜೋತು ಬೀಳುವುದು ತುಂಬಾ ಚಿಂತೆಯ ವಿಷಯ.

ಅಧ್ಯಯನ ವರದಿ: ಬ್ರಾ ಧರಿಸುವುದರಿಂದ ಕೂಡ ಮಹಿಳೆಯರಿಗೆ ತೊಂದರೆ ಇದೆ!

ಆಗಾಗ ತೂಕ ಹೆಚ್ಳಳ ಹಾಗೂ ಕಡಿಮೆಯಾಗುವುದು, ಜೀವನಶೈಲಿ ಮತ್ತು ಕುಳಿತುಕೊಳ್ಳುವುದು ಮತ್ತು ಮಲಗುವ ರೀತಿ ಕೂಡ ಸ್ತನ ತನ್ನ ಬಿಗಿತನ ಕಳೆದುಕೊಳ್ಳಲು ಕಾರಣಗಳಾಗಿವೆ. ಕೆಲವು ಮಹಿಳೆಯರು ಈ ಸಮಸ್ಯೆಯನ್ನು ಕಡೆಗಣಿಸಿ ಬಿಡುತ್ತಾರೆ. ಆದರೆ ಇನ್ನು ಕೆಲವರುಶಸ್ತ್ರಚಿಕಿತ್ಸೆ ಮಾಡಿಕೊಳ್ಳುವರಾದರೂ ಇದರ ಅಡ್ಡಪರಿಣಾಮಗಳ ಬಗ್ಗೆ ಗಮನಹರಿಸಬೇಕು. ಇದರಲ್ಲಿ ಕೆಲವೊಂದು ನೈಸರ್ಗಿಕ ಮದ್ದುಗಳನ್ನುಪ್ರಯೋಗಿಸಿದರೆ ಅದು ತುಂಬಾ ಪರಣಾಮಕಾರಿ. ಸ್ತನಗಳು ಜೋತುಬೀಳದಂತೆ ಬಿಗಯಾಗಿರಲು ಕೆಲವೊಂದು ಮನೆಮದ್ದುಗಳನ್ನು ನಿಮಗೆ ಈಲೇಖನದಲ್ಲಿ ತಿಳಿಸಿಕೊಡಲಿದ್ದೇವೆ....

ಸೌತೆಕಾಯಿ ಮತ್ತು ಮೊಟ್ಟೆ

ಸೌತೆಕಾಯಿ ಮತ್ತು ಮೊಟ್ಟೆ

ಜೋತು ಬಿದ್ದ ಸ್ತನಗಳನ್ನು ಮತ್ತೆ ಬಿಗಿಯಾಗಿಸಲು ಇದು ತುಂಬಾ ಪರಿಣಾಮಕಾರಿ ಮನೆಮದ್ದು. ಸೌತೆಕಾಯಿ ಮತ್ತು ಮೊಟ್ಟೆಯ ಲೋಳೆಯಿಂದ ತಯಾರಿಸಿರುವಂತಹ ಮಾಸ್ಕ್ ನ್ನು ಹಚ್ಚಿಕೊಳ್ಳಬೇಕು. ಸೌತೆಕಾಯಿಯಲ್ಲಿ ಚರ್ಮಕ್ಕೆ ಪೋಷಣೆ ನೀಡುವ ಗುಣಗಳು ಇವೆ ಮತ್ತು ಮೊಟ್ಟೆಯ ಲೋಳೆಯಲ್ಲಿ ಉನ್ನತ ಮಟ್ಟದ ಪ್ರೋಟೀನ್ ಮತ್ತು ವಿಟಮಿನ್ ಗಳು ಇವೆ. ಇದು ಸ್ತನಗಳು ಜೋತುಬೀಳದಂತೆ ತಡೆಯುವುದು. ವಾರದಲ್ಲಿ ಒಂದು ಸಲ ಈ ಮಾಸ್ಕ್ ಅನ್ನು ಬಳಸಿಕೊಂಡರೆ ಸ್ತನಗಳ ಕೋಶಗಳಿಗೆ ಬಲಿಷ್ಠವಾಗುವುದು.

ಸೌತೆಕಾಯಿ ಮತ್ತು ಮೊಟ್ಟೆ

ಸೌತೆಕಾಯಿ ಮತ್ತು ಮೊಟ್ಟೆ

ಒಂದು ಸಣ್ಣ ಸೌತೆಕಾಯಿಯನ್ನು ರುಬ್ಬಿಕೊಳ್ಳಿ ಮತ್ತು ಇದಕ್ಕೆ ಒಂದು ಮೊಟ್ಟೆಯ ಲೋಳೆ , ಒಂದು ಚಮಚ ಬೆಣ್ಣೆ ಅಥವಾ ಕ್ರೀಮ್ ಹಾಕಿಕೊಂಡು ಪೇಸ್ಟ್ ಮಾಡಿ. ಇದನ್ನು ಮೇಲ್ಮುಖವಾಗಿ ಸ್ತನಗಳ ಮೇಲೆ ಹಚ್ಚಿಕೊಳ್ಳಿ ಮತ್ತು 30 ನಿಮಿಷ ಕಾಲ ಹಾಗೆ ಬಿಡಿ. ಬಳಿಕ ತಣ್ಣೀರಿನಿಂದ ತೊಳೆಯಿರಿ.ಸ್ತನಗಳು ಜೋತು ಬೀಳುವುದನ್ನು ತಡೆಯುವುವಲ್ಲಿ ಮೊಟ್ಟೆಯ ಬಿಳಿ ಭಾಗವು ತುಂಬಾ ಪರಿಣಾಮಕಾರಿ. ಇದರಲ್ಲಿನ ಸಂಕೋಚನ ಗುಣ ಮತ್ತು ಚರ್ಮಕ್ಕೆ ಪೋಷಣೆ ನೀಡುವ ಗುಣವು ಜೋತು ಬಿದ್ದ ಸ್ತನಗಳನ್ನು ಸರಿಪಡಿಸುವುದು. ಮೊಟ್ಟೆಯ ಬಿಳಿ ಭಾಗದಲ್ಲಿ ಇರುವ ಹೈಡ್ರೋ ಲಿಕ್ವಿಡ್ ಸ್ತನಗಳ ಸುತ್ತಲಿನ ಜೋತುಬಿದ್ದ ಚರ್ಮವನ್ನು ಬಿಗಿಯಾಗಿಸುವುದು.

ಸೌತೆಕಾಯಿ ಮತ್ತು ಮೊಟ್ಟೆ

ಸೌತೆಕಾಯಿ ಮತ್ತು ಮೊಟ್ಟೆ

ಒಂದು ಮೊಟ್ಟೆ ಒಡೆದು ಅದನ್ನು ಕಲಸಿಕೊಳ್ಳಿ. ಇದನ್ನು ಮೇಲ್ಮುಖವಾಗಿ ಸ್ತನಗಳಿಗೆ ಹಚ್ಚಿಕೊಳ್ಳಿ ಮತ್ತು 30 ನಿಮಿಷ ಕಾಲ ಹಾಗೆ ಬಿಡಿ. ಇದನ್ನು ತೆಗೆಯಲು ಸೌತೆಕಾಯಿ ಜ್ಯೂಸ್ ಅಥವಾ ಈರುಳ್ಳಿ ರಸ ಬಳಸಿ. ಇದರ ಬಳಿಕ ತಣ್ಣೀರಿನಿಂದ ತೊಳೆಯಿರಿ.

ಸ್ತನಗಳನ್ನು ಬಿಗಿಗೊಳಿಸಲು ಮತ್ತೊಂದು ಪರಿಣಾಮಕಾರಿ ಮನೆಮದ್ದು

ಸ್ತನಗಳನ್ನು ಬಿಗಿಗೊಳಿಸಲು ಮತ್ತೊಂದು ಪರಿಣಾಮಕಾರಿ ಮನೆಮದ್ದು

ಒಂದು ಮೊಟ್ಟೆಯ ಬಿಳಿ ಲೋಳೆ ಮತ್ತು ಒಂದು ಚಮಚ ಸಾದಾ ಮೊಸರು ಮತ್ತು ಜೇನುತುಪ್ಪ ಬೆರೆಸಿಕೊಳ್ಳಿ. ಇದನ್ನು ಸ್ತನಗಳಿಗೆ ಮೇಲ್ಮುಖವಾಗಿ ಹಚ್ಚಿಕೊಳ್ಳಿ ಮತ್ತು 20 ನಿಮಿಷ ಕಾಲ ಹಾಗೆ ಬಿಡಿ. ಬಳಿಕ ತಣ್ಣೀರಿನಿಂದ ತೊಳೆಯಿರಿ.ಜೋತು ಬೀಳುವ ಸ್ತನಗಳನ್ನು ಬಿಗಿಗೊಳಿಸಲು ಮೆಂತ್ಯೆ ಕಾಳುಗಳು ತುಂಬಾ ಪರಿಣಾಮಕಾರಿ ಎಂದು ಆಯುರ್ವೇದವು ಹೇಳುತ್ತದೆ. ಇದರಲ್ಲಿರುವ ವಿಟಮಿನ್ ಗಳು ಮತ್ತು ಆ್ಯಂಟಿಆಕ್ಸಿಡೆಂಟ್ ಗಳು ಫ್ರೀ ರ್ಯಾಡಿಕಲ್ ನಿಂದ ಆಗುವಂತಹ ಹಾನಿ ತಡೆಯುವುದು ಮತ್ತು ಸ್ತನಗಳ ಸುತ್ತಲಿನ ಚರ್ಮವನ್ನು ಮೃಧು ಹಾಗೂ ಬಿಗಿಗೊಳಿಸುವುದು.

ಸ್ತನಗಳನ್ನು ಬಿಗಿಗೊಳಿಸಲು ಮತ್ತೊಂದು ಪರಿಣಾಮಕಾರಿ ಮನೆಮದ್ದು

ಸ್ತನಗಳನ್ನು ಬಿಗಿಗೊಳಿಸಲು ಮತ್ತೊಂದು ಪರಿಣಾಮಕಾರಿ ಮನೆಮದ್ದು

1/4 ಕಪ್ ಮೆಂತೆ ಹುಡಿ ತೆಗೆದುಕೊಳ್ಳಿ ಮತ್ತು ಇದನ್ನು ನೀರಿಗೆ ಹಾಕಿಕೊಂಡು ದಪ್ಪಗಿನ ಪೇಸ್ಟ್ ಮಾಡಿ. ಈ ಪೇಸ್ಟ್ ನ್ನು ಸ್ತನಗಳಿಗೆ ಹಚ್ಚಿಕೊಳ್ಳಿ ಸುಮಾರು 5-10 ನಿಮಿಷ ಕಾಲ ಹಾಗೆ ಬಿಡಿ. ಬಿಸಿ ನೀರಿನಿಂದ ತೊಳೆಯಿರಿ. ವಾರದಲ್ಲಿ ಒಂದು ಅಥವಾ ಎರಡು ಸಲ ಇದನ್ನು ಬಳಸಬಹುದು. ಈ ಮಿಶ್ರಣವು ತುಂಬಾ ಪರಿಣಾಮಕಾರಿಯಾಗಿರುವ ಕಾರಣ ವಾರದಲ್ಲಿ ಒಂದು ಸಲ ಬಳಸಿದರು ಫಲಿತಾಂಶ ಪಡೆಯಬಹುದು.

ಸ್ತನಗಳನ್ನು ಬಿಗಿಗೊಳಿಸಲು ಮತ್ತೊಂದು ಪರಿಣಾಮಕಾರಿ ಮನೆಮದ್ದು

ಸ್ತನಗಳನ್ನು ಬಿಗಿಗೊಳಿಸಲು ಮತ್ತೊಂದು ಪರಿಣಾಮಕಾರಿ ಮನೆಮದ್ದು

1/2 ಕಪ್ ಮೊಸರು, ತಲಾ 10 ಹನಿ ಮೆಂತೆ ಎಣ್ಣೆ ಮತ್ತು ವಿಟಮಿನ್ ಇ ತೈಲ, ಒಂದು ಮೊಟ್ಟೆಯ ಬಿಳಿ ಭಾಗ ತೆಗೆದುಕೊಳ್ಳಿ. ಇದೆಲ್ಲವನ್ನು ಸರಿಯಾಗಿ ರುಬ್ಬಿಕೊಂಡು ಪೇಸ್ಟ್ ಮಾಡಿ. ನಿಧಾನವಾಗಿ ಇದನ್ನು ಸ್ತನಗಳಿಗೆ ಹಚ್ಚಿಕೊಳ್ಳಿ ಮತ್ತು 30 ನಿಮಿಷ ಕಾಲ ಹಾಗೆ ಬಿಡಿ. ತಣ್ಣೀರಿನಿಂದ ತೊಳೆಯಿರಿ.

ಆಲಿವ್ ಎಣ್ಣೆ

ಆಲಿವ್ ಎಣ್ಣೆ

ಕೆಲವು ಹನಿ ಆಲಿವ್ ತೈಲವನ್ನು ತೆಗೆದುಕೊಂಡು ಅದನ್ನು ಅಂಗೈಗೆ ಹಾಕಿ ಉಜ್ಜಿಕೊಳ್ಳಿ. ಇದನ್ನು ಈಗ ಮೇಲ್ಮುಖವಾಗಿ ಸ್ತನಗಳಿಗೆ ಹಚ್ಚಿಕೊಳ್ಳಿ. ಸುಮಾರು 15 ನಿಮಿಷ ಕಾಲ ಮಸಾಜ್ ಮಾಡಿ. ಇದು ರಕ್ತಪರಿಚಲನೆ ಹೆಚ್ಚಿಸಿ, ಹಾನಿಗೊಳಗಾಗಿರುವ ಕೋಶಗಳನ್ನು ಸರಿಪಡಿಸಲು ನೆರವಾಗುವುದು. ವಾರದಲ್ಲಿ ನಾಲ್ಕು ಅಥವಾ ಐದು ಸಲ ಇದನ್ನು ಬಳಸಿಕೊಳ್ಳಿ.ಬಾದಾಮಿ. ಆರ್ಗನ್. ಅವಕಾಡೋ ಅಥವಾ ಜೊಜೊಬಾ ಎಣ್ಣೆಯಿಂದಲೂ ಸ್ತನಗಳಿಗೆ ಮಸಾಜ್ ಮಾಡಿದರೆ ಒಳ್ಳೆಯದು.

ಐಸ್

ಐಸ್

ಐಸ್ ನಿಂದ ಸ್ತನಗಳಿಗೆ ಮಸಾಜ್ ಮಾಡುವುದರಿಂದ ಮತ್ತೆ ಬಿಗಿಯಾಗುವುದು. ಯಾಕೆಂದರೆ ತಾಪಮಾನದಿಂದ ಕೋಶಗಳು ಸೆಳೆಯಲ್ಪಡುವುದು ಇದರಿಂದ ಸ್ತನಗಳು ಬಿಗಿಯಾಗುವುದು.

ಎರಡು ಐಸ್ ನ ತುಂಡುಗಳನ್ನು ತೆಗೆದುಕೊಂಡು ವೃತ್ತಾಕಾರದಲ್ಲಿ ಅದನ್ನು ಎರಡೂ ಸ್ತನಗಳಿಗೆ ಮಸಾಜ್ ಮಾಡಿ. ನಿಮಿಷಗಳ ಕಾಲ ಹೀಗೆ ಮಾಡಿ ಮತ್ತು ಬಳಿಕ ಟವೆಲ್ ನಿಂದ ಒರೆಸಿಕೊಳ್ಳಿ. 30 ನಿಮಿಷ ಕಾಳ ಒರಗಿಕೊಂಡೇ ಇರಿ.

ಇದನ್ನು ದಿನವಿಡಿ ಬಿಟ್ಟುಬಿಟ್ಟು ಪ್ರಯೋಗಿಸಿದರೆ ಉತ್ತಮ ಫಲಿತಾಂಶ ಸಿಗುವುದು.

English summary

Effective Home Remedies for Sagging Breasts

Losing and gaining weight rapidly, lifestyle factors and even the way you sit or sleep can contribute to losing breast firmness. Many women neglect this change and a few who opt for surgery have to be careful about its side effects. Natural home remedies are obviously the safest to try. Here we have listed a few home remedies that would help in maintaining the firmness of your breasts.
X
Desktop Bottom Promotion