For Quick Alerts
ALLOW NOTIFICATIONS  
For Daily Alerts

ಮಕ್ಕಳಿಗೆ ಕಿವಿ ನೋವು ಬಂದರೆ- ಈ ಸರಳ ಮನೆಔಷಧಿಗಳನ್ನು ಪ್ರಯತ್ನಿಸಿ

By Hemanth
|

ದೇಹದ ಯಾವುದೇ ಅಂಗವಾದರೂ ಸರಿ, ಅದರಲ್ಲಿ ನೋವು ಕಾಣಿಸಿಕೊಂಡಾಗ ಎಲ್ಲಾ ಚಟುವಟಿಕೆಗಳು ಸ್ತಬ್ದವಾಗುವುದು. ಅದರಲ್ಲೂ ಕಿವಿ ನೋವುನ್ನು ಪ್ರತಿಯೊಬ್ಬರು ಅನುಭವಿಸಿರುತ್ತಾರೆ ಮತ್ತು ಇದು ತುಂಬಾ ಕಿರಿಕಿರಿ ಉಂಟು ಮಾಡುವುದು. ಮಕ್ಕಳಲ್ಲಿ ಕಿವಿನೋವು ಕಾಣಿಸಿಕೊಂಡರೆ ಆಗ ಇದು ದೊಡ್ಡವರಲ್ಲಿ ಭಾರೀ ಭೀತಿ ಉಂಟು ಮಾಡುತ್ತದೆ. ಯಾಕೆಂದರೆ ಅವರಿಗೆ ನೋವಿನ ಬಗ್ಗೆ ವಿವರಿಸಲು ಆಗಲ್ಲ. ಇದರಿಂದ ನೋವು ನಿವಾರಣೆ ಮಾಡುವುದು ಹೇಗೆ ಎನ್ನುವ ಚಿಂತೆ ಕಾಡುವುದು. ಸೋಂಕು, ಕಿವಿ ತಮಟೆಯಲ್ಲಿ ರಂಧ್ರವಾಗಿರುವುದು ಮತ್ತು ಕುದಿಯುವುದು ಕಿವಿ ನೋವಿಗೆ ಕಾರಣಗಳು.

ಕಿವಿ ನೋವಿಗೆ ಸರಿಯಾದ ಚಿಕಿತ್ಸೆ ಮಾಡಲು ಇದು ಬರಲು ಕಾರಣವೇನೆಂದು ಪತ್ತೆ ಮಾಡುವುದು ಅತೀ ಅಗತ್ಯ. ಮಕ್ಕಳಲ್ಲಿ ಕಾಣಿಸುವ ಕಿವಿ ನೋವಿಗೆ ನೈಸರ್ಗಿಕ ಮದ್ದುಗಳು ಇಲ್ಲಿದೆ ನೋಡಿ... ಮಗು ನಿರಂತರವಾಗಿ ಅಳುತ್ತಾ ಇದ್ದರೆ, ಆರಾಮವಾಗಿಲ್ಲದೆ ಇದ್ದರೆ ಅಥವಾ ಕಿವಿಯನ್ನು ನಿಮ್ಮಿಂದ ದೂರವಿಡುತ್ತಿದ್ದರೆ ಆಗ ಮಗುವಿಗೆ ಕಿವಿ ಸೋಂಕು ಉಂಟಾಗಿದೆ ಎಂದು ಹೇಳಬಹುದು. ಮಕ್ಕಳಲ್ಲಿ ಕಾಣಿಸಿಕೊಳ್ಳುವ ಕಿವಿ ನೋವಿಗೆ ಕೆಲವು ಸರಳ ಮನೆಮದ್ದುಗಳು ಇವೆ.

ತಂಪು ಚಿಕಿತ್ಸೆ

ತಂಪು ಚಿಕಿತ್ಸೆ

ಬಿಸಿ ಚಿಕಿತ್ಸೆಯು ನೆರವಾಗದೆ ಇದ್ದರೆ ಆಗ ನೀವು ತಂಪು ಚಿಕಿತ್ಸೆ ನೀಡಿ. ನೀವು ಮಗುವಿನ ಕಿವಿಯ ಚರ್ಮಕ್ಕೆ ನೇರವಾಗಿ ಐಸ್ ಇಡುಬಾರದು. ನೇರವಾಗಿ ಐಸ್ ಇಟ್ಟರೆ ರಕ್ತಸಂಚಾರ ನಿಲ್ಲುವುದು. ವಾಟರ್ ಪ್ರೂಫ್ ಬ್ಯಾಗ್ ಗೆ ಐಸ್ ಹಾಕಿ ಅದನ್ನು ಟವೆಲ್ ನಿಂದ ಸುತ್ತಿಕೊಳ್ಳಿ. ತಣ್ಣಗಿರುವ ಹಾಲಿನ ಪ್ಯಾಕೆಟ್ ಕೂಡ ಬಳಸಬಹುದು. ಐಸ್ ಇಲ್ಲದೆ ಇದ್ದರೆ ತಣ್ಣೀರಿನ ಬಾಟಲಿ ಆಗಬಹುದು. ಇದು ನೋವನ್ನು ಕಡಿಮೆ ಮಾಡುವುದು.

ತುಳಸಿ ಎಲೆಗಳು

ತುಳಸಿ ಎಲೆಗಳು

ತುಳಸಿ ಎಲೆಗಳು ಬೀಟಾ ಕ್ಯಾರೊಟಿನ್ ಅನ್ನು ಒಳಗೊಂಡಿದ್ದು ವಿಟಮಿನ್ ಸಿ ಇದರಲ್ಲಿದೆ. ಇಯುಜೊನಲ್, ಬೋರ್ನಲ್ ಅಂಶಗಳನ್ನು ಇದು ಪಡೆದಿದೆ. ಇದೊಂದು ಅದ್ಭುತ ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿಸೆಪ್ಟಿಕ್ ಅಂಶಗಳನ್ನು ಒಳಗೊಂಡಿದ್ದು ಕಿವಿ ನೋವಿಗೆ ಉತ್ತಮ ಪರಿಹಾರವನ್ನು ಒದಗಿಸುತ್ತದೆ. ಅಲ್ಲದೆ ಇದು ತುಂಬಾ ಅಗ್ಗ ಮತ್ತು ಸರಳ ಮದ್ದುಗಳು ನಿಮ್ಮ ಕೈಗೆಟಕುವಂತೆ ಇದೆ. ತುಳಸಿ ಎಲೆಗಳಲ್ಲಿ ಹಲವಾರು ರೀತಿಯ ಔಷಧೀಯ ಗುಣಗಳು ಇವೆ. ತುಳಸಿ ಎಲೆಗಳನ್ನು ಜಜ್ಜಿಕೊಂಡು ಅದರ ರಸ ತೆಗೆದು, ಕಿವಿಗೆ ಕೆಲವು ಹನಿ ಬಿಡಿ. ಕಿವಿಯಲ್ಲಿ ಬ್ಯಾಕ್ಟಿರಿಯಾದ ಬೆಳವಣಿಗೆಯನ್ನು ಆಲೀವ್ ಆಯಿಲ್ ತಡೆಯುತ್ತದೆ. ಕಿವಿಗೆ ಹಾಕಿಕೊಳ್ಳುವ ಬಡ್ಸ್ ಬಳಸಿ ಆಲಿವ್ ಆಯಿಲ್ ಅನ್ನು ಕಿವಿಗೆ ಹಾಕಿಕೊಳ್ಳಬಹುದು.

ಆಲಿವ್ ತೈಲ

ಆಲಿವ್ ತೈಲ

ಮಕ್ಕಳಲ್ಲಿ ಕಿವಿನೋವಿಗೆ ಆಲಿವ್ ತೈಲವು ತುಂಬಾ ಪರಿಣಾಮಕಾರಿ ನೈಸರ್ಗಿಕ ಮನೆಮದ್ದು. ಸ್ವಲ್ಪ ಪ್ರಮಾಣದ ಆಲಿವ್ ತೈಲವನ್ನು ಸ್ವಚ್ಛ ತವಾಗೆ ಹಾಕಿ ಬಿಸಿ ಮಾಡಿ ಅಥವಾ ಮೈಕ್ರೋವೇವ್ ಮಾಡಿ. ಇದು ದೇಹದ ಉಷ್ಣತೆಗೆ ಸರಿಯಾಗಿ ಬರಲಿ. ಸ್ವಚ್ಛವಾಗಿರುವ ಇಯರ್ ಬಡ್ ಬಳಸಿಕೊಂಡು ಹೊರಗಡೆ ಮತ್ತು ನೋವಿರುವ ಕಿವಿ ಒಳಗಡೆ ಹಚ್ಚಿಕೊಳ್ಳಿ. ಎಣ್ಣೆಯು ಬೇರೆ ಕಡೆ ಬೀಳದಂತೆ ನೀವು ಟವೆಲ್ ಬಳಸಿಕೊಳ್ಳಬಹುದು.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಕೆಲವು ಎಸಲು ಬೆಳ್ಳುಳ್ಳಿಗಳನ್ನು ಜಜ್ಜಿಕೊಂಡು ಅದನ್ನು ಎಳ್ಳೆಣ್ಣೆ/ ಆಲಿವ್ ತೈಲದೊಂದಿಗೆ ಬಿಸಿ ಮಾಡಿ. ಇದನ್ನು ಬಟ್ಟೆಯಿಂದ ಸೋಸಿಕೊಂಡು ನೋವಿರುವ ಕಿವಿ ಸುತ್ತಲು ಮತ್ತು ಒಳಗೆ ಹಚ್ಚಿಕೊಳ್ಳಿ. ಅಥವಾ ಬೆಳ್ಳುಳ್ಳಿಯನ್ನು ಜಜ್ಜಿ ಅದರ ರಸ ತೆಗೆದು ಕೆಲವು ಬಿಂದುಗಳನ್ನು ನೊವಿರುವ ಕಿವಿಗೆ ಹಾಕಿ. ನೋವನ್ನು ನಿವಾರಿಸಿ ಕಿವಿ ಸೋರುವುದನ್ನು ಇದು ಕಡಿಮೆಗೊಳಿಸುತ್ತದೆ. ಈ ರೀತಿಯಲ್ಲೂ ಕಿವಿ ನೋವನ್ನು ಶಮನಗೊಳಿಸಬಹುದು.

ಸಾಸಿವೆ ಎಣ್ಣೆ

ಸಾಸಿವೆ ಎಣ್ಣೆ

ಹೆಚ್ಚಿನ ಸಂದರ್ಭದಲ್ಲಿ ಕಿವಿಯೊಳಗಿನ ಅತಿಯಾದ ಮೇಣವು ಜಮೆಯಾಗದಂತೆ ಅದು ಹೊರಹಾಕುವುದು. ಇದು ನಡೆಯದೆ ಇರುವಾಗ ಕಿವಿಯ ಮೇಣವು ಗಟ್ಟಿಯಾಗುವುದು. ಇದರಿಂದ ಬ್ಲಾಕ್ ಆಗಿ ಸೋಂಕು ಉಂಟಾಗಬಹುದು. ಬಿಸಿ ಸಾಸಿವೆ ಎಣ್ಣೆಯ ಕೆಲವು ಹನಿಗಳನ್ನು ಕಿವಿಯೊಳಗೆ ಬಿಡಿ. ಈ ಪ್ರಕ್ರಿಯೆಯನ್ನು ವಾರಗಳ ಕಾಲ ಮಾಡಿ. ಇದರಿಂದ ಬ್ಲಾಕ್ ಆಗಿರುವುದು ತೆರವಾಗುವುದು. ಮೃಧುವಾದ ಮೇಣವು ಅದಾಗಿಯೇ ಹೊರಬರುವುದು. ಉಳಿದ ಮೇಣ ತೆಗೆಯಲು ಹೆಚ್ಚುವರಿ ಎಣ್ಣೆ ಕಿವಿಗೆ ಹಾಕಿ. ಸಾಸಿವೆ ಎಣ್ಣೆಯು ಮೇಣ ಮತ್ತು ಕಲ್ಮಷ ತೆಗೆದು ಸೋಂಕು ಉಂಟಾಗಿರುವ ಜಾಗವನ್ನು ಸ್ವಚ್ಛಗೊಳಿಸುವುದು. ಟಾರ್ಚ್ ಲೈಟ್ ಹಾಕಿಕೊಂಡು ನೀವು ಇದು ಸ್ವಚ್ಛವಾಗಿರುವುದನ್ನು ನೋಡಬಹುದು.

ಈರುಳ್ಳಿ ರಸ

ಈರುಳ್ಳಿ ರಸ

ಈರುಳ್ಳಿಯಿಂದ ಬೇರ್ಪಡಿಸಿದ ರಸವನ್ನು ಹತ್ತಿಯಲ್ಲಿ ಮುಳುಗಿಸಿ ಕಿವಿಯ ಮೇಲೆ ಒತ್ತಿಡಿ. ಇದು ನೋವನ್ನು ಕಡಿಮೆ ಮಾಡುತ್ತದೆ ಮತ್ತು ನೋವನ್ನು ಉಂಟುಮಾಡುವ ಬ್ಯಾಕ್ಟೀರಿಯಾವನ್ನು ನಿವಾರಿಸುತ್ತದೆ, ಅಂತೆಯೇ ಕೆಂಪಗಾದ ಕಿವಿ ಹಾಗೂ ತುರಿಕೆಯನ್ನು ದೂರಮಾಡುತ್ತದೆ. ಇನ್ನೊಂದು ವಿಧಾನವಿದೆ.. ತುಳಸಿ ಎಲೆಯ ರಸ- 1 ಚಮಚ ಈರುಳ್ಳಿ ರಸ- 1 ಚಮಚ (ಈ ಮನೆಮದ್ದನ್ನು ಸರಿಯಾದ ಪ್ರಮಾಣದಲ್ಲಿ ನಿಯಮಿತವಾಗಿ ಬಳಸಿದರೆ ಕಿವಿ ನೋವನ್ನು ಪರಿಣಾಮಕಾರಿಯಾಗಿ ನಿವಾರಿಸಬಹುದು. ಈ ಮನೆಮದ್ದನ್ನು ಬಳಸುವುದರೊಂದಿಗೆ ವೈದ್ಯರಿಂದ ಔಷಧಿಯನ್ನು ಪಡೆಯುವುದು ಸೂಕ್ತ)

ಮನೆಮದ್ದು ತಯಾರಿಸುವ ಮತ್ತು ಬಳಸುವ ವಿಧಾನ

*ಹೇಳಿದಷ್ಟು ಪ್ರಮಾಣದ ಸಾಮಗ್ರಿಯನ್ನು ಒಂದು ಕಪ್ ಗೆ ಹಾಕಿಕೊಳ್ಳಿ. *ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.

*ಇದರ ಎರಡು ಹನಿಯಷ್ಟನ್ನು ಒಂದು ಡ್ರಾಪರ್ ಗೆ ಹಾಕಿಕೊಂಡು ಅದನ್ನು ನಿಧಾನವಾಗಿ ಕಿವಿಗೆ ಬಿಡಿ.

*ಕಿವಿ ನೋವು ಇರುವಾಗ ಮಾತ್ರ ಇದನ್ನು ಬಳಸಿ. ದಿನದಲ್ಲಿ ಒಂದು ಸಲ ಮಾತ್ರ ಇದನ್ನು ಬಳಸಿ. *ಬಳಸುವ ಮೊದಲು ವೈದ್ಯರ ಸಲಹೆ ಪಡೆಯಿರಿ.

ಮಾವಿನ ಎಲೆಯ ರಸ

ಮಾವಿನ ಎಲೆಯ ರಸ

ಮಾವಿನ ಎಲೆಯ ರಸ ಕೂಡ ಕಿವಿ ನೋವನ್ನು ತಕ್ಷಣ ನಿವಾರಿಸುತ್ತದೆ. ತಾಜಾ ಹಾಗೂ ಮೃದುವಾದ ಮಾವಿನ ಎಲೆಯನ್ನು ಜಜ್ಜಿ ಅದರ ರಸ ತೆಗೆಯಿರಿ. ಸ್ವಲ್ಪ ಬಿಸಿ ಮಾಡಿಕೊಂಡು 3-4 ಹನಿ ಕಿವಿಗೆ ಹಾಕಿಕೊಳ್ಳಿ. ನೋವು ಕೂಡಲೇ ಪರಿಹಾರಗೊಳ್ಳುತ್ತದೆ. ದಿನದಲ್ಲಿ ಮೂರು ಅಥವಾ ನಾಲ್ಕು ಸಲ ಈ ವಿಧಾನವನ್ನು ಅನುಸರಿಸಬಹುದು.

ಕಿವಿ ಮೇಣ ತೆಗೆಯಲು ಈ ಕೆಳಗಿನ ಕ್ರಮಗಳನ್ನು ಪಾಲಿಸಿ.

ಕಿವಿ ಮೇಣ ತೆಗೆಯಲು ಈ ಕೆಳಗಿನ ಕ್ರಮಗಳನ್ನು ಪಾಲಿಸಿ.

ಒಂದು ಮುಚ್ಚಲದಷ್ಟು ಎಣ್ಣೆ ಕಿವಿಗೆ ಹಾಕಿ.

ಕೆಲವು ನಿಮಿಷ ಹಾಗೆ ಬಿಡಿ

ಕಿವಿಯನ್ನು ಟಿಶ್ಯೂನಿಂದ ಮುಚ್ಚಿ

ತಲೆ ಬಗ್ಗಿಸಿಕೊಂಡು ದ್ರವ ತೆಗೆಯಿರಿ.

English summary

Effective Ear Pain Home Remedies for Children

Ear ache is a common cause of pain and discomfort to everybody. In children, it becomes a bigger cause of worry as the child may be too small to tell the reason for the pain. Therefore, it is up to the immediate caretaker to see how the pain can be alleviated. There are many reasons for earaches, such as infection, perforated eardrum, and boils. It is important to identify the cause of the earache to find a suitable remedy for the same.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more