ಹೊಟ್ಟೆ ಬೊಜ್ಜನ್ನು ಕರಗಿಸುತ್ತೆ ಈ ಸರಳ ಆಯುರ್ವೇದ ಮನೆ ಮದ್ದುಗಳು

Posted By: Deepu
Subscribe to Boldsky

ಈ ಜಗತ್ತಿನಲ್ಲಿ ಶೇಖಡಾ ಐವತ್ತಕ್ಕಿಂತಲೂ ಹೆಚ್ಚಿನ ಜನರಿಗೆ ಕಾಡುವ ತೊಂದರೆ ಎಂದರೆ ಹೊಟ್ಟೆಯ ಬೊಜ್ಜು. ಇದು ನಿಮ್ಮ ಶರೀರದ ಸೌಂದರ್ಯವನ್ನು ಕುಂದಿಸುವುದು ಮಾತ್ರವಲ್ಲ ಆರೋಗ್ಯಕ್ಕೂ ಮಾರಕ! ಹೊಟ್ಟೆಯನ್ನು ಮುಂದೆ ದಬ್ಬಿರುವ ಈ ಕೊಬ್ಬು ಮಧುಮೇಹ, ಹೃದಯಸಂಬಂಧಿ ರೋಗಗಳು, ಪಾರ್ಶ್ವವಾಯು ಮತ್ತು ಮರೆಗುಳಿತನಕ್ಕೂ ಕಾರಣವಾಗಬಲ್ಲುದು. ಆದ್ದರಿಂದ ಹೊಟ್ಟೆಯ ಕೊಬ್ಬನ್ನು ಕರಗಿಸುವುದು ಆರೋಗ್ಯದ ದೃಷ್ಟಿಯಿಂದ ಅನಿವರ್ಯವೂ ಹೌದು. ಆದರೆ ಈ ಕೊಬ್ಬನ್ನು ನಿವಾರಿಸುವುದು ಅಷ್ಟು ಸುಲಭವಲ್ಲ.

ಏಕೆಂದರೆ ನಮ್ಮ ದೇಹ ಕೊಬ್ಬು ಸಂಗ್ರಹಿಸಿಡುವಲ್ಲಿ ಸೊಂಟದ ಸುತ್ತಳತೆಯನ್ನು ಬಳಸುತ್ತದಾದರೂ ಬಳಕೆಯಲ್ಲಿ ಮಾತ್ರ ಕಟ್ಟ ಕಡೆಗೆ ಬಳಸುತ್ತದೆ. ಅಂದರೆ ನಮ್ಮ ಕೊಬ್ಬು ಕರಗಿಸುವ ಪ್ರಯತ್ನದಲ್ಲಿ ಮೊದಲು ಇತರ ಭಾಗದ ಕೊಬ್ಬುಗಳೆಲ್ಲಾ ಕರಗಿದ ಬಳಿಕವೇ ಸೊಂಟದ ಕೊಬ್ಬು ಕರಗಲು ಪ್ರಾರಂಭವಾಗುತ್ತದೆ. ನಡುವೆ ನಾಲಿಗೆ ಚಪಲ ತಾಳಲಾರದೇ ಏನಾದರೂ ತಿಂದಾಕ್ಷಣ ಕರಗಿದ್ದ ಕೊಬ್ಬನ್ನು ಮತ್ತೆ ದೇಹ ತುಂಬಿಸಿಬಿಡುತ್ತದೆ. ಇದೇ ಹೊಟ್ಟೆಯ ಕೊಬ್ಬು ಕರಗದಿರಲಿಕ್ಕೆ ಮುಖ್ಯ ಕಾರಣ.

ಆಯುರ್ವೇದ ಮೂಲಕ ಕೊಬ್ಬನ್ನು ಕರಗಿಸುವಂತಹ ಕೆಲವೊಂದು ಗಿಡಮೂಲಿಕೆ ಔಷಧಿ ಹಾಗೂ ಮದ್ದುಗಳಿವೆ. ಆರೋಗ್ಯಕರ ಆಹಾರದೊಂದಿಗೆ ಈ ಮದ್ದನ್ನು ಸೇವಿಸಿದರೆ ಕೊಬ್ಬು ಕಡಿಮೆಯಾಗುವುದು. ಕೊಬ್ಬು ಕರಗಿಸಲು ಇರುವ ಆಯುರ್ವೇದ ವಿಧಾನಗಳ ಬಗ್ಗೆ ತಿಳಿದುಕೊಳ್ಳಿ. ಸೋಂಪು ಕಾಳುಗಳು ಎರಡು ಚಮಚ ಸೋಂಪು ಕಾಳುಗಳನ್ನು ಒಂದು ಜಾರ್ ನೀರಿನಲ್ಲಿ ಹಾಕಿ ನೆನೆಸಿಡಿ. ರಾತ್ರಿಯಿಡಿ ಇದು ಹಾಗೆ ಇರಲಿ. ಮರುದಿನ ಬೆಳಗ್ಗೆ ಎದ್ದು ಈ ನೀರನ್ನು ಸೇವಿಸಿ. ಕೊಬ್ಬು ಕರಗಿಸಲು ಇದನ್ನು ದಿನನಿತ್ಯ ಸೇವಿಸಿ....

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಲಿಂಬೆ ರಸವನ್ನು ಕುಡಿಯಿರಿ

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಲಿಂಬೆ ರಸವನ್ನು ಕುಡಿಯಿರಿ

ಕೊಬ್ಬು ಸಂಗ್ರಹವಾಗಲು ನಮ್ಮ ಯಕೃತ್ (liver) ಆಯಾಸಗೊಂಡಾಗ ಪೂರ್ಣಪ್ರಮಾಣದಲ್ಲಿ ಕೊಬ್ಬನ್ನು ಜೀರ್ಣಿಸಿಕೊಳ್ಳಲು ಅಸಮರ್ಥವಾಗಿ ಹೆಚ್ಚಿನ ಕೊಬ್ಬು ಸಂಗ್ರಹವಾಗುತ್ತಾ ಹೋಗುತ್ತದೆ. ಲಿಂಬೆರಸದ ಸೇವನೆಯಿಂದ ದೇಹದಲ್ಲಿ ಹಲವು ಎಂಜೈಮ್ ಅಥವಾ ಕಿಣ್ವಗಳ ಪ್ರಮಾಣವನ್ನು ಹೆಚ್ಚಿಸಿ ಯಕೃತ್ ನ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಕೊಬ್ಬು ಜೀರ್ಣಗೊಂಡು ಸಂಗ್ರಹವಾಗಬಹುದಾಗಿದ್ದ ಕೊಬ್ಬನ್ನು ತಡೆದಂತಾಗುತ್ತದೆ. ಅತ್ತ ಇತರ ದೈಹಿಕ ಚಟುವಟಿಕೆಗಳ ಮೂಲಕ ಕೊಬ್ಬು ಕರಗತೊಡಗುತ್ತದೆ.ಒಂದು ಲೋಟ ಉಗುರುಬೆಚ್ಚನೆಯ ನೀರಿಗೆ ಚಿಕ್ಕದಾದರೆ ಒಂದು, ದೊಡ್ಡದಾದರೆ ಅರ್ಧ ಲಿಂಬೆಯ ರಸವನ್ನು ಸೇರಿಸಿ. ಉಗುರು ಬೆಚ್ಚನೆಯ ನೀರು ಲಭ್ಯವಿಲ್ಲದಿದ್ದರೆ ಸಾಮಾನ್ಯ ತಾಪಮಾನದಲ್ಲಿರುವ ನೀರನ್ನು ಸಹಾ ಬಳಸಬಹುದು. ಆದರೆ ಐಸ್ ಸೇರಿಸಿದ ಅಥವಾ ಫ್ರಿಜ್ಜಿನ ನೀರು ಬೇಡ.ನಂತರ ನಿಮ್ಮ ದೈನಂದಿನ ವ್ಯಾಯಾಮಗಳನ್ನು ಮಾಡಿ. ಕನಿಷ್ಠ ಮುಕ್ಕಾಲು ಗಂಟೆಯವರೆಗೆ ಬೇರೇನನ್ನೂ ಸೇವಿಸಬೇಡಿ. ಅತ್ಯಂತ ಆಯಾಸ ಅನ್ನಿಸಿದರೆ ಮಾತ್ರ ಅರ್ಧಗಂಟೆಯ ಬಳಿಕ ಕೊಂಚ ನೀರು ಕುಡಿಯಬಹುದು. ಇದರೊಂದಿಗೆ ಕೊಂಚ ಜೇನನ್ನೂ ಸೇರಿಸಬಹುದು.

ದಾಲ್ಚಿನ್ನಿ ಅಥವಾ ಚೆಕ್ಕೆಯನ್ನು ಬಳಸಿ

ದಾಲ್ಚಿನ್ನಿ ಅಥವಾ ಚೆಕ್ಕೆಯನ್ನು ಬಳಸಿ

ಕೊಂಚ ಖಾರವಾಗಿರುವ ದಾಲ್ಚಿನ್ನಿಯ ಚೆಕ್ಕೆ (cinnamon) ಅಡುಗೆಯ ರುಚಿಯನ್ನು ಹೆಚ್ಚಿಸುವುದರ ಜೊತೆಗೇ ದೇಹದ ಕೊಬ್ಬನ್ನು ಕರಗಿಸಲೂ ನೆರವಾಗುತ್ತದೆ. ಈ ಕೊಬ್ಬಿನಲ್ಲಿ ಸೊಂಟದ ಕೊಬ್ಬು ಸಹಾ ಒಂದು. ದಾಲ್ಚಿನ್ನಿಯ ಸೇವನೆಯಿಂದ ದೇಹದಲ್ಲಿ ಶಾಖ ಉತ್ಪತ್ತಿಯಾಗುವುದರಿಂದ ಹಲವು ರೀತಿಯಲ್ಲಿ ಇದು ಅರೋಗ್ಯಕ್ಕೆ ಪೂರಕವಾಗಿದೆ.

ಬಳಕೆಯ ವಿಧಾನ

*ನಿಮ್ಮ ನಿತ್ಯದ ಪೇಯಗಳಾದ ಟೀ, ಕಾಫಿ ಅಥವಾ ಹಾಲಿನ ಮೇಲೆ ಒಂದು ಚಿಕ್ಕಚಮಚ ದಾಲ್ಚಿನ್ನಿ ಪುಡಿಯನ್ನು ಚಿಮುಕಿಸಿ ಕಲಕಿ ಕುಡಿಯಿರಿ.

* ನಿಮ್ಮ ನಿತ್ಯದ ಉಪಾಹಾರಗಳಾದ ಉಪ್ಪಿಟ್ಟು, ಬ್ರೆಡ್ ಟೋಸ್ಟ್ ಮೊದಲಾದವುಗಳ ಮೇಲೆ ಕೊಂಚವಾಗಿ ದಾಲ್ಚಿನ್ನಿ ಪುಡಿ ಸೇರಿಸಿ ತಿನ್ನಿರಿ

* ನಿತ್ಯದ ಸಲಾಡ್ (ಅಥವಾ ಪಲ್ಯ)ಗಳ ಮೇಲೆ ಚಿಮುಕಿಸಿ ಸೇವಿಸಿ. ಕೆಲವೇ ದಿನಗಳಲ್ಲಿ ಕೊಬ್ಬು ಕರಗತೊಡಗಿರುವುದು ಗಮನಕ್ಕೆ ಬರುತ್ತದೆ.

ಶುಂಠಿ ಸೇರಿಸಿದ ಟೀ ಕುಡಿಯಿರಿ

ಶುಂಠಿ ಸೇರಿಸಿದ ಟೀ ಕುಡಿಯಿರಿ

ಹಸಿಶುಂಠಿ ಜೀರ್ಣಶಕ್ತಿಯನ್ನು ಹೆಚ್ಚಿಸುವುದು ಸರಿ, ಆದರೆ ಇದು ದೇಹದ ಬಿಸಿಯನ್ನೂ ಹೆಚ್ಚಿಸುತ್ತದೆಂದು (thermogenic) ನಿಮಗೆ ಗೊತ್ತಿತ್ತೇ ? ದೇಹದ ಬಿಸಿಯನ್ನು ಏರಿಸುವ ಮೂಲಕ ದೇಹದಲ್ಲಿ ಸಂಗ್ರಹವಾಗಿದ್ದ ಕೊಬ್ಬು ಕರಗಲು ನೆರವಾಗುತ್ತದೆ. ಸೊಂಟದ ಸುತ್ತ ಈಗಾಗಲೇ ಸಂಗ್ರಹವಾಗಿರುವ ಕೊಬ್ಬು ಎಷ್ಟೋ ವರ್ಷಗಳ ಹಿಂದಿನಿಂದ ಸಂಗ್ರಹವಾಗುತ್ತಾ ಬಂದಿರಬಹುದಾಗಿದ್ದು ಶುಂಠಿಯ ನಿಯಮಿತ ಸೇವನೆಯಿಂದ ನಿಧಾನವಾಗಿ ಕರಗತೊಡಗುತ್ತದೆ.

ಬಳಕೆಯ ವಿಧಾನ

*ಒಂದು ಲೋಟಕ್ಕಿಂತ ಕೊಂಚ ಹೆಚ್ಚು ನೀರನ್ನು ಕುದಿಸಿ. ಈ ನೀರಿನಲ್ಲಿ ಒಂದು ಇಂಚು ಹಸಿಶುಂಠಿಯನ್ನು ಜಜ್ಜಿ ಸುಮಾರು ಹತ್ತು ನಿಮಿಷಗಳವೆರೆಗೆ ಚಿಕ್ಕ ಉರಿಯಲ್ಲಿ ಕುದಿಸಿ.

*ಈಗ ಪಾತ್ರೆಯನ್ನು ಒಲೆಯಿಂದ ಕೆಳಗಿಳಿಸಿ ಒಂದು ಚಮಚ ಈಗತಾನೇ ಹಿಂಡಿದ ಲಿಂಬೆರಸ ಮತ್ತು ಒಂದು ಚಮಚ ಜೇನು ಸೇರಿಸಿ.

*ಇನ್ನು ಈ ಟೀ ಅನ್ನು ಸೋಸಿ ಬಿಸಿಬಿಸಿ ಇರುವಂತೆಯೇ ಸೇವಿಸಿ. ಒಂದು ದಿನಕ್ಕೆ ಕನಿಷ್ಟ ಎರಡು ಕಪ್ ಈ ಟೀ ಸೇವಿಸಿ ಕೊಬ್ಬಿನಿಂದ ಮುಕ್ತಿಪಡೆಯಿರಿ. ಪ್ರತಿದಿನ ಎರಡು ಕಪ್ ಕುಡಿಯುವ ಮೂಲಕ ಜೀವರಾಸಾಯನಿಕ ಕ್ರಿಯೆಯಲ್ಲಿ ನಿಯಂತ್ರಣ, ಜೀರ್ಣಕ್ರಿಯೆಯಲ್ಲಿ ಪ್ರಚೋದನೆ, ಕಾರ್ಟಿಸೋಲ್ ಎಂಬ ರಸದೂತದ ಉತ್ಪತ್ತಿ ಪ್ರಮಾಣದಲ್ಲಿ ಇಳಿತ ಮೊದಲಾದ ಫಲಗಳನ್ನು ಕಾಣಬಹುದು.

ಮೆಂತೆ

ಮೆಂತೆ

ಮೆಂತೆಯು ತುಂಬಾ ಕಹಿಯಾಗಿರುವುದು. ಆದರೆ ಇದು ಕೊಬ್ಬು ಕರಗಿಸಲು ತುಂಬಾ ಪರಿಣಾಮಕಾರಿ. ಇದರಲ್ಲಿ ಹೆಚ್ಚಿನ ಮಟ್ಟದ ನಾರಿನಾಂಶವಿದ್ದು, ಕಾರ್ಬ್ರ್ಸ್ ಮತ್ತು ಕೊಲೆಸ್ಟ್ರಾಲ್ ಕಡಿಮೆಯಿದೆ. ಇದು ಕೊಬ್ಬು ಕರಗಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಹೊಟ್ಟೆಯ ಕೊಬ್ಬು ಕರಗಿಸಲು ಇದು ತುಂಬಾ ಪರಿಣಾಮಕಾರಿ. ಒಂದು ಚಮಚ ಮೆಂತ್ಯೆ ಕಾಳುಗಳನ್ನು ರಾತ್ರಿ ನೀರಿನಲ್ಲಿ ನೆನೆಸಿಡಿ. ಬೆಳಿಗ್ಗೆ ಎದ್ದು ಈ ನೀರನ್ನು ಬಿಸಿ ಮಾಡಿಕೊಂಡು ಕುಡಿಯಿರಿ.

ಕರಿಬೇವಿನ ಎಲೆಗಳು

ಕರಿಬೇವಿನ ಎಲೆಗಳು

ದಕ್ಷಿಣ ಭಾರತೀಯ ಅಡುಗೆಗಳಲ್ಲಿ ಹೆಚ್ಚಾಗಿ ಕರಿಬೇವಿನ ಎಲೆಗಳನ್ನು ಬಳಸಲಾಗುತ್ತದೆ. ಇದು ಅಡುಗೆಯ ರುಚಿ ಹೆಚ್ಚಿಸುವಂತಹ ಎಲೆಯಾಗಿದೆ. ಆದರೆ ಇದು ತೂಕ ಕಳೆದುಕೊಳ್ಳಲು ಸಹಕಾರಿ ಎಂದು ಹೆಚ್ಚಿನವರಿಗೆ ತಿಳಿದಿಲ್ಲ. ಹೊಟ್ಟೆಯ ಸುತ್ತಲು ಇರುವ ಕೊಬ್ಬು ಕರಗಿಸಲು ನೀವು ಬೆಳಿಗ್ಗೆ ಎದ್ದು ಕರಿಬೇವಿನ ಕೆಲವು ಎಲೆಗಳನ್ನು ಜಗಿಯಬೇಕು.

ಬೆಳ್ಳುಳ್ಳಿ+ಲಿಂಬೆ ರಸ

ಬೆಳ್ಳುಳ್ಳಿ+ಲಿಂಬೆ ರಸ

*ಒಂದು ಕಪ್ ತಣ್ಣನೆಯ ಅಥವಾ ಉಗುರುಬೆಚ್ಚನೆಯ ನೀರಿಗೆ ಒಂದು ಲಿಂಬೆಹಣ್ಣಿನ ರಸವನ್ನು ಹಿಂಡಿರಿ

*ಮೂರು ಎಸಳು ಬೆಳ್ಳುಳ್ಳಿಯನ್ನು ಸಿಪ್ಪೆ ಸುಲಿದು ಹಸಿಯಾಗಿಯೇ ಅಗಿಯಿರಿ ಮತ್ತು ಲಿಂಬೆರಸ ಹಿಂಡಿದ ನೀರಿನ ಜೊತೆ ಅಗಿದ ಬೆಳ್ಳುಳ್ಳಿಯನ್ನು ನುಂಗಿ.

*ಈ ನೀರನ್ನು ಪ್ರತಿದಿನ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಕುಡಿದ ಬಳಿಕ ಮುಕ್ಕಾಲು ಗಂಟೆ ಏನನ್ನೂ ಸೇವಿಸಬೇಡಿ.

*ಎರಡು ವಾರದಲ್ಲಿಯೇ ಸೊಂಟದ ಸುತ್ತಳತೆ ಕಡಿಮೆಯಾಗುವ ಲಕ್ಷಣಗಳು ಗೋಚರಿಸತೊಡಗುತ್ತವೆ.

English summary

effective ayurvedic remedies to lose belly fat

Ayurveda, one of the oldest known medical systems, prescribes the use of natural herbs and remedies that are easily available around us to solve the problem of the pesky belly fat. Ayurveda prescribes healthy eating and use of herbs to solve the problem of belly fat. So, let's have a look at the Ayurvedic ways of losing weight around the belly.
Story first published: Wednesday, February 28, 2018, 7:01 [IST]