For Quick Alerts
ALLOW NOTIFICATIONS  
For Daily Alerts

ಇ- ಸಿಗರೇಟ್ ಸೇವನೆಯಿಂದ ಶಾಶ್ವತವಾಗಿ ಶ್ವಾಸಕೋಶ ಹಾಳಾಗುತ್ತೆ...

By Sushma Charhra
|

ಇ- ಸಿಗರೇಟ್ ಅನ್ನೋ ಪದವೇ ಹೆಚ್ಚಿನವರಿಗೆ ಹೊಸತಿರಬಹುದು. ಕೆಲವರು ಈಗಾಗಲೇ ಅದಕ್ಕೆ ತೆರೆದುಕೊಂಡು ಗೀಳಾಗಿ ಅಂಟಿಸಿಕೊಂಡಿರಬಹುದು.ಈ ವಿದ್ಯಮಾನವನ್ನು ಹೆಚ್ಚಿನವರು ಪ್ರೀತಿಸಲು ಶುರು ಮಾಡಿದ್ದರೆ, ಕೆಲವರು ಟೀಕಿಸಲು ಆರಂಭಿಸಿದ್ದಾರೆ. ಇ-ಸಿಗರೇಟ್ ಅಂದರೆ ಎಲೆಕ್ಟ್ರಾನಿಕ್ ಸಿಗರೇಟ್ ಗಳು. ಇ ಈ-ಸಿಗರೇಟ್ ಗಳು ಎಲೆಕ್ಟ್ರಾನಿಕ್ ಡಿವೈಸ್ ಗಳಾಗಿದ್ದು ಅದು ಧೂಮಪಾನ ಮಾಡುವವರಿಗೆ ಟೋಬ್ಯಾಕೋ ಅನುಭವ ಅರ್ಥಾನ್ ಧೂಮಪಾನ ಮಾಡಿದಂತ ಅನುಭವ ನೀಡುವ ಡಿವೈಸ್ ಗಳಾಗಿವೆ.

ಎಲೆಕ್ಟ್ರಾನಿಕ್ ಸಿಗರೇಟ್ ಗಳು ಈಗಾಗಲೇ ಮಾರುಕಟ್ಟೆಯಲ್ಲಿದ್ದು, ಇವು ಹಳೆ ಕಾಲದ ಸಿಗರೇಟು ಸೇವನೆಯ ಪರಿಕ್ರಮಕೊಂದು ಹೊಸ ಭಾಷ್ಯವಿದ್ದಂತೆ ಅಥವಾ ಧೂಮಪಾನ ಮಾಡುವ ಅಭ್ಯಾಸವಿರುವ ಜನರಿಗೆ ಹೊಸತೊಂದು ಮಾರ್ಗವಾಗಿದೆ ಅಷ್ಟೇ. ಹಲವಾರು ಮಂದಿ ದಿನದಿಂದ ದಿನ ಕಳೆದಂತೆ ಇ-ಸಿಗರೇಟ್ ನ್ನು ಇಷ್ಟ ಪಡುತ್ತಿದ್ದಾರೆ ಹಾಗಾಗಿ ಈ-ಸಿಗರೇಟ್ ಮಾಡುವ ಅನೇಕ ಪರಿಣಾಮಗಳು ಅದ್ರಲ್ಲೂ ಪ್ರಮುಖವಾಗಿ ನಿಮ್ಮ ಶ್ವಾಸಕೋಶಕ್ಕೆ ಮಾಡುವ ಎಫೆಕ್ಟ್ ಮತ್ತು ಒಟ್ಟಾರೆ ನಿಮ್ಮ ಆರೋಗ್ಯದ ಮೇಲೆ ಮಾಡುವ ದುಷ್ಪರಿಣಾಮಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು.

e-cigarette

ಕೆಲವು ಬೇರೆಬೇರೆ ರೀತಿಯ ಸುವಾಸನೆ ಭರಿತ ಎಲೆಕ್ಟ್ರಾನಿಕ್ ಸಿಗರೇಟ್ ಗಳಿದ್ದು, ಅವೆಲ್ಲವೂ ಕೂಡ ಮನುಷ್ಯನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನುಂಟು ಮಾಡುತ್ತೆ. ಪ್ರಮುಖವಾಗಿ ಶ್ವಾಸಕೋಶದ ಆರೋಗ್ಯದ ಮೇಲೆ ಒಂದು ಹಂತದವರೆಗೆ ಪರಿಣಾಮವನ್ನುಂಟು ಮಾಡುತ್ತೆ ಎಂದು ಗುರಿತಿಸಲಾಗಿದೆ. ಚಕ್ಕೆಯ ಸುಗಂಧವಿರುವ ಈ-ಸಿಗರೇಟ್ ಗಳು ನಿಮ್ಮ ಲಂಗ್ಸ್ ನ ಟಿಶ್ಯೂಗಳ ಮೇಲೆ ಕೆಟ್ಟ ರೀತಿಯಲ್ಲಿ ಎಫೆಕ್ಟ್ ಮಾಡುತ್ತೆ.ಚಿನ್ನಮಲ್ಡೈಡ್ ಎಂಬ ರಾಸಾಯನಿಕವು ಚಕ್ಕೆಗಳಲ್ಲಿ ಇಂತಹ ಎಲ್ಲೂ ಇಲ್ಲದ ಮತ್ತು ಅದ್ಭುತವಾದ ಸುಂಗಂಧವನ್ನು ನೀಡುತ್ತೆ ಮತ್ತು ಇದನ್ನು ಹೆಚ್ಚಿನ ಮಂದಿ ಇಷ್ಟಪಡುತ್ತಾರೆ.

ಇದು ಬಹಳ ಕಾಮನ್ ಆಗಿ ಬಳಸುವ ಸುಗಂಧಿತ ದ್ರವ್ಯವಾಗಿದ್ದು, ಹಲವಾರು ಆಹಾರ ಪದಾರ್ಥಗಳಲ್ಲಿ ಅನೇಕರು ಕೂಡ ಬಳಕೆ ಮಾಡುತ್ತಾರೆ. ಎಸ್. ಈ ಸುಗಂಧನ್ನು ಕೆಲವು ಸಮಯಗಳಿಂದ ಎಲೆಕ್ಟ್ರಾನಿಕ್ ಸಿಗರೇಟ್ ಗಳಲ್ಲೂ ಬಳಕೆ ಮಾಡುತ್ತಾರೆ ಮತ್ತು ಅದು ಹೆಚ್ಚಿನ ಜನರಿಗೆ ಇಷ್ಟವಾಗುವ ಫ್ಲೇವರ್ ಆಗಿದೆ. ಆದರೆ, ಹೆಚ್ಚಿನವರು ಇಷ್ಟಪಟ್ಟಿರುವ ಚಕ್ಕೆಯ ಫ್ಲೇವರ್ ನ ಈ ಸಿಗರೇಟ್ ನಲ್ಲೂ ಕೂಡ ಸಹಜ ಉಸಿರಾಟ ಪ್ರಕ್ರಯೆಗೆ ಹಾನಿಯುಂಟು ಮಾಡುವಂತ ಕೆಲವು ಅಂಶಗಳಿವೆ ಅದರಲ್ಲಿ ಪ್ರಮುಖವಾಗಿ ಚಿನ್ನಮಲ್ಡೈಡ್ ಅಂಶವು ಸಮಸ್ಯೆಯನ್ನು ತಂದೊಡ್ಡುತ್ತೆ ಎಂಬುದು ಕೆಲವು ಅಧ್ಯಯನಗಳಿಂದ ಸಾಬೀತಾಗಿದೆ. ಇದು ನಿಜಕ್ಕೂ ಶಾಕ್ ಆಗುವ ವಿಚಾರವಾಗಿದ್ದು, ಯಾರೂ ಕೂಡ ಊಹಿಸಿರಲಾರರು.

ಅಧ್ಯಯನಕಾರರು ಹೇಳುವಂತೆ ಇದನ್ನು ಆಹಾರ ನಿಗಮವು ಇದನ್ನು ಸುರಕ್ಷಿತ ಆಹಾರ ಎಂದು ಪರಿಗಣಿಸಿ ಹೇಳಿಕೆ ನೀಡಿದ್ದರೂ ಕೂಡ, ಒಮ್ಮೆ ಇದನ್ನು ಬಿಸಿ ಮಾಡುವುದು, ಕುದಿಸುವುದು, ಇಲ್ಲವೇ ಸುಡುವುದು ಮಾಡುವುದರಿಂದಾಗಿ ಕೆಲವು ರಾಸಾಯನಿಕ ಬದಲಾವಣೆಗಳಾಗುತ್ತವೆ ಮತ್ತು ಈ ಬದಲಾವಣೆಯು ಕೆಟ್ಟ ಪರಿಣಾಮವನ್ನು ನಿಮ್ಮ ಶ್ವಾಸಕೋಶ ಮತ್ತು ಆರೋಗ್ಯದ ಮೇಲೆ ಬೇರೆಬೇರೆ ರೀತಿಯಲ್ಲಿ ಮಾಡಲಿದೆ ಎಂದು ಹೇಳುತ್ತಾರೆ. ಆಹಾರ ನಿಗಮವು ಹೇಳಿದೆ ಇದು ಬಳಕೆಗೆ ಯೋಗ್ಯ ಆಹಾರ ಎಂದು ಹೇಳಿದೆ ಎಂದರೆ, ಆ ಆಹಾರವನ್ನು ಎಲ್ಲಿಯವರೆಗೆ ನೀವು ನೈಸರ್ಗಿಕ ಸ್ವರೂಪದಲ್ಲಿ ಬಳಕೆ ಮಾಡುತ್ತೀರೋ ಅಲ್ಲಿಯವರೆಗೆ ಮಾತ್ರ ಯೋಗ್ಯವಾಗಿರುತ್ತೆ..

ಒಂದು ವೇಳೆ ನೀವು ಯಾವುದೇ ರೀತಿಯಲ್ಲಿ ಆ ಪದಾರ್ಥದಲ್ಲಿ ಅಥವಾ ಆಹಾರದಲ್ಲಿ ಬದಲಾವಣೆ ಮಾಡಿದ್ದಲ್ಲಿ ಅಂದರೆ ಸುಟ್ಟರೆ, ಕುದಿಸಿದರೆ ಅಥವಾ ಬಿಸಿ ಮಾಡಿದರೆ ಆ ವಸ್ತುವು ಸುರಕ್ಷಿತ ಆಹಾರವಾಗಿಲ್ಲದೇ ಇರಬಹುದು. ಮತ್ತು ಹಲವಾರು ರೀತಿಯ ಬದಲಾವಣೆಗೆ ಕಾರಣವಾಗಬಹುದು. ಇದು ಎಲೆಕ್ಟ್ರಾನಿಕ್ ಸಿಗರೇಟ್ ನಲ್ಲೂ ಕೂಡ ಇದೇ ಕೇಸ್ ಆಗಿದ್ದು ಚಿನ್ನಮಾಲ್ಡಿಹೈಡ್ ರಾಸಾಯನಿಕವು ವ್ಯತಿರಿಕ್ತವಾಗಿ ಬದಲಾಗುತ್ತೆ.

ಇದಷ್ಟೇ ಅಲ್ಲ, ಇ ಸಿಗರೇಟ್ ಗಳನ್ನು ಸುಡುವುದರಿಂದ ರಾಸಾಯನಿಕಗಳು ಮನುಷ್ಯನ ದೇಹಕ್ಕೆ ಕೆಟ್ಟ ಪರಿಣಾಮವನ್ನು ಉಂಟು ಮಾಡುತ್ತೆ. ನೀವು ಆಲ್ ಡಿಹೈಡ್ ಮತ್ತು ಇಂತಹ ಕೆಲವು ಫ್ಲೇವರಿಂಗ್ ಏಜೆಂಟ್ ಗಳನ್ನು ಉಸಿರಾಟದ ಮೂಲಕ ಸೇವಿಸಿದಾಗ ಭಯಾನಕ ತೊದರೆಗೆ ನಿಮ್ಮ ಶ್ವಾಸಕೋಶ ಮತ್ತು ಆರೋಗ್ಯ ದೊಡ್ಡ ಮಟ್ಟದಲ್ಲಿ ಸಿಲುಕುತ್ತದೆ

ನೀವು ತಲೆಯಲ್ಲಿ ಇಟ್ಟುಕೊಳ್ಳಬೇಕಾಗಿರುವ ಇನ್ನೊಂದು ಪ್ರಮುಖ ಅಂಶವೇನೆಂದರೆ, ಆಲ್ಡಿಹೈಡ್ ಸುಂಗಂಧಿತ ಏಜೆಂಟ್ ಗಳನ್ನು ದೊಡ್ಡ ಪ್ರಮಾಣದಲ್ಲಿ ಎಲೆಕ್ಟ್ರಾನಿಕ್ ಸಿಗರೇಟ್ ನಲ್ಲಿ ಬಳಸಲಾಗುತ್ತೆ ಮತ್ತು ಅದಕ್ಕೆ ನೀವು ಎಷ್ಟು ನಿಮ್ಮನ್ನು ನೀವು ತೆರೆದುಕೊಳ್ಳುತ್ತೀರೋ ಅಷ್ಟು ಪ್ರಮಾಣದ ಪರಿಣಾಮಗಳಿಗೆ ಈ ರಾಸಾಯನಿಕಗಳಿಂದ ನೀವು ಬಲಿಯಾಗುತ್ತೀರಿ,

ಹೈ ಡೋಜೇಸ್ ನಲ್ಲಿ ಈ ಕೆಮಿಕಲ್ ಗಳನ್ನು ಸೇವಿಸುವುದರಿಂದ ಕೆಟ್ಟದ್ದು ಯಾವ ಮಟ್ಟಕ್ಕೆ ನಿಮಗೆ ಸಮಸ್ಯೆಯಾಗುತ್ತೆ ಎಂದರೆ ಶಾಶ್ವತ ಹಾನಿಯನ್ನೂ ಉಂಟು ಮಾಡಬಹುದು.. ಶ್ವಾಸಕೋಶವು ಶಾಶ್ವತ ಸಮಸ್ಯೆಗೆ ಸಿಲುಕಬಹುದು.ಸಿಲಿಯಾದ ಕಾರ್ಯಚಟುವಟಿಕೆಗೆ ಈ ಚಿನ್ನಮಲ್ಡೈಡ್ ತೊಂದರೆ ನೀಡುತ್ತೆ. ಸಿಲಿಯಾ ಅಂದರೆ ನಿಮ್ಮ ಶ್ವಾಸದ ಪ್ರಕ್ರಿಯೆಯಲ್ಲಿರುವ ಸಣ್ಣ ಕೂದಲಿನಂತಹ ಒಂದು ಪ್ರೊಜೆಕ್ಷನ್.. ನೀವು ಅತಿಯಾಗಿ ಈ ಸಿಗರೇಟಿಗೆ ಹೊಂದಿಕೊಂಡರೆ, ನಿಮ್ಮ ಶ್ವಾಸಕ್ರಿಯೆಯು ಹಲವು ರೀತಿಯಲ್ಲಿ ತೊಂದರೆಗೆ ಸಿಲುಕುತ್ತೆ ಮತ್ತು ಸೀರಿಯಸ್ ಆದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತೆ.

ಈ ಕೆಮಿಕಲ್ ಗಳು ಸ್ಮೋಕಿಂಗ್ ನಲ್ಲಿ ಬಳಕೆಯಾಗುವುದರಿಂದ ಸಿಲಿಯಾವು ತುಂಬಾ ಡೆಲಿಕೇಟ್ ಆಗಿರುವುದರಿಂದಾಗಿ ಮತ್ತಷ್ಟು ವೀಕ್ ಆಗುತ್ತೆ ಮತ್ತು ಸಿಲಿಯಾದ ಪ್ಯಾರಲಿಸೀಸ್ ಸಮಸ್ಯೆಗೆ ಕಾರಣವಾಗುತ್ತೆ. ಸಿಲಿಯಾವು ಶ್ವಾಸಕೋಶ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತೆ. ಅಲ್ಲಿ ಇಲ್ಲಿ ಓಡಾಡುವಾಗ, ನಿಮ್ಮ ದೈನಂದಿನ ಓಡಾಟದಲ್ಲಿ ಬ್ಯಾಕ್ಟೀರಿಯಾಗಳು ನಿಮ್ಮ ಶ್ವಾಸಕೋಶವನ್ನು ತಲುಪದಂತೆ ನೋಡಿಕೊಳ್ಳುವ ಕೆಲಸವನ್ನು ಈ ಸಿಲಿಯಾ ಮಾಡುತ್ತೆ. ಸ್ಮೋಕ್ ಮಾಡಿ ಸಿಲಿಯಾವು ಹಾಳಾದರೆ ಹೆಚ್ಚಿನ ಸ್ಮೋಕರ್ ಗಳು ಬ್ರಾಂಕೈಟೀಸ್ ನಂತಹ ಮತ್ತು ಶ್ವಾಸಕೋಶಿ ಸಂಬಂಧಿ ಕಾಯಿಲೆಗಳಿಗೆ ತುತ್ತಾಗಬೇಕಾಗುತ್ತದೆ.

ಡಯಾಸಿಟೈಲ್ ಅನ್ನುವ ಹಾರ್ಮ್ ಫುಲ್ ಶ್ವಾಸಕೋಶ ಸಂಬಂಧಿ ಸಮಸ್ಯೆಗೂ ಕೂಡ ಈ-ಸಿಗರೇಟಿನಲ್ಲಿರುವ ಚಿನ್ನಾಮಲೈಡಿಹೈಡ್ ಅಂಶವು ಹಾರಣವಾಗಬಹುದು. ಈ ಫ್ಲೇವರ್ ಕಾಮನ್ ಆಗಿ ಎಲ್ಲರೂ ಬಳಸುವುದು ಅದರ ಪಾಪ್ ಕಾರ್ನ್ ನಂತರ ಬಟರಿ ಫ್ಲೇವರ್ ಗಾಗಿ..ಇದು ಶ್ವಾಸಕೋಶದ ಬ್ರಾಂಕೈಟೀಸ್ ಒಬ್ಲಿರೆನ್ಸ್ ಕಂಡೀಷನ್ ಗೆ ನೇರ ಸಂಬಂಧ ಹೊಂದಿದೆ.ಇದನ್ನು ಕೆಲವೊಮ್ಮೆ ಪಾಪ್ ಕಾರ್ನ್ ಲಂಗ್ ಕಂಡೀಷನ್ ಎಂದೂ ಕೂಡ ಕರೆಯುತ್ತಾರೆ.

ಮೂಮೂಲಿ ಸಿಗರೇಟ್ ಸೇವನೆಗಿಂತ ವೇಪಿಂಗ್ ಸಿಗರೇಟ್ ಸೇವನೆ ಸುರಕ್ಷಿತ ಎಂದು ಹೇಳಲಾಗುತ್ತೆ. ಆದರೆ ಎಕ್ಸ್ ಪರ್ಟ್ ಗಳು ತಿಳಿಸುವಂತೆ ಈ ಅಭ್ಯಾಸ ಕೂಡ ಹಲವು ರೀತಿಯ ಆರೋಗ್ಯ ಸಮಸ್ಯೆಗಳಿಗೆ ದೊಡ್ಡ ಮಟ್ಟದಲ್ಲೇ ಕಾರಣವಾಗುತ್ತೆ. ಶ್ವಾಸಕೋಶದ ಸಹಜ ಪ್ರಕ್ರಿಯೆಯನ್ನುಇವು ತಡೆಯುತ್ತೆ. ಹಾಗಾಗಿ ಮುಂದಿನ ಬಾರಿ ನೀವು ಈ-ಸಿಗರೇಟ್ ಬಳಸಲು ಮುಂದಾದಾಗ ಯೋಚನೆ ಮಾಡಿ. ಯಾವ ಫ್ಲೇವರ್ ಬಳಸುತ್ತೀದ್ದೀರಿ ಎಂಬುದನ್ನು ಗಮನಿಸಿಕೊಳ್ಳಿ.

ಋಣಾತ್ಮಕವಾಗಿ ಇದು ನಿಮ್ಮ ಮೇಲೆ ಪರಿಣಾಮ ಮಾಡುತ್ತೆ ಅನ್ನುವುದು ನಿಮಗೆ ನೆನಪಿರಲಿ.. ಹಾಗಾಗಿ ಬೆಟರ್ ನೀವು ಎಲ್ಲಾ ರೀತಿಯ ಸಿಗರೇಟ್ ಸೇದುವುದನ್ನೇ ಬಿಡುವುದು ಒಳಿತು. ಧೂಮಪಾನ ಆರೋಗ್ಯಕ್ಕೆ ಹಾನಿಕರ ಅಂತ ಮತ್ತೆ ಮತ್ತೆ ಹೇಳುತ್ತಲೇ ಇರುವುದರಲ್ಲಿ ಅರ್ಥವಿಲ್ಲ. ಅದನ್ನು ಅರ್ಥ ಮಾಡಿಕೊಂಡು ನಿಮ್ಮ ಆರೋಗ್ಯ ಕಾಪಾಡಿಕೊಂಡರೆ ಮಾತ್ರ ಅದಕ್ಕೆ ನಿಜವಾದ ಅರ್ಥ ಸಿಗುವುದು.

English summary

e-cigarette-flavours-can-cause-permanent-lung-damage

Electronic cigarettes are here in the market to provide an alternative to the age-old traditional cigarettes and in general the smoking habits of people. In spite of a number of people increasingly liking the concept of e-cigarettes, it's important for you to know the hazardous effects it can have on your lungs and also your overall health.
X
Desktop Bottom Promotion