For Quick Alerts
ALLOW NOTIFICATIONS  
For Daily Alerts

ರಾತ್ರಿ ಮಲಗುವ ಮೊದಲು ಹಾಲು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದೇ?

|

ಕಾಮಧೇನು ಎಂದು ಕರೆಯಲ್ಪಡುವಂತಹ ದನದ ಹಾಲು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಹಿಂದಿನಿಂದಲೂ ನಾವು ಕೇಳುತ್ತಿರುವಂತಹ ಮಾತು. ಹಾಲಿನಲ್ಲಿರುವಂತಹ ಪೋಷಕಾಂಶಗಳು ನಮ್ಮ ದೇಹಕ್ಕೆ ತುಂಬಾ ಒಳ್ಳೆಯದು. ಇದು ನಮ್ಮ ಆರೋಗ್ಯವನ್ನು ಸದಾ ಕಾಪಾಡುವುದು. ಹಾಲಿನಲ್ಲಿ ಪ್ರಮುಖವಾಗಿ ಕ್ಯಾಲ್ಸಿಯಂ, ಸೋಡಿಯಂ, ಪ್ರೋಟೀನ್, ವಿಟಮಿನ್(ಎ,ಕೆ ಮತ್ತು ಬಿ12), ಕೊಬ್ಬು, ಅಮಿನೋ ಆಮ್ಲ, ನಾರಿನಾಂಶ ಮತ್ತು ಆ್ಯಂಟಿಆಕ್ಸಿಡೆಂಟ್ ಗಳು ಇವೆ.

Drinking Milk Before Going to Bed its good for health?

ಬಾಲ್ಯದಿಂದಲೇ ನಾವು ಹಾಲನ್ನು ಕುಡಿದು ಆರೋಗ್ಯ ಕಾಪಾಡಿಕೊಂಡು ಬಂದಿರುತ್ತೇವೆ. ನಮ್ಮ ಉತ್ತಮ ಆರೋಗ್ಯದಲ್ಲಿ ಹಾಲು ಕೂಡ ಪ್ರಮುಖ ಪಾತ್ರ ವಹಿಸುವುದು. ಹಾಲನ್ನು ಕೆಲವರು ಬೆಳಗ್ಗೆ, ಇನ್ನು ಕೆಲವರು ಸಂಜೆ ವೇಳೆ ಕುಡಿಯುವರು. ಮಲಗುವ ಮೊದಲು ಹಾಲು ಕುಡಿದರೆ ಒಳ್ಳೆಯದು ಎನ್ನುವುದು ಒಂದು ವರ್ಗದ ಅಭಿಪ್ರಾಯ. ಆದರೆ ಮಲಗುವ ಮೊದಲು ಹಾಲು ಕುಡಿಯಬಾರದು ಎಂದು ವಾದ ಮಂಡಿಸುವವರು ಇದ್ದಾರೆ. ಆದರೆ ಮಲಗುವ ಮೊದಲು ಹಾಲು ಕುಡಿದರೆ ಅದರಿಂದ ಆಗುವಂತಹ ಉಪಯೋಗ ಮತ್ತು ಅಡ್ಡಪರಿಣಾಮಗಳ ಬಗ್ಗೆ ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ. ಇದನ್ನು ನೀವು ಓದಿಕೊಂಡು ಹಾಲನ್ನು ಯಾವಾಗ ಕುಡಿಯಬೇಕೆಂದು ನಿರ್ಧಾರ ಮಾಡಿಕೊಳ್ಳಿ.

ರಾತ್ರಿ ಮಲಗುವ ಮೊದಲು ಹಾಲಿನ ಸೇವನೆ

ರಾತ್ರಿ ಮಲಗುವ ಮೊದಲು ಹಾಲಿನ ಸೇವನೆ

ಭಾರತೀಯರು ಸಾವಿರಾರು ವರ್ಷಗಳಿಂದಲೂ ನಂಬಿಕೊಂಡು ಬಂದಿರುವಂತಹ ಆಯುರ್ವೇದದ ಪ್ರಕಾರ ರಾತ್ರಿ ವೇಳೆ ಒಂದು ಲೋಟ ಬಿಸಿ ಹಾಲು ಕುಡಿದರೆ ಒಳ್ಳೆಯ ನಿದ್ರೆ ಬರುವುದು. ವಸಂತ್ ಲಾಡ್ ಎಂಬವರು ಬರೆದಿರುವ ಆಯುರ್ವೇದಿಕ್ ಮನೆಮದ್ದು ಎನ್ನುವ ಪುಸ್ತಕದಲ್ಲಿ ಹೀಗೆ ಬರೆದಿರುವರು ``ಒಂದು ಲೋಟ ಬಿಸಿ ಹಾಲಿಗೆ ಶುಂಠಿ, ಏಲಕ್ಕಿ ಮತ್ತು ಅರಶಿನ ಹಾಕಿ ಕುಡಿಯಲು ಮರೆಯಬೇಡಿ. ರಾತ್ರಿ ಮಲಗುವ ಮೊದಲು ಬಿಸಿ ಹಾಲು ಕುಡಿದರೆ ಅದರಿಂದ ನಿದ್ರೆಯು ಬರುವುದು. ಆಯುರ್ವೇದದ ಪ್ರಕಾರ ಹಾಲು ಶುಕ್ರ ಧಾತುವನ್ನು ಪೋಷಿಸುತ್ತದೆ. ಇದು ದೇಹದ ಸಂತಾನೋತ್ಪತ್ತಿಯ ಅಂಗಾಂಶವಿದೆ.

Most Read: ಅಡುಗೆಮನೆಯ 'ಅಡುಗೆ ಸೋಡಾ' ದ ಆರೋಗ್ಯಕಾರಿ ಪ್ರಯೋಜನಗಳು

ಹಾಲಿನಲ್ಲಿರುವ ಕ್ಯಾಲ್ಸಿಯಂ

ಹಾಲಿನಲ್ಲಿರುವ ಕ್ಯಾಲ್ಸಿಯಂ

ಹಾಲಿನಲ್ಲಿರುವಂತಹ ಅಮಿನೋ ಆಮ್ಲವನ್ನು ಟ್ರೈಪ್ಟೊಫಾನ್ ಎಂದು ಕರೆಯಲಾಗುತ್ತದೆ. ಇದು ಒಳ್ಳೆಯ ನಿದ್ರೆಗೆ ತುಂಬಾ ಸಹಕಾರಿ. ಇದರಲ್ಲಿ ಇರುವಂತಹ ಮೆಲಟೊನಿನ್ ಎನ್ನುವ ಅಂಶವು ನಿದ್ರೆ ಹಾಗೂ ಎದ್ದೇಳುವ ನಿಯಂತ್ರಿಸುವುದು. ಹಾಲಿನಲ್ಲಿ ಹೆಚ್ಚಿನ ಕ್ಯಾಲ್ಸಿಯಂ ಇರುವ ಕಾರಣದಿಂದಾಗಿ ಇದು ಮೂಳೆಗಳ ಆರೋಗ್ಯ ಕಾಪಾಡಲು ಅತೀ ಅಗತ್ಯವಾಗಿದೆ. ರಾತ್ರಿ ವೇಳೆ ದೈಹಿಕ ಚಟುವಟಿಕೆಯು ಕಡಿಮೆ ಇರುವ ಕಾರಣದಿಂದಾಗಿ ಕ್ಯಾಲ್ಸಿಯಂ ಹೀರುವಿಕೆ ಕೂಡ ಸರಿಯಾಗಿ ಆಗುವುದು.

ಮಲಬದ್ಧತೆ ಇರುವವರಿಗೆ

ಮಲಬದ್ಧತೆ ಇರುವವರಿಗೆ

ಮಲಬದ್ಧತೆ ಹಾಗೂ ಅನಿಯಮಿತ ತಿನ್ನುವ ಅಭ್ಯಾಸ ಇರುವಂತಹ ವ್ಯಕ್ತಿಗಳಿಗೆ ನಾನು ಹಾಲನ್ನು ಸೇವಿಸಲು ಸಲಹೆ ನೀಡುತ್ತೇನೆ. ಹಾಲಿನಲ್ಲಿ ಹೀರಿಕೊಳ್ಳುವ ಮತ್ತು ಹೀರಿಕೊಳ್ಳದ ನಾರಿನಾಂಶವಿದೆ. ಹೀರಿಕೊಳ್ಳುವ ನಾರಿನಾಂಶವು ಸಣ್ಣ ಮಟ್ಟದಲ್ಲಿ ಬೇಕಾಗಿದೆ. ಇದು ಸಕ್ಕರೆ ಹಾಗೂ ಕೊಬ್ಬಿನೊಂದಿಗೆ ಸೇರಿಕೊಂಡು ಜೀರ್ಣಕ್ರಿಯೆ ನಿಧಾನವಾಗಿಸುವುದು. ಮಲಬದ್ಧತೆ ಇರುವವರಿಗೆ ಹಾಲು ಅತಿ ಪರಿಣಾಮಕಾರಿ ಎಂದು ಆರೋಗ್ಯ ತಜ್ಞರು ಅಭಿಪ್ರಾಯ ಪಡುತ್ತಾರೆ

ರಾತ್ರಿ ವೇಳೆ ಹಾಲನ್ನು ಯಾಕೆ ಸೇವಿಸಬಾರದು

ರಾತ್ರಿ ವೇಳೆ ಹಾಲನ್ನು ಯಾಕೆ ಸೇವಿಸಬಾರದು

ಮಲಬದ್ಧತೆ ಹಾಗೂ ಅನಿಯಮಿತ ತಿನ್ನುವ ಅಭ್ಯಾಸ ಇಲ್ಲದೆ ಇರುವಂತಹವರಿಗೆ ವೈದ್ಯರು ರಾತ್ರಿ ವೇಳೆ ಹಾಲು ಕುಡಿಯಲು ಸಲಹೆ ಮಾಡುವುದಿಲ್ಲ. ಹಾಲು ಒಂದು ಸಂಪೂರ್ಣ ಊಟವೆಂದು ಪರಿಗಣಿಸಲಾಗಿದೆ. ಇದರಲ್ಲಿ ಎಲ್ಲಾ ರೀತಿಯ ಪೋಷಕಾಂಶಗಳು ಇವೆ. ಹಾಲಿನಲ್ಲಿ ಲ್ಯಾಕ್ಟೋಸ್ ಮತ್ತು ಪ್ರೋಟೀನ್(ಕ್ಯಾಸಿನ್, ಅಲ್ಬಲಿನ್ ಮತ್ತು ಗ್ಲೋಬ್ಯುಲಿನ್ಸ್) ಇದೆ. ಡಿಸ್ಚಾರ್ರೈಡ್(ಸಕ್ಕರೆಯ ಒಂದು ವಿಧಾನ)ವಾಗಿರುವ ಲ್ಯಾಕ್ಟೋಸ್ ಇರುವ ಕಾರಣದಿಂದಾಗಿ ಇದನ್ನು ಮಲಗುವ ಮೊದಲು ಕುಡಿಯಲು ಹೇಳಲಾಗುವುದಿಲ್ಲ. ಯಾಕೆಂದರೆ ಇದು ನಿಮ್ಮ ದೇಹವು ಶಕ್ತಿ ಪಡೆಯುವುದನ್ನು ತಡೆಯುವುದು. ರಾತ್ರಿ ವೇಳೆ ಯಕೃತ್ ವಿಷಕಾರಿ ಅಂಶಗಳನ್ನು ಹೊರಹಾಕುವ ಕಾರ್ಯ ಮಾಡುವ ಕಾರಣದಿಂದ ತುಂಬಾ ಚಟುವಟಿಕೆಯಿಂದ ಇರುವುದು. ಹಾಲು ಸೇವನೆಯಿಂದ ಯಕೃತ್ ನ ಕ್ರಿಯೆಗೆ ಪರಿಣಾಮವಾಗುವುದು. ಇದರಿಂದಾಗಿ ನಮ್ಮ ದೇಹದಲ್ಲಿ ವಿಷಕಾರಿ ಅಂಶಗಳು ಉಳಿದುಕೊಳ್ಳುವಂತಹ ಸಾಧ್ಯತೆಗಳು ಹೆಚ್ಚಾಗುವುದು.

Most Read: ಹುಳಿ ಸಿಹಿ ಮಿಶ್ರಿತ 'ಕಿತ್ತಳೆ-ಹಣ್ಣಿನ' ಆರೋಗ್ಯಕಾರಿ ಪ್ರಯೋಜನಗಳು

ರಾತ್ರಿ ವೇಳೆ ಹಾಲನ್ನು ಕುಡಿದರೆ

ರಾತ್ರಿ ವೇಳೆ ಹಾಲನ್ನು ಕುಡಿದರೆ

ರಾತ್ರಿ ವೇಳೆ ಹಾಲನ್ನು ಕುಡಿದರೆ ಸಮಸ್ಯೆಯಾಗುವುದು ಎನ್ನುವ ಬಗ್ಗೆ ಮಾತ್ರ ವಾದಗಳು ಇಲ್ಲ. ಬೆಳಗ್ಗೆ ಹಾಲನ್ನು ಕುಡಿಯುವುದು ತುಂಬಾ ಒಳ್ಳೆಯದು ಮತ್ತು ನಮ್ಮ ದೇಹವು ಹೆಚ್ಚು ಕ್ರಿಯಾಶೀಲವಾಗಿರುತ್ತದೆ ಎಂದು ಹೇಳಲಾಗುತ್ತದೆ. ಆದರೆ ಇನ್ನೊಂದು ಮೂಲಗಳ ಪ್ರಕಾರ ಹಗಲಿನಲ್ಲಿ ಹಾಲು ಜೀರ್ಣಿಸಲು ತುಂಬಾ ಕಠಿಣವಾಗುವುದು.

ಆರೋಗ್ಯ ತಜ್ಞರು ಹೇಳುವ ಪ್ರಕಾರ

ಆರೋಗ್ಯ ತಜ್ಞರು ಹೇಳುವ ಪ್ರಕಾರ

ಪೋಷಕಾಂಶ ತಜ್ಞರು ಹಾಗೂ ಆರೋಗ್ಯ ತಜ್ಞರು ಹೇಳುವ ಪ್ರಕಾರ ಊಟದ ವೇಳೆ ಹಾಲನ್ನು ಕುಡಿಯುವುದನ್ನು ಸಂಪೂರ್ಣ ತ್ಯಜಿಸಬೇಕು. ಯಾಕೆಂದರೆ ಇದು ಜೀರ್ಣಿಸಲು ತುಂಬಾ ಕಠಿಣವಾಗಿರುವುದು. ಹಾಲನ್ನು ಪ್ರತ್ಯೇಕವಾಗಿಯೇ ಕುಡಿಯಬೇಕು. ಬಿಸಿ ಅಥವಾ ಉಗುರುಬೆಚ್ಚಗಿನ ಹಾಲನ್ನು ಕುಡಿಯಬೇಕು. ಇದರಿಂದ ಜೀರ್ಣಕ್ರಿಯೆಗೆ ನೆರವಾಗುವುದು. ಲ್ಯಾಕ್ಟೋಸ್ ಅಸಹಿಷ್ಣುತೆ ಇರುವಂತಹ ವ್ಯಕ್ತಿಗಳು ಹಾಲನ್ನು ಸಂಪೂರ್ಣವಾಗಿ ವರ್ಜಿಸಬೇಕು.

Most Read: ಎಚ್ಚರ! ಚೀನಾದಿಂದ ಬರುತ್ತಿದೆ ವಿಷಕಾರಿ ಬೆಳ್ಳುಳ್ಳಿ! ನೋಡಿ ಈ ರೀತಿಯಾಗಿ ಪತ್ತೆಹಚ್ಚಿ

ಕೊನೆಯ ತೀರ್ಮಾನ

ಕೊನೆಯ ತೀರ್ಮಾನ

ಹಾಲನ್ನು ರಾತ್ರಿ ವೇಳೆ ಕುಡಿಯಬೇಕೇ ಅಥವಾ ಬೇಡವೇ ಎನ್ನುವ ವಾದ ಈಗಲೂ ನಡೆಯುತ್ತಲೇ ಇದೆ. ಆದರೆ ಹಾಲಿನಲ್ಲಿರುವಂತಹ ಪೋಷಕಾಂಶಗಳ ಬಗ್ಗೆ ಯಾರಿಗೂ ಯಾವುದೇ ರೀತಿಯ ಗೊಂದಲಗಳು ಇಲ್ಲ. ಇದರಿಂದ ನಿಮ್ಮ ದೇಹದ ಮಾತನ್ನು ಕೇಳಿಕೊಂಡು ಒಂದು ಲೋಟ ಹಾಲನ್ನು ಕುಡಿಯಲು ತಯಾರಾಗಿರಿ. ಹಾಲಿನ ಬದಲಿಗೆ ಬಾದಾಮಿ ಹಾಲು, ತೆಂಗಿನಹಾಲು ಮತ್ತು ಬೀಜಗಳ ಹಾಲನ್ನು ಸೇವನೆ ಮಾಡಬಹುದು. ಇದು ಕೂಡ ದನದ ಹಾಲಿನಷ್ಟೇ ತುಂಬಾ ಪರಿಣಾಮಕಾರಿಯಾಗಿರಲಿದೆ. ಸಸ್ಯಾಹಾರಿಗಳಿಗೆ ಇದು ತುಂಬಾ ಪರಿಣಾಮಕಾರಿಯಾಗಿರಲಿದೆ.

English summary

Drinking Milk Before Going to Bed its good for health?

Milk, an abundant source of calcium, sodium, proteins, vitamins (A, K and B12), fats, amino acids, fibers and anti-oxidants, is often labelled as a full meal in itself by nutritionists. Remember how your mother would chase you round the house to make sure you had your glassful of nutrition? Milk since time immemorial has been seen as the magic potion for good health and well-being. Some consume it in the morning, some in the evening.
Story first published: Tuesday, October 23, 2018, 17:36 [IST]
X
Desktop Bottom Promotion