ಏಲಕ್ಕಿ ನೀರನ್ನು ಒಂದು ವಾರ ಕುಡಿಯಿರಿ-ಪರಿಣಾಮ ಗಮನಿಸಿ

Posted By: Hemanth
Subscribe to Boldsky

ಭಾರತೀಯರ ಪ್ರತಿಯೊಂದು ಅಡುಗೆ ಮನೆಯಲ್ಲಿ ಇರುವಂತಹ, ಆಹಾರದ ರುಚಿ ಹಾಗೂ ಸುವಾಸನೆ ಹೆಚ್ಚಿಸುವ ಶ್ರೇಯಸ್ಸು ಪಡೆದಿರುವ ಏಲಕ್ಕಿಯ ಬಗ್ಗೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಪ್ರತಿಯೊಬ್ಬರಿಗೂ ಏಲಕ್ಕಿ ಸುವಾಸನೆಯೆಂದರೆ ಇಷ್ಟ. ಇದು ತುಂಬಾ ಸಣ್ಣ ಬೀಜವಾದರೂ ಅದರಲ್ಲಿರುವ ಆರೋಗ್ಯ ಲಾಭಗಳು ಮಾತ್ರ ಅನೇಕ. ಇಂತಹ ಏಲಕ್ಕಿಯಿಂದ ದೇಹಕ್ಕೆ ಹಲವಾರು ರೀತಿಯ ಲಾಭಗಳು ಇವೆ. ಏಲಕ್ಕಿ ನೀರು ಸೇವನೆ ಮಾಡುವುದರಿಂದ ದೇಹಕ್ಕೆ ಹಲವಾರು ರೀತಿಯ ಲಾಭಗಳು ಇವೆ. ಯಾವುದೇ ಪದಾರ್ಥಕ್ಕೆ ಹಾಕಿದರೂ ಅದು ಸುವಾಸನೆ ಹಾಗೂ ರುಚಿ ಅಧಿಕಗೊಳಿಸುವುದು.

ಏಲಕ್ಕಿ ಹಾಕಿದ ನೀರು ಒಂದು ವಾರ ಕಾಲ ಕುಡಿದರೆ ಅದರಿಂದ ಹಲವಾರು ರೀತಿಯ ಆರೋಗ್ಯ ಲಾಭಗಳು ದೇಹಕ್ಕೆ ಸಿಗುವುದು. ಇದು ಹಲ್ಲಿನ ಸಮಸ್ಯೆ ಮತ್ತು ಜೀರ್ಣಕ್ರಿಯೆಗೆ ತುಂಬಾ ಪರಿಣಾಮಕಾರಿ. ಇದು ಬಾಯಿಯ ದುರ್ವಾಸನೆ ನಿವಾರಣೆ ಮಾಡಿ, ತಾಜಾ ಉಸಿರು ನೀಡುವುದು. ಏಲಕ್ಕಿಯಲ್ಲಿರುವ ಹಲವಾರು ರೀತಿಯ ವಿಟಮಿನ್ ಗಳು ಹಾಗೂ ಖನಿಜಾಂಶಗಳು ದೇಹಕ್ಕೆ ಹಲವಾರು ಲಾಭಗಳನ್ನು ನೀಡಲಿದೆ...

ಜೀರ್ಣಕ್ರಿಯೆಗೆ ಸಹಕಾರಿ

ಜೀರ್ಣಕ್ರಿಯೆಗೆ ಸಹಕಾರಿ

ಏಲಕ್ಕಿ ನೀರು ಸಮಸ್ಯೆಗೊಳಗಾಗಿರುವ ದೇಹದ ಜೀರ್ಣಕ್ರಿಯೆ ವ್ಯವಸ್ಥೆಯನ್ನು ಸರಿಪಡಿಸುವುದು. ಹೊಟ್ಟೆ ಉಬ್ಬರ, ಗ್ಯಾಸ್, ಅಸಿಡಿಟಿ ಮತ್ತು ವಾಕರಿಕೆ ಸಮಸ್ಯೆ ನಿವಾರಣೆ ಮಾಡುವುದು. ವಾರದ ಕಾಲ ಏಲಕ್ಕಿ ಹಾಕಿದ ನೀರು ಕುಡಿದರೆ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುವುದು.

ದೇಹದ ವಿಷಕಾರಿ ಅಂಶ ಹೊರಹಾಕಲು….

ದೇಹದ ವಿಷಕಾರಿ ಅಂಶ ಹೊರಹಾಕಲು….

ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕಲು ಏಲಕ್ಕಿ ನೀರು ಪ್ರಮುಖ ಪಾತ್ರ ವಹಿಸುವುದು. ಕಿಡ್ನಿ ಮೂಲಕ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕಲು ಇದು ನೆರವಾಗುವುದು.

ದಂತ ಆರೋಗ್ಯಕ್ಕಾಗಿ….

ದಂತ ಆರೋಗ್ಯಕ್ಕಾಗಿ….

ಹೆಚ್ಚಿನ ಮೌಥ್ ಪ್ರೆಶ್ನರ್ ಮತ್ತು ಟೂಥ್ ಪೇಸ್ಟ್ ಗಳಲ್ಲಿ ಏಲಕ್ಕಿ ಬಳಸಲಾಗುತ್ತದೆ. ಇದು ಬಾಯಿಯ ದುರ್ವಾಸನೆ ತಡೆಯುವುದು ಮತ್ತು ಬ್ಯಾಕ್ಟೀರಿಯಾ ಸೋಂಕಿನ ವಿರುದ್ಧ ಹೋರಾಡಲು ನೆರವಾಗುವುದು. ಬಾಯಿಯ ಅಲ್ಸರ್ ಹಾಗೂ ಸೋಂಕಿ ನಿಂದ ನಿವಾರಣೆ ನೀಡುವುದು.

ಪ್ರತಿರೋಧಕ ಶಕ್ತಿ ವೃದ್ಧಿ

ಪ್ರತಿರೋಧಕ ಶಕ್ತಿ ವೃದ್ಧಿ

ದೇಹದಲ್ಲಿ ಪ್ರತಿರೋಧಕ ಶಕ್ತಿ ವೃದ್ಧಿ ಮಾಡುವಲ್ಲಿ ಏಲಕ್ಕಿ ನೀರು ಪ್ರಮುಖ ಪಾತ್ರ ವಹಿಸುವುದು. ಇದು ಹಲವಾರು ರಿತಿಯ ವೈರಲ್ ಮತ್ತು ಜ್ವರದ ಸೋಂಕಿನ ವಿರುದ್ಧ ಹೋರಾಡುವುದು ಮತ್ತು ದೇಹಕ್ಕೆ ರಕ್ಷಣೆ ನೀಡುವುದು. ಗಂಟಲಿನ ಸೋಂಕು ಉಂಟಾಗಿದ್ದರೂ ನೀವು ಇದನ್ನು ಏಲಕ್ಕಿ ನೀರಿನಿಂದ ನಿವಾರಣೆ ಮಾಡಬಹುದು. ಶ್ವಾಸನಾಳಗಳ ಒಳಪೊರೆಯ ಉರಿಯೂತ ತಡೆಯುವುದು.

ವಯಸ್ಸಾಗುವ ಲಕ್ಷಣಗಳ ವಿರುದ್ಧ ಹೋರಾಟ

ವಯಸ್ಸಾಗುವ ಲಕ್ಷಣಗಳ ವಿರುದ್ಧ ಹೋರಾಟ

ಏಲಕ್ಕಿಯಲ್ಲಿ ಆ್ಯಂಟಿಆಕ್ಸಿಡೆಂಟ್ ಗುಣವು ಸಮೃದ್ಧವಾಗಿರುವ ಕಾರಣದಿಂದ ಇದು ದೇಹದಲ್ಲಿ ವಯಸ್ಸಾಗುವ ಲಕ್ಷಣ ತಡೆಯುವುದು. ಇದು ದೇಹದಲ್ಲಿ ಫ್ರೀ ರ್ಯಾಡಿಕಲ್ ವಿರುದ್ಧ ಹೋರಾಡುವುದು. ಇದರಿಂದ ಚರ್ಮವು ಕಾಂತಿಯುತವಾಗಿರುವುದು.

ಕ್ಯಾನ್ಸರ್

ಕ್ಯಾನ್ಸರ್

ಕೆಲವಾರು ಸಂಶೋಧನೆಗಳಲ್ಲಿ ಕಂಡುಕೊಂಡಂತೆ ನಿತ್ಯವೂ ಏಲಕ್ಕಿ ನೀರನ್ನು ಕುಡಿಯುವ ಮೂಲಕ ದೇಹದಲ್ಲಿ ಕ್ಯಾನ್ಸರ್ ಉಂಟುಮಾಡುವ ಕಣಗಳ ಬೆಳವಣಿಗೆ ನಿಯಂತ್ರಿಸುತ್ತದೆ ಹಾಗೂ ಈ ಮೂಲಕ ಕ್ಯಾನ್ಸರ್ ಎದುರಾಗುವ ಸಂಭವ ಕಡಿಮೆಯಾಗುತ್ತದೆ. ಅಲ್ಲದೇ ಕೆಲವು ಬಗೆಯ ಕ್ಯಾನ್ಸರ್ ಗೆ ಗುರಿಯಾದ ಜೀವಕೋಶಗಳನ್ನೂ ಕೊಲ್ಲುತ್ತದೆ.

ಕ್ರಿಮಿ ನಿವಾರಕ

ಕ್ರಿಮಿ ನಿವಾರಕ

ಇದರಲ್ಲಿರುವ ಅವಶ್ಯಕ ತೈಲಗಳು ಸುಲಭವಾಗಿ ಆವಿಯಾಗುವಂತಹದ್ದಾಗಿದ್ದು ಇದರ ಸೇವನೆಯಿಂದ ದೇಹದಲ್ಲಿ ಪ್ರವೇಶ ಪಡೆದಿರುವ ವೈರಸ್ಸುಗಳು, ಬ್ಯಾಕ್ಟೀರಿಯಾ, ಶಿಲೀಂಧ್ರ ಹಾಗೂ ಹೈಫೇ (hyphae) ಎಂಬ ಬಗೆಯ ಕ್ರಿಮಿಗಳ ವಿರುದ್ಧ ರಕ್ಷಣೆ ಒದಗಿಸುತ್ತದೆ.

ಶೀತ ಮತ್ತು ಫ್ಲೂ

ಶೀತ ಮತ್ತು ಫ್ಲೂ

ಈ ಅದ್ಭುತ ನೀರನ್ನು ನಿತ್ಯವೂ ಕುಡಿಯುವ ಮೂಲಕ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಹಾಗೂ ಶೀತ, ಫ್ಲೂ ಮೊದಲಾದ ತೊಂದರೆಗಳಿಂದ ರಕ್ಷಣೆ ದೊರಕುತ್ತದೆ. ಅಲ್ಲದೇ ಶ್ವಾಸಕೋಶದ ತೊಂದರೆಯಾದ ಬ್ರಾಂಖೈಟಿಸ್ ಹಾಗೂ ಕೆಮ್ಮು, ಕಫ ಮೊದಲಾದ ತೊಂದರೆಗಳನ್ನೂ ನಿವಾರಿಸುತ್ತದೆ.

ಮೂತ್ರವರ್ಧಕ

ಮೂತ್ರವರ್ಧಕ

ನಿತ್ಯವೂ ಏಲಕ್ಕಿ ಕುದಿಸಿದ ನೀರನ್ನು ಕುಡಿಯುವ ಮೂಲಕ ಮೂತ್ರದ ಪ್ರಮಾಣ ಹೆಚ್ಚುತ್ತದೆ. ಏಲಕ್ಕಿಯ ಮೂತ್ರವರ್ಧಕ ಗುಣ ಮೂತ್ರದ ಪ್ರಮಾಣವನ್ನು ಹೆಚ್ಚಿಸಿ ಮೂತ್ರನಾಳ, ಮೂತ್ರಪಿಂಡಗಳನ್ನು ಸ್ವಚ್ಛಗೊಳಿಸಲು ನೆರವಾಗುತ್ತದೆ. ಪರಿಣಾಮವಾಗಿ ಕಲ್ಮಶಗಳು, ಉಪ್ಪು, ಹೆಚ್ಚುವರಿ ನೀರು, ವಿಷಕಾರಿ ವಸ್ತುಗಳನ್ನು ನಿವಾರಿಸಿ ಸೋಂಕುಗಳಿಂದ ರಕ್ಷಿಸುತ್ತದೆ.

ಏಲಕ್ಕಿಯ ಇತರ ಪ್ರಯೋಜನಗಳು

ಏಲಕ್ಕಿಯ ಇತರ ಪ್ರಯೋಜನಗಳು

ಏಲಕ್ಕಿಯ ಸೇವನೆಯಿಂದ ಹುಳಿತೇಗು, ಎದೆಯುರಿ, ಕರುಳುಗಳು ಕಿವುಚಿದಂತಾಗುವುದು, ಜೀರ್ಣಾಂಗಗಳಲ್ಲಿ ಉರಿ, ವಾಯುಪ್ರಕೋಪ, ಮಲಬದ್ದತೆ, ಯಕೃತ್ ಹಾಗೂ ಪಿತ್ತಕೋಶದ ತೊಂದರೆಗಳು ಮೊದಲಾದವು ಕಡಿಮೆಯಾಗುತ್ತದೆ. ಅಲ್ಲದೇ ಜೀರ್ಣಾಂಗಗಳಲ್ಲಿ ಆಹಾರದ ಚಲನೆಯ ಗತಿಯನ್ನೂ ಹೆಚ್ಚಿಸುತ್ತದೆ. ಏಲಕ್ಕಿಯಲ್ಲಿ ಉತ್ತಮ ಪ್ರಮಾಣದ ಪೊಟ್ಯಾಶಿಯಂ, ಕ್ಯಾಲ್ಸಿಯಂ, ಗಂಧಕ, ಮೆಗ್ನೇಶಿಯಂ, ಕಬ್ಬಿಣ ಹಾಗೂ ಮ್ಯಾಂಗನೀಸ್ ಇವೆ. ಇವೆಲ್ಲವೂ ಏಲಕ್ಕಿಯ ಆರೋಗ್ಯಕರ ಗುಣಗಳನ್ನು ಹೆಚ್ಚಿಸುತ್ತವೆ. ಅಂದರೆ ಏಲಕ್ಕಿಯನ್ನು ಉತ್ತಮ ಪ್ರತಿಜೀವಕ, ಆಂಟಿ ಆಕ್ಸಿಡೆಂಟು, ಗುಣಕಾರಕ, ಜೀರ್ಣಕಾರಕ, ಮೂತ್ರವರ್ಧಕ, ಕಫ ನಿವಾರಕ, ಪ್ರಚೋದಕವಾಗಿಸುತ್ತದೆ ಹಾಗೂ ಉತ್ತಮವಾದ ಶಕ್ತಿವರ್ಧಕ ಅಥವಾ ಟಾನಿಕ್ ಸಹಾ ಆಗಿದೆ.

ಏಲಕ್ಕಿ ನೀರು ತಯಾರಿಸುವುದು ಹೇಗೆ?

ಏಲಕ್ಕಿ ನೀರು ತಯಾರಿಸುವುದು ಹೇಗೆ?

ಕೆಲವು ಏಲಕ್ಕಿಗಳನ್ನು ರುಬ್ಬಿಕೊಂಡು ಅದರ ಹುಡಿ ಮಾಡಿಕೊಳ್ಳಿ. ಇದನ್ನು ನೀರಿಗೆ ಹಾಕಿಕೊಂಡು ಮಿಶ್ರಣ ಮಾಡಿ. ಈ ಮಿಶ್ರಣಕ್ಕೆ ಕೆಲವು ಏಲಕ್ಕಿ ಮೊಗ್ಗುಗಳನ್ನು ಹಾಕಿ. ನೀರನ್ನು ಕುದಿಸಿ, ಆದರೆ ಅತಿಯಾಗಿ ಕುದಿಸಬೇಡಿ. ಅತಿಯಾಗಿ ಕುದಿಸಿದರೆ ಅದರಿಂದ ನೀರಿನ ರುಚಿ ಕೆಟ್ಟು ಹೋಗಿ, ಕಹಿಯಾಗುವುದು. ಇದನ್ನು ಹಾಗೆ ತಣಿಯಲು ಬಿಟ್ಟುಬಿಡಿ. ಬಳಿಕ ಮೂರು ಚಮಚ ಏಲಕ್ಕಿ ನೀರನ್ನು ಒಂದು ಲೋಟ ನೀರಿಗೆ ಹಾಕಿ ಕುಡಿಯಿರಿ. ಸ್ವಲ್ಪ ಲಿಂಬೆರಸ ಹಾಕಿಕೊಂಡು ಕುಡಿದರೂ ಒಳ್ಳೆಯದು.

English summary

drink-cardamom-elaichi-water-a-week-see-effects

Drinking boiled cardamom water can provide you with several health benefits. This spice is commonly used as a treatment for mouth ulcers, digestive problems and also depression.