For Quick Alerts
ALLOW NOTIFICATIONS  
For Daily Alerts

ಮೂತ್ರಕೋಶ ತುಂಬಿದಾಗಲೇ ಸೆಕ್ಸ್ ಕೆರಳುವುದೇಕೆ?

|

ಅನೇಕ ಸಂದರ್ಭಗಳಲ್ಲಿ ಬೇಡವಾದ ಸಮಯದಲ್ಲಿಯೂ ಸಹ ಲೈಂಗಿಕ ಕಾಮನೆಗಳು ಕೆರಳುತ್ತವೆ. ರತಿ ವಿಜ್ಞಾನ ಓದುವುದು, ಪೋರ್ನ್ ನೋಡುವುದು ಅಥವಾ ಇನ್ನಾವುದೋ ಕಾರಣಗಳಿಂದ ಕಾಮಾತುರತೆ ಉಂಟಾಗುವುದು ಸಹಜ. ಆದರೆ ಲೈಂಗಿಕತೆಗೆ ಸಂಬಂಧವೇ ಇಲ್ಲದ ಸಹಜ ದೈಹಿಕ ಕ್ರಿಯೆಯೊಂದರಿಂದ ಸೆಕ್ಸ್ ಕಾಮನೆಗಳು ಕೆರಳುತ್ತವೆ ಎಂಬುದು ಬಹುಶಃ ನಿಮಗೆ ಗೊತ್ತಿರಲಾರದು. ನಿಮಗೂ ಇಂಥ ಅನುಭವ ಆಗಿರಬಹುದು. ಆದರೆ ಅವತ್ತು ಹಾಗೆ ಯಾಕಾಯಿತು ಎಂಬುದರ ಬಗ್ಗೆ ನೀವು ಚಿಂತಿಸಿರಲಿಕ್ಕಿಲ್ಲ.

ಮೂತ್ರಕೋಶ ಸಂಪೂರ್ಣ ತುಂಬಿ ಇನ್ನೇನು ಮೂತ್ರ ವಿಸರ್ಜನೆಗೆ ಹೋಗಬೇಕು ಎಂದುಕೊಳ್ಳುವಾಗಲೇ ಲೈಂಗಿಕ ವಾಂಛೆಗಳು ಕೆರಳುತ್ತವೆ. ಇದು ಹೀಗೇಕೆ ಎಂಬುದು ನಿಮಗೆ ಗೊತ್ತಿರಲಿಕ್ಕಿಲ್ಲ. ಆದರೆ ಇದಕ್ಕೆ ವೈಜ್ಞಾನಿಕ ಕಾರಣಗಳಿವೆ ಎಂದರೆ ನಿಮಗೆ ಅಚ್ಚರಿಯಾಗಬಹುದು. ಇದರ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ನೀಡಲಾಗಿದ್ದು ನೀವೂ ಓದಿ ತಿಳಿದುಕೊಳ್ಳಿ.

urine during sexual intercourse

ಮೂತ್ರ ಹಾಗೂ ಕಾಮನೆಗಳಿಗೆ ಏನು ಸಂಬಂಧ?

ಮೂತ್ರಕೋಶ ತುಂಬಿದಾಗ ಕಾಮನೆಗಳು ಕೆರಳುವುದೇಕೆ ಎಂಬ ಬಗ್ಗೆ ಆಳವಾದ ಸಂಶೋಧನೆಗಳು ಈವರೆಗೂ ನಡೆದಿಲ್ಲ. ಆದರೂ ಇದೊಂದು ಸಹಜ ಕ್ರಿಯೆಯೇ ಆಗಿದೆ ಎನ್ನುತ್ತಾರೆ ಕ್ಯಾಲಿಫೋರ್ನಿಯಾದ ಮಹಿಳಾ ಆರೋಗ್ಯ ತಜ್ಞೆ ಸಾಂತಾ ಮೋನ್ಸಿಯಾ. ಮೂತ್ರಕೋಶ ಭರ್ತಿಯಾಗಿರುವಾಗ ಅದರಿಂದ ಯೋನಿಯೊಳಗೆ ನುಗ್ಗುವಿಕೆ, ಚಂದ್ರನಾಡಿ ಹಾಗೂ ಅದರ ಸುತ್ತಲಿನ ಜೀವಕೋಶಗಳಲ್ಲಿ ರಕ್ತ ಪರಿಚಲನೆ ಹೆಚ್ಚಾಗುವ ಕಾರಣದಿಂದ ಸೆಕ್ಸ್ ಕಾಮನೆಗಳು ಪುಟಿದೇಳುತ್ತವೆ ಎಂಬುದು ತಿಳಿದು ಬಂದಿದೆ.

ದೇಹ ರಚನಾ ಶಾಸ್ತ್ರ ಹೀಗೆ ಹೇಳುತ್ತದೆ..

ಯೋನಿ, ಚಂದ್ರನಾಡಿ ಹಾಗೂ ಮೂತ್ರನಾಳ (ಇದು ಮೂತ್ರಕೋಶಕ್ಕೆ ಸಂಪರ್ಕ ಕಲ್ಪಿಸುತ್ತದೆ) ಗಳು ದೇಹದಲ್ಲಿ ಒಂದಕ್ಕೊಂದು ಅತಿ ಹತ್ತಿರದಲ್ಲಿರುವ ಅಂಗಗಳಾಗಿವೆ. ತುಂಬಿದ ಮೂತ್ರಕೋಶವು ಚಂದ್ರನಾಡಿ ಹಾಗೂ ಅದರ ಸುತ್ತಲಿನ ಸೂಕ್ಷ್ಮ ಭಾಗಗಳನ್ನು ಉತ್ತೇಜಿಸುವ ಕೆಲಸ ಮಾಡುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಮೂತ್ರಕೋಶ ತುಂಬಿರುವಾಗ ಅದರ ಮುಂಭಾಗದಲ್ಲಿರುವ 'ಜಿ-ಸ್ಪಾಟ್' ಕೆರಳುವುದರಿಂದ ಕಾಮೋತ್ತೇಜನೆ ಹೆಚ್ಚಾದ ಅನುಭವವಾಗುತ್ತದೆ.

ಪ್ರಯತ್ನಿಸಿ ನೋಡಿ

ಜೋರಾಗಿ ಮೂತ್ರ ವಿಸರ್ಜನೆಯ ಬಯಕೆ ಇರುವಾಗ ಸೆಕ್ಸ್ ಮಾಡುವುದು ಒಂದು ರೀತಿಯ ವಿಭಿನ್ನ ಪರಾಕಾಷ್ಠೆಯ ಸುಖವನ್ನು ನೀಡುತ್ತದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಹಾಗಾಗಿ ಮೂತ್ರಕೋಶ ತುಂಬಿದಾಗ ಸೆಕ್ಸ್ ಸುಖ ಅನುಭವಿಸಲು ಪ್ರಯತ್ನಿಸಿ ನೋಡುವುದರಲ್ಲಿ ತಪ್ಪೇನೂ ಇಲ್ಲ ಎಂಬುದು ಅವರ ಸಲಹೆಯಾಗಿದೆ. ಆದರೂ ಮೂತ್ರದ ಒತ್ತಡ ತೀರಾ ಜಾಸ್ತಿಯಾದಾಗ ಮಿಲನ ಕ್ರಿಯೆಗೆ ಅಡ್ಡಿ ಉಂಟಾಗಬಹುದು. ಹೀಗಾದಾಗ ಕೇವಲ ಬಾಹ್ಯ ಆಟದ ಮೋಜು ಅನುಭವಿಸಿ ಮೂತ್ರ ವಿಸರ್ಜಿಸಿದ ನಂತರ ಸ್ಖಲನಕ್ಕೆ ರೆಡಿಯಾಗಬಹುದು.

ಹೀಗೆ ಮಾಡಿದರೆ ಸುಖ ಜಾಸ್ತಿ

ಸೊಂಟದ ಕೆಳಭಾಗ ಹೆಚ್ಚು ಶಕ್ತಿಯುತವಾಗುವಂತೆ ಸೂಕ್ತ ವ್ಯಾಯಾಮ ಮಾಡಬೇಕು. ಮೂತ್ರ ಪಿಂಡದ ಬಳಿಯ ಸ್ನಾಯುಗಳು ಶಕ್ತಿಶಾಲಿಯಾಗಿದ್ದರೆ ಮಿಲನ ಕ್ರಿಯೆ ಸಂದರ್ಭದಲ್ಲಿ ಮೂತ್ರ ಹೊರಹೋಗದಂತೆ ತಡೆಗಟ್ಟಲು ಸಹಕಾರಿಯಾಗುತ್ತದೆ. ಈ ವ್ಯಾಯಾಮಗಳಿಂದ ಮೂತ್ರ ಪಿಂಡದ ಅಡಿಯ ಸ್ನಾಯುಗಳು ಬಲಶಾಲಿಯಾಗಿ ಮೂತ್ರಕೋಶ ಹಾಗೂ ಚಂದ್ರನಾಡಿಗಳ ಸಾಮರ್ಥ್ಯ ಹೆಚ್ಚಾಗುತ್ತದೆ.

ಅತಿ ಹೆಚ್ಚು ಹೊತ್ತು ತಡೆಯಬೇಡಿ

ಸುಖದ ಟ್ರಿಕ್ ಪ್ರಯತ್ನ ಮಾಡುವಾಗ ತೀರಾ ಹೆಚ್ಚು ಹೊತ್ತು ಮೂತ್ರ ವಿಸರ್ಜನೆಯನ್ನು ಮುಂದೂಡಬೇಡಿ. ಹೀಗೆ ಮಾಡಿದಲ್ಲಿ ನೋವು ಕಾಣಿಸಿಕೊಳ್ಳಬಹುದು. ಅಲ್ಲದೆ ಪ್ರತಿ ಬಾರಿ ಮಿಲನದ ಸಂದರ್ಭದಲ್ಲಿ ಮೂತ್ರ ತಡೆಯುವ ಸಾಹಸ ಮಾಡುವುದು ಸರಿಯಲ್ಲ. ಬಹಳ ಹೊತ್ತು ಮೂತ್ರ ತಡೆಯುವುದರಿಂದ ಮೂತ್ರನಾಳದ ಸೋಂಕು ಉಂಟಾಗಬಹುದು ಹಾಗೂ ಮೂತ್ರಕೋಶ ಸಂಪೂರ್ಣ ಖಾಲಿಯಾಗುವ ಸಾಮರ್ಥ್ಯ ಕುಂದಬಹುದು.

English summary

Does the urge to pee turn you on? Here's the science behind it

Most importantly, the G- spot is around the entrance of the bladder which contributes to the increased sexual experience if your bladder is full.
X
Desktop Bottom Promotion