For Quick Alerts
ALLOW NOTIFICATIONS  
For Daily Alerts

ವೈದ್ಯರ ಪ್ರಕಾರ ದೇಹದ ಈ 7 ಅಂಗಗಳನ್ನು ಮುಟ್ಟಲೇಬಾರದಂತೆ! ಯಾಕೆ ಗೊತ್ತೇ?

|

ನಮ್ಮ ದೇಹದ ಮೇಲೆ ನಮಗೆ ಸಂಪೂರ್ಣ ಅಧಿಕಾರವಿರುತ್ತದೆ. ಬೇರೆಯವರು ನಮ್ಮ ದೇಹವನ್ನು ಸ್ಪರ್ಶಿಸುವುದಕ್ಕಿಂತ ನಮ್ಮ ದೇಹವನ್ನು ನಾವೇ ಸ್ಪರ್ಶಿಸಿಕೊಳ್ಳುವುದು ಬಹು ಮುಖ್ಯವಾದ ಸಂಗತಿಯಾಗಿದೆ. ನಮ್ಮ ದೇಹದ ಭಾಗಗಳನ್ನು ನಾವೇ ಮುಟ್ಟಿಕೊಳ್ಳಲು ಯಾವ ನಾಚಿಕೆಯೂ ಬೇಕಿಲ್ಲ. ಆದಾಗ್ಯೂ ದೇಹದ ಕೆಲ ಅಂಗಗಳಿಗೆ ಪೋಷಣೆ ಅಗತ್ಯವಾಗಿದ್ದರೂ ಅವನ್ನು ಕೈಯಿಂದ ಮಾತ್ರ ಮುಟ್ಟಿಕೊಳ್ಳಬಾರದು.

NEVER touch

ಇದೇನು ವಿಚಿತ್ರ ಅಂದುಕೊಳ್ಳಬೇಡಿ. ಯಾವ ಅಂಗಗಳನ್ನು ಕೈಯಿಂದ ಮುಟ್ಟಿಕೊಳ್ಳಕೂಡದು ಹಾಗೂ ಯಾಕೆ ಹಾಗೆ ಮಾಡಬಾರದು ಎಂಬುದನ್ನು ತಿಳಿಯಲು ಮುಂದೆ ಓದಿ. ದೇಹದ ಈ 7 ಅಂಗಗಳನ್ನು ಕೈಗಳಿಂದ ಸ್ಪರ್ಶಿಸಕೂಡದು

ಮುಖದ ಮೇಲಿನ ಮೊಡವೆ

ಮುಖದ ಮೇಲಿನ ಮೊಡವೆ

ನಿಮಗೆ ಮೊಡವೆ ಸಮಸ್ಯೆ ಕಾಡುತ್ತಿದ್ದರೆ ಅದು ಅನೇಕ ಬಾರಿ ಅಸ್ವಚ್ಛ ಕೈಗಳಿಂದ ಇನ್ನೂ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ನೀವು ಮುಖ ತೊಳೆಯುವ ಮುನ್ನ ನಿಮ್ಮ ಕೈಗಳನ್ನು ಸ್ವಚ್ಛಗೊಳಿಸುವುದು ಅಗತ್ಯ. ಬಹುತೇಕ ಬ್ಯಾಕ್ಟೀರಿಯಾ ಸೋಂಕುಗಳು ಕೈಗಳಿಂದಲೇ ನಮ್ಮ ದೇಹಕ್ಕೆ ವರ್ಗಾವಣೆಯಾಗುತ್ತವೆ. ಮೊಡವೆಗಳಾದಾಗ ಆಗಾಗ ಅಸ್ವಚ್ಛ ಕೈಗಳಿಂದ ಮುಖವನ್ನು ಸ್ಪರ್ಶಿಸುವುದರಿಂದ ಬ್ಯಾಕ್ಟೀರಿಯಾಗಳು ಹರಡಿ ಸಮಸ್ಯೆ ಹೆಚ್ಚಾಗುತ್ತದೆ.

ಕಣ್ಣುಜ್ಜುವಿಕೆ

ಕಣ್ಣುಜ್ಜುವಿಕೆ

ಆಗಾಗ ಕಣ್ಣುಗಳನ್ನು ಉಜ್ಜುವುದರಿಂದ ಕಣ್ಣುಗಳಲ್ಲಿ ಉರಿಯೂತ ಕಂಡು ಬರುತ್ತದೆ. ಕಣ್ಣುಗಳಲ್ಲಿ ತುರಿಕೆ, ಉರಿ ಕಂಡು ಬಂದಲ್ಲಿ ಅದರ ನಿವಾರಣೆಗೆ ಐ ಡ್ರಾಪ್ಸ್ ಉಪಯೋಗಿಸಬೇಕು. ಅದನ್ನು ಬಿಟ್ಟು ಕೈಗಳಿಂದ ಸತತವಾಗಿ ಕಣ್ಣುಗಳನ್ನು ಉಜ್ಜಿಕೊಳ್ಳಬಾರದು. ಕಣ್ಣು ದೇಹದ ಅತಿ ಸೂಕ್ಷ್ಮ ಹಾಗೂ ಸಂವೇದನಾಶೀಲ ಅಂಗವಾಗಿದೆ. ಬಹುತೇಕ ಸಂದರ್ಭಗಳಲ್ಲಿ ಕೈಗಳಿಂದ ಉಜ್ಜುವುದರಿಂದಲೇ ಕಣ್ಣಿನ ಸೋಂಕು ಉಂಟಾಗುತ್ತದೆ.

Most Read: ಈ ಕೆಟ್ಟ ಹವ್ಯಾಸಗಳಿಗೆ ಇಂದೇ ಗುಡ್ ಬೈ ಹೇಳಿ!

ಗುದದ್ವಾರ

ಗುದದ್ವಾರ

ಗುದದ್ವಾರ ದೇಹದ ಸೂಕ್ಷ್ಮ ಅಂಗಗಳಲ್ಲೊಂದಾಗಿದ್ದು, ಇದು ಬ್ಯಾಕ್ಟೀರಿಯಾಗಳು ಹೆಚ್ಚಾಗಿ ಬೆಳೆಯಬಹುದಾದ ಸ್ಥಳವೂ ಆಗಿದೆ. ಆಗಾಗ ದೇಹದ ಈ ಹಿಂಭಾಗವನ್ನು ಸ್ಪರ್ಶಿಸುವುದರಿಂದ ಕೈಗಳಲ್ಲಿ ಬ್ಯಾಕ್ಟೀರಿಯಾಗಳು ಸೇರಿಕೊಳ್ಳಬಹುದು. ಇದರಿಂದ ಹಲವಾರು ರೀತಿಯ ರೋಗಗಳು ಅಥವಾ ಸೋಂಕು ಉಂಟಾಗುತ್ತವೆ. ನೀವು ಹಿಂಭಾಗವನ್ನು ನೀರಿನಿಂದ ಸ್ವಚ್ಛವಾಗಿ ತೊಳೆದುಕೊಳ್ಳುತ್ತೀರಿ ಎಂದಾಗಲೂ ಈ ಭಾಗ ಬ್ಯಾಕ್ಟೀರಿಯಾಗಳಿಂದ ಸಂಪೂರ್ಣ ಮುಕ್ತವಾಗಲಾರದು. ಹೀಗಾಗಿ ಸುಖಾ ಸುಮ್ಮನೆ ಗುದದ್ವಾರವನ್ನು ಮುಟ್ಟಿಕೊಳ್ಳುವ ಅಭ್ಯಾಸವಿದ್ದರೆ ಅದನ್ನು ಈಗಲೇ ನಿಲ್ಲಿಸಿ ಬಿಡಿ.

ಉಗುರುಗಳ ಕೆಳ ಭಾಗ

ಉಗುರುಗಳ ಕೆಳ ಭಾಗ

ಉಗುರುಗಳ ಕೆಳಭಾಗದ ಚರ್ಮ ಅತಿ ಮೃದುವಾಗಿರುವುದರಿಂದ ಉಗುರು ಸಂದಿಯಲ್ಲಿ ಯಾವುದೇ ಗಾಯಗಳಾಗದಂತೆ ನೋಡಿಕೊಳ್ಳಬೇಕು. ಉಗುರಿನ ಕೆಳಭಾಗದ ಚರ್ಮ ತೆರೆದುಕೊಂಡಲ್ಲಿ ಅನೇಕ ಫಂಗಸ್ ಸೋಂಕು ಕಾಡಬಹುದು. ಜೊತೆಗೆ ಉಗುರಿನ ಸಂದುಗಳಲ್ಲಿ ಬ್ಯಾಕ್ಟೀರಿಯಾಗಳ ಶೇಖರಣೆಯಾಗಿ ಅವು ದೇಹದೊಳಗೆ ಪ್ರವೇಶಿಸಬಹುದು. ಹೀಗಾಗಿ ಉಗುರು ಕೆಳಗಿನ ಚರ್ಮಕ್ಕೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳಬೇಕು.

Most Read: ಮುಟ್ಟಿನ ಸಮಯದಲ್ಲಿ ದಿನಕ್ಕೆಷ್ಟು ಬಾರಿ ನ್ಯಾಪ್‌ಕಿನ್ ಬದಲಾಯಿಸಬೇಕು?

ಕಿವಿಯ ಕಾಲುವೆ

ಕಿವಿಯ ಕಾಲುವೆ

ಆಗಾಗ ಕಿವಿಯಲ್ಲಿ ಬೆರಳು ಹಾಕಿಕೊಳ್ಳುವುದು ಕೆಲವರಿಗೆ ವಿಪರೀತ ಅಭ್ಯಾಸವಾಗಿರುತ್ತದೆ. ಅದರಲ್ಲೂ ಸ್ನಾನದ ನಂತರ ಕಿವಿಗೆ ಬೆರಳು ಹಾಕಿ ಅಲ್ಲಿನ ತೇವಾಂಶ ತೆಗೆಯಲು ಯತ್ನಿಸುತ್ತಾರೆ. ಆದರೆ ಹೀಗೆ ಮಾಡುವುದು ತೀರಾ ಅಪಾಯಕಾರಿಯಾಗಿದೆ. ಕಿವಿಯ ಕಾಲುವೆ ಭಾಗ ತೀರಾ ಕೋಮಲವಾಗಿದ್ದು, ಇದಕ್ಕೆ ಬೇಗನೆ ಗಾಯಗಳಾಗುವ ಸಾಧ್ಯತೆಗಳಿರುತ್ತವೆ. ಕಿವಿಯೊಳಗೆ ಬೆರಳು ತೂರಿಸುವುದರಿಂದ ಕೈಬೆರಳಿನಲ್ಲಿರುವ ಬ್ಯಾಕ್ಟೀರಿಯಾ ಹಾಗೂ ಸೋಂಕು ಕಿವಿಯೊಳಗೆ ಹೋಗಿ ಅನಾರೋಗ್ಯ ಸೃಷ್ಟಿಸಬಹುದು. ಆದ್ದರಿಂದ ಮುಂದಿನ ಬಾರಿ ಕಿವಿಯೊಳಗೆ ಬೆರಳು ತೂರಿಸುವ ಮುನ್ನ ಹುಷಾರಾಗಿರಿ.

Most Read: ಮುಟ್ಟಿನ ಸಮಯದಲ್ಲಿ ದಿನಕ್ಕೆಷ್ಟು ಬಾರಿ ನ್ಯಾಪ್‌ಕಿನ್ ಬದಲಾಯಿಸಬೇಕು?

ಬಾಯಿ

ಬಾಯಿ

ಕೆಲಸ ಮಾಡುವ ಕೈಗಳಲ್ಲಿ ಹಲವಾರು ರೀತಿಯ ಬ್ಯಾಕ್ಟೀರಿಯಾಗಳು ಸಂಗ್ರಹವಾಗುವುದು ಸಹಜ. ಹೀಗಾಗಿ ಬಾಯಲ್ಲಿ ಬೆರಳು ಹಾಕುವುದು ಅನಾರೋಗ್ಯವನ್ನು ನಾವಾಗಿಯೇ ಆಹ್ವಾನಿಸಿದಂತಾಗುತ್ತದೆ. ನಿಮ್ಮ ಕೈಗಳು ಸ್ವಚ್ಛವಾಗಿವೆ ಎನಿಸಿದರೂ ಬಾಯಲ್ಲಿ ಬೆರಳು ಹಾಕುವುದು ಸರಿಯಲ್ಲ.

ಮೂಗು

ಮೂಗು

ಮೂಗಿನೊಳಗೆ ಬೆರಳು ಹಾಕದೆ ಮೂಗು ಸ್ವಚ್ಛ ಮಾಡಿಕೊಳ್ಳುವುದು ಹೇಗೆ ಎಂಬ ಪ್ರಶ್ನೆ ನಿಮ್ಮಲ್ಲಿ ಉದ್ಭವಿಸಬಹುದು. ಮೂಗಲ್ಲಿ ಬೆರಳಾಡಿಸದೆಯೂ ಮೂಗು ಸ್ವಚ್ಛ ಮಾಡಿಕೊಳ್ಳಬಹುದು. ಕೀಟಾಣು ರಹಿತವಾದ ಬಟ್ಟೆಯಿಂದ ಮೂಗಿನ ಹೊಳ್ಳೆಗಳನ್ನು ಕ್ಲೀನ್ ಮಾಡುವುದು ಸರಿಯಾದ ಕ್ರಮವಾಗಿದೆ. ಆಗಾಗ ಮೂಗಿನಲ್ಲಿ ಬೆರಳಾಡಿಸುವವರು ಪದೆ ಪದೆ ಅನಾರೋಗ್ಯಕ್ಕೀಡಾಗುತ್ತಾರೆ ಎಂಬುದು ವೈಜ್ಞಾನಿಕವಾಗಿ ದೃಢಪಟ್ಟಿದೆ. ನೀವೂ ಆಗಾಗ ಮೂಗಿನಲ್ಲಿ ಬೆರಳಾಡಿಸುವವರಾಗಿದ್ದರೆ ಈ ಕೆಟ್ಟ ಅಭ್ಯಾಸ ಬಿಟ್ಟು ಬಿಡಿ.

English summary

Doctors say you should NEVER touch these 7 body parts!

Self-touch is more important than any other being touching you. To understand your own body is necessary and should not be shied away from. However, there are certain body parts which require attention but certainly not with your hands.
X
Desktop Bottom Promotion