For Quick Alerts
ALLOW NOTIFICATIONS  
For Daily Alerts

  ದಿನನಿತ್ಯ 'ಸೆಕ್ಸ್' ಮಾಡಿದರೆ ಆರೋಗ್ಯಕ್ಕೆ ಸಾಕಷ್ಟು ಲಾಭಗಳಿವೆಯಂತೆ

  By Hemanth
  |

  ಮಾನವನ ಹುಟ್ಟಿನಿಂದ ಹಿಡಿದು ಸಾವಿನ ತನಕ ಹಲವಾರು ಸಂಬಂಧಗಳು ಆತನನ್ನು ಬೆಸೆದುಕೊಳ್ಳುವುದು. ಇದರಲ್ಲಿ ಪ್ರಮುಖವಾಗಿ ಪತಿ ಹಾಗೂ ಪತ್ನಿಯ ಸಂಬಂಧವು ತುಂಬಾ ದೀರ್ಘಕಾಲವಾಗಿ ಉಳಿಯುವಂತದ್ದಾಗಿದೆ. ಸಂಬಂಧವೆಂದರೆ ಅಲ್ಲಿ ನಂಬಿಕೆ, ಸಮಾನ ಆಸಕ್ತಿ, ಭದ್ರತೆ ಇತ್ಯಾದಿಗಳೊಂದಿಗೆ ಲೈಂಗಿಕವಾಗಿ ಪರಸ್ಪರ ತಿಳಿದುಕೊಂಡಿರುವುದು ಕೂಡ ಅತಿ ಅಗತ್ಯವಾಗಿರುವುದು.

  ಈ ಸಂಬಂಧದಲ್ಲಿ ಪ್ರತಿಯೊಬ್ಬರು ಕೂಡ ಒಳ್ಳೆಯ ಲೈಂಗಿಕ ಜೀವನ ಹಾಗೂ ಪರಸ್ಪರರು ಲೈಂಗಿಕವಾಗಿ ಒಬ್ಬರನೊಬ್ಬರು ತಿಳಿದುಕೊಂಡಿರಬೇಕೆಂದು ಬಯಸಿರುವರು. ಸಂಬಂಧ ಮುಂದುವರಿಯಲು ಇದು ಅತೀ ಅಗತ್ಯ ಕೂಡ. ಮನುಷ್ಯನಿಗೆ ಹಸಿವು, ಬಾಯಾರಿಕೆ ಮತ್ತು ಇತರ ಕೆಲವು ಬಯಕೆಗಳು ಆಗುವಂತೆ ಲೈಂಗಿಕ ಆಕಾಂಕ್ಷೆ ಕೂಡ ಒಂದು. ಇದು ಪ್ರಕೃತಿದತ್ತವಾದದ್ದು.

  ಲೈಂಗಿಕ ಕ್ರಿಯೆಯಿಂದ ಮನುಷ್ಯ ಕೂಡ ತನಗೆ ಬೇಕಿರುವಂತಹ ಸುಖ ಪಡೆದುಕೊಳ್ಳುತ್ತಾನೆ. ಮಾತ್ರವಲ್ಲದೆ ಇದರೊಂದಿಗೆ ಆತ ತನ್ನ ಸಂತಾನೋತ್ಪತ್ತಿಯಲ್ಲಿ ತೊಡಗುವನು. ಲೈಂಗಿಕ ಕ್ರಿಯೆಯು ತುಂಬಾ ಸಂತೋಷಕರ, ಆನಂದ ಮತ್ತು ಬಲನೀಡುವಂತದ್ದಾಗಿದೆ. ಲೈಂಗಿಕ ಕ್ರಿಯೆಯಿಂದ ಯಾವೆಲ್ಲಾ ಆರೋಗ್ಯ ಲಾಭಗಳು ಇವೆ ಎಂದು ತಿಳಿದುಕೊಳ್ಳುವ....

  ಕೋಶಗಳಿಗೆ ವಯಸ್ಸಾಗುವ ಪ್ರಕ್ರಿಯೆ

  ಕೋಶಗಳಿಗೆ ವಯಸ್ಸಾಗುವ ಪ್ರಕ್ರಿಯೆ

  ನಮಗೆ ವಯಸ್ಸಾಗುತ್ತಾ ಹೋದಂತೆ ಕೂದಲು ಬಿಳಿಯಾಗುವುದು, ನೆರಿಗೆ, ಚರ್ಮದಲ್ಲಿ ಗೆರೆಗಳು, ಚರ್ಮ ಜೋತು ಬೀಳುವುದು, ವಯಸ್ಸಿಗೆ ಸಂಬಂಧಿಸಿದ ಗಂಟು ನೋವು, ಮಧುಮೇಹ, ಸಂಧಿವಾತ ಇತ್ಯಾದಿಗಳು ಕಾಣಿಸಿಕೊಳ್ಳುವುದು. ನಿಜವೆಂದರೆ ವಯಸ್ಸಾಗುತ್ತಾ ಸಾಗಿದಂತೆ ದೇಹದ ಕೋಶಗಳು ಕ್ಷೀಣಗೊಳ್ಳುವುದು.30ರ ಹರೆಯದಲ್ಲಿ ಕೆಲವು ಕೂದಲು ಬಿಳಿಯಾಗಿರುವುದನ್ನು ನೀವು ಗಮನಿಸಿರಬಹುದು. ಅದೇ 40ರ ಹರೆಯದಲ್ಲಿ ಮತ್ತಷ್ಟು ಕೂದಲು ಬಿಳಿಯಾಗುವುದು. ಇದರಿಂದ ಒಂದು ವಯಸ್ಸಿನ ಬಳಿಕ ಕೋಶಗಳು ಕ್ಷೀಣಗೊಳ್ಳುವುದು ತುಂಬಾ ವೇಗವಾಗುವುದು. ಕೆಲವರಲ್ಲಿ ಅನಾರೋಗ್ಯಕರ ಜೀವನಶೈಲಿ, ಒತ್ತಡ, ವ್ಯಾಯಾಮದ ಕೊರತೆಯಿಂದಾಗಿ ಅಕಾಲಿಕವಾಗಿ ಕೋಶಗಳು ಕ್ಷೀಣಗೊಳ್ಳಲು ಆರಂಭವಾಗುವುದು. ಇಂತಹ ಸಂದರ್ಭದಲ್ಲಿ ಸಣ್ಣ ವಯಸ್ಸಿನಲ್ಲೇ ವಯಸ್ಸಾಗುವ ಲಕ್ಷಣಗಳು ಕಂಡುಬರುವುದು. ಭೂಮಿ ಮೇಲಿರುವ ಪ್ರತಿಯೊಬ್ಬರಿಗೂ ತನಗೆ ವಯಸ್ಸಾಗುತ್ತಿದೆ ಎಂದು ಹೇಳಿಕೊಳ್ಳಲು ಇಷ್ಟವಿಲ್ಲ. ದೀರ್ಘಕಾಲದ ತನಕ ಆರೋಗ್ಯಕರ ಹಾಗೂ ಬಲಿಷ್ಠವಾಗಿರಲು ಬಯಸುತ್ತೇವೆ. ಹೀಗೆ ಮಾಡಬೇಕಾದರೆ ಕೋಶಗಳು ಬೇಗನೆ ಕ್ಷೀಣಿಸದಂತೆ ನಾವು ನೋಡಿಕೊಳ್ಳಬೇಕು. ಆರೋಗ್ಯಕರ ಜೀವನ ಶೈಲಿಯೊಂದಿಗೆ ನಿಯಮಿತವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡರೆ ಅದರಿಂದ ಕೋಶಗಳು ಕ್ಷೀಣಗೊಳ್ಳುವುದನ್ನು ತಡೆಯಬಹುದು.

  ಕೋಶಗಳು ಕ್ಷೀಣಗೊಳ್ಳದಂತೆ ನಿಯಮಿತ ಲೈಂಗಿಕ ಕ್ರಿಯೆ ಹೇಗೆ ತಡೆಯುವುದು?

  ಕೋಶಗಳು ಕ್ಷೀಣಗೊಳ್ಳದಂತೆ ನಿಯಮಿತ ಲೈಂಗಿಕ ಕ್ರಿಯೆ ಹೇಗೆ ತಡೆಯುವುದು?

  ನಾವು ಈಗಾಗಲೇ ಓದಿರುವಂತೆ ಲೈಂಗಿಕಕ್ರಿಯೆಯಿಂದಾಗಿ ನಮಗೆ ಸುಖ ಪ್ರಾಪ್ತಿಯಾಗುವುದು. ಈ ವೇಳೆ ದೇಹದಲ್ಲಿ ಎಂಡ್ರೊಪಿನ್ಸ್ ಮತ್ತು ಸೆರೊಟೊನಿನ್ಸ್ ಎನ್ನುವ ಹಾರ್ಮೋನುಗಳು ಬಿಡುಗಡೆಯಾಗುವುದು. ಎಂಡ್ರೊಪಿನ್ಸ್ ಮತ್ತು ಸೆರೊಟೊನಿನ್ಸ್ ಕೋಶಗಳು ಕ್ಷೀಣಗೊಳ್ಳುವುದನ್ನು ತಡೆಯುವಂತಹ ಗುಣ ಹೊಂದಿದೆ. ಇದರಿಂದ ವಯಸ್ಸಾಗುವ ಲಕ್ಷಣ ತಡೆಯಬಹುದು.

  ಕೋಶಗಳು ಕ್ಷೀಣಗೊಳ್ಳದಂತೆ ನಿಯಮಿತ ಲೈಂಗಿಕ ಕ್ರಿಯೆ ಹೇಗೆ ತಡೆಯುವುದು?

  ಕೋಶಗಳು ಕ್ಷೀಣಗೊಳ್ಳದಂತೆ ನಿಯಮಿತ ಲೈಂಗಿಕ ಕ್ರಿಯೆ ಹೇಗೆ ತಡೆಯುವುದು?

  ವ್ಯಾಯಾಮ ಮತ್ತು ವ್ಯಕ್ತಿಗೆ ತುಂಬಾ ಖುಷಿಯಾದಾಗ ಇದೇ ರೀತಿಯ ಹಾರ್ಮೋನುಗಳು ಬಿಡುಗಡೆಯಾಗುವುದು. ಕ್ಯಾಲಿಫೋರ್ನಿಯಾದ ವಿಶ್ವವಿದ್ಯಾನಿಲಯವೊಂದು ಸುಮಾರು 129 ಮಂದಿ ಮಹಿಳೆಯರ ಮೇಲೆ ನಡೆಸಿ ಸಮೀಕ್ಷೆಯ ಪ್ರಕಾರ ನಿಯಮಿತ ಲೈಂಗಿಕ ಕ್ರಿಯೆಯಿಂದ ಆಯುಷ್ಯ ಹೆಚ್ಚುವುದು ಮತ್ತು ಜೀವನ ದೀರ್ಘವಾಗುವುದು.

  ಈ ಅಧ್ಯಯನದ ಪ್ರಕಾರ ನಿಯಮಿತ ಲೈಂಗಿಕ ಕ್ರಿಯೆಯಿಂದ ಟೆಲೊಮೆರೆಸ್(ಇದು ಮನುಷ್ಯನ ಡಿಎನ್ ಎ ಯಲ್ಲಿ ರಕ್ಷಣಾ ಕವಚವಾಗಿ ಕೆಲಸ ಮಾಡುವುದು ಮತ್ತು ವಯಸ್ಸು ಮತ್ತು ಜೀವನದ ಅವಧಿಗೆ ಕಾರಣವಾಗುವುದು)ನ ಉದ್ದ ಕಾಪಾಡುವುದು. ಇದರಿಂದ ಅಕಾಲಿಕವಾಗಿ ವಯಸ್ಸಾಗುವುದನ್ನು ತಡೆದು, ದೀರ್ಘಾವಧಿ ಜೀವನ ನೀಡುವುದು. ವಿವಿಧ ಜೀವನ ಶೈಲಿಯಿಂದಾಗಿ ಟೆಲೊಮೆರ್ ನ ಉದ್ದ ಕಡಿಮೆಯಾಗುವುದು. ಇದರಿಂದ ನಿಯಮಿತ ಲೈಂಗಿಕ ಕ್ರಿಯೆಯು ಇದರ ಉದ್ದ ಹೆಚ್ಚಿಸುವುದು. ನಿಯಮಿತ ಲೈಂಗಿಕ ಕ್ರಿಯೆಯಿಂದಾಗಿ ಸಿಗುವ ಲಾಭಗಳು ಇದೆ. ನಿಮ್ಮನ್ನು ದೀರ್ಘಕಾಲದ ತನಕ ಆರೋಗ್ಯವಾಗಿ ಹಾಗೂ ಯುವಕರಂತೆ ಇಡುವುದು. ತಜ್ಞರ ಪ್ರಕಾರ ವಾರದಲ್ಲಿ 2-4 ಸಲ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡರೆ ಇಂತಹ ಆರೋಗ್ಯ ಲಾಭಗಳು ಸಿಗುವುದು.

  ಹೃದಯದ ಆರೋಗ್ಯ ಮತ್ತು ರಕ್ತಪರಿಚಲನೆಯನ್ನು ಉತ್ತಮಗೊಳಿಸುತ್ತದೆ

  ಹೃದಯದ ಆರೋಗ್ಯ ಮತ್ತು ರಕ್ತಪರಿಚಲನೆಯನ್ನು ಉತ್ತಮಗೊಳಿಸುತ್ತದೆ

  ಇತ್ತೀಚಿನ ಅಧ್ಯಯನದ ಪ್ರಕಾರ ಕನಿಷ್ಟ ವಾರಕ್ಕೆರಡು ಬಾರಿ ನಡೆಸುವ ಲೈಂಗಿಕ ಕ್ರಿಯೆಯಿಂದ ಪುರುಷರಿಗೆ ಎದುರಾಗುವ ಹೃದಯಸ್ತಂಭನದ ಸಾಧ್ಯತೆ ತಿಂಗಳಿಗೊಮ್ಮೆ ಲೈಂಗಿಕ ಕ್ರಿಯೆ ನಡೆಸುವ ಪುರುಷರಿಗಿಂತಲೂ ಕಡಿಮೆ ಇರುತ್ತದೆ.

  ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

  ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

  ನಿಯಮಿತ ಕಾಮಕೇಳಿಯಿಂದ ದೇಹದಲ್ಲಿ immune-boosting antibody immunoglobulin A (IgA) ಅಥವಾ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕಣಗಳು ಹೆಚ್ಚುತ್ತವೆ ಹಾಗೂ ವೈರಸ್ ಆಧಾರಿತ ಸಾಮಾನ್ಯ ರೋಗಗಳಾದ ಜ್ವರ ಶೀತ ನೆಗಡಿಗಳಿಂದ ರಕ್ಷಿಸಿಕೊಳ್ಳಲು ದೇಹ ಇನ್ನಷ್ಟು ಸಬಲವಾಗುತ್ತದೆ.

  ಮಾನಸಿಕ ಒತ್ತಡ ಕಡಿಮೆಗೊಳಿಸುತ್ತದೆ

  ಮಾನಸಿಕ ಒತ್ತಡ ಕಡಿಮೆಗೊಳಿಸುತ್ತದೆ

  ಕೆಲಸದ ಅಥವಾ ಕೌಟುಂಬಿಕ ಕಾರಣಗಳಿಂದ ಮಾನಸಿಕ ಒತ್ತಡ ಹೆಚ್ಚಿದೆಯೇ? ಇದು ನಿಮ್ಮ ಲೈಂಗಿಕ ಜೀವನಕ್ಕೆಂದೂ ಅಡ್ಡಿಯಾಗಬಾರದು. ನಿಯಮಿತವಾದ ಲೈಂಗಿಕ ಕ್ರಿಯೆಯಿಂದ ಮನೋಭಾವ ಉತ್ತಮಗೊಳ್ಳುವುದು ಮಾತ್ರವಲ್ಲ, ಕೆಲಸ ಹಾಗೂ ಕೌಟುಂಬಿಕ ಒತ್ತಡಗಳನ್ನು ಇನ್ನಷ್ಟು ಸಮರ್ಥವಾಗಿ ನಿಭಾಯಿಸಬಲ್ಲರು ಎಂಬುದನ್ನು ಅಧ್ಯಯನಗಳಿಂದ ತಿಳಿದುಬಂದಿದೆ. ಕಾಮಕೇಳಿಯಲ್ಲಿ ನಿಯಮಿತವಾಗಿ ಒಳಗೊಳ್ಳುವ ವ್ಯಕ್ತಿಗಳು ಜೀವನದಲ್ಲಿ ಹೆಚ್ಚು ಒತ್ತಡರಹಿಹ ಹಾಗೂ ಸುಖಿ ವ್ಯಕ್ತಿಗಳಾಗಿರುತ್ತಾರೆ.

  ತಲೆನೋವನ್ನು ನಿವಾರಿಸುತ್ತದೆ

  ತಲೆನೋವನ್ನು ನಿವಾರಿಸುತ್ತದೆ

  ಒಂದು ವೇಳೆ ನಿಮಗೆ ಸತತವಾಗಿ ತಲೆನೋವು ಕಾಡುತ್ತಿದ್ದರೆ ಇದನ್ನೇ ನೆಪವಾಗಿಸಿ ಲೈಂಗಿಕಕ್ರಿಯೆಗೆ ರಜೆ ಹಾಕುವುದನ್ನು ನಿಲ್ಲಿಸಿ. ಬದಲಿಗೆ ಲೈಂಗಿಕ ಕ್ರಿಯೆಯಲ್ಲಿ ಒಳಗೊಳ್ಳಿ. ಏಕೆಂದರೆ ಕಾಮೋತ್ಕಟತೆಯ ಸಮಯದಲ್ಲಿ ದೇಹದಲ್ಲಿ ಆಕ್ಸಿಟೋಸಿನ್ ಎಂಬ ರಸದೂತ ಸ್ರವಿಸುವ ಪ್ರಮಾಣ ಐದು ಪಟ್ಟು ಹೆಚ್ಚುತ್ತದೆ. ಇದು ಮನೋಭಾವವನ್ನು ಉತ್ತಮಗೊಳಿಸುತ್ತದೆ ಹಾಗೂ ನರಗಳನ್ನು ಸಡಿಲಿಸಿ ಹೆಚ್ಚಿನ ರಕ್ತಸಂಚಾರ ಹರಿಸುವ ಮೂಲಕ ತಲೆನೋವಿನ ಸಹಿತ ಹಲವಾರು ನೋವುಗಳನ್ನು ಕಡಿಮೆ ಮಾಡುತ್ತದೆ.

  ಆಯಸ್ಸು ವೃದ್ಧಿಸುತ್ತದೆ

  ಆಯಸ್ಸು ವೃದ್ಧಿಸುತ್ತದೆ

  ಕಾಮಕೇಳಿಯ ಬಳಿಕ ಪಡೆಯುವ ಭಾವಪರವಶತೆಯ ಸಮಯದಲ್ಲಿ ಡಿಹೈಡ್ರೊಪಿಯಾಂಡ್ರೊಸ್ಟೊರೊನ್ (dehydroepiandrosterone) ಎಂಬ ರಸದೂತ ಬಿಡುಗಡೆಯಾಗುತ್ತದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಘಾಸಿಗೊಂಡ ಅಂಗಾಂಶಗಳನ್ನು ನರಿಪಡಿಸುತ್ತದೆ ಹಾಗೂ ತ್ವಚೆಯನ್ನೂ ಆರೋಗ್ಯಕರವಾಗಿರಿಸುತ್ತದೆ. ವಾರಕ್ಕೆರಡು ಬಾರಿಯಾದರೂ ಭಾವಪರವಶತೆ ಪಡೆದ ಪುರುಷರು ಕೆಲವು ವಾರಗಳಿಗೊಮ್ಮೆ ಮಾತ್ರ ಭಾವಪರವಶತೆ ಪಡೆದ ಪುರುಷರಿಗಿಂತ ಹೆಚ್ಚು ಕಾಲ ಜೀವಿಸುತ್ತಾರೆ.

  ರಕ್ತಪರಿಚಲನೆ ಉತ್ತಮಗೊಳಿಸುತ್ತದೆ

  ರಕ್ತಪರಿಚಲನೆ ಉತ್ತಮಗೊಳಿಸುತ್ತದೆ

  ಕಾಮಕೇಳಿಯ ಸಮಯದಲ್ಲಿ ಹೃದಯದ ಬಡಿತ ಹೆಚ್ಚುತ್ತದೆ ಹಾಗೂ ಮೆದುಳು ಮತ್ತು ಜನನಾಂಗಗಳಿಗೆ ತಲುಪುವ ರಕ್ತದ ಪ್ರಮಾಣವೂ ಹೆಚ್ಚುತ್ತದೆ. ಅಷ್ಟೇ ಅಲ್ಲ, ಹೊಸರಕ್ತ ದೇಹದ ಎಲ್ಲಾ ಜೀವಕೋಶಗಳಿಗೆ ತಲುಪುತ್ತದೆ. ತನ್ಮೂಲಕ ಹಳೆಯ ರಕ್ತ ಹಿಂದಿರುಗಿ ಕಲ್ಮಶಗಳನ್ನು ಕಳೆದುಕೊಳ್ಳುತ್ತದೆ. ಪರಿಣಾಮವಾಗಿ ಕಲ್ಮಶಗಳು ದೇಹದಿಂದ ನಿವಾರಣೆಯಾಗುತ್ತದೆ. ಈ ಕಲ್ಮಶಗಳ ಹೊರೆಯಿಂದ ದೇಹ ಅನಗತ್ಯವಾಗಿ ಸುಸ್ತು ಅನುಭವಿಸುತ್ತಿರುತ್ತದೆ. ಈಗ ಈ ಕಲ್ಮಶಗಳು ನಿವಾರಣೆಯಾಗಿರುವ ಕಾರಣ ದೇಹ ಹಾಗೂ ಮನಸ್ಸು ಉಲ್ಲಸಿತವಾಗಿರುತ್ತದೆ.

  ಒಟ್ಟಾರೆ ದೇಹದಾರ್ಢ್ಯತೆಯನ್ನು ಉತ್ತಮಗೊಳಿಸುತ್ತದೆ

  ಒಟ್ಟಾರೆ ದೇಹದಾರ್ಢ್ಯತೆಯನ್ನು ಉತ್ತಮಗೊಳಿಸುತ್ತದೆ

  ದೇಹ ದಾರ್ಢ್ಯತೆಯನ್ನು ಉತ್ತಮವಾಗಿರಿಸಲು ಕಠಿಣ ವ್ಯಾಯಾಮ ಅಥವಾ ಮನೆಯ ಕೆಲಸಗಳನ್ನು ಅಗತ್ಯಕ್ಕೂ ಹೆಚ್ಚಾಗಿ ಮಾಡುವ ಶ್ರಮ ವಹಿಸಬೇಕಾಗಿಲ್ಲ. ಬದಲಿಗೆ ಈ ವ್ಯಾಯಾಮ, ಕೆಲಸಗಳನ್ನು ಅಗತ್ಯಕ್ಕೆ ತಕ್ಕಷ್ಟು ಮಾತ್ರವೇ ಇರಿಸಿ ನಿಯಮಿತವಾಗಿ ಲೈಂಗಿಕ ಜೀವನವನ್ನು ಅನುಭವಿಸಿದರೂ ಆರೋಗ್ಯದ ಜೊತೆಗೇ ದೇಹದಾರ್ಢ್ಯತೆಯೂ ಉತ್ತಮವಾಗಿರುತ್ತದೆ. ನಿಯಮಿತವಾದ ಲೈಂಗಿಕ ಜೀವನ ಸೊಂಟದ ಸುತ್ತಳತೆಯನ್ನು ಕಡಿಮೆ ಮಾಡಲು ಅದ್ಭುತಗಳನ್ನೇ ಸಾಧಿಸಬಲ್ಲುದು. ಸುಮಾರು ಅರ್ಧ ಘಂಟೆಯ ಲೈಂಗಿಕ ಕ್ರೀಡೆ ಸುಮಾರು ಎಂಭತ್ತಕ್ಕೂ ಹೆಚ್ಚು ಕ್ಯಾಲೋರಿಗಳನ್ನು ದಹಿಸಬಲ್ಲುದು.

  English summary

  Did You Know About This Benefit Of Having Sex?

  When someone asks you to describe the perfect relationship, along with things like trust, common interests, security, etc., a great sexual chemistry with your partner also comes to your mind, right? Well, wanting to have good sex and amazing sexual chemistry is definitely not wrong, in fact it is a healthy need that must exist between each couple.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more