For Quick Alerts
ALLOW NOTIFICATIONS  
For Daily Alerts

ಸ್ಟ್ರಾಬೆರಿಯ ಈ ಆಶ್ಚರ್ಯಕಾರಿ ಲಾಭಗಳ ಬಗ್ಗೆ ನಿಮಗೆ ತಿಳಿದಿದೆಯಾ?

By Sushma Charhra
|

ಸ್ಟ್ರಾಬೆರಿಯನ್ನು ಎಲ್ಲರೂ ಪ್ರೀತಿಸುತ್ತಾರೆ. ಯುವಕರು ಮಕ್ಕಳಿಂದ ಹಿಡಿದು ವೃದ್ಧರ ವರೆಗೂ ಅದರ ರುಚಿ ಎಲ್ಲರಿಗೂ ಹಿಡಿಸುತ್ತದೆ. ವಿಶ್ವದಾದ್ಯಂತ ಬೆರ್ರೀಗಳಲ್ಲೇ ಅತ್ಯಂತ ಪ್ರಸಿದ್ಧಿ ಎಂದರೆ ಸ್ಟ್ರಾಬೆರ್ರಿಗಳು. ಕೇವಲ ರುಚಿಯಿಂದ ಮಾತ್ರವಲ್ಲ, ಆದರೆ ಅದರ ಹಲವಾರು ಆರೋಗ್ಯ ಲಾಭಗಳ ಕಾರಣದಿಂದಲೂ ಕೂಡ ವಿಶ್ವದಾದ್ಯಂತ ಅನೇಕರು ಬೇರೆಬೇರೆ ಪ್ರದೇಶಗಳಲ್ಲಿ ಬಳಕೆ ಮಾಡಲಾಗುತ್ತೆ. ಅದರ ಕೆಂಪು ಬಣ್ಣ ಮತ್ತು ಘಮ್ಮೆನ್ನುವ ಪರಿಮಳದಿಂದಾಗಿ ಸ್ಟ್ರಾಬೆರಿ ಎಲ್ಲರನ್ನೂ ಸೆಳೆಯುತ್ತದೆ. ಸಿಹಿಯಾಗಿ ಮತ್ತು ಜ್ಯೂಸಿಯಾಗಿರುವ ಈ ಹಣ್ಣು ತಿನ್ನಲು ನಿಜಕ್ಕೂ ಬಹಳ ರುಚಿಕರ.

ಜ್ಯೂಸ್ ಗಳ ತಯಾರಿಕೆಯಲ್ಲಿ ಸ್ಟ್ರಾಬೆರಿಗಳು ಒಂದು ಪ್ರಮುಖ ಪದಾರ್ಥವಾಗಿದೆ. ಐಸ್ ಕ್ರೀಮ್ ಗಳು, ಚಾಕಲೇಟ್ ಗಳು, ಮಿಲ್ಕ್ ಶೇಕ್, ಮತ್ತು ಇತರೆ ಹಲವು ಆಹಾರ ಪದಾರ್ಥಗಳಲ್ಲಿ ಇದರ ಬಳಕೆ ಇದೆ. ಇದು ಉತ್ತಮ ಅಮೇರಿಕಾದ ಪ್ರಾದೇಶಿಕ ಹಣ್ಣು. ಸ್ಟ್ರಾಬೆರಿಗಳಲ್ಲಿ ಅತ್ಯಂತ ಹೆಚ್ಚು ಪೋಷಕಾಂಶಗಳಿವೆ. ಹಾಗಾದರೆ ಅವುಗಳ ಪ್ರಮುಖ ಆರೋಗ್ಯ ಲಾಭಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

strawberry

ಸ್ಟ್ರಾಬೆರಿಯ ಆರೋಗ್ಯ ಲಾಭಗಳು :

ಈ ಬೆರ್ರಿಗಳು ಪಾಲಿಫಿನಾಲ್ಸ್ ಮತ್ತು ಆಂಟಿ ಆಕ್ಸಿಡೆಂಟ್ ಗಳಿಂದ ಸಮೃದ್ಧವಾಗಿರುತ್ತದೆ. ಇವುಗಳು ಹೃದಯದ ಆರೋಗ್ಯಕ್ಕೆ ಬಹಳವಾಗಿ ಸಹಕರಿಸುತ್ತದೆ. ಕ್ಯಾನ್ಸರ್ ನ ಹಲವು ವಿಧಗಳನ್ನು ತಡೆಯುವುದಕ್ಕೆ ಇದು ನೆರವಾಗುತ್ತದೆ. ಇನ್ನು ಈ ಬೆರ್ರಿಗಳಲ್ಲಿ ವಿಟಮಿನ್ ಸಿ ಅಂಶವಿರುತ್ತದೆ ಇದು ಕೂದಲಿನ ಆರೋಗ್ಯಕ್ಕೆ ಬಹಳ ಒಳ್ಳೆಯದು ಜೊತೆಗೆ ಚರ್ಮದ ಆರೋಗ್ಯವನ್ನು ಹೆಚ್ಚಿಸುತ್ತದೆ.ಇದರಲ್ಲಿ ಲಭ್ಯವಿರುವ ಫೈಬರ್ ಅಂಶಗಳು ಜೀರ್ಣಕ್ರಿಯೆಯಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಮತ್ತು ತೂಕ ಇಳಿಸಿಕೊಳ್ಳುವುದಕ್ಕೆ ನೆರವಾಗುತ್ತದೆ.

1. ಹೃದಯವನ್ನು ಕಾಪಾಡುತ್ತೆ
2. ರಕ್ತದ ಸಕ್ಕರೆಯ ಮಟ್ಟದ ನಿಯಂತ್ರಣ
3. ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ
4. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
5. ರಕ್ತದ ಒತ್ತಡವನ್ನು ನಿಯಂತ್ರಿಸುತ್ತದೆ
6. ಮೆದುಳಿನ ಆರೋಗ್ಯವನ್ನು ವೃದ್ಧಿಸುತ್ತದೆ
7. ಉರಿಯೂತದ ನಿಯಂತ್ರಣಕ್ಕೆ ಸಹಕಾರಿ
8. ಕೊಲೆಸ್ಟ್ರಾಲ್ ವಿರುದ್ಧ ಹೋರಾಡುತ್ತದೆ
9. ಕಣ್ಣಿನ ಆರೋಗ್ಯವನ್ನು ಹೆಚ್ಚಿಸುತ್ತೆ
10. ತೂಕ ಇಳಿಸುತ್ತೆ
11. ಮಲಬದ್ಧತೆಯ ನಿವಾರಣೆ
12. ಆರೋಗ್ಯಕಾರಿ ಹಲ್ಲುಗಳು
13. ಚರ್ಮದ ಆರೋಗ್ಯ ಕಾಪಾಡಲು ಸಹಕಾರಿ
14. ಕೂದಲು ಉದುರುವಿಕೆಯನ್ನು ತಡೆಯುತ್ತೆ

1. ಹೃದಯವನ್ನು ಕಾಪಾಡುತ್ತದೆ

ಸ್ಟ್ರಾಬೆರಿಯಲ್ಲಿ ಲಭ್ಯವಿರುವ ಆಂಟಿ ಆಕ್ಸಿಡೆಂಟ್ ಮತ್ತು ಪಾಲಿಫಿನಾಲ್ ಗಳಿಂದಾಗಿ ಹೃದಯ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗಿದೆ. ರಕ್ತಪರಿಚಲನಾ ವ್ಯವಸ್ಥೆಯ ಒಳಪದರವು ಈ ಹಣ್ಣುಗಳಲ್ಲಿ ಕಂಡುಬರುವ ಆಂಥೋಸಯಾನಿನ್ಗಳಿಂದ ರಕ್ಷಿಸಲ್ಪಟ್ಟಿದೆ. ಫಲಕವನ್ನು ನಿರ್ಮಿಸುವ ಅಪಧಮನಿಗಳು ಇವುಗಳನ್ನು ರಕ್ಷಿಸುತ್ತವೆ. ಇದು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.

2. ರಕ್ತದ ಸಕ್ಕರೆ ಮಟ್ಟದ ನಿಯಂತ್ರಣ

ಸ್ಟ್ರಾಬೆರಿಗಳಲ್ಲಿ ಇಲಾಜಿಕ್ ಆಮ್ಲದ ಇರುವಿಕೆಯಿಂದ ಪಿಷ್ಟದ ಆಹಾರದ ಜೀರ್ಣಗೊಳಿಸುವಿಕೆಯು ನಿಧಾನಗೊಳ್ಳುತ್ತದೆ.ಇದು ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಡಲು ನೆರವಾಗುತ್ತದೆ.

ಸ್ಟ್ರಾಬೆರಿಯಲ್ಲಿ ಲೋ ಗ್ಲಿಸಮಿಕ್ ಇಂಡೆಕ್ಸ್ ಇರುವುದರಿಂದಾಗಿ ಮಧುಮೇಹ ಸಮಸ್ಯೆಯಲ್ಲಿರುವವರು ಸ್ಟ್ರಾಬೆರಿ ಸೇವನೆ ಮಾಡುವುದರಿಂದಾಗಿ ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಡಲು ಸಹಕಾರಿಯಾಗಿದೆ.

3. ಕ್ಯಾನ್ಸರ್ ತಡೆಗಟ್ಟುತ್ತೆ

ಸ್ಟ್ರಾಬೆರಿಗಳು ವಿಟಮಿನ್ ಸಿ ಮತ್ತು ಫೈಬರ್ ಅಂಶಗಳ ಒಂದು ಉತ್ತಮ ಹಣ್ಣಾಗಿದ್ದು ಇದನ್ನು ಸೇವಿಸುವುದರಿಂದಾಗಿ ಕೋಲೋನ್ ಮತ್ತು ಅನ್ನನಾಳದ ಕ್ಯಾನ್ಸರ್ ತಡೆಯಲು ಸಾಧ್ಯವಿದೆ ಎಂದು ಹೇಳಲಾಗುತ್ತದೆ. ಈ ವೈಶಿಷ್ಟ್ಯವು ಸ್ಟ್ರಾಬೆರಿಯಲ್ಲಿರುವ ಇಲಾಜಿಕ್ ಆಮ್ಲಗಳಿಂದಲೂ ಕೂಡ ನಡೆಯುತ್ತದೆ.ಇಲಾಜಿಕ್ ಆಸಿಡ್ ಒಂದು ಫೈಟೋ ಕೆಮಿಕಲ್ ಆಗಿದ್ದು ಸ್ತನ, ಶ್ವಾಸಕೋಶ, ಮೂತ್ರಕೋಶ ಮತ್ತು ಚರ್ಮದ ಕ್ಯಾನ್ಸರ್ ತಡೆಯುವಲ್ಲಿ ಸಹಕಾರಿಯಾಗಿದೆ. ಇಲಾಜಿಕ್ ಆಸಿಡ್ ಆಂಟಿ ಆಕ್ಸಿಡೆಂಟ್ ರೀತಿಯಲ್ಲಿ ವರ್ತಿಸುತ್ತಾ ಕ್ಯಾನ್ಸರ್ ಕಾರಕ ಜೀವಕೋಶಗಳ ಹುಟ್ಟುವಿಕೆಯನ್ನು ನಿಧಾನಗೊಳಿಸುತ್ತದೆ.

4. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ವಿಟಮಿನ್ ಸಿ ಅಂಶಗಳು ಇದರಲ್ಲಿ ಹೇರಳವಾಗಿ ಲಭ್ಯವಿರುವುದರಿಂದಾಗಿ ಇದು ದೇಹದಲ್ಲಿನ ರೋಗನ ನಿರೋಧಕ ಶಕ್ತಿಯನ್ನು ವರ್ಧಿಸಲು ಸಹಕಾರಿಯಾಗಿದೆ. ಇದು ಸೋಂಕುಗಳ ವಿರುದ್ಧ ಹೋರಾಡಲು ನಿಮ್ಮ ದೇಹವನ್ನು ಸಮರ್ಥವಾಗುವಂತೆ ಮಾಡುತ್ತದೆ. ಸ್ಟ್ರಾಬೆರಿಗಳು ಅಲರ್ಜಿ ಮತ್ತು ಅಸ್ತಮಾಗಳ ವಿರುದ್ಧ ಸೆಣಸಾಡಲು ಬಹಳ ಸಹಕಾರಿ.

5. ರಕ್ತದ ಒತ್ತಡವನ್ನು ನಿಯಂತ್ರಿಸುತ್ತದೆ

ಆಂಥೋಸೈಯಾನಿನ್ಸ್ ಗಳು ಸ್ಟ್ರಾಬೆರಿಯಲ್ಲಿದ್ದು ಇವುಗಳು ರಕ್ತನಾಳಗಳ ಲೈನಿಂಗ್ ಗೆ ಮತ್ತು ಅವುಗಳ ತೆರೆಯಲು ಸಹಕಾರಿಯಾಗಿದೆ. ಆ ಮೂಲಕ ರಕ್ತದ ಒತ್ತಡವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪೊಟಾಶಿಯಂ ಅಂಶಗಳು ಇದರಲ್ಲ ಶ್ರೀಮಂತವಾಗಿರುವುದರಿಂದಾಗಿ ಸ್ಟ್ರಾಬೆರಿಗಳು ರಕ್ತದ ಒತ್ತಡವನ್ನು ನಿಯಂತ್ರಿಸುತ್ತದೆ.

6. ಮೆದುಳಿನ ಆರೋಗ್ಯವನ್ನು ವೃದ್ಧಿಸುತ್ತದೆ

ಆಂಟಿ ಆಕ್ಸಿಡೆಂಟ್ ಗಳು ಸ್ಟ್ರಾಬೆರಿಯಲ್ಲಿ ಹೇರಳವಾಗಿ ಇರುವುದರಿಂದಾಗಿ ಫ್ರೀ ರ್ಯಾಡಿಕಲ್ ಗಳ ಸಮಸ್ಯೆಯಿಂದ ಮೆದುಳಿನ ಜೀವಕೋಶಗಳಿಗೆ ಹಾನಿಯಾಗುವುದನ್ನು ಇದು ತಡೆಯುತ್ತದೆ. ನ್ಯೂಟ್ರಾನ್ ಕಮ್ಯುನಿಕೇಷನ್ ಕೂಡ ಮೆದುಳಿನಲ್ಲಿ ಬದಲಾಗುತ್ತದೆ ಮತ್ತು ಮೆದುಳಿನ ಆರೋಗ್ಯ ಹೆಚ್ಚು ಮಾಡಲು ಸ್ಟ್ರಾಬೆರಿಯ ಅಂಶಗಳು ಸಹಕರಿಸುತ್ತದೆ.

7. ಉರಿಯೂತ ನಿಯಂತ್ರಣಕ್ಕೆ ಸಹಕಾರಿ

ಸ್ಟ್ರಾಬೆರಿಗಳು ಕ್ವೆರ್ಸೆಟಿನ್ ಅನ್ನು ಹೊಂದಿರುತ್ತದೆ. ಸ್ಟ್ರಾಬೆರಿ ಸೇವಿಸುವುದರ ಜೊತೆಗೆ ಪ್ರತಿದಿನ ವ್ಯಾಮಾಮ ಮಾಡುವುದರಿಂದಾಗಿ ಅಪಧಮನಿ ಕಾಠಿಣ್ಯದ ಫ್ಲೇಕ್ ಗಳ ರಚನೆಯನ್ನು ಕಡಿಮೆ ಮಾಡಬಹುದು.ಸ್ಟ್ರಾಬೆರಿಯಲ್ಲಿರುವ ವಿಟಮಿನ್ ಸಿ ಅಂಶದ ಪರಿಣಾಮದಿಂದಾಗಿ ಉರಿಯೂತ ಸಮಸ್ಯೆಯನ್ನು ನಿಯಂತ್ರಿಸಬಹುದು.

8. ಕೊಲೆಸ್ಟ್ರಾಲ್ ವಿರುದ್ಧ ಹೋರಾಡುತ್ತದೆ

ಸ್ಟ್ರಾಬೆರಿಯಲ್ಲಿ ಪೆಕ್ಟಿನ್ ಅಂಶಗಳಿದೆ. ಇದು ಒಂದು ರೀತಿಯ ಕರಗುವ ಫೈಬರ್ ಆಗಿದ್ದು ದೇಹದ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.

9. ಕಣ್ಣಿನ ಆರೋಗ್ಯ ಹೆಚ್ಚಿಸುತ್ತದೆ

ಸ್ಟ್ರಾಬೆರಿಯಲ್ಲಿ ಆಂಟಿ ಆಕ್ಸಿಡೆಂಟ್ ಗಳು ಹೇರಳವಾಗಿದೆ ಮತ್ತು ಅವುಗಳು ಕಣ್ಣಿನ ಪೊರೆಯು ಆಗದಂತೆ ನೋಡಿಕೊಳ್ಳುತ್ತೆ ಮತ್ತು ಮಕ್ಯುಲರ್ ಡಿಜೆನೇಷನ್ ಜೊತೆಗೆ ಇನ್ನಷ್ಟು ಕಣ್ಣಿಗೆ ಸಂಬಂಧಿಸಿದ ಕಾಯಿಲೆಗಳು ಬರದಂತೆ ತಡೆಯುತ್ತದೆ. ವಿಟಮಿನ್ ಸಿ ಅಂಶವು ಸ್ಟ್ರಾಬೆರಿಯಲ್ಲಿ ಇರುವುದರಿಂದಾಗಿ ಇದು ರೆಟಿನಾದ ಜೀವಕೋಶಗಳ ಆರೋಗ್ಯವನ್ನು ಮತ್ತು ಆಯುಷ್ಯವನ್ನು ಹೆಚ್ಚಿಸಿ ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಣೆ ಮಾಡಲು ಸಹಕಾರಿಯಾಗಿದೆ.

10. ತೂಕ ಇಳಿಸುತ್ತೆ

ಆಂಟಿ ಆಕ್ಸಿಡೆಂಟ್ ಗಳು ಮತ್ತು ಇಲಾಜಿಕ್ ಆಮ್ಲಗಳು ಇದರಲ್ಲಿರುವುದರಿಂದಾಗಿ ಇದು ತೂಕ ಇಳಿಸುವಿಕೆ ಪ್ರಕ್ರಿಯೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ತೂಕ ಹೆಚ್ಚಳವಾಗುವಿಕೆಗೆ ಪ್ರಮುಖ ಕಾರಣವೆಂದರೆ ದೀರ್ಘ ಕಾಲದ ಉರಿಯೂತ ಹುಟ್ಟಿಸುವ ಹಾರ್ಮೋಗಳು ನಿರ್ಬಂಧಿಸಲ್ಪಡುವುದೇ ಆಗಿದೆ. ಸ್ಟ್ರಾಬೆರಿಗಳು ಹೀಗೆ ಉರಿಯೂತ ಸೃಷ್ಟಿ ಮಾಡುವ ಹಾರ್ಮೋನುಗಳ ಕಾರ್ಯವನ್ನು ಪುನರ್ ಸ್ಥಾಪಿಸುತ್ತದೆ ಮತ್ತು ಆ ಮೂಲಕ ತೂಕ ಹೆಚ್ಚಳಗೊಳ್ಳುವಿಕೆಯನ್ನು ನಿಯಂತ್ರಿಸುತ್ತದೆ.

11. ಮಲಬದ್ಧತೆಯ ನಿವಾರಣೆ

ಸ್ಟ್ರಾಬೆರಿಯಲ್ಲಿ ಫೈಬರ್ ಅಂಶಗಳು ಅಧಿಕವಾಗಿರುತ್ತದೆ ಮತ್ತು ಮಲಬದ್ಧತೆ ಸಮಸ್ಯೆಯ ನಿವಾರಣೆಗೆ ಇದು ನೆರವಾಗುತ್ತದೆ. ಸ್ಟ್ರಾಬೆರಿ ಹಣ್ಣಿನಲ್ಲಿರುವ ಫೈಬರ್ ಅಂಶದ ಕಾರಣದಿಂದಾಗಿ ಜೀರ್ಣಕ್ರಿಯೆಗೆ ಸಂಬಂಧಿಸಿದ ಇತರೆ ಸಮಸ್ಯೆಗಳಾದ ಗ್ಯಾಸ್ಟ್ರಿಕ್ ಮತ್ತು ಹೊಟ್ಟೆಯಲ್ಲಿ ಗುಳುಗುಳು ಎಂಬಂತಾಗುವ ಸಮಸ್ಯೆಗಳು ಕೂಡ ನಿವಾರಣೆಯಾಗುತ್ತದೆ .

12. ಆರೋಗ್ಯಕಾರಿ ಹಲ್ಲುಗಳು

ಸ್ಟ್ರಾಬೆರಿಯಲ್ಲಿ ಮಾಲಿಕ್ ಆಮ್ಲವಿದೆ.ಇದು ಸಂಕೋಚನಕಾರಕವಾಗಿ ಕಾರ್ಯ ನಿರ್ವಹಿಸುತ್ತದೆ. ಹಾಗಾಗಿ ಹಲ್ಲಿನ ಬಣ್ಣವನ್ನು ತೆಗೆಯುವ ಹಾಳು ಮಾಡುವುದನ್ನು ತಡೆಯುತ್ತದೆ .ಸ್ಟ್ರಾಬೆರಿಗಳನ್ನು ನಿಮ್ಮ ಹಲ್ಲುಗಳನ್ನು ಬಿಳಿಗೊಳಿಸಲು ಬಳಸಬಹುದು. ನೀವು ಸ್ಟ್ರಾಬೆರಿಯನ್ನು ನುಣ್ಣಗೆ ಮಾಡಿಕೊಂಡು ಅದಕ್ಕೆ ಬೇಕಿಂಗ್ ಸೋಡಾ ಹಾಕಿಕೊಳ್ಲಿ, ಮತ್ತು ನಿಮ್ಮ ಹಲ್ಲುಗಳ ಮೇಲೆ ಮೃದುವಾದ ಟೂತ್ ಬ್ರಷ್ ಬಳಸಿ ಅದನ್ನು ಪೇಸ್ಟ್ ರೀತಿಯಲ್ಲಿ ಬಳಕೆ ಮಾಡಿ.ಐದು ನಿಮಿಷ ಹಾಗೆಯೇ ಬಿಡಿ ಮತ್ತು ಸಾಮಾನ್ಯ ಟೂತ್ ಬ್ರಷೇ ನಿಂದ ಬ್ರಷ್ ಮಾಡಿ ಬಾಯಿಯನ್ನು ತೊಳೆದುಕೊಳ್ಳಿ. ಹಲ್ಲುಗಳಲ್ಲಾಗುವ ವ್ಯತ್ಯಾಸವನ್ನು ಗಮನಿಸಿಕೊಳ್ಳಬಹುದು.

13. ಚರ್ಮದ ಆರೋಗ್ಯ ಕಾಪಾಡಲು ಸಹಕಾರಿ

ಚರ್ಮದ ಸತ್ತ ಜೀವಕೋಶಗಳನ್ನು ತೆಗೆಯಲು ಸ್ಟ್ರಾಬೆರಿಯಲ್ಲಿರುವ ಆಲ್ಫಾ-ಹೈಡ್ರಾಕ್ಸಿ ಆಮ್ಲಗಳು ಸಹಕರಿಸುತ್ತದೆ. ಇದು ಚರ್ಮವನ್ನು ಸ್ವಚ್ಛಗೊಳಿಸುವ ಕೆಲಸವನ್ನು ಮಾಡುತ್ತದೆ. ಈ ಹಣ್ಣಿನಿಂದಾಗಿ ಕಿರಿಕಿರಿ ಉಂಟು ಮಾಡುವ ಚರ್ಮದಿಂದ ಮುಕ್ತಿ ಸಿಗುತ್ತದೆ ಮತ್ತು ಚರ್ಮವನ್ನು ಮೃದುಗೊಳಿಸಲು ಸ್ಟ್ರಾಬೆರಿ ಸಹಕರಿಸುತ್ತದೆ. ಅಷ್ಟೇ ಅಲ್ಲ ಸೂರ್ಯನ ನೇರಳಾತೀತ ಕಿರಣಗಳಿಂದ ಚರ್ಮದ ಮೇಲಾಗುವ ದುಷ್ಪರಿಣಾಮಗಳನ್ನು ತಡೆಯಲು ಕೂಡ ಸ್ಟ್ರಾಬೆರಿ ಸಹಕರಿಸುತ್ತದೆ. ಸ್ಟ್ರಾಬೆರಿ ಪೇಸ್ಟನ್ನು ಜೇನುತುಪ್ಪದ ಜೊತೆ ಸೇರಿಸಿ ಪ್ರತಿದಿನ ಫೇಸ್ ಪ್ಯಾಕ್ ಆಗಿ ಬಳಕೆ ಮಾಡುವುದು ಚರ್ಮದ ಆರೋಗ್ಯಕ್ಕೆ ಬಹಳ ಹಿತವಾದುದ್ದಾಗಿದೆ.

14. ಕೂದಲು ಉದುರುವಿಕೆಯನ್ನು ತಡೆಯುತ್ತೆ

ವಿಟಮಿನ್ ಸಿ ಅಂಶಗಳು ಸ್ಟ್ರಾಬೆರಿಯಲ್ಲಿರುವುದರಿಂದಾಗಿ ಇದು ಕಬ್ಬಿಣವನ್ನು ಹೀರಿಕೊಳ್ಳಲು ಪ್ರೊತ್ಸಾಹ ನೀಡುತ್ತದೆ ಮತ್ತು ಕೂದಲಿನ ಆರೋಗ್ಯ ಅಧಿಕವಾಗಲು ನೆರವು ನೀಡುತ್ತದೆ. ಒಂದು ವೇಳೆ ಈ ಪೋಷಕಾಂಶಗಳ ಕೊರತೆ ಕಂಡುಬಂದಲ್ಲಿ ಕೂದಲಿನಲ್ಲಿ ಸ್ಪ್ಲಿಟ್ ಎಂಡ್ಸ್ ಆಗುವ ಸಾಧ್ಯತೆಗಳಿರುತ್ತದೆ. ವಿಟಮಿನ್ ಸಿ ಅಂಶಗಳು ಡ್ಯಾಂಡ್ರಫ್ ಗಳು ಆಗದಂತೆಯೂ ತಡೆಯುತ್ತದೆ. ಸ್ಟ್ರಾಬೆರಿಯಲ್ಲಿ ಸಿಲಿಕಾ ಅಂಶಗಳೂ ಕೂಡ ಇದ್ದು, ಇದು ಬೊಕ್ಕತಲೆ ಆಗದಂತೆ ನೋಡಿಕೊಳ್ಳುತ್ತದೆ. ಸ್ಟ್ರಾಬೆರಿಯ ಪೇಸ್ಟ್, ವರ್ಜಿನ್ ಕೊಬ್ಬರಿ ಎಣ್ಣೆ, ಮತ್ತು ಜೇನುತುಪ್ಪದಿಂದ ತಯಾರಿಸುವ ಹೇರ್ ಮಾಸ್ಕ್ ಬಹಳ ಒಳ್ಳೆಯದು. ಇದನ್ನು ನೇರವಾಗಿ ನಿಮ್ಮ ಸ್ಕ್ಯಾಲ್ಪ್ ಗೆ ಅಪ್ಲೈ ಮಾಡಿಕೊಳ್ಳಬಹುದು. ಆ ಮೂಲಕ ಕೂದಲಿನ ಬೆಳವಣಿಗೆ ಅಧಿಕಗೊಳ್ಳುತ್ತೆ.

ಸ್ಟ್ರಾಬೆರಿಗಳು ತುಂಬಾ ರುಚಿಕರವಾಗಿರುವ ಹಣ್ಣು ಮತ್ತು ಹಲವು ಅಡುಗೆಗಳನ್ನು ಅದನ್ನು ಬಳಸುತ್ತಾರೆ ಮತ್ತು ಹಾಗೆಯೇ ತಿನ್ನಲೂ ಕೂಡ ಬಳಕೆ ಮಾಡಲಾಗುತ್ತದೆ. ಇದು ಎಲ್ಲರೂ ಪ್ರೀತಿಸುವ ಮತ್ತು ಪ್ರತಿಯೊಬ್ಬರಿಗೂ ರುಚಿಸುವ ಹಣ್ಣು. ಯಾವಾಗಲೂ ಈ ಹಣ್ಣುಗಳನ್ನು ಸೇವಿಸುತ್ತಿರಬೇಕು ಎಂಬುದಕ್ಕೆ ಈಗ ನಿಮಗೆ ಕಾರಣಗಳು ಲಭ್ಯವಾಗಿದೆ. ಈ ಸಿಟ್ರಸ್ ಹಣ್ಣು ನಿಜಕ್ಕೂ ನಾಲಗೆಗೆ ಅಸಾಧ್ಯ ರುಚಿಯನ್ನು ನೀಡುತ್ತದೆ. ಹಾಗಾಗಿ ಇನ್ನು ಮುಂದೆ ಸ್ಟ್ರಾಬೆರಿ ಕಂಡಾಗ ಖರೀದಿಸುವುದನ್ನು ಮರೆಯಬೇಡಿ.

English summary

Did You Know About These Amazing Benefits Of Strawberries?

Strawberries are loved by all, both adults and children alike. These are the most popular berries around the world. Not just for its taste, but for its ample benefits as well, strawberries are eaten by people of all regions. Strawberries are known for their bright red-coloured appearance along with their beautiful charismatic aroma. These are sweet and have a juicy texture..Read on to know some of its top health benefits.
X
Desktop Bottom Promotion