For Quick Alerts
ALLOW NOTIFICATIONS  
For Daily Alerts

  ಸೊಳ್ಳೆಗಳಿಂದ ಬರುವಂತಹ ಏಳು ಖತರ್ನಾಕ್ ಕಾಯಿಲೆಗಳು! ಜಾಗ್ರತೆ ವಹಿಸಿ

  By Hemanth
  |

  'ಬದಲಾವಣೆ ಮಾಡಲು ನೀವು ತುಂಬಾ ಸಣ್ಣವರೆಂದು ಭಾವಿಸುತ್ತಿದ್ದರೆ, ಸೊಳ್ಳೆಗಳು ಇರುವಂತಹ ಕೋಣೆಯೊಳಗೆ ಹೋಗಿ ಕುಳಿತುಕೊಳ್ಳಿ' ಹೀಗೆಂದವರು ಬೌದ್ಧಗುರು ದಲಾಯಿ ಲಾಮ ಅವರು. ಯಾಕೆಂದರೆ ಸಣ್ಣ ಸೊಳ್ಳೆ ಕೂಡ ದೊಡ್ಡ ಮಟ್ಟದ ಪರಿಣಾಮ ಬೀರಬಲ್ಲದು ಎನ್ನುವುದು ಇದರರ್ಥ. ಸಣ್ಣ ಸೊಳ್ಳೆಯಿಂದಾಗಿ ಮಾನವನ ಸಂಪೂರ್ಣ ದೇಹವೇ ಪ್ರಭಾವಕ್ಕೆ ಒಳಗಾಗುವುದು. ಸೊಳ್ಳೆಗಳಿಂದಾಗಿ ಹಲವಾರು ರೀತಿಯ ಕಾಯಿಲೆಗಳು ಮಾನವನನ್ನು ಕಾಡುವುದು. ಕೆಲವೊಂದು ಮಾರಕವಾದ ಕಾಯಿಲೆಗಳು ಕೂಡ ಸೊಳ್ಳೆಗಳಿಂದ ಬರುವುದು.

  ಇಂದಿನ ದಿನಗಳಲ್ಲೂ ಇದು ನಡೆಯುತ್ತಲೇ ಇದೆ. ನೀರು, ಜಲ ಹಾಗೂ ಕೆಲವೊಂದು ವೈರಸ್ ಗಳಿಂದ ರೋಗಗಳು ಬರುವಂತೆಯೇ ಸೊಳ್ಳೆಗಳು ಕೂಡ ಮನುಷ್ಯರನ್ನು ಕಾಡುತ್ತಲಿರುವುದು. ಅದರಲ್ಲೂ ಮಳೆಗಾಲದಲ್ಲಿ ಸೊಳ್ಳೆಯು ನಿಂತ ನೀರಿನಲ್ಲಿ ತನ್ನ ಸಂತಾನೋತ್ಪತ್ತಿ ನಡೆಸುವ ಕಾರಣದಿಂದ ರೋಗಗಳು ಹರಡುವುದು ಹೆಚ್ಚು. ಈ ಸಮಯದಲ್ಲಿ ಸೊಳ್ಳೆಗಳಿಂದ ಬರುವಂತಹ ರೋಗಗಳು ಹೆಚ್ಚು. ಇದರಿಂದ ಸೊಳ್ಳೆಗಳಿಂದ ಬರುವಂತಹ ರೋಗಗಳ ಬಗ್ಗೆ ನಾವು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ....

  1. ಝಿಕಾ

  1. ಝಿಕಾ

  2016ರಲ್ಲಿ ಪ್ರತಿಯೊಬ್ಬರ ಬಾಯಿಯಲ್ಲೂ ಬರುತ್ತಿದ್ದಂತಹ ಹೆಸರೆಂದರೆ ಅದು ಝಿಕಾ. ಇದಕ್ಕೆ ಮೊದಲು ಈ ಹೆಸರನ್ನು ಕೇಳಿರಲಿಲ್ಲ. ಅದರಲ್ಲೂ ವಿಮಾನ ನಿಲ್ದಾಣಗಳು ಮತ್ತು ರೈಲು ನಿಲ್ದಾಣಗಳಲ್ಲಿ ಝಿಕಾ ವೈರಸ್ ಮತ್ತು ಅದಕ್ಕೆ ನೀಡುವ ಚಿಕಿತ್ಸೆ ಬಗ್ಗೆ ಮಾಹಿತಿಗಳನ್ನು ದೊಡ್ಡ ಹೋರ್ಡಿಂಗ್ ಗಳಲ್ಲಿ ಹಾಕಲಾಗಿತ್ತು. ವಿದೇಶದಿಂದ ಬರುವಂತಹ ಜನರ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗುತ್ತಿತ್ತು. ಭಾರತ, ಆಫ್ರಿಕಾ ಮತ್ತು ಇತರ ಕೆಲವೊಂದು ಆಗ್ನೇಯ ಏಶ್ಯಾದ ರಾಷ್ಟ್ರಗಳಲ್ಲಿ ಝಿಕಾ ವೈರಸ್ ಕಂಡುಬಂದಿತ್ತು. ಏಡಿಸ್ ಈಜಿಪ್ಟಿ ಎನ್ನುವ ಸೊಳ್ಳೆಯಿಂದಾಗಿ ಹರಡುವ ಈ ವೈರಸ್ ಗರ್ಭಿಣಿ ಮಹಿಳೆಯರಲ್ಲಿ ಕಾಣಿಸಿಕೊಂಡರೆ ಹುಟ್ಟುವ ಮಕ್ಕಳಲ್ಲಿ ಅಂಗವೈಕಲ್ಯ ಕಾಣಿಸುವುದು.

  ಝಿಕಾ ವೈರಸ್‍ನ ಲಕ್ಷಣಗಳು

  ಈ ಸೋಂಕು ತಗುಲಿದ ಮೇಲೆ ಸಣ್ಣ ಜ್ವರ, ದದ್ದುಗಳು, ಸ್ನಾಯು ನೋವು, ಸಂಧಿಗಳ ನೋವು, ತಲೆನೋವು ಹಾಗೂ ಹೆಚ್ಚಿನ ಆಯಾಸ ಉಂಟಾಗುವುದು. ಈ ರೋಗ ಲಕ್ಷಣಗಳು ಅಧಿಕ ಅವಧಿಯವರೆಗೂ ಇರುವ ಸಾಧ್ಯತೆ ಇರುತ್ತದೆ. ಸ್ಥಳೀಯ ದೇಶಗಳ ಪ್ರವಾಸ ಕೈಗೊಳ್ಳುವಾಗ ಅಧಿಕ ಮುಂಜಾಗ್ರತೆ ವಹಿಸಬೇಕಾಗುವುದು. ಇಲ್ಲವಾದರೆ ಅಲ್ಲಿಯ ಪರಿಸರದಿಂದಲೂ ಸೋಂಕು ತಗುಲಬಹುದು.

  2. ವೆಸ್ಟ್ ನೈಲ್

  2. ವೆಸ್ಟ್ ನೈಲ್

  ಸೊಳ್ಳೆಯಿಂದ ಹರಡುವಂತಹ ಮತ್ತೊಂದು ಕಾಯಿಲೆಯು ಇದಾಗಿದೆ. ಇದು ಆಫ್ರಿಕಾ ಪಶ್ಚಿಮ ಭಾಗಗಳಲ್ಲಿ ಕಂಡುಬಂದಿತ್ತು. ಇದು ನೈಲ್ ನದಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಂಡುಬಂದ ಕಾರಣ ಇದಕ್ಕೆ ಅದರ ಹೆಸರನ್ನೇ ನೀಡಲಾಗಿದೆ. ಇದು ಭಾರತ ಸಹಿತ ಆಗ್ನೇಯ ಏಶ್ಯಾದ ಕೆಲವು ಭಾಗಗಳಲ್ಲಿ ಕಾಣಿಸಿಕೊಂಡಿತ್ತು. ಅಮೆರಿಕಾದಲ್ಲೂ ಇದು ಕಂಡುಬಂದಿತ್ತು. ಈ ವೈರಸ್ ಕಂಡುಬರುವಂತಹ ಜನರಲ್ಲಿ ಯಾವುದೇ ರೀತಿಯ ರೋಗಲಕ್ಷಣಗಳು ಕಂಡುಬರುವುದಿಲ್ಲ ಮತ್ತು ವೈರಸ್ ಒಳಗಿನಿಂದಲೇ ಸಾಯುವುದು. ಕೆಲವು ಜನರಲ್ಲಿ ಜ್ವರದಂತಹ ಸಮಸ್ಯೆಯು ಕಂಡುಬರುವುದು. ಇದರಿಂದ ಮೆದುಳಿನ ಉರಿಯೂತ ಮತ್ತು ಸಾವು ಸಂಭವಿಸ ಬಹುದು.

  3.ಡೆಂಗ್ಯೂ

  3.ಡೆಂಗ್ಯೂ

  ಭಾರತದಲ್ಲಿ ಡೆಂಗ್ಯೂ ಹೆಸರನ್ನು ಕೇಳಿದರೆ ಜನರು ಬೆಚ್ಚಿಬೀಳುವರು. ಡೆಂಗ್ಯೂ ತುಬಾ ಅಪಾಯಕಾರಿ ವೈರಸ್ ಕಾಯಿಲೆ. ಇದು ಸಾವಿಗೆ ಕಾರಣವಾಗಬಹುದು. ಇದಕ್ಕೆ ಯಾವುದೇ ವಿಶೇಷ ಮದ್ದು ಅಥವಾ ಚಿಕಿತ್ಸೆಗಳಿಲ್ಲ. ಏಡಿಸ್ ಈಜಿಪ್ಟಿ ಎನ್ನುವ ಸೊಳ್ಳೆಯು ಡೆಂಗ್ಯೂಗೆ ಕಾರಣವಾಗಿದೆ. ಏಶ್ಯಾ, ಆಫ್ರಿಕಾ ಮತ್ತು ಕೆರಿಬಿಯನ್ ದ್ವೀಪಗಳಲ್ಲಿ ಸುಮಾರು 2.5 ದಶಲಕ್ಷ ಜನರು ಡೆಂಗ್ಯೂನ ಅಪಾಯಕ್ಕೆ ಸಿಲುಕಿ ಬಳಲುತ್ತಿದ್ದಾರೆ.

  ಡೆಂಗ್ಯೂ ಜ್ವರದ ಹತೋಟಿಗೆ ತರುವ ಪಪ್ಪಾಯ ಗಿಡದಮನೆಮದ್ದು

  *ಮೊದಲು ಕೆಲವು ಪಪ್ಪಾಯಿ ಎಲೆಗಳನ್ನು ಸಂಗ್ರಹಿಸಿ ಇದನ್ನು ಚೆನ್ನಾಗಿ ತೊಳೆದು ಧೂಳು, ಕೊಳೆಯನ್ನು ನಿವಾರಿಸಿ ಈ ಎಲೆಗಳಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಸಿ ಇದ್ದು ರೋಗ ನಿರೋಧಕ ವ್ಯವಸ್ಥೆ ಉತ್ತಮಗೊಳ್ಳಲು ನೆರವಾಗುತ್ತದೆ. ಅಲ್ಲದೇ ಇದರಲ್ಲಿ ಕಾರ್ಪೇಯ್ನ್ (Carpaine) ಎಂಬ ಪೋಷಕಾಂಶವಿದ್ದು ಇದು ರಕ್ತದ ಶುದ್ಧೀಕರಣ ಮತ್ತು ಪ್ಲೇಟ್ಲೆಟ್ ಸಂಖ್ಯೆಯಲ್ಲಿ ವೃದ್ಧಿಯಾಗಲು ನೆರವಾಗುತ್ತದೆ. *ಬಳಿಕ ಈ ಎಲೆಗಳನ್ನು ಚಿಕ್ಕದಾಗಿ ಹೆಚ್ಚಿ ಮಿಕ್ಸಿಯಲ್ಲಿ ನುಣ್ಣಗೆ ಅರೆಯಿರಿ. ನೀರು ಸೇರಿಸಬೇಡಿ. ಬಳಿಕ ತೆಳುವಾದ ಬಟ್ಟೆಯಲ್ಲಿ ಹಿಂಡಿ ರಸವನ್ನು ಸಂಗ್ರಹಿಸಿ. ಈ ರಸದಲ್ಲಿ ಸುಮಾರು ಎಂಟರಿಂದ ಹತ್ತು ಮಿ.ಲೀ ದ್ರವವನ್ನು ಪ್ರತಿದಿನ ಎರಡು ಬಾರಿ ಸೇವಿಸಿ. ಇದರಿಂದ ವಿಶೇಷವಾಗಿ ರಕ್ತದಲ್ಲಿನ ಪ್ಲೇಟ್ಲೆಟ್ ಸಂಖ್ಯೆ ಹೆಚ್ಚುತ್ತದೆ. ತನ್ಮೂಲಕ ಡೆಂಗ್ಯೂ ಜ್ವರವನ್ನು ನಿಗ್ರಹಿಸಲು ನೆರವಾಗುತ್ತದೆ.

  *ಈ ರಸ ಅತಿ ಕಹಿಯಾಗಿದ್ದು ಯಾರಿಗೂ ಇಷ್ಟವಾಗುವುದಿಲ್ಲ. ಆದ್ದರಿಂದ ಇದನ್ನು ಸೇವಿಸುವ ಮುನ್ನ ಕೊಂಚ ಬೆಲ್ಲ ಸೇರಿಸಿ ತಿನ್ನಬಹುದು. ಆದರೆ ಈ ರಸವನ್ನು ಸೇವಿಸಿದ ತಕ್ಷಣವೇ ನೀರು ಕುಡಿಯಬಾರದು. ಇದರಿಂದ ಈ ರಸದ ಪೂರ್ಣವಾದ ಫಲವನ್ನು ಪಡೆಯಲು ಸಾಧ್ಯವಾಗುತ್ತದೆ.

  4. ಚಿಕನ್ ಗುನ್ಯಾ

  4. ಚಿಕನ್ ಗುನ್ಯಾ

  ಚಿಕನ್ ಗುನ್ಯಾ ಮತ್ತೊಂದು ಮಾರಣಾಂತಿಕ ವೈರಸ್. ಇದು ಜ್ವರದಂತಹ ಲಕ್ಷಣಗಳನ್ನು ತೋರಿಸಿ ಅಂತಿಮವಾಗಿ ಪ್ರತಿರೋಧಕ ವ್ಯವಸ್ಥೆ ಮೇಲೆ ದಾಳಿ ಮಾಡುವುದು ಮತ್ತು ಅಂಗಾಂಗಗಳನ್ನು ನಿಷ್ಕ್ರೀಯಗೊಳಿಸಿ, ಸಾವು ಉಂಟು ಮಾಡಬಹುದು. ಡೆಂಗ್ಯೂ ಮತ್ತು ಝಿಕಾ ರೋಗ ಉಂಟು ಮಾಡುವಂತಹ ಏಡಿಸ್ ಈಜಿಪ್ಟಿ ಸೊಳ್ಳೆಯೇ ಇದನ್ನು ಕೂಡ ಹರಡುವುದು. ಏಶ್ಯಾ ಮತ್ತು ಆಫ್ರಿಕಾದ ಬೆಳೆಯುತ್ತಿರುವ ಮತ್ತು ಬೆಳೆಯದೆ ಇರುವ ರಾಷ್ಟ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವುದು.

  ಅಮೆರಿಕಾದಲ್ಲೂ ಇದು ಕಾಣಿಸಿಕೊಂಡಿತ್ತು. ಇನ್ನು ಚಿಕೂನ್ ಗುನ್ಯ ಜ್ವರಪೀಡಿಯ ವ್ಯಕ್ತಿ ಅತಿ ಹೆಚ್ಚಿನ ತಲೆನೋವು ಮತ್ತು ಸ್ನಾಯುಗಳ ನೋವು ಮತ್ತು ಸೆಳೆತವನ್ನು ಅನುಭವಿಸುತ್ತಾನೆ. ತಲೆನೋವು ಸಾಮಾನ್ಯವಾಗಿ ಮಧ್ಯಭಾಗವನ್ನು ಬಿಟ್ಟು ಬದಿಗಳಲ್ಲಿರುತ್ತದೆ. ಕಾಲುಗಳು ಮತ್ತು ಪಾದಗಳ ಗಂಟುಗಳು ವಿಪರೀತವಾಗಿ ನೋಯುತ್ತವೆ. ಸೊಂಟ ಮತ್ತು ಮೀನಖಂಡದ ಸ್ನಾಯುಗಳೂ ನೋಯುತ್ತವೆ. ಮೊಣಕಾಲ ಗಂಟು ಸಹಾ ವಿಪರೀತ ನೋವು ನೀಡಿ ಸುಮಾರು ವಾರಗಳವರೆಗೆ

  ಉಳಿಯುತ್ತದೆ. ಮೊಣಕಾಲ ಗಂಟು ಒಂದು ವರ್ಷದವರೆಗೂ ಉಳಿದಿರುವುದು ಕೆಲವು ಸಂದರ್ಭಗಳಲ್ಲಿ ಕಂಡುಬಂದಿದೆ.

  5. ಸೆಲ್ವ್ (ಸೇಂಟ್ ಲೂಯಿಸ್ ಎನ್ಸೆಫಾಲಿಟಿಸ್)

  5. ಸೆಲ್ವ್ (ಸೇಂಟ್ ಲೂಯಿಸ್ ಎನ್ಸೆಫಾಲಿಟಿಸ್)

  ಇದು ತುಂಬಾ ಅಪರೂಪದ ಕಾಯಿಲೆಯಾಗಿದ್ದು, ವಿಶ್ವದಲ್ಲಿ ಕೇವಲ ಏಳು ಜನರನ್ನು ಮಾತ್ರ ಕಾಡಿದೆ. ಇದು ಕೂಡ ಸೊಳ್ಳೆಗಳಿಂದ ಹರುಡುವಂತಹ ರೋಗವಾಗಿದೆ. ಈ ರೋಗದಿಂದ ಜ್ವರ, ತಲೆನೋವು, ಭೇದಿ, ಗಡ್ಡೆ, ಕೋಮಾ, ಪಾರ್ಶ್ವವಾಯು ಇತ್ಯಾದಿ ಬರಬಹುದು. ಮೆದುಳಿಗೆ ಈ ಕಾಯಿಲೆಯು ಹೆಚ್ಚಿನ ಪರಿಣಾಮ ಬೀರುವುದು.ಕಾಡು ಮತ್ತು ಜೌಗು ಪ್ರದೇಶಗಳಲ್ಲಿ ಈ ಕಾಯಿಲೆಯು ಕಂಡುಬರುವುದು. ಇದು ಅಮೆರಿಕಾದ ಮಧ್ಯ ಹಾಗೂ ಪೂರ್ವ ಭಾಗದಲ್ಲಿ ಕಂಡುಬಂದಿದೆ. ಸೊಳ್ಳೆಗಳು ಮೊಟ್ಟೆಯನ್ನಿಟ್ಟು ಈ ರೋಗ ಹರಡುವುದು.

  6. ಹಳದಿ ಜ್ವರ

  6. ಹಳದಿ ಜ್ವರ

  ಸೊಳ್ಳೆಗಳಿಂದ ಬರುವಂತಹ ಮತ್ತೊಂದು ಮಾರಕ ಕಾಯಿಲೆಯೆಂದರೆ ಅದು ಹಳದಿ ಜ್ವರ. ಈ ಕಾಯಿಲೆಯ ಲಕ್ಷಗಳು ಜ್ವರ, ತಲೆನೋವು, ವಾಕರಿಕೆ, ನಿಶ್ಯಕ್ತಿ ಇತ್ಯಾದಿ. ಇದು ಅಂತಿಮವಾಗಿ ಕಾಮಾಲೆ ರೋಗವಾಗಿ ಪರಿವರ್ತನೆ ಆಗುವುದು. ಇದರಿಂದ ಚರ್ಮ ಮತ್ತು ಕಣ್ಣುಗಳು ಹಳದಿಯಾಗುವುದು.ಇದು ಏಶ್ಯಾ ಮತ್ತು ಆಫ್ರಿಕಾದಲ್ಲಿ ಅತಿಯಾಗಿ ಕಂಡುಬರುವುದು. ಅದೃಷ್ಟವಶಾತ್ ಇದಕ್ಕೆ ಚಿಕಿತ್ಸೆ ಲಭ್ಯವಿರುವ ಕಾರಣ ಪ್ರಾಣಹಾನಿಯಾಗದಂತೆ ತಡೆಯಬಹುದು.

  7. ಮಲೇರಿಯಾ

  7. ಮಲೇರಿಯಾ

  ದಶಕಗಳಿಂದಲೂ ಸೊಳ್ಳೆಗಳಿಂದ ಬರುವಂತಹ ಮತ್ತೊಂದು ಕಾಯಿಲೆ ಎಂದರೆ ಅದು ಮಲೇರಿಯಾ. ಇದಕ್ಕೆ ಔಷಧಿಗಳು ಲಭ್ಯವಿದ್ದರೂ ಇದು ಸಂಪೂರ್ಣವಾಗಿ ರೋಗವನ್ನು ನಿವಾರಿಸುವುದೆಂದು ಸಾಬೀತಾಗಿಲ್ಲ. ಈ ವೈರಸ್ ನಿಂದ ಜ್ವರದೊಂದಿಗೆ ಭೇದಿ ಕೂಡ ಕಾಣಿಸಿಕೊಳ್ಳಬಹುದು. ಮಲೇರಿಯಾ ಜ್ವರ ನಿಯಂತ್ರಿಸುವ ಸರಳ ಮನೆಮದ್ದುಗಳು- ಮಲೇರಿಯಾ ಜ್ವರದ ಲಕ್ಷಣಗಳು ಕಂಡು ಬಂದ ತಕ್ಷಣ ತುಳಸಿ ಎಲೆಗಳ ಮೊರೆ ಹೋಗುವ ಮೂಲಕ ನಿಸರ್ಗವೇ ಈ ವೈರಾಣುವಿನ ವಿರುದ್ಧ ಹೋರಾಡಲು ಶಕ್ತಿ ನೀಡುತ್ತದೆ. ಇದಕ್ಕಾಗಿ ಕೊಂಚ ತುಳಸಿ ಎಲೆಗಳನ್ನು ಕೊಂಚ ಕಾಳುಮೆಣಸಿನೊಂದಿಗೆ ಅರೆದು ಈ ಲೇಪನವನ್ನು ಹಾಗೇ

  ನುಂಗಿಬಿಡಬೇಕು.ಇದರಿಂದ ದೇಹ ಬಿಸಿಯೇರುವುದರಿಂದ ತಪ್ಪುತ್ತದೆ ಹಾಗೂ ಮಲೇರಿಯಾ ವೈರಾಣುಗಳ ವಿರುದ್ದ ದೇಹ ಹೋರಾಡಲು ಹೆಚ್ಚಿನ ಶಕ್ತಿ ಲಭಿಸುತ್ತದೆ.

  *ಅತಿ ಹೆಚ್ಚು ಜ್ವರ ಮಲೇರಿಯಾದ ಲಕ್ಷಣ. ಜ್ವರ ಸತತವಾಗಿ ಏರುತ್ತಾ ಹೋಗುತ್ತಿದ್ದರೆ ತಕ್ಷಣ ಕೊಂಚ ಉಗುರುಬೆಚ್ಚನೆಯ ನೀರಿಗೆ ಒಂದು ತಾಜಾ ಲಿಂಬೆಹಣ್ಣನ್ನು

  ಹಿಂಡಿ ರಸ ಬೆರೆಸಿ ರೋಗಿಗೆ ಕುಡಿಸಬೇಕು, ಒಮ್ಮೆಲೇ ಸಾಧ್ಯವಾಗದಿದ್ದರೆ ಕೊಂಚ ಕೊಂಚವಾಗಿ ಕುಡಿಸುತ್ತಲೇ ಇದ್ದರೆ ಜ್ವರ ಶೀಘ್ರವಾಗಿ ಇಳಿಯುತ್ತದೆ.

  *ಮಲೇರಿಯಾ ನಿಗ್ರಹಕ್ಕೆ ಇನ್ನೊಂದು ನೈಸರ್ಗಿಕ ಆಹಾರವೆಂದರೆ ಮೆಂತೆ. ಒಂದು ವೇಳೆ ಮಲೇರಿಯಾ ರೋಗ ಉಲ್ಬಣಗೊಂಡಿದ್ದು ರೋಗಿ ಸುಸ್ತಾಗಿದ್ದರೆ ಮೆಂತೆ

  ಕಾಳುಗಳು ಅತ್ಯುತ್ತಮವಾಗಿವೆ.ಕೊಂಚ ಮೆಂತೆ ಕಾಳುಗಳನ್ನು ನೆನೆಸಿ ಹಾಗೇ ಅಥವಾ ಅರೆದು ಲೇಪನದ ರೂಪದಲ್ಲಿ ತಿನ್ನಿಸುವ ಮೂಲಕ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಹಾಗೂ ವೈರಾಣುಗಳ ವಿರುದ್ಧ ಹೋರಾಡಲು ಮತ್ತು ನಿಗ್ರಹಿಸಲು ಸಾಧ್ಯವಾಗುತ್ತದೆ.

  English summary

  Dangerous Diseases Spread By Mosquitoes That We Must Know About!

  We have witnessed numerous incidents where people suffer from fatal consequences because of diseases spread by mosquitoes and, in fact, these diseases are very common even today! So, it is important to take measures to keep your living and work spaces free of mosquitoes. Here are some of the deadliest diseases spread by mosquitoes.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more