For Quick Alerts
ALLOW NOTIFICATIONS  
For Daily Alerts

ದಿನಾ ಒಂದೊಂದು ಗ್ಲಾಸ್ 'ಟೊಮೆಟೊ ಜ್ಯೂಸ್' ಕುಡಿದರೆ ಆರೋಗ್ಯವಾಗಿರುವಿರಿ

|

ಆರೋಗ್ಯವಾಗಿರುವುದು ಪ್ರತಿಯೊಬ್ಬರಿಗೂ ದೊಡ್ಡ ಸಂಪತ್ತು ಎಂದೇ ಹೇಳಬಹುದು. ಆರೋಗ್ಯವಿದ್ದರೆ ಭಾಗ್ಯ ಎನ್ನುವ ಮಾತಿದೆ. ಅದು ನಿಜ ಕೂಡ. ಆರೋಗ್ಯವಿಲ್ಲದೆ ಇದ್ದರೆ ಎಷ್ಟೇ ಸಂಪತ್ತು ಇದ್ದರೂ ಪ್ರಯೋಜವಿಲ್ಲ. ಇಂದಿನ ದಿನಗಳಲ್ಲಿ ಜನರಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಮೂಡುತ್ತಲಿದೆ. ಇದರಿಂದ ಆರೋಗ್ಯಕರವಾಗಿರುವುದನ್ನು ತಿನ್ನಲು ಬಯಸುವರು. ಈ ಲೇಖನದಲ್ಲಿ ಟೊಮೇಟೊದಿಂದ ಆರೋಗ್ಯ ಹೇಗೆ ಕಾಪಾಡಿಕೊಳ್ಳಬಹುದು ಎಂದು ನಿಮಗೆ ಹೇಳಲಿದ್ದೇವೆ.

ಹೃದಯ, ಹೊಟ್ಟೆ ಮತ್ತು ಯಕೃತ್ ನಿಂದ ಹಿಡಿದು ಕ್ಯಾನ್ಸರ್ ವಿರುದ್ಧ ಹೋರಾಡಲು ಟೊಮೆಟೊಜ್ಯೂಸ್ ತುಂಬಾ ಪರಿಣಾಮಕಾರಿ. ಲೈಕೋಪೀನ್, ಆ್ಯಂಟಿಆಕ್ಸಿಡೆಂಟ್ ಮತ್ತು ವಿಟಮಿನ್ ಎ ಟೊಮೆಟೊಜ್ಯೂಸ್ ನಲ್ಲಿರುವ ಇತರ ಕೆಲವು ಪೋಷಕಾಂಶಗಳು. ಇದು ಕಣ್ಣು, ಚರ್ಮ ಮತ್ತು ಕೂದಲಿನ ಆರೋಗ್ಯ ಕಾಪಾಡಿ, ತೂಕ ಕಳೆದುಕೊಳ್ಳಲು ಸಹಕಾರಿ.

Daily glass of tomato juice secret of healthy life!

ಕೆಂಪಾಗಿರುವಂತಹ ಟೊಮೆಟೊಸೇವನೆ ಮಾಡಿದರೆ ಅದರಿಂದ ಆರೋಗ್ಯಕ್ಕೆ ತುಂಬಾ ಲಾಭವಿದೆ ಎಂದು ಈ ಹಿಂದೆ ಕೂಡ ನಾವು ಹೇಳಿದ್ದೇ. ಯಾಕೆಂದರೆ ಟೊಮೆಟೋದಲ್ಲಿ ವಿಟಮಿನ್ ಸಿ, ಫಾಲಟೆ, ಪೊಟಾಶಿಯಂ ಇತ್ಯಾದಿ ಪೋಷಕಾಂಶಗಳು ಇವೆ. ಆದರೆ ಟೊಮೆಟೋದಲ್ಲಿ ಆ್ಯಂಟಿಆಕ್ಸಿಡೆಂಟ್ ಗಳು ಸಮೃದ್ಧವಾಗಿದೆ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಟೊಮೆಟೊದಲ್ಲಿ ವಿಟಮಿನ್ ಎ, ವಿಟಮಿನ್ ಇ, ಫ್ಲಾವನಾಯ್ಡ್ಸ್, ಫೈಟೊಸ್ಟೆರಾಲ್ಸ್ ಮತ್ತು ಇತರ ಕೆಲವು ನೀರು ಹೀರಿಕೊಳ್ಳಬಲ್ಲ ವಿಟಮಿನ್ ಗಳು ಇವೆ. ಟೊಮೆಟೋವನ್ನು ಹಸಿಯಾಗಿ ಅಥವಾ ಸ್ವಲ್ಪ ಬೇಯಿಸಿ ತಿನ್ನಬಹುದು. ಹಸಿ ಟೊಮೆಟೊನಿಮಗೆ ಇಷ್ಟವಿಲ್ಲದೆ ಇದ್ದರೆ ಆಗ ಣೀವು ಟೊಮೆಟೊ ಜ್ಯೂಸ್ ಬಳಸಿ. ಸ್ವಲ್ಪ ಉಪ್ಪು, ಕರಿಮೆಣಸಿನ ಹುಡಿ. ಹಾಕಿದರೆ ಒಳ್ಳೆಯದು. ಟೊಮೆಟೊ ಜ್ಯೂಸ್ ಕುಡಿದರೆ ಸಿಗುವ ಲಾಭಗಳು.

ಕ್ಯಾನ್ಸರ್ ನಿಂದ ದೂರವಿಡುವುದು

ಕ್ಯಾನ್ಸರ್ ನಿಂದ ದೂರವಿಡುವುದು

ಕ್ಯಾರೊಟಿನಾಯ್ಡ್ ಲೈಕೋಪೀನ್ ನಿಂದಾಗಿ ಟೊಮೆಟೊಜ್ಯೂಸ್ ತುಂಬಾ ಆರೋಗ್ಯಕಾರಿ. ಲೈಕೋಪೀನ್ ನಾನ್ ಪ್ರೋವಿಟಮಿನ್ ಆಗಿದ್ದು, ಕ್ಯಾರೊಟಿನಾಯ್ಡ್ ಆಗಿರುವ ಇದು ಟೊಮೆಟೋದಲ್ಲಿ ಕೆಂಪು ಮತ್ತು ಗುಲಾಬಿ ಬಣ್ಣಕ್ಕೆ ಕಾರಣವಾಗುವುದು, ದ್ರಾಕ್ಷಿಯಲ್ಲಿ ಗುಲಾಬಿ ಮತ್ತು ಇತರ ಆಹಾರಗಳಲ್ಲಿ ಬಣ್ಣಕ್ಕೆ ಇದು ಬೇಕು. ಸಂಸ್ಕರಿಸಲ್ಪಟ್ಟ ಟೊಮೆಟೊಉತ್ಪನ್ನಗಳಲ್ಲಿ ಮೂಲ ಆಹಾರದ ಲೈಕೋಪೀನ್ ಇದೆ. ಆ್ಯಂಟಿಆಕ್ಸಿಡೆಂಟ್, ಹೈಪೋಲಿಪಿಡೆಮಿಕ್ ಮತ್ತು ಆಂಟಿಕಾರ್ಸಿನೋನಿಕ್ ಚಟುವಟಿಕೆಗಳನ್ನು ಹೊಂದಿವೆ. ಟೊಮೆಟೋದಲ್ಲಿ ಇರುವಂತಹ ಲೈಕೋಪೀನ್ ಪ್ರಮುಖ ಜೈವಿಕ ಸಕ್ರಿಯ ಸಂಯುಕ್ತವಾಗಿದೆ ಮತ್ತು ಅದರ ಉಪಉತ್ಪನ್ನಗಳು. ಆ್ಯಂಟಿಆಕ್ಸಿಡೆಂಟ್ ಗಳು ಫ್ರೀ ರ್ಯಾಡಿಕಲ್ ವಿರುದ್ಧ ಹೋರಾಡಿ, ಕೋಶಗಳು ಹಾಗೂ ಅಂಗಾಂಶಗಳಿಗೆ ಹಾನಿಯಾಗದಂತೆ ತಡೆಯುವುದು. ಇದರಿಂದ ಕ್ಯಾನ್ಸರ್ ನಂತಹ ಹಲವಾರು ರೋಗಗಳನ್ನು ತಡೆಯಬಹುದು. ಲೈಕೋಪೀನ್, ವಿಟಮಿನ್ ಸಿ ಮತ್ತು ಆಸ್ಕೋರ್ಬಿಕ್ ಆಮ್ಲವು ಆಕ್ಸಿಡೇಷನ್ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುವುದು.

Most Read: ಈ 5 ಲೋಹಗಳ ಪಾತ್ರೆಗಳಲ್ಲಿ ಅಡುಗೆ ಮಾಡುವುದು ಆರೋಗ್ಯಕ್ಕೆ ಅಪಾಯಕಾರಿ!

ಒಳ್ಳೆಯ ದೃಷ್ಟಿಗೆ

ಒಳ್ಳೆಯ ದೃಷ್ಟಿಗೆ

ಟೊಮೆಟೊದಲ್ಲಿ ವಿಟಮಿನ್ ಎ ಅಧಿಕವಾಗಿರುವ ಕಾರಣದಿಂದ ಪ್ರತಿನಿತ್ಯ ನೀವು ಟೊಮೆಟೊಜ್ಯೂಸ್ ಕುಡಿದರೆ ಅದರಿಂದ ಕಣ್ಣುಗಳಿಗೆ ತುಂಬಾ ಲಾಭವಿದೆ. ರೆಟಿನಾಲ್ ಎಂದು ಕರೆಯಲ್ಪಡುವಂತಹ ವಿಟಮಿನ್ ಎ ರೆಟಿನಾದ ಅಂಗಾಂಶಗಳ ಆರೋಗ್ಯ ಕಾಪಾಡುವುದು. ರೆಟಿನಾದಲ್ಲಿ ಧೂಮಲ ಉತ್ಪತ್ತಿಗೆ ರೆಟಿನಾಲ್ ಮುಖ್ಯವಾಗಿದೆ. ಇದು ಕಡಿಮೆ ಬೆಳಕಿನಲ್ಲಿಯೂ ಕಾಣುವಂತೆ ಮಾಡುವುದು.

ತೂಕ ಕಳೆದುಕೊಳ್ಳಲು ಸಹಕಾರಿ

ತೂಕ ಕಳೆದುಕೊಳ್ಳಲು ಸಹಕಾರಿ

ನೀವು ತೂಕ ಇಳಿಸುವ ಆಹಾರ ಕ್ರಮ ಪಾಲಿಸುತ್ತಿದ್ದರೆ ಆಗ ಟೊಮೆಟೊಜ್ಯೂಸ್ ನ್ನು ನಿಮ್ಮ ದೈನಂದಿನ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಿ. ಯಾಕೆಂದರೆ ಲೈಕೋಪೀನ್ ದೇಹವನ್ನು ಚಯಾಪಚಯ ಕಾಯಿಲೆಗಳಿಂದ ರಕ್ಷಿಸುವುದು. ಲೈಕೋಪೀನ್ ಸೊಂಟದ ಸುತ್ತಳತೆ, ಸೆರಮ್ ಕೊಲೆಸ್ಟ್ರಾಲ್ ಮತ್ತು ಉರಿಯೂತಕಾರಿ ಅಡಿಪೋಕಿನ್ ಮಟ್ಟವನ್ನು ದೇಹದಲ್ಲಿ ಕಡಿಮೆ ಮಾಡುವುದು. ಇದರಿಂದ ದೇಹದ ತೂಕ ಇಳಿಸಿಕೊಳ್ಳಬಹುದು.

Most Read:ನಿಮಗೆ ಗೊತ್ತೇ? ಮಶ್ರೂಮ್‌ನ್ನು ಔಷಧಿಗಳಲ್ಲಿಯೂ ಬಳಸುತ್ತಾರಂತೆ!

ಯಕೃತ್ ನ್ನು ನಿರ್ವಿಷಗೊಳಿಸುವುದು

ಯಕೃತ್ ನ್ನು ನಿರ್ವಿಷಗೊಳಿಸುವುದು

ನಮ್ಮ ಸಂಪೂರ್ಣ ಆರೋಗ್ಯವನ್ನು ಕಾಪಾಡಿಕೊಂಡು ಮತ್ತು ಶುದ್ಧೀಕರಿಸಿರುವ ರಕ್ತವು ದೇಹಕ್ಕೆ ಪೂರೈಕೆಯಾಗುವಂತೆ ಮಾಡುವ ಯಕೃತ್ ನ ಆರೋಗ್ಯವನ್ನು ಟೊಮೆಟೊಕಾಪಾಡುವುದು. ಯಕೃತ್ ವಿಷಕಾರಿ ಅಂಶಗಳನ್ನು ಹೊರಹಾಕುವ ಕಾರಣದಿಂದಾಗಿ ಇದನ್ನು ಕೂಡ ನಿರ್ವಿಷಗೊಳಿಸುವ ಅಗತ್ಯವಿದೆ. ಟೊಮೆಟೊಯಕೃತ್ ನ್ನು ನಿರ್ವಿಷಗೊಳಿಸುವುದು. ಯಕೃತ್ ನ ಅಡಚಣೆ ಸುಧಾರಿಸಲು ಟೊಮೆಟೊಜ್ಯೂಸ್ ಅದ್ಭುತವೆಂದು ಪರಿಗಣಿಸಲಾಗಿದೆ.

ಹೃದಯವನ್ನು ಆರೋಗ್ಯವಾಗಿಡುವುದು

ಹೃದಯವನ್ನು ಆರೋಗ್ಯವಾಗಿಡುವುದು

ಟೊಮೆಟೊಜ್ಯೂಸ್ ನ್ನು ಪ್ರತಿನಿತ್ಯ ಸೇವನೆ ಮಾಡಿದರೆ ಹೃದಯಕ್ಕೆ ಹೆಚ್ಚಿನ ಲಾಭವಿದೆ. ಇದು ಕೆಟ್ಟ ಕೊಲೆಸ್ಟ್ರಾಲ್ ನ್ನು ಕಡಿಮೆ ಮಾಡುವುದು ಮತ್ತು ಎಲ್ ಡಿಎಲ್ ಪ್ರತಿರೋಧಕ ಹೆಚ್ಚಿಸುವುದು. ಇದರಿಂದ ಹೃದಯವು ಆರೋಗ್ಯಕರವಾಗಿ ಇರುವುದು. ಲೈಕೋಪೀನೆ ಕೂದ ಹೃದಯದ ಕೆಲವೊಂದು ರೋಗಗಳ ಅಪಾಯವನ್ನು ತಗ್ಗಿಸುವುದು.

ಹೊಟ್ಟೆಯ ಆರೋಗ್ಯ

ಹೊಟ್ಟೆಯ ಆರೋಗ್ಯ

ಟೊಮೆಟೋವು ಪ್ರಿಬಯೋಟಿಕ್ ಪರಿಣಾಮವನ್ನು ಹೊಟ್ಟೆಯ ಮೇಲೆ ಬೀರುವುದು. ಇದು ಹೊಟ್ಟೆಯ ಸೂಕ್ಷ್ಮಜೀವಿಯನ್ನು ಹೆಚ್ಚಿಸುವುದು ಮತ್ತು ಹೊಟ್ಟೆಯು ಆರೋಗ್ಯವಾಗಿರುವಂತೆ ಮಾಡುವುದು. ಐದು ವಾರಗಳ ಕಾಲ ನಿರಂತರವಾಗಿ ಟೊಮೆಟೊಸೇವನೆಯಿಂದ ಹೊಟ್ಟೆಯ ಅಧಿಕ ಕೊಬ್ಬಿನ ಪರಿಣಾಮವನ್ನು ತಡೆಯಲಾಗಿದೆ ಎಂದು ಇಲಿಗಳ ಮೇಲೆ ಮಾಡಿದ ಪ್ರಯೋಗದಿಂದ ಕಂಡುಕೊಳ್ಳಲಾಗಿದೆ. ಯಾಕೆಂದರೆ ಟೊಮೆಟೊಹೊಟ್ಟೆಯಲ್ಲಿ ಒಳ್ಳೆಯ ಬ್ಯಾಕ್ಟೀರಿಯಾವನ್ನು ಹೆಚ್ಚಿಸಿದೆ. ಹೊಟ್ಟೆಯು ಆರೋಗ್ಯವಾಗಿದ್ದರೆ ಸಂಪೂರ್ಣ ದೇಹವು ಆರೋಗ್ಯವಾಗಿರುವುದು.

Most Read: ನೀರಿನಲ್ಲಿ ನೆನೆಸಿಟ್ಟ 'ಮೆಂತೆ ಕಾಳಿನ' ಆರೋಗ್ಯಕಾರಿ ಪ್ರಯೋಜನಗಳು

ಸೌಂದರ್ಯಕ್ಕೂ ಇದು ಸಹಕಾರಿ

ಸೌಂದರ್ಯಕ್ಕೂ ಇದು ಸಹಕಾರಿ

ಟೊಮೆಟೊಜ್ಯೂಸ್ ನ್ನು ನೀವು ಯಾಕೆ ಕುಡಿಯಲೇಬೇಕೆಂದರೆ ಇದು ನಿಮ್ಮ ಸೌಂಧರ್ಯವನ್ನು ವೃದ್ಧಿಸುವುದು. ಟೊಮೆಟೋದಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ಗಳು ಕೋಶಗಳಿಗೆ ಹಾನಿಯಾಗದಂತೆ ತಡೆಯುವುದು ಮತ್ತು ಹಾನಿಯಾಗಿರುವ ಕೋಶಗಳು ಹಾಗೂ ಅಂಗಾಂಶಗಳನ್ನು ಸರಿಪಡಿಸುವುದು. ಲೈಕೋಪೀನೆ, ಬೆಟಾ ಕ್ಯಾರೋಟಿನ್ ಮತ್ತು ವಿಟಮಿನ್ ಸಿ ಚರ್ಮವು ಆರೋಗ್ಯಕಾರಿ ಹಾಗೂ ಕಾಂತಿಯುತವಾಗಿರುವಂತೆ ಮಾಡುವುದು.

ವಿಟಮಿನ್ ಸಿ ಟೊಮೆಟೋದಲ್ಲಿ ಇರುವ ಕಾರಣದಿಂದಾಗಿ ಇದು ಚರ್ಮ ಹಾಗೂ ಕೂದಲಿಗೆ ತುಂಬಾ ಸಹಕಾರಿ. ವಿಟಮಿನ್ ಸಿ ದೇಹವು ಕಾಲನ್ ಉತ್ಪತ್ತಿ ಮಾಡುವಂತೆ ಮಾಡುವುದು. ಈ ಪ್ರೋಟೀನ್ ಚರ್ಮ, ಮೃದ್ವಸ್ಥಿ, ಟೆಂಡನ್, ಅಸ್ಥಿರಜ್ಜುಗಳುಗೆ ಅಗತ್ಯವಿದೆ. ವಿಟಮಿನ್ ಸಿಯು ಗಾಯ ಒಣಗಲು, ಹಲ್ಲುಗಳು ಮತ್ತು ಮೂಳೆಗಳನ್ನು ಸರಿಪಡಿಸಲು ಹಾಗೂ ನಿರ್ವಹಿಸಲು ಬೇಕಾಗಿದೆ. ವಿಟಮಿನ್ ಸಿ ಕೊರತೆಯಿಂದಾಗಿ ಒಣ, ಪದರವೆದ್ದ ಚರ್ಮ ಕಂಡುಬರುವುದು. ಟೊಮೆಟೊದಲ್ಲಿ ಕಂಡುಬರುವಂತಹ ಬೆಟಾ ಕ್ಯಾರೋಟಿನ್ ಕೋಶಗಳು ಹಾನಿಯಾಗದಂತೆ ತಡೆಯುವುದು. ಇದರಿಂದ ಚರ್ಮವು ಆರೋಗ್ಯವಾಗಿರುವುದು. ಟೊಮೆಟೊ ಜ್ಯೂಸ್ ಕುಡಿಯಲು ಇಷ್ಟು ಕಾರಣಗಳು ನಿಮಗೆ ಸಾಕಲ್ಲವೇ?

English summary

Daily glass of tomato juice secret of healthy life!

From keeping your heart, gut, and liver healthy to fighting carcinogens to stay cancer free, drinking tomato juice ensures you stay healthy at all times. Lycopene, antioxidants and vitamin A among other nutrients in tomato juice aid better vision, healthy skin and hair and weight loss. We have said many times in the past that eating bright red tomatoes is a shortcut to robust health. That’s because tomatoes are rich in nutrients like folate, vitamin C, potassium, etc.
X
Desktop Bottom Promotion