For Quick Alerts
ALLOW NOTIFICATIONS  
For Daily Alerts

ಉರಿಮೂತ್ರದ ಸಮಸ್ಯೆ – ಕಾರಣಗಳು ಮತ್ತು ಚಿಕಿತ್ಸೆಗಳು

By Sushma Charhra
|

ಉರಿಮೂತ್ರ ಎಂದರೆ ಮೂತ್ರಕೋಶದ ಕೆಲಭಾಗದಲ್ಲಿ ಸೋಂಕು ತಗುಲುವುದು. ಇದು ಮೂತ್ರಕೋಶದ ಗೋಡೆಗಳಲ್ಲಿ ಉರಿಯೂತ ಕಾಣಿಸಿಕೊಳ್ಳುವ ಪರಿಣಾಮದಿಂದಾಗಿ ಬರುತ್ತೆ. ಅದೇ ಕಾರಣದಿಂದಾಗಿ ಉರಿಮೂತ್ರ ಸಮಸ್ಯೆ ನಿಜಕ್ಕೂ ಹೇಳಬೇಕೆಂದರೆ ಒಂದು ಗಂಭೀರ ಸಮಸ್ಯೆಯಲ್ಲ ಆದರೆ ರೋಗಿಗಳಿಗೆ ಆಗುವ ಅಹಿತಕರ ಭಾವನೆ ಮತ್ತು ಯಾವುದೇ ಚಿಕಿತ್ಸೆ ಪಡೆಯದ ಕಾರಣದಿಂದಾಗಿ ಗಂಭೀರ ಸ್ವರೂಪ ಪಡೆದುಕೊಳ್ಳುತ್ತವೆ.

ಉರಿಮೂತ್ರ ಸಮಸ್ಯೆಯು ಪ್ರಮುಖವಾಗಿ ಮೂತ್ರಕೋಶ ಮತ್ತು ಮೂತ್ರ ವಿಸರ್ಜನಾ ನಾಳದಲ್ಲಿ ಮೂತ್ರ ಉತ್ಪತ್ತಿ ಆಗದೇ ಇದ್ದಲ್ಲಿ ಅಥವಾ ಸೂಕ್ಷ್ಮ ಜೀವಿಗಳಿಂದ ಮುಕ್ತವಾಗಿದ್ದಲ್ಲಿ ಬ್ಯಾಕ್ಟೀರಿಯಾಗಳಿಂದಾಗಿ ಸೋಂಕಿಗೆ ಒಳಗಾಗಿ ಬಿಡುತ್ತವೆ. ಬ್ಯಾಕ್ಟೀರಿಯಾಗಳು ಮೂತ್ರಕೋಶದ ಪದರದ ಮೇಲೆ ದಾಳಿ ಮಾಡುತ್ತವೆ ಮತ್ತು ಆ ಪ್ರದೇಶದಲ್ಲಿ ನೋವು ಮತ್ತು ಹಿಂಸೆಗೆ ಕಾರಣವಾಗುತ್ತವೆ.

ಉರಿಮೂತ್ರ ಸಮಸ್ಯೆಯು ಹೆಚ್ಚಾಗಿ ಪುರುಷರಿಗಿಂತ ಮಹಿಳೆಯರಲ್ಲಿ ಅಧಿಕವಾಗಿರುತ್ತೆ ಯಾಕೆಂದರೆ ಮೂತ್ರ ವಿಸರ್ಜನಾ ನಾಳವು ಮಹಿಳೆಯರಲ್ಲಿ ಚಿಕ್ಕದಿರುತ್ತೆ. ಸುಮಾರು 80 ಶೇಕಡಾ ದಷ್ಟು UTI(urinary tract infections) ಅರ್ಥಾತ್ ಉರಿಮೂತ್ರ ಸಮಸ್ಯೆಗೆ ಕಾರಣ ಕರುಳಿನ ಮೂಲಕ ಬ್ಯಾಕ್ಟೀರಿಯಾವು ಮೂತ್ರಕೋಶವನ್ನು ತಲುಪುವುದೇ ಆಗಿದೆ.

Cystitis

ಹೆಚ್ಚಿನ ಪ್ರಮಾಣದ ಬ್ಯಾಕ್ಟೀರಿಯಾಗಳು ಕರುಳಿಗೆ ಸಂಬಂಧಿಸಿದ ಸಸ್ಯಕೋಶಗಳ ಆರೋಗ್ಯಕರ ಬ್ಯಾಕ್ಚೀರಿಯಾಗಳೇ ಆಗಿರುತ್ತೆ. ಆದರೆ ಯಾವಾಗ ಇವು ಮೂತ್ರಕೋಶ ಮತ್ತು ಮೂತ್ರ ವಿಸರ್ಜನಾ ನಾಳದಲ್ಲಿರುವ ಖಾಲಿ ಜಾಗವನ್ನು ಪ್ರವೇಶಿಸುತ್ತವೋ ಆಗ ಸೋಂಕಿಗೆ ಕಾರಣವಾಗಿ ಉರಿಮೂತ್ರ ಸಮಸ್ಯೆಗೆ ಕಾರಣವಾಗುವ ಭಯಾನಕಗಳಾಗಿ ಪರಿವರ್ತಿಸವಾಗುತ್ತವೆ. ಉರಿಮೂತ್ರಕ್ಕೆ ಪ್ರಮುಖ ಕಾರಣವೇ ಬ್ಯಾಕ್ಟೀರಿಯಾ ಸೋಂಕು, ಕಡಿಮೆ ಪ್ರಮಾಣದ ಸೋಂಕಾಗಿದ್ದರೆ ಕೆಲವೇ ದಿನದಲ್ಲಿ ಕಡಿಮೆಯಾಗಿ ಬಿಡುತ್ತೆ.ಒಂದು ವೇಳೆ ಇದು 4 ದಿನಕ್ಕೂ ಅಧಿಕವಾಗಿದ್ದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕಾಗುತ್ತದೆ.

ಉರಿಮೂತ್ರಕ್ಕೆ ಪ್ರಮುಖ ಕಾರಣಗಳು
ಅನೇಕ ಕಾರಣಗಳು ಉರಿಮೂತ್ರ ಸಮಸ್ಯೆಗೆ ಜವಾಬ್ದಾರಿಗಳಾಗಿವೆ. ಅವುಗಳ ಬಗ್ಗೆ ಚರ್ಚಿಸೋಣ...
1.ಟ್ಯಾಪಾಂನ್ ಮತ್ತು catheter ಬಳಕೆ: ಟ್ಯಾಪಾಂನ್ ಬಳಕೆಯ ಸಂದರ್ಬದಲ್ಲಿ, ಅಂದರೆ ಟ್ಯಾಂಪಾನ್ ಒಳತೂರಿಸಿದಾಗ, ಮೂತ್ರಕೋಶದ ನಾಳಗಳ ಮೂಲಕ ಬ್ಯಾಕ್ಟೀರಿಯಾಗಳು ಸೇರಿ ಮೂತ್ರಕೋಶಕ್ಕೆ ತೊಂದರೆ ತರುವ ಸಾಧ್ಯತೆಗಳು ಹೆಚ್ಚಿದ್ದು, ಸಮಸ್ಯೆ ಕಾಣಿಸಿಕೊಳ್ಳುವ ರಿಸ್ಕ್ ಇರುತ್ತೆ. ಮೂತ್ರಕೋಶದ catheter ನ್ನು ಒಳಸೇರಿಸುವುದು, ಬದಲಾಯಿಸುವುದು ಅಥವಾ ಬಳಕೆ ಮಾಡುತ್ತಲೇ ಇರುವುದರಿಂದಾಗಿ catheter ಬ್ಯಾಕ್ಟೀರಿಯಾವನ್ನು ತನ್ನೊಳಡೆ ಇಟ್ಟುಕೊಂಡ ಮೂತ್ರಕೋಶದ ಟ್ರ್ಯಾಕ್ ಗೆ ತೊಂದರೆ ನೀಡಿ ನಿಮಗೆ ಕಾಯಿಲೆ ಬರುವಂತೆ ಮಾಡುವ ಸಾಧ್ಯತೆಗಳಿರುತ್ತೆ.
2. ಸಂತಾನ ಉತ್ಪತ್ತಿ ತಡೆಗೆ ಬಳಸುವ Diaphragm: ಲೈಂಗಿಕ ಕ್ರಿಯೆಯಲ್ಲಿ ಹೆಚ್ಚು ತೊಡಗುವ ಮಹಿಳೆಯರು ಸಂತಾನೋತ್ಪತ್ತಿ ತಡೆಗೆ Diaphragm ಬಳಸುತ್ತಾರೆ. ಇಂತಹ ಮಹಿಳೆಯರಲ್ಲಿ ಮೂತ್ರಕೋಶದ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆಗಳು ನಾರ್ಮಲ್ ಆಗಿ ಇರುವವರಿಗಿಂತ ಅತೀ ಹೆಚ್ಚಿನ ಪ್ರಮಾಣದಲ್ಲಿರುತ್ತೆ.
3. ತುಂಬಿದ ಮೂತ್ರಕೋಶ : ಒಂದು ವೇಳೆ ಮೂತ್ರಕೋಶವನ್ನು ಸಂಪೂರ್ಣವಾಗಿ ಮತ್ತು ಸರಿಯಾಗಿ ಖಾಲಿ ಮಾಡದೇ ಇದ್ದಲ್ಲಿ, ಬ್ಯಾಕ್ಟೀರಿಯಾಗಳ ಸಂಖ್ಯೆ ಅಧಿಕಗೊಳ್ಳಲು ಇದು ಕಾರಣವಾಗುತ್ತೆ. ಇದು ಬಸುರಿ ಹೆಂಗಸರಲ್ಲಿ ಹೆಚ್ಚಾಗಿ ಕಂಡುಬರುತ್ತೆ ಮತ್ತು ಪುರುಷರಲ್ಲಿ ಯಾರ ಪ್ರೋಸ್ಟೇಟ್ ಗ್ರಂಥಿಯು ಹಿಗ್ಗಿವುದೋ ಅವರಲ್ಲಿ ಅಧಿಕವಾಗಿರುತ್ತೆ.
4. ಲೈಂಗಿಕ ಸಂಪರ್ಕ: ಲೈಂಗಿಕ ವಾಗಿ ಹೆಚ್ಚು ತೊಡಗಿಸಿಕೊಳ್ಳುವ ಮಹಿಳೆಯರಲ್ಲಿ ಈ ಸಮಸ್ಯೆ ಅಧಿಕವಾಗಿ ಕಂಡುಬರುತ್ತೆ. ಯಾಕೆಂದರೆ ಬ್ಯಾಕ್ಟೀರಿಯಾಗಳು ಯುಥೇರಾ ಮೂಲಕ ಸಾಗಿ ಸೋಂಕನ್ನು ಹೆಚ್ಚಿಸುತ್ತೆ.
5. ಪದೇ ಪದೇ ಮತ್ತು ಹುರುಪಿನ ಲೈಂಗಿಕ ಕ್ರಿಯೆ - ಇದು ದೈಹಿಕ ಹಾನಿಯನ್ನು ಅಧಿಕವಾಗಿಸುತ್ತೆ.ಹಾಗಾಗಿ ಮೂತ್ರಕೋಶದ ಸಮಸ್ಯೆಯಿಂದ ಉರಿಮೂತ್ರ ಕಾಣಿಸಿಕೊಳ್ಳುತ್ತೆ. ಇದನ್ನು ಹನಿಮೂನ್ ಸಿಸೈಟಸ್ ಎಂದು ಕರೆಯಲಾಗುತ್ತೆ.
6. ಈಸ್ಟ್ರೋಜನ್ ಲೆವೆಲ್ ಕಡಿಮೆಯಾಗುವುದು: ಮುಟ್ಟು ನಿಲ್ಲುವ ಸಂದರ್ಬದಲ್ಲಿ, ಈಸ್ಟ್ರೋಜನ್ ಲೆವೆಲ್ ಕಡಿಮೆಯಾಗುತ್ತೆ. ಹಾಗಾಗಿ ಮಹಿಳೆಯರ ಮೂತ್ರನಾಳವು ತೆಳುವಾಗಲಿದೆ,.ಹೀಗೆ ಮೂತ್ರನಾಳದ ಕೊಳವೆ ತೆಳುವಾಗುವುದರ ಪರಿಣಾಮವಾಗಿ ಸೋಂಕು ಮತ್ತು ಹಾಳಾಗುವ ಸಾಧ್ಯತೆಗಳು ಅಧಿಕವಾಗಿರುತ್ತೆ. ಹಾಗಾಗಿ ಮೆನೋಪಾಸ್ ನ ನಂತರ ತೊಂದರೆ ಬರುವ ಸಾಧ್ಯತೆಗಳು ಹೆಚ್ಚಿರುತ್ತೆ.
7. ಲಿಂಗ: ಮಹಿಳೆಯರ ಮೂತ್ರಕೋಶದ ನಾಳವು ಗುದದ ಹತ್ತಿರವೇ ಇರುತ್ತೆ. ಹಾಗಾಗಿ ಬ್ಯಾಕ್ಟೀರಿಯಾ ಹಾಗಾಗಿ ಕರುಳಿನ ಮೂಲಕ ಮೂತ್ರಕೋಶದ ನಾಳಕ್ಕೆ ಬ್ಯಾಕ್ಟೀರಿಯಾ ತಲುಪುವ ಸಾಧ್ಯತೆ ಇವರಲ್ಲಿ ಅಧಿಕವಾಗಿರುತ್ತೆ.
8. Mucus ಕಡಿಮೆಯಾಗುವುದು: ಮೆನೋಪಾಸಿನ ಸಂದರ್ಬದಲ್ಲಿ, ವಜೀನಾದ ಪ್ರದೇಶದಲ್ಲಿ ಮ್ಯೂಕಸ್ ಉತ್ಪತ್ತಿಯು ಹೇರಳವಾಗಿ ಕಡಿಮೆಯಾಗುತ್ತೆ. ಆದರೆ ಈ ಮ್ಯೂಕಸ್ ಬ್ಯಾಕ್ಟೀರಿಯಾಗಳ ವಿರುದ್ಧ ಒಂದು ರಕ್ಷಣಾ ಕವಚದಂತೆ ಕೆಲಸ ಮಾಡುತ್ತೆ.ಇದು ಇಲ್ಲದೇ ಇದ್ದಾಗ ಮೂತ್ರಕೋಶದ ಸಮಸ್ಯೆ ಬರುವ ಸಾಧ್ಯತೆ ಹೆಚ್ಚಿರುತ್ತೆ.
9. ರೆಡಿಯೋಥೆರಪಿ: ರೆಡಿಯೋಥೆರಪಿಯಿಂದ ಮೂತ್ರಕೋಶದಲ್ಲಿ ಏನಾದರೂ ಡ್ಯಾಮೇಜ್ ಆಗಿದ್ದಲ್ಲಿ ಕೂಡ ಈ ಸಮಸ್ಯೆ ಬರಬಹುದು.
10. ಮೂತ್ರಕೋಶದಲ್ಲಿ ಕಾರ್ಯಚಟುವಟಿಕೆಯಲ್ಲಿ ಬ್ಲಾಕ್ - ಮೂತ್ರಕೋಶದ ಕೆಲಸದಲ್ಲಿ ಯಾವುದಾದರೂ ತಡೆ ಇದ್ದಲ್ಲಿ, ಮೂತ್ರವೂ ಸರಿಯಾಗಿ ಪ್ರವಹಿಸಲು ಸಾಧ್ಯವಾಗದೇ ಇದ್ದಾಗ ಈ ಸಮಸ್ಯೆ ಕಾಣುತ್ತೆ. ಇನ್ನಿತರೆ ಮೂತ್ರಕೋಶ ಮತ್ತು ಕಿಡ್ನಿ ಸಮಸ್ಯೆಯೂ ಕೂಡ ಈ ಸಮಸ್ಯೆಗೆ ಕಾರಣವಾಗಿರುತ್ತದೆ ಉರಿಮೂತ್ರಕ್ಕೆ ಚಿಕಿತ್ಸೆಗಳು

ಹೆಚ್ಚಿನ ಉರಿಮೂತ್ರ ಸಮಸ್ಯೆಗಳು ಕೆಲವೇ ದಿನದಲ್ಲಿ ಗುಣಮುಖವಾಗಿ ಬಿಡುತ್ತವೆ. 4 ದಿನಕ್ಕೂ ಅಧಿಕ ಕಾಲ ಒಂದು ವೇಳೆ ಉರಿಮೂತ್ರ ಸಮಸ್ಯೆ ಇದ್ದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸುವುದು ಒಳಿತು. ಅವರು ನಿಮಗೆ 3 ರಿಂದ 7 ದಿನ ಅಥವಾ 10 ದಿನಗಳ ವರೆಗಿನ ಆಂಟಿಬಯೋಟಿಕ್ಸ್ ಕೊಡುವ ಸಾಧ್ಯತೆ ಇರುತ್ತೆ. ಅದು ಪ್ರತಿ ರೋಗಿಯ ಮೇಲೂ ನಿರ್ಧರಿತವಾಗಿರುತ್ತದೆ. ಇದು ಒಂದೇ ದಿನದಲ್ಲಿ ಎಲ್ಲಾ ಲಕ್ಷಣಗಳನ್ನು ಕಡಿಮೆ ಮಾಡುತ್ತಾ ಸಾಗುತ್ತೆ.

ಒಂದು ವೇಳೆ ಆಂಟಿಬಯೋಟಿಕ್ಸ್ ತೆಗೆದುಕೊಂಡ ನಂತರವೂ ಕಡಿಮೆಯಾಗದೇ ಇದ್ದಲ್ಲಿ, ಮತ್ತೆ ವೈದ್ಯರ ಬಳಿ ತೆರಳಬೇಕಾಗುತ್ತದೆ. ವಯಸ್ಸಾದವರಲ್ಲಿ ಮತ್ತು ಯಾರಲ್ಲಿ ರೋಗ ನಿರೋಧಕ ಶಕ್ತಿ ಇರುತ್ತೋ ಅಂತವರಲ್ಲಿ ಸೋಂಕಿನ ಅಪಾಯ ಅಧಿಕವಾಗಿರುತ್ತೆ ಮತ್ತು ಸೋಂಕು ಕಿಡ್ನಿಗೆ ಹರಡಿ ಇನ್ನಷ್ಟು ಸಂದಿಗ್ಧ ಪರಿಸ್ಥಿತಿಯನ್ನು ತಂದೊಡ್ಡುವ ಸಾಧ್ಯತೆಗಳಿರುತ್ತೆ.

ಬಸುರಿ ಹೆಂಗಸರಿಗೆ ಒಂದು ವೇಳೆ ಇಂತಹ ಸಮಸ್ಯೆ ಬಂದಲ್ಲಿ ಕೂಡಲೇ ಚಿಕಿತ್ಸೆ ಪಡೆಯಬೇಕಾಗುತ್ತೆ. ಮುಖ್ಯವಾಗಿ ಈ ಕೆಳಗಿನ ಆಂಟಿ ಬಯೋಟಿಕ್ಸ್ ಗಳನ್ನು ಇದರ ಚಿಕಿತ್ಸೆಗಾಗಿ ಬಳಸಲಾಗುತ್ತೆ. ಟ್ರೈಮೆಥೋಪ್ರಿಮ್ -ಸಲ್ಫಾಮೆಥೋಕ್ಸೋಲ್(sulfamethoxazole), ನ್ಯೂಟ್ರೋಫ್ಯೂರಂಟೈನ್ (nitrofurantoin) ಸಿಪ್ರೋಪ್ಲೋಕ್ಸಾಸಿನ್ (ciprofloxacin), amoxicillin, levofloxacin, ಮತ್ತು ಸೆಫಲೋಸ್ಪೋರಿನ್ಸ್ (cephalosporins).

English summary

Cystitis: Causes and Treatments

Cystitis is more seen among females than males because women have shorter urethras. Around 80 percent of all urinary tract infections (UTIs) occur because of the result of bacteria from the bowel that reach the urinary tract. Majority of these bacteria form part of the healthy intestinal flora, but once they enter the unproductive space in the urethra and bladder, they can cause a urinary tract infection.
X
Desktop Bottom Promotion