For Quick Alerts
ALLOW NOTIFICATIONS  
For Daily Alerts

ನೆನಪಿಡಿ, ಕೈ ತೊಳೆಯುವಾಗ ಇಂತಹ ತಪ್ಪುಗಳನ್ನು ಮಾತ್ರ ಮಾಡಬೇಡಿ!

By Deepu
|

ಯಾವುದೇ ರೀತಿಯ ಆಹಾರ ಸೇವನೆಗೆ ಮೊದಲು ಅಥವಾ ಶೌಚಾಲಯಕ್ಕೆ ಹೋಗಿಬಂದ ಬಳಿಕ ಸರಿಯಾಗಿ ಕೈಗಳನ್ನು ತೊಳೆಯಬೇಕು ಎಂದು ಬಾಲ್ಯದಲ್ಲೇ ನಮಗೆ ಹೇಳಿಕೊಡಲಾಗುತ್ತದೆ. ಈ ಕ್ರಮ ಅಳವಡಿಸಿಕೊಂಡು ಹೋದರೆ ಆಗ ಆರೋಗ್ಯಕಾರಿಯಾಗಿ ಇರಬಹುದು ಮತ್ತು ಕಾಯಿಲೆಗಳು ಹರಡದಂತೆ ತಡೆಯಬಹುದು. ಈ ಲೇಖನದಲ್ಲಿ ಕೈ ತೊಳೆಯುವಾಗ ಮಾಡುವಂತಹ ಕೆಲವು ತಪ್ಪುಗಳ ಬಗ್ಗೆ ತಿಳಿಸಿಕೊಡಲಿದ್ದೇವೆ. ಸ್ಕಾಟ್ ಲೆಂಡ್ ನ ವಿಜ್ಞಾನಿಗಳು ಇದಕ್ಕೊಂದು ಪರ್ಯಾಯ ಹುಡುಕಿದ್ದಾರೆ. ಇದನ್ನು ವಿಶ್ವ ಆರೋಗ್ಯ ಸಂಸ್ಥೆ ಕೂಡ ಒಪ್ಪಿಕೊಂಡಿದೆ. ಇದು ಕೈಯಲ್ಲಿರುವಂತಹ ಬ್ಯಾಕ್ಟೀರಿಯಾಗಳನ್ನು ಪರಿಣಾಮಕಾರಿಯಾಗಿ ನಿವಾರಣೆ ಮಾಡುವುದು.

ಕೈಗಳನ್ನು ಸ್ವಚ್ಛವಾಗಿಟ್ಟುಕೊಂಡರೆ ಮಾತ್ರ ಸೋಂಕನ್ನು ಪರಿಣಾಮಕಾರಿಯಾಗಿ ತಡೆಯಬಹುದು. ಇದರಿಂದ ನಮ್ಮ ಹಾಗೂ ಕುಟುಂಬದವರಿಗೆ ಸೋಂಕು ಹರಡುವುದು ತಪ್ಪುವುದು. ಆರೋಗ್ಯ ತಜ್ಞರ ಪ್ರಕಾರ ಕೆಲವೊಂದು ಬ್ಯಾಕ್ಟೀರಿಯಾ ವಿರೋಧಿ ಸೋಪುಗಳು ಒಳ್ಳೆಯದಕ್ಕಿಂತ ಹೆಚ್ಚು ಕೆಡುಕನ್ನು ಉಂಟು ಮಾಡುವುದು. ನೀರು ಮತ್ತು ಸೋಪು ಲಭ್ಯವಿಲ್ಲದೆ ಇದ್ದರೆ ಆಗ ಶೇ.60ರಷ್ಟು ಆಲ್ಕೋಹಾಲ್ ಪ್ರಮಾಣವಿರುಂತಹ ಹ್ಯಾಂಡ್ ಸ್ಯಾನಿಟೈಸರ್ ಬಳಸಿ. ಕೈತೊಳೆಯುವ ಕೆಲವೊಂದು ಸಾಮಾನ್ಯ ತಪ್ಪುಗಳನ್ನು ತಡೆಯುವುದು ಹೇಗೆ ಎಂದು ನೀವು ಇಲ್ಲಿ ತಿಳಿಯಿರಿ...

ದೀರ್ಘಕಾಲದ ತನಕ ಕೈಗಳನ್ನು ತೊಳೆಯದೆ ಇರುವುದು

ದೀರ್ಘಕಾಲದ ತನಕ ಕೈಗಳನ್ನು ತೊಳೆಯದೆ ಇರುವುದು

ಕೈಗಳಲ್ಲಿ ಇರುವಂತಹ ಕೀಟಾಣುಗಳನ್ನು ಪರಿಣಾಮಕಾರಿಯಾಗಿ ಕೊಲ್ಲಲು ಶೇ.95ರಷ್ಟು ಜನರು ದೀರ್ಘಕಾಲ ಕೈಗಳನ್ನು ತೊಳೆಯಲ್ಲ. ಸರಕಾರಿ ಕೈತೊಳೆಯುವ ಸಮಯವು ಕೇವಲ ಆರು ಸೆಕೆಂಡುಗಳು ಎಂದು ಅಧ್ಯಯನಗಳು ಹೇಳಿವೆ. ಶೇ.15ರಷ್ಟು ಪುರುಷರು ಮತ್ತು ಶೇ. 7ರಷ್ಟು ಮಹಿಳೆಯರು ಶೌಚಾಲಯ ಬಳಸಿದ ಬಳಿಕ ಕೈಗಳನ್ನು ಸರಿಯಾಗಿ ತೊಳೆಯಲ್ಲ.

ಶೌಚಾಲಯ ಬಳಸಿದ ಬಳಿಕ ಮಾತ್ರ ಕೈ ತೊಳೆಯುವುದು

ಶೌಚಾಲಯ ಬಳಸಿದ ಬಳಿಕ ಮಾತ್ರ ಕೈ ತೊಳೆಯುವುದು

ಲಿಫ್ಟ್ ನ ಬಟನ್ ಗಳು, ಬಾಗಿಲಿನ ಹಿಡಿ ಮತ್ತು ಎಟಿಎಂ ನ್ನು ನೀವು ಪ್ರತಿನಿತ್ಯ ಬಳಸುತ್ತಿರಬಹುದು. ಇದರಿಂದ ಕೈಗಳಿಗೆ ಬ್ಯಾಕ್ಟೀರಿಯಾ ಬರುವ ಸಾಧ್ಯತೆಯಿದೆ. ಹೆಚ್ಚಿನ ಜನರು ಶೌಚಾಲಯ ಬಳಸಿದ ಬಳಿಕ ಮಾತ್ರ ಕೈಗಳನ್ನು ತೊಳೆಯುವರು. ನೀವು ಮುಟ್ಟಿದ ಪ್ರತಿಯೊಂದು ವಸ್ತುವಿನಲ್ಲಿ ಬ್ಯಾಕ್ಟೀರಿಯಾ ಇರಬಹುದು. ಅದರಲ್ಲೂ ಚಳಿಗಾಲದಲ್ಲಿ ಇದು ಹೆಚ್ಚಾಗಿರುವ ಕಾರಣ ಕೈಗಳನ್ನು ಸರಿಯಾಗಿ ತೊಳೆಯಿರಿ.

ದೀರ್ಘ ಕಾಲ ತನಕ ಸೋಪನ್ನು ಉಜ್ಜದಿರುವುದು

ದೀರ್ಘ ಕಾಲ ತನಕ ಸೋಪನ್ನು ಉಜ್ಜದಿರುವುದು

ಕೈಗಳನ್ನು ತೊಳೆಯುವುದು ಹೇಗೆ? ಕೈಗಳನ್ನು ತೊಳೆಯಲು ಕನಿಷ್ಠ ಪಕ್ಷ 20-30 ಸೆಕೆಂಡುಗಳ ಕಾಲ ಕೈಗಳನ್ನು ಸೋಪಿಗೆ ಉಜ್ಜಿಕೊಳ್ಳಬೇಕು. ಅಂಗೈಯನ್ನು ಸರಿಯಾಗಿ ಉಜ್ಜಿಕೊಳ್ಳೀ. ಕೈಯ ಹಿಂಭಾಗ ಮತ್ತು ಕೈಬೆರಳಿನ ನಡು ಹೀಗೆ ಸರಿಯಾಗಿ ಸೋಪು ಹಾಕಿಕೊಳ್ಳಿ. ಕೈಬೆರಳುಗಳ ಉಗುರು ಮತ್ತು ಬೆರಳುಗಳ ನಡುವೆ ಹೆಚ್ಚಿನ ಬ್ಯಾಕ್ಟೀರಿಯಾ ಇರುವುದು. ಇದರಿಂದ ಕೈಗಳನ್ನು ತೊಳೆಯುವಾಗ ನೀವು ಇದರ ಕಡೆ ಹೆಚ್ಚಿನ ಗಮನಹರಿಸಿ. ಎರಡು ಕೈಗಳನ್ನು ಸರಿಯಾಗಿ ಉಜ್ಜಿಕೊಳ್ಳುವುದು ಕೈಯಲ್ಲಿ ಇರುವಂತಹ ಧೂಳು, ಗ್ರೀಸ್ ಮತ್ತು ಸೂಕ್ಷ್ಮಾಣುಗಳನ್ನು ಚರ್ಮದಿಂದ ತೆಗೆಯುವುದು.

ಸರಿಯಾಗಿ ಕೈಗಳನ್ನು ಒಣಗಿಸದೆ ಇರುವುದು

ಸರಿಯಾಗಿ ಕೈಗಳನ್ನು ಒಣಗಿಸದೆ ಇರುವುದು

ಕೈಗಳನ್ನು ತೊಳೆದ ಬಳಿಕ ಸರಿಯಾಗಿ ಒಣಗಿಸದೆ ಇದ್ದರೆ ಆಗ ಯಾವುದೇ ರೀತಿಯ ಪ್ರಯೋಜನವು ಸಿಗುವುದಿಲ್ಲ. ಕೈಗಳು ಒಣಗಿದ್ದಾಗಲೇ ನೀವು ಶೌಚಾಲಯದಿಂದ ಹೊರಬಂದರೆ ಆಗ ಇತರ ಕಡೆಗಳಲ್ಲಿ ಇರುವಂತಹ ಬ್ಯಾಕ್ಟೀರಿಯಾಗಳು ಕೈಯನ್ನು ಸೇರಿಕೊಳ್ಳಬಹುದು. ಶೌಚಾಲಯದಲ್ಲಿ ಬಿಸಿ ಗಾಳಿ ಮತ್ತು ಕಾಗದದ ಟವೆಲ್ ಬಳಸಿ. ಪೇಪರ್ ಟವೆಲ್ ಬಳಸಿದರೆ ಅದರಿಂದ ಕೈಗಳು ಬೇಗನೆ ಒಣಗುವುದು. ಬಿಸಿ ಗಾಳಿ ಮಾತ್ರ ನಿಮಗೆ ಲಭ್ಯವಿದ್ದರೆ ಆಗ ಸರಿಯಾಗಿ ಕೈಗಳನ್ನು ಒಣಗಿಸಿ.

ಬಿಸಿ ನೀರು ಮಾತ್ರ ಕೀಟಾಣು ಕೊಲ್ಲುವುದು

ಬಿಸಿ ನೀರು ಮಾತ್ರ ಕೀಟಾಣು ಕೊಲ್ಲುವುದು

ಬಿಸಿ ನೀರು ಅಥವಾ ಉಗುರುಬೆಚ್ಚಗಿನ ನೀರಿನಿಂದ ಕೈಗಳನ್ನು ತೊಳೆದರೆ ಆಗ ಕೀಟಾಣುಗಳು ಕೊಲ್ಲಲ್ಪಡುವುದು ಎನ್ನುವ ನಂಬಿಕೆಯಿದೆ. ಆದರೆ ಇತ್ತೀಚಿನ ಅಧ್ಯಯನವೊಂದರೆ ಪ್ರಕಾರ ತಣ್ಣೀರು ಕೂಡ ಬಿಸಿನೀರಿನಂತೆ ಬ್ಯಾಕ್ಟೀರಿಯಾ ಕೊಲ್ಲಬಹುದು. ಆದರೆ ಇದಕ್ಕೆ ಸರಿಯಾಗಿ ಕೈಗಳನ್ನು ಸ್ಕ್ರಬ್ ಮಾಡಿ, ತೊಳೆದು ಒಣಗಿಸಬೇಕು. ಬ್ಯಾಕ್ಟೀರಿಯಾಗಳನ್ನು ಕೊಲ್ಲಲು ನೀರನ್ನು ನೀವು 212 ಡಿಗ್ರಿ ಫಾರನ್ಹೀಟ್ ನಲ್ಲಿ ಬಿಸಿ ಮಾಡಬೇಕು.

ಕೈಗಳನ್ನು ತೊಳೆದ ಕೂಡಲೇ ಬೇರೆ ವಸ್ತುಗಳನ್ನು ಮುಟ್ಟುವುದು

ಕೈಗಳನ್ನು ತೊಳೆದ ಕೂಡಲೇ ಬೇರೆ ವಸ್ತುಗಳನ್ನು ಮುಟ್ಟುವುದು

ಕೈಗಳನ್ನು ತೊಳೆದ ಬಳಿಕ ನೀವು ಬೇರೆ ವಸ್ತುಗಳನ್ನು ಮುಟ್ಟುತ್ತೀರಾ? ಹೌದೆಂದಾದರೆ, ಆಗ ನಲ್ಲಿ ನೀರನ್ನು ನಿಲ್ಲಿಸಲು ಮತ್ತು ಬಾಗಿಲಿನ ಚಿಲಕ ತೆಗೆಯಲು ನೀವು ಪೇಪರ್ ಟವೆಲ್ ಬಳಸಿಕೊಳ್ಳುವುದು ಅತೀ ಅಗತ್ಯ. ಅಧ್ಯಯನದ ಪ್ರಕಾರ ಶೌಚಾಲಯದ ನಲ್ಲಿಗಳಲ್ಲಿ ಶೇ.27 ಮತ್ತು ಶೇ. 5ರಷ್ಟು ಬಾಗಿಲಿನ ಹಿಡಿಯಲ್ಲಿ ಬ್ಯಾಕ್ಟೀರಿಯಾಗಳು ಇರುವುದು.

ಸೋಪು ಬಿಟ್ಟು ಹ್ಯಾಂಡ್ ಸ್ಯಾನಿಟೈಸರ್ ಬಳಸುವುದು

ಸೋಪು ಬಿಟ್ಟು ಹ್ಯಾಂಡ್ ಸ್ಯಾನಿಟೈಸರ್ ಬಳಸುವುದು

ಹ್ಯಾಂಡ್ ಸ್ಯಾನಿಟೈಸರ್ ನಲ್ಲಿ ಇರುವಂತಹ ಆಲ್ಕೋಹಾಲ್ ಸೂಕ್ಷ್ಮಾಣು ಜೀವಿಗಳನ್ನು ಪರಿಣಾಮಕಾರಿಯಾಗಿ ತೆಗೆದುಹಾಕುವುದು. ಆದರೆ ಇದು ಕೂಡ ಕೆಲವೊಂದು ರೀತಿಯ ಬ್ಯಾಕ್ಟೀರಿಯಾಗಳನ್ನು ನಿವಾರಣೆ ಮಾಡಲು ಸಾಧ್ಯವಿಲ್ಲವೆಂದು ಕಾಯಿಲೆ ತಡೆ ಹಾಗೂ ನಿಯಂತ್ರಣ ಕೇಂದ್ರವು ಹೇಳಿ. ಹೆಚ್ಚಿನ ಜನರು ಅತಿಯಾಗಿ ಸ್ಯಾನಿಟೈಸರ್ ಬಳಸುವರು. ಮಿತಿಯಲ್ಲಿ ಕೈಗೆ ಹಾಕಿಕೊಂಡು ತೊಳೆಯಿರಿ.

ಬಳಸುವ ಮೊದಲು ಸೋಪ್ ತೊಳೆಯದೆ ಇರುವುದು.

ಬಳಸುವ ಮೊದಲು ಸೋಪ್ ತೊಳೆಯದೆ ಇರುವುದು.

ಕಾಯಿಲೆ ನಿಯಂತ್ರಣ ಹಾಗೂ ತಡೆ ಕೇಂದ್ರ ಪ್ರಕಾರ ಅಧ್ಯಯನವೊಂದು ಹೇಳಿರುವಂತೆ ಕೀಟಾಣುಗಳು ನೀವು ಕೈತೊಳೆಯುವ ಮೊದಲು ಮತ್ತು ಬಳಿಕ ಸೋಪ್ ನಲ್ಲಿ ಅಡಗಿಕೊಳ್ಳಹುದು. ಸೋಪ್ ನಲ್ಲಿ ಬ್ಯಾಕ್ಟೀರಿಯಾ ಜೀವಿಸಬಹುದು ಮತ್ತು ಇದರಿಂದ ಪ್ರತೀ ಸಲ ಬಳಸುವ ಮೊದಲು ಅದನ್ನು ಸರಿಯಾಗಿ ತೊಳೆಯಬೇಕು. ಇದರ ಬಳಿಕ ಒಣಗಿರುವಂತಹ ಜಾಗದಲ್ಲಿ ಇದನ್ನು ಇಡಬೇಕು.

 ಕೈಗಳನ್ನು ತೊಳೆಯಲು ಸೋಪ್ ಬಳಸದೆ ಇರುವುದು

ಕೈಗಳನ್ನು ತೊಳೆಯಲು ಸೋಪ್ ಬಳಸದೆ ಇರುವುದು

ಕೈಗಳಿಂದ ಬರುವ ವಾಸನೆ ಸಹಿತ ಹಲವಾರು ರೀತಿಯ ಉಪಯೋಗಗಳು ಸೋಪ್ ನಿಂದ ಆಗುವುದು. ಸೋಪಿನಲ್ಲಿ ಇರುವಂತಹ ರಾಸಾಯನಿಕದ ಮಿಶ್ರಣವು ಚರ್ಮದಲ್ಲಿ ಇರುವಂತಹ ಕೆಟ್ಟ ಬ್ಯಾಕ್ಟೀರಿಯಾಗಳನ್ನು ನಿವಾರಣೆ ಮಾಡುವುದು. ಬ್ಯಾಕ್ಟೀರಿಯಾ ವಿರೋಧಿ ಸೋಪುಗಳು ತುಂಬಾ ಪರಿಣಾಮಕಾರಿ ಎನ್ನುವುದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ. ನೀವು ಲಿಕ್ವಿಡ್ ಸೋಪುಗಳನ್ನು ಬಳಸಿದರೆ ಅದು ತುಂಬಾ ಪರಿಣಾಮಕಾರಿಯಾಗಿರುವುದು. ಇದು ಕಲುಷಿತಗೊಳ್ಳುವುದು ಕಡಿಮೆ.

ರೀಫಿಲ್ಡ್ ಡಿಸ್ಪ್ಯಾನ್ಸರ್ ನಿಂದ ಸೋಪು ಬಳಸುವುದು

ರೀಫಿಲ್ಡ್ ಡಿಸ್ಪ್ಯಾನ್ಸರ್ ನಿಂದ ಸೋಪು ಬಳಸುವುದು

ಲಿಕ್ವಿಡ್ ಸೋಪು ಡಿಸ್ಪ್ಯಾನ್ಸರ್ ಗಳು ಹಾನಿಕಾರಕವಲ್ಲವೆಂದು ನೀವು ಭಾಗಿಸಿರಬಹುದು. ಆದರೆ ಅಧ್ಯಯನಗಳ ಪ್ರಕಾರ ಸೋಪು ಡಿಸ್ಪ್ಯಾನ್ಸರ್ ಗಳು ದೊಡ್ಡ ಲಿಕ್ವಿಡ್ ಬಾಟಲಿಗಳಿಂದ ತುಂಬುವುದರಿಂದ ಇದರಲ್ಲಿ ಬ್ಯಾಕ್ಟೀರಿಯಾಗಳು ನೆಲೆನಿಲ್ಲುವಂತಹ ಸಾಧ್ಯತೆಗಳು ಹೆಚ್ಚಿವೆ. ಇದರಿಂದ ಸೀಲ್ ಇರುವಂತಹ ಸೋಪ್ ಡಿಸ್ಪ್ಯಾನ್ಸರ್ ಗಳನ್ನು ಬಳಸಿ. ಇದು ಕೈ ತೊಳೆಯುವಾಗ ಮಾಡುವಂತಹ ತಪ್ಪುಗಳು.

 20 ಸೆಕೆಂಡುಗಳ ಕಾಲ...

20 ಸೆಕೆಂಡುಗಳ ಕಾಲ...

ರೋಗ ನಿಯಯಂತ್ರಣ ಹಾಗೂ ತಡೆ ಕೇಂದ್ರದ ಪ್ರಕಾರ ಪ್ರತಿಯೊಬ್ಬರು ಸೂಕ್ಷ್ಮಾಣು ಜೀವಿಗಳನ್ನು ಕೊಲ್ಲಬೇಕಾದರೆ ಸುಮಾರು 20 ಸೆಕೆಂಡುಗಳ ಕಾಲ ಕೈ ತೊಳೆದುಕೊಳ್ಳಬೇಕು. ಕೇವಲ ಎರಡು ಸೆಕೆಂಡುಗಳ ಕಾಲ ನೀವು ಕೈಗೆ ಸಾಬೂನು ಹಾಕಿಕೊಂಡು ಉಜ್ಜಿದರೆ ಅದರಿಂದ ಯಾವುದೇ ರೀತಿಯ ಪ್ರಯೋಜನವಿಲ್ಲ. 20 ಸೆಕೆಂಡು ಎಷ್ಟು ಎಂದು ನಿಮಗೆ ಗೊಂದಲವಿದ್ದರೆ ಆಗ ನೀವು ಹ್ಯಾಪಿ ಬರ್ತ್ ಡೇ ಟು ಯೂ....' ಹಾಡನ್ನು ಮನಸ್ಸಿನಲ್ಲೇ ಎರಡು ಸಲ ಹಾಡಿ. ಆದರೆ ಇಡೀ ದಿನ ಈ ಹಾಡು ನಿಮ್ಮ ತಲೆಯಲ್ಲೇ ತಿರುಗುತ್ತಾ ಇದ್ದರೆ ಅದು ದೊಡ್ಡ ಸಮಸ್ಯೆಯಾಗಬಹುದು.

ಸೋಪು vs ಹ್ಯಾಂಡ್ ಸ್ಯಾನಿಟೈಸರ್: ಇದರಲ್ಲಿ ಉತ್ತಮ ಯಾವುದು?

ಸೋಪು vs ಹ್ಯಾಂಡ್ ಸ್ಯಾನಿಟೈಸರ್: ಇದರಲ್ಲಿ ಉತ್ತಮ ಯಾವುದು?

ನೀವು ನೀರಿಲ್ಲದೆ ಕಡೆಗೆ ಪ್ರಯಾಣ ಬೆಳೆಸುತ್ತಿರಬೇಕಾದರೆ ಈ ಸಮಯದಲ್ಲಿ ನಿಮಗೆ ಹ್ಯಾಂಡ್ ಸ್ಯಾನಿಟೈಸರ್ ಅಗತ್ಯವಾಗಿ ಬೇಕಾಗುವುದು. ಶೇ.60ರಷ್ಟು ಆಲ್ಕೋಹಾಲ್ ಇರುವಂತಹ ಹ್ಯಾಂಡ್ ಸ್ಯಾನಿಟೈಸರ್ ಬಳಸಿಕೊಳ್ಳಿ. ಆದರೆ ದಿನನಿತ್ಯದ ಬಳಕೆಗೆ ನಿಮಗೆ ಸೋಪು ಮತ್ತು ನೀರು ತುಂಬಾ ಒಳ್ಳೆಯ ಆಯ್ಕೆ. ಆದರೆ ಸೋಪುಗಳಿಗೆ ಹಾಕಿರುವಂತಹ ಆ್ಯಂಟಿಬಯೋಟಿಕ್ ಗಳು ತುಂಬಾ ಕೆಟ್ಟದು. ಯಾಕೆಂದರೆ ಇದು ಸೂಕ್ಷ್ಮಾಣು ಜೀವಿಗಳಲ್ಲಿ ಪ್ರತಿರೋಧಕ ಶಕ್ತಿ ಹೆಚ್ಚಿಸುವುದು. ವೈದ್ಯಕೀಯ ಲೋಕದಲ್ಲೂ ಇದು ದೊಡ್ಡ ಸಮಸ್ಯೆ ಎಂದು ಪರಿಗಣಿಸಲಾಗಿದೆ.

ಸರಿಯಾಗಿ ಕೈ ತೊಳೆದುಕೊಳ್ಳಲು- ಸ್ಟೆಪ್ ಬೈ ಸ್ಟೆಪ್ ಟಿಪ್ಸ್

ಸರಿಯಾಗಿ ಕೈ ತೊಳೆದುಕೊಳ್ಳಲು- ಸ್ಟೆಪ್ ಬೈ ಸ್ಟೆಪ್ ಟಿಪ್ಸ್

*ಮೊದಲಿಗೆ ಎರಡೂ ಕೈಗಳನ್ನು ಸುಮಾರು ಅರ್ಧ ಮೊಣಕೈಗಳವರೆಗೂ ನೆನೆಯುವಂತೆ ತೋಯಿಸಿಕೊಳ್ಳಬೇಕು. ಕೊಂಚ ಸೋಪು ಅಥವಾ ಸೋಪಿನ ದ್ರಾವಣವನ್ನು ಒಂದು ಹಸ್ತದ ನಡುವೆ ಸುರಿದು ಎರಡೂ ಹಸ್ತಗಳಿಂದ ಚೆನ್ನಾಗಿ ಉಜ್ಜಿ ನೊರೆನೊರೆಯಾಗುವಂತೆ ಮಾಡಬೇಕು.

*ಈಗ ಬಲಹಸ್ತದ ಮುಂಭಾಗದಿಂದ ಎಡಹಸ್ತದ ಹಿಂಭಾಗಕ್ಕೂ, ಎಡಹಸ್ತದ ಮುಂಭಾಗದಿಂದ ಬಲಹಸ್ತದ ಹಿಂಭಾಗಕ್ಕೂ ನೊರೆ ಹಚ್ಚಬೇಕು. ಬೆರಳುಗಳನ್ನು ಕೆಳಗಿನ ಹಸ್ತದ ಬೆರಳುಗಳ ನಡುವೆ ಓಡಾಡಿಸಿ ಸಂದುಗಳಲ್ಲಿಯೂ ನೊರೆ ತುಂಬಿಕೊಳ್ಳುವಂತೆ ಮಾಡಬೇಕು. ಸಾಮಾನ್ಯವಾಗಿ ಬೆರಳುಗಳ ಸಂದುಗಳನ್ನು ನಾವು ಸರಿಯಾಗಿ ತೊಳೆದುಕೊಳ್ಳುವುದೇ ಇಲ್ಲ. ಈ ಕ್ರಮದ ಮೂಲಕ ಸಂದುಗಳು ಪೂರ್ಣವಾಗಿ ಸ್ವಚ್ಛಗೊಳ್ಳುತ್ತವೆ.

*ಈಗ ಎರಡೂ ಹಸ್ತಗಳನ್ನು ಒಂದಕ್ಕೊಂದು ತಾಕಿಸಿ ಬೆರಳುಗಳನ್ನು ಒಂದರ ಒಳಗೊಂದು ಬರುವಂತೆ ಕೊಂಚ ಒತ್ತಡದಿಂದ ಉಜ್ಜಿಕೊಳ್ಳಿ.

*ಈ ಹಂತದಲ್ಲಿ ಎರಡೂ ಹಸ್ತದ ಬೆರಳುಗಳನ್ನು ಕೊಕ್ಕೆಯಂತೆ ಅರ್ಧ ಮಡಚಿ ಎರಡೂ ಕೊಕ್ಕೆಗಳನ್ನು ಒಂದಕ್ಕೊಂದು ಸಿಕ್ಕಿಸಿ. ಅಂದರೆ ಕಿರುಬೆರಳಿಗೆ ತೋರು ಬೆರಳು, ತೋರು ಬೆರಳಿಗೆ ಕಿರುಬೆರಳು ಬರುವಂತೆ. ಈಗ ಎರಡು ಹಸ್ತಗಳನ್ನು ಅಡ್ಡಲಾಗಿ ಉಜ್ಜಿ.ಈ ವಿಧಾನದಿಂದ ಬೆರಳುಗಳು ಮಡಚುವಲ್ಲಿನ ಗೆರೆಗಳ ಸೂಕ್ಷ್ಮ ಬಿರುಕಿನಲ್ಲಿದ್ದ ಕೊಳೆ ನೇರವಾಗಿ ಉಜ್ಜಿಕೊಳ್ಳದಿದ್ದಾಗ ಹೋಗದಿದ್ದುದು ಈಗ ಹೋಗುತ್ತದೆ. ಬಳಿಕ ಎಡ ಹೆಬ್ಬರಳನ್ನು ಬಲಗೈಯ ಉಳಿದ ನಾಲ್ಕೂ ಬೆರಳುಗಳು ಸುತ್ತುವರೆಯುವಂತೆ ಹಿಡಿದು ಎಡಮುಖ ಮತ್ತು ಬಲಮುಖವಾಗಿ ತಿರುಗಿಸಿ. ಇದೇ ವಿಧಾನವನ್ನು ಬಲಗೈ ಹೆಬ್ಬರಳಿಗೂ ಪುನರವರ್ತಿಸಿ.

*ಬಳಿಕ ಬಲಗೈಯ ಐದೂ ಬೆರಳುಗಳ ತುದಿ ಒಂದೆಡೆ ಬರುವಂತೆ ಮುಚ್ಚಿ ಈ ತುದಿಗಳಿಂದ ಎಡಹಸ್ತದ ನಡುಭಾಗದಲ್ಲಿ ಕೊಂಚವೇ ಒತ್ತಡದಿಂದ ವೃತ್ತಾಕಾರದಲ್ಲಿ ತಿರುಗಿಸಿ. ಇದೇ ರೀತಿ ಎಡಗೈಗೂ ಪುನರಾವರ್ತಿಸಿ. ಇದರಿಂದ ಹಸ್ತದ ಸೂಕ್ಷಗೆರೆಗಳಲ್ಲಿರುವ ಕೊಳೆ ಇಲ್ಲವಾಗುತ್ತದೆ.

ಸ್ವಚ್ಛತೆಗಾಗಿ ಕೆಲವು ಟಿಪ್ಸ್

ಸ್ವಚ್ಛತೆಗಾಗಿ ಕೆಲವು ಟಿಪ್ಸ್

* ಕೈ ತೊಳೆದುಕೊಂಡ ಬಳಿಕ ನಲ್ಲಿಯ ತಿರುಗಣೆಯನ್ನು ಬರೆಯ ಕೈಗಳಿಂದ ಮುಟ್ಟಬೇಡಿ. ಬದಲಿಗೆ ಟಿಶ್ಯೂ ಪೇಪರ್ ಒಂದರ ಸಹಾಯದಿಂದ ಮುಟ್ಟಿ ಬಂದ್ ಮಾಡಿ.

* ಕೈ ತೊಳೆದುಕೊಂಡ ಬಳಿಕ ನಿಮ್ಮ ಕರ್ಚೀಫ್ ಅಥವಾ ಟಿಶ್ಯೂ ಕಾಗದದಿಮ್ದ ಒರೆಸಿ ಒಣಗಿಸಿಕೊಳ್ಳುವುದು ಅವಶ್ಯ, ಹಾಗೇ ಒಣಗಲು ಬಿಡಬಾರದು.

* ಹಿಂದಿನ ಕಾಲದಲ್ಲಿದ್ದಂತೆ ಒಂದೇ ಟವೆಲ್ಲಿನಿಂದ ಒಬ್ಬರಿಗಿಂತ ಹೆಚ್ಚು ವ್ಯಕ್ತಿಗಳು ಕೈ ಒರೆಸಿಕೊಳ್ಳಬಾರದು. ಸಾಧ್ಯವಾದಷ್ಟು ಪ್ರತ್ಯೇಕವಾದ ಟವೆಲ್ಲುಗಳನ್ನೇ ಉಪಯೋಗಿಸಬೇಕು.

* ಸಾರ್ವಜನಿಕ ಶೌಚಾಲಯದ ಬಾಗಿಲ ಹಿಡಿಕೆಗಳನ್ನು ಮುಟ್ಟಿದ ಬಳಿಕವೂ ಇದೇ ರೀತಿ ಕೈ ತೊಳೆದುಕೊಳ್ಳುವುದು ಅವಶ್ಯ.

English summary

Common Hand Washing Mistakes You Are Probably Making

When we were small as children, we were often taught at a young age to wash our hands before eating and after using the restroom. This is an effective way to stay healthy and avoid spreading diseases. In this article, we will be discussing the common hand washing mistakes. In a study, scientists in Scotland found that an alternative technique, recommended by the World Health Organisation was significantly more effective in reducing the median bacteria count on your hands.
X
Desktop Bottom Promotion