For Quick Alerts
ALLOW NOTIFICATIONS  
For Daily Alerts

ಕೋಳಿ VS ಟರ್ಕಿ ಕೋಳಿ ಮಾಂಸ-ಯಾವುದು ಆರೋಗ್ಯಕ್ಕೆ ಆರೋಗ್ಯಕಾರಿ?

|

ಪೋಷಕಾಂಶಗಳ ವಿಷಯ ಬಂದಾಗ ಕೋಳಿ ಮಾಂಸ ಉತ್ತಮವೋ ಟರ್ಕಿ ಕೋಳಿ ಮಾಂಸ ಉತ್ತಮವೋ ಎಂಬ ಪ್ರಶ್ನೆ ಹಲವರಲ್ಲಿ ಎದುರಾಗಿರವಹುದು. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವವರು ಈ ಬಗ್ಗೆ ಹೆಚ್ಚಿನ ಕುತೂಹಲ ವ್ಯಕ್ತಪಡಿಸುತ್ತಾರೆ. ಆರೋಗ್ಯ ಮತ್ತು ದೇಹದಾರ್ಢ್ಯತೆಯ ವಿಷಯ ಬಂದಾಗ ಕೋಳಿ ಮತ್ತು ಟರ್ಕಿ ಎರಡೂ ಮಾಂಸಗಳು ಉತ್ತಮ ಆಯ್ಕೆಯಾಗಿದ್ದು ಎರಡೂ ಮಾಂಸಗಳಲ್ಲಿ ಸಾಕಷ್ಟು ಪ್ರಮಾಣದ ಪೋಷಕಾಂಶಗಳಿವೆ ಹಾಗೂ ಪ್ರೋಟೀನುಗಳಿವೆ.

ಇವು ಸ್ನಾಯುಗಳ ಬೆಳವಣಿಗೆಗೆ ಹಾಗೂ ದೇಹವನ್ನು ಹುರಿಗಟ್ಟಿಸಲು ನೆರವಾಗುತ್ತವೆ. ಅಲ್ಲದೇ ಇವೆರಡೂ ಮಾಂಸಗಳಲ್ಲಿ ಕ್ಯಾಲೋರಿಗಳು ಕಡಿಮೆ ಇರುವ ಕಾರಣ ತೂಕ ಕಳೆದುಕೊಳ್ಳಲಿಚ್ಛಿಸುವ ಮಾಂಸಾಹಾರಿಗಳಿಗೆ ಸೂಕ್ತ ಆಹಾರವಾಗಿವೆ. ಕ್ರೀಡಾಪಟುಗಳು ಮತ್ತು ತೂಕ ಕಳೆದುಕೊಳ್ಳಲಿಚ್ಛಿಸುವವರು ತಮ್ಮ ದೇಹದಿಂದ ಕೊಬ್ಬನ್ನು ನಿವಾರಿಸಲು ಹೆಚ್ಚಿನ ಮಹತ್ವ ನೀಡುತ್ತಾರೆ ಹಾಗೂ ಇದಕ್ಕಾಗಿ ಕೋಳಿ ಅಥವಾ ಟರ್ಕಿ ಮಾಂಸವನ್ನೇ ಹೆಚ್ಚಾಗಿ ಸೇವಿಸುತ್ತಾರೆ.

ಮಾಂಸದ ಕೋಳಿಗಳನ್ನು ಚಪ್ಪರಿಸುವ ಮುನ್ನ, ಇರಲಿ ಎಚ್ಚರ!

ಆದರೆ ಎರಡರಲ್ಲಿಯೂ ಕೊಂಚವಾದರೂ ವ್ಯತ್ಯಾಸ ಇರಲೇಬೇಕಲ್ಲವೇ? ಬನ್ನಿ, ಇವೆರಡರಲ್ಲಿ ಏನು ವ್ಯತ್ಯಾಸವಿದೆ, ಯಾವ ಆಹಾರದ ಸೇವನೆ ಹೆಚ್ಚು ಉಪಯುಕ್ತ, ಯಾವುದರಲ್ಲಿ ಹೆಚ್ಚು ಪೋಷಕಾಂಶಗಳಿವೆ ಎಂಬುದನ್ನೊ ನೋಡೋಣ...

ಸಮನಾಗಿರುವ ಪ್ರಮುಖ ಪೋಷಕಾಂಶಗಳು

ಸಮನಾಗಿರುವ ಪ್ರಮುಖ ಪೋಷಕಾಂಶಗಳು

ಪೋಷಕಾಂಶಗಳ ಪಟ್ಟಿಯನ್ನು ಗಮನಿಸಿದರೆ ಎರಡೂ ಮಾಂಸಗಳಲ್ಲಿ ಹೆಚ್ಚಿನ ವ್ಯತ್ಯಾಸವೇನೂ ಕಂಡುಬರುವುದಿಲ್ಲ. ಇವೆರಡೂ ಸುಲಭವಾಗಿ ಜೀರ್ಣವಾಗುವ ಬಿಳಿಯ ಮಾಂಸಗಳಾಗಿವೆ. ಆದರೂ ಅಲ್ಪವಾದ ಕೆಲವು ವ್ಯತ್ಯಾಸಗಳಿವೆ. ಮಾಂಸವನ್ನು ಹುರಿಗಟ್ಟಿಸುವ ವಿಷಯ ಬಂದಾಗ ಕೋಳಿ ಮಾಂಸಕ್ಕಿಂತಲೂ ಟರ್ಕಿಯಲ್ಲಿ ಕೊಂಚ ಹೆಚ್ಚಿನ ಪೋಷಕಾಂಶಗಳಿರುವ ಕಾರಣ ದೇಹದಾರ್ಢ್ಯ ಪಟುಗಳು ಟರ್ಕಿಯನ್ನು ಹೆಚ್ಚು ಇಷ್ಟಪಡುತ್ತಾರೆ. ಆದರೂ, ಕೋಳಿಮಾಂಸವನ್ನೂ ದೇಹದಾರ್ಢ್ಯ ಪಟುಗಳು ಇಷ್ಟಪಡುತ್ತಾರೆ.

ಕ್ಯಾಲೋರಿಗಳು

ಕ್ಯಾಲೋರಿಗಳು

ಎರಡೂ ಮಾಂಸಗಳಲ್ಲಿ ಕ್ಯಾಲೋರಿಗಳು ಕಡಿಮೆ ಇರುತ್ತವೆ ಹಾಗೂ ಇದು ತೂಕ ಕಳೆದುಕೊಳ್ಳಲು ಮತ್ತು ಆರೋಗ್ಯಕರ ದೇಹದ ತೂಕವನ್ನು ಉಳಿಸಿಕೊಳ್ಳಲು ನೆರವಾಗುತ್ತವೆ. ಕೋಳಿ ಮಾಂಸಕ್ಕಿಂತಲೂ ಟರ್ಕಿಯಲ್ಲಿ ಕ್ಯಾಲೋರಿಗಳು ಇನ್ನಷ್ಟು ಕದಿಮೆ ಇವೆ. ಟರ್ಕಿ ಕೋಳಿಯ ಎದೆಯಭಾಗದ ಮೂಳೆರಹಿತ ಮಾಂಸದ ಒಂದು ಪ್ರಮಾಣದಲ್ಲಿ ಕೇವಲ 123 ಕ್ಯಾಲೋರಿಗಳಿದ್ದರೆ ಇದೇ ಭಾಗದ ಕೋಳಿಮಾಂಸದಲ್ಲಿ 135 ಕ್ಯಾಲೋರಿಗಳಿವೆ.

ಅಮೈನೋ ಆಮ್ಲಗಳ ಪ್ರಮಾಣ

ಅಮೈನೋ ಆಮ್ಲಗಳ ಪ್ರಮಾಣ

ಪ್ರೋಟೀನುಗಳು ಅಮೈನೋ ಆಮ್ಲಗಳೆಂಬ ಕಣಗಳಿಂದ ನಿರ್ಮಿಸಲ್ಪಟ್ಟಿವೆ. ಸ್ನಾಯುಗಳ ಬೆಳವಣಿಗೆ ಹಾಗೂ ಘಾಸಿಗೊಂಡ ಸ್ನಾಯುಗಳು ರಿಪೇರಿಯಾಗಲು ಅಮೈನೋ ಆಮ್ಲಗಳು ಪ್ರಮುಖ ಪಾತ್ರ ವಹಿಸುತ್ತವೆ. ಹಾಗಾಗಿ ಆಮೈನೋ ಆಮ್ಲಗಳನ್ನು ಪರಿಗಣಿಸಿದರೆ ಕೋಳಿ ಮಾಂಸಕ್ಕಿಂತಲೂ ಟರ್ಕಿ ಉತ್ತಮ ಆಯ್ಕೆಯಾಗಿದೆ.

ಕಾರ್ಬೋ ಹೈಡ್ರೇಟುಗಳು

ಕಾರ್ಬೋ ಹೈಡ್ರೇಟುಗಳು

ಕಾರ್ಬೋಹೈಡ್ರೇಟುಗಳು ಮತ್ತು ಕೊಲೆಸ್ಟ್ರಾಲ್ ವಿಷಯ ಬಂದಾಗ ಇವೆರಡೂ ಮಾಂಸಗಳ ಚರ್ಮ ನಿವಾರಿಸಿದಾಗ ಕೊಲೆಸ್ಟ್ರಾಲ್ ಮತ್ತು ಕಾರ್ಬೋಹೈಡ್ರೇಟುಗಳು ಕಡಿಮೆಯಾಗುತ್ತವೆ. ಟರ್ಕಿಯ ಎದೆಯಭಾಗದ ಮಾಂಸದ ಒಂದು ಪ್ರಮಾಣದಲ್ಲಿ 70 ಮಿಲಿಗ್ರಾಂ ಕೊಲೆಸ್ಟ್ರಾಲ್ ಇದ್ದರೆ ಕೋಳಿಯ ಎದೆಯಭಾಗದ ಮಾಂಸದ ಒಂದು ಪ್ರಮಾಣದಲ್ಲಿ 90 ಮಿಲಿಗ್ರಾಂ ಕೊಲೆಸ್ಟ್ರಾಲ್ ಇರುತ್ತದೆ.

ಪ್ರೋಟೀನು

ಪ್ರೋಟೀನು

ಇನ್ಸ್ಟಿಟ್ಯೂಟ್ ಆಫ್ ಮೆಡಿಸಿನ್ ಎಂಬ ವೈದ್ಯಕೀಯ ಸಂಶೋಧನಾಲಯದ ಪ್ರಕಾರ ಮಹಿಳೆಯರಿಗೆ ನಿತ್ಯವೂ 46 ಗ್ರಾಂ ಪ್ರೋಟೀನು ಅಗತ್ಯವಿದೆ. ಗರ್ಭವತಿಯರು ಮತ್ತು ಬಾಣಂತಿಯರಿಗೆ 71 ಗ್ರಾಂ ಪ್ರೋಟೀನ್ ನ ಅಗತ್ಯವಿದೆ. ಕೋಳಿ ಮತ್ತು ಟರ್ಕಿ ಎರಡೂ ಈ ನಿಟ್ಟಿನಲ್ಲಿ ಉತ್ತಮ ಆಯ್ಕೆಯಾಗಿದ್ದು ಎದೆಯಭಾಗದ ಮಾಂಸದ ಒಂದು ಪ್ರಮಾಣದಲ್ಲಿ 26 ಗ್ರಾಂ ಪ್ರೋಟೀನ್ ಇದೆ. ಈ ಮಾಂಸವನ್ನು ವಾರಕ್ಕೆ ಮೂರು ದಿನ ಸೇವಿಸುವ ಮೂಲಕ ದೇಹದ ಅಗತ್ಯಪ್ರಮಾಣದ ಪ್ರೋಟೀನುಗಳನ್ನು ಪಡೆಯಬಹುದು.

ರುಚಿ ಹಾಗೂ ರಚನೆ ಎರಡೂ ಒಂದೇ ತರಹ

ರುಚಿ ಹಾಗೂ ರಚನೆ ಎರಡೂ ಒಂದೇ ತರಹ

ಕೋಳಿ ಹಾಗೂ ಟರ್ಕಿ ಮಾಂಸದ ಖಾದ್ಯವನ್ನು ಮಾಡಿ ಪ್ರತ್ಯೇಕವಾಗಿ ಬಡಿಸಿದರೆ ತಿನ್ನುವವರಿಗೆ ಎರಡರಲ್ಲಿ ವ್ಯತ್ಸಾಸವೇ ಗೊತ್ತಾಗುವುದಿಲ್ಲ. ಎರಡೂ ಮಾಂಸಗಳಲ್ಲಿ ಸಮಾನವಾದ ರುಚಿ, ಸಮಾನವಾದ ರಚನೆ ಹಾಗೂ ಸಮಾನ ತಾಪಮಾನ ಮತ್ತು ಸಮಯದಲ್ಲಿ ಬೇಯುವ ಕಾರಣ ಖಚಿತವಾಗಿ ಇದೇ ಮಾಂಸ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಆದರೆ ಅತಿ ಸೂಕ್ಷ್ಮವಾಗಿ ರುಚಿಯನ್ನು ಪರಿಗಣಿಸಿದರೆ ಮಾತ್ರ ಟರ್ಕಿಯ ಮಾಂಸ ಕೋಳಿ ಮಾಂಸಕ್ಕಿಂತಲೂ ಕಡಿಮೆ ರುಚಿ ಹಾಗೂ ಮಾಂಸದ ರಚನೆ ಸ್ವಲ್ಪವೇ ಒತ್ತೊತ್ತಾಗಿರುವುದನ್ನು ಗಮನಿಸಬಹುದು. ಆದರೆ ಇದು ಅತಿಸೂಕ್ಷ್ಮವಾಗಿ ಗಮನಿಸಿದರೆ ಮಾತ್ರವೇ ಹೊರತು ಮೇಲುನೋಟಕ್ಕೆ ಗೊತ್ತಾಗುವುದಿಲ್ಲ.

ಆಂಟಿ ಆಕ್ಸಿಡೆಂಟುಗಳು

ಆಂಟಿ ಆಕ್ಸಿಡೆಂಟುಗಳು

ಟರ್ಕಿಯಲ್ಲಿ ಕಡಿಮೆ ಪರ್ಯಾಪ್ತ ಕೊಬ್ಬು ಇರುತ್ತದೆ ಹಾಗೂ ಇದರಲ್ಲಿ ಉತ್ತಮ ಪ್ರಮಾಣದ ಆಂಟಿ ಆಕ್ಸಿಡೆಂಟುಗಳಿವೆ. ಆದರೆ ಕೋಳಿಮಾಂಸವೂ ಈ ನಿಟ್ಟಿನಲ್ಲಿ ಕಳಪೆ ಆಯ್ಕೆಯೇನಲ್ಲ. ಇದರಲ್ಲಿಯೂ ಸರಿಸಮನಾದ ಆಂಟಿ ಆಕ್ಸಿಡೆಂಟುಗಳಿವೆ. ಇವೆರಡೂ ಮಾಂಸಗಳ ಸೇವನೆಯ ಮೂಲಕ ಎಂಡೋಕ್ರೈನ್ ರಸದೂತಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತವೆ ಹಾಗೂ ದೇಹದಲ್ಲಿ ರಸದೂತಗಳ ಪ್ರಮಾಣ ಸರಿಸಮನಾಗಿರಲು ನೆರವಾಗುತ್ತವೆ.

ಒಂದೇ ಬಗೆಯ ಅಡುಗೆ

ಒಂದೇ ಬಗೆಯ ಅಡುಗೆ

ಇವೆರಡೂ ಮಾಂಸಗಳನ್ನು ವರ್ಷದ ಎಲ್ಲಾ ತಿಂಗಳುಗಳಲ್ಲಿಯೂ ಸೇವಿಸಬಹುದು. ಕೆಲವು ಸಂಪ್ರದಾಯಗಳಲ್ಲಿ, ಉದಾಹರಣೆಗೆ ಕ್ರೈಸ್ತರ ಥ್ಯಾಂಕ್ಸ್ ಗಿವಿಂಗ್ ಎಂಬ ಧಾರ್ಮಿಕ ವಿಧಿಯಲ್ಲಿ ಟರ್ಕಿಯನ್ನು ಬಳಸಲಾಗುತ್ತದೆ. ಈ ದಿನದಂದು ಅಮೇರಿಕಾ ಸಂಯುಕ್ತ ಸಂಸ್ಥಾನವೊಂದರಲ್ಲಿಯೇ ಸುಮಾರು 4.6 ಕೋಟಿ ಟರ್ಕಿಗಳನ್ನು ಸೇವಿಸಲಾಗುತ್ತದೆ. ಕೋಳಿಮಾಂಸವನ್ನು ಹುರಿದು, ಬೇಯಿಸಿ ಅಥವಾ ತುಂಡುಗಳನ್ನಾಗಿಸಿ ವಿವಿಧ ಖಾದ್ಯಗಳ ರೂಪದಲ್ಲಿ ಸೇವಿಸಲಾಗುತ್ತದೆ. ಒಂದು ವೇಳೆ ಈ ಮಾಹಿತಿ ನಿಮಗೆ ಉಪಯುಕ್ತವೆಂದು ಕಂಡುಬಂದರೆ ನಿಮ್ಮ ಸ್ನೇಹಿತರು ಮತ್ತು ಆಪ್ತರೊಂದಿಗೆ ಇದರ ಕೊಂಡಿಯನ್ನು ಹಂಚಿಕೊಳ್ಳುವ ಮೂಲಕ ಹೆಚ್ಚು ಜನರಿಗೆ ಪ್ರಯೋಜನವಾಗಲು ನೆರವಾಗಿ.

English summary

Chicken VS Turkey Nutrition

Have you ever wondered what is the nutritional value of turkey meat and chicken meat? Health freaks for sure must have thought about it. Both turkey breast and chicken breast are poultry products and they are the most commonly consumed protein sources in body-building. They fall under the category of lean meat and therefore, provide important proteins for muscle growth. Also, turkey meat and chicken meat are low in calories, making them one of the most sought-after meat proteins for weight-loss lovers.
X
Desktop Bottom Promotion